ಅಪ್ಪರ್
ಅಪ್ಪರ್ ತಿರುನಾವುಕ್ಕರಸರ್ | |
---|---|
ಜನನ | TiruVaamoor |
ಜನ್ಮ ನಾಮ | Marul neekkiyar |
ಗೌರವಗಳು | Nayanar saint, Moovar |
ತತ್ವಶಾಸ್ತ್ರ | Shaivism Bhakti |
ಪ್ರಮುಖ ಕೃತಿಗಳು | Tevaram |
ನುಡಿ | Natrunaiyaavadhu Namachivaayave |
ಅಪ್ಪರ್ ತಿರುನಾವುಕ್ಕರಸರ್ ನಾಯನಾರ್ ತಮಿಳುನಾಡಿನಲ್ಲಿ ಪ್ರಚಲಿತದಲ್ಲಿರುವ ಅರುವತ್ತುಮೂರು ಪುರಾತನರಲ್ಲಿ ಒಬ್ಬ. ತಮಿಳುನಾಡಿನಲ್ಲಿ ಪ್ರಸಿದ್ಧರಾದ ಸುಂದರ್, ಮಾಣಿಕ್ಯ ವಾಚಕರ್, ತಿರುಜ್ಞಾನ ಸಂಬಂಧರ್ ಸಮಯಾ ಚಾರ್ಯರ್ ಎಂದು ಪರಿಗಣಿಸಲ್ಪಟ್ಟಿದ್ದಾನೆ. ಪೆರಿಯಪುರಾಣದಲ್ಲಿ ಈತನಿಗೆ ತಿರುನಾವುಕ್ಕರಸು ಎಂದೂ ಪುರಾತನಭಕ್ತವಿಲಾಸ ಎಂಬ ಸಂಸ್ಕೃತ ಗ್ರಂಥದಲ್ಲಿ ವಾಗೇಶಃ ಎಂದು ಕನ್ನಡ ಅರುವತ್ತುಮೂರರ ಪುರಾಣಗಳಲ್ಲಿ ವಾಗೇಶ ಎಂದೂ ಹೆಸರು. ತಮಿಳು ವೇದವೆನಿಸಿದ ತೇವಾರವನು ರಚಿಸಿದ ಪ್ರಖ್ಯಾತ ನಾಲ್ವರು ಸಮಯಾಚಾರ್ಯರಲ್ಲಿ ಈತನೂ ಒಬ್ಬ
ಬಾಲ್ಯ
[ಬದಲಾಯಿಸಿ]ಏಳನೆಯ ಶತಮಾನದ ಮಧ್ಯ ಭಾಗದಲ್ಲಿ ತಿರುವಾಮೂರ್ ಎಂಬಲ್ಲಿ ಜನಿಸಿದನು.ಬಾಲ್ಯದಲ್ಲಿ ಅಪ್ಪರ್ ಜೈನಧರ್ಮದಲ್ಲಿ ಆಸಕ್ತನಾಗಿದ್ದು, ಅದರ ಧರ್ಮಗ್ರಂಥಗಳನ್ನು ಆಧ್ಯಯನ ಮಾಡಿದನು.ಜೈನರು ಅವನನ್ನು ಧರ್ಮಸೇನನೆಂದು ನಾಮಕರಣ ಮಾಡಿದರು[೧]. ಜೈನ ಸನ್ಯಾಸಿಗಳ ಸಂಗಡ ಬಿಹಾರದಲ್ಲಿ ಪ್ರವಾಸ ಮಾಡಿದನು.ಅಸೌಖ್ಯದ ಕಾರಣ ತವರಿಗೆ ಹಿಂತಿರುಗಿದಾಗ [೨] ಶಿವನ ದೇವಸ್ಥಾನದಲ್ಲಿ ತನ್ನನ್ನು ವೇದನೆಯಿಂದ ಪಾರುಮಾಡುವಂತೆ ಪ್ರಾರ್ಥಿಸಿದನು. ಇಲ್ಲಿ ಅವನು ಗುಣಮುಖನಾದುದರಿಂದ ಪುನಹ ಶೈವ ಪಂಥದಲ್ಲಿ ನಂಬಿಕೆಯನ್ನು ಹೊಂದಿದನು ಮಾತ್ರವಲ್ಲ ಪಲ್ಲವರ ದೊರೆ ಮಹೇಂದ್ರವರ್ಮನನ್ನು ಶೈವ ಧರ್ಮಕ್ಕೆ ಕರೆತಂದನು[೩].
ಉಲ್ಲೇಖಗಳು
[ಬದಲಾಯಿಸಿ]- ↑ Sages Through Ages - Volume V: India's Heritage.P.74.K. K. Nair
- ↑ Dr R. Nagasamy, Siva Bhakthi Chapter 2 Archived 2007-10-06 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Vasudevan 2003, p. 13