ವೈಶಾಖ ಮಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವೈಶಾಖ ಇಂದ ಪುನರ್ನಿರ್ದೇಶಿತ)

ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಎರಡನೇ ಮಾಸ.

ಈ ಮಾಸದ ಪ್ರಮುಖ ಹಬ್ಬಗಳು[ಬದಲಾಯಿಸಿ]

  • ಅಕ್ಷಯ ತೃತೀಯ (ಶುಕ್ಲ ತದಿಗೆ)
  • ಗಂಗಾ ಪೂಜ (ಶುಕ್ಲ ಸಪ್ತಮಿ)
  • ಮೋಹಿನೀ ಏಕಾದಶಿ (ಶುಕ್ಲ ಏಕಾದಶಿ)
  • ಬುದ್ಧ ಜಯಂತಿ; ವೈಶಾಖ ಸ್ನಾನ ಸಮಾಪ್ತಿ (ಹುಣ್ಣಿಮೆ)
  • ಅಪರಾ ಏಕಾದಶಿ (ಕೃಷ್ಣ ಏಕಾದಶಿ)
  • ನೃಸಿಂಹ ಜಯಂತಿ
  • ವೇದವ್ಯಾಸ ಜಯಂತಿ
  • ಕೂರ್ಮ ಜಯಂತಿ
  • ಶಂಕರಾಚಾರ್ಯ ಜಯಂತಿ
  • ಬಸವ ಜಯಂತಿ
  • ರಾಮಾನುಜ ಜಯಂತಿ

ಈ ಮಾಸದಲ್ಲಿ ಮುಂಜಾನೆ ಎದ್ದು ಮಾಡುವ ಸ್ನಾನಕ್ಕೆ ಬಹಳ ಮಹತ್ವ ಇದೆ ಅನ್ನುವುದನ್ನು ಈ ಶ್ಲೋಕ ಹೇಳುತ್ತದೆ – “ವೈಶಾಖ ಸ್ನಾನ ಮಾತ್ರೇಣ ನ ಪುನಃ ಚಾರ್ಯತೆ ಭುವಿ”, ಅಂದರೆ ವೈಶಾಖ ಸ್ನಾನ ಮಾತ್ರದಿಂದ ಈ ಭೂಮಿ ಮೇಲೆ ಮತ್ತೆ ನಡೆಯುವುದಿಲ್ಲಾ. ಅದಕ್ಕಾಗಿ ವೈಶಾಖ ಸ್ನಾನವು ಮೋಕ್ಷಕ್ಕೆ ಅತ್ಯಾವಶ್ಯಕ.

ವೈಶಾಖ ಮಾಸದ ದಾನಗಳು[ಬದಲಾಯಿಸಿ]

ಈ ಮಾಸದಲ್ಲಿ ವಿಶೇಷವಾಗಿ ತುಂಬಿದ ಕುಂಭವನ್ನು, ಪಾದರಕ್ಷೆ, ಛತ್ರಿ, ಬಂದ ಅತಿಥಿಗಳಿಗೆ ಉತ್ತಮವಾದ ಚಾಮರ, ತಣ್ಣೀರು, ಎಳೇ ನೀರು, ಪಾನಕ ಅನ್ನ ಇವೆ ಮೊದಲಾವುಗಳನ್ನು ದಾನ ಮಾಡಬೇಕು. ಮಂಚ, ಶಯ್ಯಾ, ಚಾಪೆ, ಕಂಬಳಿ ದಾನವು ಅಪಮೃತ್ಯು ಪರಿಹಾರ, ಅಂದರೆ ಅಕಾಲದಲ್ಲಿ ಆಗುವ ಮೃತ್ಯುವಿನ ಪರಿಹಾರವೆಂದು ಹೇಳಲಾಗಿದೆ. ಉತ್ತಮವಾದ ಶುದ್ಧ ಹತ್ತಿಯ ಬಟ್ಟೆಗಳನ್ನು ದಾನ ಮಾಡಬೇಕು. ಈ ಆಚರಣೆಯಲ್ಲಿ ಶ್ರದ್ಧೆ, ಭಕ್ತಿ ಮತ್ತು ಬುದ್ಧಿ ಇರಬೇಕಾದದ್ದು ಬಹಳ ಅವಶ್ಯಕ

ಚಾಂದ್ರಮಾನ ಮಾಸಗಳು
ಚೈತ್ರವೈಶಾಖಜ್ಯೇಷ್ಠಆಷಾಢಶ್ರಾವಣಭಾದ್ರಪದಆಶ್ವಯುಜಕಾರ್ತಿಕಮಾರ್ಗಶಿರಪುಷ್ಯಮಾಘಫಾಲ್ಗುಣ

ಉಲ್ಲೇಖಗಳು[ಬದಲಾಯಿಸಿ]

[೧] [೨]

  1. http://omkarmahila.blogspot.in/p/blog-page_9083.html
  2. http://kannadaloka.com/?p=1643