ಕ್ಯಾಲೆಂಡುಲ ಅಫಿಷಿನಾಲಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ಯಾಲೆಂಡುಲ ಅಫಿಷಿನಾಲಿಸ್
ರಾಜ್ಯ ಸಸ್ಯಗಳು
ವಿಭಾಗ ಮ್ಯಾಗ್ನೋಲಿಯೋಫೈಟ
ಆರ್ಡರ್ ಆಸ್ಟರೇಲ್ಸ್
ಕುಟುಂಬ ಆಸ್ಟೆರೇಸಿ
ಬುಡಕಟ್ಟು ಕ್ಯಾಲೆಡುಲ
ಜಾತಿ ಸಿ.ಅಫಿಷಿನಾಲಿಸ್
ವೈಜ್ಞಾನಿಕ ಹೆಸರು ಕ್ಯಾಲೆಂಡುಲ ಅಫಿಷಿನಾಲಿಸ್

ಕ್ಯಾಲೆಂಡುಲ ಕುಲದಲ್ಲಿ ಕ್ಯಾಲೆಂಡುಲ ಅಫಿಷಿನಾಲಿಸ್ ಒಂದು ಅತ್ಯಂತ ಸಾಮಾನ್ಯ ಜಾತಿಯಾದು. ಇದು ಬೆಲೆಬಾಳುವ ಗಿಡಮೂಲಿಕೆ. ಕ್ಯಾಲೆಂಡುಲ ಹೂವಿನಲ್ಲಿ ೧೫-೨೦ ವಿವಿಧ ಜಾತಿಗಳಿವೆ. ಪಶ್ಚಿಮ ಯುರೋಪ್, ಮೆಡಿಟರೇನಿಯನ್ ಪ್ರದೇಶ ಮತ್ತು ದಕ್ಷಿಣ ಏಷ್ಯಾದ ಕೆಲವು ಭಾಗಗಳಲ್ಲಿ "ಮಡಕೆ ಮಾರಿಗೋಲ್ಡ್" ಅಥವಾ "ಮಾರಿಗೋಲ್ಡ್" ಎಂದು ಕರೆಯುತ್ತಾರೆ. ಇದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಕೊಡುತ್ತದೆ.ಇದರ ಹೆಸರು ಸೂಚಿಸುವಂತೆ ತಿಂಗಳಿಗೊಮ್ಮೆ ಅಥವಾ ಪ್ರತಿ ಅಮಾವಾಸ್ಯೆಗೆ ಅರಳುತ್ತದೆ. ಕ್ಯಾಲೆಂಡುಲ ಹೂವನ್ನು ನಡುಹಗಲು ಕಿತ್ತುಕೋಳುವುದರಿದ್ದ ಹೃದಯವನ್ನು ಬಲಪಡಿಸಲು ಮತ್ತು ಸಾಂತ್ವನ ಮಾಡುತ್ತದೆ ಎಂದು ಹೇಳಲಾಗಿದೆ.

ಪರಿಚಯ[ಬದಲಾಯಿಸಿ]

