ಮಾಯಾ ನಾಗರಿಕತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಯಾ ಎನ್ನುವುದು ಮೆಸೊಅಮೆರಿಕಾದ (ಮೆಕ್ಸಿಕೊ+ಅಮೆರಿಕಾ)ನಾಗರಿಕತೆಯಾಗಿದೆ.ಆಗಿನ ಕಾಲದಲ್ಲಿ ಇದೊಂದೇ ಲಿಖಿತ ಭಾಷಾಭಿವೃದ್ಧಿ ಪಡೆದ ಪೂರ್ವದ ಕೊಲಂಬಿಯನ್ ಅಮೆರಿಕನ್ ಸಂಸ್ಕೃತಿಯಾಗಿತ್ತೆನ್ನಲಾಗಿದೆ.ಹೀಗಾಗಿ ಅದು ತನ್ನ ಕಲೆ,ವಾಸ್ತುಶಿಲ್ಪ ಮತ್ತು ಗಣಿತ ಹಾಗು ಖಗೋಳ ವಿಜ್ಞಾನದ ಪದ್ದತಿಗಳಿಗೆ ಹೆಸರಾಗಿತ್ತು. ಆರಂಭದಲ್ಲಿ ಇದು ಪೂರ್ವದ-ಕ್ಲಾಸಿಕ್ ಪಂಥದ ಹುಟ್ಟಿನ ಸಂದರ್ಭದಲ್ಲಿ ಪ್ರವರ್ಧನಮಾನಕ್ಕೆ ಬಂತು, (c. 2000 BC ಯಿಂದ 250 AD), ಮೆಸೊಅಮೆರಿಕನ್ ಕಾಲಗಣನೆಯಂತೆ ಹಲವು ಮಾಯಾ ನಗರಗಳು ಆ ಕ್ಲಾಸಿಕ್ ಯುಗದ ಸಂದರ್ಭದಲ್ಲಿ ಉತ್ಕೃಷ್ಟ ಬೆಳವಣಿಗೆ ಸಾಧಿಸಿದ್ದವು.(c. 250 AD ರಿಂದ 900 AD),ವರೆಗೆ ಕ್ಲಾಸಿಕ್ ಯುಗದ ನಂತರದ ಅವಧಿ ವರೆಗೂ ಅವುಗಳ ಪ್ರಗತಿ ಮುಂದುವರೆದಿತ್ತು.ಇಲ್ಲಿ ಸ್ಪ್ಯಾನಿಶ್ ಯುಗದ ಆರಂಭದ ವರೆಗೂ ಇದರ ಅಭಿವೃದ್ಧಿ ನಿರಂತರವಾಗಿತ್ತು.

ಈ ಮಾಯಾ ನಾಗರಿಕತೆಯು ಇನ್ನಿತರ ಮೆಸೊಅಮೆರಿಕನ್ ಸಂಸ್ಕೃತಿಗಳ ಪಾಲನ್ನೂ ಹೊಂದಿತ್ತು.ಉನ್ನತ ಮಟ್ಟದ ಪರಸ್ಪರ ವಿಚಾರ ವಿನಿಮಯ ಮತ್ತು ಆಯಾ ಪ್ರಾದೇಶಿಕತೆಯಲ್ಲಿ ತಕ್ಕ ಮಟ್ಟಿಗಿನ ಸಾಂಸ್ಕೃತಿಕ ಪ್ರಸರಣವೂ ನಡೆದಿತ್ತು. ಶಾಸನ ರಚನೆ ಮತ್ತು ಕ್ಯಾಲಂಡರ್ ಗಳ ಬರೆಹಗಳು ಅತ್ಯಂತ ಹಳೆಯ ಸಂಪ್ರದಾಯವಾಗಿದ್ದವೆಂದು ಮಾಯಾ ಸಂಸ್ಕೃತಿಯಿಂದ ಕಂಡು ಬರುತ್ತದೆ;ಇಂಥ ಕಾರಣಗಳಿಂದ ಅವರ ಸಂಸ್ಕೃತಿಯು ಆಗಿನ ಕಾಲದ ಸಂಪೂರ್ಣ ಅಭಿವೃದ್ಧಿಗೆ ಕಾರಣವಾಗಿತ್ತು. ಈ ಮಾಯಾ ಪ್ರಭಾವವು ಹುಂಡುರಾಸ್,ಗ್ವಾಟೆಮಾಲಾ,ಉತ್ತರದ Elಸಲ್ವೆಡಾರ್ ಮತ್ತು ದೂರದ ಕೇಂದ್ರ ಮೆಕ್ಸಿಕೊಗಳಿಗೂ ಮತ್ತು ಮಾಯಾ ಪ್ರದೇಶದಿಂದ ಸುಮಾರು 1000 ಕಿ.ಮೀಗಳಷ್ಟು(625ಮೈಲುಗಳು) ದೂರದ ಭಾಗಗಳಿಗೂ ಇತ್ತೆಂದು ಗುರುತಿಸಲಾಗಿದೆ. ಮಾಯಾ ಕಲೆ ಮತ್ತು ವಾಸ್ತುಕಲೆಯಲ್ಲಿ ಹಲವು ಹೊರಭಾಗದ ಪ್ರಭಾವವೂ ಕಾಣುತಿತ್ತು.ಇದು ಹೊರಭಾಗದ ಆಕ್ರಮಣಶೀಲತೆಯಂದಲ್ಲ ಆದರೆ ವ್ಯಾಪಾರ ಮತ್ತು ಸಾಂಸ್ಕೃತಿಕ ವಿನಿಮಯವೇ ಇದಕ್ಕೆ ಕಾರಣವಾಗಿದೆ.

ಈ ಕ್ಲಾಸಿಕ್ ಯುಗದ ಮುಕ್ತಾಯದ ನಂತರ ಮಾಯಾ ಜನರು ಕಣ್ಮರೆಯಾಗಲಿಲ್ಲ.ಅಥವಾ ಸ್ಪ್ಯಾನಿಶ್ ಆಕ್ರಮಣಕಾರ ರ ಮತ್ತು ಅಮೆರಿಕಾ ಸ್ಪ್ಯಾನಿಶ್ ರ ವಸಾಹತೀಕರಣದಿಂದ ಅವರು ಕಾಣದಾಗಲಿಲ್ಲ. ಇಂದು ಮಾಯಾ ಮತ್ತವರ ಸಂತತಿಯು ಮಾಯಾ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿದೆ.ಇದು ಉನ್ನತ ಮಟ್ಟದ ಸಾಂಪ್ರದಾಯಿಕತೆಗಳು ಮತ್ತು ನಂಬಿಕೆಗಳಿಗೆ ಮೂಲವಾಗಿದೆ.ಪೂರ್ವ ಕೊಲಂಬಿಯನ್ ಮತ್ತು ಸ್ಪ್ಯಾನಿಶ್ ಆಕ್ರಮಣದ ವಿಜಯದ ವಿಚಾರಗಳು ಮತ್ತು ಸಂಸ್ಕೃತಿಗಳನ್ನೊಳಗೊಂಡಿದೆ. ಹಲವು ಮಾಯನ್ ಭಾಷೆಗಳನ್ನು ಇಂದೂ ಪ್ರಾಥಮಿಕ ಹಂತದಲ್ಲಿ ಬಳಸಲಾಗುತ್ತದೆ.ರಾಬಿನಾಲ್ ಆಚಿ ಎಂಬ ನಾಟಕವು ಆಚಿ ಭಾಷೆಯಲ್ಲಿ ರಚಿತವಾಗಿದೆ.ಇದನ್ನೂ ಇಂದು ಮಾನವೀಯತೆಯ ಮೌಖಿಕ ಮತ್ತು ಅಮೂರ್ತ ಸಂಪ್ರದಾಯಿಕ ಪಿತ್ರಾರ್ಜಿತ ಮೇರು ಕೃತಿಯ ಅತ್ಯುತ್ತಮ ಕೊಡುಗೆ ಎಂದು UNESCO ತನ್ನ 2005 ರ ವರದಿಯಲ್ಲಿ ತಿಳಿಸಿದೆ.

ಭೌಗೋಳಿಕ ವಿಸ್ತರಣೆ[ಬದಲಾಯಿಸಿ]

ಕ್ಲಾಸಿಕ್ ಮತ್ತು ಕ್ಲಾಸಿಕ್ ಯುಗದ ನಂತರ ಅವಧಿಯ ಪ್ರಮುಖ ಮಾಯಾ ನಗರಗಳು.ಆಂತರಿಕ ಗಡಿ (ಕೆಂಪು) ಮಾಯಾ ನಾಗರಿಕತೆಯ ಮಿತಿಗಳು; ಬಾಹ್ಯ ಗಡಿ(ಕಪ್ಪು) ಇನ್ನಿತರ ಮೆಸೊ-ಅಮೆರಿಕನ್ ಸಂಸ್ಕೃತಿಗಳ ಇತಿಮಿತಿಗಳು.

ಮಾಯಾ ನಾಗರಿಕತೆಯು ದಕ್ಷಿಣದ ಮೆಕ್ಸಿಕೊದ ರಾಜ್ಯಗಳಾದ ಚಿಯಾಪಾಸ್,ತಬಾಸ್ಕೊ ಮತ್ತು ಯುಕಾಟಾನ್ ದ್ವೀಪದ ರಾಜ್ಯಗಳಾದ ಕ್ವಿಂಟಾನಾ ರೂ,ಕಾಂಪಾಚೆ ಮತ್ತು ಯುಕಾಟಾನ್ ವರೆಗೂ ಹರಡಿತ್ತು. ಮಾಯಾ ಪ್ರದೇಶ ಕೂಡಾ ಉತ್ತರದ ಕೇಂದ್ರ ಅಮೆರಿಕಾದ ಪ್ರದೇಶಗಳಿಗೆ,ಅಂದರೆ ಇಂದಿನ ದೇಶಗಳಾದ ಗ್ವಾಟೆಮಾಲಾ,ಬೆಲಿಜೆ ಉತ್ತರದ El ಸಲ್ವೆಡಾರ್ ಮತ್ತು ಪಶ್ಚಿಮದ ಹುಂಡುರಾಸ್ ಪ್ರದೇಶಗಳಲ್ಲಿ ಕೂಡಾ ಪ್ರಸರಿಸಿತ್ತು.

ಮಾಯಾ ಪ್ರಾದೇಶಿಕತೆಯನ್ನು ಸಾಮಾನ್ಯವಾಗಿ ಮೂರು ಸರ್ವೆ ಸಾಧಾರಣ ವಿಭಾಗಗಳಲ್ಲಿ ವಿಂಗಡಿಸಲಾಗಿದೆ:ದಕ್ಷಿಣದ ಮಾಯಾ ಎತ್ತರ ಪ್ರದೇಶಗಳು,ಕೇಂದ್ರದ ಇಳಿಜಾರು ಪ್ರದೇಶಗಳು ಮತ್ತು ಉತ್ತರದ ಇಳಿಜಾರು ಪ್ರದೇಶಗಳು. ದಕ್ಷಿಣದ ಮಾಯಾ ಉನ್ನತ ಎತ್ತರ ಪ್ರದೇಶಗಳನ್ನು ನಾವು ಗ್ವಾಟೆಮಾಲಾ ಮತ್ತು ಚಿಯಾಪಾಸ್ ಹೈಲ್ಯಾಂಡ್ಸ್ ಗಳಲ್ಲಿ ಕಾಣಬಹುದಾಗಿದೆ. ದಕ್ಷಿಣದ ಇಳಿಜಾರಿನ ತಗ್ಗು ಪ್ರದೇಶಗಳು ಉತ್ತರದ ಎತ್ತರದ ಪ್ರದೇಶಗಳಿಗೆ ಹೊಂದಿಕೊಂಡಂತಿವೆ.ಇದು ಮೆಕ್ಸಿಕನ್ ನ ರಾಜ್ಯಗಳಾದ ಕಂಪಾಚೆ ಮತ್ತು ಕ್ವಿಂಟಾನಾ ರೂ ಮತ್ತು ಉತ್ತರದ ಗ್ವಾಟೆಮಾಲಾ,ಬೆಲಿಜೆ ಮತ್ತು El ಸಲ್ವಾಡರ್ ಒಳಗೊಂಡಿವೆ. ಉತ್ತರದ ತಗ್ಗು ಪ್ರದೇಶಗಳು ಇನ್ನುಳಿದ ಯುಕಾಟಾನ್ ಪೆನಿನ್ಸುಲಾದ ಪೂಕ್ಕ್ ಪರ್ವತಗಳನ್ನೊಳಗೊಂಡಿವೆ.[೧]

ಇತಿಹಾಸ[ಬದಲಾಯಿಸಿ]

ಕ್ಲಾಸಿಕ್ ಯುಗದ ಪೂರ್ವ ಕಾಲ[ಬದಲಾಯಿಸಿ]

ಮಾಯಾ ಪ್ರಾದೇಶಿಕತೆಯು ಆರಂಭಿಕವಾಗಿ 10 ನೆಯ ಶತಮಾನದ BC ಯಲ್ಲಿ ಪ್ರವರ್ಧಮಾನಕ್ಕೆ ಬಂತು.ಇತ್ತೀಚಿನ ಬೆಲಿಜೆನಲ್ಲಿನ ಸೆಯೆಲ್ಲೊದಲ್ಲಿ ದೊರೆತ ವಸ್ತುಗಳನ್ನು ಗಮನಿಸಿದರೆ ಇವು 2600 BC ಗೆ ಸಂಬಂಧಿಸಿದ್ದವು ಎಂದು ಹೇಳಲಾಗಿದೆ.[೨] [೩] ಇಂತಹ ಪ್ರವೃತ್ತಿಯನ್ನು ಸ್ಮಾರಕ ರಚನೆಗಳಲ್ಲಿ ಕಾಣಬಹುದು. ಮಾಯಾ (ದಿನದರ್ಶಿಕೆ)ಕ್ಯಾಲಂಡರ್ ಆದ ಆಗಿನ ಮೆಸೊಅಮೆರಿಕನ್ ಲಾಂಗ್ ಕೌಂಟ್ ಕ್ಯಾಲಂಡರ್ ಸುಮಾರು 11 ಆಗಸ್ಟ್ 3114 BC ಯಿಂದ ಆರಂಭಗೊಂಡಿದೆ.ಆದರೆ "ಒಪ್ಪಿತ ಇತಿಹಾಸ"ದ ಪ್ರಕಾರ ಮೊದಲ "ಮಾಯಾ" ನೆಲೆವಾಸಗಳನ್ನು ಪ್ಯಾಸಿಫಿಕ್ ಕರಾವಳಿಯ ಸೊಕೊನುಸ್ಕೊಪ್ರದೇಶದಲ್ಲಿ 1800 BCನಲ್ಲಿ ಕಾಣಬಹುದು. ಈ ಕಾಲವನ್ನು ಆರಂಭಿಕ ಪೂರ್ವ ಕ್ಲಾಸಿಕ್ ಯುಗ [೪]ಎನ್ನಲಾಗುತ್ತದೆ.ಇದರಲ್ಲಿ ಸಮುದಾಯಗಳ ಶಾಶ್ವತ ನೆಲೆವಾಸ ಮತ್ತು ಗಡಿಗೆ-ಮಡಿಕೆ ಮತ್ತು ಜೇಡಿ ಮಣ್ಣಿನಿಂದ ನಿರ್ಮಿತ ಸುಟ್ಟ ಮಡಿಕೆಗಳ ಹಾಗು [೪]ಮಣ್ಣಿನ ಸಣ್ಣ ಗೊಂಬೆಗಳ ತಯಾರಿಕೆ ಇದರ ಲಕ್ಷಣವಾಗಿತ್ತು.[೫]

ದಕ್ಷಿಣದ ಮಾಯಾ ತಗ್ಗು ಪ್ರದೇಶಗಳೆಂದರೆ ನಕುಬೆ, El ಮಿರಡಾರ್, ಕಿವಾಲ್, ಮತ್ತು ಸ್ಯಾನ್ ಬಾರ್ಟೊಲೊ ಮಹತ್ವದ್ದಾಗಿವೆ. ಗ್ವಾಟೆಮಾಲಾದ ಎತ್ತರ ಪ್ರದೇಶ ಕಮಿನಾಲ್ ಜುವು ಸುಮಾರು 800 BC ನಲ್ಲಿ ಕಂಡು ಬಂದಿದೆ.ಇದು ಹಲವು ಶತಮಾನಗಳ ಕಾಲ ಅಲ್ಲಿನ ಖನಿಜ ಮತ್ತು ಬೆಣಚು ಕಲ್ಲುಗಳಲ್ಲಿ ತನ್ನ ಗುರುತುಗಳನ್ನೊಳಗೊಂಡಿದೆ.ಇದು ಪ್ಯಾಟನ್ ಮತ್ತು ಪ್ಯಾಸಿಫಿಕ್ ತಗ್ಗು ಪ್ರದೇಶಗಳನ್ನೊಳಗೊಂಡಿದೆ. ಆರಂಭಿಕ ಮಹತ್ವದ ಜಾಗೆಗಳೆಂದರೆ ಇಜಾಪಾ,ಟಕಾಲಿಕ್ ಅಬಾಜ್ ಮತ್ತು ಚಿಕೊಲಾಗಳು ಕಾಕಾವೊದ ಪ್ರಮುಖ ಮೂಲಗಳು 600 BC ಯಲ್ಲಿ ಕಂಡು ಬಂದಿವೆ. ಮಧ್ಯ ಮತ್ತು ಪೂರ್ವದ ಕ್ಲಾಸಿಕ್ ಯುಗದಲ್ಲಿ ಮಧ್ಯಮ-ಗಾತ್ರದ ಮಾಯಾ ಸಮುದಾಯಗಳು ಉತ್ತರದ ಮಾಯಾ ತಗ್ಗುಪ್ರದೇಶಗಳಲ್ಲಿ ಬೆಳೆಯಲಾರಂಭಿಸಿದವು.ಇವುಗಳ ಗಾತ್ರ,ಅಳತೆ ಮತ್ತು ದಕ್ಷಿಣದ ತಗ್ಗುಪ್ರದೇಶಗಳ ಯಾವುದೇ ಪ್ರಭಾವಕ್ಕೊಳಗಾಗಿರಲಿಲ್ಲ. ಎರಡು ಪ್ರಮುಖ ಪೂರ್ವ ಕ್ಲಾಸಿಕ್ ನ ಉತ್ತರ ಭಾಗಗಳೆಂದರೆ ಕೊಮ್ಚೆನ್ ಮತ್ತು ಜಿಬಿಲಿಕಾತುನ್ಆಗಿದ್ದವು. ಮಾಯಾ ಯುಗದ ಮೊದಲ ಚಿತ್ರ ಲಿಪಿಗಳು ಈ ಯುಗದ ಮುಂಚೆಯೇ ಕಾಣಿಸಿವೆ(c. 250 BC).[೬]

ಆರಂಭಿಕದಲ್ಲಿನ ಭೌತಿಕ ಮತ್ತು ಸಾಂಸ್ಕೃತಿಕ ಪ್ರಸರಣದ ಬಗ್ಗೆ ಕೆಲವು ಗಡಿಗಳನ್ನು ನಿಖರವಾಗಿ ಗುರುತಿಸಲಾಗದು.ಪೂರ್ವದ ಮಾಯಾ ಮತ್ತು ನೆರೆಯ ಪೂರ್ವ ಕ್ಲಾಸಿಕ್ ಯುಗದ ನಾಗರಿಕತೆ ಬಗೆಗೆ ಖಚಿತವಾಗಿ ತಿಳಿಯಲಾಗದು,ಉದಾಹರಣೆಗಾಗಿ ತಬಾಸ್ಕೊ ತಗ್ಗು ಪ್ರದೇಶದ ಸಂಸ್ಕೃತಿ ಒಲ್ಮೆಕ್ ಮತ್ತು ಅನುಕ್ರಮವಾಗಿ ಮಿಕ್ಸೆ-ಜೊಕ್ಯು ಮತ್ತು ಚಿಯಾಪಸ್ ಮತ್ತು ದಕ್ಷಿಣದ ಒಕ್ಸಾಕಾ ಗಳಲ್ಲಿನ ಜೊಪೊಟ್ಟೆಕ್-ಭಾಷಿಕರನ್ನು ಕೂಡಲೇ ಗುರುತಿಸಲಾಗದು. ಈ ಅತಿ ವ್ಯಾಪಕತೆಯ ವಲಯದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಹಲವು ಶಾಸನ ಬರೆಹ ಮತ್ತು ಕಟ್ಟಡಗಳನ್ನು ಕಾಣಬಹುದಾಗಿದೆ.ಪುರಾವೆಗಳನ್ನು ಗಮನಿಸಿದರೆ ಒಂದೊಕ್ಕೊಂದು ಮಾಯಾ ಸಂಸ್ಕೃತಿಯ ಪ್ರಭಾವಕ್ಕೊಳಗಾಗಿದ್ದು ತಿಳಿಯುತ್ತದೆ.[೭] ಗ್ವಾಟೆಮಾಲಾದ ಪ್ಯಾಸಿಫಿಕ್ ಇಳಿಜಾರು ಪ್ರದೇಶಗಳಾದ ತಕಲಿಕ್ ಅಬಾಜ್ ನಲ್ಲಿ ಸದ್ಯ ಆಗಿನ ಮಾಯಾ ಯುಗದ ಲಕ್ಷಣಗಳು ಪತ್ತೆಯಾಗಿವೆ.

ವರ್ಗೀಕರಣ[ಬದಲಾಯಿಸಿ]

ಪಲೆಂಕ್ವುನ ಪಾಳುಬಿದ್ದ ಅವಶೇಷಗಳು

ಕ್ಲಾಸಿಕ್ ಪಂಥೀಯ ಯುಗ (c. 250–900 AD) ಈ ಕಾಲವು ದೊಡ್ಡ-ಪ್ರಮಾಣದ ಕಟ್ಟಡಗಳ ನಿರ್ಮಾಣ ಮತ್ತು ನಗರೀಕರಣ ಕಂಡ ಕಾಲವೆನಿಸಿದೆ.ಆಗಿನ ಕಾಲದ ಚಿತ್ರ ಮತ್ತು ಶಾಸನ ಬರೆಹಗಳನ್ನು ಗಮನಿಸಿದರೆ ಪ್ರತಿಭೆ ಮತ್ತು ಕಲಾವಂತಿಕೆಯ ಅಭಿವೃದ್ಧಿ ಗಮನಿಸಬಹುದಾಗಿದೆ.ಅದರಲ್ಲೂ ವಿಶೇಷವಾಗಿ ದಕ್ಷಿಣದ ತಗ್ಗು ಪ್ರದೇಶಗಳಲ್ಲಿ ಇವು ದೊರೆಯುತ್ತವೆ.[೮] ಅವುಗಳಲ್ಲಿ ಕೃಷಿಯೂ ತೀವ್ರ ಗತಿಯಲ್ಲಿ ಬೆಳೆದು ನಗರ-ಕೇಂದ್ರೀಕೃತ ಸಾಮ್ರಾಜ್ಯದೊಂದಿಗೆ ನಗರ-ರಾಜ್ಯಗಳ ನಿರ್ಮಾಣವಾಯಿತು. ಇದರಲ್ಲಿ ಹೆಚ್ಚು ಜನನಿತವಾದ ನಗರಗಳಾದ ತಿಕಾಲ್, ಪಲೆಂಕ್ಯು, ಕೊಪಾನ್ ಮತ್ತು ಕಲಕ್ಮುಲ್,ಆದರೆ ಕಡಿಮೆ ಜನಪ್ರಿಯವಾದವುಗಳೆಂದರೆ ಡಾಸ್ ಪಿಲಾಸ್, ಉಕ್ಸಾಟುನ್, ಅಲ್ಟುನ್ ಹಾ, ಮತ್ತು ಬೊನಂಪಾಕ್, ಅಲ್ಲದೇ ಇನ್ನಿತರವೂ ಇವುಗಳಲ್ಲಿ ಸೇರಿವೆ. ಆರಂಭಿಕ ಕ್ಲಾಸಿಕ್ ನೆಲೆವಾಸಗಳ ಬಗ್ಗೆ ದಕ್ಷಿಣ ಭಾಗದಲ್ಲಿನ ನೆಲೆವಾಸಗಳ ಬಗ್ಗೆ ಗೊತ್ತಿರುವಂತೆ ಉತ್ತರದ ಮಾಯಾ ಇಳಿಜಾರು ಪ್ರದೇಶಗಳ ಜನವಸತಿ ಬಗ್ಗೆ ಅಷ್ಟಾಗು ತಿಳಿದಿಲ್ಲ.ಉದಾಹರಣೆಗೆ ಆಕ್ಸಿಂಟೊಕ್,ಚುಂಚುಮಿಲ್ ಮತ್ತು ಆರಂಭಿಕ ಉಕ್ಸಮಲ್ ನ ಸ್ವಾಧೀನತೆ ಬಗೆಗೆ ತಿಳಿದಿಲ್ಲ.

