ವಿಷಯಕ್ಕೆ ಹೋಗು

ಅರ್ಕನ್‍ಸೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರ್ಕನ್‍ಸೋ : ಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣಭಾಗದ ರಾಜ್ಯಗಳಲ್ಲೊಂದು. ಜನ ಸುಯೋಗದ ನಾಡು ಎಂದು ಕರೆಯುತ್ತಾರೆ. ವಿಸ್ತೀರ್ಣ 53183.ಚ.ಕಿಮೀ. ಜನಸಂಖ್ಯೆ 2362239(2001) 1836 ರಲ್ಲಿ 25 ನೆಯ ರಾಜ್ಯವಾಗಿ ಸಂಯುಕ್ತ ಸಂಸ್ಥಾನಗಳಲ್ಲಿ ಸೇರಿತು. ಲಿಟ್ಲ್ ರಾಕ್ ಇದರ ರಾಜಧಾನಿ. 1541-42 ರಲ್ಲಿ ಈ ಪ್ರದೇಶದೊಳಕ್ಕೆ ಮೊಟ್ಟ ಮೊದಲು ಬಿಳಿ ಜನರ ತಂಡವೊಂದು ಪ್ರವೇಶಿಸಿತು. 1686 ರಲ್ಲಿ ಫ್ರೆಂಚರ ವ್ಯಾಪಾರ ವಸಾಹತು.ಆರಂಭವಾಯಿತು. 1819 ರಲ್ಲಿ ಇದು ಒಂದು ವಸಾಹತಾಯಿತು. ಇಲ್ಲಿಯ ಜನಸಂಖ್ಯೆಯ 1/4 ಭಾಗ ನೀಗ್ರೊಗಳಾಗಿದ್ದಾರೆ. ಕಪ್ಪು ಜನರ ಹಕ್ಕು ಬಾಧ್ಯತಾ ಕಾನೂನಿಗೆ ಬಿಳಿಜನರು ವಿರೋಧವನ್ನು ವ್ಯಕ್ತಪಡಿಸಿದ ರಾಜ್ಯಗಳಲ್ಲಿ ಇದೂ ಒಂದು. ದಕ್ಷಿಣಭಾಗದಲ್ಲಿರುವುದ ರಿಂದ ಹಿತಕರ ವಾಯುಗುಣವಿದ್ದು ಬೇಸಾಯಕ್ಕೆ ಅವಶ್ಯಕವಾದ ಅನುಕೂಲತೆಗಳೆಲ್ಲ ಇವೆ; ಜನಜೀವನದಲ್ಲಿ ನೆಮ್ಮದಿ ನೆಲೆಸಿದೆ. ಭೂ ಪ್ರದೇಶದ ವೈವಿಧ್ಯ ದಿಂದ ನಾಡು ರಮಣೀಯವಾಗಿದೆ. ಕಲಿದ್ದಲು, ಪೆಟ್ರೋಲಿಯಂ ಮತ್ತು ಕೈಗಾರಿಕೆಯ ಅಭಿವೃದ್ಧಿಗೆ ಅಗತ್ಯ ಇಂಧನ ಮೊದಲಾದ ಖನಿಜ ಸಂಪತ್ತು ಹೇರಳವಾಗಿ ದೊರಕುತ್ತದೆ. ಅರ್ಕನ್ ಸೋಸ್‍ನಲ್ಲಿ ಮುಖ್ಯವಾದ ಎರಡು ಭೂಗೋಳಿಕ ವಿಭಾಗಗಳಿವೆ ; ದಕ್ಷಿಣ ಮತ್ತು ಪೂರ್ವಕ್ಕೆ ಮೈದಾನ, ತೀರದ ಖಾರಿ ಹಾಗೂ ಉತ್ತರ ಮತ್ತು ಪಶ್ಚಿಮಕ್ಕೆ ಒಳಬಾಗದ ಎತ್ತರ ಪ್ರದೇಶಗಳು. ಎತ್ತರದ ಪ್ರದೇಶ ಮಿಸಿಸಿಪ್ಪಿ ನದಿಯ ಹತ್ತಿರ ಸಮುದ್ರ್ರ ಮಟ್ಟಕ್ಕಿಂತ 30.18ಮೀ ಗಳಷ್ಟು ಮಾತ್ರ ಎತ್ತರವಾಗಿದ್ದು ಕ್ರಮೇಣ ಹೆಚ್ಚುತ್ತ ಹೋಗಿ ವಾಯುವ್ಯದ ಮ್ಯಾಗಜೀನ್ ಪರ್ವತದ ಬಳಿ 862.27ಮೀ ಗಳಷ್ಟಿದೆ. ಓಜಾರ್ಕ್ ಪ್ರಸ್ಥಭೂಮಿ ಉತ್ತರದ ಮಧ್ಯ ಬಾಗ ಹಾಗೂ ವಾಯವ್ಯದ ಪ್ರದೇಶಗಳನ್ನಾವರಿಸಿ ಅಕ್ಕಪಕ್ಕದ ರಾಜ್ಯಗಳಲ್ಲಿ ಹರಡಿದೆ. ಈ ಪ್ರಸ್ಥಭೂಮಿಯ ಕೆಲವು ಭಾಗಗಳು ಅನೇಕ ತೊರೆಕಣಿವೆಗಳಿಂದ ಬೇರ್ಪಟ್ಟಿವೆ; ಕೆಲವು ಕಡೆಗಳಲ್ಲಿ ಕಾಡು ಹರಡಿದೆ. ಆದರೆ ಇದರ ಅಧಿಕ ಭಾಗ ಮೈದಾನ ಅಥವಾ ಕ್ರಮೇಣ ಎತ್ತರವಾಗುತ್ತ ಹೋಗುವ ಪ್ರದೇಶ. ಭೂ ವ್ಯವಸಾಯ, ಹಾಲಿನ ಮತ್ತು ಅದಕ್ಕೆ ಸಂಬಂಧಿಸಿದ ಪದಾರ್ಥಗಳ ಉತ್ಪಾದನೆ ಮತ್ತು ಹಣ್ಣು-ತರಕಾರಿಗಳ ಬೆಳೆ ಇಲ್ಲಿ ವಿಶೇಷವಾಗಿವೆ. ಅತ್ಯಂತ ಎತ್ತರವಾಗಿರುವ ಈ ಪ್ರಸ್ಥಭೂಮಿಯ ದಕ್ಷಿಣಭಾಗ ಆಳವಾಗಿ ನಾನಾ ರೀತಿಯಲ್ಲಿ ಕೊರೆಯಲ್ಪಟ್ಟು, ರಾಜ್ಯದಲ್ಲೇ ಅತ್ಯಂತ ಒರಟು ಆಕೃತಿಯನ್ನು ಹೊಂದಿದೆ. ಇದೇ ಬಾಸ್ಟನ್ ಪರ್ವತ ಪ್ರದೇಶ. ಅರ್ಕ್‍ನ್‍ಸೋಸ್‍ನ ಪಶ್ಚಿಮದ ಮಧ್ಯ ಪ್ರದೇಶದಲ್ಲಿರುವ ಓಷಿಟೋ ಎಂಬ ಪರ್ವತ ಪ್ರದೇಶ ಕಣಿವೆಯ ಮಟ್ಟದಿಂದ 304-608 ಮೀ ಎತ್ತರಕ್ಕೆ ಸಮಾನಾಂತರವಾಗಿ ಹಬ್ಬಿರುವ ಬೆಟ್ಟಗಳ ಪ್ರದೇಶ. ಇತರ ಕಡೆಗಳಲ್ಲಿರುವಂತೆಯೇ ಈ ಪರ್ವತ ಪ್ರದೇಶವೂ ಅರಣ್ಯಮಯ ವಾಗಿದ್ದು ಇದರ ಅನೇಕ ಇಳಿಜಾರು ಪ್ರದೇಶ ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯಾಗಿದೆ. ಇಳಿಜಾರು ಪ್ರದೇಶ 48,64ಕಿಮೀ. ಮೈಲಿಗ¼ವರೆಗೆ ವಿಸ್ತರಿಸುವ ಬಾಸ್ಟನ್ ಮತ್ತು ಓಷಿಟೋ ಪರ್ವತಗಳ ನಡುವೆ ಒಂದು ಮೊಗಸಾಲೆಯಂತಿರುವ ಸ್ಥಳ. ಓಷಿಟೋ ಪರ್ವತದ ಆಚೆ ಇರುವ ಬೇರೆ ಬೇರೆ ಪರ್ವತಗಳು ಇಳಿಜಾರು ಭೂಮಿಯಿಂದ 2000' ಎತ್ತರವಿದ್ದು ಬಹಳ ಒರಟಾಗಿವೆ. ಮೆಕ್ಕಲು ಮಣಿನಿಂದ ನಿರ್ಮಿತವಾದ ಸಮ ಪ್ರದೇಶಕ್ಕೆ ಸೇರಿದಂತೆ, ಫಲವತ್ತಾದ ತಗ್ಗು ಪ್ರದೇಶಗಳು ಹೆಚ್ಚು ಕಡಿಮೆ ಎಲ್ಲ ಭಾಗವನ್ನು ಆವರಿಸಿ ಕೊಂಡಿದ್ದು ಪೂರ್ವ ಪ್ರದೇಶದಲ್ಲಿ ಪಶ್ಚಿಮದ ಗಡಿಯಿಂದ ರಾಜ್ಯದ ಮಧ್ಯ ಪ್ರದೇಶಕ್ಕೂ ಹರಡಿಕೊಂಡಿವೆ. ತೀರಪ್ರದೇಶಗಳಲ್ಲಿ ಮರಳು ಮಿಶ್ರಿತ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವ ಬೆಲೆಬಾಳುವ ಪೈನ್ ಮರದ ಕಾಡುಗಳು ಹೆಚ್ಚಾಗಿವೆ. ಈ ಪ್ರದೇಶದ ಅಧಿಕ ಭಾಗದಲ್ಲಿ ಹೆಚ್ಚಾಗಿ ಹತ್ತಿ, ಬತ್ತ, ಬಟಾಣಿ, ತರಕಾರಿಗಳು ಹಾಗೂ ಇತರ ಕೃಷಿ ಪದಾರ್ಥಗಳನ್ನು ಬೆಳೆಯುತ್ತಾರೆ. ಮಿಸಿಸಿಪಿ ನದಿಯ ನೀರಿನ ಪ್ರವಾಹದಿಂದಾಗಿರುವ ಸಮಭೂಮಿಯ ತಗ್ಗು ಪ್ರದೇಶ ಹೆಚ್ಚು ಫಲವತ್ತಾಗಿದೆ. ಕೆಲವು ಸಮಭೂಪ್ರದೇಶಗಳು ಪ್ರವಾಹಕ್ಕೊಳಗಾಗಿವೆ. ಈ ಪ್ರದೇಶದಲ್ಲಿ ಸಾಕಷ್ಟು ನೀರ್ಗಾಲುವೆಗಳಿಲ್ಲ. ನದಿಗಳಲಾಗಿ ಕಟಿರುವ ಅಣೆPಟ್ಟುಗಳು ಈ ಪ್ರದೇಶವನ್ನು ರಕ್ಷಿಸುತ್ತವೆ. ಅಲ್ಲದೆ ನೀರ್ಗಾಲುವೆಗಳಿಗೆ ಚರಂಡಿ ಹಾಗೂ ಕಾಲುವೆಯ ನೀರನ್ನು ಹಾಯಿಸಿಕೊಳ್ಳಲಾಗುತ್ತ್ತದೆ. ಮಾಂಸ ಮತ್ತು ಹಾಲಿಗಾಗಿ ದನಗಳನ್ನು ಇಲ್ಲಿ ಸಾಕುತ್ತಾರೆ. ಕಲ್ಲಿದ್ದ ಲು, ಪೆಟ್ರೋಲಿಯಂ, ಸ್ವಾಬಾವಿಕ ಅನಿಲ, ಬಾಕ್ಸೈಟು, ಕಟ್ಟಡದ ಕಲ್ಲುಗಳು ಇಲ್ಲಿನ ಮುಖ್ಯ ಖನಿಜ ಸಂಪತ್ತು. ಅಲ್ಯೂಮಿನಿಯಂ ಲೋಹವನ್ನು ತೆಗೆಯುವ ಬಾಕೈಟ್‍ನ ಗಣಿಗಳು ಸಂಯುಕ್ತ ಸಂಸ್ಥಾನದಲ್ಲಿ ಮಾತ್ರ ಇವೆ. ಇಲ್ಲಿನ ಖನಿಜೋತ್ಪನ್ನದ ವಾರ್ಷಿಕ ಮೊತ್ತ 140 ದಶಲಕ್ಷ ಡಾಲರುಗಳು. ದೇಶದ ವಿವಿಧ ಸಂಪನ್ಮೂಲಗಳಿಂದ ಬಂದ ಲಾಭವನ್ನು ಅಲ್ಯೂಮಿನಿಯಂ ಉತ್ಪಾದನೆಗೆ ಹಾಕಲಾಗುತ್ತಿದೆ. ಇಲ್ಲಿನ ಶೇ.18 ರಷ್ಟು ಕಾರ್ಮಿಕರು ಕೃಷಿ ಕೆಲಸದಲ್ಲೂ ಕಾಡಿನ ರಕ್ಷಣೆಯ ಕಾರ್ಯದಲ್ಲೂ ಗಣಿ ಕೆಲಸದಲ್ಲೂ ಶೇ.20 ಜನ ಕೈಗಾರಿಕೆಗಳಲ್ಲೂ ನಿರತರು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: