ವಿಷಯಕ್ಕೆ ಹೋಗು

ಮಾಂಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಂಸ ಆಹಾರವಾಗಿ ತಿನ್ನಲಾದ ಪ್ರಾಣಿಯ ಪಿರಿ.[] ಪ್ರಾಗೈತಿಹಾಸಿಕ ಕಾಲದಿಂದ ಮಾನವರು ಮಾಂಸಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡಿ ಕೊಂದಿದ್ದಾರೆ. ನಾಗರಿಕತೆಯ ಆಗಮನ ಕೋಳಿ, ಕುರಿ, ಹಂದಿಗಳು ಮತ್ತು ದನದಂತಹ ಪ್ರಾಣಿಗಳ ಪಳಗಿಸುವಿಕೆಗೆ ಎಡೆಮಾಡಿಕೊಟ್ಟಿತು. ಇದು ಅಂತಿಮವಾಗಿ ಕೈಗಾರಿಕಾ ಪ್ರಮಾಣದಲ್ಲಿ ಕಸಾಯಿಖಾನೆಗಳ ಸಹಾಯದಿಂದ ಮಾಂಸೋತ್ಪಾದನೆಯಲ್ಲಿ ಅವುಗಳ ಬಳಕೆಗೆ ಕಾರಣವಾಯಿತು.

ಮಾಂಸವು ಮುಖ್ಯವಾಗಿ ನೀರು, ಪ್ರೋಟೀನ್, ಮತ್ತು ಕೊಬ್ಬನ್ನು ಹೊಂದಿರುತ್ತದೆ. ಅದನ್ನು ಹಸಿಯಾಗಿ ತಿನ್ನಬಹುದು, ಆದರೆ ಸಾಮಾನ್ಯವಾಗಿ ವಿವಿಧ ರೀತಿಗಳಲ್ಲಿ ಅದನ್ನು ಬೇಯಿಸಿ, ಹದಮಾಡಿ, ಅಥವಾ ಸಂಸ್ಕರಿಸಿದ ನಂತರ ತಿನ್ನಲಾಗುತ್ತದೆ. ಸಂಸ್ಕರಿಸದ ಮಾಂಸ ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರದಿಂದ ಸೋಂಕಿನ ಅಥವಾ ಕೊಳೆಯುವಿಕೆಯ ಪರಿಣಾಮವಾಗಿ ಹಳಸುತ್ತದೆ ಅಥವಾ ಕೊಳೆಯುತ್ತದೆ.

ಬಹುತೇಕ ಹಲವುವೇಳೆ, ಮಾಂಸ ಪದವು ಅಸ್ಥಿ ಮಾಂಸಖಂಡ ಮತ್ತು ಸಂಬಂಧಿತ ಕೊಬ್ಬು ಮತ್ತು ಇತರ ಅಂಗಾಂಶಗಳನ್ನು ಸೂಚಿಸುತ್ತದೆ, ಆದರೆ ಅದು ಆಫ಼ಲ್‍ನಂತಹ ಇತರ ತಿನ್ನಲರ್ಹ ಅಂಗಾಂಶಗಳನ್ನೂ ವರ್ಣಿಸಬಹುದು. ಮಾಂಸ ಪದವನ್ನು ಕೆಲವೊಮ್ಮೆ ಹೆಚ್ಚು ನಿರ್ಬಂಧಿತ ಅರ್ಥದಲ್ಲಿಯೂ ಬಳಸಲಾಗುತ್ತದೆ – ಮಾನವ ಸೇವನೆಗೆ ಬೆಳೆಸಿ ತಯಾರಿಸಲಾದ ಸಸ್ತನಿ ಪ್ರಜಾತಿಗಳ (ಹಂದಿಗಳು, ದನ, ಕುರಿಮರಿ, ಇತ್ಯಾದಿ) ಮಾಂಸ, ಮೀನು, ಇತರ ಕಡಲಾಹಾರ, ಬೆಳೆಹಕ್ಕಿ, ಅಥವಾ ಇತರ ಪ್ರಾಣಿಗಳನ್ನು ಬಿಟ್ಟು.