ಅತ್ಯಂತ ಪ್ರಮುಖವಾದುವುಗಳೆಂದರೆ ತಮ್ಮ ಧಾರ್ಮಿಕ ಕೇಂದ್ರಗಳಲ್ಲಿ ಮೆಟ್ಟಲಿನ ಪಿರಾಮಿಡ್ ಗಳು ಮತ್ತು ಅದರೊಂದಿಗೆ ಆಳರಸರ ಅರಮನೆಗಳು ಅಲ್ಲಿನ ಪ್ರಮುಖ ರಚನೆಗಳಾಗಿದ್ದವು. ಮಾಯಾ ಪ್ರದೇಶದಲ್ಲಿಯೇ ಅತ್ಯಂತ ವಿಶಾಲವಾದ ಅರಮನೆಯು ಕಾಂಕ್ಯೆನ್ ನಲ್ಲಿದೆ.ಆದರೆ ಇಲ್ಲಿ ಇರಬೇಕಾಗಿದ್ದ ಪಿರಾಮಿಡ್ ಗಳಿಲ್ಲ. ಇನ್ನುಳಿದ ಪುರಾತತ್ವ ಅವಶೇಷಗಳೆಂದರೆ ಕಟೆದ ಶಿಲೆಗಳ ನಿರ್ಮತಿಗಳು ಅವುಗಳನ್ನು ಸ್ಟೆಲೆಯ್ (ಮಾಯಾ ಕಾಲದಲ್ಲಿ ಅವುಗಳನ್ನು ಟೆಟುನ್ ಎನ್ನುತ್ತಾರೆ,ಅಥವಾ "ಮರದ-ಶಿಲೆಗಳು")ಇವುಗಳಲ್ಲಿ ಆಗಿನ ಆಳರಸರ ಕುರಿತ ಕೆತ್ತನೆ ಬರೆಹಗಳನ್ನು ಕಾಣಬಹುದು.ಅವರ ಉದಾರತೆ,ಸೈನ್ಯದ ವಿಜಯಗಳು ಮತ್ತು ಇನ್ನಿತರ ಸಾಧನೆಗಳ ವರ್ಣನೆಯಿದೆ.[೯]

ಈ ಮಾಯಾ ನಾಗರಿಕತೆಯು ಮೆಸೊಅಮೆರಿಕನ್ ಸಂಸ್ಕೃತಿಯ ಹಲವು ಕೊಂಡಿಗಳೊಡನೆ ಸಂಪರ್ಕ ಸಾಧಿಸುವುದರೊಂದಿಗೆ ದೀರ್ಘ ಕಾಲದ ವ್ಯಾಪಾರವನ್ನೂ ಮಾಡುವಲ್ಲಿ ತನ್ನ ಪಾತ್ರ ತೋರಿಸಿತ್ತು.ಅದರಲ್ಲಿ ಬಹುಮುಖ್ಯವಾಗಿ ಟೆಟೊಹಾಕಾನ್,ಜೆಪೊಟೆಕ್,ಮತ್ತು ಕೇಂದ್ರ ಮತ್ತು ಮಧ್ಯ ಮೆಕ್ಸಿಕೊದ ಹಲವು ಗುಂಪುಗಳೊಂದಿಗೆ ವಹಿವಾಟು ಹೊಂದಿತ್ತು.ಅದೇ ತೆರನಾದ ಮೆಸೊಅಮೆರಿಕನ್ ಸಂಸ್ಕೃತಿಯರಹಿತರೊಂದಿಗೂ ಅದು ಸಂಪರ್ಕದ ಕೊಂಡಿಯಾಗಿತ್ತು.ಉದಾಹರಣೆಗೆ ಕೆರೆಬಿಯನ್ ನಲ್ಲಿರುವ ಟೈನೊಸ್ ಕೂಡಾ ಒಂದಾಗಿದೆ. ಪನಾಮದಿಂದ ಪುರಾತತ್ವ ಇಲಾಖೆಯವರು ಚಿಚೆನ್ ಇಟ್ಜಾದಲ್ಲಿನ ಪವಿತ್ರ ಕೊಳದಲ್ಲಿ ಚಿನ್ನವನ್ನು ಸಹ ಪತ್ತೆಹಚ್ಚಿದ್ದಾರೆ.[೧೦] ಮಹತ್ವದ ವ್ಯಾಪಾರಿ ವಸ್ತುಗಳೆಂದರೆ ಕೊಕೊಬೀಜ, ಲವಣ, ಸಮುದ್ರದ ಕೋಶಗಳು, ರತ್ನವರ್ಣ ಮತ್ತು ಕಪ್ಪು ಖನಿಜಇತ್ಯಾದಿಗಳನ್ನೊಳಗೊಂಡಿತ್ತು.

ಮಾಯಾದ ಪತನ[ಬದಲಾಯಿಸಿ]

ದಕ್ಷಿಣ ತಗ್ಗುಪ್ರದೇಶಗಳಲ್ಲಿ ಮಾಯಾ ಕೇಂದ್ರಗಳು 8ನೆಯ ಮತ್ತು 9ನೆಯ ಶತಮಾನದಲ್ಲಿ ಕುಸಿತ ಕಂಡವು.ಅದಲ್ಲದೇ ಆ ಕೂಡಲೇ ಅವು ರದ್ದಾಗಿಯೂ ಹೋದವು. ಈ ಪತನದೊಂದಿಗೆ ಸ್ಮಾರಕಗಳ ಕೆತ್ತನೆ ಬರೆಹಗಳು ಮತ್ತು ದೊಡ್ಡ ಪ್ರಮಾಣದ ವಾಸ್ತುಶೈಲಿಗಳ ನಿರ್ಮಾಣ ನಿಂತುಹೋಯಿತು.[೧೧] ಈ ಪತನ ವಿವರಿಸಲು ಸಾರ್ವತ್ರಿಕವಾಗಿ ಒಪ್ಪಿತ ಯಾವುದೇ ಸೈದ್ದಾಂತಿಕ ಕಾರಣ ಇಲ್ಲ.

ಮಾಯಾದ ಈ ಪತನಕ್ಕೆ ಪರಿಸರ ರಹಿತ ಕಾರಣಗಳಿವೆ.ಅವುಗಳನ್ನು ಏಳು ಉಪಪಂಗಡಗಳಾಗಿ ವಿಭಾಗಿಸಲಾಗಿದೆ.ಉದಾಹರಣೆಗೆ ವಿಪರೀತ ಜನಸಂಖ್ಯೆ ಹೆಚ್ಚಳ,ವಿದೇಶೀಯರ ಆಕ್ರಮಣ,ರೈತರ ಬಂಡಾಯ ಮತ್ತು ಆಯಕಟ್ಟಿನ ವ್ಯಾಪಾರಿ ಮಾರ್ಗಗಳ ಪತನ ಇವು ಪ್ರಾಕೃತಿಕ ಕಾರಣದಿಂದಾಚೆಗೆ ಪರಿಣಾಮವನ್ನುಂಟು ಮಾಡುತ್ತವೆ. ಪರಿಸರೀಯ ಭೀತಿಗಳೆಂದರೆ ವಾತಾವರಣ ವಿನಾಶ,ಸಾಂಕ್ರಾಮಿಕ ರೋಗ ಮತ್ತು ವಾಯುಗುಣ ಬದಲಾವಣೆ ಇತ್ಯಾದಿ. ಮಾಯಾದ ಜನಸಂಖ್ಯೆಯು ಪರಿಸರಕ್ಕೆ ಭಾರವಾದ ರೀತಿಯಲ್ಲಿ ಸಾಮರ್ಥ್ಯ ಮೀರಿದ ಹೆಚ್ಚಳ,ಕೃಷಿ ಸಾಮರ್ಥ್ಯ ಮತ್ತು ಅರಣ್ಯದಲ್ಲಿ ವಿಪರೀತವಾದ ಬೇಟೆಯಾಡುವಿಕೆ ಇದಕ್ಕೆ ಕಾರಣಗಳಾಗಿದ್ದವು.[೧೨] ಆದರೆ ಇತ್ತೀಚೆಗೆ ಕೆಲವು ವಿದ್ವಾಂಸರು ಸುಮಾರು 200 ವರ್ಷಗಳ ಸತತ ಬರಗಾಲ ಈ ಮಾಯಾ ಪತನಕ್ಕೆ ಕಾರಣವೆನ್ನುವುದನ್ನು ಪತ್ತೆಹಚ್ಚಿದ್ದಾರೆ.[೧೩] ಸರೋವರಗಳ ಜಲಾನಯನಗಳ ಅಧ್ಯಯನ ಮಾಡುತ್ತಿದ್ದ ಭೌತಶಾಸ್ತ್ರದ [೧೪]ವಿಜ್ಞಾನಿಗಳಿಗೆ ಈ ಸತ್ಯ ಗೊತ್ತಾಗಿದೆ.ಪುರಾತನ ಸಾಕ್ಷಿಗಳಿಲ್ಲದೇ ಇನ್ನಿತರ ಪುರಾವೆಗಳನ್ನು ಬಳಸದೇ ಅಥವಾ ಪುರಾತತ್ವ ಇಲಾಖೆಯ ವಿವರ ಬಳಸದೇ ಈ ಅಧ್ಯಯನ ಸಂಗತಿಯಿಂದ ಬಯಲಾಗಿದೆ.

ಕ್ಲಾಸಿಕ್ ಯುಗದ ನಂತರದ ಅವಧಿ[ಬದಲಾಯಿಸಿ]

ಈ ಕ್ಲಾಸಿಕ್ ಯುಗದ ನಂತರದ ಅವಧಿಯಲ್ಲಿ (10ನೆಯ ಶತಮಾನದಿಂದ ಆರಂಭಿಕ 16ನೆಯ ಶತಮಾನದವರೆಗೆ)ಉತ್ತರ ಭಾಗದಲ್ಲಿನ ಕೆಲವು ಕೇಂದ್ರಗಳ ಪ್ರಗತಿ ಕೆಲಮಟ್ಟಿಗೆ ಉಳಿದುಕೊಂಡಿತ್ತು.ಬಾಹ್ಯಿಕವಾದ ಪ್ರಭಾವಗಳಿಗೆ ಒಳಗಾಗಿ ಅದು ವೈವಿಧ್ಯತೆ ಪಡೆದಿತ್ತು. ಉತ್ತರದ ತಗ್ಗುಪ್ರದೇಶಗಳಲ್ಲಿನ ಮಾಯಾ ನಗರಗಳು ಯುಕಾಟಾನ್ ಭಾಗದಲ್ಲಿ ಅಧಿಕ ಅಭಿವೃದ್ಧಿ ಕಂಡವು.ಈ ಯುಗದಲ್ಲಿ ಚಿಚೆನ್ ಇಟ್ಜಾ,ಉಕ್ಸ್ ಮಾಲ್ ಎಡ್ಜ್ನಾ ಮತ್ತು ಕೊಬಾಗಳು ಪ್ರಮುಖವಾಗಿದ್ದವು. ಚಿಚೆನ್ ಮತ್ತು ಉಕ್ಸಮಾಲ್ ನಲ್ಲಿನ ರಾಜಪ್ರಭುತ್ವ ಆಡಳಿತದಲ್ಲಿ ಇಳಿಮುಖತೆ ಕಂಡಾಗ ಎಲ್ಲಾ ಯುಕಾಟಾನ್ ನನ್ನು ಮಾಯಾಪಾನ್ 1450 ರಲ್ಲಿ ನಡೆದ ಕ್ರಾಂತಿ ತನಕ ಆಳ್ವಿಕೆ ನಡೆಸಿತು. (ಈ ನಗರದ ಹೆಸರು "ಮಾಯಾ"ಎಂಬ ಶಬ್ದದ ಮೂಲವಾಗಿದೆ.ಯುಕೆಟೆಕ್ ನಲ್ಲಿ ಅತಿ ಹೆಚ್ಚು ನಿರ್ಬಂಧಿತ ಪದವಾಗಿತ್ತು.ಆಗ ಸ್ಪ್ಯಾನಿಶ್ ವಸಾಹತುಶಾಹಿಯು ಇಂತಹ ಅರ್ಥದೊಂದಿಗೆ ಅಂದರೆ 19ನೆಯ ಮತ್ತು 20 ನೆಯ ಶತಮಾನದಲ್ಲಿತ್ತು.) ಆಗ ಈ ಪ್ರದೇಶವು ನಗರ-ರಾಜ್ಯಗಳೆಂಬ ಗೊಂದಲಕ್ಕೀಡಾಗಿ ಸ್ಪರ್ಧೆಗಿಳಿಯಿತು.ಯುಕೆಟಾನ್ ಸ್ಪ್ಯಾನಿಶ್ ನಿಂದ ಗೆಲ್ಲುವ ವರೆಗೆ ಇದು ಗೊಂದಲ ಮುಂದುವರೆದಿತ್ತು.

ಇಲ್ಲಿ ಮಧ್ಯೆ ಪೆಟೆನ್ ಸಮೂಹಗಳು ಇಟ್ಜಾ ಮಾಯಾ ಕೊವೊಜ್ ಮತ್ತು ಯಲೇನ್ ಗುಂಪುಗಳು "ಈ ಕ್ಲಾಸಿಕ್ ಅವಧಿ ಪತನ"ಯನ್ನು ಕೆಲಮಟ್ಟಿಗೆ ಸಹಿಸಿಕೊಂಡವು.ಹೀಗೆ 1250 ರಷ್ಟೊತ್ತಿಗೆ ನಗರ-ರಾಜ್ಯಗಳ ಸ್ಪರ್ಧೆಯನ್ನು ಅಸ್ತಿತ್ವಕ್ಕೆ ತಂದವು. ಇಟ್ಜಾವು ತನ್ನ ರಾಜಧಾನಿಯನ್ನು ತಾಯಸಲ್ (ಇದನ್ನು ನೊಹ್ ಪೆಟೆನ್ ಎನ್ನುತ್ತಾರೆ)ಎಂದು ಗುರುತಿಸಿತ್ತು.ಪುರಾತತ್ವ ಇಲಾಖೆ ಪ್ರಕಾರ ಈ ಸ್ಥಳವನ್ನು ಆಧುನಿಕ ಫ್ಲೊರ್ಸ್ ಗ್ವಾಜ್ಟೆಮಾಲಾದ ನಗರವೆನ್ನಲಾಗಿದ್ದು ಇದು ಲೇಕ್ ಪೆಟೆ ಇಟ್ಜಾ ಸರೋವರದ ದಂಡೆ ಮೇಲೆ ಇದೆ. ಇದು ಪೆಟೆನ್ ಸರೋವರದ ಪ್ರದೇಶದಿಂದ ಲೇಕ್ ಕ್ವೆಕ್ಸಿಲ್ ಸಮುದಾಯದ ವಾಸಕ್ಕೆ ನೆಲೆಯಾಗಿತ್ತು. ಈ ಕೊ'ವೊಜ್ ಅವರು ತಮ್ಮ ರಾಜಧಾನಿಯನ್ನು ಜಾಕ್ಪೈಟೆನ್ನಲ್ಲಿ ಸ್ಥಾಪಿಸಿದ್ದರು. ಕ್ಲಾಸಿಕ್ ಯುಗದ ನಂತರ ದಕ್ಷಿಣ ಉನ್ನತ ಶ್ರೇಣಿ ಪ್ರದೇಶಗಳಲ್ಲಿನ ಕೆಲವು ಮಾಯಾ ರಾಜ್ಯಗಳು ಬದುಕಿದ್ದವು. ಮಾಯಾ ದೇಶಗಳಲ್ಲೊಂದಾದ ಕೆ'ಇಚೆ ಕಿಂಗ್ಡಮ್ ಆಫ್ ಕ್ಯು ಉಮರ್ಕಜ್ ಅತ್ಯತ್ತುಮ ಮಾಯಾ ಕಲೆಗಳಿಗೆ ಪ್ರಸಿದ್ದವಾಗಿದೆ.ಮಾಯಾ ಕಾಲದ ಇತಿಹಾಸ ಚರಿತೆ ಮತ್ತು ಪೌರಾಣಿಕತೆ ಅಲ್ಲದೇ ಪೊಪೊಲ್ ವುಹ್ ಒಳಗೊಂಡಿದೆ. ಇನ್ನುಳಿದ ಉನ್ನತ ಶ್ರೇಣಿಯ ಎತ್ತರ ಪ್ರದೇಶಗಳೆಂದರೆ ಮಾಮ್ ಇದು ಹ್ಯುಟಾನಂಗೊ ಮೂಲದಲ್ಲಿದೆ, ಕಾಕ್ಚಿಕೆಲ್ಗಳು ಇದು ಇಕ್ಸಿಮಿಚೆನಲ್ಲಿ ಮೂಲವಾಗಿದೆ, ಚಾಜೊಮಾ ಇದು ಮಿಕ್ಸಿಕೊ ಎಜೊ[೧೫] ನಲ್ಲಿ ನೆಲೆಯಾಗಿದೆ,ಅಲ್ಲದೇ ಚುಜ್, ಸ್ಯಾನ್ ಮಾಟೆಯೊ ಇಕ್ಸೆಟಾನ್ಮೂಲದ್ದಾಗಿದೆ.

ವಸಾಹತುಶಾಹಿ ಅವಧಿ[ಬದಲಾಯಿಸಿ]

ಸ್ಪ್ಯಾನಿಶ್ ರು ಹಲವು ದಾಳಿಗಳನ್ನು ಮಾಡಿ ಮಾಯಾದ ಹುಟ್ಟಗಡಿಸಲು ಪ್ರಯತ್ನಿಸಿದರು.ಮಾಯಾ ಪ್ರದೇಶದವರು ಸ್ಪ್ಯಾನಿಶ್ ಅರಸರಿಗೆ ನಿಷ್ಠರಾಗಿರಲಿಲ್ಲ.ಆದ್ದರಿಂದ ಸ್ಪ್ಯಾನಿಶ್ ರು ಅಲ್ಲಿ ತಮ್ಮ ವಸಾಹತು ಸ್ಥಾಪನೆಯ ಹುನ್ನಾರ ಮಾಡಿದರು.ಮಾಯಾದಲ್ಲಿನ ಯುಕೆಟಾನ್ ಪೆನುಸಲಾದಲ್ಲಿ ಮತ್ತು ಗ್ವಾಟೆಮಾಲಾದ ಎತ್ತರ ಪ್ರದೇಶಗಳಲ್ಲಿ ತಮ್ಮ ಪ್ರಯತ್ನ ಮುಂದುವರೆಸಿದರು. ಈ ರೀತಿಯ ದಾಳಿಯ ಪ್ರಚಾರಾಂದೋಲನವು "ದಿ ಸ್ಪ್ಯಾನಿಶ್ ಕಾಂಕ್ವೆಸ್ಟ್ ಆಫ್ ಯುಕೆಟಾನ್"ಎಂದು ಕರೆಯಲ್ಪಟ್ಟಿತು.ಈ ಯುದ್ದ ಅಭಿಯಾನವು ಹಲವು ವಿಜೇತರಿಗಳಿ ಗೆ ಒಟ್ಟಾರೆ ಇದು ಭಾರತೀಯ ವಲಸೆಗಾರರು ಸ್ಪ್ಯಾನಿಶ್ ಆಕ್ರಮಣಕಾರರು ಮಾಯಾ ಪ್ರದೇಶಕ್ಕೆ ಬರುವ ಮುಂಚೆ ಅಲ್ಲಿ ಇದ್ದರು.

ಇಲ್ಲಿ ಅಜ್ಟೆಕ್ ಮತ್ತು ಇಂಕಾ ಎಂಪೈಯರ್ ಗಳಂತೆ ಅಲ್ಲಿ ಕೇವಲ ಒಂದೇ ಒಂದು ಮಾಯಾ ರಾಜಕೀಯ ಕೇಂದ್ರವಿರಲಿಲ್ಲ.ಒಮ್ಮೆ ಅಧಿಕಾರ ಕಳೆದುಕೊಂಡ ಈ ಮಾಯಾ ವಲಯದಲ್ಲಿ ಸ್ಥಳೀಯ ಜನರು ತಮ್ಮ ಪ್ರ್ಫತಿರೋಧ ತೋರಲಿಲ್ಲ. ಅದರ ಬದಲಾಗಿ ಆಕ್ರಮಣಕಾರಿಗಳು ತಮ್ಮ ವಿಜಯದ ಉತ್ಸಾಹದಲ್ಲಿ ಹಲವು ಸ್ವತಂತ್ರ ಮಾಯಾ ಪಾಳೆಯಗಳನ್ನು ಒಂದೊಂದಾಗಿ ವಶಪಡಿಸುವತ್ತ ತಮ್ಮ ಗಮನ ಕೇಂದ್ರೀಕರಿಸಿದರು.ಈ ಸಂದರ್ಭದಲ್ಲಿ ಸ್ಥಳೀಯ ಜನರು ಸಾಧ್ಯವಿರುವಷ್ಟು ತಮ್ಮ ವಿರೋಧ ವ್ಯಕ್ತಪಡಿಸಿದರು. ಬಹಳಷ್ಟು ಜನ ಆಕ್ರಮಣದಲ್ಲಿ ವಿಜೇತರಾದವರು ಅಲ್ಲಿನ ಬೃಹತ್ ಸಂಪತ್ತಿನಿಂದ ಆಕರ್ಷಿತರಾದವರಾಗಿದ್ದರು.ಬಂಡುಕೋರರ ಈ ದಾಳಿಯ ಸಂದರ್ಭದಲ್ಲಿ ಅಲ್ಲಿನ ಅತ್ಯಮೂಲ್ಯ ಖನಿಜಗಳೆಡೆ ಇವರ ಗಮನ ಹೋಯಿತು.ಉದಾಹರಣೆಗಾಗಿ ಚಿನ್ನ ಅಥವಾ ಬೆಳ್ಳಿ;ಆದರೆ ಮಾಯಾ ಭೂಪ್ರದೇಶಗಳು ಈ ಖನಿಜ ಸಂಪತ್ತುಗಳಲ್ಲಿ ಕಡಿಮೆ ಪ್ರಮಾಣ ಹೊಂದಿದ್ದರೂ ಅವರಿಗೆ ಅಲ್ಲಿ ಲಭ್ಯವಿದ್ದ ನೈಸರ್ಗಿಕ ಸಂಪತ್ತು ಅವರ ದೃಷ್ಟಿಗೆ ಬಿತ್ತು. ಇದೂ ಕೂಡಾ ಸ್ಪ್ಯಾನಿಶ್ ವಿನ್ಯಾಸವನ್ನು ಪ್ರತಿಷ್ಟಾಪಿಸಲು ಅವರಿಗೆ ಸ್ಪೂರ್ತಿಯಾಯಿತು.ಕೇಂದ್ರ ಮೆಕ್ಸಿಕೊ ಅಥವಾ ಪೆರುವಿನಲ್ಲಿನ ಆರಂಭಿಕ ವರದಿಗಳ ಬಗ್ಗೆ ಅವರಲ್ಲಿ ಹೆಚ್ಚು ಆಸಕ್ತಿ ಉಂಟಾಗಿತ್ತು.

