ಇಂಡಿಯನ್‌ ಎಕ್ಸ್‌ಪ್ರೆಸ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಂಡಿಯನ್‌ ಎಕ್ಸ್‌ಪ್ರೆಸ್‌
This Masthead of The Indian Express
ಚಿತ್ರ:Indian-Expree.jpg
The paper's 4 August 2009 front page
ವರ್ಗDaily newspaper
ವಿನ್ಯಾಸBerliner
ಮಾಲೀಕಇಂಡಿಯನ್ ಎಕ್ಸ್ ಪ್ರೆಸ್ ಗುಂಪು
ಪ್ರಕಾಶಕಇಂಡಿಯನ್ ಎಕ್ಸ್ ಪ್ರೆಸ್ ಗುಂಪು
ಮುಖ್ಯ ಸಂಪಾದಕಶೇಖರ್ ಗುಪ್ತಾ
ಸ್ಥಾಪನೆ೧೯೩೧
Political alignmentCentrist[೧]
ಭಾಷೆEnglish
ಕೇಂದ್ರ ಕಾರ್ಯಾಲಯ9,10 BahadurShah Zafar Marg ನವ ದೆಹಲಿ, Delhi 110002
OCLC number70274541
ಅಧಿಕೃತ ತಾಣIndianExpress.com

ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಒಂದು ಇಂಗ್ಲಿಷ್-ಭಾಷೆಯ ಭಾರತೀಯ ದಿನಪತ್ರಿಕೆ ಇದರ ಮಾಲೀಕರು ರಾಮನಾಥ ಗೋಯೆಂಕಾ. ಇದನ್ನು ಚೆನ್ನೈ ಮೂಲದ ಪಿ.ವರದರಾಜುಲು ನಾಯ್ಡು 1931ರಲ್ಲಿ ಆರಂಭಿಸಿದರು. 1991ರಲ್ಲಿ ರಾಮನಾಥ ಗೋಯೆಂಕಾ ನಿಧನರಾದ ಬಳಿಕ, 1999ರಲ್ಲಿ ಈ ಗುಂಪು ಅವರ ಕುಟುಂಬದ ಸದಸ್ಯರ ನಡುವೆ ಎರಡಾಗಿ ವಿಭಜನೆಯಾಯಿತು. ದಕ್ಷಿಣದ ಆವೃತ್ತಿಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಎಂಬ ಹೆಸರನ್ನು ಪಡೆದವು.,ಹಳೆಯಇಂಡಿಯನ್ ಎಕ್ಸ್‌ಪ್ರೆಸ್‌ ಉತ್ತರದ ಭಾಗದಲ್ಲಿ ತನ್ನ ಹೆಸರನ್ನು ಹಿಂದೆ "ದಿ" ಎಂಬ ಪ್ರತ್ಯಯ ಸೇರಿಸಿಕೊಂಡು ಹಾಗೆಯೇ ಉಳಿಸಿಕೊಂಡಿತು. ಮುಂಬಯಿಯಿಂದ ಅದು ಕಾರ್ಯಾಚರಣೆ ನಡೆಸುತ್ತಿದೆ. ಭಾರತದ ಎಲ್ಲ ಪ್ರಮುಖ ನಗರಗಳಿಂದ ಇದು ಪ್ರಕಟವಾಗುತ್ತಿದೆ. ಇದೊಂದು ಪ್ರಮುಖ ಮತ್ತು ಗೌರವಾನ್ವಿತ ಭಾರತೀಯ ವೃತ್ತಪತ್ರಿಕೆಯಾಗಿದೆ. ಜಗತ್ತಿನಾದ್ಯಂತ ಇದರ ಪ್ರಸಾರವಿದೆ.[೨][೩][೪] ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಮಾಲೀಕತ್ವವನ್ನುಇಂಡಿಯನ್ ಎಕ್ಸ್‌ಪ್ರೆಸ್‌ ಗ್ರುಪ್ ಹೊಂದಿದ್ದು ವಿವೇಕ ಗೋಯೆಂಕಾ ಅವರು ಇದರ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರು. ಈ ಗುಂಪು ಭಾರತದಲ್ಲಿ ಇತರ ಸುದ್ದಿಪತ್ರಿಕೆಗಳಾದ ಫೈನಾನ್ಸಿಯಲ್ ಎಕ್ಸ್‌ಪ್ರೆಸ್‌ ಮಾಲೀಕತ್ವವನ್ನೂ ಹೊಂದಿದೆ, ಈ ಪತ್ರಿಕೆಯು ಭಾರತೀಯ ಅರ್ಥವ್ಯವಸ್ಥೆ, ಷೇರು ಪೇಟೆ, ಮತ್ತು ಆರ್ಥಿಕ ನೀತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಗುಂಪು ಇತರ ಪ್ರಕಟಣೆಗಳಾದ ಸ್ಕ್ರೀನ್ ಪ್ರಕಟಿಸುತ್ತಿದೆ. ಪ್ರತಿ ವಾರ ಬರುವ ಇದು ಮನರಂಜನೆ ಸುದ್ದಿಗಳನ್ನು ನೀಡುತ್ತದೆ. ಮರಾಠಿ- ಭಾಷೆಯ ದಿನಪತ್ರಿಕೆಲೋಕಸತ್ತಾ , ಮತ್ತು ಹಿಂದಿ ದಿನಪತ್ರಿಕೆ ಜನಸತ್ತಾ ವನ್ನೂ ಇದು ಪ್ರಕಟಿಸುತ್ತಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್‌ಡೆಲ್ಲಿ, ಮುಂಬಯಿ, ನಾಗಪುರ, ಪುಣೆ, ಕೋಲ್ಕತಾ, ಲೂಧಿಯಾನಾ, ಚಂಡೀಗಡ, ಲಖನೌ ಮತ್ತು ಅಹ್ಮದಾಬಾದ್ ಈ ಎಂಟು ಸ್ಥಳಗಳಿಂದ ಪ್ರಕಟವಾಗುತ್ತಿದೆ.

ಗುಂಪಿನ ಇತಿಹಾಸ[ಬದಲಾಯಿಸಿ]

