ಸಮಸ್ಥಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಯಾನ್‌ನ ಎರಡು ಸಮಸ್ಥಾನಿಗಳನ್ನು ನಿಯಾನ್ -೨೦,ಮತ್ತು ನಿಯಾನ್-೨೨ ತೋರಿಸುವ ಜೆ.ಜೆ.ಥಾಮ್ಸನ್‌ನ ಛಾಯಾಚಿತ್ರಣದ ಪ್ರತಿ

ಸಮಸ್ಥಾನಿ(isotope)ಎಂದರೆ ಒಂದು ಮೂಲಧಾತುವಿನ ಭಿನ್ನ ಪರಮಾಣು ತೂಕವನ್ನು ಹೊಂದಿರುವ ಒಂದು ಅಥವಾ ಹೆಚ್ಚಿನ ಪರಮಾಣುಗಳು. ಸಮಸ್ಥಾನಿಗಳ ಪರಮಾಣು ಕೇಂದ್ರ(nuclei)ದಲ್ಲಿ ಪ್ರೋಟಾನ್‌ನ ಸಂಖ್ಯೆ ಸಮನಾಗಿದ್ದರೂ ನ್ಯೂಟ್ರಾನ್‌ಗಳ ಸಂಖ್ಯೆ ಭಿನ್ನವಾಗಿರುತ್ತದೆ.ಉದಾಹರಣೆಗೆ ಜಲಜನಕ ಮೂರು ಸಮಸ್ಥಾನಿಗಳನ್ನು ಹೊಂದಿದೆ.ಇದರ ಅತ್ಯಂತ ಹೇರಳವಾಗಿರುವ ಸಮಸ್ಥಾನಿ ಪ್ರೊಟಿಯಮ್‍ನ ಪರಮಾಣು ತೂಕ ಒಂದು.ಎಂದರೆ ಇದರ ಕೇಂದ್ರದಲ್ಲಿ ಒಂದು ಪ್ರೊಟಾನ್ ಮಾತ್ರವಿದ್ದು ನ್ಯೂಟ್ರಾನ್ ಇರುವುದಿಲ್ಲ.ಎರಡನೇ ಸಮಸ್ಥಾನಿ ಡಿಟಿರಿಯಮ್ (deuterium)ನ ಕೇಂದ್ರದಲ್ಲಿ ಒಂದು ಪ್ರೊಟಾನ್ ಹಾಗೂ ಒಂದು ನ್ಯೂಟ್ರಾನ್ ಇದ್ದು ಇದರ ಪರಮಾಣು ತೂಕ -೨ ಆಗಿದೆ.ಅಂತೆಯೇ ಮೂರನೆಯ ಹಾಗೂ ಭಾರವಾದ ಸಮಸ್ಥಾನಿ ಟ್ರೈಟಿಯಮ್ (Tritium)ನ ಕೇಂದ್ರದಲ್ಲಿ ಒಂದು ಪ್ರೊಟಾನ್ ಹಾಗೂ ಎರಡು ನ್ಯೂಟ್ರಾನ್‌ಗಳಿದ್ದು ಇದರ ಪರಮಾಣು ತೂಕ -೩ ಆಗಿರುತ್ತದೆ.ನ್ಯೂಟ್ರಾನ್ ಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದ್ದರೆ ಅದು ಪರಮಾಣುಗಳ ಗುಣಲಕ್ಷಣಗಳನ್ನು ಕೂಡ ಭಿನ್ನವಾಗಿ ನಿರೂಪಿಸುತ್ತದೆ.ಐಸೋಟೋಪ್ ಗಳನ್ನು ಸೂಚಿಸುವಾಗ ಧಾತುವಿನ ಹೆಸರಿನ ಮುಂದೆ -ಬರೆದು ನಂತರ ಅದರ ಪರಮಾಣು ರಾಶಿ ಸಂಖ್ಯೆಯನ್ನು ಬರೆಯಲಾಗುತ್ತದೆ. ಉದಾ: ಇಂಗಾಲದ ಐಸೋಟೋಪ್ ಗಳು ಇಂಗಾಲ-12, ಇಂಗಾಲ-13, ಇಂಗಾಲ-14 (Carbon-12, Carbon-13, Carbon-14)

ಬಾಹ್ಯಸಂಪರ್ಕಗಳು[ಬದಲಾಯಿಸಿ]