ವಿಷಯಕ್ಕೆ ಹೋಗು

೨೦೦೫ರ ಗುಜರಾತ್ ಪ್ರವಾಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜುಲೈ೨,೨೦೦೫ ರಂದು ಗುಜರಾತ್‌ನ ಪ್ರವಾಹದ ವೈಮಾನಿಕ ನೋಟವನ್ನು ಭಾರತೀಯ ವಾಯುಪಡೆಯ ಪರಿಹಾರ ಹೆಲಿಕಾಪ್ಟರ್‌ನಿಂದ ತೆಗೆದುಕೊಳ್ಳಲಾಗಿದೆ
ಗುಜರಾತ್‌ ಪ್ರವಾಹದ ಸಂದರ್ಭದಲ್ಲಿ ನೀಡಿದ ಪರಿಹಾರದ ವೈಮಾನಿಕ ನೋಟವನ್ನು ಐಎಎಫ್ ಹೆಲಿಕಾಪ್ಟರ್‌ನಿಂದ ತೆಗೆದುಕೊಳ್ಳಲಾಗಿದೆ

೨೦೦೫ ರ ಗುಜರಾತ್ ಪ್ರವಾಹವು ಮಳೆಗಾಲದ ಸಂದರ್ಭದಲ್ಲಿ ಭಾರತದ ಗುಜರಾತ್ ರಾಜ್ಯದ ಮೇಲೆ ಭಾರಿ ಕೆಟ್ಟ ಪರಿಣಾಮ ಬೀರಿತು. ಇದರಲ್ಲಿ ಗುಜರಾತ್ ನ ೨೦ ಜಿಲ್ಲೆಗಳು (೩೩ರ ಪೈಕಿ) ಸೇರಿವೆ, ಅವುಗಳಲ್ಲಿ ೧೦ ಜಿಲ್ಲೆಗಳು ತೀವ್ರವಾಗಿ ತೊಂದರೆಗೊಳಪಟ್ಟಿವೆ. ೨೨೫ ತಾಲ್ಲೂಕುಗಳ ಪೈಕಿ ೧೧೭ ( ತಹಸಿಲ್‌ಗಳಲ್ಲಿ ಅಥವಾ ಮಂಡಲಗಳು), ೧೧ ನಗರಗಳು ಮತ್ತು ೭೨೦೦ ಕ್ಕೂ ಹೆಚ್ಚು ಹಳ್ಳಿಗಳು ಪ್ರವಾಹಕ್ಕೆ ಸಿಲುಕಿದ್ದು, ಸುಮಾರು ೧೦,೦೦೦ಗಳವರೆಗೆ ಅನಾಹುತಕ್ಕೆ ಒಳಪಟ್ಟಿವೆ. ಒಟ್ಟಾರೆ ಸುರಿದ ೫೦೫ ಮಿ.ಮಿ.(೧೯.೯ಇಂಚು) ಮಳೆಯ ಪ್ರವಾಹದ ಸಮಯದಲ್ಲಿ ಸುಮಾರು ೧,೭೬,೦೦೦ ಜನರು ನಿರಾಶ್ರಿತರಾಗಿದ್ದು, ಗಿರ್ ವನ್ಯಜೀವಿಗಳ ಅಭಯಾರಣ್ಯದೊಳಗಿದ್ದ ಅಪರೂಪದ ಏಷ್ಯಾದ ಸಿಂಹವನ್ನೂ ಮುಳುಗಿಸಿದೆ . ಈ ಪ್ರವಾಹದಲ್ಲಿ ಕನಿಷ್ಠ ೧೭೩ ಜನರು ಸಾವನ್ನಪ್ಪಿದ್ದಾರೆ. []

ಪ್ರವಾಹದ ಭೀತಿಯಿಂದ ೧೧ ನಗರಗಳಾದ ವಡೋದರಾ, ನಾಡಿಯಾಡ್, ಅಹಮದಾಬಾದ್, ನವಸಾರಿ, ಸೂರತ್ ಮತ್ತು ಲಿಂಬಡಿ, ಡಾಕೋರ್, ಆನಂದ್, ಖೇಡಾ, ಪೆಟ್ಲಾಡ್ ಮತ್ತು ಬೊರ್ಸಾಡ್ ತೀವ್ರವಾಗಿ ಹಾನಿಗೊಳಗಾದವು. []

ಗುಜರಾತ್‌ನ ದಕ್ಷಿಣ ಜಿಲ್ಲೆಗಳು .
ಜೂನ್ ೨೦೦೫ ಗುಜರಾತ್‌ನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿತ್ತು
ಜೂನ್೩೦ ರಾಜ್ಯದಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಸೈನ್ಯವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು.
ಜುಲೈ ೧ ಅಹಮದಾಬಾದ್ -ಮುಂಬೈ ಮಾರ್ಗದ ಎಲ್ಲಾ ರೈಲುಗಳನ್ನು ರದ್ದುಗೊಳಿಸಲಾಗಿತ್ತು
ಜುಲೈ ೨ ಸಾವಿನ ಸಂಖ್ಯೆ೧೨೩ ಕ್ಕೆ ತಲುಪಿದೆ, ೨೫೦,೦೦೦ ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು
ಜುಲೈ೮ ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ನಿಂತ ಕಾರಣ, ರಾಜ್ಯವು ತನ್ನ ಆದೇಶವನ್ನು ಹಂತ ಹಂತವಾಗಿ ಪುನರ್ಸ್ಥಾಪಿಸಿದೆ.
ಜುಲೈ ೮ ರೈಲುಗಳು ಕಾರ್ಯಾಚರಣೆಯನ್ನುನಿರ್ಬಂಧಗಳು ಮತ್ತು ಎಚ್ಚರಿಕೆಯ ಅಡಿಯಲ್ಲಿ ಪುನರಾರಂಭಿಸಲಾಗಿದೆ.
ಜುಲೈ ೧೧ ಒಟ್ಟಾರೆ ಮೂಲಸೌಕರ್ಯಗಳ ಹಾನಿ ಮತ್ತು ನಷ್ಟವು ೧.೭ ಬಿಲಿಯನ್ಸ್ ಅಮೇರಿಕನ್ ಡಾಲರ್(ಯುಎಸ್ಡಿ)

ಗಿಂತ ಹೆಚ್ಚೆಂದು ಅಂದಾಜಿಸಲಾಗಿದೆ. ದಕ್ಷಿಣ ಗುಜರಾತ್ ನ ಜಿಲ್ಲೆಗಳು ಅತಿ ಹೆಚ್ಚು ಅನಾಹುತವನ್ನು ಅನುಭವಿಸಿವೆ.

ಜುಲೈ ೧೩ ಅಂತಿಮ ವರದಿಯ ಪ್ರಕಾರ ರಾಜ್ಯದಲ್ಲಿ ಪ್ರವಾಹದಿಂದಾಗಿ ಒಟ್ಟು ಸಾವಿನ ಸಂಖ್ಯೆ ೧೭೩ ಕ್ಕೆ ತಲುಪಿದೆ. []

ಬಾಹ್ಯ ಸಂಪರ್ಕ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "India Gujarat floods: Field updates & appeal". reliefweb.int. SEEDS INDIA. Retrieved 7 December 2017.
  2. "Gujarat Floods 2005: Project Report" (PDF). Report. International Association for Human Values and the Art of Living. 2005. Archived from the original (PDF) on January 12, 2016. Retrieved November 1, 2015. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)