ಕ್ಯಾಲೆಂಡುಲವು ಯಾವುದೇ ರೀತಿಯ ಮಣ್ಲಿನಲ್ಲಿ ಬೆಳೆಯುತ್ತದೆ. ಇದಕ್ಕೆ ಯಾವ ರಸಗೊಬ್ಬರಗಳ ಅಗತ್ಯವಿಲ್ಲ. ಇದ್ದಕ್ಕೆ ತೇವಾಂಶ ಇದ್ದರೆ ಸಾಕು. ಇದು ಚರ್ಮದ ತೊಂದರೆಗೆ ಅತ್ತ್ಯುತ್ತಮ. ಇದನ್ನು ಕಿತ್ತಳೆ ಹೂ ಅಥವಾ ಮಾರಿಗೋಲ್ಡ್'ಗಳಿಗೆ ಹೋಲಿಸಲಾಗಿದೆ. ಇದನ್ನು ಮಡಕೆ ಮಾರಿಗೋಲ್ಡ್ ಎಂದು ಕರೆಯಲಾಗುವುದು. ಯುರೋಪಿಯನ್ ಪ್ರದೇಶದಲ್ಲಿ ಕ್ಯಾಲೆಂಡುಲ ಹೂ ಸ್ಥಳೀಯ ಸಸ್ಯ ಜಾತಿಗಳಾಗಿದೆ.ಇದು ಸಮಶೀತೋಷ್ಣ ವಲಯದಲ್ಲಿ ಬೆಳೆಸಲಾಗುತ್ತದೆ.ಇದು ಸಮಶೀತೋಷ್ಣ ಉತ್ತರ ಅಮೆರಿಕಾ ಮತ್ತು ಏಷ್ಯಾ ದೇಶೀಯವಾಗಿಸಲ್ಪಟ್ಟಿದೆ. ಇದರ ಉಪಯೋಗಗಳು : ಕಡಿತದ ತೊಂದರೆ,ಚರ್ಮದ ಉಬ್ಬರ,ಗಾಯಗಳಿಗೆ,ಉಬ್ಬಿರುವ ರಕ್ತನಾಳಗಳಿಗೆ,ಶೀತ ಮತ್ತು ಜ್ವರಕ್ಕೆ, ಅದರ ದಳಗಳನ್ನು ಬಿಸಿನೀರಿನಲ್ಲಿ ಕುದಿಸಿ ಕುಡಿದರೆ ರಕ್ತ ಸಂಚಾರಕ್ಕೆ ಉಪಯೋಗ.ಜನಪದ ಮತ್ತು ಪುರಾಣದ ಪ್ರಕಾರ ಮು೦ಜಾನೆ ಏಳು ಗಂಟೆಯ ನಂತರ,ಕ್ಯಾಲೆಂಡುಲ ಹೂವಿನ ತಲೆಭಾಗ ಮುಚ್ಚಲಾಗಿದ್ದರೆ, ಅದೇ ದಿನ ಮಳೆ ಬರುತ್ತದೆ ಎಂದು. ಹಿಂದಿನ ಕಾಲದಲ್ಲಿ ಕ್ಯಾಲೆಂಡುಲ ಹೂವನ್ನು ಮಳೆಯ ಸೂಚಕ ಎಂದು ಪರಿಗಣಿಸಲಾಗಿತ್ತು. ದಂಡಧಾರಿ ಗಿಡಮೂಲಿಕೆಗಳಲ್ಲಿ, ಕ್ಯಾಲೆಂಡುಲ ಹೂವನ್ನು ನೋಡಿದರೆ ಕೆಟ್ಟ ರಸಧಾತುಗಳನ್ನು ಹೊರಹಾಕುವುದು ಮತ್ತು ಕಣ್ಣಿನ ದೃಷ್ಟಿ ಬಲಿಷ್ಠಗೊಳಿಸುವುದು ಎಂದು ತಿಳಿಸಲಾಗಿದೆ.

ಸಾಂಪ್ರದಾಯಿಕ ಮತ್ತು ಪ್ರಾಚೀನ ಬಳಕೆಗಳು[ಬದಲಾಯಿಸಿ]

