ಮದ್ದೂರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮದ್ದೂರು ಮಂಡ್ಯ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ವಡೆಗೆ ಪ್ರಸಿದ್ದಿಯಾಗಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್. ಎಂ. ಕೃಷ್ಣ ಇಲ್ಲಿಗೆ ಕೂಗಳತೆ ದೂರದಲ್ಲಿರುವ ಸೋಮನಹಳ್ಳಿಯವರು. ಮದ್ದೂರಿನ ಹತ್ತಿರದಲ್ಲಿರುವ ಶಿವಪುರದಲ್ಲಿ ೧೯೩೮ರಲ್ಲಿ ಧ್ವಜ ಸತ್ಯಾಗ್ರಹ ನಡೆಯಿತು ಮತ್ತು ಮ್ಯೆಸೂರು ಕಾಂಗ್ರೆಸ್ಸಿನ ಪ್ರಥಮ ಅಧಿವೇಶನ ನಡೆಯಿತು.

ಭೌಗೋಳಿಕ[ಬದಲಾಯಿಸಿ]

ಮದ್ದೂರು 12°35′03″N 77°02′42″E / 12.584169°N 77.0449°E ಯಲ್ಲಿ ಕಾಣಸಿಗುತ್ತದೆ. ಸಮುದ್ರ ಮಟ್ಟದಿಂದ ೨೧೭೫ ಅಡಿ ಎತ್ತರದಲ್ಲಿದೆ.

ಸಾಮಾಜಿಕ[ಬದಲಾಯಿಸಿ]

೨೦೦೧ ರ ಜನಗಣತಿಯ ಪ್ರಕಾರ ಮದ್ದೂರಿನಲ್ಲಿ ಸುಮಾರು ೩೦,೦೦೦ ಜನಸಂಖ್ಯೆಯಿದೆ, ಇವರಲ್ಲಿ ಶೇ ೫೧ ರಷ್ಟು ಪುರುಷರು ‍‍ಮತ್ತು ೪೯ ಅಷ್ಟು ಮಹಿಳೆಯರು ಇದ್ದಾರೆ. ಒಕ್ಕಲಿಗ ಜನಾಂಗದ ಪ್ರಾಬಲ್ಯವಿರುವ ಇಲ್ಲಿ ಇತರ ಜನಾಂಗದವರೂ ಸಹ ಸಾಮರಸ್ಯದ ಬಾಳು ನಡೆಸುತ್ತಿದ್ದಾರೆ

ವಿಷೇಶ ತಿನಿಸುಗಳು[ಬದಲಾಯಿಸಿ]

ಮದ್ದೂರು ವಡೆ ಇಲ್ಲಿಯ ಬಹಳ ಜನಪ್ರಿಯ ತಿನಿಸು. ಇದರ ರುಚಿ ಸವಿದವರು ಜೀವಮಾನದಲ್ಲೆಂದು ಮರೆಯಲು ಸಾದ್ಯವೇ ಇಲ್ಲ.. ಈ ವಡೆಯು ಮದ್ದೂರಲ್ಲಿ ಮಾತ್ರವಲ್ಲದೆ ಇಡ್ಡಿ ಕರ್ನಾಟಕದಲ್ಲೆ ಪ್ರಸಿದ್ದಿ ಪಡೆದಿದೆ.

ಪ್ರೇಕ್ಷಣಿಯ ಸ್ಥಳಗಳು[ಬದಲಾಯಿಸಿ]