ಮಾಂಸವು ಗಣನೀಯ ಪ್ರಮಾಣದಲ್ಲಿ ಅತ್ಯಂತ ಮೊದಲಿನ ಮಾನವರ ಆಹಾರದ ಘಟಕವಾಗಿತ್ತು ಎಂದು ಪ್ರಾಗ್ಜೀವ ಶಾಸ್ತ್ರದ ಪುರಾವೆ ಸೂಚಿಸುತ್ತದೆ. ಮುಂಚಿನ ಬೇಟೆಗಾರ-ಸಂಗ್ರಹಗಾರರು ಕಾಡುಕೋಣ ಮತ್ತು ಜಿಂಕೆಯಂತಹ ದೊಡ್ಡ ಪ್ರಾಣಿಗಳ ಸಂಘಟಿತ ಬೇಟೆಯನ್ನು ಅವಲಂಬಿಸಿದ್ದರು.

ಪ್ರಾಣಿಗಳ ಪಳಗಿಸುವಿಕೆ ಕೊನೆಯ ನೀರ್ಗಲ್ಲು ಯುಗದ (ಕ್ರಿ.ಪೂ. ೧೦,೦೦೦) ಅಂತ್ಯದ ಕಾಲಮಾನದ್ದೆಂದು ನಮಗೆ ಪುರಾವೆ ಇದೆ. ಮಾಂಸೋತ್ಪಾದನೆಯನ್ನು ಸುಧಾರಿಸುವ ದೃಷ್ಟಿಯಿಂದ ಪಳಗಿಸುವಿಕೆಯು ಮಾಂಸದ ವ್ಯವಸ್ಥಿತ ಉತ್ಪಾದನೆ ಮತ್ತು ಪ್ರಾಣಿಗಳ ತಳಿವರ್ಧನಕ್ಕೆ ಎಡೆಮಾಡಿಕೊಟ್ಟಿತು.

ಉತ್ತರ ಪ್ರದೇಶದ ಸಮಸ್ಯೆ

[ಬದಲಾಯಿಸಿ]
  • 27 Mar, 2017;
  • ಉತ್ತರಪ್ರದೇಶದಲ್ಲಿರುವ ಕಸಾಯಿಖಾನೆಗಳು

ದೇಶದಲ್ಲಿ ಒಟ್ಟು ಸರ್ಕಾರಿ ಅನುಮತಿ ಪಡೆದಿರುವ 72 ಕಸಾಯಿಖಾನೆಗಳಿವೆ. ಉತ್ತರಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೀಡಲಾಗಿರುವ ಎನ್‍ಒಸಿ ಅಂಕಿ ಅಂಶಗಳ ಪ್ರಕಾರ ಉತ್ತರಪ್ರದೇಶದಲ್ಲಿ 38 ಕಸಾಯಿಖಾನೆಗಳಿವೆ. ಇದರಲ್ಲಿ ನಾಲ್ಕೇ ನಾಲ್ಕು ಕಸಾಯಿಖಾನೆಗಳು ಕಾರ್ಯನಿರತವಾಗಿವೆ. ಎರಡು ಕಸಾಯಿಖಾನೆಗಳು ಆಗ್ರಾದಲ್ಲಿಯೂ ಇನ್ನೆರಡು ಕಸಾಯಿಖಾನೆ ಸಹರಣ್‍ಪುರದಲ್ಲೂ ಕಾರ್ಯ ನಿರತವಾಗಿವೆ. ಎರಡು ಕಸಾಯಿಖಾನೆಗಳನ್ನು ಲಖನೌ ಮತ್ತು ಬರೇಲಿಯಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ. ಮೊದಲ ಬಾರಿ 1996ರಲ್ಲಿ ಆಲಿಗಢದಲ್ಲಿ ಹಿಂದ್ ಆಗ್ರೊ ಐಎಂಪಿಪಿ ಎಂಬ ಮಾಂಸ ಸಂಸ್ಕರಣ ಕೇಂದ್ರ ಆರಂಭವಾಗಿತ್ತು.

