ಜೈನ್ ವಿಶ್ವವಿದ್ಯಾನಿಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೈನ್ (ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ) ಗ್ಲೋಬಲ್ ಕ್ಯಾಂಪಸ್ ಕನಕಪುರ ಬೆಂಗಳೂರು

ಜೈನ್ ವಿಶ್ವವಿದ್ಯಾನಿಲಯ, ಅಧಿಕೃತವಾಗಿ ಜೈನ್ (ಡೀಮ್ಡ್-ಟು-ಬಿ ಯುನಿವರ್ಸಿಟಿ) , ಭಾರತದ ಬೆಂಗಳೂರಿನಲ್ಲಿರುವ ಖಾಸಗಿ ಡೀಮ್ಡ್-ಟು -ಬಿ-ವಿಶ್ವವಿದ್ಯಾಲಯ. ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಿಂದ ಆರಂಭವಾಗಿದ್ದು, ಇದು ೨೦೦೯ರಲ್ಲಿ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ ಸ್ಥಾನಮಾನವನ್ನು ಪಡೆಯಿತು.

ಇತಿಹಾಸ[ಬದಲಾಯಿಸಿ]

ಜೈನ್ ವಿಶ್ವವಿದ್ಯಾನಿಲಯವು ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜ್ (ಎಸ್ ಬಿ ಎಮ್ ಜೆ ಸಿ)ನಿಂದ ಆರಂಭವಾಗಿದ್ದು, ಇದನ್ನು ೧೯೯೦ ರಲ್ಲಿ ಜೆಜಿಐ ಗುಂಪಿನ ಸ್ಥಾಪಕ ಮತ್ತು ಅಧ್ಯಕ್ಷ ಡಾ.ಚೆನ್ರಾಜ್ ರಾಯ್ಚಂದ್ ಅವರು ಸ್ಥಾಪಿಸಿದರು. [೧] [೨] ೨೦೦೯ರಲ್ಲಿ ಈ ಕಾಲೇಜನ್ನು ವಿಶ್ವವಿದ್ಯಾನಿಲಯ ಸ್ಥಾನಮಾನವೆಂದು ಪರಿಗಣಿಸಲಾಯಿತು. [೩] ಇತ್ತೀಚಿನ ನವೀಕರಣಗಳನ್ನು ಪಡೆಯಲು ಜನರು ಜೈನ್ ವಿಶ್ವವಿದ್ಯಾನಿಲಯ ಕೊಚ್ಚಿ ವಾರ್ತೆಗಳನ್ನು ಸಹ ಹುಡುಕುತ್ತಾರೆ.

ಘಟಕ ಕಾಲೇಜುಗಳು ಮತ್ತು ಕೇಂದ್ರಗಳು[ಬದಲಾಯಿಸಿ]

ಜೈನ್ (ಡೀಮ್ಡ್-ಟು-ಬಿ ಯುನಿವರ್ಸಿಟಿ) ಈ ಕೆಳಗಿನ ಕಾಲೇಜುಗಳು ಮತ್ತು ಕೇಂದ್ರಗಳನ್ನು ಒಳಗೊಂಡಿದೆ, ಎಲ್ಲವೂ ಬೆಂಗಳೂರಿನಲ್ಲಿ ಇವೆ. [೪]