ಇಂಡಿಯನ್ ಎಕ್ಸ್‌ಪ್ರೆಸ್‌ಅನ್ನು ಒಬ್ಬಆಯುರ್ವೇದದ ವೈದ್ಯ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯ ಪಿ. ವರದರಾಜುಲು ನಾಯ್ಡು 1931ರಲ್ಲಿಚೆನ್ನೈಯಲ್ಲಿ (ಆಗ ಮದ್ರಾಸ್) ತಮ್ಮ “ತಮಿಳ್ ನಾಡು” ಪ್ರೆಸ್ ನಲ್ಲಿ ಪ್ರಕಟಿಸುವ ಮೂಲಕ ಪ್ರಾರಂಭಿಸಿದರು. ಆದರೆ, ಶೀಘ್ರವೇ ಹಣಕಾಸಿನ ಮುಗ್ಗಟ್ಟು ತಲೆದೋರಿ ಅವರು ಪತ್ರಿಕೆಯನ್ನು ರಾಷ್ಟ್ರೀಯ ಸುದ್ದಿ ಸಂಸ್ಥೆ ದಿ ಫ್ರೀ ಪ್ರೆಸ್ ಜರ್ನಲ್ ನ ಸ್ಥಾಪಕ ಎಸ್.ಸದಾನಂದ ಅವರಿಗೆ ಮಾರಾಟ ಮಾಡಿದರು. 1933ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ ತನ್ನ ಎರಡನೆಯ ಕಚೇರಿಯನ್ನು ಮದುರೈನಲ್ಲಿ ತೆರೆಯಿತು ಮತ್ತು ತಮಿಳು ಆವೃತ್ತಿ ದಿನಮಣಿಯನ್ನು ಆರಂಭಿಸಿತು. ಸದಾನಂದ ಅನೇಕ ಹೊಸತನ್ನು ಪರಿಚಯಿಸಿದರು ಮತ್ತು ಬೆಲೆಯನ್ನು ಇಳಿಸಿದರು. ಆದರೆ ಹಣಕಾಸಿನ ಬಿಕ್ಕಟ್ಟಿನ ಕಾರಣ ಅವರು ಮಾಲೀಕತ್ವದ ಹಕ್ಕಿನ ಪಾಲನ್ನು ಪರಿವರ್ತನೀಯ ಡಿಬೆಂಚರುಗಳ ರೂಪದಲ್ಲಿ ರಾಮನಾಥ ಗೋಯೆಂಕಾ ಅವರಿಗೆ ಮಾರುವ ಒತ್ತಡಕ್ಕೆ ಸಿಲುಕಿದರು. 1935ರಲ್ಲಿ ಫ್ರೀ ಪ್ರೆಸ್ ಜರ್ನಲ್ ಕುಸಿದುಬಿದ್ದಾಗ ಸದಾನಂದ ಅವರು ಇಂಡಿಯನ್ ಎಕ್ಸ್‌ಪ್ರೆಸ್‌ನ ಮಾಲೀಕತ್ವವನ್ನು ಕಳೆದುಕೊಂಡರು. ಈ ಸಂಬಂಧ ಗೋಯೆಂಕಾ ಅವರೊಂದಿಗೆ ಸುದೀರ್ಘ ಕಾಲ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯಿತು. ಕೆಲವು ಪಕ್ಷಗಳ ನಡುವೆ ಪ್ರಹಾರಗಳ ವಿನಿಮಯ ನಡೆದವು.[ಸೂಕ್ತ ಉಲ್ಲೇಖನ ಬೇಕು]. ಅಂತಿಮವಾಗಿ ಒಂದು ವರ್ಷದ ಬಳಿಕ ಗೋಯೆಂಕಾ ಉಳಿದ ಶೇ.26 ರಷ್ಟು ಹಕ್ಕನ್ನೂ ಸದಾನಂದ ಅವರಿಂದ ಖರೀದಿಸಿದರು. ಮತ್ತು ಪತ್ರಿಕೆಯು ಗೋಯೆಂಕಾ ಅವರ ನಿಯಂತ್ರಣಕ್ಕೆ ಬಂತು. ಅವರು ಪತ್ರಿಕೆಯ, ವ್ಯವಸ್ಥೆಯ ವಿರುದ್ಧದ ಧ್ವನಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು.[ಸೂಕ್ತ ಉಲ್ಲೇಖನ ಬೇಕು] ಅಲ್ಲದೆ ಆ ಸಮಯದಲ್ಲಿ ಅದು ಸುಸಜ್ಜಿತವಾದ ದಿ ಹಿಂದೂ ಮತ್ತು ಮೇಲ್ ಪತ್ರಿಕೆಗಳ ಮತ್ತು ಇತರ ಪ್ರಮುಖ ಪತ್ರಿಕೆಗಳ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಯಿತು. 1930ರ ದಶಕದ ಕೊನೆಯಲ್ಲಿ ಇದರ ಪ್ರಸಾರ ಸಂಖ್ಯೆ 2000ಕ್ಕಿಂತ ಹೆಚ್ಚಿರಲಿಲ್ಲ[ಸೂಕ್ತ ಉಲ್ಲೇಖನ ಬೇಕು]. 1939ರಲ್ಲಿ ಇದು ಇನ್ನೊಂದು ಪ್ರಮುಖ ತೆಲುಗು ದಿನಪತ್ರಿಕೆ ಆಂಧ್ರಪ್ರಭವನ್ನು ಖರೀದಿಸಿತು. ನಂತರ ಈ ಮೂರು ದಿನಪತ್ರಿಕೆಗಳಿಗೆ ಮೂವರು ಬಂದೂಕುಧಾರಿ ಸಿಪಾಯಿಗಳು ಎಂದೂ ಹೆಸರನ್ನು ಪಡೆಯಿತು.[ಸೂಕ್ತ ಉಲ್ಲೇಖನ ಬೇಕು] 1940ರಲ್ಲಿ ಪತ್ರಿಕೆಯ ಸಂಪೂರ್ಣ ಆವರಣವೇ ಬೆಂಕಿಗೆ ಆಹುತಿಯಾಯಿತು. ಅದರ ವೈರಿ ದಿ ಹಿಂದೂ, ಪತ್ರಿಕೆ ಪುನರಾರಂಭವಾಗುವುದಕ್ಕೆ ಗಣನೀಯವಾಗಿ ನೆರವು ನೀಡಿತು. ತನ್ನ ಸ್ವದೇಶಿಮಿತ್ರನ್ ದ ಮುದ್ರಣಾಲಯದಲ್ಲಿ ಅದನ್ನು ತಾತ್ಕಾಲಿಕವಾಗಿ ಮುದ್ರಿಸಿ ಕೊಟ್ಟಿತು. ಮತ್ತು ಇತ್ತೀಚೆಗಷ್ಟೆ ತೆರವು ಮಾಡಿದ ೨, ಮೌಂಟ್ ರೋಡ್ ನಲ್ಲಿರುವ ಸ್ಥಳವನ್ನು ಅದಕ್ಕೆ ನೀಡಿತು. ಇದು ಮುಂದೆ ಎಕ್ಸ್‌ಪ್ರೆಸ್‌ ಎಸ್ಟೇಟ್ ಎಂದು ಹೆಗ್ಗುರುತಾಯಿತು.[ಸೂಕ್ತ ಉಲ್ಲೇಖನ ಬೇಕು] ಈ ಹೊಸ ಸ್ಥಳವು ಎಕ್ಸ್‌ಪ್ರೆಸ್‌ ಅಧಿಕ ವೇಗದ ಮುದ್ರಣ ಯಂತ್ರವನ್ನು ಪಡೆದುಕೊಳ್ಳಲು ನೆರವಾಯಿತು. ಹಣಕಾಸಿನ ಮುಗ್ಗಟ್ಟಿನಿಂದ ಪಾರಾಗುವುದಕ್ಕೆ ಗೋಯೆಂಕಾ ಉದ್ದೇಶಪೂರ್ವಕವಾಗಿಯೇ ಬೆಂಕಿಹಾಕಿದರು ಎಂದು ಕೆಲವರು ಹೇಳಿದರು[ಸೂಕ್ತ ಉಲ್ಲೇಖನ ಬೇಕು]. ಮುಂದಿನ ವರ್ಷಗಳಲ್ಲಿ ಗೋಯೆಂಕಾ ಮುಂಬಯಿ ಆವೃತ್ತಿಯನ್ನು ಆರಂಭಿಸಿದರು. ಅಲ್ಲಿ ಹೆಗ್ಗುರುತಾಗಿರುವ ಎಕ್ಸ್‌ಪ್ರೆಸ್‌ ಟವರ್ಸ್ ನಲ್ಲಿ ಅವರ ಕಚೇರಿ. 1944ರಲ್ಲಿ ಅವರು ಮಾರ್ನಿಂಗ್ ಸ್ಟ್ಯಾಂಡರ್ಡ್ ಖರೀದಿಸಿದರು. ಎರಡು ವರ್ಷಗಳ ಬಳಿಕ ಅದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ನ ಮುಂಬಯಿ ಆವೃತ್ತಿಯಾಯಿತು. ನಂತರ ಒಂದಾದಮೇಲೆ ಒಂದರಂತೆ ಆವೃತ್ತಿಗಳು ಅನೇಕ ನಗರಗಳಲ್ಲಿ ಆರಂಭವಾದವು. 1957ರಲ್ಲಿ ಮದುರೈ ಆವೃತ್ತಿ, 1965ರಲ್ಲಿ ಬೆಂಗಳೂರು ಆವೃತ್ತಿ, ಮತ್ತು 1968ರಲ್ಲಿ ಅಹ್ಮದಾಬಾದ್ ಆವೃತ್ತಿ ಆರಂಭವಾದವು. 1961ರಲ್ಲಿ ಮುಂಬಯಿಯಿಂದ ಫೈನಾನ್ಸಿಯಲ್ ಎಕ್ಸ್‌ಪ್ರೆಸ್‌ ಆರಂಭವಾಯಿತು. 1965ರಲ್ಲಿ ಬೆಂಗಳೂರಿನಿಂದ ಕನ್ನಡ ದಿನಪತ್ರಿಕೆ ಕನ್ನಡ ಪ್ರಭ ಆರಂಭವಾಯಿತು. ತೆಲುಗು ದಿನಪತ್ರಿಕೆ ಆಂಧ್ರಪ್ರಭದ ಬೆಂಗಳೂರು ಆವೃತ್ತಿ ಮತ್ತು ಗುಜರಾತಿ ದಿನಪತ್ರಿಕೆ ಲೋಕಸತ್ತಾ ಮತ್ತು ಜನಸತ್ತಾಗಳು 1952ರಲ್ಲಿ ಅಹ್ಮದಾಬಾದ್ ಮತ್ತು ಬರೋಡಾಗಳಿಂದ ಪ್ರಾರಂಭವಾದವು. ಡೆಲ್ಲಿ ಆವೃತ್ತಿ ಆರಂಭವಾದದ್ದು ತೇಜ್ ಗ್ರುಪ್್ನ ಇಂಡಿಯನ್ ನ್ಯೂಸ್ ಕ್ರಾನಿಕಲ್ ಅನ್ನು 1951ರಲ್ಲಿ ಸ್ವಾಧೀನಪಡಿಸಿಕೊಂಡಬಳಿಕ. ಇದೇ 1953ರಿಂದ ಇಂಡಿಯನ್ ಎಕ್ಸ್‌ಪ್ರೆಸ್‌ ನ ಡೆಲ್ಲಿ ಆವೃತ್ತಿಯಾಯಿತು. 1990ರಲ್ಲಿ ಇದು ಸ್ಟರ್ಲಿಂಗ್ ಗ್ರುಪ್ ನ ಮ್ಯಾಗಝಿನ್ ಗಳನ್ನು ಖರೀದಿಸಿತು. ಅವುಗಳಲ್ಲಿ ಜಂಟಲ್ ಮನ್ ಮ್ಯಾಗಝಿನ್ ಕೂಡ ಸೇರಿತ್ತು. 1991ರಲ್ಲಿ ರಾಮನಾಥ ಗೋಯೆಂಕಾ ಅವರ ನಿಧನದ ಬಳಿಕ ಕುಟುಂಬದ ಇಬ್ಬರು ಸದಸ್ಯರು ಗುಂಪನ್ನು ಎರಡಾಗಿಸಿ ಪಾಲುಮಾಡಿಕೊಂಡರು. ಎಲ್ಲ ಉತ್ತರದ ಆವೃತ್ತಿಗಳೊಂದಿಗೆ ಇಂಡಿಯನ್ ಎಕ್ಸ್‌ಪ್ರೆಸ್‌ ಮುಂಬಯಿ ಮತ್ತು ಚೆನ್ನೈನಲ್ಲಿ ಕಂದ್ರ ಕಚೇರಿ ಹೊಂದಿರುವ ಎಕ್ಸ್‌ಪ್ರೆಸ್‌ ಮದುರೈ ಲಿ. ದಕ್ಷಿಣದ ಆವೃತ್ತಿಗಳೊಂದಿಗೆ ಬೇರೆಯಾದವು.