ಅನಧಿಕೃತ ಕಸಾಯಿಖಾನೆ ಬೆಳೆಯಲು ಕಾರಣ

[ಬದಲಾಯಿಸಿ]

ಉತ್ತರಪ್ರದೇಶದಲ್ಲಿರುವ 38 ಕಸಾಯಿಖಾನೆಗಳಲ್ಲಿ ಹೆಚ್ಚಿನವು ಮಾಂಸ ರಫ್ತು ಮಾಡಲಿರುವವುಗಳಾಗಿವೆ. ಭಾರತದಲ್ಲಿ ಮಾರಾಟವಾಗುವ ಕೋಣನ ಮಾಂಸಕ್ಕೆ ಗಲ್ಫ್ ರಾಷ್ಟ್ರಗಳಲ್ಲಿ ಬಹು ಬೇಡಿಕೆ ಇದೆ. ಭಾರತದಲ್ಲಿಂದ ರಫ್ತಾಗುವ ಮಾಂಸಗಳು ಕಡಿಮೆ ಬೆಲೆಗೆ ಲಭ್ಯವಾಗುವುದು ಮತ್ತು 'ಹಲಾಲ್' ಮಾಂಸವೇ ಇಲ್ಲಿ ರಫ್ತಾಗುವುದರಿಂದ ಮುಸ್ಲಿಂ ರಾಷ್ಟ್ರಗಳಲ್ಲಿ ಈ ಮಾಂಸಗಳಿಗೆ ಹೆಚ್ಚಿನ ಬೇಡಿಕೆಯುಂಟಾಗಲು ಕಾರಣ. ಇಂಥಾ ಪರಿಸ್ಥಿತಿಯಲ್ಲಿ ಇಲ್ಲಿನ ಜನ ಸಾಮಾನ್ಯರಿಗೆ ಬೇಕಾಗಿರುವ ಮಾಂಸಗಳನ್ನು ಪೂರೈಸುವುದಕ್ಕಾಗಿ ಅನಧಿಕೃತ ಕಸಾಯಿಖಾನೆಗಳು ತಲೆಯೆತ್ತಿಕೊಂಡವು.

ಕಸಾಯಿಖಾನೆಯಲ್ಲಿನ ವಹಿವಾಟು

[ಬದಲಾಯಿಸಿ]

ಇಲ್ಲಿರುವ ಮಾಂಸ ಸಂಸ್ಕರಣ ಘಟಕಗಳಲ್ಲಿ ದಿನವೊಂದಕ್ಕೆ ಸರಿಸುಮಾರು 300ರಿಂದ 3000 ಜಾನುವಾರುಗಳನ್ನು ಕಡಿಯಲಾಗುತ್ತದೆ. ಕೋಣ, ಕುರಿ ಮತ್ತು ಆಡುಗಳನ್ನು ಮಾಂಸಕ್ಕಾಗಿ ಮಂಡಿ (ಗ್ರಾಮದ ಮಾರುಕಟ್ಟೆ)ಯಲ್ಲಿ ಮಾರಲಾಗುತ್ತದೆ. ಒಂದು ಕೋಣನ ಸರಾಸರಿ ಬೆಲೆ ₹20,000. ಕಸಾಯಿಖಾನೆ ಆರಂಭಿಸಲು ಕನಿಷ್ಠ 10 ಎಕರೆ ಸ್ಥಳವಂತೂ ಬೇಕೆ ಬೇಕು. ಈ ಸ್ಥಳದ ಬೆಲೆ ₹40 ರಿಂದ ₹50 ಕೋಟಿವರೆಗೆ ಇರುತ್ತದೆ. 15 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಅಥವಾ ಅರೋಗ್ಯಕರವಲ್ಲದ ತಳಿಯ ಎತ್ತುಗಳನ್ನು ಇಲ್ಲಿ ವಧೆ ಮಾಡಲು ಸರ್ಕಾರದಿಂದ ಪರವಾನಗಿ ಇದೆ.

