ವಿಷಯಕ್ಕೆ ಹೋಗು

ಹಪ್ಪಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಪ್ಪಳ
ಹಲಸಿನ ಹಪ್ಪಳ
ಮೂಲ
ಪರ್ಯಾಯ ಹೆಸರು(ಗಳು)ಪಾಪಡ್, ಪಂಪಡ್, ಹಪ್ಪಳ, ಪೊಪ್ಪಡಮ್, ಅಪ್ಪಳಮ್
ಮೂಲ ಸ್ಥಳಭಾರತ, ಪಾಕಿಸ್ತಾನ, ಬಾಂಗ್ಲಾದೇಶ್
ವಿವರಗಳು
ಮುಖ್ಯ ಘಟಕಾಂಶ(ಗಳು)ಬೇಳೆಗಳು, ಉದ್ದು, ಕಡಲೆ, ಅಕ್ಕಿ ಹಿಟ್ಟು
ಪ್ರಭೇದಗಳುಅಕ್ಕಿ, ಸಬ್ಬಕ್ಕಿ ಅಥವಾ ಆಲೂಗಡ್ಡೆ ಹಪ್ಪಳ

ಹಪ್ಪಳವು ಮೂಲತಃ ಭಾರತದಲ್ಲಿ ತಯಾರಿಸುವ ತಿಂಡಿ. ಹಪ್ಪಳ (ತಮಿಳು: பப்படம் ಹಿಂದಿ: पापड़, ಪಂಜಾಬಿ: ਪਾਪਡ, ನೇಪಾಳಿ ಮತ್ತು ಮರಾಠಿ : पापड, ಗುಜರಾತಿ: પાપડ, ಅಸ್ಸಾಮಿ ಮತ್ತು ಬಂಗಾಳಿ: পাপড, ಮಲೆಯಾಳಂ: പപ്പടം pappadam, ತೆಲುಗು: అప్పడాలు appadalu, ಉರ್ದು: پاپڑ‎) ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಒಂದು ತಿನಿಸು. ಇದನ್ನು ಬಾಳೆಕಾಯಿ, ಹಲಸಿನಕಾಯಿ ಉದ್ದು, ಅಕ್ಕಿಯೇ ಮುಂತಾಗಿ ನಾನಾರೀತಿಯ ವಸ್ತುಗಳಿಂದ ತಯಾರಿಸುತ್ತಾರೆ.[]

ಅಕ್ಕಿ ಹಪ್ಪಳ

[ಬದಲಾಯಿಸಿ]

ಅಕ್ಕಿಯನ್ನು ನೆನೆಸಿ ನೀರು ಉಪ್ಪು ಜೀರಿಗೆಯನ್ನೆಲ್ಲ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು .ಬಾಣಲೆಯಲ್ಲಿ ಕಾಯಿಸಿ ಉಂಡೆ ಮಾಡಿ ಉರುಟಾಗಿ ತಟ್ಟಿ ಬಿಸಿಲಲ್ಲಿ ಒಣಗಿಸಿಕೊಳ್ಳ ಬೇಕು

ಹಲಸಿನ ಕಾಯಿ ಹಪ್ಪಳ

[ಬದಲಾಯಿಸಿ]