  • ಸಿಎಮ್‍ಸಿ ಬಿಸ್ನೆಸ್ ಸ್ಕೂಲ್
  • ಸೆಂಟರ್ ಆಫ಼್ ಮ್ಯಾನೇಜ್‍ಮೆಂಟ್ ಸ್ಟಡೀಸ್
  • ಸ್ನಾತಕೋತ್ತರ ಅಧ್ಯಯನ ಕೇಂದ್ರ
  • ದೂರ ಶಿಕ್ಷಣ ಮತ್ತು ವಾಸ್ತವ ಕಲಿಕಾ ಕೇಂದ್ರ
  • ಸಮಾಜ ವಿಜ್ಞಾನ ಮತ್ತು ಶಿಕ್ಷಣ ಸಂಶೋಧನಾ ಕೇಂದ್ರ
  • ನ್ಯಾನೊ ಮತ್ತು ಮೆಟೀರಿಯಲ್ ಸೈನ್ಸ್ ಸೆಂಟರ್
  • ಶುದ್ಧ ಮತ್ತು ಅನ್ವಯಿಕ ವಿಜ್ಞಾನ ಸಂಶೋಧನಾ ಕೇಂದ್ರ
  • ಸೆಂಟರ್ ಫ಼ಾರ್ ಡಿಸಾಸ್ಟರ್ ಮಿಟಿಗೇಶನ್
  • ಪ್ರಾಚೀನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ ಕೇಂದ್ರ
  • ಭಾರತೀಯ ಮನೋವಿಜ್ಞಾನ ಕೇಂದ್ರ
  • ಜೀವ ವಿಜ್ಞಾನ ಸುಧಾರಿತ ಅಧ್ಯಯನ ಕೇಂದ್ರ
  • ಚೆನ್ರಾಜ್ ರಾಯ್ಚಂದ್ ವಾಣಿಜ್ಯೋದ್ಯಮ ಕೇಂದ್ರ
  • ಅಂತರಾಷ್ಟ್ರೀಯ ಏರೋಸ್ಪೇಸ್ ಎಂಜಿನಿಯರಿಂಗ್ ಮತ್ತು ನಿರ್ವಹಣಾ ಸಂಸ್ಥೆ
  • ಸ್ಕೂಲ್ ಆಫ್ ಅಲೈಡ್ ಹೆಲ್ತ್‌ಕೇರ್ ಅಂಡ್ ಸೈನ್ಸಸ್
  • ಸ್ಕೂಲ್ ಆಫ್ ಕಾಮರ್ಸ್ ಸ್ಟಡೀಸ್
  • ಸ್ಕೂಲ್ ಆಫ್ ಸೈನ್ಸಸ್
  • ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ - ಜೈನ್ ವಿಶ್ವವಿದ್ಯಾಲಯ (ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಫ್ಯಾಕಲ್ಟಿ ಎಂದೂ ಕರೆಯಲಾಗುತ್ತದೆ)
  • ಸೃಜನಾತ್ಮಕ ಕಲೆ ಮತ್ತು ವಿನ್ಯಾಸ ಕೇಂದ್ರ

ಶಿಕ್ಷಣ[ಬದಲಾಯಿಸಿ]

ಶೈಕ್ಷಣಿಕ ಕಾರ್ಯಕ್ರಮಗಳು[ಬದಲಾಯಿಸಿ]

ಜೈನ್ ವಿಶ್ವವಿದ್ಯಾಲಯವು ವಾಣಿಜ್ಯ, ವಿಜ್ಞಾನ, ಮಾನವಿಕ ಮತ್ತು ಕಲೆ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮತ್ತು ನಿರ್ವಹಣೆಯಲ್ಲಿ ೨೦೦ಕ್ಕೂ ಹೆಚ್ಚು ಪದವಿ ಪೂರ್ವ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ನೀಡುತ್ತದೆ. [೫] ಇದು ವ್ಯವಹಾರ ಆಡಳಿತ, ಎಂಜಿನಿಯರಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ತರಬೇತಿ ಸಹ ನೀಡುತ್ತದೆ.