ಮಾಂಸ ಮಾರಾಟ ಉದ್ಯಮದ ವ್ಯಾಪ್ತಿ

[ಬದಲಾಯಿಸಿ]

ದೇಶದಲ್ಲಿರುವ ಮಾಂಸ ಉತ್ಪಾದನೆ ಮತ್ತು ರಫ್ತು ಉದ್ಯಮದಲ್ಲಿ ಉತ್ತರಪ್ರದೇಶವೇ ಮುಂಚೂಣಿಯಲ್ಲಿದೆ. ಇಲ್ಲಿರುವ ಅನಧಿಕೃತ ಕಸಾಯಿಖಾನೆ ಮತ್ತು ಅನಧಿಕೃತವಾಗಿ ಜಾನುವಾರುಗಳನ್ನು ಕಡಿದು ಮಾರುವ ಮಾಂಸದ ಪ್ರಮಾಣದ ಬಗ್ಗೆ ಸರಿಯಾದ ದಾಖಲೆಗಳೇನೂ ಲಭ್ಯಲಿಲ್ಲ. ಆದರೆ ರಾಜ್ಯದಲ್ಲಿ ಪರವಾನಗಿ ಇಲ್ಲದೆ ಇರುವ 140 ಕಸಾಯಿಖಾನೆ ಮತ್ತು 50,000 ಮಾಂಸದಂಗಡಿಗಳಿವೆ ಎಂದು ಅಂದಾಜಿಸಲಾಗಿದೆ. ಎಪಿಇಡಿಎ ವರದಿ ಪ್ರಕಾರ ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಮಾಂಸ ಉತ್ಪಾದನೆಯಾಗುತ್ತದೆ. ಅಂದರೆ ಶೇ. 19.1 ಶೇ ಇಲ್ಲಿ ಮಾಂಸ ಉತ್ಪಾದನೆಯಾಗುತ್ತದೆ. ಅದೇ ವೇಳೆ ಆಂಧ್ರ ಪ್ರದೇಶದಲ್ಲಿ ಶೇ.15.2 ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ. 10.9 ಮಾಂಸ ಉತ್ಪಾದನೆಯಾಗುತ್ತದೆ.

2008-09 ರಿಂದ 2014-15ರ ಅವಧಿಯಲ್ಲಿ ಉತ್ತರಪ್ರದೇಶದಲ್ಲಿ 7515.14 ಲಕ್ಷ ಕೆಜಿ ಕೋಣನ ಮಾಂಸ, 1171.65 ಲಕ್ಷ ಕೆಜಿ ಆಡು ಮಾಂಸ, 230.99 ಲಕ್ಷ ಕೆಜಿ ಕುರಿ ಮಾಂಸ ಮತ್ತು 2014-15ರಲ್ಲಿ 1410.32 ಕೆಜಿ ಹಂದಿ ಮಾಂಸ ಉತ್ಪಾದನೆಯಾಗಿದೆ ಎಂದು ರಾಜ್ಯದ ಪಶುಸಂಗೋಪನೆ ಇಲಾಖೆಯ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಕೇಂದ್ರದಿಂದ ಈ ಉದ್ಯಮಕ್ಕೆ ಸಿಗುವ ಸಹಾಯ

[ಬದಲಾಯಿಸಿ]

ಕೇಂದ್ರ ಸರ್ಕಾರವೂ ಮಾಂಸ ಮಾರಾಟ ಉದ್ಯಮಕ್ಕೆ ಉತ್ತೇಜನ ನೀಡುತ್ತಿದ್ದು, ಕಸಾಯಿಖಾನೆ ಆರಂಭಿಸುವಾಗ ಶೇ.50ರಷ್ಟು ಹಣಕಾಸಿನ ಸಹಾಯವನ್ನು ನೀಡುತ್ತದೆ. ಭಾರತದಿಂದ ರಫ್ತಾಗುತ್ತಿರುವ ಒಟ್ಟು ಮಾಂಸ ಮಾರಾಟದ ಲ್ಲಿ ಸರಿಸುಮಾರು ಶೇ. 50ರಷ್ಟು ಮಾಂಸ ರಫ್ತಾಗುವುದು ಉತ್ತರಪ್ರದೇಶದಿಂದಲೇ. ಅಖಿಲ ಭಾರತ ಮಾಂಸ ಮತ್ತು ಜಾನುವಾರು ರಫ್ತುದಾರರ ಸಂಘದ ಪ್ರಕಾರ ಈ ಉದ್ಯಮದಲ್ಲಿ ಪರೋಕ್ಷ ಅಥವಾ ಪ್ರತ್ಯಕ್ಷವಾಗಿ ತೊಡಗಿಸಿಕೊಂಡವರ ಸಂಖ್ಯೆ 25 ಲಕ್ಷಕ್ಕಿಂತಲೂ ಹೆಚ್ಚು ಇದೆ.

ಕಸಾಯಿಖಾನೆಗಳ ನಿಷೇಧ ಈ ಉದ್ಯಮದ ಮೇಲೆ ಯಾವ ರೀತಿ ಪರಿಣಾಮ

[ಬದಲಾಯಿಸಿ]

ಉತ್ತರಪ್ರದೇಶದ ಪಶು ಸಂಗೋಪನೆ ಇಲಾಖೆ ಪ್ರಕಾರ, ಪ್ರತೀ ವರ್ಷ ರೂ.26,685 ಕೋಟಿ ಮೌಲ್ಯದ ಮಾಂಸ ರಫ್ತಾಗುತ್ತದೆ. ಭಾರತ ಮಾಂಸ ಮತ್ತು ಜಾನುವಾರು ರಫ್ತುದಾರರ ಸಂಘದ ಪ್ರಕಾರ, ಕಸಾಯಿಖಾನೆಗಳನ್ನು ನಿಷೇಧಿಸಿದರೆ ರಾಜ್ಯದ ಆದಾಯದಲ್ಲಿ ರೂ.11,350 ಕೋಟಿ ನಷ್ಟವುಂಟಾಗುತ್ತದೆ. ಇದೇ ರೀತಿ ಮುಂದಿನ 5 ವರ್ಷಗಳ ಕಾಲ ಮುಂದುವರಿದರೆ ಆದಾಯದಲ್ಲಿ ರೂ.56,000 ಕೋಟಿ ನಷ್ಟವುಂಟಾಗಲಿದೆ. 2015-16ರ ಅವಧಿಯಲ್ಲಿ ಉತ್ತರಪ್ರದೇಶವು 5,65,958.20 ಮೆಟ್ರಿಕ್ ಟನ್ ಕೋಣನ ಮಾಂಸ ರಫ್ತು ಮಾಡಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Lawrie, R. A.; Ledward, D. A. (2006). Lawrie’s meat science (7th ed.). Cambridge: Woodhead Publishing Limited. ISBN 978-1-84569-159-2.
  2. ಉತ್ತರಪ್ರದೇಶದಲ್ಲಿರುವ 'ಕಸಾಯಿಖಾನೆ', ಮಾಂಸ ಮಾರಾಟ ಉದ್ಯಮದ ಸುತ್ತಮುತ್ತ;ಪ್ರಜಾವಾಣಿ ವಾರ್ತೆ;27 Mar, 2017

"https://kn.wikipedia.org/w/index.php?title=ಮಾಂಸ&oldid=755929" ಇಂದ ಪಡೆಯಲ್ಪಟ್ಟಿದೆ