ಬ್ರಾಹ್ಮಿ ಮುಹೂರ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮದಲ್ಲಿ, ಬ್ರಾಹ್ಮಿ ಮುಹೂರ್ತವು ಸೂರ್ಯೋದಯಕ್ಕೆ ಮೊದಲು ಒಂದೂವರೆ ಗಂಟೆಗಳ ಅವಧಿ ಅಥವಾ ಹೆಚ್ಚು ನಿಖರವಾಗಿ ೧ಗಂಟೆ ೩೬ ನಿಮಿಷಗಳು ಅಂದರೆ ೯೬ ನಿಮಿಷಗಳು = ೨ ಮುಹೂರ್ತ ಅಥವಾ ೪ ಘಟಿಕಾ. ಒಂದು ಮುಹೂರ್ತದ ಅವಧಿ ೪೮ ನಿಮಿಷಗಳು, ಮತ್ತು ಬ್ರಾಹ್ಮಿ ಮುಹೂರ್ತವನ್ನು ಯೋಗದ ಎಲ್ಲ ಅಭ್ಯಾಸಗಳಲ್ಲಿ ಸೂಚಿಸಲಾಗುತ್ತದೆ, ಮತ್ತು ಇದು ಧ್ಯಾನ, ಪೂಜೆ ಅಥವಾ ಇತರ ಯಾವುದೇ ಧಾರ್ಮಿಕ ಆಚರಣೆಗೆ ಸಾಂಪ್ರದಾಯಿಕವಾಗಿ ಅತ್ಯಂತ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಉಷಃಕಾಲದ ಮುಂಚಿನ ಒಂದು ಗಂಟೆಯ ಅವಧಿಯಲ್ಲಿ, ಸಂತರು ಮತ್ತು ಯೋಗಿಗಳು ಉತ್ತರಕ್ಕೆ ಮುಖಮಾಡಿ, ತಮ್ಮನ್ನು ತಾವು ಯೋಗಿಕ ಭಂಗಿಯಲ್ಲಿ ಸ್ಥಾಪಿಸಿಕೊಂಡು ಓಂಕಾರವನ್ನು ಪಠಿಸುತ್ತಾರೆ ಮತ್ತು ಬ್ರಹ್ಮ (ಅಥವಾ ಸೂರ್ಯ), ಅಥವಾ ವಿಷ್ಣುವಿನ ಭಕ್ತರು ಅಥವಾ ವಿಷ್ಣುವನ್ನೇ ಧ್ಯಾನಿಸುತ್ತಾರೆ.