ಪಂಚಾಂಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪಂಚಾಂಗ (ಆಂಗ್ಲ: ಕ್ಯಾಲೆಂಡರ್)ಕಾಲದ ವಿಭಾಗಗಳನ್ನು ಕ್ರಮಬದ್ಧವಾಗಿ ಸಂಘಟಿಸುವ ಒಂದು ಪದ್ದತಿ. ಸಾಮಾನ್ಯವಾಗಿ ಖಗೋಳವಿದ್ಯೆಯ ವೀಕ್ಷಣೆಗಳ ಆಧಾರದ ಮೇಲೆ ಇವನ್ನು ರಚಿಸಲಾಗುತ್ತದೆ.

ಪರಿವಿಡಿ

ಹಿಂದೂ ಪಂಚಾಂಗ [ಬದಲಾಯಿಸಿ]

ಹಿಂದೂಗಳ ಸೌರಮಾನ,ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ.ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ , ವಾರ , ನಕ್ಷತ್ರ , ಯೋಗ ,ಮತ್ತು ಕರಣಗಳು - ಇವೇ ಆ ಐದು ಅಂಗಗಳು.ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ.

ತಿಥಿಗಳು [ಬದಲಾಯಿಸಿ]

ತಿಥಿಗಳು ಮೂವತ್ತು(೩೦).೩೦ ತಿಥಿಗಳನ್ನು ಎರಡು ಪಕ್ಷಗಳಲ್ಲಿ ೧೫ರಂತೆ ಎಣಿಕೆ ಮಾಡಲಾಗುತ್ತದೆ.ಪಾಡ್ಯ(ಪ್ರತಿಪದೆ)ದಿಂದ ಮೊದಲುಗೊಂಡು ಹುಣ್ಣಿಮೆಯವರೆಗೆ ಬರುವ ಮೊದಲ ೧೫ ತಿಥಿ(ದಿನ)ಗಳಿಗೆ ಶುಕ್ಲಪಕ್ಷವೆಂತಲೂ, ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ ೧೫ ತಿಥಿ(ದಿನ)ಗಳಿಗೆ ಕೃಷ್ಣಪಕ್ಷವೆಂತಲೂ ಕರೆಯುತ್ತಾರೆ. ತಿಥಿಗಳು ಯಾವುವೆಂದರೆ:ಪಾಡ್ಯ,ಬಿದಿಗೆ,ತದಿಗೆ,ಚೌತಿ,ಪಂಚಮಿ,ಷಷ್ಠಿ,ಸಪ್ತಮಿ,ಅಷ್ಟಮಿ,ನವಮಿ,ದಶಮಿ,ಏಕಾದಶಿ,ದ್ವಾದಶಿ,ತ್ರಯೋದಶಿ,ಚತುರ್ದಶಿ,ಹುಣ್ಣಿಮೆ / ಅಮಾವಾಸ್ಯೆ.

ವಾರಗಳು [ಬದಲಾಯಿಸಿ]

ವಾರಗಳು ಏಳು (೭).ಅವು ಸೋಮವಾರ,ಮಂಗಳವಾರ,ಬುಧವಾರ,ಗುರುವಾರ,ಶುಕ್ರವಾರ,ಶನಿವಾರ ಮತ್ತು ಭಾನುವಾರ.ನವಗ್ರಹಗಳಲ್ಲಿ ರಾಹು,ಕೇತುಗಳನ್ನು ಬಿಟ್ಟು ಮಿಕ್ಕ ಏಳು ಅಂದರೆ ಚಂದ್ರ,ಮಂಗಳ,ಬುಧ,ಗುರು,ಶುಕ್ರ,ಶನಿ ಹಾಗೂ ರವಿ -ಈ ಗ್ರಹಗಳ ಹೆಸರಿನಿಂದ ವಾರಗಳನ್ನು ಹೆಸರಿಸಿದೆ.

