ಡೆಕ್ಕನ್ ಹೆರಾಲ್ಡ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಡೆಕ್ಕನ್ ಹೆರಾಲ್ಡ್ ಕರ್ನಾಟಕ ರಾಜ್ಯದಲ್ಲಿ ವಿತರಣೆಯಾಗುವ ಪ್ರಮುಖ ಇಂಗ್ಲೀಷ್ ಭಾಷೆಯ ದಿನಪತ್ರಿಕೆ ಆಗಿದೆ. ಇದು ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ನವರಿಂದ ಮುದ್ರಣ ಗೊಳ್ಳುತ್ತದೆ ಮತ್ತು ದೆಹಲಿ, ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಂಗಳೂರು ಮತ್ತು ಗುಲ್ಬರ್ಗ ರಲ್ಲಿ ಆವೃತ್ತಿಗಳನ್ನು ಹೊಂದಿದೆ.[citation needed]

ಡೆಕ್ಕನ್ ಹೆರಾಲ್ಡ್ ನ ಸ್ಥಾಪಕ ಸಂಪಾದಕ ಪ್ರಸಿದ್ಧ ಪತ್ರಕರ್ತ ಪೋಥನ್ ಜೋಸೆಫ್ರಾಗಿದ್ದರು ಮತ್ತು ಇದು ೧೯೪೮ ರಲ್ಲಿ ಪ್ರಾರಂಭವಾಯಿತು. ಇದರ ಸಹೋದರಿ ಪ್ರಕಾಶನ ಗಳಾಗಿ ಪ್ರಜಾವಾಣಿ ದಿನಪತ್ರಿಕೆ, ಸಾಪ್ತಾಹಿಕ ಪತ್ರಿಕೆ ಸುಧಾ ಮತ್ತು ಕನ್ನಡ ಮಾಸಿಕ ಪತ್ರಿಕೆ ಮಯೂರ, ಪ್ರಕಟವಾಗುತ್ತಿವೆ. ಡೆಕ್ಕನ್ ಹೆರಾಲ್ಡ್ ಮುಖ್ಯ ಕಛೇರಿ ಎಂ ಜಿ ರಸ್ತೆ, ಬೆಂಗಳೂರು ಇಲ್ಲಿ ಇದೆ.

ಭಾರತೀಯ ರೀಡರ್ಶಿಪ್ ಸರ್ವೆ ಪ್ರಕಾರ ೨೦೧೧ ರ ಮೊದಲ ತ್ರೈಮಾಸಿಕದಲ್ಲಿ (Q1), ಕಾಲ, ಡೆಕ್ಕನ್ ಹೆರಾಲ್ಡ್ ೪,೨೩,೦೦೦ ಸರಾಸರಿ ದೈನಂದಿನ ಓದುಗರನ್ನು ಹೊಂದಿದೆ ೨೦೦೯ ಮೊದಲಾರ್ಧದಲ್ಲಿ ಎಬಿಸಿ ಪ್ರಮಾಣಿತ ಅಂಕಿಅಂಶಗಳು ಇದರ ಪ್ರಸಾರವನ್ನು ಕೊಂಡು ಓದುವ ಓದುಗರ ಸಂಖ್ಯೆ ೨,೧೪,೭೯೭ ಎಂದಿದೆ.

ದಶಂಬರ ೨೦೧೧ ರಲ್ಲಿ ದೆಹಲಿ ಆವೃತ್ತಿಯನ್ನು ಪ್ರಾರಂಭಿಸಿದಾಗ ಪತ್ರಿಕೆಯ ಹೊಸ ಶಕೆ ಶುರುವಾಯಿತು . ಆದರೆ ಅವರೇ ಒಪ್ಪಿಕೊಂಡಂತೆ ೧೫ ಸುದ್ದಿ ಪತ್ರಿಕೆಗಳು ಇರುವ ದೆಹಲಿ ಮಾರುಕಟ್ಟೆಯಲ್ಲಿ ಸ್ಪರ್ಧಿಸುವುದು ತುಂಬಾ ಕಷ್ಟಕರ ವಿಷಯವಾಗಿದೆ . ಡೆಕ್ಕನ್ ಹೆರಾಲ್ಡ್ ಅನೇಕ ವರ್ಷಗಳ ಹಿಂದೆ ಹೈದರಾಬಾದ್‍ನಿಂದ ಪ್ರಕಟವಾಗುತ್ತಿತ್ತು ಆದರೆ ನಶಿಸುತ್ತಿರುವ ಪ್ರಸಾರ ಅಂಕಿಅಂಶಗಳ ಕಾರಣದಿಂದ ನಿಲ್ಲಿಸಲಾಗಿತ್ತು.

ಉಲ್ಲೇಖಗಳು‌‌[ಬದಲಾಯಿಸಿ]

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]