ಸ್ಪ್ಯಾನಿಶ್ ಚರ್ಚ್ ಮತ್ತು ಸರ್ಕಾರಿ ಅಧಿಕಾರಿಗಳು ಮಾಯಾ ಪಠ್ಯಗಳನ್ನು ನಾಶ ಮಾಡಿದರಲ್ಲದೇ ಆ ಮೂಲಕ ಮಾಯಾ ಜ್ಞಾನವೂ ಕಣ್ಮರೆಯಾಯಿತು.ಅದೃಷ್ಟಾವಶಾತ್ ಪೂರ್ವ-ಕೊಲಂಬಿಯನ್ ನ ಮೂರು ಪುಸ್ತಕಗಳನ್ನು ಕ್ಲಾಸಿಕ್ ಯುಗದ ನಂತರದವು ಎಂದು ಹೇಳಲಾದ ಇವುಗಳನ್ನು ರಕ್ಷಿಸಲಾಗಿದೆ.[which?] [೧೬] ಮಾಯಾದ ಕೊನೆಯ ರಾಜ್ಯಗಳಾದ ಇಟ್ಜಾದ ತಾಯಸಲ್ ರಾಜ್ಯ ಮತ್ತು ಜಕೆಪ್ಟೆನ್ ನ ನಗರವಾಗಿದ್ದ ಕೊ'ವೊಜ್ ಗಳು ನಿರಂತರ ಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟಿದ್ದವಲ್ಲದೇ 17ನೆಯ ಶತಮಾನದ ವರೆಗೂ ಸ್ಪ್ಯಾನಿಶ್ ವಶದಲ್ಲಿದ್ದವು. ಅವೆಲ್ಲವೂ ಅಂತಿಮವಾಗಿ ಸ್ಪ್ಯಾನಿಶ್ ನಿಂದ 1697 ರಲ್ಲಿ ತಮ್ಮ ಸದ್ದಡಗಿಸಿಕೊಂಡವು.

ರಾಜಕೀಯ ರಚನೆಗಳು[ಬದಲಾಯಿಸಿ]

ಕ್ಲಾಸಿಕ್ ಮಾಯಾದ ರಾಜ್ಯ ವ್ಯವಸ್ಥೆಗಳು ಸಣ್ಣ ಪಾದ್ರಿ ಪ್ರಭುತ್ವದ ರಾಜ್ಯಗಳಾಗಿದ್ದವು.ಉದಾಹರಣೆಗೆ (ಅಜವಿಲ್ ಅಜವ್ಲೆಲ್ ಅಥವಾ ಅಜವ್ಲಿಲ್ ಇದನ್ನು ಅನುವಂಶೀಯ ಪ್ರಭುತ್ವದ ಆಡಳಿತಗಾರ ಅಜವ್ ತನ್ನ ವಶದಲ್ಲಿಟ್ಟುಕೊಂಡಿದ್ದನು.(ನಂತರ ಕೆ ಯುವಲ್ ಅಜವ್ )ವಹಿಸಿಕೊಂಡಿದ್ದನು.[೧೭] ಇಂತಹ ರಾಜ್ಯಗಳು ತಮ್ಮ ರಾಜಧಾನಿ ನಗರಕ್ಕಿಂತ ಹೆಚ್ಚೇನು ದೊಡ್ಡವಾಗಿರಲಿಲ್ಲ.ಅಂದರೆ ಆಸುಪಾಸಿನ ಅದೇ ಗಾತ್ರದ ಪಟ್ಟಣಗಳಾಗಿದ್ದವು.ನೆರೆಯ ನಗರಗಳಲ್ಲಿ ಕುಳಿತೇ ಇಡೀ ಪ್ರಾದೇಶಿಕತೆಯನ್ನು ನಿಯಂತ್ರಿಸುವ ಅಧಿಕಾರ ಚಲಾಯಿಸಲಾಗುತ್ತಿತ್ತು.[ಸೂಕ್ತ ಉಲ್ಲೇಖನ ಬೇಕು] ಪ್ರತಿ ರಾಜ್ಯಕ್ಕೂ ತನ್ನದೇ ಆದ ಹೆಸರಿರುತ್ತಿತ್ತು.ಆದರೆ ಅದು ಅಲ್ಲಿನ ಪ್ರದೇಶ ಅಥವಾ ನಗರದ ಹೆಸರಿಗೆ ಹೋಲಿಕೆ ಇರಲಿಲ್ಲ. ಅಲ್ಲಿ ರಾಜ್ಯಭಾರ ಮಾಡುವ ಆಳರಸರ ಹೆಸರನ್ನೇ ಇಡಲಾಗುತ್ತಿತ್ತು. ಉದಾಹರಣೆಗೆ ಪುರಾತತ್ವ ಇಲಾಖೆಯ ಸ್ಥಳವಾಗಿರುವ ನರಂಜೊ ಇದು ಸಾಲ್ ರಾಜ್ಯದ ರಾಜಧಾನಿಯಾಗಿತ್ತು. ಅಲ್ಲಿನ ಭೂಪ್ರದೇಶ (ಚಾನ್ ಚ್ 'ಎ'ನ್)ರಾಜ್ಯದಾಗಿದ್ದು ಅದರ ರಾಜಧಾನಿಯನ್ನು ವಕಬ್ನಾಲ್ ಅಥವಾ ಮಾಕ್ಸಾಮ್ ಎಂದು ಕರೆಯಲಾಗುತ್ತಿತ್ತು.ಇದು ವಿಶಾಲ ಭೂಪ್ರದೇಶ ಹಕ್ ಸುಕ್ ನ ಭಾಗವೆನಿಸಿತ್ತು. ಆಸಕ್ತಿಕರ ವಿಷಯವೆಂದರೆ ಪದೇ ಪದೇ ದಾಳಿ ಆಕ್ರಮಣಗಳಿಗೆ ತುತ್ತಾದ ಪ್ರದೇಶಗಳೂ ತಮ್ಮ ಜಾಗೆಯಿಂದ ಸ್ಥಳಾಂತರ ಕಂಡರೂ ಅವು 9ನೆಯ ಶತಮಾನದ AD ವರೆಗೂ ಅಂದರೆ ವ್ಯವಸ್ಥೆಯ ಪೂರ್ಣ ಪತನವಾಗುವವರೆಗೂ ತಮ್ಮ ಅಸ್ತಿತ್ವ ಪಡೆದಿದ್ದವು.ಈ ಕ್ಲಾಸಿಕ್ ಮಾಯಾ ರಾಜ್ಯಸಂಸ್ಥಾನಗಳು ಆನಂತರದ ಕ್ಲಾಸಿಕ್ ಯುಗದ ರಾಜಕೀಯ ಲಕ್ಷಣಗಳನ್ನೇ ಉಳಿಸಿಕೊಂಡಿವೆ.ದಾಳಿಗಳನ್ನು ತಮ್ಮ ಸ್ವಂತ ಬಲದ ಮೇಲೆಯೇ ಎದುರಿಸುವ ಶಕ್ತಿ ಬೆಳಸಿಕೊಂಡಿವೆ ಎಂಬುದು ಸ್ಪಷ್ಟವಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಈ ಮಾಯಾನ್ಸಿಟ್ಟ್ ಗಳು ತಮ್ಮನ್ನು ಗುರುತಿಸಿಕೊಳ್ಳುವಲ್ಲಿ ಕ್ಲಾಸಿಕ್ ಮಾಯಾ ಸಮಾಜದ ವಿಶಿಷ್ಟ "ಸಂಸ್ಥಾನಿಕ ರೂಪಾವಳಿ"ಗಳನ್ನು ಹೊಂದಿದ್ದರು.ಇದು ಆಗಿನ ಸಂಸ್ಥಾನಿಕರ ಮತ್ತು ಅವರ ರಾಜಪ್ರಭುತ್ವದ ಕುರುಹುವಾಗಿರುತ್ತಿತ್ತು. ಇಂತಹ ಗುರುತಿಸುವಿಕೆಯು ಮಾಯಾ ಯುಗದ ಸ್ಪಷ್ಟ ಚಿತ್ರಣ ನೀಡುತ್ತದೆ.ಆಗಿನ ರಾಜಮನೆತನದ ಎಲ್ಲಾ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಬಹುದಾಗಿದೆ. ಅದು ಸ್ಥಳ ಮತ್ತು ವಿಸ್ತಾರಗಳ ಪಾತ್ರಗಳ ಬಗ್ಗೆ ವಿವರಿಸುತ್ತದೆ.(ರಾಜಮನೆತನದವರು ಮತ್ತು ಉದಾತ್ತ ಜೀವಿಗಳು ವಾಸಿಸಿದ್ದ ಜಾಗೆ,ಸಿಂಹಾಸನದ ಕೊಠಡಿಗಳು,ದೇವಾಲಯಗಳು,ಸಾರ್ವಜನಿಕ ಸಮಾರಂಭಗಳಿಗಾಗಿ ಆವರಣಗಳು ಮತ್ತು ಸಮೂಹ ಕಟ್ಟಡಗಳು)ಈ ಮೂಲಕ ಅಧಿಕಾರ ಮತ್ತು ಅನುವಂಶೀಯತೆ ಅದರ ಮೌಲ್ಯಗಳ ವ್ಯಾಖ್ಯಾನಿಸುವ ಸಾಮಾಜಿಕ ವಿಶಾಲ ತಳಹದಿ ಇತ್ಯಾದಿಗಳು ಅಲ್ಲಿ ಕಾಣಸಿಗುತ್ತವೆ.

ಸ್ಪ್ಯಾನಿಶ್ ಮಾಹಿತಿ ಮೂಲಗಳ ಪ್ರಕಾರ ಸಾಮಾನ್ಯವಾಗಿ ರಾಜರ ಅರಮನೆಗಳು ಮತ್ತು ಉದಾತ್ತ ಜೀವಿಗಳು ದೇವಾಲಯ ಮತ್ತು ಭವ್ಯ ಕಟ್ಟಡಗಳ ಸುತ್ತಮುತ್ತ ತಮ್ಮ ವಾಸ್ತವ್ಯ ಹೂಡಿದ್ದರೆನ್ನುವುದು ಸ್ಪಷ್ಟವಾಗಿದೆ.ಆಳರಸರು ಮತ್ತಿತರ ಮಹತ್ವದವರು ಇಲ್ಲಿದ್ದರೆ ಇನ್ನುಳಿದ ಸಾಮಾನ್ಯ ಜನತೆ ಅದರಿಂದ ಕೊಂಚ ದೂರ ವಾಸದ ನೆಲೆಗಳನ್ನು ಕಂಡುಕೊಂಡಿದ್ದರು. ಆದರೆ ಯಾವುದೇ ಕ್ಲಾಸಿಕ್ ಮಾಯಾ ನಗರಗಳು ಆರ್ಥಿಕತೆ ಬಗೆಗಿನ ವೈಶಿಷ್ಟ್ಯ ತೋರಿದ್ದು ಕಂಡಿಲ್ಲ.ಅಲ್ಲದೇ ಮೆಕ್ಸಿಕನ್ ಟೆನೊಕ್ಟಿಟ್ಲಾನ್ ಬಗೆಗಿನ ಯಾವ ವಾಣಿಜ್ಯಿಕ ಲಕ್ಷಣ ತೋರಿಲ್ಲ. ಅದಲ್ಲದೇ ಮಾಯಾ ನಗರಗಳಲ್ಲಿ ಬಹುಮಟ್ಟಿಗೆ ರಾಜಮನೆತನದ ಗೃಹವಾಸಗಳು,ಸ್ಥಳೀಯ ಆಡಳಿತ ವ್ಯವಸ್ಥೆಗಳು ಅಲ್ಲದೇ ಧಾರ್ಮಿಕ ಕ್ರಿಯಾ ವಿಧಿ ವಿಧಾನಗಳು ನಡೆಸುವ ಜನರಿಗೆ ಅಲ್ಲಿ ವಾಸಸ್ಥಾನಗಳಿದ್ದವು. ಅಲ್ಲಿನ ಉದಾತ್ತ ಮತ್ತು ಉನ್ನತ ಶ್ರೇಣಿಯ ಜನರು ತಮಗೆ ಸಂಬಂಧಪಟ್ಟ ಅಧಿಕಾರಿ-ಅಗತ್ಯ ಕೆಲಸಗಳ ಜನರನ್ನು ಸಮೀಪದಲ್ಲೇ ಭೇಟಿ ಮಾಡುವ ಅವಕಾಶ ನೀಡಲಾಗಿತ್ತು.ಅಲ್ಲಿ ಸೌಂದರ್ಯವರ್ಧಕಗಳ ರಚನಾ ವ್ಯವಸ್ಥೆಯೂ ಅಲ್ಲಿತ್ತು. ಇವುಗಳನ್ನು ಸ್ವಯಂಘೋಷಿತ ಕೇಂದ್ರಗಳೆಂದು ಹೇಳಲಾಗುತ್ತಿತ್ತು.ಇವುಗಳು ಸಾಮಾಜಿಕ,ನೈತಿಕ ಮತ್ತು ಪ್ರಸಾದನದ ಮೂಲಕ ಜನರಿಗೆ ನೆರವಾಗುತ್ತಿದ್ದವು. ಸಂಸ್ಥಾನಿಕ ರಾಜಪ್ರಭುತ್ವದ ಪತನದ ನಂತರ ಕೆಲವು ಪ್ರಕರಣಗಳಲ್ಲಿ ಅಂದರೆ ಪೆಡ್ರಾಸ್ ನೆಗ್ರಾಸ್ ಅಥವಾ ಕೊಪಾನ್ ಘಟನೆಗಳು ನೆಲೆವಾಸಕ್ಕೆ ಅನಿವಾರ್ಯ "ಸಾವು"ತಂದ ಪ್ರಕರಣಗಳೂ ಇವೆ.

ಕಲೆ[ಬದಲಾಯಿಸಿ]

ಉಪ್ಕಲ್ ಕಿ'ನಿಂಚ್ ನಿಂದ ಪ್ರತಿಬಿಂಬಿಸುವ ಪಲೆಂಕ್ವುಗೆ ಗಾರೆಯ ಲೇಪನದ ಪರಿಹಾರ

ಹಲವರು[who?]ಈ ಮಾಯಾ ಯುಗದ ಕಲೆಯು ಕ್ಲಾಸಿಕ್ ಕಾಲಾವಧಿ ಯ(c. 250 ದಿಂದ 900 AD) ಅತ್ಯಂತ ಸೂಕ್ಷ್ಮತೆ ಮತ್ತು ಸೌಂದರ್ಯವನ್ನೊಳಗೊಂಡಿತ್ತಲ್ಲದೇ ಪುರಾತನ ಹೊಸಜಗತ್ತಿನ ಕಾಣಿಕೆಯಾಗಿತ್ತು ಎಂದು ಅಭಿಪ್ರಾಯಪಡುತ್ತಾರೆ. ಇಲ್ಲಿನ ಕಟ್ಟಡಗಳ ರಚನಾ ವಿಧಾನವು ಆಕರ್ಷಣೀಯವಾಗಿದ್ದು ಅದಕ್ಕೆ ತಕ್ಕ ವಿಧಾನಗಳನ್ನು ಗಾರೆ ಕೆಲಸದ ಮೂಲಕ ಪಲೆಂಕ್ವುಗೆ ಅಳವಡಿಸಲಾಗಿದೆ.ಕೋಪನ್ ನ ಶಾಸನ ಸಭಾಭವನಗಳು ಉತ್ತಮ ಕಲೆಗೆ ಹೆಸರಾಗಿದ್ದವು.ಅವುಗಳಲ್ಲಿ ಒಂದು ಗಾಂಭೀರ್ಯ ಮತ್ತು ನಿಖರ ವೀಕ್ಷಣೆ[ಸೂಕ್ತ ಉಲ್ಲೇಖನ ಬೇಕು]ಅವಕಾಶಗಳನ್ನು ನೀಡಿವೆ.ಪುರಾತನ ಹಳೆಯ ಜಗತ್ತಿಗೆ[ಸೂಕ್ತ ಉಲ್ಲೇಖನ ಬೇಕು]ಒಂದು ಕಿಂಡಿಯಾಗಿ ಈ ಯುಗದ ಕಲೆಗಳು ಕೆಲಸ ಮಾಡಿವೆ ಎಂದು ಪುರಾತತ್ವ ಇಲಾಖೆ ತಿಳಿಸಿದೆ.ಇದಕ್ಕಾಗಿಯೇ ವಿಶೇಷ ನಾಮಾಂಕಿತವನ್ನೂ ಸಹ ನೀಡಲಾಗಿದೆ. ಆಗಿನ ಮುಂದುವರೆದೆ ಮಾಯಾ ಜಗದ ಕ್ಲಾಸಿಕ್ ಮಾಯಾ ಚಿತ್ರಕಲೆಯನ್ನು ಕಾಣಲು ಕೇವಲ ಕೆಲ ಲಕ್ಷಣಗಳನ್ನು ಗುರುತಿಸಬಹುದಾಗಿದೆ.ಉಳಿದವುಗಳಲ್ಲಿ ಶವಸಂಸ್ಕಾರ ಮಡಿಕೆ-ಕುಡಿಕೆ ಮತ್ತು ಮಾಯಾ ಕುಂಬಾರಿಕೆ ಸಿರಾಮಿಕ್ಸ್ ಅಲ್ಲದೇ ಬೊನಂಪಾಕ್ ನಲ್ಲಿರುವ ಕಟ್ಟಡ ಪುರಾತನ ಭಿತ್ತಿಚಿತ್ರಗಳು ಇಂದು ಅದೃಷ್ಟವಶಾತ್ ಉಳಿದುಕೊಂಡಿವೆ. ಇದರಲ್ಲಿ ಅತ್ಯಂತ ಸುಂದರ ವೈಡೂರ್ಯ ಲಕ್ಷಣದ ನೀಲಿ ಬಣ್ಣದ ಈ ವಸ್ತು ಶತಮಾನಗಳಿಂದ ಉಳಿದುಕೊಂಡಿದೆ.ಅದಕ್ಕೆ ಕಾರಣವೆಂದರೆ ಅದರಲ್ಲಿರುವ ವಿಶೇಷ ರಾಸಾಯನಿಕ ಸಂಯೋಜನೆಯಿಂದ ಎಂದು ಹೇಳಲಾಗುತ್ತದೆ.ಅದನ್ನು ಮಾಯಾ ನೀಲಿ ಅಥವಾ ಅಜುಲ್ ಮಾಯಾ ಎನ್ನುತ್ತಾರೆ.ಅದು ಸದ್ಯ ಬೊನಂಪಾಕ್,ತಾಜಿನ್,ಕಾಕಾಸ್ಟಾಲಾ,ಜೈನಾ ಮತ್ತು ಕೆಲವು ವಸಾಹತು ಪ್ರದೇಶಗಳಲ್ಲಿ ದೊರಕುತ್ತದೆ. ಈ ಮಾಯಾ ನೀಲಿಯನ್ನು 16ನೆಯ ಶತಮಾನದ ವರೆಗೂ ಮಾಡಲಾಗಿತ್ತು,ಆದರೆ ತಂತ್ರಜ್ಞಾನ ಕಳೆದ ನಂತರ ಇದರ ಬಳಕೆ ಮಿತಿಗೊಂಡಿತು. ಹಿಂದಿನ ಪೂರ್ವಕ್ಲಾಸಿಕ್ ಭಿತ್ತಿ ಯ ವರ್ಣಚಿತ್ರಗಳು ಭವ್ಯ ಕಲಾಪ್ರಕಾರಕ್ಕೆ ಸಾಕ್ಷಿಯಾಗಿವೆ.ಇದರ ಪರಿಪೂರ್ಣತೆಯು ಇತ್ತೀಚೆಗೆ ಸ್ಯಾನ್ ಬಾರ್ಟೊಲೊ ಬಳಿ ದೊರೆತ ಪುರಾವೆಗಳಲ್ಲಿ ಕಂಡುಬಂದಿದೆ. ರಹಸ್ಯಲಿಪಿ ಭೇದನದ ವಿಜ್ಞಾನದ ಪ್ರಕಾರ ಮಾಯಾಯುಗದ ಕಲಾವಿದರ ಹೆಸರುಗಳು ಅವರ ಕೃತಿಯ ಕೆಳಭಾಗದಲ್ಲಿ ನಮೂದಾದದ್ದು ಕಂಡು ಬಂದಿದೆ.ಈ ನಾಗರಿಕತೆಯಲ್ಲಿ ಕಲಾವಿದರು ತಮ್ಮ ಕೆಲಸಗಳಿಗೆ ತಾವು ಸಂಪೂರ್ಣ ಸಂಬಂಧ ಬೆಳೆಸುವಲ್ಲಿ ಆಸಕ್ತರಾಗಿದ್ದರು.

ವಿನ್ಯಾಸ[ಬದಲಾಯಿಸಿ]

ಮಾಯಾ ವಾಸ್ತುಶಿಲ್ಪವು ಶತಮಾನಗಳ ಕಾಲದಿದ್ದರೂ ಎಂದಿಗೂ ಗುರುತಿಸಬಹುದಾಗಿದೆ.ಮಾಯಾ ಯುಗದ ಆ ನಾಗರಿಕತೆಯಲ್ಲಿ ಟರ್ಮಿನಲ್ ಪ್ರಿ-ಕ್ಲಾಸಿಕ್ ಕಾಲ ಮತ್ತು ಅದರಾಚೆ ಕಟ್ಟಿದ ಮೆಟ್ಟಿಲುಗಳುಳ್ಳ ಪಿರಾಮಿಡ್ ಗಳನ್ನು ತಕ್ಷಣವೇ ಇದೇ ಕಾಲದ್ದು ಎಂದು ತಿಳಿಯಬಹುದಾಗಿದೆ. ಅಲ್ಲಿರುವ ಗುಹಾಸ್ಥಳಗಳೂ ಸಹ ಮಾಯಾಯುಗದ ಮಹತ್ವದ ಅಂಶಗಳಾಗಿವೆ. ಈ ಗುಹಾಸ್ಥಳಗಳೆಂದರೆ ಜೊಲ್ಜಾ ಗುಹೆ, ನಾಜ್ ತುನಿಚ್ ನಲ್ಲಿರುವ ಗುಹಾಸ್ಥಳ, ಅಲ್ಲದೇ ಕಾಂಡೆಲಿರಿಯಾ ಗುಹೆಗಳು, ಹಾಗು ಕೇವ್ ಆಫ್ ದಿ ವಿಚ್ಇದರಲ್ಲಿವೆ. ಇದರಲ್ಲಿ ಇನ್ನೂ ಗುಹೆ-ಮೂಲದ ಪುರಾಣಗಳೂ ಈ ಮಾಯಾದಲ್ಲಿವೆ. ಕೆಲವು ಗುಹಾ ಸ್ಥಳಗಳನ್ನು ಆಧುನಿಕ ಮಾಯಾಯುಗದಂತೆ ಈಗಲೂ ಚಿಯಾಪಾಸ್ ಹೈಲ್ಯಾಂಡ್ಸ್ ನಲ್ಲಿ ಬಳಸಲಾಗುತ್ತದೆ.