ನಕ್ಷತ್ರಗಳು [ಬದಲಾಯಿಸಿ]

ನಕ್ಷತ್ರಗಳು ಇಪ್ಪತ್ತೇಳು (೨೭).ಅವು:-

೧.ಅಶ್ವಿನಿ ೨.ಭರಣಿ ೩.ಕೃತ್ತಿಕೆ ೪.ರೋಹಿಣಿ ೫.ಮೃಗಶಿರ ೬.ಆರ್ದ್ರೆ ೭.ಪುನರ್ವಸು ೮.ಪುಷ್ಯ ೯.ಆಶ್ಲೇಷ ೧೦.ಮಖೆ

೧೧.ಪುಬ್ಬೆ ೧೨.ಉತ್ತರೆ ೧೩.ಹಸ್ತ ೧೪.ಚಿತ್ತೆ ೧೫.ಸ್ವಾತಿ ೧೬.ವಿಶಾಖ ೧೭.ಅನೂರಾಧ ೧೮.ಜ್ಯೇಷ್ಠ ೧೯.ಮೂಲ ೨೦. ಪೂರ್ವಾಷಾಢ

೨೧.ಉತ್ತರಾಷಾಢ ೨೨.ಶ್ರವಣ ೨೩.ಧನಿಷ್ಥೆ ೨೪.ಶತಭಿಷೆ ೨೫.ಪೂರ್ವಾಭಾದ್ರೆ ೨೬.ಉತ್ತರಾಭಾದ್ರೆ ೨೭.ರೇವತಿ.

ಮಾಸಗಳು - ೧೨ [ಬದಲಾಯಿಸಿ]

೧. ಚೈತ್ರ ೨. ವೈಶಾಖ ೩. ಜ್ಯೇಷ್ಠ ೪. ಆಷಾಢ

೫. ಶ್ರಾವಣ ೬. ಭಾದ್ರಪದ ೭.ಆಶ್ವೀಜ ೮.ಕಾರ್ತೀಕ

೯. ಮಾರ್ಗಶಿರ ೧೦. ಪುಷ್ಯ ೧೧. ಮಾಘ ೧೨. ಪಾಲ್ಗುಣ

ಅಧಿಕ ಮಾಸಗಳು [ಬದಲಾಯಿಸಿ]

ಸೂರ್ಯನು ಯಾವುದೇ ರಾಶಿಯಲ್ಲೂ ಪ್ರಯಾಣಿಸದೇ ಒಂದು ಚಾಂದ್ರಮಾನ ಮಾಸದಲ್ಲಿ ಸಂಪೂರ್ಣವಾಗಿ ಒಂದು ರಾಶಿಯ ಒಳಗೇ ಚಲಿಸುತ್ತದ್ದರೇ (ಅಂದರೆ ಅಮಾವಾಸ್ಯೆಗೆ ಮೊದಲು), ಆ ಚಾಂದ್ರಮಾನ ಮಾಸವನ್ನು ಮುಂಬರುವ ಮೊದಲ ಸಂಕ್ರಮಣದ ಪ್ರಕಾರ ಹೆಸರಿಸಲಾಗುತ್ತದೆ. ಅದು ಅಧಿಕ ಎಂಬ ಉಪಾಧಿಯನ್ನು ತೆಗೆದುಕೊಳ್ಳುತ್ತದೆ. ಉದಾಹರಣೆಗೆ, ಒಂದು ಚಾಂದ್ರಮಾನ ಮಾಸವು ಸಂಕ್ರಮಣವಿಲ್ಲದೆಯೇ ಸರಿದುಹೋದರೆ ಮತ್ತು ಮುಂದಿನ ಸಂಕ್ರಮಣವು ಮೇಷದಲ್ಲಿದ್ದರೆ, ಸಂಕ್ರಮಣವಿಲ್ಲದ ಆ ಮಾಸವನ್ನು ಅಧಿಕ ಚೈತ್ರವೆಂದು ಹೆಸರಿಸಲಾಗುತ್ತದೆ.