ಈ ಹಪ್ಪಳವನ್ನು ಬೆಳೆದ ಹಲಸಿನಕಾಯಿಯಿಂದ ತಯಾರಿಸಲಾಗುತ್ತದೆ[] ಇದನ್ನು ಮಾಡಲು ಮೊದಲು ಹಲಸಿನ ಕಾಯಿ ಬಿಡಿಸಿ. ಇದನ್ನು ತೆಗೆಯುವಾಗ ಕೈಗೆ ಮೇಣ ತಾಗದಂತೆ ಕೊಬ್ಬರಿ ಎಣ್ಣೆ ಕೈಗೆ ಹಾಕಿಕೊಳ್ಳಬೇಕಾಗುತ್ತದೆ.ನಂತರ ಬಲವಾದ ಕತ್ತಿಯಿಂದ ಅಥವಾ ಕೊಡಲಿಯಿಂದ ಇದನ್ನು ಬಿಡಿಸಿ ಒಳಗಿರುವ ತೊಳೆಗಳನ್ನು ಬಿಡಿಸಿ ಅದರೊಳಗಿನ ಬೀಜ ಬೇರ್ಪಡಿಸಬೇಕಾಗುತ್ತದೆ.ತೊಳೆಗಳನ್ನು ನೀರಿನಲ್ಲಿ ಬೇಯಿಸಿ ಅದು ಸರಿಯಾಗಿ ಬೆಂದ ನಂತರ ಸ್ವಲ್ಪ ತಣಿಸ ಬೇಕು. ಬೇಯಿಸಿದ ಸೊಳೆಗಳನ್ನು ಕಡಿಯುವ ಕಲ್ಲಿನಲ್ಲಿ ಉಪ್ಪುಹಾಕಿ ರುಬ್ಬಿ ನಂತರ ಅದನ್ನು ಗೋಲಾಕಾರದಲ್ಲಿ ಉಂಡೆ ಮಾಡಬೇಕು.ಆಮೇಲೆ ಮಣೆಯ ಸಹಾಯದಿಂದ ಚಪ್ಪಟೆಯಾಗಿ ಒತ್ತಿ ನಂತರ ಇದನ್ನು ಚಾಪೆಯಲ್ಲಿ ಮೂರು ದಿನಗಳು ಬಿಸಿಲಲ್ಲಿ ಒಣಗಲು ಬಿಡಬೇಕು. ಇದು ಒಣಗಿದ ನಂತರ ಶೇಖರಿಸಿ ಇಟ್ಟು ಬೇಕಾದಾಗ ಎಣ್ಣೆಯಲ್ಲಿ ಕರಿದು ತಿನ್ನಬಹುದು.

ದೀವಿ ಹಲಸಿನ ಹಪ್ಪಳ

[ಬದಲಾಯಿಸಿ]

ದೀವಿ ಹಲಸಿನ ಹಪ್ಪಳ ಮಾಡುಲು ಬೆಳೆದ ದೀಗುಜ್ಜೆ ಬೇಕಾಗುತ್ತದೆ.ದೀವಿ ಹಲಸನ್ನು ಜೀಗುಜ್ಜೆ ಅಂತಲೂ ಕರೆಯುತ್ತಾರೆ.ಪ್ರಕೃತಿಯಲ್ಲಿ ಸಿಗುವ ಹಲಸಿನ ಪ್ರಭೇದ[].ಇದನ್ನು ತರಕಾರಿಯಾಗಿಯು ಅಡುಗೆಯಲ್ಲಿಯು ಉಪಯೋಗಿಸುತ್ತಾರೆ.ಬೆಳೆದ ಜೀಗುಜ್ಜೆ ಆಯ್ದು ಕೊಂಡು ಸಿಪ್ಪೆ ತೆಗೆದು ತುಂಡು ಮಾಡಿಕೊಂಡು ನೀರು ಹಾಕದೆ ಹಬೆಯಲ್ಲಿ ೨೦ ನಿಮಿಷ ಬೇಯಿಸಬೇಕು. ಆಮೇಲೆ ಕಡೆಯುವ ಕಲ್ಲಿನಲ್ಲಿ ನೀರು ಉಪ್ಪು ಸೇರಿಸಿ ರುಬ್ಬಬೇಕು. ನಂತರ ಅದನ್ನು ಗೋಲಾಕಾರದಲ್ಲಿ ಉಂಡೆ ಮಾಡಬೇಕು.ಆಮೇಲೆ ಮಣೆಯ ಸಹಾಯದಿಂದ ಚಪ್ಪಟೆಯಾಗಿ ಒತ್ತಿ ನಂತರ ಇದನ್ನು ಚಾಪೆಯಲ್ಲಿ ಮೂರು ದಿನಗಳು ಬಿಸಿಲಲ್ಲಿ ಒಣಗಲು ಬಿಡಬೇಕು. ಇದು ಒಣಗಿದ ನಂತರ ಶೇಖರಿಸಿ ಇಟ್ಟು ಬೇಕಾದಾಗ ಎಣ್ಣೆಯಲ್ಲಿ ಕರಿದು ತಿನ್ನಬಹುದು.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]


"https://kn.wikipedia.org/w/index.php?title=ಹಪ್ಪಳ&oldid=1253251" ಇಂದ ಪಡೆಯಲ್ಪಟ್ಟಿದೆ