ನಗರಕೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಗರಕೆರೆ ಊರು ಗಂಗರಸರ ಆಳ್ವಿಕೆಯಲ್ಲಿ ಪಾಳೆಯಪಟ್ಟು ಆಗಿತ್ತು. ಕರ್‍ನಾಟಕ‍‍ ನಾಡಿನ ಮಂಡ್ಯ ಜಿಲ್ಲೆಯ, ಮದ್ದೂರು ತಾಲ್ಲೂಕಿನ ಒಂದು ಊರು. ಮಂಡ್ಯ ಜಿಲ್ಲಾ ಕೇಂದ್ರದಿಂದ ೨೫ ಕಿಲೋಮೀಟರ್ ಹಾಗೂ ಮದ್ದೂರು ತಾಲೂಕು ಕೇಂದ್ರದಿಂದ ೫ ಕಿಲೋಮೀಟರ್ ದೂರದಲ್ಲಿದೆ. ಹಿನ್ನಡವಳಿಯ ಹಿನ್ನೆಲೆ ಹೊಂದಿರುವ ಊರು.

ನಗರಕೆರೆ ಹಿನ್ನಡವಳಿ[ಬದಲಾಯಿಸಿ]

  • ನಗರಕೆರೆ ಗಂಗರಸರ ಆಳ್ವಿಕೆಯಲ್ಲಿ ಪಾಳೆಯಪಟ್ಟು ಆಗಿತ್ತು.

ಈ ಊರಿನ ಕೆರೆಯ ಏರಿಯ ಮೇಲೆ ಇರುವ ಹಳೆಯ ಕಾಲದಿಂದಲೂ ಕೊಂಡಾಡುವ ನಾಗರಕಲ್ಲು ಇದ್ದು "ನಾಗರಕೆರೆ" ಎಂದು ಹೆಸರು ಬಂದಿದೆ ನಂತರ ಮಂದಿಯ ಬಾಯಲ್ಲಿ ನಗರಕೆರೆ ಎಂದಾಗಿದೆ ಈಗಲೂ ಕೆರೆದಂಡೆಯಲ್ಲಿನ ನಾಗರಕಲ್ಲಿಗೆ ತಿಗಳಿ ತಂಬಿಟ್ಟು ನೊಂದಿಗೆ ಗೌರಿಹಬ್ಬದಂದು ಕೊಂಡಾಡುತ್ತಾರೆ.

ಇನ್ನೊಂದು ಮೂಲದ ಪ್ರಕಾರ ಗಂಗರ ಆಳ್ವಿಕೆ ಹೊತ್ತಿನಲ್ಲಿ ಈ ಊರು ಪಟ್ಟಣದ ಸ್ವರೂಪ ಹೊಂದಿತ್ತು ಆ ಕಾರಣ ಮಂದಿ ಈ ಊರನ್ನು ನಗರ ,ಎಂದು ಪಟ್ಟಣ ಎಂದು ಕರೆಯುತ್ತಿದ್ದರೆಂದು ಮತ್ತು ನಗರಪಟ್ಟಣ ಎಂದಿತ್ತು ಎಂದು ಊರಿನ ಹಿನ್ನಡವಳಿಯ ಬಗ್ಗೆ ಹೇಳುತ್ತಾರೆ

ಇಲ್ಲಿನ ಓದಪ್ಪನ ಗುಡಿ ದೊಡ್ಡ ಗುಡಿ ನಂತರ ಈ ಗುಡಿಯ ಬಳಿ ವ್ಯಾಪರಕ್ಕೆ ಬಂದ ಮಂದಿ ಗುಡಿಯ ಸುತ್ತಾ ನೆಲೆಸಿದ್ದರಿಂದ ಅದು ಒಂದು ಊರಿನ ರೂಪ ಪಡೆದು ವೈದ್ಯನಾಥಪುರ ಎಂದಾಗಿದೆ

