ಮಳವಳ್ಳಿ
ಮಳವಳ್ಳಿ ಮಂಡ್ಯ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಮಂಡ್ಯ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ರೈತರನ್ನು ಒಳಗೊಂಡಿರುವುದು ಈ ತಾಲೂಕಿನ ವಿಶೇಷವಾಗಿದೆ. ಮಳವಳ್ಳಿ ಇದು ಮಂಡ್ಯ ಜಿಲ್ಲೆಯ ಒಂದು ತಾಲ್ಲೂಕು. ಜಿಲ್ಲೆಯ ಆಗ್ನೇಯ್ ಭಾಗದಲ್ಲಿರುವ ಈ ತಾಲ್ಲೂಕನ್ನು ಪಶ್ಚಿಮ ಮತ್ತು ದಕ್ಷಿಣದಲ್ಲಿ ಟಿ.ನರಸೀಪುರ,ಪೂರ್ವದಲ್ಲಿ ಕನಕಪುರ,ಆಗ್ನೇಯದಲ್ಲಿ ಕೊಳ್ಳೇಗಾಲ,ವಾಯುವ್ಯದಲ್ಲಿ ಮಂಡ್ಯ,ಉತ್ತರದಲ್ಲಿ ಮದ್ದೂರು ಮತ್ತು ಚನ್ನಪಟ್ಟಣ- ಈ ತಾಲ್ಲೂಕುಗಳು ಸುತ್ತುವರಿದಿವೆ. ಕಿರುಗಾವಲು, ಬೊಪ್ಪಗೌಡನಪುರ, ಮಳವಳ್ಳಿ,ಮತ್ತು ಹಲಗೂರು ಹೋಬಳಿಗಳು. ತಾಲ್ಲೂಕಿನ ವಿಸ್ತೀರ್ಣ ೮೦೪ ಚ.ಕಿಮೀ.
ಮಳವಳ್ಳಿ ತಾಲ್ಲೂಕು ಮೊದಲು ಮೈಸೂರು ಜಿಲ್ಲೆಗೆ ಸೇರಿತ್ತು. ೧೯೩೯ ಜುಲೈ ೧ ರಂದು ಹೊಸದಾಗಿ ರಚಿಸಲ್ಪಟ್ಟ ಮಂಡ್ಯ ಜಿಲ್ಲೆಗೆ ಸೇರಿತು. ಈ ತಾಲ್ಲೂಕು ಕಾವೇರಿ ನದಿಯ ಕಣಿವೆಯಲ್ಲಿ ಸಮುದ್ರಮಟ್ಟದಿಂದ ಸುಮಾರು ೭೬೨ ಮೀಟರ್ ನಿಂದ ೯೧೪ ಮೀಟರ್ ಇದೆ. ಬಿಳಿಗಿರಿರಂಗನ ಬೆಟ್ಟದಿಂದ ಮುಂದುವರೆದ ಕಣಶಿಲೆಯ ಬೆಟ್ಟಗಳು ಕಂಡುಬರುತ್ತವೆ. ಮಳವಳ್ಳಿ ಮಂಡ್ಯದಿಂದ ಸುಮಾರು ೩೦ ಕಿಮೀ ದೂರದಲ್ಲಿದೆ,ಮೈಸೂರಿನಿಂದ ೪೨ ಕಿಮೀ ಮತ್ತು ಬೆಂಗಳೂರಿನಿಂದ ೧೨೪ ಕಿಮೀ ದೂರದಲ್ಲಿದೆ.
ಹತ್ತಿರದ ಪ್ರವಾಸ ತಾಣಗಳು [ಬದಲಾಯಿಸಿ]
- ಶಿವನ ಸಮುದ್ರ - ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು
- ಬ್ಲಫ್
- ತಲಕಾಡು
ಇದು ಮಂಡ್ಯ ಜಿಲ್ಲೆಯ ಪ್ರಮುಖ ವ್ಯಾಪಾರಿ ತಾಣ ಪ್ರತಿ ಶನಿವಾರ ಸಾವಿರಾರು ಜನರು ವ್ಯಾಪಾರ ಮಾಡಲು ಬರುತ್ತಾರೆ.
- [ಹಲಗೂರು] ಇದು ತಾಲೂಕಿನ ಪ್ರಮುಖ ವ್ಯಾಪಾರ ಕೇಂದ್ರ. ಸುತ್ತ ಮುತ್ತಲಿನ ಗ್ರಾಮಗಳ ಜನರು ಎಲ್ಲಾ ದಿನ ಬಳಕೆಯ ವಸ್ತುಗಳನ್ನು ಕೊಂಡುಕೊಳ್ಳಲು ಪ್ರತಿನಿತ್ಯ ಸಾವಿರಾರು ಮಂದಿ ಬರುತ್ತಾರೆ. ಇದು ಬೆಂಗಳೂರಿನಿಂದ ಸುಮಾರು ೮೫ ಕಿ.ಮೀ.ದೂರವಿದೆ ಮತ್ತು ಮಂಡ್ಯದಿಂದ ಸುಮಾರು ೫೦ ಕಿ.ಮೀ ದೂರವಿದೆ.
ವ.ಕು.ಹು.ಚ.
- ಮುತ್ತತ್ತಿ ಇದು ಈ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲಿ ಒ೦ದು. ಬೆ೦ಗಳೊರಿನಿ೦ದ ಮಳವಳ್ಳಿ ಮಾರ್ಗ ಹಲಗೂರು ಇ೦ದ ೨೨ ಕಿ.ಮೀ. ಕರಲಕಟ್ಟೆ ಮಾರ್ಗದಲ್ಲಿ ಇದೆ. ಮುತ್ತತ್ತಿ ಎ೦ಭ ಹೆಸರು ಬರಲು ಕಾರಣಕರ್ಥು ಶ್ರೀ ಆ೦ಜನೇಯ ಸ್ವಾಮಿ ರಾಮಾಯಣದಲ್ಲಿ ಸೀತಾದೇವಿಯು ನದಿಯಲ್ಲಿ ಸ್ನಾನ ಮಾಡುವಾಗ ಮೂಗುತಿ ನದಿಯಲ್ಲಿ ಜಾರಿದಾಗ ಸೀತಾಮಾತೆಯು ಆ೦ಜನೆಯಸ್ವಾಮಿಯ ಬಳಿ ಬಿನ್ನವಿಸಿದಾಗ ಸ್ವಾಮಿಯು ತನ್ನ ಬಾಲದಿ೦ದ ಮೂರು ಸುತ್ತು ಸುತ್ತಿ ಮೂಗುತಿಯನ್ನು ಎತ್ತಿ ಕೊಟ್ಟನೆ೦ಬ ಪ್ರತಿತಿಯಿದೆ, ಆ ಸ್ತಳದಲ್ಲಿ ಈಗಲು ಕಾವೇರಿ ನದಿ ನೀರೆಲ್ಲ ಮೂರು ಸುತ್ತು ಸುತ್ತಿ ಮು೦ದೆ ಸಾಗುತ್ತದೆ, ಆ ಸ್ತಳಕ್ಕೆ "ತಿರುಗಣೆ ಮಡ"ಎ೦ಬ ಹೆಸರು.