ಕ್ಯಾಲೆಂಡುಲ ಜಾತಿಯ ಮೂಲಿಕೆಯು ಔಷಧೀಯವಾಗಿ, ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ.ಇದರ ದಳಗಳನ್ನು ಸೇವಿಸಬಹುದು. ತಾಜವಾಗಿ ಅಥವಾ ಒಣಗಿಸಿ ಪಚಡಿ(ಸಲಾಡ್)ನಲ್ಲಿ ಮತ್ತು ಗಿಣ್ಣು(ಚೀಜ಼)ಗೆ ಬಣ್ಣ ಕೊಡಲು ಅಥವಾ ಕೇಸರಿ ಬದಲಾಗಿ ಬಳಸಲಾಗುತ್ತದೆ.ಕ್ಯಾಲೆಂಡುಲ ಹೂವಿನಲ್ಲಿರುವ ಹಳದಿ ರಂಗಿನ ಡೈಯನ್ನು ಪಡೆಯಬಹುದು. ಕ್ಯಾಲೆಂಡುಲ ಹೂಗಳನ್ನು ರೋಮನ್ನರು ಮತ್ತು ಗ್ರೀಕ್ ಕರು ಕಿರೀಟಗಳಾಗಿ ಅಥವಾ ಹೂಮಾಲೆಯಾಗಿ, ಹಲವಾರು ಆಚರಣೆ ಮತ್ತು ಸಮಾರಂಭಗಳಲ್ಲಿ ಬಳಸಲಾಗುತ್ತದೆ.ಕ್ಯಾಲೆಂಡುಲ ಹೂವನ್ನು " ಮೇರಿ ಗೋಲ್ಡ್ " ಎಂದು ಕೆಲವು ದೇಶಗಳಲ್ಲಿ ಕ್ಯಾಥೊಲಿಕ್ ಸಮಾರಂಭಗಳಲ್ಲಿ ಈ ಹೂಗಳನ್ನು ಉಪಯೋಗಿಸುತ್ತಾರೆ.ಕ್ಯಾಲೆಂಡುಲ ಹೂಗಳು ಭಾರತದಲ್ಲಿ ಪವಿತ್ರ ಹೂವಾಗಿದೆ ಮತ್ತು ಆರಂಭಿಕ ಕಾಲದಿಂದಲೂ ಹಿಂದೂ ದೇವತೆಗಳ ಪ್ರತಿಮೆಗಳನ್ನು ಅಲಂಕರಿಸಲು ಬಳಸಲಾಗುತ್ತದೆ.ಕ್ಯಾಲೆಂಡುಲವನ್ನು ಐತಿಹಾಸಿಕವಾಗಿ ಆಹಾರಕ್ಕೆ, ಧಾನ್ಯಗಳಿಗೆ,ಅಕ್ಕಿ ಮತ್ತು ಸೂಪ್'ಗೆ ಪರಿಮಳವನ್ನು ಬೀರುವ ವಸ್ತುವನ್ನಾಗಿ ಬಳಸಲಾಗುತ್ತದೆ.ಮಧ್ಯಕಾಲೀನ ಯೂರೋಪ್ನಲ್ಲಿ ಕ್ಯಾಲೆಂಡುಲ ಹೂ ವ್ಯಾಪಕವಾಗಿ ದೊರಕುತ್ತಿತ್ತು ಮತ್ತು "ಬಡವನ ಕೇಸರಿ " ಎಂದು ನಿರ್ದಿಷ್ಟವಾಗಿ ಕರೆಯಲಾಗುತ್ತದೆ.ಇದರ ಬಣ್ಣವನ್ನು ವಿವಿಧ ಆಹಾರಗಲ್ಲಿ(ಸೂಪ್) ಉಪಯೋಗಿಸಲಾಗಿತ್ತು.

ಔಷಧೀಯ ಪರಿಣಾಮಗಳು[ಬದಲಾಯಿಸಿ]