ಮಾಯಾ ಲಾಂಗ್ ಕೌಂಟ್ ಕ್ಯಾಲಂಡರ್ ಪ್ರಕಾರ ಪ್ರತಿ ಐವತ್ತೆರಡು ವರ್ಷಕ್ಕೊಮ್ಮೆ ಈ ಕಟ್ಟಡಗಳಿಗೆ ಮರುಜೀವ ನೀಡುವ[who?]ಜೀರ್ಣೋದ್ದಾರದ ಕೆಲಸ ಮಾಡಲಾಗುತ್ತಿತ್ತು,ಎಂದು ಕೆಲವರು ಅಂದಾಜಿಸಿದ್ದಾರೆ. ಈ ಮರುಕಟ್ಟಡ ನಿರ್ಮಾಣವು ಹೊಸ ಆಡಳಿತಗಾರ ಇಲ್ಲವೆ ರಾಜಕೀಯ ಕಾರಣಗಳಿಗಾಗಿ ನಡೆಯುತ್ತಿತ್ತು.ಆದರೆ ಇದನ್ನು ಕ್ಯಾಲಂಡರ್ ಕಾಲಚಕ್ರದ ಅಂದಾಜಿನಲ್ಲಿ ವಿರೋಧಿಸಲಾಗಿದೆ. ಆದಾಗ್ಯೂ ಹಳೆಯ ಕಟ್ಟಡಗಳ ಮೇಲ್ಭಾಗವನ್ನು ಪುನಃ ರಚಿಸುವುದದನ್ನು ಮಾತ್ರ ಮಾಡಲಾಗುತ್ತಿತ್ತೆಂದು ಹೇಳಲಾಗಿದೆ. ಅತ್ಯಂತ ಹೆಚ್ಚು ಕಣ್ಣಿಗೆ ಕಟ್ಟುವ ಟಿಕಲ್ ನಲ್ಲಿನ ನಾರ್ತ್ ಅಕ್ರೊಪೊಲಿಸ್ ಸುಮಾರು1,500 ವರ್ಷದ ಹಳೆಯದ ವಾಸ್ತುಶಿಲ್ಪ ಹೊಂದಿದೆ ಎಂದು ಹೇಳಲಾಗುತ್ತದೆ. ಟಿಕಾಲ್ ಮತ್ತು ಯಾಕ್ಶಾನಲ್ಲಿ ಮೂರು ಅವಳಿ ಪಿರಾಮಿಡ್ ಸಂಕೀರ್ಣಗಳನ್ನು ಕಾಣಬಹುದಾಗಿದೆ.(ಟಿಕಾಲ್ ನಲ್ಲಿ ಏಳು ಯಾಕ್ಶಾನಲ್ಲಿ ಒಂದು ಇದು ಬಾಕ್ತುನ್ ಯುಗದ ಅಂತ್ಯವನ್ನು ಸಂಕೇತಿಸುತ್ತದೆ.) ಹಲವು ನಿರಂತರತೆಯ ಕಟ್ಟಡಗಳ ಅವಲೋಕನ ಮತ್ತು ಶೈಲಿಯ ವೀಕ್ಷಣೆಯಿಂದಾಗಿ ಮಾಯಾ ವಾಸ್ತುಶಿಲ್ಪದ ಅಂಶಗಳನ್ನು ಪತ್ತೆಹಚ್ಚಬಹುದಾಗಿದೆ.ಮಾಯಾ ಯುಗದ ವಸ್ತುವಿನ್ಯಾಸದ ಕಲೆಗಳು ಆಗಿನ ಪುರಾತನ ನಾಗರಿಕತೆಯಲ್ಲಿನ ಒಂದು ಕ್ರಾಂತಿ ಎನಿಸಿವೆ.

ನಗರ ವಿನ್ಯಾಸಗಾರ[ಬದಲಾಯಿಸಿ]

ಚಿತ್ರ:Acropolis del Norte.jpg
ನಾರ್ತ್ ಎಕ್ರೊಪೊಲಿಸ್, ಟಿಕಾಲ್, ಗ್ವಾಟೆಮಾಲಾ

ಮಾಯಾ ನಗರಗಳು ಮೆಸೊಅಮೆರಿಕಾದ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಹರಡಿದ್ದ ನಗರಗಳಲ್ಲಿ ನಗರ ಯೋಜನಾ ವಿಧಾನಗಳು ಕನಿಷ್ಟ ಮಟ್ಟದಲ್ಲಿದ್ದವು. ಮಾಯಾಯುಗದ ವಾಸ್ತುಶಿಲ್ಪವು ಸಾಮಾನ್ಯವಾಗಿ ನೈಸರ್ಗಿಕ ಲಕ್ಷಣಗಳನ್ನು[ಸೂಕ್ತ ಉಲ್ಲೇಖನ ಬೇಕು]ಹೆಚ್ಚು ಒಳಗೊಂಡಿತ್ತು,ಅವರ ನಗರಗಳನ್ನು ಬೇಕಾದ ಹಾಗೆ ನಿರ್ಮಿಸಿದ ಕೆಲವೆಡೆ ಅದಕ್ಕೆ ಹೆಚ್ಚು ಒತ್ತು ಕೊಟ್ಟಿರಲಿಲ್ಲ ಎಂಬುದು ಕಾಣಿಸುತ್ತದೆ.ಸ್ವತಂತ್ರ ಸ್ಥಳಾವಕಾಶ ಪರಿಗಣಿಸಿ ಇದನ್ನು ಮಾಡಲಾಗಿದೆ. ಉದಾಹರಣೆಗೆ ಕೆಲವು ನಗರಗಳಲ್ಲಿ ಗೃಹಸಮುಚ್ಚಯಗಳನ್ನು ಸುಣ್ಣದ ಕಲ್ಲುಗಳಿಂದ ನಿರ್ಮಿಸಲಾಗಿದೆ.ಉತ್ತರದ ಯುಕಾಟಾನ್ ತನ್ನಷ್ಟಕ್ಕೆ ತಾನೇ ಒಂದು ಮುನಸಿಪಾಲ್ಟಿಯಾಗಿ ಪರಿವರ್ತನವಾಗಿತ್ತು.ಅಲ್ಲಿನ ಭೌಗೋಳಿಕ ಆಕಾರ ನೋಡಿ ಉಸುಮಾಕಿಂಟಾ ವನ್ನು ಬಳಸಲಾಗಿದೆ.ಇದರ ಮೂಲಕ ಗೋಪುರಗಳು ಮತ್ತು ದೇವಾಲಯಗಳನ್ನು ಎತ್ತರಿಸಿ ಅವುಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸಲಾಗಿದೆ. ಇನ್ನೂ ಕೆಲವೆಡೆ ಇದೇ ತೆರನಾದ ಅನುಕ್ರಮಣಿಕೆ ನಡೆಯುತ್ತಿದೆ.ಇದು ವಿಶಾಲ ನಗರಗಳಿಗೆ ಸಾಮಾನ್ಯವಾಗಿದೆ.

ಕ್ಲಾಸಿಕ್ ಎರಾ ಮಾಯಾ ನಗರ ವಿನ್ಯಾಸವನ್ನು ನಾವಿಂದು ಅದರ ಸ್ಥಳಾವಕಾಶ ಮತ್ತು ಸ್ಮಾರಕಗಳ ಮತ್ತು ಒಡ್ಡುದಾರಿಗಳ ಸಂದರ್ಭದಲ್ಲಿ ಕಾಣಬಹುದು. ತೆರೆದ ಸಾರ್ವಜನಿಕ ಸಂಕೀರ್ಣಗಳು ಜನರ ಒಟ್ಟುಗೂಡುವಿಕೆಯ ಸಂದರ್ಭಗಳಲ್ಲಿ ನೆರವಾಗುವಂತೆ ನಿರ್ಮಾಣವಾಗಿದ್ದವು.ಇದರ ಮೇಲೆ ನಗರದ ವಿನ್ಯಾಸ ಶೈಲಿಯ ಗಾಢ ಪರಿಣಾಮವಿದೆ.ಆಂತರಿಕವಾಗಿ ಒಳಜಾಗೆ ಮತ್ತು ಸಂಪೂರ್ಣವಾದ ಎರಡನೆಯ ಮಾದರಿಗೆ ಪೂರಕವಾಗಿದೆ. ನಂತರದ ಕ್ಲಾಸಿಕ್ ಯುಗದಲ್ಲಿ ರಕ್ಷಣಾತ್ಮಕ ರೀತಿಯಿಂದಾಗಿ ಕೋಟೆಗಳ ನಿರ್ಮಾಣ ನಡೆಯಿತು.ಆಗ ರಕ್ಷಣಾ ಕೋಟೆಗಳ ರಚನೆ ಒಂದು ಹೊಸ ಆಯಾಮವಾಗಿತ್ತು.ಅದೇ ಕಾಲಾವಧಿಯಲ್ಲಿ ಅಸಂಖ್ಯಾತ ಪ್ಲಾಜಾಗಳ ನಿರ್ಮಾಣವೂ ಸಾಮಾನ್ಯವಾಗಿತ್ತು.

ವಿಶಾಲ-ಮಟ್ಟದ ನಿರ್ಮಾಣಗಳಲ್ಲಿ ಕ್ಲಾಸಿಕ್ ಯುಗದ ಈ ಅಕ್ಷೀಯ ಪೂರ್ವ ನಿರ್ಧಾರಿತ ಶೈಲಿಗಳಲ್ಲಿ ಆಯಾ ದಿಕ್ಕುಗಳಲ್ಲಿ ರಚನೆಗಳನ್ನು ಕಾಣಬಹುದಾಗಿದೆ. ನೈಸರ್ಗಿಕ ಸಂಪತ್ತುಗಳ ನಿಕಟ ಪ್ರದೇಶಗಳಲ್ಲಿ ಕಟ್ಟಡ ಕಾರ್ಯ ನಡೆಯುತ್ತಿತ್ತು.ಉದಾಹರಣೆಗೆ ಶುದ್ದ-ತಾಜಾ ನೀರಿನ ಮೂಲಗಳು,ಬಾವಿಗಳು ಅಥವಾ ಜಲಮೂಲಗಳು ಇಂತಹವುಗಳ ಅವಲಂಬನೆಯನ್ನು ಉಪಯೋಗಿಸಿ ನಗರಗಳು ಬೆಳೆದವು.ಇದರೊಂದಿಗೆ ಸಾಸೆಬಿಯೊಬ್ (ಒಡ್ಡುದಾರಿಗಳು)ಅದಕ್ಕಾಗಿ ಒಳದಾರಿಗಳನ್ನು ನಿರ್ಮಿಸಲಾಗಿತ್ತು.ಇಲ್ಲಿ ಹಲವು ವೇದಿಕೆಗಳ ರಚಿಸಿ ಅದರ ವಿನ್ಯಾಸವನ್ನು ಮಾಯಾ ಕಟ್ಟಡಗಳ ರೀತಿಯಲ್ಲಿ ಮಾಡಲಾಗಿತ್ತು. ಹೆಚ್ಚು ಹೆಚ್ಚು ಕಟ್ಟಡಗಳ ನಿರ್ಮಾಣವಾದಂತೆ ಹಳೆಯುದ್ದರ ಜೀರ್ಣೋದ್ಧಾರ ಮತ್ತು ಪುನರ್ವಿನ್ಯಾಸದ ಕಾರ್ಯಗಳು ನಡೆಯುತ್ತಿದ್ದವು.ಪ್ರತಿಯೊಂದರ ಪ್ರತಿಕೃತಿ ಮೇಲೆ ಇವುಗಳ ನಿರ್ಮಾಣ ನಡೆಯುತ್ತಿತ್ತು.ಇನ್ನುಳಿದ ದೊಡ್ಡ ಮೆಸೊಅಮೆರಿಕನ್ ನಗರಗಳ ಗುರುತಿಸಲು ಇದನ್ನು ಟೆಟಿಚಾಕಾನ್ ಮತ್ತು ಅದರ ಜಟಿಲ ಕಂಬಗಳ ನಿರ್ಮಾಣವು ಹೊಸ ಶೈಲಿಯಾಗಿತ್ತು.

ಬುಲ್ ಕೋರ್ಟ್ ಆಟ್ ಟಿಕೈ, ಗ್ವಾಟೆಮಾಲಾ

ಮಾಯಾ ನಗರಗಳ ಹೃದಯ ಭಾಗಗಳಲ್ಲಿ ವಿಶಾಲ ಪ್ಲಾಜಾಗಳ ಸುತ್ತಲೂ ಮಹತ್ವದ ಸರ್ಕಾರೀ ಕಟ್ಟಡಗಳು ಮತ್ತು ದೇವಾಲಯಗಳು ಧಾರ್ಮಿಕ ಕಟ್ಟಡಗಳಿಂದ ಸುತ್ತುವರೆದಿದ್ದವು.ಉದಾಹರಣೆಗೆ ರಾಜರ ಅರಮನೆ ಅಕ್ರೊಪೊಲಿಸ್ ಬೃಹತ್ ಪಿರಾಮಿಡ್ ದೇವಾಲಯಗಳು ಮತ್ತು ಸಾಂದರ್ಭಿಕ ಬಾಲ್-ಕೋರ್ಟ್ ಗಳ ಆವರಣಗಳಿದ್ದವು. ನಗರ ನಿರ್ಮಾಣಗಳು ಆ ದಿಕ್ಕಿನಲ್ಲಿ ವಾಸ್ತು ವಿಷಯದಂತೆಯೇ ಕಟ್ಟಡಗಳ ರಚನೆ ಮಾಡಲಾಗಿದೆ.ದೇವಾಲಯಗಳಿಗೆ ಹೊಸರೂಪದ ವಿನ್ಯಾಸ ಮತ್ತು ಧಾರ್ಮಿಕ ಕಟ್ಟಡಗಳಿಗೆ ಈ ತೆರನಾದ ದಿಕ್ಕು ನಡೆಯಲಾಗುತ್ತದೆ.ಮಾಯಾ ನಾಗರಿಕತೆಯಲ್ಲಿ ಅರ್ಥವಿವರಣೆಯು ಹೀಗೆ ಅದರ ಪೂರಕವಾಗಿರುತ್ತದೆ.ಮಾಯಾದ ಸಂಪ್ರದಾಯದಂತೆ ಸ್ವರ್ಗ ಮತ್ತು ದೇವಲೋಕದ ಪರಿಕಲ್ಪನೆಯ ವಿಷಯಗಳು ಇದರೊಳಗಿರುತ್ತವೆ. ಈ ಧಾರ್ಮಿಕ ಆಚರಣೆಯ ಕೇಂದ್ರದ ಬಾಹ್ಯವಾಗಿ ಇರುವ ರಚನೆಗಳು ಉದಾತ್ತತೆಯ ಪ್ರಮಾಣ ಕಡಿಮೆ ಇರುವವರಿಗಾಗಿ ರಚನೆಯಾಗಿದ್ದರೆ,ಸಣ್ಣ ದೇವಾಲಯಗಳು,ವ್ಯಕ್ತಿಗತ ಸ್ಮಾರಕಗಳು,ಕಡಿಮೆ ಎನ್ನಲಾದ ಪಾವಿತ್ರ್ಯ ಸ್ಥಳಗಳು ಅಲ್ಲದೇ ಅತ್ಯಧಿಕ ಖಾಸಗಿತನ ನೀಡುವ ರಚನೆಗಳು ಇದರ ಭಾಗಗಳಾಗಿವೆ. ಹೊರಭಾಗದಲ್ಲಿ ನಿರಂತರವಾದ ನಗರ ಪ್ರದೇಶದ ವಾಸಿಗಳ ಚಟುವಟಿಕೆಗೆ ಮೀಸಲಾಗುತ್ತದೆ.ಸಾಮಾನ್ಯ ಜನರ ಸರ್ವೆ ಸಾಧಾರಣ ಮನೆಗಳ ನಿರ್ಮಾಣವೂ ಇರುತ್ತದೆ.

ಕಟ್ಟಡದ ವಸ್ತುಗಳು[ಬದಲಾಯಿಸಿ]

ಅತ್ಯಂತ ದೊಡ್ಡ ಮಾಯಾ ಕಟ್ಟಡಗಳಿದ್ದರೂ ಅವು ಆಧುನಿಕ ತಂತ್ರಜ್ಞಾನದಲ್ಲಿ ಹಿಂದೆ ಬಿದ್ದಿವೆ ಎನ್ನುವುದು ಆಶ್ಚರ್ಯಕರ ಸಂಗತಿಯಾಗಿದೆ. ವಸ್ತುಗಳನ್ನು ಸಾಗಿಸಲು ಪ್ರಾಣಿಗಳ ಬಳಕೆಯಲ್ಲಿ ಮಾಯಾ ಕೊರತೆ ಅನುಭವಿಸಿತ್ತು.ಸಾಗಾಟ ಸಾರಿಗೆಗಾಗಿ ಅದು ಹೆಚ್ಚಾಗಿ ಮಾನವ ಶಕ್ತಿಮೂಲವನ್ನೇ ಬಳಸಬೇಕಿತ್ತು. ಇದರ ಅಗತ್ಯ ಹೆಚ್ಚಾಗಿದ್ದರೂ ಅವಶ್ಯವಿರುವ ಕಚ್ಚಾ ಸಾಮಗ್ರ್ರಿಗಳು ಸ್ಥಳದಲ್ಲೇ ದೊರೆಯುತ್ತಿದ್ದುದು ವಿಶೇಷವಾಗಿತ್ತು. ಮಾಯಾ ರಚನೆಗಳಿಗಾಗಿ ಎಲ್ಲಾ ಕಲ್ಲುಗಳನ್ನು ಸ್ಥಳೀಯ ಕಲ್ಲುಗಣಿಗಳಿಂದಲೇ ಪಡೆದಿತ್ತು. ಅವರು ಹೆಚ್ಚಾಗಿ ಸುಣ್ಣದ ಕಲ್ಲುಗಳನ್ನೇ ಬಳಸಿದ್ದು ಕಾಣಿಸುತ್ತದೆ.ಯಾಕೆಂದರೆ ಇದು ಸುಲಭವಾಗಿ ಮಾರ್ಪಾಡುವ ಕಲ್ಲಾಗಿದ್ದು ಅದಕ್ಕೆ ಅಂತಹ ಕಠಿಣ ಸಲಕರಣೆಗಳ ಅಗತ್ಯವೂ ಕಡಿಮೆ ಇರುತ್ತದೆ.ಅದನ್ನು ಕಲ್ಲುಗಣಿಯಿಂದ ತೆಗೆದ ನಂತರ ಮಾತ್ರ ಗಟ್ಟಿಗೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಈ ಸುಣ್ಣದ ಕಲ್ಲುಗಳು ಸುಟ್ಟ ಮತ್ತು ಅರಳಿದ ಗುಣಗಳನ್ನು ಹೊಂದಿರುವುದರಿಂದ ಇದನ್ನು ಸಿಮೆಂಟ್ ಗಾರೆಯಂತೆ ಬಳಸಿ ಘನಗೊಳಿಸಬಹುದಾಗಿದೆ.ಅದಕ್ಕಾಗಿ ಇಲ್ಲಿ ಹೆಚ್ಚಿನ ಶ್ರಮ ಮಾಡಬೇಕಾಗಿಲ್ಲ.ವ್ಯಾಪಕವಾಗಿ ಇದನ್ನು ಸಿಮೆಂಟ್ ಗಾರೆಗೆ ಸಮನಾಗಿ ಬಳಸಲಾಗುತ್ತದೆ.

ನಂತರ ಈ ಸುಣ್ಣದ ಕಲ್ಲುಗಳ ಗಣಿಗಾರಿಕೆಯು ಸುಧಾರಣೆ ಕಂಡು ಅದರದೇ ಆದ ಗಾರೆ ತಯಾರಿಸಿ ಅಗತ್ಯಕ್ಕೆ ತಕ್ಕಂತೆ ಕಲ್ಲುಗಳನ್ನು ಮಾಡಬಹುದಾಗಿದೆ.ಇದು ಮೇಲ್ಛಾವಣಿ ಮೊದಲು ಮತ್ತು ನಂತರದ ತೊಲೆಗಳಿಗೆ ಇದರ ಮಹತ್ವ ಕಾಣಿಸುತ್ತದೆ. ಮಾಯಾ ಗೃಹ ನಿರ್ಮಿತಿಯಲ್ಲಿ ಸಾಮಾನ್ಯ ಜನರ ಮನೆಗಳಿಗಾಗಿ ಕಟ್ಟಿಗೆ ಕಂಬಗಳನ್ನು,ಇಟ್ಟಿಗೆಗಳನ್ನು ಮತ್ತು ಪ್ರಾಥಮಿಕ ವಸ್ತುಗಳ ರಕ್ಷಣೆಗೆ ಇದರ ಬಳಕೆ ಮಾಡುವುದು ಸಾಮಾನ್ಯವಾಗಿದೆ. ಮಾಯಾ ರಚನೆಗಳಲ್ಲಿ ಇಟ್ಟಿಗೆಗಳ ಕಮಾನು ನಿರ್ಮಾಣ(ಇದನ್ನು "ಫಾಲ್ಸ ಆರ್ಚ್"ಎನ್ನುತ್ತಾರೆ.) ವಾಸ್ತುಶೈಲಿಯ ಮೂಲಭೂತ ಲಕ್ಷಣವಾಗಿದೆ.ಇದು ಹೆಚ್ಚು ಪ್ರಮಾಣದ ಗಾಳಿ ಆಡುವ ಮಾರ್ಗವಾಗಿದೆ. ಇದೇ ತೆರನಾದ ಸುಟ್ಟ ಇಟ್ಟಿಗೆಗಳಿಂದ ನಿರ್ಮಿತ ಸುಧಾರಿತ ಕಮಾನುಗಳು ಬಾಗಿಲು ಮತ್ತು ಪ್ರವೇಶ ದ್ವಾರದೆಡೆ ಪ್ರಚಲಿತವಾದವು.ಇವುಗಳು ಮೇಲ್ಛಾವಣಿಗೆ ಬೆಂಬಲ ನೀಡುವಂತಾದವು.