ಕಾರ್ಯನೀತಿಗಳು[ಬದಲಾಯಿಸಿ]

ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಆಗಾಗ್ಗೆ ಮಹತ್ವದ ತನಿಖಾ ವರದಿಗಳನ್ನು ಪ್ರಕಟಿಸಿತು. ಅದು ಮಹತ್ವದ ಪರಿಣಾಮಗಳಿಗೆ ಕಾರಣವಾಯಿತು. ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಜಿನಿಯರ್ ಒಬ್ಬರ ಕೊಲೆಯ ಸಂಬಂಧದಲ್ಲಿ ಇದರ ವರದಿಗಳು ಭಾರತೀಯ ವರಿಷ್ಠ ನ್ಯಾಯಾಲಯವುಭಾರತ ಸರ್ಕಾರಕ್ಕೆ ಕಾನೂನುಬಾಹಿರ ಕೃತ್ಯಗಳ ಬಗ್ಗೆ ಮಾಹಿತಿ ನೀಡುವ ಕಾಯ್ದೆ ರೂಪಿಸುವುದಕ್ಕೆ ಬದ್ಧವಾಗುವುದಕ್ಕೆ ಒತ್ತಾಯಪಡಿಸಿತು. ಇದು ನಡೆಸಿದ ಪ್ರಚಾರವು ಮಾಹಿತಿ ಹಕ್ಕು ಕಾಯ್ದೆಯು 2005ರಲ್ಲಿ ಜಾರಿಗೆ ಬರುವುದಕ್ಕೆ ನೆರವಾಯಿತು. 14 ಪತ್ರಿಕೆಯು ತನ್ನ ನಿರ್ಭೀತ ಧ್ವನಿಗೆ ಹೆಸರಾಯಿತು. ಭಾರತೀಯ ತುರ್ತುಪರಿಸ್ಥಿತಿಯ ಕಾಲದಲ್ಲಿ ಪತ್ರಿಕೆಯು ಕೇಂದ್ರ ಸರ್ಕಾರದ ಕತ್ತರಿ ಪ್ರಯೋಗಕ್ಕೆ ಒಳಪಡುವುದಕ್ಕೆ ನಿರಾಕರಿಸಿತು. ಜೂನ್ 26, 1975ರಂದು ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆ ಪ್ರಕಟಗೊಳ್ಳಲಿಲ್ಲ. ಎರಡು ದಿನಗಳ ನಂತರ ಹೊರಬಂದ ಸಂಚಿಕೆಯಲ್ಲಿ ಸಂಪಾದಕೀಯ ಪ್ರಕಟವಾಗುವ ಸ್ಥಳವನ್ನು ಪ್ರತಿಭಟನೆಯ ಚಿಹ್ನೆಯಾಗಿ ಖಾಲಿ ಬಿಡಲಾಗಿತ್ತು.[೫] ಇಂಡಿಯನ್ ಎಕ್ಸ್‌ಪ್ರೆಸ್‌ ಸಂತ್ ಸಿಂಗ್ ಚತ್ವಾಲ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದುಕೊಂಡಾಗ ಆತ ಯಾರು ಎಂಬುದನ್ನು ಬಯಲಿಗೆಳೆಯಿತು ಮತ್ತು ರಾಷ್ಟ್ರೀಯ ಗೌರವವನ್ನು ಸೂಕ್ತ ವ್ಯಕ್ತಿಗೇ ನೀಡಬೇಕು ಎಂಬ ವಿಷಯದಲ್ಲಿ ಚರ್ಚೆಯನ್ನು ಆರಂಭಿಸಿತು.

ಕೇಂದ್ರ ಕಾರ್ಯಾಲಯ[ಬದಲಾಯಿಸಿ]

ದಿ ಎಕ್ಸ್‌ಪ್ರೆಸ್‌ ಗ್ರುಪ್ ಮುಂಬಯಿಯಲ್ಲಿ ಕೇಂದ್ರಕಚೇರಿ ವಿಭಾಗವನ್ನು ಹೊಂದಿದೆ, ಇದನ್ನು ಎಕ್ಸ್‌ಪ್ರೆಸ್‌ ಪಬ್ಲಿಕೇಶನ್ಸ್ ಮದುರೈ ಎಂದು ಗೊಂದಲಕ್ಕೆ ಒಳಗಾಗಬೇಡಿ. ಅದು ದಕ್ಷಿಣ ಭಾರತದ ವೃತ್ತಪತ್ರಿಕೆ ಸಮೂಹವನ್ನು ನಡೆಸುತ್ತಿದೆ. ಇದರಲ್ಲಿ ದಿ ನ್ಯೂ ಇಂಡಿಯನ್ಎಕ್ಸ್‌ಪ್ರೆಸ್‌ ಸೇರಿದೆ. ದಿ ಎಕ್ಸ್‌ಪ್ರೆಸ್‌ ಗ್ರುಪ್ ನಿಂದ ಬೇರೆಯದೇ ಆದ ಸಂಸ್ಥೆ ಅದು. ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಯಾಗಿರುವ ಟೈಮ್ಸ್ ಆಫ್ ಇಂಡಿಯಾ ಗಿಂತ ಗ್ರಾಹಕರ ಆದ್ಯತೆಗೆ ಕಡಿಮೆ ಗಮನವನ್ನು ನೀಡಿದೆ.

ಹಣಕಾಸಿನ ಮುಗ್ಗಟ್ಟುಗಳು[ಬದಲಾಯಿಸಿ]

2000-2002ದ ನಡುವೆ ಪತ್ರಿಕೆಯು ಲಾಭದಲ್ಲಾ ಕುಸಿತವನ್ನು ಕಂಡಿತು. ಆದರೆ ಅದು ತನ್ನ ನೀತಿಗಳನ್ನು ಮತ್ತು ತಾನು ಪ್ರಕಟಿಸುತ್ತಿದ್ದ ವಿಷಯದ ಸ್ವರೂಪವನ್ನು ಬದಲಿಸಲಿಲ್ಲ. ಹೀಗಿದ್ದರೂ ಪತ್ರಿಕೆಯು ಹಾನಿಯಾಗುತ್ತಿದ್ದ ಕೆಲವು ಆವೃತ್ತಿಗಳನ್ನು ಮಾರುವುದಕ್ಕೆ ಫ್ರಾಂಚೈಸಿಗಳನ್ನು ನೇಮಿಸಿತು. ಇದರಲ್ಲಿ ಜಮ್ಮು ಆವೃತ್ತಿಯೂ ಸೇರಿತ್ತು. (ಈ ಮಾದರಿಯನ್ನು ಎಕ್ಸ್‌ಪ್ರೆಸ್‌ ಗ್ರುಪ್ ನ ವಾಣಿಜ್ಯ ಪತ್ರಿಕೆ ದಿ ಫೈನಾನ್ಸಿಯಲ್ ಎಕ್ಸ್‌ಪ್ರೆಸ್‌ನ ಚಂಡೀಗಡದ ಆವೃತ್ತಿಯನ್ನು ಆರಂಭಿಸುವುದಕ್ಕೂ ಅಳವಡಿಸಿಕೊಳ್ಳಲಾಯಿತು. ಫ್ರಾಂಚೈಸಿ ಮಾದರಿಯಲ್ಲಿ, ಆವೃತ್ತಿಯ ಸಂಪಾದಕೀಯ ನಿಯಂತ್ರಣವನ್ನು ಎಕ್ಸ್‌ಪ್ರೆಸ್‌ ಗ್ರುಪ್ ನೇಮಕ ಮಾಡಿಕೊಂಡ ಸಂಪಾದಕೀಯ ಸಿಬ್ಬಂದಿಯಲ್ಲೇ ಉಳಿಸಿಕೊಳ್ಳಲಾಯಿತು. ಫ್ರಾಂಚೈಸಿ ಮಾಲೀಕನಿಗೆ ಪ್ರಸರಣ ಮತ್ತು ಆದಾಯ ರೂಢಿಸುವುದೂ ಸೇರಿದಂತೆ ವಾಣಿಜ್ಯದ ಕಡೆಯ ನಿಯಂತ್ರಣವನ್ನು ನೀಡಲಾಯಿತು. ಇದಕ್ಕೆ ಪ್ರತಿಯಾಗಿ ಫ್ರಾಂಚೈಸಿಯು ಕಾರ್ಯಾಚರಣೆಯ ವೆಚ್ಚ ಮತ್ತು ಏಕಕಾಲದ ಶುಲ್ಕವನ್ನು ಎಕ್ಸ್‌ಪ್ರೆಸ್‌ ಗ್ರುಪ್್ಗೆ ನೀಡುವುದೆಂದು ನಿರೀಕ್ಷಿಸಲಾಗಿತ್ತು. ಈ ಮಾದರಿಯು ಕಾಗದದಲ್ಲಿ ಚೆನ್ನಾಗಿಯೇ ಕಂಡಿತು. ಹೀಗಿದ್ದರೂ ಇದು ಸಂಪಾದಕೀಯದ ಗುಣಮಟ್ಟಗಳು ಕುಸಿಯುವುದಕ್ಕೆ ದಾರಿ ಮಾಡಿತು. ಹೇಗೆಂದರೆ, ಫ್ರಾಂಚೈಸಿಗಳು ವರದಿಗಾರರ ನೇಮಕದಲ್ಲಿ ಮತ್ತು ವಿಷಯದ ಆಯ್ಕೆಯಲ್ಲಿ ತಮ್ಮ ಹೆಚ್ಚಿನ ಮಾತು ನಡೆಯಬೇಕು ಎಂದು ಕೋರಿದರು. ಸಂಪಾದಕೀಯ ವಿಭಾಗದ ನಿಯಂತ್ರಣವನ್ನು ತನಗೆ ಕೊಡದೆ ಹೋದರೆ ಆವೃತ್ತಿಯನ್ನು ಮುಚ್ಚುವುದಾಗಿ ಫ್ರಾಂಚೈಸಿ ಬೆದರಿಕೆ ಹಾಕಿದಾಗ ವಾಣಿಜ್ಯಕ ಹಿತಾಸಕ್ತಿಗಳು ಮತ್ತು ಪತ್ರಿಕೋದ್ಯಮದ ನೈತಿಕತೆಗಳು ದಿ ಫೈನಾನ್ಸಿಯಲ್ ಎಕ್ಸ್‌ಪ್ರೆಸ್‌ನ ಚಂಡೀಗಡದ ಆವೃತ್ತಿಯಲ್ಲಿ ಸಂಘರ್ಷದ ತುದಿಯನ್ನು ತಲುಪಿದವು. ಅಂತಿಮವಾಗಿ ಫ್ರಾಂಚೈಸಿಯೇ ವಿಜಯಿಯಾಗಿ ಹೊರಹೊಮ್ಮಿದ. ಇದರಿಂದಾಗಿ ಆವೃತ್ತಿಯ ಸ್ಥಾನಿಕ ಸಂಪಾದಕರು ರಾಜೀನಾಮೆ ನೀಡಿದರು. ಇದರ ಪರಿಣಾಮವಾಗಿ ಸಂಪಾದಕೀಯ ತಂಡಕ್ಕೆ ಹೊಸ ನೇಮಕಗಳು ನಡೆದವು. ಮತ್ತು ಫ್ರಾಂಚೈಸಿಯು ವ್ಯವಸ್ಥಾಪಕ ಸಂಪಾದಕನ ಸ್ಥಾನವನ್ನು ಪಡೆದರು.ಆನಂತರ ದಿ ಎಕ್ಸ್‌ಪ್ರೆಸ್‌ ಗ್ರುಪ್ ರು.45 ಕೋಟ (ರು.450 ದಶಲಕ್ಷ) ಲಾಭವನ್ನು 2004ನೆ ಇಸ್ವಿಯಲ್ಲಿ ಗಳಿಸಿತು. ಈ ಹಣಕಾಸಿನ ವಹಿವಾಟನ್ನು ಭಾರತದ ಅತ್ಯಂತ ಗೌರವಾನ್ವಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ಅಹ್ಮದಾಬಾದ್‌ನಲ್ಲಿ ಒಂದು ಕೇಸ್ ಸ್ಟಡಿಯಾಗಿ ಬಳಸಿಕೊಂಡಿತು.

