ಎಡಮುರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವರ್ಣನೆ[ಬದಲಾಯಿಸಿ]

ಎಡಮುರಿ ಎಂಬ ಪುಟ್ಟ ಸಸಿ ಹಸಿರಾಗಿದ್ದು ಅಗಲವಾಗಿರುತ್ತದೆ. ನರಗಳು ಸ್ಪಷ್ಟವಾಗಿ ಕಾಣುತ್ತದೆ. ಎಲೆಗಳು ಅಂಚು ಚಿತ್ರಾಕಾರವಾಗಿ ಕಲಾಛ್ಚೇದವಾಗಿರುತ್ತದೆ. ಹೂವು ಎಲೆ ಮತ್ತು ಕಾಂಡದ ಮದ್ಯದಿಂದ ಹೊರಡುತ್ತದೆ. ಪುಷ್ಪ ಪಾತ್ರೆ ದೊಡ್ಡದಾಗಿ ನಾಲ್ಕು ಅಥವಾ ಐದು ದಳಗಳಿಂದ ಕೂಡಿರುತ್ತದೆ. ಹೂವಿನ ದಳಗಳು ಕೆಳಗೆ ಬಾಗಿ ಮಧ್ಯೆ ಕೇಸರಿಗಳಿದ್ದು ಸುಂದರವಾಗಿರುತ್ತದೆ. ದೊಡ್ದ ಪುಷ್ಪಪಾತ್ರೆಯಿಂದ ಸ್ವಲ್ಪ ಉದ್ದವಾದ ತೊಟ್ಟಿನಿಂದ ಕಾಯಿ ಇಳಿಬಿದ್ದಿರುವುದು. ಇದು ಹಗ್ಗವನ್ನುಎಡಗಡೆಯಿಂದ ತಿರುವಿದಂತೆ ಕಾಣುವುತ್ತದೆ. ಆದ್ದರಿಂದ ಇದನ್ನು ಎಡಮುರಿ ಎಂದು ಕರೆಯುತ್ತಾರೆ. ಇದರ ಕಾಯಿ ಮತ್ತು ಎಲೆಗಳನ್ನು ಔಷಧೋಪಚಾರಕ್ಕೆ ಉಪಯೋಗಿಸುತ್ತಾರೆ.

ಸರಳ ಚಿಕಿತ್ಸೆಗಳು[ಬದಲಾಯಿಸಿ]

ಗಜಚರ್ಮ, ಕುಷ್ಟ ಮತ್ತು ಸಮಸ್ತ ಚರ್ಮ ವ್ಯಾಧಿಗಳ ನಿವಾರಣೆಗೆ[ಬದಲಾಯಿಸಿ]

ಎಡಮುರಿಯಬೇರು, ತೆಂಗಿನ ಬೇರು, ಬೇವಿನ ತೊಗಟೆಯ ಒಳನಾರು, ಹುಣಸೆನಾರು, ಬ್ಯಾಲದನಾರು ಇವುಗಳನ್ನೆಲ್ಲ ಚೆನ್ನಾಗಿ ಜಜ್ಜಿ, ಎಳ್ಳೆಣ್ಣೆ ಹಾಕಿ ಒಣಗಿಸಿ ಶುದ್ಧಮಡಕೆಯಲ್ಲಿ ಹಾಕಿ ತೈಲವನ್ನು ಮಾಡುತ್ತಾರೆ. ಇದನ್ನು ಚರ್ಮವ್ಯಾಧಿಗೆ ಹಚ್ಚುತ್ತಾರೆ.

ಕುಷ್ಟ, ಅಸಾಧ್ಯವಾದ ಕಜ್ಜಿ ತುರಿ ನಿವಾರಣೆಗೆ[ಬದಲಾಯಿಸಿ]

ಎಡಮುರಿ ಗಿಡದ ಬೇರನ್ನು ಚೆನ್ನಾಗಿ ಒಣಗಿಸಿ ನಯವಾಗಿ ಚೂರ್ಣ ಎಳ್ಳೆಣ್ಣೆಯಲ್ಲಿ ಕಲಸಿ ನಾಲ್ಕು ವಾರ ಹಚ್ಚುತ್ತಾರೆ. ಎಲ್ಲಾ ವಿಧವಾದ ಚರ್ಮವ್ಯಾಧಿಗಳು ಗುಣಮುಖವಾಗುವುದು.

ಕಠಿಣವಾದ ಶೋಭೆಯ ನಿವಾರಣೆಗೆ[ಬದಲಾಯಿಸಿ]

ಅಳಲೆಕಾಯಿ ಸಿಪ್ಪೆ, ದೇವದಾರು, ಶುಂಠಿ, ನೆಗ್ಗಿಲು, ಕೊಮ್ಮೆಬೇರು ಮತ್ತು ಎಡಮುರಿ ಇವೆಲ್ಲವನ್ನು ಸಮತೂಕದಲ್ಲಿ ತೆಗೆದುಕೊಂಡು ನುಣ್ಣಗೆ ಚೂರ್ಣಿಸಿಕೊಳ್ಳಬೇಕು. ೨ಗ್ರಾಂ ನಷ್ಟು ಚೂರ್ಣವನ್ನು ಒಂದುಬಟ್ಟಲು ನೀರಿಗೆ ಹಾಕಿ ಕಷಾಯಮಾಡಿ ಆರಿದ ಮೇಲೆ ದಿನಕ್ಕೊಮ್ಮೆಯಂತೆ ೭ ದಿವಸ ಕುಡಿಯುವುದು.

ಅಜೀರ್ಣ, ಅಗ್ನಿಮಾಂಧ್ಯ ಶಮನಕ್ಕೆ[ಬದಲಾಯಿಸಿ]

ಎಡಮುರಿಯ ಬೇರನ್ನು ಚೆನ್ನಾಗಿ ಒಣಗಿಸಿ ನಯವಾದ ಚೂರ್ಣ ಮಾಡಿ, ಅಜೀರ್ಣದ ಸಮಯದಲ್ಲಿ ಚೂರ್ಣ ಸೇವಿಸುವುದು.

ಕಿವಿ ನೋವು ಮತ್ತು ಹುಣ್ಣಿನ ನಿವಾರಣೆಗೆ[ಬದಲಾಯಿಸಿ]

ಎಡಮುರಿಯ ಕಾಯಿಯನ್ನು ನುಣ್ಣಗೆ ಅರೆದು ಹರಳೆಣ್ಣೆಯಲ್ಲಿ ಬಿಸಿ ಮಾಡಿ ಒಂದೆರಡು ತೊಟ್ಟು ಕಿವಿಗೆ ಬಿಡಬೇಕು.[೧]

ಉಲ್ಲೇಖ[ಬದಲಾಯಿಸಿ]

  1. ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು, ವೈದ್ಯ:ಎ. ಆರ್. ಎಂ. ಸಾಹೇಬ್ ನಿವೃತ್ತ ವಲಯಾರಣ್ಯಾಧಿಕಾರಿಗಳು, ಪ್ರಕಾಶಕರು:ದಿವ್ಯಚಂದ್ರ ಪ್ರಕಾಶನ, ಪುಟ ಸಂಖ್ಯೆ-೫೮
"https://kn.wikipedia.org/w/index.php?title=ಎಡಮುರಿ&oldid=715913" ಇಂದ ಪಡೆಯಲ್ಪಟ್ಟಿದೆ