ಟಿಪ್ಪಣೆ ಮಾಡಬೇಕಾದ ನಿರ್ಮಾಣಗಳು[ಬದಲಾಯಿಸಿ]

  • ಸಮಾರಂಭಕ್ಕಾಗಿ ನಿರ್ಮಿತಿಗಳು ಇವುಗಳನ್ನು ಸಾಮಾನ್ಯವಾಗಿ ಸುಣ್ಣದ ಕಲ್ಲಿನಿಂದ ನಿರ್ಮಿಸಲಾಗಿರುತ್ತದೆ.ಸುಮಾರು ನಾಲ್ಕು ಮೀಟರ್ ಎತ್ತರದ ವೇದಿಕೆ ರಚಿಸಿ ಸಾರ್ವಜನಿಕ,ಧಾರ್ಮಿಕ ಕಾರ್ಯಕ್ರಮಗಳಿಗೆ ಅನುವು ಮಾಡುವ ಕಾರ್ಯಕ್ರಮಗಳಿಗೆ ಅನುಕೂಲ ಮಾಡುವ ಕಟ್ಟಡಗಳು. ವಿಶೇಷ ವಿನ್ಯಾಸದ ವೇದಿಕೆಯುಳ್ಳ ಉತ್ತಮ ನಿರ್ಮಾಣಗಳು,ಇವುಗಳಲ್ಲಿ ತಿರುವು ರೂಪಿಸಿದ ಬದಲಾಯಿಸಿದ ನಿರ್ಮಾಣಗಳು ಅಂದರೆ ಜೊಮೊಂತ್ಲಿ ಇವು ಯುದ್ದಗಳಲ್ಲಿ ಸೋತವರ ಅಥವಾ ಬಲಿಯಾದವರ ರುಂಡಗಳ ಪ್ರದರ್ಶನಕ್ಕಾಗಿರುವ ಮೆಸೊಅಮೆರಿಕನ್ ಬಾಲ್ ಗೇಮ್ ನಲ್ಲಿನ ಮೂರ್ತಿಗಳು.
  • ಅರಮನೆಗಳು ವಿಶಾಲತೆ ಮತ್ತು ಅವುಗಳ ಸೌಂದರ್ಯದ ಪ್ರಜ್ಞೆ ಇಂತಹವುಗಳನ್ನು ನಗರಗಳ ಮಧ್ಯೆ ಸ್ಥಾಪಿಸಲಾಗಿರುತ್ತದೆ.ಜನರ ಹೆಚ್ಚು ಅನುಕೂಲಕ್ಕಾಗಿ ನಿರ್ಮಿಸಲಾಗಿರುತ್ತದೆ. ವಿಸ್ತೃತ ದೊಡ್ಡ ಅರಮನೆ ಅಥವಾ ಒಂದು ವಿಶಿಷ್ಟ ಕಟ್ಟಡದ ವಿನ್ಯಾಸ ಅದರ ಕೊಠಡಿಗಳು ಇನ್ನಿತರ ವಿಷಯಗಳ ಬಗ್ಗೆ ರಚನೆಗಳು ಇದರಲ್ಲಿವೆ. ಹೇಗೆಯಾದರೂ ಇವು ಒಂದೇ ಅಂತಸ್ತಿನ ಸಣ್ಣ ಕಟ್ಟಡಗಳಾದರೂ ಆಂತರಿಕವಾಗಿ ಉತ್ತಮ ಆವರಣ ಹೊಂದಿರುವ ಇದು ಸಾಕಷ್ಟು ಅಲಂಕಾರಿಕವಾಗಿರುತ್ತದೆ.ವಾಸಕ್ಕೆ ಹಾಗು ಇನ್ನಿತರ ರಾಜಪ್ರಭುತ್ವದ ಸಮಾರಂಭಗಳಿಗಾಗಿ ಇದನ್ನು ಪುಟ್ಟದಾಗಿ ಬಳಸಬಹುದು.ಅಲ್ಲಿರುವವರ ಅಗತ್ಯಕ್ಕನುಗುಣವಾಗಿ ಬಳಸಲೂಬಹುದಾದ ನಿರ್ಮತಿಯಾಗಿರುತ್ತದೆ.
  • ಈ ಗ್ರುಪ್ ಗಳ ನ್ನು ವಿಶಾಲ ವರಾಂಡಾಗಳುಳ್ಳ ವಿಶಿಷ್ಟ ರಚನೆಗಳಾಗಿರುತ್ತವೆ.ಮಾಯಾ ಪ್ರದೇಶದಲ್ಲಿನ ಮಧ್ಯದ ಕೇಂದ್ರಪ್ರದೇಶದಲ್ಲಿ ಕಾಣಸಿಗುತ್ತವೆ. ಇಂತಹ ಸಂಕೀರ್ಣಗಳನ್ನು ಗ್ರಹಗತಿ ಆಧಾರದ ಮೇಲೆ ನಿರ್ಮಿಸಲಾಗುತ್ತದೆ.ಸೌರಮಾನ ಘಟನೆಗಳು ಮೂಲವಾಗಿರುತ್ತವೆ.ಸಂಕ್ರಾಂತಿಯ ದಿನಗಳ ಆಧಾರದಲ್ಲಿ ಇದನ್ನು ಮಾಡಲಾಗುತ್ತದೆ,ಸೂರ್ಯ ಚಲನೆ ಗತಿಗಳ ಪರಿಶೀಲನೆ ಮೂಲಕ ಕಟ್ಟಡ ನಿರ್ಮಾಣ ಕಾರ್ಯ ಕೈಗೊಂಡಿದ್ದು ಅವುಗಳ ಸೂಕ್ಷ್ಮ ವೀಕ್ಷಕರಗಳಿಗೆ ಅನುವು ಮಾಡಿದ್ದು ವಿಶೇಷವಾಗಿದೆ. ಇಂತಹ ಕಟ್ಟಡಗಳು ಸಾಮಾನ್ಯವಾಗಿ ಚಿತ್ರಕಲೆಗಳ ವಿಶಿಷ್ಟತೆಯು ಅದರ ಗಾರೆ ಪರ್ಯಾಯಗಳ ಮೂಲಕ ವಾಸ್ತು ಮತ್ತು ಖಗೋಳಶಾಸ್ತ್ರೀಯವಾಗಿ ನಿರ್ಮಿತಗೊಂಡಿರುತ್ತವೆ.ಇವು ಮಾಯಾ ಪುರಾಣದಲ್ಲಿಯೂ ದೊರೆಯುತ್ತವೆ. ಈ ಕಟ್ಟಡಗಳ ಸಂಕೀರ್ಣಗಳನ್ನು ಗ್ರುಪ್ ಈ ಎಂದು ಉಕ್ಸಾಕ್ಟುನ್ ನಲ್ಲಿ ಬಳಸಲಾಗುತ್ತದೆ.ಇವುಗಳನ್ನು ಮೊದಲ ಬಾರಿಗೆ ಮೆಸೊಅಮೆರಿಕಾದಲ್ಲಿ ದಾಖಲಿಸಲಾಗಿದೆ.
ಪಲೆಂಕ್ವುನಲ್ಲಿನ ಕ್ರಾಸ್ ದೇವಾಲಯ,ಎತ್ತರ ನಿಲುವಿನ ಸುಂದರ ವಾಸ್ತುಶಿಲ್ಪದ ಮಾಳಿಗೆ ಮೇಲೆ ಇರುವ ಕಮಾನು
  • ಪಿರಾಮಿಡ್ ಗಳು ಮತ್ತು ದೇವಾಲಯಗಳು . ಹಲವು ಮಹತ್ವದ ಬಹಳಷ್ಟು ದೇವಾಲಯಗಳಿಗೆ ಪಿರಾಮಿಡ್ ಗಳ ಮೇಲ್ಭಾಗದಲ್ಲಿ ಜಾಗ ನೀಡಲಾಗಿದೆ.ಮಾಯಾ ಪಿರಾಮಿಡ್ ಗಳಿಗೆ ಇದರ ಪ್ರಕಾರ ಸ್ವರ್ಗಕ್ಕೆ ಅತಿ ಹತ್ತಿರ ಜಾಗೆ ಎನ್ನಲಾಗಿದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಪಿರಾಮಿಡ್ ಗಳು ವಿಸ್ತೃತ ದೇವಾಲಯ ಮತ್ತು ಧಾರ್ಮಿಕ ಕಟ್ಟಡಗಳಿಗೆ ಸ್ಥಳಾವಕಾಶ ನೀಡಿದ್ದು ಕಾಣುತ್ತದೆ.ಇವುಗಳ ಗುಂಬಜಗಳಲ್ಲಿ ಸಾಮಾನ್ಯವಾಗಿ ಹೂಳುವ ಜಾಗೆ ಅಥವಾ ಸಮಾಧಿ ಸ್ಥಳವೆನ್ನುವ ವಾಡಿಕೆಯೂ ಇದೆ. ಪಿರಾಮಿಡ್ಸ್ ಗಳ ಮೇಲ್ಭಾಗದಲ್ಲಿರುವ ಕೆಲವು ಇನ್ನೂರು ಅಡಿ ಎತ್ತರದ ನಿರ್ಮಾಣಗಳು ಉದಾಹರಣೆಗೆ El ಮಿರಾಡೊರ್ ಇಲ್ಲಿ ದೇವಾಲಯಗಳ ನಿರ್ಮಾಣವೂ ಇದೆ. ಸಾಮಾನ್ಯವಾಗಿ ಮೇಲ್ಭಾಗದಲ್ಲಿರುವ ಈ ದೇವಾಲಯಗಳು ಮೇಲ್ಛಾವಣಿ ಅಟ್ಟಣ ಅಥವಾ ಆಸರೆಯ ಭಿತ್ತಿಯನ್ನು ಬಳಸಲಾಗಿರುವ ಜಾಗೆಯನ್ನು ಧಾರ್ಮಿಕ ವಿಷಯಗಳ ತಿಳಿಸಲು ಬಳಸುವ ಕಟ್ಟಡವಾಗಿದ್ದವು. ಇವುಗಳೇ ಮಾಯಾ ನಾಗರಿಕತೆಯನ್ನು ಪ್ರತಿಬಿಂಬಿಸುವ ರಚನೆಗಳಾಗಿದ್ದು ಸುತ್ತಲೂ ಅರಣ್ಯ ಪ್ರದೇಶ ಹಾಗು ಎತ್ತರದ ಕಟ್ಟಡಗಳು ಆಗಿನ ವಿಶೇಷತೆಗಳಾಗಿವೆ.ದೇವಾಲಯದ ಮೇಲ್ಛಾವಣಿಗಳು ದೂರದಿಂದ ವೀಕ್ಷಿಸುವವರಿಗೂ ಅದರ ಅಂದವನ್ನು ತೋರಿಸುವಂತಿವೆ.ನಿಯಮಾನುಸಾರ ನಿರ್ಮಿತ ಇವುಗಳಲ್ಲಿ ವಿವಿಧ ಆಕಾರ-ರೂಪಗಳಿವೆ.
  • ವೀಕ್ಷಣಾಗವಾಕ್ಷಗಳು . ಮಾಯಾ ಕಾಲದವರು ಖಗೋಳ ವಿಜ್ಞಾನದ ಬಗ್ಗೆ ಹೆಚ್ಚು ಕುತೂಹಲಿಗಳಾಗಿದ್ದರು.ಗ್ರಹಗತಿ ಮತ್ತು ಭವಿಷ್ಯಶಾಸ್ತ್ರದ ಬಗೆಗೂ, ಅದರಲ್ಲಿಯೂ ಚಂದ್ರ ಮತ್ತು ಪ್ರೇಮದ ಅಧಿದೇವತೆ ಶುಕ್ರದ ಬಗ್ಗೆ ಹೆಚ್ಚು ಅಧ್ಯಯನಶೀಲತೆ ತೋರಿದ್ದಾರೆ. ಹಲವು ದೇವಾಲಯಗಳಲ್ಲಿ ದ್ವಾರಗಳನ್ನು ನಿರ್ಮಿಸಿ ಅವು ಸ್ವರ್ಗದ ದೇವಲೋಕದ ಬಾಗಿಲುಗಳ ಲಕ್ಷಣ ತೋರಿದ್ದನ್ನು ವಿವರಿಸಲಾಗಿದೆ. ದುಂಡಗಿನ ಆಕಾರದ ದೇವಾಲಯಗಳು ಸಾಮಾನ್ಯವಾಗಿ ಕುಕುಲ್ಕಾನ್ ನನ್ನು ಅವಲೋಕನಕ್ಕಾಗಿ ಮೀಸಲಿರಿಸಲಾಗುತ್ತಿತ್ತು.ಇವುಗಳನ್ನು ಸಾಮಾನ್ಯವಾಗಿ"ವೀಕ್ಷಣಾಗಾರಗಳು" ಎನ್ನಲಾಗುತ್ತಿತ್ತೆಂದು ಆಧುನಿಕ ಪಳೆಯುಳಿಕೆಯ ಮಾರ್ಗದರ್ಶಿಗಳು ಇಂದಿಗೂ ಅದರ ಬಗೆ ವಿವರಿಸುತ್ತಾರೆ.ಆದರೆ ಕೆಲವು ದೇವಾಲಯಗಳನ್ನು ಇದಕ್ಕಾಗಿಯೇ ಬಳಸಲಾಗಿದೆ ಎಂಬುದನ್ನು ಪೂರ್ಣವಾಗಿ ನಂಬಲಾಗದು.ದೇವಾಲಯಗಳಲ್ಲಿ ಕೆಲವನ್ನು ಅವಲೋಕನಕ್ಕಾಗಿಯೂ ಬಳಸಲಾಗಿದೆ.
  • ಬಾಲ್ ಕೋರ್ಟ್ಸ್ .(ಪ್ರಾಂಗಣದ ಆಕಾರಗಳು) ಇವುಗಳು ಮೆಸೊಅಮೆರಿಕನ್ ಜೀವನ ಶೈಲಿಯ ಒಂದು ಅವಿಭಾಜ್ಯ ಅಂಗವಾಗಿದ್ದವು.ಧಾರ್ಮಿಕ ಕಾರ್ಯಕ್ರಮ ದೇವಾಲಯದ ಆಚರಣೆಗಳಿಗಾಗಿ ಈ ಬಾಲ್ ಕೋರ್ಟ್ಸ್ ಗಳ ನಿರ್ಮಾಣ ಮಾಡಲಾಗಿತ್ತು.ಮಾಯಾ ಯುಗದಾದ್ಯಂತ ಇವುಗಳ ನಿರ್ಮಾಣ ಮಾಡಲಾಗಿದೆ.ಅದಲ್ಲದೇ ಭವ್ಯವಾದ ರೀತಿಯಲ್ಲಿ ಇವುಗಳ ರಚನೆ ಇದೆ. ಎರಡೂ ಕಡೆಗೂ ಮೆಟ್ಟಿಲುಗಳುಳ್ಳ ದ್ವಾರಗಳ ಸಣ್ಣ ದೇವಾಲಯಗಳು ಅಥವಾ ವೇದಿಕೆಗಳನ್ನು ರಚಿಸಲಾಗಿತ್ತು.ಇದರ ಆಕಾರವು ಇಂಗ್ಲಿಷ್ 'ಐ'ನ ರೂಪ ಹೊಂದಿತ್ತು.ಎಲ್ಲೆಡೆಗೂ ಕಾಣಸಿಗುತ್ತಿತ್ತಾದರೂ ಮಾಯಾ ನಗರಗಳಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸುತ್ತಿತ್ತು.

ಬರೆಹ ಮತ್ತು ಸಾಹಿತ್ಯ[ಬದಲಾಯಿಸಿ]

ಬರವಣಿಗೆಯ ಪದ್ಧತಿ[ಬದಲಾಯಿಸಿ]

ಮಾಯಾ ಯುಗದ ಬರವಣಿಗೆ ವಿಧಾನವು,ಇದು ವಿಶೇಷವಾಗಿ ಚಿತ್ರಲಿಪಿ ಯಾಗಿತ್ತು. (ಸಾಮಾನ್ಯವಾಗಿ ಇದನ್ನು ಪುರಾತನ ಈಜಿಪ್ತ್ ನ ಬರೆಹ ಶೈಲಿ ಎನ್ನಲಾಗುತ್ತಿತ್ತು)ಇದು ಅಕ್ಷರ ಲಿಪಿಯ ಸಂಕೇತಗಳನ್ನು ಮತ್ತು ವರ್ಣಮಾಲೆಗಳನ್ನು ಒಳಗೊಂಡಿತ್ತು. ಇದನ್ನು ಬಹಳಷ್ಟು ಸಾರಿ ಸಾಂಕೇತಿಕ ಲಿಪಿ ಅಥವಾ (ಹೆಚ್ಚು ನಿಖರವಾಗಿ)ಒಂದು ಚಿತ್ರಸಂಕೇತ ದ ಬರಹದ ಶೈಲಿ ಎನ್ನಲಾಗುತ್ತಿತ್ತು.ಇದರಲ್ಲಿ ಅಕ್ಷರ ಮಾಲೆಯ ಚಿತ್ರ ಸಂಜ್ಞೆಗಳ ಪಾತ್ರ ಮಹತ್ವದ್ದಾಗಿತ್ತು. ಆಗಿನ ಪೂರ್ವ-ಕೊಲಂಬಿಯನ್ ನಿವ್ ವರ್ಲ್ಡ್ ನ ಏಕ ಮಾತ್ರ ಬರೆಹದ ವಿಧಾನವಾಗಿತ್ತು.ಇದು ಮಾತನಾಡುವ ಭಾಷೆಯನ್ನು ಸಹ ಸಾಂಕೇತಿಸುತ್ತಿತ್ತು. ಒಟ್ಟಾರೆ ಈ ಲಿಪಿಯು ಸುಮಾರು ಸಾವಿರಕ್ಕಿಂತ ಹೆಚ್ಚು ಶೈಲಿಯ ಉಬ್ಬುಕೆತ್ತನೆಗಳನ್ನು ಹೊಂದಿತ್ತು.ಅದೇ ವಿಧಾನದ ವಾಸ್ತು ಶೈಲಿಗಳನ್ನು ಇದರಲ್ಲಿ ಅಳವಡಿಸಲಾಗಿದೆ.ಕೆಲವು ವ್ಯತ್ಯಾಸಗಳಲ್ಲಿ ಇವು ವಿರಳವಾಗಿ ಕಾಣಸಿಗುತ್ತವೆ.ಅಥವಾ ಇವನ್ನು ಸೀಮಿತ ಸ್ಥಳೀಯತೆಯಲ್ಲಿ ಕಾಣಬಹುದಾಗಿತ್ತು. ಆಗ ಒಂದೇ ವೇಳೆಗೆ ಸುಮಾರು 500 ಕ್ಕಿಂತ ಹೆಚ್ಚು ವಿಧಾನಗಳು ಬರೆಹದಲ್ಲಿದ್ದವು.ಇದರಲ್ಲಿ ಸುಮಾರು 200 ವಿಧಾನಗಳು ಉಬ್ಬುಶಿಲೆಯವಾಗಿದ್ದು (ಇದರಲ್ಲಿ ವ್ಯತ್ಯಾಸಗಳಿದ್ದವು)ಇವುಗಳಲ್ಲಿ ಚಿತ್ರಲಿಪಿಯ ಅರ್ಥ ವಿವರಣೆಗಳೂ ಇದ್ದವು.

ಅತ್ಯಂತ ಆರಂಭಿಕ ಶೈಲಿಯೆಂದರೆ ಮಾಯಾ ಬರೆಹದ ಲಿಪಿಗಳನ್ನು ನಾವು 200–300 BC.ಗಳಲ್ಲಿ ಕಾಣಬಹುದಾಗಿದೆ.[೧೮] ಆದಾಗ್ಯೂ ಈ ಶೈಲಿಗಳು ಇನ್ನಿತರ ಪ್ರಭಾವಗಳಿಗೂ ಒಳಗಾಗಿದ್ದವು,ಇವುಗಳೇ ಹಲವು ವಿಧಗಳಾಗಿ ಮೆಸೊಅಮೆರಿಕಾದಲ್ಲಿ ಅಭಿವೃದ್ಧಿ ಕಂಡವು.ಇದರಲ್ಲಿ ಪ್ರಮುಖ ಪದ್ದತಿ ಎಂದರೆ ಜಪೊಟೆಕ್ಸ್ ಮತ್ತು (2006 ರ ಸಂಶೋಧನೆಗಳ ಪ್ರಕಟಣೆಗಳಲ್ಲಿ ಅಂದರೆ ಕ್ಯಾಸ್ಕಾಜಲ್ ಬ್ಲಾಕ್ ಮತ್ತು ಒಲ್ಮೆಕ್ ನಲ್ಲಿ ಪತ್ತೆಹಚ್ಚಿದ ಕೆಲವು ವಿವರಗಳು ಲಭ್ಯವಾಗಿವೆ.[೧೯] ಆದರೆ ಮಾಯಾ ಯುಗದ ಪೂರ್ವದಲ್ಲಿ ಇದ್ದ ಬರೆಹ ಶೈಲಿಯನ್ನು "ಎಪಿ-ಒಲ್ಮಿಕ್ ಲಿಪಿ"(ಒಲ್ಮಿಕ್ ನಂತರದ್ದು)ಎನ್ನಲಾಗಿದೆ.ಕೆಲವು ಸಂಶೋಧಕರ ಪ್ರಕಾರ ಇದು ಒಲ್ಮೆಕ್ ಮತ್ತು ಮಾಯಾ ಬರೆಹದ ಮಧ್ಯದ ಶೈಲಿ ಇದಾಗಿತ್ತೆಂದು ಹೇಳುತ್ತಾರೆ.ಆದರೆ ಇದರ ಬಗ್ಗೆ ಇನ್ನೂ ವಿಷಯದ ಸ್ಪಷ್ಟತೆ ಅಥವಾ ಅಂತಿಮ ತೀರ್ಮಾನ ಕಾಣಿಸಿಲ್ಲ. ಹೀಗೆ 5 ಜನವರಿ,2006 ರಲ್ಲಿ ನ್ಯಾಶನಲ್ ಜಿಯೊಗ್ರಾಫಿಕ್ ಮಾಯಾ ಬರೆಹಗಳ ಬಗ್ಗೆ ದೊರೆತ ಸಾಕ್ಷಿಗಳನ್ನು ಪ್ರಕಟಿಸಿತ್ತು.ಸಾಮಾನ್ಯವಾಗಿ ಇದು 400BC ಗೆ ಸೇರಿದ್ದೆಂದೂ ಹೇಳಲಾಗಿದೆ.ಮೆಸೊಅಮೆರಿಕನ್ ಬರೆಹದ ಶೈಲಿಯು ಒಮ್ಲೆಕ್ ಗಿಂತ ಹೆಚ್ಚಿನ ಪ್ರಚಲಿತೆ ಕಂಡ ಬಗೆಗೂ ಪುರಾವೆಗಳು ಸಿಕ್ಕಿವೆ.[೨೦] ನಂತರದ ಶತಮಾನಗಳಲ್ಲಿ ಮಾಯಾ ತನ್ನದೇ ಆದ ವಿಶಿಷ್ಟ ಬರೆಹ ಶೈಲಿಗಳನ್ನು ಅಭಿವೃದ್ದಿಪಡಿಸಿಕೊಂಡಿತ್ತು.ಇನ್ನೂ ಕೂಡಾ ಅಮೆರಿಕಾದಲ್ಲಿ ದೊರೆತ ಈ ಲಿಪಿಗಳು ನಿಗೂಢ ಮತ್ತು ಸಂಕೀರ್ಣತೆಗಳನ್ನೊಳಗೊಂಡಿವೆ.

ಅದರ ಚಾಲ್ತಿಯ ನಂತರ ಮಾಯಾ ಲಿಪಿ ಬರೆಹಗಳೇ ಚಲಾವಣೆಯಲ್ಲಿದ್ದವು.ಯುರೊಪಿಯನ್ ರು ಬರುವವರೆಗೂ ಮಾಯಾ ಕ್ಲಾಸಿಕಲ್ ಕಾಲಾವಧಿಯು (c. 200 ದಿಂದ900)ಇದನ್ನೇ ಅವಲಂಬಿಸಿತ್ತು. ಈ ಕಾಲಾವಧಿ ಅನಂತರ ಹಲವು ಮಾಯಾ ಕೇಂದ್ರಗಳು ಕುಸಿತ ಕಂಡವು.(ಅಥವಾ ಪೂರ್ಣವಾಗಿ ರದ್ದಾದವು)ಮಾಯಾ ಬರೆಹಗಳ ಕೌಶಲ್ಯ ಮತ್ತು ಜ್ಞಾನವು ಎಲ್ಲೆಡೆಗೂ ಕಾಣುತ್ತಿತ್ತು.ಆರಂಭಿಕ ಸ್ಪ್ಯಾನಿಶ್ ದಾಳಿಕೋರರು ಸಹ ಈ ಶೈಲಿಯಲ್ಲಿ ಬರೆಯಲು ಮತ್ತು ಓದಲು ಕಲಿತಿದ್ದರು. ದುರದೃಷ್ಟಾವಶಾತ್ ಸ್ಪ್ಯಾನಿಶ್ ಗಳು ಈ ವಿಷಯದಲ್ಲಿ ಅತ್ಯಂತ ಕಡಿಮೆ ಆಸಕ್ತಿ ತೋರಿಸಿದರು.ಮಾಯಾ ಸಮಾಜದ ಮೇಲೆ ಈ ದಾಳಿಗಳ ಪರಿಣಾಮ ಉಂಟಾಗಿತ್ತು.ಬರಬರುತ್ತಾ ಅದು ಕಳೆದೂ ಹೋಯಿತು.ಇದು ಕೆಲವೇ ಕೆಲವು ಪೀಳಿಗೆಗಳ ಮೇಲೆ ಉಂಟಾಗಿತ್ತು.