ಪ್ರಶಸ್ತಿಗಳು[ಬದಲಾಯಿಸಿ]

  • ರಾಮನಾಥ ಗೋಯೆಂಕಾ ಎಕ್ಸಲನ್ಸ್ ಇನ್ ಜರ್ನಾಲಿಸಂ ಅವಾರ್ಡ್ಸ್
  • ರಾಮನಾಥ ಗೋಯೆಂಕಾ ಇಂಡಿಯಾ ಪ್ರೆಸ್ ಫೋಟೋ ಅವಾರ್ಡ್ಸ್
  • ಸ್ಕ್ರೀನ್ ಅವಾರ್ಡ್ಸ್
  • ಎಫ್ಇ ವುಮೆನ್ ಇನ್ ಬಿಸಿನೆಸ್ ಅವಾರ್ಡ್ಸ್
  • ಇಂಟೆಲಿಜೆಂಟ್ ಎಂಟರ್ಪ್ರೈಸ್ ಅವಾರ್ಡ್ಸ್
  • ಸೆಕ್ಯುರಿಟಿ ಸ್ಟ್ರೆಟೆಜಿಸ್ಟ್ ಅವಾರ್ಡ್ಸ್
  • ಅಪ್‌ಟೈಮ್ ಚಾಂಪಿಯನ್ ಅವಾರ್ಡ್ಸ್
  • ಎಕ್ಸ್‌ಪ್ರೆಸ್‌ ಟ್ರಾವೆಲ್ ವರ್ಲ್ಡ್ ಅವಾರ್ಡ್ಸ್
  • ಫಾರ್ಮಾ ಎಕ್ಸನೆಲ್ಸ್ ಅವಾರ್ಡ್ಸ್
  • ಹೆಲ್ತ್ ‌ಕೇರ್ ಎಕ್ಸಲೆನ್ಸ್ ಅವಾರ್ಡ್ಸ್

ಲೋಕಸತ್ತಾ[ಬದಲಾಯಿಸಿ]

ಇತಿಹಾಸ[ಬದಲಾಯಿಸಿ]