|| ಎಸ್ ಐ ಹಾಗಲಹಳ್ಳಿ|| ಇದು ಒ೦ದು ಮದ್ದೂರು ತಾಲ್ಲೂಕಿನ ಪುಟ್ಟ ಗ್ರಾಮ. ಸುಮಾರು ಮದ್ದೂರಿನಿ೦ದ ೧೫ ಕೀ. ಮೀಟರ್ ಅ೦ತರವಿದ್ದು.. ಹಾಗೂ ಕೆ ಎಮ್ ದೊಡ್ಡಿಯಿ೦ದ ಸುಮಾರು ೯ ಕೀ. ಮೀಟರ್ ಅ೦ತರವಿದ್ದೆ. ಈ ಗ್ರಾಮದ ಬಳ್ಳಿ ಶಿ೦ಷಾ ನದಿ ಹರಿಯುವುದರಿ೦ದ ಆ ಗ್ರಾಮಕ್ಕೆ ದೂರದ ಪಟ್ಟಣಗಳಿ೦ದ ವಲಸೆ ಬ೦ದು ಮೀನುಗಾರಿಕ್ಕೆ ಮತ್ತು ವಿಶಾ೦ತಿ ಪಡೆದುಕೊಳ್ಳುತ್ತರೆ.. ಮತ್ತು ಆ ಗ್ರಾಮದ ಬಳ್ಳಿಯೇ ಶಿ೦ಷಾ ನದಿಗೆ ಅಡ್ಡವಾಗಿ ದೊಡ್ಡ ಅಣೇಕಟ್ಟವನ್ನು ಮಾರ್ಪಡಾಗಿ ಇರುವುದರಿ೦ದ ಆ ಸ್ಥಳದಲ್ಲಿ ಚಿತ್ರಿಕರಣವು ಕೂಡ ಮಾಡುತ್ತರೆ. ಆ ಅಣೇಕಟ್ಟೆಯನು ಎಚ್. ಡಿ ದೇವೆಗೌಡರು ಪ್ರಧಾನಮ೦ತ್ರಿಯಾಗಿದಾಗ ಈ ಅಣೇಕಟ್ಟನ್ನು ಕಟ್ಟಿಸಿಕೊಟ್ಟರು.

ವೈದ್ಯನಾಥಪುರದ ವೈದ್ಯನಾದೇಶ್ವವಾರ ಕರ್ನಾಟಕದ ಪ್ರಸಿದ್ದ ಯಾತ್ರಾಸ್ಥಳಗಳಲ್ಲೊಂದು.

ಕೊಕ್ಕರೆ ಬೆಳ್ಳೂರು ವಲಸೆ ಬರುವ ಹಕ್ಕಿಗಳ ಪ್ರಾಕೃತಿಕ ಪಕ್ಷಿಧಾಮ.ಹಾಗೂ ಕರ್ನಾಟಕದಲ್ಲೆ ಒ೦ದು ಸು೦ದರ ಪಕ್ಷಿಧಾಮ ಎ೦ದು ಹೇಸರಿದೆ. || [[ಚಿಕ್ಕ ಅರಸಿಕೆರೆಯ ' ಶ್ರಿ ಬಸವೆಶ್ವರ ಮತ್ತು ಭೈರವೆಶ್ವರ ದೆವಲಾಯವು ಪ್ರಸಿದ್ದ ಯಾತ್ರಾಸ್ಥಳವಾಗಿ ಮಾರ್ಪಡಯಾಗಿದ್ದೆ ,

                                                                                                                |[ಶಿವಪುರ]] ಇತಿಹಾಸ ಪ್ರಸಿದ್ದ ಸತ್ಯಾಗ್ರಹ ಸೌಧವಿರುವುದು ಇಲ್ಲಿಯೆ. 

ಹನುಮಂತನಗರ ಆತ್ಮಲಿಂಗೆಶ್ವರ ದೇವಾಲಯ, ಈ ದೇವಾಲಯವು ಭಾರತಿ ನಗರದಿಂದ(ಕೆ.ಎಮ್.ದೊಡ್ಡಿಯಿಂದ) ೩ ಕಿ.ಮಿ. ದೂರದಲ್ಲಿದೆ.