ಈ ಪೀಳಿಗೆಯಲ್ಲೂ ಕ್ಯಾಲೆಂಡುಲದ ತೈಲವನ್ನು ಔಷಧೀಯವಾಗಿ ಬಳಸಲಾಗುತ್ತದೆ.ಕ್ಯಾಲೆಂಡುಲ ಅಫಿಷಿನಾಲಿಸ್(ಒಂದು ಬಗೆಯ ಕ್ಯಾಲೆಂಡುಲ ಹೂ)ವಿನ ತೈಲವು,ಆಂಟಿ-ಉರಿಯೂತ,ಆಂಟಿ-ಗೆಡ್ಡೆ ಏಜೆಂಟ್ ಮತ್ತು ಗಾಯಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಸಸ್ಯ ಔಷಧೀಯ ಅಧ್ಯಯನಗಳ ಪ್ರಕಾರ, ಕ್ಯಾಲೆಂಡುಲದ ಸಾರಗಳಲ್ಲಿ ಆಂಟಿ-ವೈರಲ್, ಆಂಟಿ-ವಿಕೃತಿಜನಕ ಮತ್ತು ಉರಿಯೂತ-ನಿರೋಧಕ(ಪ್ರನಾಳೀಯ) ಗುಣಲಕ್ಷಣಗಳನ್ನು ಹೊಂದಿದೆ. ಕ್ಯಾಲೆಂಡುಲ ಗಿಡಮೂಲಿಕೆಯನ್ನು ಟಿಂಚರ್ ಆಗಿ ಮೊಡವೆ ಚಿಕಿತ್ಸೆ,ಉರಿಯೂತ,ಕಡಿಮೆ ರಕ್ತಸ್ರಾವ ನಿಯಂತ್ರಿಸಲು ಬಳಸಲಾಗುತ್ತದೆ. ಸೀಮಿತ ಸಾಕ್ಷ್ಯಗಳು ಸೂಚಿಸುವ ಪ್ರಕಾರ ಕ್ಯಾಲೆಂಡುಲ ಕ್ರೀಮ್ ಅಥವಾ ಮುಲಾಮು, ವಿಕಿರಣದಿಂದಾಗುವ ಚರ್ಮದ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿ ಬಳಸಲಾಗುತ್ತದೆ.ಕ್ಯಾಲೆಂಡುಲ ಅಫಿಷಿನಾಲಿಸ್ ಮೇಲ್ಮೈ ಅಪ್ಲಿಕೇಶನ್ ಎಂದರೆ ಚರ್ಮದ ಮತ್ತು ನೋವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.ಹೀಗೆ ವಿಕಿರಣ ಚಿಕಿತ್ಸೆಗಳು,ಕ್ಯಾಲೆಂಡುಲ ಹೂವಿನ ಬಳಕೆಯಿಂದ ತಡೆಗಟ್ಟಲು ಸಹಾಯ ಮಾಡುತ್ತದೆ. ಸಾಂಪ್ರದಾಯಿಕವಾಗಿ ಕ್ಯಾಲೆಂಡುಲವನ್ನು ಹೊಟ್ಟೆ ಸೆಳೆತ ಹಾಗೂ ಮಲಬದ್ಧತೆಗೆ ಬಳಸಲಾಗುತ್ತದೆ. ಕ್ಯಾಲೆಂಡುಲ ಸಸ್ಯಗಳು ಅಲರ್ಜಿ ಪ್ರತಿಕ್ರಿಯೆಗಳನ್ನು ಉಂಟುಮಾಡುವ ಹೆಸರುವಾಸಿಯಾಗಿದೇ,ಈ ಕಾರಣದಿಂದಾಗಿ ಗರ್ಭಧಾರಣೆಯ ಸಮಯದಲ್ಲಿ ಇದರ ಬಳಕ್ಕೆ ತಡೆಯಬೇಕು. ಕ್ಯಾಲೆಂಡುಲ ಅಫಿಷಿನಾಲಿಸ್ ನಿಂತ ರಕ್ತ ಸರಿಸುವ ಕೆಲಸ ಮಾಡುತ್ತದೆ.ಈ ಕಾರಣದಿಂದ ಚರ್ಮದ ರಕ್ತಪರಿಚಲನೆಯನ್ನು ಹೆಚ್ಚುತ್ತದೆ.ಆಯುರ್ವೇದ ಚಿಕಿತ್ಸೆಯೆ ತತ್ವಗಳ ಪ್ರಕಾರ ಕ್ಯಾಲೆಂಡುಲ ಅಫಿಷಿನಾಲಿಸ್ ನಲ್ಲಿ ಶಕ್ತಿಯುತವಾಗಿ ತಂಪಾಗಿಸುವ ಮತ್ತು ಕಹಿ ಮತ್ತು ಕಟುವಾದ ರುಚಿಯನ್ನು ಹೊಂದಿದೆ.