ಜನವರಿ 14, 1948ರಂದು ದಿ ಎಕ್ಸ್‌ಪ್ರೆಸ್‌ ಗ್ರುಪ್ ಲೋಕಸತ್ತಾವನ್ನು ಪ್ರಾರಂಭಿಸಿತು. ಕೇವಲ ಏಳು ತಿಂಗಳ ಬಳಿಕ, ವಿಶೇಷ ಭಾನುವಾರ ಪುರವಣಿ 'ರವಿವಾರ ಲೋಕಸತ್ತಾ'ವನ್ನು ಆರಂಭಿಸಲಾಯಿತು. ಆ ಕಾಲದಲ್ಲಿ ಲೋಕಸತ್ತಾ ತಕ್ಷಣವೇ ಇಂಡಿಯನ್ ಎಕ್ಸ್‌ಪ್ರೆಸ್‌ ಗ್ರುಪ್್ಗೆ ಲಾಭದಾಯಕ ಉದ್ಯಮ ಸಾಹಸವಾಗಿ ಕಂಡಿತು. ಅತ್ಯಂತ ಆರಂಭದಿಂದಲೇ ಲೋಕಸತ್ತಾ ರಾಜಕೀಯ ವಿಷಯಗಳನ್ನು ವಿಸ್ತಾರವಾಗಿ ಪ್ರಕಟಿಸಿತು; ಅದು ತಕ್ಷಣವೇ ಪತ್ರಿಕೆಯ USP ಆಗಿಬಿಟ್ಟಿತು. ಹೊಸದಾಗಿ ಆರಂಭಿಸಿದ ಈ ದಿನಪತ್ರಿಕೆಯು ವಿಶಿಷ್ಟವಾಗಿತ್ತು. ಏಕೆಂದರೆ ಇದು ಮರಾಠಿ ದಿನಪತ್ರಿಕೆಗಳಲ್ಲಿ ಇಂಗ್ಲಿಷ್ ದಿನಪತ್ರಿಕೆಗಳ ಮಾದರಿಯಲ್ಲಿತ್ತು. ಅಸ್ತಿತ್ವದಲ್ಲಿದ್ದ ದಿನಪತ್ರಿಕೆಗಳಾದ ಲೋಕಮಾನ್ಯ ಮತ್ತು ನವಶಕ್ತಿಗಳ ಮಾದರಿಗಳಿಗಿಂತ ಇದರ ಮಾದರಿ ಮತ್ತು ನೋಟ ಹೊಸತನದ ಬದಲಾವಣೆಯಾಗಿತ್ತು. ಲೋಕಸತ್ತಾ ತನ್ನ ಆರಂಭದಲ್ಲಿಯೇ ಇತರ ಮರಾಠಿ ದಿನಪತ್ರಿಕೆಗಳಿಗೆ ತೀವ್ರ ಸ್ಪರ್ಧೆಯನ್ನು ನೀಡುವುದನ್ನು ಸಿದ್ಧಮಾಡಿತು. ಗೊಂದಲಕಾರಿ ಅರ್ಥವ್ಯವಸ್ಥೆಯಲ್ಲಿ ಇತರ ಪತ್ರಿಕೆಗಳು ಹಣಕಾಸಿನ ಹಿನ್ನಡೆಯನ್ನು ಅನುಭವಿಸಿದರೆ, ಲೋಕಸತ್ತಾ ಹಣಕಾಸಿನಿಂದ ಸ್ಥಿರವಾಗಿದ್ದ ಎಕ್ಸ್‌ಪ್ರೆಸ್‌ ಗ್ರುಪ್್ನಿಂದ ಬೆಂಬಲವನ್ನು ಪಡೆದಿತ್ತು. ಇಂಗ್ಲಿಷ್ ಸುದ್ದಿ ದಿನಪತ್ರಿಕೆಗಳಿಗೆ ಸರಿಸಾಟಿಯಾಗಬಲ್ಲ ಏಕೈಕ ಪತ್ರಿಕೆಯೆದರೆ ಲೋಕಸತ್ತಾ ಆಗಿತ್ತು. ಅದ್ಭುತವಾದ ತನ್ನ ಹೊರ ನೋಟದೊಂದಿಗೆ, ಪತ್ರಿಕೆಯು ವ್ಯಾಪಕವಾದ ಸುದ್ದಿ ವರದಿಗಳನ್ನು ಮತ್ತು ಸುದ್ದಿ ವಿಶ್ಲೇಷಣೆಗಳನ್ನು ಪ್ರಕಟಿಸಿತು. ಅತ್ಯಂತ ಆರಂಭದಿಂದಲೂ, ವಿವಿಧ ವಿಷಯಗಳ ಮೇಲೆ ಸಂಪಾದಕೀಯಗಳನ್ನು ಪತ್ರಿಕೆಯು ಬರೆಯಿತು. ಲೋಕಸತ್ತಾದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯು ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಗಳಿಸಲು ಮತ್ತು ಕಾಯ್ದುಕೊಳ್ಳಲು ತಮ್ಮ ಅಧಿಕಾರದಲ್ಲಿರುವುದನ್ನೆಲ್ಲ ಮಾಡಿದರು. ಪತ್ರಿಕೆಯು ಉತ್ಪಾದನೆ, ಮುದ್ರಣ ಮತ್ತು ಪ್ರಸರಣದಲ್ಲಿ ದಿ ಎಕ್ಸ್‌ಪ್ರೆಸ್‌ ಗ್ರುಪ್ ನ ಅಡಿಯಲ್ಲಿ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಪಡೆದುಕೊಂಡಿತ್ತು. ವಿತರಣೆ ವ್ಯವಸ್ಥೆಯ ಕಾರ್ಯನಿರ್ವಹಣೆ ಅತ್ಯಂತ ಸರಿಯಾಗಿರುವಂತೆ ಪತ್ರಿಕೆಯು ಖಚಿತಪಡಿಸಿತು. ಇದರಿಂದ ಬೆಳಿಗ್ಗೆ ಬರುವ ಮೊದಲ ದಿನಪತ್ರಿಕೆ ಇದಾಗಿತ್ತು. ಪತ್ರಿಕೆಯು ಇತರ ಪತ್ರಿಕೆಗಳಿಗೆ ಶೀಘ್ರದಲ್ಲಿಯೇ ಬಿಸಿ ಮುಟ್ಟಿಸಿತು. ಕೆಲವು ಪತ್ರಿಕೆಗಳು ಮುಚ್ಚುವುದಕ್ಕೆ ಆರಂಭವಾಯಿತು. ಹೀಗೆ ಪ್ರಕಟಣೆ ನಿಲ್ಲಿಸಿದ ಮೊದಲ ಪತ್ರಿಕೆ 'ಪ್ರಭಾತ'ವಾಗಿತ್ತು. ಲೋಕಸತ್ತಾದ ಅವತಾರವು ಸ್ವಾಗತಾರ್ಹ ಬದಲಾವಣೆಯಾಗಿತ್ತು- ಛಾಯಾಚಿತ್ರಗಳು, ಪದಬಂಧಗಳು ಮತ್ತು ಇತರ ಹೊಸ ಮಾಟಗಳನ್ನು ವಿಶೇಷ ವರದಿಗಳೊಂದಿಗೆ ಓದುಗರನ್ನು ಆಕರ್ಷಿಸಲು ಅಳವಡಿಸಿಕೊಳ್ಳಲಾಯಿತು. ಪ್ರಥಮ ಸಂಪಾದಕ ವಿಷ್ಣು ಪರ್ವತೆ ಅವರ ನಾಯಕತ್ವದಲ್ಲಿ ಪತ್ರಿಕೆಯು ಹೊಸ ಎತ್ತರವನ್ನು ತಲುಪಿತು. ಟಿ.ವಿ.ಪರ್ವತೆ ಒಬ್ಬ ಅನುಭವಿ ಪತ್ರಕರ್ತರಾಗಿದ್ದರು. ಅವರು ಇಂಗ್ಲಿಷ್ ದಿನಪತ್ರಿಕೆಗಳಿಗೆ ಬರೆಯುತ್ತಿದ್ದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ತ್ವರಿತವಾಗಿ ಬದಲಾವಣೆಗಳು ಆಗುತ್ತಿರುವ ಪರಿಸಿತ್ಥಿಯಲ್ಲಿ ವೃತ್ತಪತ್ರಿಕೆಗಳಿಗೆ ಮಾರ್ಗದರ್ಶನ ಮಾಡಬಲ್ಲ ಏಕೈಕ ವ್ಯಕ್ತಿ ಅವರಾಗಿದ್ದರು. ಅವರು ನ್ಯಾಸನಲ್ ಸ್ಟ್ಯಾಂಡರ್ಡ್್ನಲ್ಲಿ ನೌಕರಿ ಮಾಡುತ್ತಿದ್ದರು. ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಗ್ರುಪ್ ಮರಾಠಿ ದಿನಪತ್ರಿಕೆಯೊಂದನ್ನು ಆರಂಭಿಸುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ, ಪರ್ವತೆ ಮುಂದೆಬಂದರು ಮತ್ತು ಗ್ರುಪ್‌ಗೆ ಸಂಪೂರ್ಣ ಬೆಂಬಲವನ್ನು ನೀಡಿದರು. ಅವರು ಪತ್ರಿಕೆಯ ಸಂಪಾದಕರಾಗಿ ಇದ್ದದ್ದು ನಾಲ್ಕರಿಂದ ಆರು ತಿಂಗಳಾಗಿದ್ದರೂ ಅವರು ಪತ್ರಿಕೆಗೆ ಅದರದೇ ವ್ಯಕ್ತಿತವನ್ನು ದೊರಕಿಸಿಕೊಟ್ಟಿದ್ದರು. ಟಿ.ವಿ.ಪರ್ವತೆಯವರು ಕಾಲೇಜಿನಲ್ಲಿರುವಾಗಲೇ ಪತ್ರಕರ್ತರಾಗುವ ಕನಸನ್ನು ಕಂಡಿದ್ದರು. ಪ್ರಖ್ಯಾತ ಪತ್ರಕರ್ತ ಎನ್.ಆರ್.ಪಾಠಕ್ ಅವರೊಂದಿಗೆ 'ಇಂದುಪ್ರಕಾಶ'ದಲ್ಲಿ ಇವರು ಬಹಳಷ್ಟನ್ನು ಕಲಿತಿದ್ದರು. ಲೋಕಸತ್ತಾಗೆ ಮೊದಲು ಅವರು ಇಂಗ್ಲಿಷ್ ದಿನಪತ್ರಿಕೆಗಳಾದ ಕ್ರಾನಿಕಲ್, ಇತರ ಪತ್ರಿಕೆಗಳಾದ ಮರಾಠಾ, ಲೋಕಮಿತ್ರ, ಪುಣಾ ಡೈಲಿ ನ್ಯೂಸ್ ಮತ್ತು ನವಹಿಂದ್ ಟೈಮ್ಸ್್ಗೆ ಬರೆಯುತ್ತಿದ್ದರು. ಲೋಕಸತ್ತಾ ಅತ್ಯುತ್ತಮವಾದುದನ್ನು ಬಿಟ್ಟು ಬೇರೇನೂ ಬಯಸಲಿಲ್ಲ- ತುತ್ತತುದಿಯಲ್ಲಿ ಇರಬೇಕು- ನಂಬರ್ 1 ಮರಾಠಿ ದಿನಪತ್ರಿಕೆಯಾಗಬೇಕು. ಟಿ.ವಿ.ಪರ್ವತೆ ನಂತರ, ಎಚ್.ಆರ್.ಮಹಾಜನ್, ವಿದ್ಯಾಧರ ಗೋಖಲೆ ಮತ್ತು ಮಾಧವ ಗಡ್ಕರಿ ಲೋಕಸತ್ತಾದ ಸಂಪಾದಕರಾದರು. ಸದ್ಯದ ಸಂಪಾದಕರು ಶ್ರೀ ಕುಮಾರ್ ಕೇತ್ಕರ್. 61 ವರ್ಷಗಳ ಹಿಂದೆ ಅದು ಆರಂಭವಾದಾಗ ಹೇಗಿತ್ತೋ ಹಾಗೆಯೇ ಲೋಕಸತ್ತಾ ಸರಿಸಾಟಿ ಇಲ್ಲದೆ ಯಶಸ್ವಿಯಾಗಿದೆ. ಸುದ್ದಿಯ ಮತ್ತು ಸಂಪಾದಕೀಯ ವಿಷಯಗಳ ಕಾರಣದಿಂದ ಅದು ಬಲವಾಗುತ್ತ ಬಲವಾಗುತ್ತ ಸಾಗಿತ್ತು. ಇಂದು ಅದು ಮುಂಬಯಿ, ಪುಣೆ, ನಾಗಪುರ ಮತ್ತು ಅಹ್ಮದ್್ನಗರಗಳಲ್ಲಿ ಅವೃತ್ತಿಗಳನ್ನು ಹೊಂದಿದೆ. ಮತ್ತು ಇದು ವ್ಯಾಪಕ ವೈವಿಧ್ಯದ ವಾರದ ಮತ್ತು ವಾರದ ಕೊನೆಯ ಪುರವಣಿಗಳನ್ನು ಹೊಂದಿರುವ ಏಕೈಕ ಮರಾಠಿ ದಿನಪತ್ರಿಕೆಯಾಗಿದೆ. ನಿಷ್ಪಕ್ಷಪಾತವಾಗಿ ಸುದ್ದಿಯ ಪ್ರಕಟಣೆ ಮತ್ತು ಹೊಂದಾಣಿಕೆ ಮಾಡಿಕೊಳ್ಳದ ಅದರ ಪ್ರಸಿದ್ಧ ನಿಲುವಿನಿಂದಾಗಿ ಮತ್ತು ಪೂರ್ವಗ್ರಹವಿಲ್ಲದ ವಿಚಾರಗಳಿಂದಾಗಿ ಲೋಕಸತ್ತಾ ಪ್ರಜಾಪ್ರಭುತ್ವಕ್ಕೆ ಒಂದು ವೇದಿಕೆ ಮತ್ತು ಅದರ ಧ್ವನಿ ಎರಡೂ ಆಗಿದೆ. ನಾಯಕರು ಚಿಂತಿಸುವಂತೆ ಮಾಡುವುದರಲ್ಲಿ, ನಾಯಕರನ್ನು ಬದಲಿಸುವುದರಲ್ಲಿ ಮತ್ತು ಜ್ಞಾನ, ಮಾಹಿತಿಯನ್ನು ನೀಡುವ ಮೂಲಕ ತನ್ನ ಓದುಗರನ್ನು ಸಶಕ್ತರನ್ನಾಗಿ ಮಾಡುವುದರಲ್ಲಿ ನಂಬಿಕೆಯನ್ನು ಹೊಂದಿರುವ ಲೋಕಸತ್ತಾ ಸಬಲೀಕರಣದ ಮೂಲಕ ನಾಯಕತ್ವದ ಪರವಾಗಿ ನಿಲ್ಲುತ್ತದೆ. ಈ ದರ್ಶನವನ್ನು ಮುಂದುವರಿಸಿಕೊಂಡು ಹೋಗಲು ಅದು ರಿಲಯನ್ಸ್- ಪ್ರಮೋದ್ ಮಹಾಜನ್ ಸಂಬಂಧ, ಕವಿತಾ ಗಾಡ್ಗೀಳ್ ವಿಷಯ ಮತ್ತು ಎಂಐಜಿ ೨೧ ನಮ್ಮ ಐಎಎಫ್ ಅಧಿಕಾರಿಗಳಿಗೆ ಹೇಗೆ ಅಪಾಯಕಾರಿ ಎಂಬ ವಿಶೇಷ ವರದಿಗಳನ್ನು ಪ್ರಕಟಿಸಿತು. ಇದು ಪ್ಲಾಸ್ಟಿಕ್ ಮೇಲಿನ ನಿಷೇಧದ ವಿಷಯವನ್ನೂ ಕೈಗೆತ್ತಿಕೊಂಡಿತು. ಮತ್ತು ವಿವರವಾದ ಮಾಹಿತಿಯನ್ನು ನೀಡಿತು. ಅಲ್ಲದೆ ಮಿಥಿ ನದಿ ವಿಷಯದಲ್ಲಿ ಮತ್ತು ಮಹಾರಾಷ್ಟ್ರ ಉದ್ಯೋಗ ಖಾತ್ರಿ ಯೋಜನೆಯ ಕುರಿತು ವಿಶ್ಲೇಷಣಾತ್ಮಕ ವರದಿಗಳನ್ನು ನೀಡಿತು. ಯುವ ಮಹಾರಾಷ್ಟ್ರೀಯರ ಮನಸ್ಸು ಮತ್ತು ಹೃದಯಗಳನ್ನು ಸೆರೆಹಿಡಿಯಲು ಪತ್ರಿಕೆಯು ಸರಣಿ ರೂಪದಲ್ಲಿ ಕ್ರಮಗಳನ್ನು ಇತ್ತೀಚೆ ಕೈಗೊಂಡಿತು. ಮಹಿಳಾ ಪುರವಣಿ 'ವಿವಾ'ದ ಆರಂಭ ಮತ್ತು ಸ್ಕ್ರ್ಯಾಚ್2ವಿನ್ ಈ ಯಶಸ್ವಿ ಪ್ರಯತ್ನದ ಭಾಗ. ಇದಕ್ಕೆ ಪೂರಕವಾಗಿ, ಮಕ್ಕಳಿಗಾಗಿ ಸರಣಿ, ಗಾಥಾ ಮತ್ತು ವಿದ್ಯಾರ್ಥಿಗಳಿಗಾಗಿ ಸರಣಿ ಯಶಸ್ವಿಭವ ಇತ್ಯಾದಿ ಕ್ರಮಗಳು ಅತ್ಯಂತ ಜನಪ್ರಿಯವೆಂದು ಸಿದ್ಧವಾಗಿದೆ.