ಮಾನ್ಯತೆಗಳು ಮತ್ತು ಶ್ರೇಯಾಂಕಗಳು[ಬದಲಾಯಿಸಿ]

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್ ಆಯ್ ಆರ್ ಎಫ಼್) ಸಂಸ್ಥೆಯು ೨೦೨೦ರಲ್ಲಿ ಒಟ್ಟಾರೆಯಾಗಿ ೧೦೧-೧೫೦ ವಿಶ್ವವಿದ್ಯಾನಿಲಯಗಳಲ್ಲಿ ೮೫ನೇ ಸ್ಥಾನವನ್ನು ಗಳಿಸಿದೆ. ಇದು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ೧೧೭ ಮತ್ತು ವ್ಯಾಪಾರ ಶಾಲೆಗಳಲ್ಲಿ ೮೬ನೇ ಸ್ಥಾನವನ್ನು ನೀಡಿದೆ. ಔಟ್ಲುಕ್ ಇಂಡಿಯಾ ವಿಶ್ವವಿದ್ಯಾನಿಲಯಗಳಲ್ಲಿ ೬೮ ನೇ ಸ್ಥಾನವನ್ನು ನೀಡಿದೆ.

ವಿದ್ಯಾರ್ಥಿ ಜೀವನ[ಬದಲಾಯಿಸಿ]

ಜೈನ್ (ಡೀಮ್ಡ್-ಟು-ಬಿ ವಿಶ್ವವಿದ್ಯಾನಿಲಯ) ಕ್ಯಾಂಪಸ್ ವಸತಿ ವ್ಯವಸ್ಥೆಯು ಸುಮಾರು ೮೫ ಪ್ರತಿಶತದಷ್ಟು ವಿದ್ಯಾರ್ಥಿ ಜನಸಂಖ್ಯೆಗೆ ಅವಕಾಶವನ್ನು ಕಲ್ಪಿಸುತ್ತದೆ.

ಜೈನ್ ವಿಶ್ವವಿದ್ಯಾಲಯದ ಹಾಸ್ಟೆಲ್ ಕಟ್ಟಡ

ಹಾಸ್ಟೆಲ್ ವಸತಿ[ಬದಲಾಯಿಸಿ]

ಜೈನ್ (ಡೀಮ್ಡ್-ಟು-ಬಿ ವಿಶ್ವವಿದ್ಯಾನಿಲಯ) ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಆನ್-ಕ್ಯಾಂಪಸ್ (ಜೆಜಿಐ ಗ್ಲೋಬಲ್ ಕ್ಯಾಂಪಸ್) ಮತ್ತು ಆಫ್-ಕ್ಯಾಂಪಸ್ ವಸತಿಗಳನ್ನು ಒದಗಿಸುತ್ತದೆ. ಅವರ ಹೆಚ್ಚಿನ ಹಾಸ್ಟೆಲ್ ವಸತಿಗಾಗಿ ಅವರು ಕ್ಯಾಂಪಸ್ ಸ್ಟೂಡೆಂಟ್ಸ್ ಕಮ್ಯುನಿಟೀಸ್ (ಸಿಎಸಿ) ಎಂಬ ಕಂಪನಿಯೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆ. ವಸತಿ ವ್ಯವಸ್ಥೆಗಳು ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿರುತ್ತವೆ.[೬]

ಗಮನಾರ್ಹ ಹಳೆಯ ವಿದ್ಯಾರ್ಥಿಗಳು[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Dr. Chenraj Roychand Founder Chairman of JAIN Group".
  2. "Sri Bhagawan Mahaveer Jain College". Jain College. Archived from the original on 2022-05-18. Retrieved 2018-04-16.
  3. "Deemed Universities in Karnataka". University Grants Commission. Retrieved 2018-04-17.
  4. "Schools: Jain (Deemed-to-be University)". Jain (Deemed-to-be University). Archived from the original on 13 December 2011. Retrieved 9 December 2011.
  5. "Programs and Courses Offered". Jain University. Retrieved 2018-04-16.
  6. "Hostel facility in Best university of Bangalore". Jain (Deemed-to-be University) (in ಇಂಗ್ಲಿಷ್). Retrieved 21 December 2018.
  7. "Anup Sridhar Profile". I love India. Retrieved 21 December 2018.
  8. "Top University for (Sports) in Bangalore, India". Jain University. Retrieved 21 December 2018.

ಬಾಹ್ಯ ಕೊಂಡಿಗಳು[ಬದಲಾಯಿಸಿ]