ಗೋವಿನ ಹಾಡು ; ದಿಟ ಮತ್ತು ಪ್ರಾಮಾಣಿಕತೆಯನ್ನು ತೋರಿಸುವ ಗೋವಿನಹಾಡು ಕತೆಯ ಜನಪದ ಕವಿ ಇದೆ ನಗರಕೆರೆ ಊರಿನವರು, ಈವಾಗಿನ ವೈದ್ಯನಾಥಪುರ ಊರು ನಗರಕೆರೆ ಪಾಳೆಯಗಾರನ ಹೊತ್ತಿನಲ್ಲಿ ಹುಲ್ಲುಗಾವಲು ಜಾಗವಾಗಿತ್ತು ಎಂದು ಜನಪದದ ಮೂಲಕ ತಿಳಿದುಬರುತ್ತದೆ. ನಗರಕೆರೆ ಇಂದು ಗ್ರಾಮ ಪಂಚಾಯಿತಿಯ ಕೇಂದ್ರ ಜಾಗ ಹೊಂದಿರುತ್ತದೆ ಮದ್ದೂರು ತಾಲ್ಲೂಕಿನ ಪ್ರಮುಖ ಊರುಗಳ ಪಟ್ಟಿಯಲ್ಲಿ ಸೇರಿರುತ್ತದೆ ರಾಜಕೀಯಾ ಹಾಗು ಸಾಮಾಜಿಕವಾಗಿ ಪ್ರವರ್ದಮಾನವಾಗಿರುವ ಈ ಊರು ಹಲವು ಮಾದರಿಗಳಿಗೆ ಹೆಸರಾಗಿದೆ

ದ್ವಜಸತ್ಯಗ್ರಹ ಸೌಧದ ಚಳವಳಿಯಲ್ಲಿ ಭಾಗಿಯಾಗಿದ್ದ ಎಮ್ ಪಿ ಲಿಂಗೇಗೌಡರು ಈ ಊರಿನವರು ಎಂಬ ಹಿರಿಮೆ ಇದೆ ತಾಲ್ಲೂಕು ಕೇಂದ್ರವಾದ ಮದ್ದೂರು ಪಟ್ಟಣದಿಂದ ತೆಂಕಣಕ್ಕೆ ಐದು ಕಿಲೋಮೀಟರ್ ದೂರ ಇದೆ. ಊರಿನ ಮೂಡಣ ದಿಕ್ಕಿಗೆ ಶಿಂಷಾ ಹೊಳೆ ಹರಿಯುತ್ತದೆ. ಈ ಊರಿನ ಕೆರೆ ಇಲ್ಲಿನ ಜಲಮೂಲವಾಗಿದೆ ಕೆರೆ ಅಚ್ಚುಕಟ್ಟು ಪ್ರದೇಶದ ವಿಶಾಲ ಪ್ರದೇಶದಲ್ಲಿನ ಹಚ್ಚಹಸಿರ ಐಸಿರಿ ಮೂಡಣ ದಿಕ್ಕಿಗೆ ಹಬ್ಬಿರುವ ಬೆಟ್ಟಗಳ ಸಾಲು ಕಣ್ಮನ ಸೆಳೆಯುತ್ತವೆ

ಆರಂಬ ಪ್ರಧಾನವಾದ ಈ ಹಳ್ಳಿಯ ಮಂದಿ ಬಹುತೇಕ ಆರಂಬವನ್ನು ಮಾಡುತ್ತಾರೆ.ಊರಿನಲ್ಲೊಂದು ಕೆರೆ ಇದೆ.ಈ ಕೆರೆಗೆ ಮದ್ದೂರುಕೆರೆ ಹಾಗು [ನಾಲ್ವಡಿ ಕೃಷ್ಣರಾಜ ಒಡೆಯರ್]] ಕಟ್ಟಿಸಿದ ಕನ್ನಂಬಾಡಿಯಿಂದ ನೀರಿನ ಅನುಕೂಲ ಇರುತ್ತದೆ ಕಬ್ಬು, ಬತ್ತ, ತೆಂಗು,ರಾಗಿ,ಹಿಪ್ಪುನೇರಳೆ, ಈ ಊರಿನ ಬೆಳೆಗಳಾಗಿವೆ.