ಪತ್ರಿಕೆಯ ಕುರಿತು[ಬದಲಾಯಿಸಿ]

ವಿವಿಧ ವಿಭಾಗಗಳು: ಮುಖಪುಟ ರಾಜ್ಯ ವಾರ್ತೆ ಪುಟ ನಗರ ವಾರ್ತೆ ಪುಟಗಳು • ಪತ್ರಿಕೆಯ ಮೂರರಲ್ಲಿ ಒಂದು ಭಾಗ • ಉಜಳನೆ ಸರಣಿನ್ನು ಒಳಗೊಂಡಿರುತ್ತದೆ. ಇದನ್ನು ಮಹಾನಂದ ಮಿಲ್ಕ್ ಎಂಡ್ ಮೋರ್ ಎಂದು ಕರೆಯಲಾಗಿದ್ದು ಇದರಲ್ಲಿ ಎಚ್.ಎಸ್.ಸಿ. ಮತ್ತು ಎಸ್.ಎಸ್.ಸಿ ವಿದ್ಯಾರ್ಥಿಗಳಿಗೆ ಉಜಳನೆ ಸರಣಿ ಯಶಸ್ವಿಭವವನ್ನು ನೀಡಲಾಗುತ್ತಿದೆ. ರಾಷ್ಟ್ರೀಯ/ಅಂತಾರಾಷ್ಟ್ರೀಯ ಸುದ್ದಿ ಪುಟ ಸಂಪಾದಕೀಯ ಪುಟಕ್ಕೆ ಎದುರಾಗಿರುವ ಪುಟ ಸಂಪಾದಕೀಯ ಪುಟ ವಿವಿಧ ವಿಷಯಗಳ ಪುಟ

ಕ್ರೀಡಾ ಪುಟ ಪ್ರದರ್ಶನ ವಿನ್ಯಾಸ ಪತ್ರಿಕೆಯ ಶೀರ್ಷಿಕೆ ಪತ್ರಿಕೆಯ ಶೀರ್ಷಿಕೆ ಅದ್ಭುತವಾಗಿದೆ. ಶ್ವಾಸಕೋಶದಾಕಾರದಲ್ಲಿ ಪೆನ್ನು ಜೊತೆಗೆ ವೆಬ್್ಲಿಂಕ್, ಅವರ ಆನ್್ಲೈನ್ ಆವೃತ್ತಿಯ ಮೇಲ್ಭಾಗದ ಎಡಭಾಗದಲ್ಲಿದೆ. ಬಣ್ಣದ ಯೋಜನೆ ಅವರು ಸತತವಾದ ಬಣ್ಣದ ಯೋಜನೆಯನ್ನು ಹೊಂದಿಲ್ಲ, ಆದರೆ ಸಾಮಾನ್ಯವಾಗಿ ಪತ್ರಿಕೆಯು ಅತ್ಯಂತ ಬಣ್ಣದಿಂದ ಕೂಡಿರುವ ಹಾಗೆ ಮಾಡುತ್ತಾರೆ. ಪುರವಣಿಗಳು 1:3 ಅನುಪಾತದಲ್ಲಿ ಕಪ್ಪು ಬಿಳಿಪು ಮತ್ತು ಬಣ್ಣದ ಪುಟಗಳನ್ನು ಹೊಂದಿರುತ್ತದೆ. ಮುಖ್ಯ ಪತ್ರಿಕೆಯು ಕಪ್ಪು ಬಿಳಿಪು ಮತ್ತು ಬಣ್ಣದ ಪರ್ಯಾಯ ಪ್ರವೃತ್ತಿಯನ್ನು ಒಳಗಿನ ಪುಟಗಳಲ್ಲಿ ಅನುಸರಿಸುತ್ತದೆ. ಮುಖ ಪುಟದ ಗ್ರಾಫಿಕ್ಸ್ ಗ್ರಾಫಿಕ್ಕುಗಳು ಮತ್ತು ಛಾಯಾಚಿತ್ರಗಳನ್ನು ಸಾಕೆನಿಸುವಷ್ಟು ಪ್ರಮಾಣದಲ್ಲಿ ಬಳಸುವುದರಿಂದ ಪತ್ರಿಕೆಯು ಅತ್ಯಂತ ಮನಮುಟ್ಟುವಂತೆ ಹೊರಬರುತ್ತಿದೆ. ಪ್ರತಿ ದಿನವೂ ಮುಖಪುಟದಲ್ಲಿ ವಿಶೇಷ ವರದಿಗಳು: 'ಮಾರುಕಟ್ಟೆಯ ವಿವರ'ವು ಇದೆ. ಇದರಲ್ಲಿ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ದರಗಳು ಮತ್ತು ಡಾಲರ್, ಪೌಂಡ್ ಮತ್ತು ಯುರೋ ವಿನಿಮಯ ದರಗಳು ಮತ್ತು ಸೆನ್ಸೆಕ್ಸ್ ದರಗಳು ಇರುತ್ತವೆ. ಏಜೆನ್ಸಿಗಳ ಮಾಹಿತಿ: ಕೇವಲ 10 ರಿಂದ 15% ಸುದ್ದಿಗಳು ಏಜೆನ್ಸಿಗಳಿಂದ ಇರುತ್ತವೆ. – ಮುಖ್ಯವಾಗಿ ಪಿಟಿಐ.

ಪುರವಣಿಗಳು[ಬದಲಾಯಿಸಿ]

ಸೋಮವಾರ: (ಫೈನಾನ್ಸಿಯಲ್ ಎಕ್ಸ್‌ಪ್ರೆಸ್‌) ಅರ್ಥ ವೃತ್ತಾಂತ. ಬುಧವಾರ: (ಶೈಕ್ಷಣಿಕ ಪುರವಣಿ) ಕ್ಯಾರಿಯರ್ ಕೌನ್ಸೆಲರ್ (ವೃತ್ತಿ ಸಲಹೆ) ಗುರುವಾರ: (ಮಹಿಳಾ ವಿಶೇಷ) ವಿವಾ ಶನಿವಾರ: (ಆಸ್ತಿ/ ಭೂಮಿ ವ್ಯವಹಾರದ ಪುರವಣಿ) ವಾಸ್ತುರಂಗ ಜೊತೆಗೆ ಚತುರಂಗ ಪುರವಣಿ. ಭಾನುವಾರ: ಪುರವಣಿಯು ಭಾನುವಾರಕ್ಕೆ ಬಂದಾಗ ಅದು ರವಿವಾರ ವೃತ್ತಾಂತ. ಈ ಪುರವಣಿಯ ಜೊತೆಗೆ ಮತ್ತೊಂದು ಪುರವಣಿ (ಕುಟುಂಬಕ್ಕೆ ಸಂಬಂಧಿಸಿದ ಪುರವಣಿ) ರವಿವಾರ ಲೋಕರಂಗವನ್ನೂ ಇದು ಹೊಂದಿದೆ.

ಮುಂಬಯಿ ವೃತ್ತಾಂತ ವಿಶೇಷ ವರದಿಗಳು[ಬದಲಾಯಿಸಿ]

• ಮಂಗಳವಾರ: ಕೊನೆಯ ಪುಟವನ್ನು ಕ್ಯಾಂಪಸ್ ಮೂಡ್ ಎಂದು ಕರೆಯಲಾಗುತ್ತಿತ್ತು. ಇದನ್ನು ಇಡಿಯಾಗಿ ವಿದ್ಯಾರ್ಥಿಗಳೇ ರೂಪಿಸುತ್ತಿದ್ದರು, ಅವರೇ ಲೇಖನಗಳನ್ನು ಆಯ್ಕೆಮಾಡುತ್ತಿದ್ದರು ಇಡಿಯಾಗಿ ಪುಟ ನಿರ್ವಹಣೆ ಮಾಡುತ್ತಿದ್ದರು.

• ಬುಧವಾರ: ರಂಗಭೂಮಿ /ನಾಟಕಗಳಿಗೆ ವಿಶೇಷ ಪುಟ ಮೀಸಲು ಮರಾಠಿ ಸಾಮಾಜಿಕ ಜೀವನವು ನಾಟಕದ ಬಲವಾದ ಸಂಸ್ಕೃತಿಯನ್ನು ಹೊಂದಿದೆ. • ಗುರುವಾರ: ವಿನಾಯಕ ಪರಬ ಅವರ ಅಂಕಣ ಸಿಟಿ ವಾಕ್ ಪ್ರಕಟವಾಗುತ್ತದೆ. ಈ ಅಂಕಣದಲ್ಲಿ ಪ್ರಕಟವಾದ ವರದಿಗಳ ಉದಾಹರಣೆ: ಮುಂಬಯಿಯ ಮೈಲುಗಲ್ಲು ತಾಣಗಳು, ಬೈಕುಲ್ಲಾ ಮೃಗಾಲಯದಲ್ಲಿಯ ಅಪರೂಪದ ಸಸ್ಯತಳಿಗಳು, ಮಿಥಿ ನದಿಯ ಮೇಲಿನ ಮನಸೆಳೆದ ಲೇಖನಗಳು ಇತ್ಯಾದಿ. • ಶುಕ್ರವಾರ: ಮನರಂಜನೆ ವರದಿಗಳು, ಬಾಲಿವುಡ್ ಸುದ್ದಿಗಳು, ಸಿನಿಮಾ ವಿಮರ್ಶೆ, ಜೀವನ ಶೈಲಿ ಕುರಿತ ಲೇಖನಗಳಿಗೆ ಮೀಸಲಾದ ವಿಶೇಷ ಪುಟ. • ಶನಿವಾರ:ವಿಶೇಷ ಹಾಲಿವುಡ್ ಪುಟ, ಹಾಲಿವುಡ್ ಮಸಾಲ ಎಂದು ಇದನ್ನು ಕರೆಯುತ್ತಾರೆ. ಇಂಗ್ಲಿಷ್ ಸಿನಿಮಾ ವಿಮರ್ಶೆ, ಹಾಲಿವುಡ್ ಸುದ್ದಿಗಳು ಇದರಲ್ಲಿರುತ್ತವೆ.

ಸಂಪಾದಕ: ಕುಮಾರ್ ಕೇತ್ಕರ್[ಬದಲಾಯಿಸಿ]

ಶ್ರೀ ಕುಮಾರ್ ಕೇತ್ಕರ್ ಸದ್ಯ ಲೋಕಸತ್ತಾದ ಮುಖ್ಯ ಸಂಪಾದಕರು. ಇದಕ್ಕೂ ಮೊದಲು ಅವರು ಲೋಕಮತದ ಎಡಿಟರ್-ಇನ್-ಚೀಫ್ ಆಗಿದ್ದರು. ಮತ್ತು ಟೈಮ್ಸ್ ಆಫ್ ಇಂಡಿಯಾ ಗ್ರುಪ್್ನ ಮಹಾರಾಷ್ಟ್ರ ಟೈಮ್ಸ್್ನ ಚೀಫ್ ಎಡಿಟರ್ ಆಗಿ 7 ವರ್ಷಗಳ ಕಾಲ (1993-2001) ಕಾರ್ಯನಿರ್ವಹಿಸಿದ್ದರು. ಇಂಡಿಯನ್ ಮತ್ತು ಫೈನಾನ್ಸಿಯಲ್ ಎಕ್ಸ್‌ಪ್ರೆಸ್‌ ಮತ್ತು ಟೈಮ್ಸ್ ಪತ್ರಿಕೆಗೂ ಇವರು ಕೊಡುಗೆಯನ್ನು ನೀಡಿದ್ದಾರೆ.

ಇವರು ಅಂಬಾನಿ ಗ್ರುಪ್ ರಿಲಯನ್ಸ್್ನ (1990-93) ಡೈಲಿ ಆಬ್ಸರ್ವರ್ ಪತ್ರಿಕೆಯ ಸ್ಥಾನಿಕ ಸಂಪಾದಕರಾಗಿದ್ದರು. ಮತ್ತು ಇಕಾನಾಮಿಕ್ ಟೈಮ್ಸ್್ಗೆ ಸ್ಟಾಫ್ ರಿಪೋರ್ಟರ್ ಮತ್ತು ವಿಶೇಷ ವರದಿಗಾರರಾಗಿದ್ದರು. (1973-1990) ಮತ್ತು ದಿ ಟೈಮ್ಸ್ ಆಫ್ ಇಂಡಿಯಾ ಗ್ರುಪ್‌ಗೂ. ತಮ್ಮ 35 ವರ್ಷಗಳ ಇಂಗ್ಲಿಷ್ ಮತ್ತು ಮರಾಠಿಯ ಸಕ್ರಿಯ ಪತ್ರಿಕೋದ್ಯಮದಲ್ಲಿ ಅವರು ಅನೇಕ ಅಂತಾರಾಷ್ಟ್ರೀಯ ಘಟನೆಗಳ ವರದಿಯನ್ನು ಮಾಡಿದರು. ಬದಲಾಗುತ್ತಿರುವ ಯು.ಎಸ್.ಎಸ್.ಆರ್.: ಮಿಖಾಯಿಲ್ ಗೊರ್ಬಚೇವ್ ಅವರ ಗ್ಲಾಸ್ನೋಟ್ ಮತ್ತು ಪೆರಿಸ್ಟ್ರೊಯಿಕಾ ನೀತಿಗಳು, ಸೋವಿಯೆಟ್ ಒಕ್ಕೂಟದ ವಿಭಜನೆ (1991), ಯುನೈಟೆಡ್ ಕಿಂಗ್ಡಂನಲ್ಲಿ ಸಂಸದೀಯ ಚುನಾವಣೆ (1987 ಮತ್ತು 1992), ಎರಡು ಜರ್ಮನಿಗಳ ವಿಲೀನ (1991), ಅಮೆರಿಕದ ಆರು ಅಧ್ಯಕ್ಷೀಯ ಚುನಾವಣೆಗಳು- 1988, 1992, 1996, 2000, 2004 ಮತ್ತು 2008, ಚೀನದಲ್ಲಿ ಹಾಂಗ್್ಕಾಂಗ್ ವಿಲೀನ (1997), ಇಸ್ರೇಲದ ಐವತ್ತನೆ ವಾರ್ಷಿಕೋತ್ಸವದ ಘಟನೆಗಳು (1998), ಚೀನದ ಆರ್ಥಿಕತೆಯ ಪರಿವರ್ತನೆ ಮತ್ತು ಹೊರಜಗತ್ತಿಗೆ ತೆರೆದುಕೊಂಡದ್ದು, ಮತ್ತು ಹೊಸ ವಿಯಟ್ನಾಮ್ ಮತ್ತು ಅದರ ಮುಕ್ತ ನೀತಿಗಳು. ಅವರು ಈ ಕೆಳಗಿನ ಪ್ರಸಸ್ತಿಯ ಗರಿಯನ್ನು ಹೊಂದಿದ್ದಾರೆ: • ಪದ್ಮಶ್ರೀ, ಭಾರತ ಸರ್ಕಾರದ ಗಣರಾಜ್ಯೋತ್ಸವ ಪ್ರಶಸ್ತಿ 2001ರಲ್ಲಿ • ಸಿ.ಡಿ.ದೇಶಮುಖ ಪ್ರಶಸ್ತಿ, ಅರ್ಥಶಾಸ್ತ್ರವನ್ನು ಚೆನ್ನಾಗಿ ಬರೆದುದಕ್ಕಾಗಿ. • ದಿಟ್ಟ ಪತ್ರಿಕೋದ್ಯಮಕ್ಕಾಗಿ ಆಚಾರ್ಯ ಅತ್ರೆ ಪ್ರಶಸ್ತಿ. • ಅಂತಾರಾಷ್ಟ್ರೀಯ ಘಟನೆಗಳನ್ನು ವರದಿ ಮಾಡಿದ್ದಕ್ಕಾಗಿ ಜೈಂಟ್ಸ್ ಅಂತಾರಾಷ್ಟ್ರೀಯ ಪ್ರಶಸ್ತಿ. • ಉತ್ಕೃಷ್ಟ ಪತ್ರಿಕೋದ್ಯಮಕ್ಕಾಗಿ ರಾಜೀವಗಾಂಧಿ ಪ್ರಶಸ್ತಿ. ರಾಷ್ಟ್ರೀಯ ಸಮನ್ವಯ ಮಂಡಳಿಗೆ ಪ್ರಧಾನ ಮಂತ್ರಿಯು ಕುಮಾರ್ ಕೇತ್ಕರ್ ಅವರನ್ನು ನಾಮಕರಣ ಮಾಡಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದ ನ್ಯೂ ಜೆರ್ಸಿಯ ಫೈರ್ಲ್ ಲೇಗ್ ಡಿಕಿನ್ಸನ್ ಯುನಿವರ್ಸಿಟಿಗೆ ಭೇಟಿ ನೀಡುವ ಎಲ್ಐಸಿಯ ನಿರ್ವಹಣಾ ಸಮಿತಿಯ ಸಂದರ್ಶನ ತಂಡದಲ್ಲಿ ಅವರು ಇದ್ದಾರೆ. ಮತ್ತು ಮುಂಬಯಿ ಮತ್ತು ಪುಣೆ ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗದಲ್ಲಿ ಅವರು ಸಂದರ್ಶಕ ಉಪನ್ಯಾಸಕರಾಗಿದ್ದಾರೆ. ಪ್ರಸಕ್ತ ರಾಜಕೀಯ, ಸಾಹಿತ್ಯ ಮತ್ತು ವಿಜ್ಞಾನ ಕುರಿತು ಅವರು ಏಳು ಮರಾಠಿ ಪುಸ್ತಕಗಳನ್ನು ಬರೆದಿರುವರು. ವಿವಿಧ ಟೀವಿ ವಾಹಿನಿಗಳಲ್ಲಿ ಅವರು ಸದ್ಯದ ವಿದ್ಯಮಾನಗಳ ಮೇಲೆ ವಿವರಣೆಕಾರರಾಗಿ ಆಗಾಗ ಕಾಣಿಸಿಕೊಳ್ಳುತ್ತಾರೆ.

ವಾಣಿಜ್ಯ ಪ್ರಕಟಣೆಗಳ ವಿಭಾಗ[ಬದಲಾಯಿಸಿ]

ಈ ಗುಂಪು ವಾಣಿಜ್ಯ ಪ್ರಕಟಣೆ ವಿಭಾಗ("ಬಿಪಿಡಿ")ವನ್ನೂ ಹೊಂದಿದೆ. ಈ ವಿಭಾಗವು ತನ್ನ ಕೇಂದ್ರ ಕಚೇರಿಯ ಹೊರಗೆ ನಾರಿಮನ್ ಪಾಯಿಂಟ್ ಮುಂಬಯಿಯಲ್ಲಿ ಪ್ರಕಟಣೆ ಮತ್ತು ಮುದ್ರಣವನ್ನು ನಡೆಸುತ್ತದೆ. ಬಿ2ಬಿ ಮ್ಯಾಗಝಿನ್್ಗಳಾದ ಎಕ್ಸ್‌ಪ್ರೆಸ್‌ ಕಂಪ್ಯೂಟರ್, ಎಕ್ಸ್‌ಪ್ರೆಸ್‌ ಟ್ರಾವೆಲ್ ವರ್ಲ್ಡ್ (ಹಿಂದೆ ಇದನ್ನು ಟ್ರಾವೆಲ್ ಎಂಡ್ ಟೂರಿಸಂ ಎಂದು ಕರೆಯಲಾಗುತ್ತಿತ್ತು), ಎಕ್ಸ್‌ಪ್ರೆಸ್‌ ಫಾರ್ಮಾ (ಹಿಂದೆ ಎಕ್ಸ್‌ಪ್ರೆಸ್‌ ಫಾರ್ಮಾ ಪ್ಲಸ್ ), ಎಕ್ಸ್‌ಪ್ರೆಸ್‌ ಹಾಸ್ಪಿಟಾಲಿಟಿ (ಹಿಂದೆ ಎಕ್ಸ್‌ಪ್ರೆಸ್‌ ಹೊಟೇಲಿಯರ್ ಎಂಡ್ ಕ್ಯಾಟರರ್ ), ಐಟಿ ಮೇಲೆ ಬೆಳಕು ಚೆಲ್ಲುವ ನೆಟ್‌ವರ್ಕ್ ಮ್ಯಾಗಝಿನ್, ಸಿಐಓ ಡಿಸಿಸನ್ಸ್, ಎಕ್ಸ್‌ಪ್ರೆಸ್‌ ಹೆಲ್ತ್ ಕೇರ್ಮ್ಯಾನೇಜಮೆಂಟ್ ಮತ್ತು ಹೊಸದಾಗಿ ಆರಂಭಿಸಿದ ಬಿಸಿನೆಸ್ ಮ್ಯಾಗಝಿನ್ ಎಕ್ಸ್‌ಪ್ರೆಸ್‌ ಚಾನೆಲ್ ಬಿಸಿನೆಸ್. ಬಿಪಿಡಿ ಕಾರ್ಯಕ್ರಮಗಳನ್ನು ಆಯೋಜಿಸುವ ಮತ್ತು ಎಕ್ಸ್‌ಪ್ರೆಸ್‌ ವರ್ಲ್ಡ್ ರೀತಿಯ ಪ್ರದರ್ಶನಗಳನ್ನು ಏರ್ಪಡಿಸುವ ಕೆಲಸವನ್ನೂ ಮಾಡುತ್ತದೆ. ಬಿಪಿಡಿ ಐಟಿ ಮೇಲೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ ಮತ್ತು ಇತರರಿಗೂ ಪ್ರದರ್ಶನಗಳನ್ನು ಏರ್ಪಡಿಸುತ್ತದೆ. ಸೆಪ್ಟೆಬರ್ 2006ರಲ್ಲಿ, ಬಿಪಿಡಿಯ ಎಕ್ಸ್‌ಪ್ರೆಸ್‌ ಟ್ರಾವೆಲ್ ವರ್ಲ್ಡ್, ಹೈದ್ರಾಬಾದಿನಲ್ಲಿ ನಡೆದ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ 55ನೆ ವಾರ್ಷಿಕ ಸಮ್ಮೇಳನದಲ್ಲಿ ಅವರಿಗಾಗಿ ಪ್ರದರ್ಶನವನ್ನು ಏರ್ಪಡಿಸಿತ್ತು. ಭಾರತದಲ್ಲಿಯ ಸಿನಿಮಾಗಳನ್ನು ಕೇಂದ್ರೀಕರಿಸಿ ಅನನ್ಯ ಗೋಯೆಂಕಾ ಅವರು ಸ್ಕ್ರೀನ್ ಅವಾರ್ಡ್ಸ್ ಪ್ರಾರಂಭಿಸಿದ್ದಾರೆ. ಈ ಪ್ರಶಸ್ತಿ ನೀಡಿಕೆಯು ಸಿನಿಮಾ ಭ್ರಾತೃತ್ವದಲ್ಲಿ ಜ್ಯೂರಿ ಮೂಲಕ ಸಿನಿಮಾ ಭ್ರಾತೃತ್ವಕ್ಕೆ ಪ್ರಶಸ್ತಿ ನೀಡುವುದು, ಈ ರೀತಿಯಲ್ಲಿ ಭಾರತದ ಪ್ರತಮ ಪ್ರಯತ್ನವಾಗಬೇಕೆಂಬ ಪ್ರಯತ್ನ ಇದಾಗಿತ್ತು. ಇತರ "ಜನಪ್ರಿಯ" ಪ್ರಶಸ್ತಿಗಳಾದ ಫಿಲ್ಮ್ ಫೇರ್ ಮತ್ತು ಝೀ ಸಿನೆ ಅವಾರ್ಡ್ಸ್ ಗೆ ಇದು ವಿರುದ್ಧವಾಗಿತ್ತು. ಬಿಪಿಡಿ ವರ್ಷದ ಉದ್ದಕ್ಕೂ ಅನೇಕ ವಿಶೇಷ ಕಾರ್ಯಕ್ರಮಗಳನ್ನು ನಡೆಸುತ್ತದೆ. ಅವುಗಳಲ್ಲಿ ಗಮನಾರ್ಹವಾದ ಕೆಲವು, ಬಿಜು ಮ್ಯಾಥ್ಯೂಸ್ (ಜಿಎಂ-ಬಿಪಿಡಿ) ನೇತೃತ್ವದ ಹೈದ್ರಾಬಾದ್ ವಿಭಾಗದವು. ಅದರಲ್ಲಿ ಈ ಕೆಳಗಿನವು ಸೇರಿವೆ:

ಇವನ್ನೂ ಗಮನಿಸಿ[ಬದಲಾಯಿಸಿ]

  • ಇಂಡಿಯನ್ ಎಕ್ಸ್‌ಪ್ರೆಸ್‌ ಗ್ರುಪ್
  • ಪ್ರಸರಣದ ಆಧಾರದ ಮೇಲಿನ ಭಾರತದಲ್ಲಿನ ವೃತ್ತಪತ್ರಿಕೆಗಳ ಪಟ್ಟಿ
  • ಪ್ರಸರಣದ ಆಧಾರದ ಮೇಲಿನ ವಿಶ್ವದಲ್ಲಿನ ವೃತ್ತಪತ್ರಿಕೆಗಳ ಪಟ್ಟಿ
  • ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌

ಉಲ್ಲೇಖಗಳು[ಬದಲಾಯಿಸಿ]

  1. "India - World Newspapers and Magazines". Worldpress.org. Retrieved 2010-12-23.
  2. "Duke University". Library.duke.edu. 2009-05-27. Archived from the original on 2010-09-01. Retrieved 2010-12-23.
  3. Name * (2007-09-28). "Shalabh Worldpress". Shalabh.wordpress.com. Retrieved 2010-12-23.
  4. "Major media". Mondotimes.com. Retrieved 2010-12-23.
  5. "The Indian Express editorial". Indianexpress.com. 2000-06-24. Archived from the original on 2010-03-30. Retrieved 2010-12-23.

ಬಾಹ್ಯ ಕೊಂಡಿಗಳು[ಬದಲಾಯಿಸಿ]