ಪಾಕಶಾಸ್ತ್ರದ ಬಳಕೆ[ಬದಲಾಯಿಸಿ]

ಶತಮಾನಗಳಿಂದಲು ಕ್ಯಾಲೆಂಡುಲವನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಜರ್ಮನ್'ರು ಸಾರು ಮತ್ತು ಭಕ್ಷ್ಯಗಳಲ್ಲಿ ಕ್ಯಾಲೆಂಡುಲದ ಹೂವನ್ನು ಒಂದು ಸಾಮಾನ್ಯ ಘಟಕವಾಗಿ ಬಳಸುತ್ತಾರೆ, ಇದರಿಂದಾಗಿ ಕ್ಯಾಲೆಂಡುಲವನ್ನು "ಮಡಕೆ ಮಾರಿಗೋಲ್ಡ್" ಎಂದು ಕರೆಯಲಾಗುತ್ತದೆ. ಕ್ಯಾಲೆಂಡುಲದ ಸುಂದರ ಪುಷ್ಪದಳಗಳನ್ನು ಬೆಣ್ಣೆ ಮತ್ತು ಗಿಣ್ಣು(ಚೀಸ್)ವಿಗೆ ಬಣ್ಣ ಸೇರಿಸಲು ಬಳಸಲಾಗುತ್ತಿತ್ತು.ಸಾಂಪ್ರದಾಯಿಕವಗಿ ಮೆಡಿಟರೇನಿಯನ್ ಮತ್ತು ಮಧ್ಯಪ್ರಾಚ್ಯ ಭಕ್ಷ್ಯಗಳಲ್ಲಿ ಕ್ಯಾಲೆಂಡುಲ ಹೂಗಳನ್ನು ಬಳಸಲಾಗುತ್ತದೆ.ಕ್ಯಾಲೆಂಡುಲದ ಚಹಾ ರುಚಿಕರವಾದ ಹಾಗೂ ಆರೋಗ್ಯಕರವಾದ ಪ್ರಯೋಜನಗಳನ್ನು ಒದಗಿಸುತ್ತದೆ.

ಡೈ ಬಳಕೆ[ಬದಲಾಯಿಸಿ]

ಒಮ್ಮೆ ಸುಂದರವಾದ ಕ್ಯಾಲೆಂಡುಲ ಹೂಗಳನ್ನು ಡೈ ಮೂಲಕ ಬಟ್ಟೆಗಳಿಗೆ ಬಳಸಲಾಗುತ್ತಿತ್ತು.ಇದರಿಂದ ವಿವಿಧ ಬಣ್ಣಗಳಾದ ಹಳದಿ, ಕಿತ್ತಳೆ ಬಣ್ಣ ಮತ್ತು ಕಂದು ಬಣ್ಣಗಳನ್ನು ಪಡೆಯಬಹುದಾಗಿದೆ.

ಕ್ಯಾಲೆಡುಲ ಅಫಿಷಿನಾಲಿಸ್.

ಔಷಧೀಯ ಬಳಕೆ[ಬದಲಾಯಿಸಿ]

