ಅರವತ್ತನಾಲ್ಕು ವಿದ್ಯೆಗಳು
ಹಿಂದೂ ಧರ್ಮಶಾಸ್ತ್ರಗಳಲ್ಲಿ, ಹಳೆಗನ್ನಡ ಪಠ್ಯಗಳಲ್ಲಿ ಅರವತ್ತ ನಾಲ್ಕು ವಿದ್ಯೆಗಳನ್ನು ಪ್ರಮುಖವೆಂದು ಭಾವಿಸಲಾಗಿದೆ. ಮೊಟ್ಟ ಮೊದಲ ಗದ್ಯಕೃತಿ ವಡ್ಡಾರಾಧನೆಯಲ್ಲಿ ಈ ಬಗ್ಗೆ ಸಾಕಷ್ಟು ಉಲ್ಲೇಖಗಳು ದೊರೆಯುತ್ತವೆ.
ಅರವತ್ತನಾಲ್ಕು ವಿದ್ಯೆಗಳ ಪಟ್ಟಿ
[ಬದಲಾಯಿಸಿ]- ವೇದ
- ವೇದಾಂಗ
- ಇತಿಹಾಸ
- ಆಗಮ
- ನ್ಯಾಯ
- ಕಾವ್ಯ
- ಅಲಂಕಾರ
- ನಾಟಕ
- ಗಾನ
- ಕವಿತ್ವ
- ಕಾಮಶಾಸ್ತ್ರ
- ದೂತನೈಪುಣ್ಯ
- ದೇಶಭಾಷಾಜ್ಞಾನ
- ಲಿಪಿಕರ್ಮ
- ವಾಚನ
- ಸಮಸ್ತಾವಧಾನ
- ಸ್ವರಪರೀಕ್ಷಾ
- ಶಾಸ್ತ್ರಪರೀಕ್ಷಾ
- ಶಕುನಪರೀಕ್ಷಾ
- ಸಾಮುದ್ರಿಕಪರೀಕ್ಷಾ
- ರತ್ನಪರೀಕ್ಷಾ
- ಸ್ವರ್ಣಪರೀಕ್ಷಾ
- ಗಜಲಕ್ಷಣ
- ಅಶ್ವಲಕ್ಷಣ
- ಮಲ್ಲವಿದ್ಯಾ
- ಪಾಕಕರ್ಮ
- ದೋಹಳ
- ಗಂಧವಾದ
- ಧಾತುವಾದ
- ಖನಿವಾದ
- ರಸವಾದ
- ಅಗ್ನಿಸ್ತಂಭ
- ಜಲಸ್ತಂಭ
- ವಾಯುಸ್ತಂಭ
- ಖಡ್ಗಸ್ತಂಭ
- ವಶ್ಯಾ
- ಆಕರ್ಷಣ
- ಮೋಹನ
- ವಿದ್ವೇಷಣ
- ಉಚ್ಛಾಟನ
- ಮಾರಣ
- ಕಾಲವಂಚನ
- ವಾಣಿಜ್ಯ
- ಪಶುಪಾಲನ
- ಕೃಷಿ
- ಸಮಶರ್ಮ
- ಲಾವುಕಯುದ್ಧ
- ಮೃಗಯಾ
- ಪುತಿಕೌಶಲ
- ದೃಶ್ಯಶರಣಿ
- ದ್ಯೂತಕರಣಿ
- ಚಿತ್ರಲೋಹ, ಪಾರ್ಷಾಮೃತ್, ದಾರು ವೇಣು ಚರ್ಮ ಅಂಬರ ಕ್ರಿಯ
- ಚೌರ್ಯ
- ಔಷಧಸಿದ್ಧಿ
- ಮಂತ್ರಸಿದ್ಧಿ
- ಸ್ವರವಂಚನಾ
- ದೃಷ್ಟಿವಂಚನಾ
- ಅಂಜನ
- ಜಲಪ್ಲವನ
- ವಾಕ್ ಸಿದ್ಧಿ
- ಘಟಿಕಾಸಿದ್ಧಿ
- ಪಾದುಕಾಸಿದ್ಧಿ
- ಇಂದ್ರಜಾಲ
- ಮಹೇಂದ್ರಜಾಲ
ಆದರೆ ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿ ಈ ಕೆಳಗಿನಂತೆ ಇದೆ. ಪ್ರಪಂಚದಲ್ಲಿ ಬಾಳಿಬದುಕಿ ಯಶಸ್ಸುಗಳಿಸಬೇಕಾದರೆ ಈ ವಿದ್ಯೆಗಳ ಜ್ಞಾನ ಅತ್ಯಾವಶ್ಯಕವೆಂಬ ದೃಷ್ಟಿಯಿಂದ ಹಿಂದೆ ಪ್ರಚಲಿತವಿದ್ದ ವಿದ್ಯೆಗಳನ್ನೆಲ್ಲ ಒಂದೆಡೆ ಕಲೆ ಹಾಕಲಾಗಿದೆ. ಇವನ್ನು ಅಭ್ಯಸಿಸಿ ತಿಳಿದವನೇ ಪಂಡಿತ. ಅಂತಹವನನ್ನು ಪೂರ್ವದಲ್ಲಿ ಜ್ಞಾನಿ ಎನ್ನುತ್ತಿದ್ದರು. ಈ ವಿದ್ಯೆಗಳಲ್ಲಿ ಪಾರಂಗತನಾದವನು ತನ್ನ ಪಾಂಡಿತ್ಯವನ್ನು ಮೆರೆಯಲು