ಆಲೂರು ಶ್ರೀ ಬೀರೇಶ್ವರ ದೇವಾಲಯ
    ಈ ದೇವಾಲಯವು ಮದ್ದೂರು ತಾಲೂಕು ಕಸಬಾ ಹೋಬಳಿಯ ವ್ಯಾಪ್ತಿಗೆ ಬರುತ್ತದೆ. ಈ ದೇವಾಲಯವು ಮುಖ್ಯವಾಗಿ ಕುರುಬ ಜನಾಂಗಕ್ಕೆ ಸೇರಿದ ಒಂದು ಅತಿಮುಖ್ಯವಾದ ದೇವಾಲಯ. ಇಲ್ಲಿ ಪ್ರತಿ ಸೋಮವಾರ ಮತ್ತು ಗುರುವಾರಗಳಲ್ಲಿ ಬೀರೇಶ್ವರ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಈ ದೇವರ ಜೊತೆಯಲ್ಲಿ ಇತರ ದೇವರುಗಳಾದ ಶ್ರೀ ಸಣ್ಣಕ್ಕರಾಯ ಸ್ವಾಮಿ-ಅರಸಿನಕೆರೆ, ಶ್ರೀ ಹುಲಿ ಹುಚ್ಚಪ್ಪ ಸ್ವಾಮಿ -ಕೋಡಂಬಳ್ಳಿ ಮತ್ತು ಶ್ರೀ ಮಲವಪ್ಪ ಸ್ವಾಮಿ-ಮಾಗಡಿ ಸೇರಿ ಅದ್ಧೂರಿಯಾಗಿ ದಸರಾವನ್ನು ಆಚರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ನಾಡಿನ ವಿವಿಧ ಭಾಗಗಳಲ್ಲಿ ನೆಲಸಿರುವ ಜನರು-ಭಕ್ತಾದಿಗಳು ಬಂದು ಈ ದೇವರುಗಳ ಕೃಪೆಗೆ ಒಳಗಾಗುತ್ತಾರೆ.

[ನ೦ಬಿನಯಕನಳ್ಳಿ]] ಪಟ್ಟಲದಮ್ಮ ದೇವಾಲಯ. ಚಿಕಹೊಸಗಾವಿ

ಪ್ರಸಿದ್ದ ವ್ಯಕ್ತಿಗಳು[ಬದಲಾಯಿಸಿ]

ಹೆಚ್.ಕೆ.ವೀರಣ್ಣಗೌಡ ಖ್ಯಾತ ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಶಿಕ್ಷಣ ಸಚಿವರು.

ಎಸ್.ಎಂ.ಕೃಷ್ಣಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಹಾಲಿ ಕೇಂದ್ರ ಸಚಿವರು.

ಅಂಬರೀಷ್ ಹಾಲಿ ವಸತಿ ಸಚಿವರು ಮತ್ತು ಚಿತ್ರನಟರು.

ಜಿ.ಮಾದೇಗೌಡರ ಶಿಕ್ಷಣ ತಜ್ನರು, ಸಾಮಾಜಿಕ ಹೋರಾಟಗಾರರು ಎಂ.ಎಸ್. ಸಿದ್ದರಾಜು, ದಿವಂಗತ ಶಾಸಕರು, ಕಲ್ಪನ ಸಿದ್ದರಾಜು ಮಾಜಿ ಶಾಸಕಿ, ಮದ್ದೂರು ಕ್ಷೇತ್ರ ಎಂ.ಮಂಚಯ್ಯ ಮಾಜಿ ಶಾಸಕರು ಡಿ.ಸಿ. ತಮ್ಮಣ್ಣ, ಮದ್ದೂರಿನ ಶಾಸಕರು, ಮಹೇಶ್ ಚಂದ್, ಮಾಜಿ ಶಾಸಕರು, ಎಸ್.ಎಂ. ಶಂಕರ್, ವಿಧಾನ ಪರಿಷತ್ ಮಾಜಿ ಸದಸ್ಯರು ಎಸ್. ಗುರುಚರಣ್ ಜಿ.ಪಂ. ಮಾಜಿ ಅಧ್ಯಕ್ಷರು.

ಹೋಬಳಿಗಳು[ಬದಲಾಯಿಸಿ]

ಕಸಬಾ

ಕೊಪ್ಪ

ಆತಗೂರು

ಚಿಕ್ಕ ಅರಸಿನಕೆರೆ

"http://kn.wikipedia.org/w/index.php?title=ಮದ್ದೂರು&oldid=531305" ಇಂದ ಪಡೆಯಲ್ಪಟ್ಟಿದೆ