ಈಸೋಪನ ಲೋಕನೀತಿ ಕಥೆಗಳು (ಪುಸ್ತಕ)
ಲೇಖಕರು | ಆನಂದ |
---|---|
ದೇಶ | ಭಾರತ |
ಭಾಷೆ | ಕನ್ನಡ |
ವಿಷಯ | ಮಕ್ಕಳ ಕಥೆಗಳು |
ಪ್ರಕಾರ | ಕಥೆಗಳು |
ಪ್ರಕಾಶಕರು | ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ |
ಪ್ರಕಟವಾದ ದಿನಾಂಕ | ೨೦೧೨, ೨ನೇ ಮುದ್ರಣ |
ಪುಟಗಳು | ೨೩೨ |
ಐಎಸ್‍ಬಿಎನ್ | 978-81-8467-೨೯೬-೧ false |
ಈಸೋಪನ ಲೋಕನೀತಿ ಕಥೆಗಳು ಆನಂದ ಅವರ ಸಂಗ್ರಹ - ರೂಪಾಂತರ ಪುಸ್ತಕ. ಈ ನೀತಿಕಥೆಗಳಲ್ಲಿ ಮನುಷ್ಯ ಪಾತ್ರಗಳಿಗಿಂತ ಪ್ರಾಣಿ-ಪಕ್ಷಿಗಳ ಪಾತ್ರಗಳಿಗೆ ಹೆಚ್ಚು ಮಹತ್ವವನ್ನು ನೀಡಲಾಗಿದೆ. ಪ್ರಾಣಿ-ಪಕ್ಷಿ-ಮನುಷ್ಯ ಪಾತ್ರಗಳು ಪರಸ್ಪರ ಸಂಭಾಷಿಸುತ್ತವೆ. ಈ ಸಂಭಾಷಣೆಯು ಅಸಹಜವೂ, ಅಲೌಕಿಕವೂ, ಅಸಂಭವವೂ ಆಗಿದ್ದರೂ ಸಹ ಇದು ಜನಪದರ ನಿಸರ್ಗಪ್ರಿಯತೆಗೆ ಸಾಕ್ಷಿಯಾಗಿದೆ. ಹಾಗೆಯೇ ಮಾನವ-ಮಾನವೇತರ ಜೀವಸಂಕುಲದ ನಡುವೆ ಇರಲೇಬೇಕಾದ ಸಹಬಾಳ್ವೆಯ ಸಂಬಂಧವನ್ನು ಮನಗಾಣಿಸುತ್ತವೆ. ಸುಮಾರು ನೂರಿಪ್ಪತ್ತು ಕಥೆಗಳಿರುವ ಈ ಸಂಕಲನದಲ್ಲಿ ಕಥಾಹಂದರಕ್ಕೆ ಸಂಬಂಧಿಸಿದಂತೆ ಸುಮಾರು ನೂರಾಹತ್ತು ಚಿತ್ರಗಳನ್ನು ನೀಡಲಾಗಿದೆ. ಇದು ಓದುಗರು ಮತ್ತಷ್ಟು ಕುತೂಹಲಿಗಳಾಗಿ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ಕಥಾವಿನ್ಯಾಸ, ನಿರೂಪಣೆಯ ಧಾಟಿ, ಪಾತ್ರಗಳ ಪೋಷಣೆ ಹಾಗೂ ಹೆಸರುಗಳು ಓದುಗರಲ್ಲಿ ಕುತೂಹಲ ಮತ್ತು ಆಸಕ್ತಿಯನ್ನುಂಟು ಮಾಡುತ್ತವೆ. ಗಾದೆ ಮತ್ತು ಒಗಟುಗಳ ವಿವರಣೆಯಂತಿರುವ ಈ ಕಥೆಗಳು ಲೌಕಿಕ ಜ್ಞಾನದ ಜೊತೆಗೆ ಸಾಮಾಜಿಕ ವಿವೇಕವನ್ನು ಬೆಳೆಸುತ್ತವೆ. ಆಧುನಿಕತೆಯ ಭರಾಟೆಯಲ್ಲಿ, ಯಂತ್ರ ನಾಗರಿಕತೆಗೆ ಮನಸೋತು, ಸದಾ ನಿರ್ಜೀವಿ ವಸ್ತುಗಳಂತೆ ಬದುಕುತ್ತಿರುವ ಹಾಗೂ ದಣಿಯುತ್ತಿರುವ, ಈ ಲೋಕದ ಪ್ರತಿಯೊಂದು ಜೀವಿಯನ್ನು ಭೋಗದ ವಸ್ತುವಂತೆ ಕಾಣುತ್ತಿರುವ ಈ ನಾಗರಿಕ ಸಮಾಜಕ್ಕೆ ನಿಸರ್ಗ ಹಾಗೂ ಸಾಮಾಜಿಕ ಜ್ಞಾನವನ್ನು ಈ ನೀತಿ ಕಥೆಗಳು ನೀಡುತ್ತವೆ.