ದೇಶವಿದೇಶಗಳನ್ನು ಸುತ್ತಿ, ರಾಜಾಶ್ರಯ ಪಡೆದು, ಆಯಾ ಸ್ಥಳದ ಪಂಡಿತರನ್ನು ಈ ವಿದ್ಯೆಗಳ ಹಿನ್ನೆಲೆಯ ವಾದ ವಿವಾದಗಳಲ್ಲಿ ಸೋಲಿಸಿ ದಿಗ್ವಿಜಯ ಪಡೆದು ರಾಜರುಗಳಿಂದ ಬಹುಮಾನಿತನಾಗಿ ಬರುವುದು ರೂಢಿಯಲ್ಲಿತ್ತು. ಭಾರತೀಯ ಇತಿಹಾಸದಲ್ಲಿ ದಿಗ್ವಿಜಯ ಪಡೆದು ಬಂದ ಪಂಡಿತರುಗಳ ಐತಿಹ್ಯಗಳಿಗೆ ಕೊರತೆಯೇನಿಲ್ಲ. ಈ ವಿದ್ಯೆಗಳಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ, ತಾಂತ್ರಿಕ, ಜ್ಯೋತಿಷ್ಯ, ಕುಲ್ಲಕ- ಎಲ್ಲ ವಿಷಯಗಳೂ ಸೇರುತ್ತವೆ, ಆಧುನಿಕ ಪ್ರಪಂಚದ ವಿದ್ಯೆಗಳಿಗೆಲ್ಲ ಈ ಅರುವತ್ತನಾಲ್ಕು ವಿದ್ಯೆಗಳೇ ಮೂಲ ಎಂಬುದನ್ನು ಮರೆಯುವಂತಿಲ್ಲ. ಈ ಮೂಲಗಳಿಂದ ಆಧುನಿಕ ಜ್ಞಾನ ಹೇಗೆ ಶಾಖೋಪಶಾಖೆಗಳಾಗಿ ಬೆಳೆದಿವೆಯೆಂಬುದನ್ನು ಗಮನಿಸಿದಾಗ ಆಶ್ಚರ್ಯವಾಗದಿರದು. ಅವು ಹೀಗಿವೆ:
ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿ ಅರುವತ್ತನಾಲ್ಕು ವಿದ್ಯೆಗಳು
[ಬದಲಾಯಿಸಿ]- ನಾಲ್ಕು ವೇದಗಳು: ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ.
- ಆರು ಅಂಗಗಳು : ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ, ಕಲ್ಪ.
- ಆರು ಶಾಸ್ತ್ರಗಳು : ವೇದಾಂತ, ಧರ್ಮ, ಕಾವ್ಯ, ಶಿಲ್ಪ, ಕಾಮ, ಅಲಂಕಾರ.
- ಹದಿನೆಂಟು ಪುರಾಣಗಳು: ಬ್ರಾಹ್ಮ , ಪದ್ಮ , ವೈಷ್ಣವ, ಶೈವ, ಭಾಗವತ, ಭವಿಷ್ಯತ್, ನಾರದೀಯ, ಮಾರ್ಕಂಡೇಯ, ಆಗ್ನೇಯ, ಬ್ರಹ್ಮ ವೈವರ್ತ, ಲಿಂಗ, ವರಾಹ, ಸ್ಕಂದ, ವಾಮನ, ಕೂರ್ಮ, ಮತ್ಸ್ಯ, ಗರುಡ, ಬ್ರಹ್ಮಾಂಡ.
- ಹದಿನೆಂಟು ಸ್ಮೃತಿಗಳು: ಮನು, ಅತ್ರಿ, ವಿಷ್ಣು, ಹಾರೀತ, ಯಾಜ್ಞವಲ್ಕ್ಯ, ಉಶನ, ಅಂಗಿರ, ಯಮ, ಆಪಸ್ತಂಬ, ವಾತ್ಸ್ಯಾಯನ, ಬೃಹಸ್ಪತಿ, ಪರಾಶರ, ವ್ಯಸ¸, ಶಂಕಲಿಖಿತ, ದಕ್ಷ, ಗೌತಮ, ಶಾಂತಾತಪ, ವಸಿಷ್ಠ. ಅಲ್ಲದೆ ಗಾಂಧರ್ವ, ವಿಶ್ವಕರ್ಮ, ಸೂದ ಭೈಷಜ, ಕಾವ್ಯ, ನರ್ತನ, ನಾಟಕ, ಅಲಂಕಾರ, ಕೃತಕ, ಚೋರ, ಕಳ, ಮಹೇಂದ್ರ ಈ ವಿದ್ಯೆಗಳ ಉಲ್ಲೇಖವನ್ನು ಭಾರತೀಯ ಕಾವ್ಯ, ಪುರಾಣಗಳಲ್ಲಿ ಕಾಣಬಹುದು.