ದುರ್ವಾಸನೆ ಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದುರ್ವಾಸನೆ ಮರ

ದುರ್ವಾಸನೆ ಮರವು ಸ್ಥಳೀಯವಾಗಿ ನಾರ್ಕ ಅಥವಾ ಅಮೃತ ಎಂದು ಕರೆಯಲಾಗುತ್ತದೆ. ಈ ಸಸ್ಯವು ಭಾರತದಲ್ಲಿ ಕಂಡುಬರುವ ಅಳಿವಿನಂಚಿನಲ್ಲಿರುವ ಸಸ್ಯಗಳ ಜಾತಿಯಾಗಿದೆ. ಇದು ಸಾಮನ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ. ಇದರ ವೈಜ್ಞಾನಿಕ ಹೆಸರು ಮಾಫಿಯಾ ಫೋಟಿಡಾ.[೧]

ಇತರೆಹೆಸರುಗಳು[ಬದಲಾಯಿಸಿ]

ವಿವರಣೆ:
  • ಇದು ಸಾಮನ್ಯವಾಗಿ ಪಶ್ಚಿಮಘಟ್ಟಗಳಲ್ಲಿ ಕಂಡುಬರುತ್ತದೆ. ಈ ಸಸ್ಯವು ಕ್ಯಾನ್ಸರ್ ಖಾಯಿಲೆಯನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸಸ್ಯವು 4 ರಿಂದ 8 ಅಡಿ ಎತ್ತರ ಬೆಳೆಯುತ್ತದೆ. ಇದನ್ನು ಒಳಾಂಗಣದಲ್ಲಿ ಅಥವಾ ವರ್ಷಪೂರ್ತಿ ಮನೆಯಲ್ಲಿ ಟಬ್ಬುಗಳಲ್ಲಿ ಇವುಗಳನ್ನು ಬೆಳೆಸಬಹುದು. ಸಾಮಾನ್ಯವಾಗಿ ಇವು ಚಿಕ್ಕ ಗಿಡಗಳಿರುವಾಗ ಚಳಿಗಾಲದ ಪೂರ್ತಿ ಅವಧಿಗಳಲ್ಲಿ ಉತ್ತಮವಾಗಿ ಬೆಳೆಯುತ್ತವೆ. ಈ ಸಸ್ಯದ ಹೂವಿನ ಬಣ್ಣವು ನೇರಳೆ, ಗುಲಾಬಿ ಅಥವಾ ಬಿಳಿ ಬಣ್ಣದಾಗಿರುತ್ತದೆ. ಈ ಗಿಡಗಳನ್ನು ಸುಲಭವಾಗಿ ಆರೈಕೆ ಮಾಡಬಹುದು.[೨]
  • ಆ ಮರದ ತುಂಡನ್ನು ಸುಟ್ಟಾಗ ಕೆಟ್ಟ ವಾನೆ ಬರುತ್ತದೆ.

ಬೆಳೆಯುವ ಪ್ರದೇಶಗಳು[ಬದಲಾಯಿಸಿ]

ಮಹಾರಾಷ್ಟ್ರ,ಕೇರಳ,ಕರ್ನಾಟಕ, ಸತಾರಾ, ಕೋಲ್ಲಾಪುರ್, ಪುಣೆ ಜಿಲ್ಲೆಯ ಪಶ್ಛಿಮಘಟ್ಟಗಳಲ್ಲಿ ವ್ಯಾಪಕವಾಗಿ ವಿತರಿಸಲ್ಪಟ್ಟಿದೆ. ಇದನ್ನು ಸಾಮಾನ್ಯವಾಗಿ ಸಾತಾರದಲ್ಲಿ, ಪಂಚಗಣಿ, ಮಹಾಬಲೇಶ್ವರ ಗಿರಿಧಾಮದ ಅರಣ್ಯದಲ್ಲಿ ಕಾಣಬಹುದು. ಇದು ನಿತ್ಯಹರಿದ್ವರ್ಣ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದು ಸುಮಾರು ೫೦೦ಮೀ ಎತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಸಮುದ್ರದ ಮೇಲ್ಭಾಗದಲ್ಲಿ ೫೫೦ಮೀ ಎತ್ತರಕ್ಕಿಂತಲೂ ಹೆಚ್ಚು ಬೆಳೆಯುತ್ತದೆ.[೩]