ಅಂದಾಜಿನ ಪ್ರಕಾರ ಸುಮಾರು 10,000 ವ್ಯಕ್ತಿಗತ ಪಠ್ಯಗಳನ್ನು ಪತ್ತೆ ಹಚ್ಚಿದ್ದಾರೆ.ಇವುಗಳನ್ನು ಹೆಚ್ಚಾಗಿ ಕಲ್ಲಿನ ಸ್ಮಾರಕಗಳಲ್ಲಿ ಮೇಲ್ಛಾವಣಿಗಳು ಮೆಟ್ಟಿಲುಗಳ ಗೋಡೆ ಮತ್ತು ಪಿಂಗಾಣಿ ಪಾತ್ರೆ ನಿರ್ಮಾಣದಲ್ಲಿ ಕೆತ್ತನೆಗಳು ದೊರಕಿವೆ. ಮಾಯಾ ಯುಗದಲ್ಲಿ ಮರದಿಂದ ನಿರ್ಮಿತ ಕಾಗದಗಳ ಮೇಲೆ ಮುದ್ರಣವನ್ನು ಸಹ ಮಾಡಲಾಗಿದ್ದು ಕಾಣಸಿಗುತ್ತದೆ.ಅಂಜೂರು ಮರದ ತೊಗಟೆ ಉದಾಹರಣೆಗೆ ಫಿಕಸ್ ಕೊಟಿನಿಫೊಲಿಯಾ ಮತ್ತು ಫಿಕಸ್ ಪಾಡಿಫೊಲಿಯಾ ಇವು ಮರದ ತೊಗಟೆಗಳನ್ನು ಇದಕ್ಕಾಗಿ ಬಳಸಲಾಗುತ್ತಿತ್ತು.[೨೧] ಈ ತೆರನಾದ ಕಾಗದ ಮೆಸೊಅಮೆರಿಕಾದಾದ್ಯಂತ ಆಗ ಪ್ರಸಿದ್ದವಾಗಿತ್ತು.ಇದನ್ನು ನಾಹೌತಲ್-ಅಂದರೆ ಅಮ್ಟಲ್ ಎಂಬ ಭಾಷೆಯೂ ಆಗ ಆಚರಣೆಯಲ್ಲಿತ್ತು.ಒಂದು ದೊಡ್ಡದಾದ ಹಾಳೆ ಇದರೊಳಗಿತ್ತು.ಎರಡರ ಅಗಲ ಒಂದೇ ಆಗಿರುವಂತೆ ಇದನ್ನು ವಿಭಾಗಿಸಿಬಹುದಿತ್ತು.ಇದನ್ನು ಎರಡೂ ಬದಿಯ ಶೈಲಿಯಲ್ಲಿ ಹಸ್ತಪ್ರತಿ ತಯಾರಿಸಬಹುದಿತ್ತು.ಅಂದರೆ ಎರಡೂ ಕಡೆ ಬರೆಯಲಾಗುತ್ತಿತ್ತು. ಇವುಗಳ ಅನಂತರ ವಿಜಯಿಯಾದ ಸ್ಪ್ಯಾನಿಶ್ ಪ್ರಭುತ್ವದ ಪೂಜಾರಿಗಳು ಹೊಟ್ಟೆಯುರಿಯಿಂದ ಈ ಬರೆಹಗಳನ್ನು ಸುಟ್ಟು ಹಾಕಿದರು.ಅದರಲ್ಲಿ ಪ್ರಮುಖವಾಗಿ ಬಿಶಪ್ ದೆ ಲಾಂಡಾ ಈ ಕೃತ್ಯವೆಸಗಿದರೆನ್ನಲಾಗಿದೆ. ಸದ್ಯ ಮಾಯಾ ಸಂಕೇತಿಕರಣಗಳಲ್ಲಿ ಭಾಷೆಗಳಲ್ಲಿ ಉದಾಹರಿಸಲು ಕೇವಲ ಮೂರು ಮಾತ್ರ ಉಳಿದಿವೆ ಎನ್ನಲಾಗಿದೆ. ಇವುಗಳನ್ನೀಗ ಮಾಡ್ರಿಡ್,ಡ್ರೆಸ್ಡೆನ್ ಮತ್ತು ಪಾರಿಸ್ ಕೊಡೀಸ್ ಗಳೆನ್ನಲಾಗಿದೆ. ನಾಲ್ಕನೆಯ ಸಂಕೇತ ಭಾಷೆಯ ಗ್ರೊಲಿಯ ರ್ ಕೊಡೆಕ್ಸ್ ನ ನಾಲ್ಕನೆಯದರಲ್ಲಿ ಕೆಲವು ಪುಟಗಳು ಮಾತ್ರ ಉಳಿದಿವೆ.ಅವುಗಳ ಅಸ್ತಿತ್ವದ ಬಗ್ಗೆ ವಿವಾದಗಳಿದ್ದರೂ ಖಚಿತತೆ ಇದೆ ಎನ್ನಲಾಗಿದೆ. ಮಾಯಾ ನಿವೇಶಗಳ ಮೇಲೆ ಪುರಾತತ್ವ ನಡೆಸಿದ ತನಿಖೆ ಪ್ರಕಾರ ಕೆಲವು ಪ್ಲಾಸ್ಟರ್ ಮತ್ತು ಚಿತ್ರ ಕಲೆಯ ಕುರುಹುಗಳು ದೊರಕಿವೆ.ಆದರೆ ಈ ಅವಶೇಷಗಳಲ್ಲಿ ಬಹಳಷ್ಟು ಅವನತಿಯಾಗಿ ಹಾಳಾದ ಸ್ಥಿತಿಯಲ್ಲಿವೆ.ಜೈವಿಕ ವಸ್ತುಗಳ ಬಳಸಿ ಮಾಡಿದ ಲೇಖನ ಸಾಮಗ್ರಿಗಳು ತೀರ ಹಾಳಾಗಿವೆ.

ಸದ್ಯ ಗತಿಸಿದ ಮತ್ತು ಕಳೆದು ಹೋದ ಮಾಯಾಯುಗದ ಜ್ಞಾನ ಭಂಡಾರವು ಬರವಣಿಗೆ ಶೈಲಿಯಲ್ಲಿ ದೊರೆಯುವುದು ದುರ್ಲಭ ಮತ್ತು ಶ್ರಮದಾಯಕ ಪ್ರಕ್ರಿಯೆಯಾಗಿದೆ. ಕೆಲವು ಅಂಶಗಳನ್ನು ಮೊದಲ ಬಾರಿಗೆ 19 ನೆಯ ಮತ್ತು 20 ನೆಯ ಶತಮಾನದಲ್ಲಿ ಹುಡುಕಲು ಯತ್ನಿಸಿದಾಗ ಅದರಲ್ಲೂ ಮಾಯಾ ಕ್ಯಾಲಂಡರ್ ಮತ್ತು ಖಗೋಳನ ಅಂಕಿಸಂಖ್ಯೆಗಳು ದೊರಕಿದ್ದು ಕೂಡಾ ಸದ್ಯದ ಪತ್ತೆಯಾದ ಅಂಶಗಳಾಗಿವೆ. ಅಂದರೆ 1950 ರಿಂದ 1970 ರ ವರೆಗೆ ಪ್ರಮುಖ ವಸ್ತುಗಳು ಪತ್ತೆಯಾದವು.ಅದರ ನಂತರ ಹುಡುಕಾಟ ತೀವ್ರವಾಯಿತು. ವಿದ್ವಾಂಸರು 20ನೆಯ ಶತಮಾನದ ನಂತರದ ಅವಧಿಯಲ್ಲಿ ಪ್ರಮುಖ ಮಾಯಾ ಪಠ್ಯವಿಷಯಗಳನ್ನು ಓದಲು ಶಕ್ತರಾದರು.ಇನ್ನೂ ಹೆಚ್ಚಿನ ಅಧ್ಯಯನಕ್ಕಾಗಿ ಶ್ರಮ ಹಾಕಲಾಗುತ್ತಿದೆ.

ಮಾಯಾ ಬರೆಹಗಳ ಬಗ್ಗೆ ಯಾಲೆ ಯುನ್ವರ್ಸಿಟಿಯ ಪ್ರಖ್ಯಾತ ಲಿಪಿ ಮತ್ತು ಭಾಷಾವಾರು ತಜ್ಞ ಮೈಕೆಲ್ ಡಿ,ಕೊಯ್ ಹೀಗೆ ಹೇಳಿದ್ದಾರೆ:

"ನಮ್ಮ ತಿಳಿವಿಗೆ ನೆಲುಕುವಂತೆ ಹೇಳುವುದಾದರೆ ಮಾಯಾ ಯುಗದ ಚಿತ್ರಲೇಖನ ಲಿಪಿಯ ಕೆಲವೇ ಕೆಲವು ಭಾಗ ಉಳಿದುಕೊಂಡಿವೆ.ಪೂರ್ಣಪ್ರಮಾಣದ ತಿಳಿವಳಿಕೆಗಾಗಿ ಸಾವಿರಾರು ಪುಸ್ತಕ ಪಠ್ಯ ಉಳಿಯಬೇಕಾಗಿತ್ತು.ಆದರೆ ಹೆಚ್ಚಿನ ಕಲಿಕೆಗೆ ಆಸಕ್ತರಿಗೆ ನಾಲ್ಕೇ ನಾಲ್ಕು ವಿಭಾಗಗಳು ದೊರಕಿವೆ.ಆಧುನಿಕ ಯುಗದಲ್ಲಿ ಈ ತೆರನಾದ ವಿಷಯಗಳು ಸಾಮಾನ್ಯರಿಗೆ ನಿಲುಕದ್ದಾಗಿವೆ.(ಇದರಲ್ಲಿಯೂ ನಾಲ್ಕು ಪ್ರಾರ್ಥನಾ ಪುಸ್ತಕಗಳಾದ 'ಪಿಲಿಗ್ರಿಮ್ಸ್ ಪ್ರೊಗ್ರೆಸ್)' ನಲ್ಲಿ ಮಾತ್ರ ದೊರಕಿದೆ." (ಮೈಕೆಲ್ ಡಿ. ಕೊಯ್, ದಿ ಮಾಯಾ , ಲಂಡನ್: ಥೇಮ್ಸ್ ಅಂಡ್ ಹಡ್ಸನ್, 4ನೆಯ ಸಂ., 1987, ಪು. 161.)

ಬಹಳಷ್ಟು ಪೂರ್ವ-ಕೊಲಂಬಿಯನ್ ಮಾಯಾ ಬರವಣಿಗೆಗಳು ಶಾಸನ ಕೆತ್ತನೆ ಮತ್ತು ಉಬ್ಬುಶಿಲೆಗಳ ಮೇಲಿಂದ ಪಡೆಯಲಾಗಿದೆ.ಇದರಲ್ಲಿಯೂ ಬಹಳಷ್ಟನ್ನು ಸ್ಪ್ಯಾನಿಶ್ ರು ನಿರ್ಲಕ್ಷಕ್ಕೊಳಪಡಿಸಿದ್ದಾರೆ. ಈಗ ದೊರೆತ ಶಿಲಾಬರೆಹಗಳು ಮತ್ತು ಕೆತ್ತನಗಳು ಆಗಿನ ರಾಜ್ಯಗಳು ಮತ್ತು ಆಳರಸರ ಯುದ್ಧಗಳ ಬಗ್ಗೆ ವಿವರ ನೀಡುತ್ತವೆ. ಇನ್ನೂ ಕೆಲವು ಮಾಯಾ ಯುಗದ ಮಹಿಳೆಯರ ಬಗ್ಗೆ ಕೂಡ ಅವರ ಬದುಕಿನ ವಿವರ ನೀಡುತ್ತವೆ. ಬಹಳಷ್ಟು ಅವಶೇಷಗಳು ಚಿತ್ರಲಿಪಿಲೇಖನಗಳನ್ನು ನಾವು ಅಂತಿಮ ಕ್ರಿಯಾವಿಧಿಯ ಮಡಿಕೆಗಳ ಮೇಲೆ ಕಾಣಬಹುದಾಗಿದೆ.ಇದು ಮಾಯಾದ ನಂತರದ ಬದುಕನ್ನು ವಿವರಿಸುತ್ತದೆ.

ಬರವಣಿಗೆಯ ಸಲಕರಣೆಗಳು[ಬದಲಾಯಿಸಿ]

ಪುರಾತತ್ವ ವಿಭಾಗ ಇದರ ಬಗ್ಗೆ ವಿವರ ಕಲೆಹಾಕದಿದ್ದರೂ ಮಾಯಾ ಕಲೆ ತೋರುವಂತೆ ಬ್ರಶ್ ಗಳು ಮತ್ತು ಪ್ರಾಣಿಗಳ ಕೂದಲನ್ನು ಬಳಸಿ ಬಣ್ಣ ಬಳಿಯುವ ಸಾಧನವಾಗಿಸಲಾಗುತ್ತಿತ್ತು.ಅಲ್ಲದೇ ಹಕ್ಕಿಯ ಪುಕ್ಕುಗಳನ್ನು ಬಳಸಿದ್ದನ್ನು ಕಾಣಬಹುದು. ಕೊಡೆಕ್ಸ್-ಶೈಲಿಯ ಬರವಣಿಗೆಯನ್ನು ಕಪ್ಪು ಮಸಿಯ ಕೆಂಪು ಗೆರೆ ಬಳಸಿ ಮಾಡಲಾಗುತ್ತಿತ್ತು.ಇದು ಮಾಯಾ ಪ್ರದೇಶವನ್ನು "ಕೆಂಪು ಮತ್ತು ಕಪ್ಪು ಪ್ರದೇಶ"ಎಂದು ಕರೆಯಲು ಈ ವರ್ಣದ ಮಿಶ್ರಣ ಬಳಸಲಾಗಿತ್ತು.

ಬರೆಹಗಳು ಮತ್ತು ಸಾಹಿತ್ಯ[ಬದಲಾಯಿಸಿ]

ಮಾಯಾ ರಾಜ್ಯದ ಆಸ್ಥಾನಗಳಲ್ಲಿ ಈ ಬರೆಹಗಳ ಪ್ರಾಮುಖ್ಯತೆ ಇತ್ತು. ಮಾಯಾ ಕಲೆಗಳು ಆಳರಸರ ಸಿಲಿಕಿದಂತಾಗಿತ್ತು.ಅವರು ಕನಿಷ್ಟಪಕ್ಷ ಬರೆಯಲು ಸಮರ್ಥರಾಗಿದ್ದರೆಂಬುದು ತಿಳಿಯುತ್ತದೆ.ತಮ್ಮ ಉಡುಪುಗಳಲ್ಲಿ ಅವರು ಪೆನ್ ಇಡುವ ಜೇಬುಗಳನ್ನು ಇಟ್ಟಿದ್ದರು. ಹೆಚ್ಚೆಂದರೆ ಹಲವು ಆಳರಸರು ಬರವಣಿಗಾಗಿ ಅಪರೂಪದ ಸಲಕರಣೆಗಳನ್ನು ಹೊಂದಿದ್ದರು.ಉದಾಹರಣೆಗೆ ಸಿಂಪಿಯ ಶೆಲ್ ಅಥವಾ ಮಣ್ಣಿನ ಮಸಿ ಕುಡಿಕೆಗಳಿದ್ದವು. ಎಲ್ಲಾ ಸಂಖ್ಯೆಗಳು ಅಂಕಗಣಿತದ ಸೂತ್ರಗಳು ಪೂರ್ಣ ಪ್ರಮಾಣದ ಭಾಷಾ ಸಂಕೇತಗಳ ಮತ್ತು ಶತಮ್ ಬಳಸಿ ಬರೆಯಲಾಗುತ್ತಿತ್ತು.ಆದರೆ ಸಾಹಿತ್ಯ ಮಾತ್ರ ದೊಡ್ಡ ಗಣ್ಯರ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಇದರ ರೇಖಾಚಿತ್ರಣವನ್ನು ಹಲವೆಡೆ ಗುರುತಿಸಲಾಗಿಲ್ಲ.ಅದರಲ್ಲೂ ಇಟ್ಟಿಗೆಗಳ ಮೇಲ್ಭಾಗ ಇನ್ನಿತರ ಆಭರಣದ ಅಲಂಕಾರಿಕಗಳಲ್ಲಿ ಇದನ್ನು ಕೆತ್ತನೆ ಬರಹದ ಮೇಲೆ ಈ ವಿಧಾನ ಬಳಕೆ ಮಾಡಲಾಗುತ್ತಿತ್ತು.

ಗಣಿತ[ಬದಲಾಯಿಸಿ]

ಮಾಯಾ ಅಂಕಿ-ಸಂಖ್ಯೆಗಳು

ಸಾಮಾನ್ಯವಾದ ಮೆಸೊಅಮೆರಿಕನ್ ನಾಗರಿಕತೆಗಳು ಮಾಯಾ ಸಂಪ್ರದಾಯಗಳಲ್ಲಿ ಮೂಲಾಧಾರ 20 (ಇಪ್ಪತ್ತರ ಎಣಿಕೆ) ಮತ್ತು 5 ಅಂಕಿಯ ವಿಧಾನ (ನೋಡಿ ಮಾಯಾ ಅಂಕಿಗಳನ್ನು)ಬಳಸಲಾಗುತ್ತಿತ್ತು. ಅದಲ್ಲದೇ ಪೂರ್ವ ಕ್ಲಾಸಿಕ್ ಯುಗದಲ್ಲಿ ಮಾಯಾ ಮತ್ತು ಅದರ ನೆರೆಯವರು ಸ್ವತಂತ್ರವಾಗಿ ಸೊನ್ನೆ ಯನ್ನು 36BCಯಲ್ಲಿ ಬಳಸಿದ್ದರು.ಲಿಪಿ ಬರಹಗಳಲ್ಲಿ ಸಾಂದರ್ಭಿಕವಾಗಿ ನೂರುಗಳು ದಶಲಕ್ಷಗಳು ಮತ್ತು ದಿನಾಂಕಗಳು ಇದರಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗಿದೆ.ಇವುಗಳನ್ನು ಪ್ರತಿನಿಧಿಸಲು ಅಲ್ಲಿ ರೇಖೆಗಳನ್ನು ಬಳಸಲಾಗುತ್ತದೆ. ಇಂತಹವುಗಳು ನಿಖರವಾಗಿ ಖಗೋಳದ ಜ್ಯೋತಿಷ್ಯಾಸ್ತ್ರವನ್ನು ಹೇಳಲಾಗುತ್ತಿತ್ತು.ಚಂದ್ರ ಮತ್ತು ಗ್ರಹಗಳ ಗತಿಶೀಲತೆಯನ್ನು ಖಚಿತವಾಗಿ ಹೇಳಲಾಗುತ್ತಿತ್ತು.ಇನ್ನುಳಿದ ನಾಗರಿಕತೆಗಳಿಗೆ ಹೋಲಿಸಿದರೆ ಇದು ಹೆಚ್ಚು ನಿಖರವಾಗಿರುತ್ತಿತ್ತು.[ಸೂಕ್ತ ಉಲ್ಲೇಖನ ಬೇಕು]

ಮೆಸೊಅಮೆರಿನ್ ನಾಗರಿಕತೆಗಳ ಹೋಲಿಕೆ ಇನ್ನಿತರುಗಳೊಂದಿಗೆ ಸೌರಮಾನದ ಉದ್ದ ಮತ್ತು ಅದರ ಅಳತೆಯನ್ನು ವಾರ್ಷಿಕ ಲೆಕ್ಕಾಚಾರದಲ್ಲಿ ಹೇಳಲಾಗುತ್ತಿತ್ತು.ಇದು ಗ್ರೆಗೊರಿಯನ್ ಕ್ಯಾಲಂಡರ್ ನ ತಳಪಾಯ ಹೊಂದಿತ್ತು. ಅವರು ಈ ಗಣಿತ ರೂಪಗಳನ್ನು ತಮ್ಮ ಕ್ಯಾಲಂಡರ್ ಗಳಲ್ಲಿ ಬಳಸುತ್ತಿರಲಿಲ್ಲವಾದರೂ ಇದು ವರ್ಷದಲ್ಲಿ 365 ದಿನದರ್ಶಿಕೆ ಹೊಂದಿತ್ತು.ಹೀಗಾಗಿ ಈ ಕ್ಯಾಲಂಡರ್ ಆಯಾ ಋತುಗಳನ್ನು ಸಹಜವಾಗಿ ಕಾಣಿಸುತ್ತಿತ್ತು.ಪ್ರತಿ ನಾಲ್ಕುವರ್ಷಗಳ ವರೆಗಿನ ಅವಧಿಯ ಮೇಲಣದ ಅಧಿಕವನ್ನೂ ಅದು ತೋರಿಸುತ್ತಿತ್ತು. ಹೋಲಿಕೆ ಪ್ರಕಾರ ಜುಲಿಯನ್ ಕ್ಯಾಲಂಡರ್ ನ್ನು ಯುರೊಪಿನಾದ್ಯಂತ ರೊಮನ್ ರು 16 ನೆಯ ಶತಮಾನದ ಹೊತ್ತಿಗೆ ಬಳಕೆ ಮಾಡಿದ ದಾಖಲೆ ಇದೆ.ಒಂದು ಅಂದಾಜಿನಂತೆ 128 ವರ್ಷಗಳಿಗೊಮ್ಮೆ ಕೇವಲ ಒಂದೇ ದಿನದ ವ್ಯತ್ಯಾಸ ಮಾತ್ರ ಕಾಣಿಸುತ್ತಿತ್ತು. ಆಧುನಿಕ ಗ್ರೆಗೊರಿಯನ್ ಕ್ಯಾಲಂಡರ್ ಇಂದು ಅತ್ಯಂತ ನಿಖರವಾಗಿದ್ದು 3257 ವರ್ಷಗಳಲ್ಲಿ ಕೇವಲ ಒಂದೇ ದಿನದ ತಪ್ಪೆಣಿಕೆ ಬರುತ್ತದೆ.

ಖಗೋಳಶಾಸ್ತ್ರ[ಬದಲಾಯಿಸಿ]

ಅಪರೂಪವೆಂದರೆ ಕೆಲವು ಸಾಕ್ಷಿಗಳಲ್ಲಿ ಮಾಯಾ ಮಾತ್ರ ಪೂರ್ವ-ಸೂಕ್ಷ್ಮ ಸಂವೇದನೆಯ ಟೆಲೆಸ್ಕೋಪಿಕ್ ನಾಗರಿಕತೆ ಎಂದು ಹೇಳಲಾಗುತ್ತದೆ.ಇದು ಒರಿಯನ್ ನೆಬುಲಾದ ಖಗೋಳ ವಿಜ್ಞಾನವು ಕೆಲ ಮಟ್ಟಿಗೆ ಜಾಳು ಜಾಳಾಗಿ ತೋರುತ್ತದೆ ಪ್ರತಿ ಬಿಂದುವಿಗೂ ಸಮನಾಗಿ ತಿಳಿಸುತ್ತದೆ ಎಂಬುದನ್ನು ನಂಬಲಾಗುವುದಿಲ್ಲ. ಈ ಮಾಹಿತಿಯನ್ನು ಸೈದ್ದಾಂತಿಕವಾಗಿ ಜಾನಪದ ಶೈಲಿ ಕಥೆಯಲ್ಲಿ ವಿವರಿಸಲಾಗಿದೆ.ಇದು ಆಕಾಶದ ಬ್ರಹ್ಮಾಂಡದ ಅನಂತತೆಯನ್ನು ಒರಿಯನ್ ಮೂಲದಲ್ಲಿ ಮಾಹಿತಿ ನೀಡುತ್ತದೆ. ಅವರ ಸಾಂಪ್ರದಾಯಿಕ ಒಲೆಗೂಡುಗಳು ಅವರ ಮಧ್ಯಭಾಗದ ಬೆಳಕಿಂಡಿಯ ಮೂಲಕ ಹೊಗೆ ಹೋಗುವುದನ್ನು ಒರಿಲಾ ನೆಬುಲಾದಲ್ಲಿ ಅದಕ್ಕೆ ಪೂರಕವಾಗಿ ಮಾಡಲಾಗಿದೆ. ಈ ಅಂಶದ ಮೇಲೆ ತಿಳಿದು ಬರುವ ವಿಷಯವೆಂದರೆ ಟೆಲೆಸ್ಕೋಪ್ ಗಳು ಬರುವ ಮುಂಚೆಯೇ ಆಕಾಶ ಕಾಯಿಗಳು ಮತ್ತು ನಕ್ಷತ್ರಗಳನ್ನು ಎಣಿಸಲು ಈ ಮಾಯಾ ಸಂಪ್ರದಾಯಸ್ಥರು ಅನುಕೂಲ ಕಲ್ಪಿಸಿದರು.[೨೨] ಹಲವು ಪೂರ್ವ ಕ್ಲಾಸಿಕ್ ಪ್ರದೇಶಗಳು ಪ್ಲೆಡೆಸ್ ಮತ್ತು ಎಟಾ ಡ್ರಾಕೊನಿಸ್ ಇವು ಲಾ ಬ್ಲಾಂಕಾದಲ್ಲಿ ಗೋಚರಿಸಿದಂತೆ ಯುಜೆಕ್ಸ್,ಮೊಂತೆ ಅಲ್ಟೊ ಮತ್ತು ಟಾಕಲಿಕ್ ಅಬಾಜ್ ಇತ್ಯಾದಿಗಳನ್ನು ಗುರುತಿಸಲು ಇದು ನೆರವಾಯಿತು.

