ಉತ್ತರಾಯಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ದಕ್ಷಿಣಾಯನ

೧.ಭೂಮಿಯ ಉತ್ತರ ಗೋಲಾರ್ಧದ ಅತಿ ಉದ್ದದ ದಿನ ಹಾಗೂ ಅತಿ ಸಣ್ಣ ರಾತ್ರಿ ಅಥವಾ ದಕ್ಷಿಣ ಗೋಲಾರ್ಧದ ಅತಿ ಚಿಕ್ಕ ದಿನ ಹಾಗೂ ಅತಿ ಉದ್ದದ ರಾತ್ರಿ ಪ್ರಮಾಣದ ಕಾಲವನ್ನು ಹೊಂದಿದ ದಿನ. ಭೂಮಿಯ ಮಕರಸಂಕ್ರಾಂತಿವೃತ್ತದ ಮೇಲೆ ಸೂರ್ಯನು ನೇರವಾಗಿ ಪ್ರಕಾಶಿಸಲಾರಂಭಿಸುವ ಕಾಲ; ಪ್ರತಿ ವರ್ಷ ಡಿಸೆಂಬರ್ ೨೨ರ ಸುಮಾರಿಗೆ ಉತ್ತರಾಯಣವಾಗುತ್ತದೆ. (ಬಲಗಡೆಯ ಚಿತ್ರ ಇದಕ್ಕೆ ವಿರುದ್ಧವಾದ ಜೂನ್ ೨೨ ರ ದಕ್ಷಿಣಾಯನವನ್ನು ತೋರುತ್ತಿದೆ.)

೨.ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಸಂವತ್ಸರ(ವರ್ಷ)ವನ್ನು ಸೂರ್ಯನ ಸಂಚಲನವನ್ನು ಅನುಸರಿಸಿ,ಎರಡು ಅಯನಗಳಾಗಿ ವಿಂಗಡಿಸಲಾಗಿದೆ.(೧)ಉತ್ತರಾಯಣ.(೨)ದಕ್ಷಿಣಾಯನ. ಸೂರ್ಯನು ಉತ್ತರಧ್ರುವರೇಖೆಯಲ್ಲಿ ಕಾಣಿಸುವ ಕಾಲ-ಉತ್ತರಾಯಣ. ಇದು ಹಿಂದೆ ಮಕರಸಂಕ್ರಾಂತಿಯಿಂದ ಕಟಕಸಂಕ್ರಾಂತಿಯವರೆಗೆ ಅಥವಾ ಸಾಮಾನ್ಯವಾಗಿ ಪುಷ್ಯಮಾಸದಿಂದ ಆಷಾಢಮಾಸದವರೆಗೆ ೬ ತಿಂಗಳ ಕಾಲದ ಅವಧಿಗೆ ಹೊಂದುತ್ತಿತ್ತು. ಆದರೆ, ಭೂಮಿಯ ಧ್ರುವಚಲನೆ ಅಥವಾ ವಕ್ರಾಯನದ ಪರಿಣಾಮವಾಗಿ, ಉತ್ತರಾಯಣವೂ, ಸೂರ್ಯನ ಮಕರ ಸಂಕ್ರಮಣವೂ ಈಗ ಬೇರೆ ಬೇರೆ ದಿನಗಳಂದು ನಡೆಯುತ್ತವೆ. ಆದರೂ, ಉತ್ತರಾಯಣ ಪುಣ್ಯಕಾಲವನ್ನು ಈ ಹಿಂದಿನಂತೆಯೇ ಮಕರ ಸಂಕ್ರಾಂತಿಯಂದೇ ಆಚರಿಸಲಾಗುತ್ತಿದೆ. ಉತ್ತರಾಯಣದ ೬ ತಿಂಗಳ ಪುಣ್ಯಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆಂದೂ,ಈ ಕಾಲದಲ್ಲಿ ಸಾಯುವವರು ನೇರ ಸ್ವರ್ಗಕ್ಕೆ ಹೋಗುತ್ತಾರೆಂದೂ ನಂಬಿಕೆ ಇದೆ.

ಮಹಾಭಾರತದಲ್ಲಿ ಭೀಷ್ಮನು ಶರಶಯ್ಯೆಯ ಮೇಲೆ ಮಲಗಿದ್ದಾಗಲೂ,'ಇಚ್ಛಾಮರಣ'ದ ವರವನ್ನು ಪಡೆದಿದ್ದ ಕಾರಣ ಉತ್ತರಾಯಣ ಪುಣ್ಯಕಾಲ ಬರುವವರೆಗೂ ಕಾದಿದ್ದು, ಉತ್ತರಾಯಣ ಪುಣ್ಯಕಾಲ ಬಂದ ನಂತರ ದೇಹತ್ಯಾಗ ಮಾಡಿದನೆಂಬ ವಿಚಾರ ಕಾಣಸಿಗುತ್ತದೆ.


"http://kn.wikipedia.org/w/index.php?title=ಉತ್ತರಾಯಣ&oldid=316600" ಇಂದ ಪಡೆಯಲ್ಪಟ್ಟಿದೆ