ವಿಷಯಕ್ಕೆ ಹೋಗು

ಅರುವತ್ತನಾಲ್ಕು ಶೀಲಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರುವತ್ತನಾಲ್ಕು ಶೀಲಗಳು : ವೀರಶೈವಧರ್ಮದಲ್ಲಿ ನಿಷ್ಠೆಯುಳ್ಳವರು ಇವನ್ನು ಆಚರಿಸಬೇಕೆಂಬ ನಿಯಮವಿದೆ.

ಪ್ರಖ್ಯಾತ ಶರಣರಾದ ಪಾಲ್ಕುರಿಕೆ ಸೋಮನಾಥ, ಸರ್ವಶೀಲೆ ಚೆನ್ನಮ್ಮ, ಈ ಶೀಲಗಳನ್ನು ಚಾಚೂ ತಪ್ಪದೆ ಆಚರಿಸುತ್ತಿದ್ದರೆಂದು ಪುರಾಣಗಳಲ್ಲಿ ಹೇಳಿದೆ.

ಶಿವಭಕ್ತರ ಗುಣಗಳು

[ಬದಲಾಯಿಸಿ]

ಇವುಗಳಲ್ಲಿ ಶಿವಭಕ್ತ ಹೇಗಿರಬೇಕೆಂಬ ಎಲ್ಲ ವಿವರಗಳೂ ಸಿಕ್ಕುತ್ತವೆ. ಲಿಂಗಪೂಜೆ,ಮನೆಯ ವಾತಾವರಣ, ಲಿಂಗಜಂಗಮ ಭಕ್ತಾದಿಗಳ ವಿಚಾರದಲ್ಲಿ ತೋರಬೇಕಾದನಡೆವಳಿಕೆಗಳು, ತಿನ್ನಬೇಕಾದ ಆಹಾರ, ಪಾನೀಯಗಳ ವಿವರ, ವಿಹಾರ ವರ್ಜನೆ,ಪಶುಪ್ರಾಣಿಗಳ ಸಂಬಂಧವಾದ ನಡೆವಳಿಕೆ, ಇತರ ಜಾತಿಗಳವರ ಬಗ್ಗೆ ಇರಬೇಕಾದ ವರ್ತನೆ−ಹೀಗೆ ಅನೇಕ ವಿವರಗಳಿವೆ. ಇವೆಲ್ಲವನ್ನೂ ಆಚರಿಸಬೇಕೆಂಬುದು ಕಟ್ಟಳೆಯಾದರೂ ಮುಖ್ಯವಾಗಿ ಭವಿಪಾಕ, ಪರಸ್ರ್ತೀ, ಬಹುಜಲ, ಅನ್ಯದೈವ, ಭವಿಗಳನ್ನು ಬಿಟ್ಟು ಸರ್ವಾಚಾರಸಂಪನ್ನ ನಾಗಿ, ನಿರ್ಮಲತೆಯಿಂದ ನಡೆಯಲು ಪ್ರತಿಯೊಬ್ಬನೂ ಪ್ರಯತ್ನಿಸಬಹುದು.

ಕೆಲವು ಉದಾಹರಣೆಗಳು: ಲೌಕಿಕವನ್ನು ಅತಿಗಳೆವುದು, ಸತಿಪತಿಗಳಿಬ್ಬರೂ ಶೀಲವಂತರಾಗಿರುವುದು, ಶಿವಭಕ್ತಲ್ಲಿ ಜಾತಿವನ್ನು ಅರಸದಿರುವುದು,ಎಮ್ಮೆ ಹಾಲು ವರ್ಜಿಸುವುದು, ಮರದ ಹಾವುಗೆ ಮೆಟ್ಟುವುದು, ಹುಸಿಯ ನುಡಿಯದಿರುವುದು,ತ್ರಿವಿಧ ದಾಸೋಹ ಮಾಡುವುದು, ಉಚಿತವರಿತು ದಾನ ಮಾಡುವುದು; ಡಂಭದ ಲಿಂಗಾರ್ಚನೆ, ಆಸೆಯ ಶಿವದೀಕ್ಷೆ ಮಾಡದಿರುವುದು, ಕಿವಿಯಿಂದ ಕೆಟ್ಟ ಶಬ್ದಗಳನ್ನುಕೇಳದಿರುವುದು. ಗುರುವಿನ ಸೇವೆಗೆಯ್ಯುವುದು, ಆಚಾರವೇ ಗುರು; ಲಿಂಗವೇ ಜಂಗಮಎಂದು ತಿಳಿಯುವುದು, ಎಲ್ಲವೂ ಶೀವಾಧೀನವೆಂದು ಭಾವಿಸುವುದು, ನಿರಂತರ ಸಾವಧಾನಿಯಾಗಿರುವುದು, ಬಯಸಿ ಬಂದುದು ಅಂಗಭೋಗ, ಬಯಸದೆ ಬಂದುದು ಲಿಂಗಭೋಗವೆಂದು ಅನುಭವಿಸುವುದು, ಅಷ್ಟ ಮಹಾಸಿದ್ಧಿಗಳನ್ನು ತೃಣೀಕರಿಸುವುದು; ಶೀಲವೇ ಜ್ಞಾನ; ಜ್ಞಾನವೇ ಶೀಲವೆಂಬುದನ್ನು ತಿಳಿಯುವುದು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: