ಎಲೆಕ್ಟ್ರಾನ್

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
ಎಲೆಕ್ಟ್ರಾನ್

ಜಲಜನಕ ಅಣುವಿನ ಮೊದಲ ಕೆಲವು ಎಲೆಕ್ಟ್ರಾನ್ ಕಕ್ಷೆಗಳಲ್ಲಿನ ಎಲೆಕ್ಟ್ರಾನ್ ಸಾಂದ್ರತೆಗಳ ಸೈದ್ಧಾಂತಿಕ ಅಂದಾಜುಗಳನ್ನು, ವರ್ಣೀಕರಿಸಿದ ಸಂಭಾವ್ಯತಾ ಸಾಂದ್ರತೆಯುಳ್ಳ ಅಡ್ಡ-ಕೊಯ್ತಗಳಾಗಿ ತೋರಿಸಲಾಗಿದೆ.
ರಚನೆ: ಮೂಲ ಕಣ
ವರ್ಗ: ಫರ್ಮಿಯಾನ್
ಗುಂಪು: ಲೆಪ್ಟಾನ್
ಪೀಳಿಗೆ: ಮೊದಲನೆಯ
ಒಡನಾಟ: ಗುರುತ್ವ, ವಿದ್ಯುತ್‌ಕಾಂತೀಯ, ದುರ್ಬಲ
ಪ್ರತಿಕಣ: ಪಾಸಿಟ್ರಾನ್
ಸಿದ್ಧಾಂತ: ಗಿ. ಜಾನ್‌ಸ್ಟನ್ ಸ್ಟೋನಿ (೧೮೭೪)
ಆವಿಷ್ಕಾರ: ಜೆ.ಜೆ. ಥಾಂ‌ಸನ್ (೧೮೯೭)
ಚಿಹ್ನೆ: e, β
ದ್ರವ್ಯರಾಶಿ: ೯.೧೦೯ ೩೮೨ ೧೫(೪೫) × ೧೦–೩೧ ಕಿ.ಗ್ರಾಂ.[೧]

೫.೪೮೫ ೭೯೯ ೦೯(೨೭) × ೧೦–೪ u

1೧೮೨೨.೮೮೮ ೪೮೪೩(೧೧) u

೦.೫೧೦ ೯೯೮ ೯೧೮(೪೪) MeV/c2
ವಿದ್ಯುದಾವೇಶ: –೧.೬೦೨ ೧೭೬ ೪೮೭(೪೦) × ೧೦–೧೯ C[೨]
ಗಿರಕಿ: ½

ಎಲೆಕ್ಟ್ರಾನ್ ಅಥವ ಋಣವಿದ್ಯುತ್ಕಣ - ಇದು ಋಣ ವಿದ್ಯುದಾವೇಶವನ್ನು ಹೊಂದಿರುವ ಒಂದು ಮೂಲ ಉಪಪರಮಾಣು ಕಣ. ಗಿರಕಿ-½ ಲೆಪ್ಟಾನ್ ಗುಂಪಿನಲ್ಲಿದ್ದು ವಿದ್ಯುತ್‌ಕಾಂತೀಯ ಒಡನಾಟಗಳಲ್ಲಿ ಭಾಗವಹಿಸುವ ಈ ಕಣವು ಪ್ರೋಟಾನ್ ಅಥವ ಧನವಿದ್ಯುತ್ಕಣದ ೧೮೩೬ನೇ ೧ರಷ್ಟು ದ್ರವ್ಯರಾಶಿಯನ್ನು ಹೊಂದಿದೆ. ಪರಮಾಣು ಕೇಂದ್ರದಲ್ಲಿನ ಪ್ರೋಟಾನ್ ಮತ್ತು ನ್ಯೂಟ್ರಾನ್ಗಳ ಜೊತೆ ಸೇರಿ ಎಲೆಕ್ಟ್ರಾನ್‌ಗಳು ಪರಮಾಣುಗಳನ್ನು ರಚಿಸುತ್ತವೆ. ಇದಲ್ಲದೆ, ನೆರೆಯ ಪರಮಾಣು ಕೇಂದ್ರಗಳೊಂದಿಗಿನ ಒಡನಾಟದಿಂದ ರಾಸಾಯನಿಕ ಬಂಧಗಳ ಸೃಷ್ಟಿಗೆ ಈ ಕಣಗಳೇ ಕಾರಣ.


ಈ ಕಣಗಳು ಕೇಂದ್ರದ ಸುತ್ತ ಹೇಗೆ ಚಲಿಸುತ್ತವೆ ಎನ್ನುವುದು ಇನ್ನೂ ತೀರ್ಮಾನವಾಗದ ವಿಷಯವಾಗಿದೆ.

ವೈಯಕ್ತಿಕ ಉಪಕರಣಗಳು