ಕ್ಯಾಲೆಂಡುಲ ಹೂಗಳ ಚಿಕಿತ್ಸೆಯ ಗುಣಗಳು ಮತ್ತು ಮಾನ್ಯತೆಯನ್ನು ಪ್ರಾಚೀನ ಸಂಸ್ಕೃತದಿಂದ ಬಳಸಲಾಗುತ್ತದೆ.ಆರಂಭಿಕ ವೈದ್ಯಕೀಯ ಬರಹಗಳಲ್ಲಿ, ಈ ಹೂವನ್ನು ಜೀರ್ಣಾಂಗ ತೊಂದರೆಗಳಿಗೆ ಬಳಸಲು ಶಿಫಾರಸು ಮಾಡಲಾಯಿತು.ಇದು ಯಕೃತ್ತು ಮತ್ತು ಗಾಲ್ ಮೂತ್ರಕೋಶ ನಿರ್ವಿಷಗೊಳಿಸಲು ಬಳಸಲಾಯಿತು.ಕ್ಯಾಲೆಂಡುಲ ಹೂಗಳನ್ನು ಕಡಿತಕ್ಕೆ ಅನ್ವಯಿಸಬಹುದು ಮತ್ತು ಗಾಯಗಳ ರಕ್ತಸ್ರಾವ ನಿಲ್ಲಿಸಲು,ಸೋಂಕು ತಡೆಗಟ್ಟಲು,ವೇಗವಾಗಿ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಕ್ಯಾಲೆಂಡುಲವನ್ನು ವಿವಿಧ ಮಹಿಳಾ ಖಾಯಿಲೆಗಳಿಗೆ ಮತ್ತು ಚರ್ಮದ ಚಿಕಿತ್ಸೆಗೆ ಬಳಸಲಾಗುತ್ತದೆ.ಅಮೆರಿಕಾದ ಅಂತರ್ಯುದ್ಧದ ಸಮಯದಲ್ಲಿ, ಯುದ್ಧಭೂಮಿಯಲ್ಲಿ ಗಾಯಗೊಂಡವರಿಗೆ ಕ್ಯಾಲೆಂಡುಲ ಹೂಗಳನ್ನು ಬಳಸಲಾಗಿತ್ತು.ಈ ಹೂವು ಆಂಟಿ-ಹೆಮರಾಜಿಕ್ ಮತ್ತು ನಂಜುನಿರೋಧಕವನ್ನು ಹೊಂದಿದೆ. ಇದನ್ನು ಗಾಯಗಳಿಗೆ ಡ್ರೆಸಿಂಗ್'ಗೆಂದು ಬಳಸಲಾಗುತ್ತಿತ್ತು.ವಿಶ್ವ ಸಮರ - ೧ ಸಮಯದಲ್ಲಿ ಈ ಹೂಗಳನ್ನು ಈ ರೀತಿಯಲ್ಲಿ ಬಳಸಲಾಗಿತ್ತು.ಐತಿಹಾಸಿಕವಾಗಿ ಮಹತ್ವವಾಗಿ ಮತ್ತು ಸಂಸ್ಕೃತಿಗಳಲ್ಲಿ ಔಷಧವಾಗಿ ಈ ಹೂವನ್ನು ಬಳಸಲಾಗುತ್ತಿತ್ತು.ಇಂದು ಕ್ಯಾಲೆಂಡುಲವು ಪರ್ಯಾಯ ಔಷಧ ಎಂದು ಮುಖ್ಯತೆಯನ್ನು ಪಡೆದ್ದಿದೆ. ಆಂಟಿ-ಬ್ಯಾಕ್ಟೀರಿಯಾ ಕ್ಯಾಲೆಂಡುಲ ಹೂವನ್ನು ಕಣ್ಣಿನ ಕಾಂಜಂಕ್ಟಿವಿಟಿಸ್ (ಗುಲಾಬಿ ಕಣ್ಣಿನ) ತೊಂದರೆಗೆ ಬಳಸಲಾಗುತ್ತದೆ. ಕ್ಯಾಲೆಂಡುಲ ಹೂವಿನ ರಸವನ್ನು ಚರ್ಮದ ಕ್ಯಾನ್ಸರ್'ಗೆ ಬಳಸಬಹುದು. ಇದು ಮೂತ್ರ ತೊಂದರೆಗೆ ಮತ್ತು ವೈರಸ್ ಸೋಂಕುಗಳಿಗೆ ಅತ್ಯುತ್ತಮವಾಗಿರುತ್ತದೆ. ಇದು ಹಲ್ಲಿನ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಇದರ ಬಳಕೆ ಸಲಹೆಗಾರ ಸಲುವಾಗಿ ಉಪಯೋಗಿಸಬಹುದು. ಇದನ್ನು ಡೋಸ್ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇದು ಸೆಳೆತ, ಕೆಮ್ಮು ಮತ್ತು ಹಾವಿನ ಕಡಿತದ ಚಿಕಿತ್ಸೆಗಾಗಿ ಬಳಸಲಾಗುತ್ತದೆ.ಕ್ಯಾಲೆಂಡುಲವನ್ನು ಗಾಯಗಳ ಮತ್ತು ಹುಣ್ಣುಗಳ(ಅಲ್ಸರ್) ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.[೧][೨][೩]

ಉಲ್ಲೇಖನಗಳು[ಬದಲಾಯಿಸಿ]