ಋತುಗಳು ೬ (೨ ಮಾಸಗಳಿಗೆ ಒಂದು ಋತು) [ಬದಲಾಯಿಸಿ]

೧. ವಸಂತ ಋತು ( ಚೈತ್ರ - ವೈಶಾಖ)

೨. ಗ್ರೀಶ್ಮ ಋತು (ಜ್ಯೇಷ್ಠ - ಆಷಾಢ)

೩. ವರ್ಷ ಋತು (ಶ್ರಾವಣ - ಭಾದ್ರಪದ)

೪. ಶರದೃತು (ಆಶ್ವೀಜ - ಕಾರ್ತೀಕ)

೫. ಹೇಮಂತ ಋತು ( ಮಾರ್ಗಶಿರ - ಪುಷ್ಯ)

೬. ಶಿಶಿರ ಋತು (ಮಾಘ - ಪಾಲ್ಗುಣ)

ಆಯನಗಳು - ೨ [ಬದಲಾಯಿಸಿ]

ಉತ್ತರಾಯಣ ಮತ್ತು ದಕ್ಷಿಣಾಯನ ಪ್ರತಿ ವರ್ಷದ ಜನವರಿ ೧೪ ರಿಂದ ಜುಲೈ ೧೬ ರವರೆಗೆ ಸೂರ್ಯನು ಉತ್ತರಕ್ಕೆ ಸಂಚರಿಸುವುದರಿಂದ ಉತ್ತರಾಯಣವೆಂದೂ, ಜುಲೈ ೧೬ರಿಂದ ಜನವರಿ ೧೪ ರವರೆಗೆ ಸೂರ್ಯನು ದಕ್ಷಿಣ ದಿಕ್ಕಿಗೆ ಬಾಗಿ ಸಂಚರಿಸುವುದರಿಂದ ದಕ್ಷಿಣಾಯಣವೆಂದೂ ಗುರುತಿಸಲಾಗಿದೆ.

ಯೋಗಗಳು [ಬದಲಾಯಿಸಿ]

ಯೋಗಗಳು ಒಟ್ಟು ೨೭. ಅವು : ೧.ವಿಷ್ಕಂಭ ೨.ಪ್ರೀತಿ ೩.ಆಯುಷ್ಮಾನ್ ೪.ಸೌಭಾಗ್ಯ ೫.ಶೋಭನ ೬.ಅತಿಗಂಡ ೭.ಸುಕರ್ಮ ೮.ಧೃತಿ ೯.ಶೂಲ ೧೦.ಗಂಡ ೧೧.ವೃದ್ಢಿ ೧೨.ಧ್ರುವ ೧೩.ವ್ಯಾಘಾತ ೧೪.ಹರ್ಷಣ ೧೫.ವಜ್ರ ೧೬.ಸಿದ್ಧಿ ೧೭.ವ್ಯತೀಪಾತ ೧೮.ವರಿಯಾನ್ ೧೯.ಪರಿಘ ೨೦.ಶಿವ ೨೧.ಸಿದ್ಧ ೨೨.ಸಾಧ್ಯ ೨೩.ಶುಭ ೨೪.ಶುಕ್ಲ ೨೫.ಬ್ರಹ್ಮ ೨೬.ಐಂದ್ರ ೨೭.ವೈಧೃತಿ

ಕರಣಗಳು [ಬದಲಾಯಿಸಿ]

ಕರಣಗಳು ಒಟ್ಟು ೧೧. ಅವುಗಳೆಂದರೆ : ಬವ , ಬಾಲವ , ಕೌಲವ , ತೈತಲೆ , ಗರಜೆ ,ವಣಿಕ್ , ಭದ್ರೆ , ಶಕುನಿ , ಚತುಷ್ಪಾತ್ , ನಾಗವಾನ್ ಹಾಗೂ ಕಿಂಸ್ತುಘ್ನ

ಇವನ್ನೂ ನೋಡಿ [ಬದಲಾಯಿಸಿ]


"http://kn.wikipedia.org/w/index.php?title=ಪಂಚಾಂಗ&oldid=317474" ಇಂದ ಪಡೆಯಲ್ಪಟ್ಟಿದೆ