ಮಾಯಾ ಸಂಸ್ಕೃತಿಯವರು ಜೆನಿಯಲ್ ಮಾರ್ಗಗಳ ಬಗ್ಗೆ ಆಸಕ್ತಿ ಹೊಂದಿದ್ದರು.ಬಾನಿನ ಆಗುಹೋಗುಗಳ ಸೂರ್ಯ ಚಲನೆ ಅದರ ಮೇಲ್ಮುಖದ ದಿಕ್ಸೂಚಿಯನ್ನು ಗಮನಿಸಿದ್ದರು. ಅವರ ಬಹುತೇಕ ನಗರಗಳ ಅಕ್ಷಾಂಶ ರೂಪರೇಷೆಯು ಟ್ರಾಪಿಕ್ ಆಫ್ ಕ್ಯಾನ್ಸರ್ ಸಮಭಾಜಕ ವೃತ್ತಕ್ಕೆ ಪೂರಕ ಅಂಶವಾಗಿದ್ದವು.ಇಲ್ಲಿನ ಜೆನಿಯಲ್ ಮಾರ್ಗಗಳು ಬಾನಿನಲ್ಲಿನ ಘಟನೆಗಳ ಆಧರಿಸಿ ಪ್ರತಿ ಎರಡು ವರ್ಷಕ್ಕೊಮ್ಮೆ ಸಮರೂಪದ ಪರಿಸ್ಥಿತಿಗಳನ್ನು ನೀಡುತ್ತಿದ್ದವು. ಮೇಲಿನ ಸೂರ್ಯನ ಸ್ಥಿತಿ-ಗತಿ ವೀಕ್ಷಣೆಗೆ ಮಾಯಾದಲ್ಲಿ ಸೂರ್ಯನನ್ನು ಉದ್ಭವಿಸುತ್ತಿರುವ ಧುಮುಕುವ ದೇವರು ಎಂಬ ಉಪನಾಮವನ್ನು ನೀಡಲಾಗಿತ್ತು.[ಸೂಕ್ತ ಉಲ್ಲೇಖನ ಬೇಕು]

ಡ್ರೆಸ್ಡೆನ್ ಕೊಡೆಕ್ಸ್ ನಲ್ಲಿ ಅತ್ಯೆತ್ತರದ ಕೇಂದ್ರೀಕೃತವು ಖಗೋಳ ವಿದ್ಯಮಾನಗಳ ವೀಕ್ಷಿಸಿ ಅದರ ನಿಖರತೆ ನೀಡುತ್ತಿದ್ದವು.ಈಗಿರುವ ಪಠ್ಯಗಳಲ್ಲಿ ಲೆಕ್ಕಾಚಾರ ಮತ್ತು ನೈಜತೆ ನೀಡಲು ಇದನ್ನು ಮಾಡಲಾಗುತ್ತಿತ್ತು.(ಈ ಅಂಕಿಅಂಶಗಳ ನಿಖರತೆಯು ಅದರ ಸಂಜ್ಞಾ ಕೊಡೆಕ್ಸ್ ಪ್ರಾಥಮಿಕವಾಗಿ ಮತ್ತು ಕೇವಲ ಅದಕ್ಕಾಗಿಯೇ ಖಗೋಳ ವಿಜ್ಞಾನ ಬಳಕೆ ಮಾಡಲಾಯಿತು. ಪರೀಕ್ಷೆ ಮತ್ತು ವಿಶ್ಲೇಷಣೆ ಪ್ರಕಾರ ಮಾಯಾದಲ್ಲಿ ಜ್ಯೋತಿಷ್ಯ ಮತ್ತು ಖಗೋಳ ವಿಜ್ಞಾನದಲ್ಲಿ ಸೂರ್ಯನಿಗಿಂತ ಶುಕ್ರ ಹೆಚ್ಚು ಪ್ರಾಮುಖ್ಯತೆ ಗಳಿಸಿದ್ದು ಕಾಣಿಸುತ್ತದೆ.

ಧಾರ್ಮಿಕತೆ[ಬದಲಾಯಿಸಿ]

ಗಾಡ್ ಕೆ, ದಿ ಗಾಡ್ ಆಫ್ ಲೈಟ್ನಿಂಗ್

ಅಜ್ಟೆಕ್ ಮತ್ತು ಇಂಕಾ ಅಧಿಕಾರ ವಹಿಸಿದ ನಂತರ ಮಾಯಾ ಸಂಪ್ರದಾಯವು ಚಕ್ರೀಯ ಮನೋವೃತ್ತಿಯ ವೇಳಾಪಟ್ಟಿಯನ್ನು ಅನುಸರಿಸುತ್ತಿತ್ತು. ವಿಧಿಗಳು ಮತ್ತು ಧಾರ್ಮಿಕ ಕ್ರಿಯಾವಿಧಾನಗಳು ಖಗೋಳ ಮತ್ತು ಗ್ರಹಗಳ ಮೂಲದ ಚಕ್ರದ ಮೇಲೆ ಸುತ್ತುವುದನ್ನು ಆಗ ಗಮನಿಸಲಾಗಿದೆ.ಅದಕ್ಕಾಗಿ ಅವರು ಪ್ರತ್ಯೇಕ ಕ್ಯಾಲಂಡರ್ ಗಳಿಗಾಗಿ ಕೆತ್ತನೆ ಬರಹಗಳನ್ನೂ ಮಾಡಿದ್ದಾರೆ. ಮಾಯಾ ಯುಗದ ಅರ್ಚಕರು ಈ ಚಕ್ರೀಯ ವೇಳಾಪಟ್ಟಿಯನ್ನು ಅರ್ಥೈಸಿ ಹೇಳುತ್ತಿದ್ದರು.ಮುಂದಾಗುವ ಭವಿಷ್ಯದ ಮತ್ತು ಹಿಂದಿನ ವಿಷಯಗಳನ್ನು ಪ್ರವಾದಿಗಳಂತೆ ಅವರು ಹೇಳುತ್ತಿದ್ದರು.ಕ್ಯಾಲಂಡರ್ ಗಳಲ್ಲಿನ ಅಂಕಿಸಂಖ್ಯೆಗಳಿಗೆ ಹೋಲಿಸಿ ಅವರು ಜ್ಯೋತಿಷ್ಯ ನುಡಿಯುತ್ತಿದ್ದರು. ನಿಶ್ಚಿತ ಕೆಲವು ಧಾರ್ಮಿಕ ಕಾರ್ಯಗಳ ನೆರವೇರಿಸಿದರೆ ಅವರು ಸ್ವರ್ಗಕ್ಕೆ ಹೋಗುತ್ತಾರೆನ್ನುವುದು ಅವರ ಬಲವಾದ ನಂಬುಗೆಯಾಗಿತ್ತು.

ಮಾಯಾ ಕಾಲದಲ್ಲಿ ಮಾನವ ಬಲಿದಾನವೂ ಚಾಲ್ತಿಯಲ್ಲಿತ್ತು. ಕೆಲವು ಮಾಯಾ ಧಾರ್ಮಿಕ ಆಚರಣೆಗಳಲ್ಲಿ ಭಕ್ತರ ಕೈಕಾಲು,ತೋಳುಗಳ ಅರ್ಪಣೆ ಅಥವಾ ಅರ್ಚಕರು ಭಕ್ತರ ಎದೆ ಬಗೆದು ದೇವರಿಗೆ ತ್ಯಾಗ ಬಲಿದಾನದ ಅರ್ಪಣೆ ಮಾಡುವ ಸಂಪ್ರದಾಯವೂ ಇತ್ತು. ಇಂತಹ ತ್ಯಾಗ-ಬಲಿದಾನದ ಗುರುತುಗಳನ್ನು ಸಚಿತ್ರ ಪಠ್ಯಗಳಲ್ಲಿ ಕೆತ್ತಲಾಗುವುದನ್ನು ಕೊಡೈಸಿಸ್ ಅಥವಾ ಸೂಚೀಕರಣ ಎನ್ನಲಾಗುತ್ತಿತ್ತು.

ಮಾಯಾಯುಗದ ಹಲವು ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ವಿದ್ವಾಂಸರಿಗೆ ಇನ್ನೂ ನಿಖರ ಮಾಹಿತಿ ಇಲ್ಲದೇ ಇರುವುದು ಕೂಡ ಆಶ್ಚರ್ಯಕರವಾಗಿದೆ.ಈ ಬ್ರಹ್ಮಾಂಡವು ಮೂರು ಲೋಕಗಳನ್ನು ಒಳಗೊಂಡಿದ್ದು ಒಂದು ಭೂಮಿ,ಕೆಳ ಭಾಗದ ಪಾತಾಳಲೋಕ ಮತ್ತು ಮೇಲೆ ಸ್ವರ್ಗ ಲೋಕ ಎಂದು ಅವರು ನಂಬಿದ್ದರು.

ಮಾಯಾ ಕೆಳಲೋಕವನ್ನು ಆಳವಾದ ಗವಿಗಳ ಮೂಲಕ ತಳಮಟ್ಟದ ಸುರಂಗಗಳ ಮೂಲಕ ತಲುಪಬಹುದಾಗಿತ್ತು. ಇದನ್ನು ಮಾಯಾ ಯುಗದ ಮರಣ ದೇವತೆಗಳು ಮತ್ತು ಕೊಳೆತು ಹೋದ ಜೀವಿಗಳು ನಿಭಾಹಿಸುತ್ತಿದ್ದವು. ಸೂರ್ಯ (ಕಿನಿಚ್ ಅಹುವಾ) ಮತ್ತು ಇಟ್ಜೆಮ್ನಾ ವೃದ್ಧ ದೇವತೆಗಳು ಮಾಯಾ ಯುಗದ ಆಕಾಶಗಳ ವ್ಯಾಪ್ತಿಯನ್ನು ಆಳುತ್ತವೆ. ಮತ್ತೊಬ್ಬ ವೃದ್ಧ ಗಾಡ್ ಎಲ್ ಪಾತಾಳಲೋಕದ ಅರ್ಚಿತ ವಿಗ್ರಹವಾಗಿದ್ದಾನೆ.

ರಾತ್ರಿ ಆಕಾಶವು ಎಲ್ಲಾ ಅತಿಮಾನುಷ ಶಕ್ತಿಗಳ ಕಾಣಲು ಕಿಂಡಿಯಾಗಿರುತ್ತದೆ. ಆಕಾಶದಲ್ಲಿ ಕಾಣುವ ಹಲವು ನಕ್ಷತ್ರ ಪುಂಜಗಳನ್ನು ಮಾಯಾ ಯುಗದಲ್ಲಿ ದೇವರು ಮತ್ತು ಸ್ಥಳಗಳಿಗೆ ಹೋಲಿಸಲಾಗಿದೆ.ಋತುಗಳ ಜಾರುವಿಕೆಯ ಸಂದರ್ಭಗಳನ್ನು ಅಲ್ಲಿ ವ್ಯಾಖ್ಯಾನಿಸಲಾಗಿದೆ.ಇನ್ನುಳಿದ ಜಗತ್ತಿನೊಂದಿಗಿನ ಸಂಪರ್ಕದ ಕೊಂಡಿಯಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಮಾಯಾ ದೇವತೆಗಳು ಅನಂತತೆ ಹೊಂದಿವೆ.ಅವುಗಳು ಒಂದಕ್ಕೊಂದು ಪರಸ್ಪರ ಹೊಂದಾಣಿಕೆಯಿಂದ ನಡೆಯುತ್ತವೆ. ಮಾಯಾ ಸಂಪ್ರದಾಯಿಕ ಲಕ್ಷಣಗಳಲ್ಲಿ ಧಾರ್ಮಿಕ ಪ್ರಕ್ರಿಯೆಗಳು ಈ ಅತಿಮಾನುಷ ಶಕ್ತಿಗಳು ನಿರಂತರವಾಗಿ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತವೆ ಎಂಬುದನ್ನು ತೋರುತ್ತವೆ. ಒಳ್ಳೆತನ ಮತ್ತು ಕೆಡುಕು ಮಾಯಾ ದೇವರುಗಳಲ್ಲಿ ನಿರಂತರವಾಗಿರುವುದಿಲ್ಲ ದೇವರು ಕೇವಲ "ಒಳ್ಳೆತನ"ವನ್ನು ಮಾತ್ರ ಪ್ರತಿನಿಧಿಸುತ್ತಾನೆ. ಋತುಗಳ ಸಂಭವಿಸುವ ವೇಳೆಯಲ್ಲಿ ಮಾಯಾ ಸಂಪ್ರದಾಯವು ಧಾರ್ಮಿಕ ವಿಧಾನಗಳನ್ನು ಆಯಾ ಚಕ್ರೀಯತೆಗಳಲ್ಲಿ ನಡೆಯುವುದನ್ನು ಸೂಚಿಸುತ್ತವೆ.

ಗೋವಿನ ಜೋಳದ ಇಳುವರಿ,ಬಗೆಗಿನ ಜೀವನ ಚಕ್ರದ ಹೃದಯವು ಮಾಯಾ ನಂಬುಗೆಯಲ್ಲಡಗಿದೆ. ಇದನ್ನು ಮಾಯಾದ ಮುಸುಕಿನ ಜೋಳದ ದೇವತೆ ಇದರ ನಂಬಿಕೆಗೆ ಪಾತ್ರವಾಗಿದೆ.ಈ ದೇವತೆ ಕೇಂದ್ರೀಯ ಧಾರ್ಮಿಕ ವಿಗ್ರಹವಾಗಿದೆ. ಮಾಯಾ ಯುಗದಲ್ಲಿ ಈ ಯುವ ದೇವತೆಯು ಅದರ ಕಲಾತ್ಮಕತೆಯನ್ನು ನಿರೂಪಿಸುತ್ತದೆ. ಈ ಮುಸುಕಿನ ಜೋಳದ ದೇವತೆಯು ಕ್ಲಾಸಿಕಲ್ ಮಾಯಾ ಯುಗದ ಜೀವನ ಶೈಲಿಯ ಸಂಕೇತವಾಗಿದೆ.

ಕೆಲವು ವೇಳೆ ಈ ಬಹುದ್ದೇಶಿತ ದೇವರುಗಳು ಗಣಿತೀಯ ಸೂತ್ರ ಸಮೀಕರಣಗಳನ್ನು ಪ್ರತಿನಿಧಿಸುತ್ತವೆ ಎಂದು ನಂಬಲಾಗಿದೆ.[attribution needed]ಇದಕ್ಕಾಗಿ ಏನು ಇದೆ ಎಂಬುದರ ವಿವರಣೆ ಇದರಲ್ಲಿ ದೊರೆಯುತ್ತದೆ. ಪ್ರತಿ ದೇವರೂ ಅಕ್ಷರಶಃ ಒಂದು ಅಂಕಿ ಅಥವಾ ಒಂದು ವಿವರಣಾತ್ಮಕ ಬ್ರಹ್ಮಾಂಡವನ್ನು ಪ್ರತಿನಿಧಿಸುತ್ತಾನೆ.ಇದರ ಮೂಲಕ ಬಹುದ್ದೇಶಿತ ಕ್ಯಾಲಂಡರ್ ಗಳನ್ನು ಕೂಡ ಮಾಡಲಾಗಿದೆ. ಇದಕ್ಕಾಗಿ ಹಲವು ಪ್ರಕಾರದ ಮಾಯಾ ಕ್ಯಾಲಂಡರ್ ಗಳನ್ನು ರೂಪಿಸಲಾಗಿದೆ.ಇದರಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿದ್ದಿ 260-ದಿನದ ಚಕ್ರ,ಒಂದು 365-ದಿನದ ವೇಳಾ ಚಕ್ರ,ಇದು ಸೌರ ವರ್ಷ ತೋರಿದರೆ,ಇನ್ನೊಂದು ಚಾಂದ್ರಮಾನದ ಗತಿವಿಧಿಗಳ ದಾಖಲಿಸುತ್ತದೆ.ಇದು ಶುಕ್ರಗ್ರಹದ ಖಗೋಳದ ಸಂಯುತಿ ಕಾಲಮಿತಿಗಳನ್ನು ವಿವರಿಸಿದೆ.

ತತ್ವಶಾಸ್ತ್ರೀಯವಾಗಿ ಮಾಯಾ ಯುಗಧರ್ಮವು ಹಿಂದಿನ ಆಗುಹೋಗುಗಳ ಬಗ್ಗೆ ವಿವೇಚಿಸಿ ಅದನ್ನು ಪ್ರಭಾವಿಸುತ್ತದೆ.ಇದರಿಂದಾಗಿ ವರ್ತಮಾನ ಹುಟ್ಟುತ್ತದೆ.ಭವಿಷ್ಯದ ಚಕ್ರೀಯ ವೇಳೆಯನ್ನೂ ಸಹ ಇದು ನಿಗದಿ ಮಾಡುತ್ತದೆ.

ಅದಲ್ಲದೇ 19 ನೆಯ ಶತಮಾನದಲ್ಲಿ ಚಾನ್ ಸಾಂತಾ ಕ್ರುಜ್ ನಲ್ಲಿನ ಕ್ರಿಶ್ಚಿಯನ್ ಧರ್ಮದ ಮೇಲೂ ಮಾಯಾ ಸಂಸ್ಕೃತಿ ತನ್ನ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದೆ.

ಅದರಲ್ಲಿ ಗ್ವಾಟೆ ಮಾಲಾದಲ್ಲಿನ ಕ'ಚೆ ಯು ಪಶ್ಚಿಮ ದ್ವೀಪಗಳಲ್ಲಿ [clarification needed]ಒಂಬತ್ತು ತಿಂಗಳ ಕಾಲಾವಧಿ ಉಲ್ಲೇಖಿತವಾಗಿದೆ.ಅದು ಅಜ್ಕ್ 'ಐಜೆ' ಇದು 260-ದಿನಗಳ ಲೆಕ್ಕ ಇಡುವ ಪದ್ದತಿಯಾಗಿದೆ.ಈ ಕ್ಯಾಲಂಡರ್ ನ್ನು ಚೊ'ಲಿಕ್ ಎನ್ನಲಾಗುತ್ತಿತ್ತು.

ಕೃಷಿ[ಬದಲಾಯಿಸಿ]

ವಿಭಿನ್ನ ಮತ್ತು ಸುಧಾರಿತ ಪದ್ದತಿಗಳು ಪುರಾತನ ಮಾಯಾಯುಗದ ಆಹಾರ ಉತ್ಪಾದನೆಯಲ್ಲಿ ಜಾರಿಯಲ್ಲಿದ್ದವು. ಈ ಹಿಂದೆ ವಿವಿಧ ಬೆಳೆ (ಪರ್ಯಾಯ)ಗಳನ್ನು ಅಂತರ ಕೃಷಿ ಪದ್ದತಿಯಲ್ಲಿ ಬಳಸಿ ಅಗತ್ಯವಿರುವ ಎಲ್ಲಾ ಆಹಾರ ವಸ್ತುಗಳನ್ನು ಬೆಳೆಯಲಾಗುತ್ತಿತ್ತು.ಆದರೆ ನಂತರದಲ್ಲಿ ವಿವಿಧ ರೀತಿಯಲ್ಲಿ ಅರಣ್ಯ ಯೋಜನೆ,ಸಂರಕ್ಷಿತ ಭೂಮಿ,ಅರಣ್ಯ ತೋಟಗಾರಿಕೆ,ನಿರ್ವಹಿಸಲ್ಪಡುವ ಹಸಿರು ವನಗಳು ಬೆಳೆಯುತ್ತಿರುವ ಜನಸಂಖ್ಯೆಗೆ ಪೂರಕ ಆಹಾರ ಒದಗಿಸಲು ಶಕ್ತ್ಯವಾಗಿದ್ದವು.ಈ ಕ್ಲಾಸಿಕಲ್ ಯುಗವು ಇಂತಹ ಸುಧಾರಿತ ಯೋಜನೆ ಅಳವಡಿಸಿ ತನ್ನ ಬೇಡಿಕೆ ಪೂರೈಸುತ್ತಿತ್ತು. ಇಂದೂ ಕೂಡಾ ವಿಭಿನ್ನ ಕೃಷಿ ವಿಧಾನಗಳು ಚಾಲ್ತಿಯಲ್ಲಿವೆ.ವೈಮಾನಿಕ ಛಾಯಾಚಿತ್ರಗಳಲ್ಲಿ ಹಲವು ಕೃಷಿ ಭೂಮಿಯು ನೀರಾವರಿ ಕಾಲುವೆಗಳ ಮೂಲಕ ಬೆಳೆಗೆ ಪೂರಕವಾಗಿದೆ ಎಂಬುದನ್ನು ದಾಖಲಿಸಿವೆ.ಮಳೆಕಾಡಿನ ಭಾಗಗಳು ಹಸಿರಿನಿಂದ ಸಮೃದ್ಧವಾಗಿದ್ದವು.ಸಮಕಾನೀನ ಆರ್ಥಿಕ ಮೌಲ್ಯಗಳನ್ನು ಪೂರೈಸುವ ಅನೇಕ ಯೋಜನೆಗಳಿದ್ದವು.ಪುರಾತನ ಮಾಯಾ ಯುಗದಲ್ಲಿ ಸರೋವರ ನೀರಿನ ಸಂಗ್ರಹದ ಜಲಾನಯನಗಳು ಕಾಣಸಿಗುತ್ತವೆ.ಮುಸುಕಿನ ಜೋಳ,ಗೆಣಸು,ಸೂರ್ಯಕಾಂತಿ ಬೀಜಗಳು,ಹತ್ತಿ ಮತ್ತು ಇನ್ನಿತರ ಬೆಳೆಗಳನ್ನು ಬೆಳೆಯಲಾಗುತ್ತಿತ್ತು.ಹೀಗಾಗಿ ಮೆಸೊಅಮೆರಿಕಾದಲ್ಲಿ 2500BC ಯಿಂದಲೇ ಕೃಷಿಗಾಗಿ ಅರಣ್ಯದ ಅಳಿವು ಮುಂದುವರೆದಿದೆ.

ಬಾಜೊದ ಗ್ವಾಟೆಮಾಲಾದಲ್ಲಿ ಮಬ್ಬು-ಬಣ್ಣದ IKONOS ಗಳ ಸಾಲು. ಬಾಜೊ (ತಗ್ಗು ಪ್ರದೇಶ). ಮಾಯಾ ಪತನ ಸಂದರ್ಭದಲ್ಲಿ ಅರಣ್ಯ ಪ್ರದೇಶವನ್ನೊಳಗೊಂಡದ್ದು ಹಳದಿ ಬಣ್ಣದಲ್ಲಿ ಸೂಚಿತವಾಗಿದೆ.ಅದರಲ್ಲಿ ನಾಶಗೊಂಡದ್ದು ಕೆಂಪು ಬಣ್ಣ ಹೊಂದಿದೆ.ವಿರಳವಾಗಿ ಹಸಿರಿರುವ ಬಾಜೊಸ್ ನೀಲಿ-ಹಸಿರಿನಲ್ಲಿದೆ.