ಸಸ್ಯದ ಗುಣಕರ್ಮಗಳು[ಬದಲಾಯಿಸಿ]

  • ಈ ಸಸ್ಯವು 4-8 ಅಡಿ ಎತ್ತರಕ್ಕೆ ಬೆಳೆಯುತ್ತದೆ.
  • ಈ ಸಸ್ಯಗಳು ಸಂಪೂರ್ಣ ಸೂರ್ಯನ ಬೆಳಕಿನಲ್ಲಿ ಅಥವಾ ನೆರಳುಗಳಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಬಹುದು.
  • ಈ ಸಸ್ಯವು ತಾಪಮಾನದಲ್ಲಿ ೫೦ ಡಿಗ್ರಿ ಸೆಲ್ಸಿಯಸ್‍ವರೆಗೆ ಬದುಕಬಲ್ಲದು.
  • ಹೂವುಗಳು ಕೆನ್ನಾಲಿ, ಗುಲಾಬಿ ಅಥವಾ ಬಿಳಿ ಬಣ್ಣದಲ್ಲಿರುತ್ತದೆ.[೪]
  • ಇವುಗಳು ಕಾಂಡದತುದಿಯ ಹತ್ತಿರ ಸಣ್ಣ ಸಮೂಹಗಳಲ್ಲಿ ಕಂಡುಬರುತ್ತದೆ.

ಸಸ್ಯದಆರೈಕೆ[ಬದಲಾಯಿಸಿ]

ಈ ಗಿಡಕ್ಕೆ ಮಧ್ಯಮ ನೀರಿನಅಗತ್ಯವಿದ್ದು, ಮಣ್ಣು ಮಧ್ಯಮ ಫಲವತ್ತಾಗಿರಬೇಕು. ಈ ಸಸ್ಯಕ್ಕೆ ಯಾವುದೇ ರೀತಿಯ ಸಾವಯವ ಗೊಬ್ಬರಗಳು ಸೂಕ್ತವಾಗುತ್ತವೆ. ಹೊಸ ಬೆಳವಣಿಗೆಗಳು ಕಂಡುಬರುವ ಮೊದಲು ವಸಂತಕಾಲದಲ್ಲಿ ಸಸ್ಯವನ್ನು ಫಲವತ್ತಾಗಿಸಬೇಕು. ಸಸ್ಯಆರೈಕೆಗೆ ಜಾಗರೂಕತೆ ಅಗತ್ಯವಿರುತ್ತದೆ.

ಉಪಯೋಗಗಳು[ಬದಲಾಯಿಸಿ]

ಈ ಸಸ್ಯವು ಕ್ಯಾನ್ಸರ್ ಪರಿಣಾಮಕಾರಿ ಪರಿಹಾರವಾಗಿದೆ. ಇವುಗಳನ್ನು ಅಲಂಕಾರಿಕ ಉದ್ದೇಶಗಳಿಗೂ ಸಹ ಬಳಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. https://nurserylive.com/buy-medicinal-plants-online-in-india/mappia-foetida-kalagaura-narkya-plants-in-india
  2. http://poweroflower.com/mappiafoetidakalagauranarkya.php[ಶಾಶ್ವತವಾಗಿ ಮಡಿದ ಕೊಂಡಿ]
  3. "ಆರ್ಕೈವ್ ನಕಲು". Archived from the original on 2018-09-15. Retrieved 2018-09-30.
  4. http://mbox.nurserylive.com/index.php?option=com_virtuemart&view=productdetails&virtuemart_product_id=2293&virtuemart_category_id=31[ಶಾಶ್ವತವಾಗಿ ಮಡಿದ ಕೊಂಡಿ]