ಎಸ್.ಕೆ.ನಾಡಿಗ್
ವಿಕಿಪೀಡಿಯ ಇಂದ
ಪ್ರಸಿದ್ಧ ವ್ಯಂಗ್ಯಚಿತ್ರಕಾರರಾಗಿದ್ದ ಎಸ್.ಕೆ.ನಾಡಿಗ್, ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ಚಿತ್ರಗುಪ್ತ ವಾರಪತ್ರಿಕೆಯ ಉಪಸಂಪಾದಕರಾಗಿ. ಆ ಪತ್ರಿಕೆಗೆ ಎಸ್.ಕೆ.ನಾಡಿಗ್ ಹಾಗೂ ತಾಯಿನಾಡು ಪತ್ರಿಕೆಯ ಉಪಸಂಪಾದಕರಾಗಿದ್ದ ಹೆಚ್.ಆರ್.ನಾಗೇಶರಾವ್ 'ವಿನೋದ ವಿಹಾರ' ಎಂಬ ಸಾಪ್ತಾಹಿಕ ಅಂಕಣಕ್ಕೆ ಹಾಸ್ಯಲೀಖನಗಳನ್ನು ಬರೆಯುತ್ತಿದ್ದರು. ಮುಂದೆ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಸೇರಿದ ನಂತರ ಬರವಣಿಗೆಯಿಂದ, ವ್ಯಂಗ್ಯಚಿತ್ರ ಕಲೆಯತ್ತ ಹೆಚ್ಚು ಆಸಕ್ತಿ ವಹಿಸಿದರು. ಸುಧಾ, ಕೊರವಂಜಿ, ವಿನೋದ, ಪ್ರಜಾವಾಣಿ, ಉದಯವಾಣಿ ಸೇರಿದಂತೆ ಕನ್ನಡದ ಬಹುತೇಕ ಪತ್ರಿಕೆಗಳಿಗೆ ವ್ಯಂಗ್ಯಚಿತ್ರ ರಚಿಸಿರುವ ನಾಡಿಗ್ ಅವರು, ವ್ಯಂಗ್ಯಚಿತ್ರಕಾರರ ಸಂಘಟನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ವಿಡಂಬನಾತ್ಮಕ ಕಾದಂಬರಿಗಳ ಜತೆಗೆ ಐತಿಹಾಸಿಕ ಕಾದಂಬರಿಯನ್ನು ಕನ್ನೇಶ್ವರ ರಾಮ ಅವರು ರಚಿಸಿದ್ದಾರೆ. ಇವರ ಕನ್ನೇಶ್ವರ ರಾಮ ಚಲನಚಿತ್ರವಾಗಿಯೂ ಜನಪ್ರಿಯಗೊಂಡಿತು.
ಪ್ರಕಟಿತ ಕೃತಿಗಳು [ಬದಲಾಯಿಸಿ]
- ಕನಸಿನೊಳಗೊಂದು ಕನಸು
- ಬಣ್ಣದ ಚಿಟ್ಟೆ
- ಕನ್ನೇಶ್ವರ ರಾಮ