ಸಮಕಾಲೀನರಂತೆ ಮಾಯಾ ಜನರು ಇಂದೂ ಕೂಡಾ ಆಗಿನ ಕೃಷಿ ಪದ್ದತಿಗಳನ್ನು ಅನುಸರಿಸುತ್ತಾರೆ.ಈ ಸಾಂಪ್ರದಾಯಕ ವಿಧಾನಗಳು ಈಗಲೂ ಜನಪ್ರಿಯವಾಗಿವೆ.ಆಧುನಿಕ ಬದಲಾವಣೆಗನುಗುಣವಾಗಿ ಇದನ್ನು ಮಾಡಲಾಗಿದೆ.ಜನಸಂಖ್ಯೆ ಹೆಚ್ಚಳ,ಸಂಸ್ಕೃತಿಗಳು,ಆರ್ಥಿಕ ಪದ್ದತಿಗಳು,ಹವಾಮಾನ ಬದಲಾವಣೆಗಳು ಅಲ್ಲದೇ ಆಧುನಿಕ ರಸಗೊಬ್ಬರ ಮತ್ತು ಸುಧಾರಿತ ಬೀಜಗಳು ಇತ್ಯಾದಿಗಳಲ್ಲಿನ ಬದಲಾವಣೆಯ ಒತ್ತಡಗಳ ಮೇಲೆಯೂ ಈ ಕೃಷಿ ಕಾಯಕ ನಡೆಯುತ್ತಿದೆ.

ಪೂರ್ವ-ಕೊಲಂಬಿಯನ್ ಮಾಯಾಯುಗದ ಮರುಆವಿಷ್ಕಾರ[ಬದಲಾಯಿಸಿ]

ನಕ್ಬೆನಲ್ಲಿರುವ ಮಧ್ಯಯುಗೀನ ಕ್ಲಾಸಿಕ್ ಯುಗಪೂರ್ವದ ಮಿರಾಡೊರ್ ಬೇಸಿನ್ ಅರಮನೆಯ ರಚನೆ

ಸ್ಪ್ಯಾನಿಶ್ ನ ಧರ್ಮಗುರುಗಳು ಮತ್ತು ಆಡಳಿತಗಾರರು ಈ ಪುರಾತನ ಮಾಯಾ ಕ್ಯಾಲಂಡರ್ ಗಳ ಬಗ್ಗೆ ಅವುಗಳ ಬರೆಹ ಮತ್ತು ಪದ್ದತಿಗಳ ನಿಕಟ ಪರಿಚಯ ಪಡೆದಿದ್ದಾರೆ. ಬಿಶಪ್ ಡೆಗೊ ಡೆ ಲಾಂಡಾ ಅವರ 16 ನೆಯ ಶತಮಾನದ ಬರೆಹ ಮತ್ತು 18 ನೆಯ ಶತಮಾನದ ಸ್ಪ್ಯಾನಿಶ್ ಅಧಿಕಾರಿಗಳ ಬರೆಹಗಳು ಪುರಾತನ ಮಾಯಾಯುಗದ ಬಗ್ಗೆ ಹೆಚ್ಚು ತಿಳಿಯುವಂತೆ ಮಾಡಿವೆ.ಹೀಗಾಗಿ 18 ನೆಯ ಶತಮಾನದ ಈ ಭಾಗಗಳ ಬಗೆಗೂ ಹೆಚ್ಚು ಮಾಹಿತಿ ಕಲೆ ಹಾಕಲು ನೆರವಾಗಿವೆ.[೨೩] ಯುನೈಟೆಡ್ ಸ್ಟೇಟ್ಸ್ ನ ಪ್ರವಾಸಿಗ ಜಾನ್ ಲೈಡ್ ಸ್ಟೆಫೆನ್ಸ್ ಈ ಸ್ಪ್ಯಾನಿಶ್ ಬರೆಹಗಳ ಬಗ್ಗೆ ಹೆಚ್ಚು ಪರಿಚಿತನಾಗಿದ್ದ,ಆರಂಭಿಕ ಸ್ಪ್ಯಾನ್ಸಿಶ್ ಸಂಶೋಧನೆಗಳನ್ನೂ ಆಸಕ್ತಿಯಿಂದಆತ 1839 ರಲ್ಲಿ ಗಮನಿಸಿದ್ದಾನೆ.ಆತ ಕೊಪಾನ,ಪಲೆಂಕ್ಯು ಮತ್ತು ಇನ್ನುಳಿದ ವಾಸ್ತುಶಿಲ್ಪದ ಜಾಗೆಗಳಿಗೆ ಭೇಟಿ ನೀಡಿದ್ದಾನೆ.ಇನ್ನುಳಿದಂತೆ ಇಂಗ್ಲೀಷ್ ಕಲೆಗಾರ ಫ್ರೆಡರಿಕ್ ಕ್ಯಾಥರ್ ವುಡ್ ಕೂಡ ಇಲ್ಲಿ ಭೇಟಿ ನೀಡಿ ವಿವರ ಕಲೆ ಹಾಕಿದ್ದಾನೆ. ಅವರ ವಿವರಗಳು ಅವಶೇಷಗಳಲ್ಲಿನ ಎಲ್ಲಾ ಮಾಹಿತಿಗಳನ್ನು ಆಸಕ್ತಿ ಬರುವಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.ಮೆಸೊಅಮೆರಿಕನ್ ಸಂಸ್ಕೃತಿ ಆಚರಣೆಗಳನ್ನು ಇದರಲ್ಲಿ ಅಳವಡಿಸಲಾಗಿದ್ದು ಇದು ಪರಂಪರೆಯ ಸಂಕೇತವಾಗಿದೆ.

ಹಲವು ಮಾಯಾ ಪ್ರದೇಶಗಳಲ್ಲಿ ಕಾಡು ಬೆಳೆದು ಅದು ಮುಚ್ಚಿ ಹೋಗುವಂತೆ ಮಾಡಿದೆ.ದಟ್ಟವಾದ ಕಾಡು ಪ್ರದೇಶವು ಕೆಲವೇ ಕೆಲವು ಮೀಟರ್ ಗಳಡಿ ಇದನ್ನು ಮುಚ್ಚಿ ಹಾಕಿವೆ. ಹಾಳು ಬಿದ್ದಿದ್ದನ್ನು ಗುರುತಿಸಲು ಸಂಶೋಧಕರು ಉಪಗ್ರಹ ಫೊಟೊಗಳನ್ನು ತೆಗೆದಿದ್ದಾರೆ. ಅವುಗಳನ್ನು ಸಮಗ್ರವಾಗಿ ಹುಡುಕಿ ಗುರುತಿಸಲು ಅದು ಗೋಚರವಾಗುವ ಕೆಂಪು ಕಿರಣದ ದೃಶ್ಯಗೋಚರ ಉಪಕರಣಗಳನ್ನು ಬಳಸಬೇಕಾಗಿದೆ. ಅವುಗಳು ಸುಣ್ಣದ ಕಲ್ಲುಗಳ ರಚನೆ ಇರುವುದರಿಂದ ಸ್ಮಾರಕಗಳು ರಾಸಾಯನಿಕ ಮಣ್ಣಿನ ಲೇಪನದಿಂದಾಗಿ ಅವು ಕೆಡುತ್ತಾ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಕೆಲವು ಆರ್ದೃ ಮಣ್ಣಿನ ಸಸ್ಯಗಳನ್ನು ದೂರ ಇರಿಸಲಾಗಿದ್ದು ಇನ್ನುಳಿದವುಗಳನ್ನು ಕೊಲ್ಲಲಾಗಿದೆ ಅಥವಾ ಬಣ್ಣಗೆಡಿಸಲಾಗಿದೆ. ಈ ಸುಣ್ಣದ ಕಲ್ಲಿನ ಹಾಳುರಚನೆಗಳು ಇಂದೂ ಕೂಡಾ ಕೆಲವು ಉಪಗ್ರಹ ಗೋಚರತೆಗಳಲ್ಲಿ ಸ್ಪಷ್ಟವಾಗಿವೆ.

ಬಹಳಷ್ಟು ಸಮಕಾಲೀನ ಯುಕಾಟಾನ್ ಪೆನುನ್ಸುಲಾದ ಗ್ರಾಮೀಣ ಜನಸಂಖ್ಯೆಯು,ಚಿಯಾಪಾಸ್ (ಮೆಕ್ಸಿಕೊದಲ್ಲಿ ಎರಡೂ)ಗ್ವಾಟೆಮಾಲಾ ಮತ್ತು ಬೆಲಿಜೆ ಕೂಡಾ ಮಾಯಾ ಪ್ರಾಥಮಿಕ ಭಾಷೆಗಳನ್ನು ಅನುಮೋದಿಸಿವೆ.

ಮಾಯಾ ಸ್ಥಳವಿಶೇಷಗಳು[ಬದಲಾಯಿಸಿ]

ಹಲವು ಅಸಂಖ್ಯಾತ ಮಾಯಾ ಸ್ಥಳಗಳಿವೆ,ಹಾಗು ಸಾವಿರಾರು ಸಣ್ಣ ಪ್ರಮಾಣದ ಸ್ಥಳಗಳಿವೆ. ಅತ್ಯಂತ ದೊಡ್ಡ ಮತ್ತು ಐತಿಹಾಸಿಕವಾಗಿ ಮಹತ್ವದವುಗಳೆಂದರೆ:

  • ಕಾಲಕ್ಮುಲ್
  • ಕಾಕುಯೆನ್
  • ಚಿಚೆನಿಟ್ಜ್
  • ಕೊಬಾ
  • ಕೊಮಾಲ್ಕಾಲೊ
  • ಕೊಪಾನ್
  • ಡಾಸ್ ಪಿಲಾಸ್
  • ಕಮಿಲಾಲುವು
  • El ಮಿರೇಡರ್
  • ನಕ್ಬೆ
  • ನರಂಜೊ
  • ಪಲೆಂಕ್ವು
  • ಪೆಡ್ರಾಸ್ ನೆಗ್ರಾಸ್
  • ಕ್ವಿರಿಗುವಾ
  • Q'ಉಮಕರಾಜ್
  • ಸಿಬಲ್
  • ಟಿಕಾಲ್
  • ಉಕ್ಸಾಟುನ್
  • ಉಕ್ಸ್ ಮಾಲ್
  • ಯಾಕ್ಶಾ

ಇವನ್ನೂ ಗಮನಿಸಿ[ಬದಲಾಯಿಸಿ]

  • ಮಾಯಾ ಸಮಾಜದಲ್ಲಿನ ಬಾಲ್ಯ
  • ಹುನಾಕ್ ಸೀಲ್
  • ಮಾಯಾ ಅಂತ್ಯಕ್ರಿಯೆಯ ವಿಧಿಗಳು
  • ಮಾಯಾ ಆರೋಗ್ಯ ಮತ್ತು ಔಷಧಿ
  • ಮಾಯಾ ಪೌರಾಣಿಕತೆ
  • ಮಾಯಾ ಟೆಕ್ಸ್ ಟೈಲ್ಸ್
  • ಪ್ರಿ-ಕೊಲಂಬಿಯನ್ ಮ್ಯುಜಿಕ್
  • ಪ್ರಿಕ್ಲಾಸಿಕ್ ಮಾಯಾ
  • ಮೆಸೊಅಮೇರಿಕನ್ ಪಿರಮಿಡ್ ಗಳ ಪಟ್ಟಿಗಳು

ಅಡಿ ಟಿಪ್ಪಣಿಗಳು[ಬದಲಾಯಿಸಿ]

  1. Coe, Michael D. (1999). The Maya (6th ed.). New York: Dante Reed. p. 31. ISBN 0500280665.
  2. "Radiocarbon chronology for early Maya occupation at Cuello, Belize". Nature.com. 1976-04-15. Retrieved 2010-08-01.
  3. "Maya Archaeological Sites of Belize, Belize History". Ambergriscaye.com. Retrieved 2010-08-01.
  4. ೪.೦ ೪.೧ ನೋಡಿ, ಉದಾಹರಣೆಗೆ, ಡ್ರಿವ್(2004), p.6.
  5. Coe, Michael D. (2002). The Maya (6th ed.). Thames & Hudson. p. 47. ISBN 0500050619.
  6. Robert Port. "History Of Writing And Religion". Cs.indiana.edu. Archived from the original on 2016-04-23. Retrieved 2010-08-01.
  7. Coe, Michael D. (2002). The Maya (6th ed.). Thames & Hudson. pp. 63–64. ISBN 0500050619.
  8. Coe, Michael D. (2002). The Maya (6th ed.). Thames & Hudson. p. 81. ISBN 0500050619.
  9. "Maya Art Return". Retrieved 2006-12-25.
  10. ನೋಡಿ ಕೊಗ್ಗಿಸ್ (1992).
  11. Coe, Michael D. (2002). The Maya (6th ed.). New York: Thames & Hudson. pp. 151–155. ISBN 0-500-28066-5.
  12. "University of Florida study: Maya politics likely played role in ancient large-game decline, Nov. 2007". News.ufl.edu. 2007-11-08. Archived from the original on 2014-11-12. Retrieved 2010-08-01.
  13. Gill, R. (2000). The Great Maya Droughts. Albuquerque: University of New Mexico Press. ISBN 0826321941. {{cite book}}: Cite has empty unknown parameter: |coauthors= (help)
  14. Hodell, David A. (1995). "Possible role of climate in the collapse of Classic Maya civilization". Nature. 375 (6530): 391–394. doi:10.1038/375391a0. {{cite journal}}: Cite has empty unknown parameter: |month= (help); Invalid |ref=harv (help); Unknown parameter |coauthors= ignored (|author= suggested) (help)
  15. ಲೌ 2007, p.305. ಶೆರೆರ್ 2006, pp.621, 625.
  16. "ದಿ ಎನಿಸಿಯಂಟ್ ಮಾಯಾ", ರಾಬರ್ಟ್ ಜೆ. ಶರೆರ್, ಲೊವಾ ಪಿ. ಟ್ರ್ಯಾಕ್ಲರ್ ಕಾಂಟ್ರಿಬುಟರ್ ಲೋವ ಪಿ. ಟ್ರ್ಯಾಕ್ಸಲರ್, p126, ಸ್ಟ್ಯಾನ್ ಫೊರ್ಡ್ ಯುನ್ವರ್ಸಿಟಿಬ್ ಪ್ರೆಸ್, 2006, ISBN 0-8047-4817-9
  17. ಇವೆರಡೂ ಪದಗಳು ಆರಂಭಿಕ ಕೊಲೊನಿಯಲ್ ಟೆಕ್ಸ್ಟ್ಸ್ ನಲ್ಲಿ ಸಿಗುತ್ತವೆ.(ಇದರಲ್ಲಿ ಅಪೆಲೆಸ್ ಡೆ ಪಾಕ್ಸ್ಬೊಲೊನ್)ಅವುಗಳನ್ನು ಸಮಾನಾಂತರವಾಗಿ ಅಜ್ಟೆಕ್ ಅಂಡ್ ಸ್ಪ್ಯಾನಿಶ್ ಗಳಿಗಾಗಿ ಬಳಸಿದ್ದಾರೆ.ಅತ್ಯೋಚ್ಚ ಆಳರಸರಿಗಾಗಿ ಮತ್ತು ಅವರ ಆಡಳಿತ ಪ್ರದೇಶಗಳಿಗಾಗಿ-ಅಂದರೆ ಟಾಲ್ಹೊಟಾನಿ (ಟ್ಲಾಟೊನಿ) ಅಂಡ್ ಟ್ಲಾಹ್ಟೊಕ್ಯಾವೊಟ್ಸ್, ರೆಯ್ ಆರ್ ಮೆಗಾಸ್ಟಡ್ ಅಂಡ್ ರಿನೊ, ಸೆನೊರ್ ಆರ್ ಡೊಮಿನೊ
  18. Saturno, WA (2006). "Early Maya writing at San Bartolo, Guatemala". Science. 311 (5765): 1281–3. doi:10.1126/science.1121745. PMID 16400112. {{cite journal}}: Invalid |ref=harv (help); Unknown parameter |coauthors= ignored (|author= suggested) (help); Unknown parameter |month= ignored (help)
  19. ಸ್ಕಿಡ್ ಮೊರ್(2006).
  20. ಈ ವರ್ಷದಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟ ವಿಷಯದಲ್ಲಿ ಒಟ್ಟು 62 ಭೌಗೋಳಿಕ ಸಂಕೇತಗಳನ್ನು ಗುರುತಿಸಲಾಗಿತ್ತು.ಇವುಗಳನ್ನು ಸ್ಯಾನ್ ಲೊರೆಂಜೊ ಟೆನೊಕ್ಟಿಕ್ ಲಾನ್ ನಲ್ಲಿನ ಒಲ್ಮೆಕ್ ಹತ್ತಿರ ಪತ್ತೆ ಹಚ್ಚಲಾಗಿದೆ.ಸಂಶೋಧನೆಗಳಲ್ಲಿ ಕಂಡುಬಂದ ಹಲವು ಪುರಾವೆಗಳು ಅಂದಾಜು 900 BC ಹಿಂದಿನವೆಂದು ಘೋಷಿಸಲಾಗಿದೆ.ಇದು ಒಲ್ಮೆಕ್ ಶಾಸನ ಕೆತ್ತನೆಯನ್ನು ತೋರುತ್ತದೆ.(ನೋಡಿ ಕ್ಯಾಸ್ಕಾಜಲ್ ಬ್ಲಾಕ್ ಇದನ್ನು ಮೆಸೊಅಮೆರಿಕಾದ ಅತ್ಯಂತ ಹಳೆಯ ಅವಶೇಷ ಎನ್ನಲಾಗಿದೆ.ನೋಡಿ (2006, ಪಾಸಿಮ್ )
  21. ಮಿಲ್ಲರ್ ಅಂಡ್ ತಾಬೆಯ್ (1993, p.131)
  22. ಆಸ್ ಇಂಟರ್ ಪ್ರೆಟೆಡ್ ಬೈKrupp 1999.
  23. ಡೆಮಾರೆಸ್ಟ್, ಆರ್ಥುರ್. ಎನಿಸಿಯಂಟ್ ಮಾಯಾ: ದಿ ರೈಜ್ ಅಂಡ್ ಫಾಲ್ ಆಫ್ ಎ ಫಾಲ್ ಆಫ್ ಎ ರೇನ್ ಫಾರೆಸ್ಟ್ ಸಿವಿಲೈಜೇಶನ್. ಕ್ಯಾಂಬ್ರಿಜ್: ಕ್ಯಾಂಬ್ರಿಜ್ ಯುನ್ವರ್ಸಿಟಿ ಪ್ರೆಸ್, 2004 pg. 32-33.

ಉಲ್ಲೇಖಗಳು[ಬದಲಾಯಿಸಿ]

Coggins, Clemency (Ed.) (1992). Artifacts from the Cenote of Sacrifice Chichen Itza, Yucatan: Textiles, Basketry, Stone, Shell, Ceramics, Wood, Copal, Rubber (Memoirs of the Peabody Museum). Harvard University Press. ISBN 0-873-65694-6.
Culbert, T.Patrick (Ed.) (1977). Classic Maya Collapse. University of New Mexico Press. ISBN 0-826-30463-X.
Drew, David (2004). The Lost Chronicles of the Maya Kings (New ed.). London: Phoenix Press. ISBN 0-753-80989-3.
Krupp, Edward C. (1999). "Igniting the Hearth". Sky & Telescope. No. February. p. 94. Archived from the original on 2007-09-30. Retrieved 2006-10-19. {{cite news}}: Invalid |ref=harv (help)
Love, Michael (2007). "Recent Research in the Southern Highlands and Pacific Coast of Mesoamerica". Journal of Archaeological Research. Springer Netherlands. 15 (4): 275–328. doi:10.1007/s10814-007-9014-y. ISSN 1573-7756. {{cite journal}}: |access-date= requires |url= (help); Invalid |ref=harv (help); Unknown parameter |month= ignored (help)
Miller, Mary (2004). Courtly Art of the Ancient Maya. London: Thames & Hudson. ISBN 0-500-05129-1. {{cite book}}: Unknown parameter |coauthors= ignored (|author= suggested) (help)
Miller, Mary (1993). The Gods and Symbols of Ancient Mexico and the Maya. London: Thames and Hudson. ISBN 0-500-05068-6. {{cite book}}: Unknown parameter |coauthors= ignored (|author= suggested) (help)
Reyes-Valerio, Constantino (1993). De Bonampak al Templo Mayor: Historical del Azul Maya en Mesoamerica. Siglo XXI editores. ISBN 968-23-1893-9.
Sharer, Robert J. (2006). The Ancient Maya (6th, fully revised ed.). Stanford, CA: Stanford University Press. ISBN 0-8047-4817-9. OCLC 57577446. {{cite book}}: Unknown parameter |coauthors= ignored (|author= suggested) (help)
Skidmore, Joel (2006). "The Cascajal Block: The Earliest Precolumbian Writing" (PDF). Mesoweb Reports & News. Mesoweb.
Webster, David L. (2002). The Fall of the Ancient Maya. London: Thames & Hudson. ISBN 0-500-05113-5.
Coe, Michael D. (1999). The Maya (Sixth ed.). New York: Thames & Hudson. ISBN 0-500-28066-5.
"Maya Ruins". NASA Earth Observatory. Archived from the original on 2008-09-24. Retrieved 2006-04-28.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • Braswell, Geoffrey E. (2003). The Maya and Teotihuacan: Reinterpreting Early Classic Interaction. Austin, TX: University of Texas Press. ISBN 0292709145. OCLC 49936017.
  • Christie, Jessica Joyce (2003). Maya Palaces and Elite Residences: An Interdisciplinary Approach. Austin, TX: University of Texas Press. ISBN 0292712448. OCLC 50630511.
  • Demarest, Arthur Andrew (2004). Ancient Maya: The Rise and Fall of a Rainforest Civilization. Cambridge, England; New York, NY: Cambridge University Press. ISBN 0521592240. OCLC 51438896.
  • Demarest, Arthur Andrew, Prudence M. Rice, and Don Stephen Rice (2004). The Terminal Classic in the Maya Lowlands: Collapse, Transition, and Transformation. Boulder, CO: University Press of Colorado. ISBN 0870817396. OCLC 52311867.{{cite book}}: CS1 maint: multiple names: authors list (link)
  • Garber, James (2004). The Ancient Maya of the Belize Valley: Half a Century of Archaeological Research. Gainesville, FL: University Press of Florida. ISBN 0813026857. OCLC 52334723.
  • Herring, Adam (2005). Art and Writing in the Maya cities, AD 600-800: A Poetics of Line. Cambridge, England; New York, NY: Cambridge University Press. ISBN 0521842468. OCLC 56834579.
  • Lohse, Jon C. and Fred Valdez (2004). Ancient Maya Commoners. Austin, TX: University of Texas Press. ISBN 0292705719. OCLC 54529926.
  • Lucero, Lisa Joyce (2006). Water and Ritual: The Rise and Fall of Classic Maya Rulers. Austin, TX: University of Texas Press. ISBN 0292709994. OCLC 61731425.
  • McKillop, Heather Irene (2005). In Search of Maya Sea Traders. College Station, TX: Texas A & M University Press. ISBN 1585443891. OCLC 55145823.
  • McKillop, Heather Irene (2002). Salt: White Gold of the Ancient Maya. Gainesville, FL: University Press of Florida. ISBN 0813025117. OCLC 48893025.
  • McNeil, Cameron L. (2006). Chocolate in Mesoamerica: A Cultural History of Cacao. Gainesville, FL: University Press of Florida. ISBN 0813029538. OCLC 63245604.
  • Rice, Prudence M. (2004). Maya Political Science: Time, Astronomy, and the Cosmos (1st ed.). Austin, TX: University of Texas Press. ISBN 0292702612. OCLC 54753496.
  • Sharer, Robert J. and Loa P. Traxler (2006). The ancient Maya (6th ed.). Stanford, CA: Stanford University Press. ISBN 0804748160. OCLC 57577446.
  • Tiesler, Vera and Andrea Cucina (2006). Janaab' Pakal of Palenque: Reconstructing the Life and Death of a Maya Ruler. Tucson, AZ: University of Arizona Press. ISBN 0816525102. OCLC 62593473.
  • "Painted Metaphors: Pottery and Politics of the Ancient Maya". University of Pennsylvania Almanac. University of Pennsylvania. 4/7/2009. Retrieved 2009-06-17. {{cite web}}: Check date values in: |date= (help)

ಬಾಹ್ಯ ಕೊಂಡಿಗಳು[ಬದಲಾಯಿಸಿ]