ನಗರಕೆರೆ ಗ್ರಾಮದಲ್ಲಿ ಹಾಲಿನ ಡೇರಿ ಹಾಗು ಕೃಷಿಪತ್ತಿನ ಸಹಕಾರ ಸಂಘಗಳಿದ್ದು ಸಹಕಾರಿ ತತ್ವದಡಿ ಕೆಲಸ ಮಡುತ್ತವೆ. ಸಂಘದ ಸದಸ್ಯರು ಈ ಸಂಘದ ಮೂಲಕ ಸಾಲ ಮತ್ತಿತರ ಸೌಲಭ್ಯ ಪಡೆದುಕ್ಕೊಂಡುಇದೆ.ಕೀಯಾ, ಹಾಗು ಹಸು ಸಾಕಣೆ ಚಟುವಟಿಕೆಗಳನ್ನು ಉನ್ನತಿಕರಿಸಿಕ್ಕೊಳ್ಳುತ್ತಿದ್ದಾರೆ

ಇಲ್ಲಿನ ಗ್ರಾಮ ಪಂಚಾಯತಿಯಲ್ಲಿ ಒಟ್ಟು 22 ಮಂದಿ ಸದಸ್ಯರಿದ್ದು ನಗರಕೆರೆ ಒಳಗೊಂಡು ಆರು ಊರುಗಳು ಸೇರಿವೆ.ಗ್ರಾಮ ಸರಕಾರ ದೇಶದ ಮೊದಲ ಗೋಡೆ ಪತ್ರಿಕೆ ನಗರಕೆರೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ನ.ಲಿ.ಕೃಷ್ಣರವರ ಸಂಪಾದಕತ್ವದಲ್ಲಿ ಹೊರ ಬರುತಿತ್ತು. ಅಂಗನವಾಡಿ ಕೇಂದ್ರಗಳು ಎರಡು ಇವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿವೆ, ಮೊದಲ ಕಲಿಕೆಗೆ ಸರ್ಕಾರಿ ಶಾಲೆ ಹಾಗು ಖಾಸಗಿಯಾಗಿ ಪ್ರೌಡ ಶಾಲೆ ಇದೆ.


ದನದಆಸ್ಪತ್ರೆಯ ಅನುಕೂಲ ಇದ್ದು ಆರಂಬಗಾರು ಹಾಗು ಹಸು ಸಾಕುವವರಿಗೆ ಇದರಿಂದ ಪ್ರಯೊಜನವಾಗುತ್ತಿದೆ.

ಈ ಊರಿನಲ್ಲಿ ಗ್ರಾಮ ಆರೋಗ್ಯ ಕೇಂದ್ರ ಇದ್ದು ನಿಯಮಿತವಾಗಿ ಲಸಿಕೆಗಳು ಹಾಗು ಇತರೆ ಆರೋಗ್ಯ ಸೇವೆಗಳನ್ನು ನೀಡಲಾಗುತಿದೆ ಹೀಗೆ ಸಾಮಾಜಿಕ, ರಾಜಕೀಯಾ ಆರ್ಥಿಕ ವಾಗಿ ತಾಲ್ಲೂಕಿನಲ್ಲಿನಲ್ಲಿ ತನ್ನದೇ ಜಾಗ ಮಾಡಿಕೊಂಡಿರುವ ಊರು ನಗರಕೆರೆ. ಮೂರು ತಲೆಮಾರಿನಿಂದ ಕಲಿಕೆ ದೊರೆಯುತ್ತಿದ್ದು ಈ ಊರಿನ ಕೆಲವರು ಹೆಚ್ಚಿನ ಕಲಿಕೆ ಕಲಿತು ನಾಡು ಹಾಗು ಹೊರನಾಡುಗಳಲ್ಲಿ ಕೆಲಸ ಮಾಡಿ ತವರಿನ ಹಿರಿಮೆ ಹೆಚ್ಚಿಸಿರುತ್ತಾರೆ.

"https://kn.wikipedia.org/w/index.php?title=ನಗರಕೆರೆ&oldid=1164027" ಇಂದ ಪಡೆಯಲ್ಪಟ್ಟಿದೆ