ದಿಗಂತ್ (ನಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಿಗಂತ್
ದಿಗಂತ್
ಬೇರೆ ಹೆಸರುಗಳು ದೂದ್ ಪೇಡ
ವೃತ್ತಿ ನಟ, ರೂಪದರ್ಶಿ
ವರ್ಷಗಳು ಸಕ್ರಿಯ ೨೦೦೬-ಇಲ್ಲಿಯ ತನಕ
ಪತಿ/ಪತ್ನಿ ಐಂದ್ತಿತಾ ರೇ


ದಿಗಂತ್ ಮಂಚಾಲೆ , ಅಥವಾ ದಿಗಂತ್ , ಕನ್ನಡ ಚಲನಚಿತ್ರ ನಟ ಹಾಗು ರೂಪದರ್ಶಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದಾರೆ.[೧]

ಆರಂಭಿಕ ಜೀವನ[ಬದಲಾಯಿಸಿ]

ಇವರ ಹುಟ್ಟೂರು ಕರ್ನಾಟಕ ರಾಜ್ಯದ ಸಾಗರ. ಇವರು ವಾಣಿಜ್ಯ ಕ್ಷೇತ್ರದಲ್ಲಿ ಉನ್ನತ ಪದವಿ ಪಡೆದಿದ್ದಾರೆ. ಇವರ ಶಾಲಾ ವಿದ್ಯಾಭ್ಯಾಸ ತೀರ್ಥಹಳ್ಳಿಯಲ್ಲಿ ನಡೆಯಿತು, ಪಿ ಯು ಸಿ ಯನ್ನು ತುಂಗಾ ಮಹಾವಿದ್ಯಾಲಯ, ತೀರ್ಥಹಳ್ಳಿಯಲ್ಲಿ ಮುಗಿಸಿದರು. ದಿಗಂತನ ತಂದೆ ಕೃಷ್ಣಮೂರ್ತಿ ಅವರು ಪದವಿ ಕಾಲೇಜಿನ ಪ್ರಾಧ್ಯಾಪಕ. ದಿಗಂತ್ ಅವರಿಗೆ ಒಬ್ಬ ಸಹೋದರನಿದ್ದಾನೆ.

ವೃತ್ತಿಜೀವನ[ಬದಲಾಯಿಸಿ]

ಇವರು ಕನ್ನಡ ಚಲನಚಿತ್ರೋದ್ಯಮಕ್ಕೆ ಪರಿಚಯಗೊಂಡಿದ್ದು ಮಿಸ್ ಕ್ಯಾಲಿಫೋರ್ನಿಯಾ ಇಂದ. ಅನಂತರದ ಚಲನಚಿತ್ರ ಎಸ್ ಎಂ ಎಸ್ ೬೨೬೦. ಆದರೆ ಇವರನ್ನು ಜನಪ್ರಿಯ ನಟನಾಗಿಸಿದ್ದು ಮುಂಗಾರು ಮಳೆ.[೨] ನಂತರ ಗಾಳಿಪಟ ಚಿತ್ರದಲ್ಲಿ ಕೂಡ ನಟಿಸಿದರು.[೩] 'ಗಾಳಿಪಟ'ದ ಯಶಸ್ಸಿನ ನಂತರ ದಿಗಂತ್ ಮುಖ್ಯ ಭೂಮಿಕೆಯಲ್ಲಿ ೫ ಚಲನಚಿತ್ರದಲ್ಲಿ ಕಂಡುಬಂದರು. ಮನಸಾರೆ ಇವರು ಏಕನಾಯಕನಾಗಿ ನಟಿಸಿದ ಮೊದಲ ಚಲನಚಿತ್ರ.[ಸೂಕ್ತ ಉಲ್ಲೇಖನ ಬೇಕು].

ಚಲನಚಿತ್ರಗಳು[ಬದಲಾಯಿಸಿ]

ಬಿಡುಗಡೆ ಚಲನಚಿತ್ರ ನಿರ್ದೇಶಕ ಟಿಪ್ಪಣಿಗಳು
[ಯಾವಾಗ?] ಕಡಲ ಮಗೆ (ತುಳು)
೨೦೦೬ ಮಿಸ್ ಕ್ಯಾಲಿಫೋರ್ನಿಯಾ ಕೂಡ್ಲು ರಾಮಕೃಷ್ಣ
೨೦೦೬ ಮುಂಗಾರು ಮಳೆ ಯೋಗರಾಜ ಭಟ್ ಅತಿಥಿ ಪಾತ್ರ
೨೦೦೭ ಮೀರಾ ಮಾಧವ ರಾಘವ ಟಿ.ಎನ್.ಸೀತಾರಾಂ
೨೦೦೮ ಗಾಳಿಪಟ ಯೋಗರಾಜ್ ಭಟ್
೨೦೦೯ ಮಸ್ತ್ ಮಜಾ ಮಾಡಿ ಅನಂತ ರಾಜು
೨೦೦೯ ಹೌಸ್ ಫುಲ್ ಹೇಮಂತ್ ಹೆಗಡೆ
೨೦೦೯ ಮನಸಾರೆ ಯೋಗರಾಜ ಭಟ್
೨೦೦೯ ಬಿಸಿಲೆ ಸಂದೀಪ್ ಎಸ್ ಗೌಡ
೨೦೧೦ ಸ್ವಯಂವರ
೨೦೧೦ ಪಂಚರಂಗಿ ಯೋಗರಾಜ್ ಭಟ್
೨೦೧೧ ಜಾಲಿ ಬಾಯ್ಸ್
೨೦೧೧ ಮಿ.ಡುಪ್ಲಿಕೇಟ್
೨೦೧೧ ಲೈಫು ಇಷ್ಟೇನೆ ಪವನ್ ಕುಮಾರ್
೨೦೧೧ ಕಾಂಚಾಣ
೨೦೧೧ ಪುತ್ರ

ಉಲ್ಲೇಖಗಳು[ಬದಲಾಯಿಸಿ]

  1. "Diganth is not scared!". ದಿ ಟೈಮ್ಸ್ ಆಫ್‌ ಇಂಡಿಯಾ. 14 August 2008. Retrieved 2008-10-30.
  2. "Of superhero and filtered mud". ದಿ ಹಿಂದೂ. 5 September 2007. Archived from the original on 2008-10-28. Retrieved 2008-10-30.
  3. "'I'm not threatened by Ganesh'". ದಿ ಟೈಮ್ಸ್ ಆಫ್‌ ಇಂಡಿಯಾ. 24 July 2007. Retrieved 2008-10-30.