ವಿಷಯಕ್ಕೆ ಹೋಗು

ಹೆಚ್ ಟು ಓ (೨೦೦೨ ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
H2O
Directed byಎನ್.ಲೋಕನಾಥ್
ರಾಜಾರಾಂ
Written byಉಪೇಂದ್ರ
Produced byಪಿ.ಧನರಾಜ್
Starringಉಪೇಂದ್ರ
ಪ್ರಭುದೇವ
ಪ್ರಿಯಾಂಕ_ಉಪೇಂದ್ರ_(ನಟಿ)
Cinematographyಹೆಚ್.ಸಿ.ವೇಣು
Edited byಟಿ.ಶಶಿಕುಮಾರ್
Music byಸಾಧು_ಕೋಕಿಲ
Production
company
ಧನರಾಜ್ Films
Release date
ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 29 ಮಾರ್ಚ್ 2002 (2002-03-29)
Running time
೧೩೪ ನಿಮಿಷ
CountryIndia
LanguageKannada
Budget೭ ಕೋಟಿ []

ಎಚ್ 2 ಒ 2002 ರ ಕನ್ನಡ- ಭಾಷಾ ಚಿತ್ರವಾಗಿದ್ದು, ಚೊಚ್ಚಲ ಬಾರಿಗೆ ನಿರ್ದೇಶಕದ್ವಯರಾದ ಎನ್.ಲೋಕನಾಥ್ ಮತ್ತು ರಾಜಾರಾಮ್ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಭಾಗಶಃ ತಮಿಳಿನಲ್ಲಿ ಎಚ್ 2 ಒ ಕಾವೇರಿ ಎಂದು ಮರು ಚಿತ್ರೀಕರಿಸಲಾಯಿತು ಮತ್ತು ಧನರಾಜ್ ಫಿಲ್ಮ್ಸ್ ಅಡಿಯಲ್ಲಿ ಪಿ. ಧನರಾಜ್ ನಿರ್ಮಿಸಿದರು. ಚಿತ್ರದ ಚಿತ್ರಕಥೆಯನ್ನು ಉಪೇಂದ್ರ ಬರೆದಿದ್ದಾರೆ. ಸ್ವತಃ ಉಪೇಂದ್ರ ಪ್ರಭುದೇವರ ಜೊತೆ ನಾಯಕನಾಗಿ ತಟಿಸಿದ್ದರು. ಪ್ರಿಯಾಂಕಾ ತ್ರಿವೇದಿ ಜೊತೆಗೆ ಬಾಬು ಮೋಹನ್, ಸಾಧು ಕೋಕಿಲಾ ಮತ್ತು ಬ್ಯಾಂಕ್ ಜನಾರ್ಧನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರದ ಕಥಾವಸ್ತುವು ಕರ್ನಾಟಕ ಮತ್ತು ತಮಿಳುನಾಡು ಗಡಿಯ ಎರಡು ಹಳ್ಳಿಗಳ ನಡುವಿನ ಹೋರಾಟದ ಬಗ್ಗೆ ಇದೆ. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. ಚಿತ್ರದ ಛಾಯಾಗ್ರಹಣ ಮತ್ತು ಸಂಪಾದನೆಯನ್ನು ಕ್ರಮವಾಗಿ ಎಚ್‌ಸಿ ವೇಣುಗೋಪಾಲ್ ಮತ್ತು ಟಿ.ಶಶಿಕುಮಾರ್ ನಿರ್ವಹಿಸಿದ್ದಾರೆ. ಈ ಚಿತ್ರವನ್ನು ತೆಲುಗಿನಲ್ಲಿ ಹೆಚ್ ಟು ಓ ಹೆಸರಿನಲ್ಲಿ ಡಬ್ ಮಾಡಲಾಗಿದೆ. ಎರಡು ರಾಜ್ಯಗಳ ನಡುವಿನ ವಿವಾದಕ್ಕೆ ರೂಪಕ ಉಲ್ಲೇಖದ ಮೂಲ ಪರಿಕಲ್ಪನೆಯನ್ನು ೨೦೧೬ ರ ಮರಾಠಿ ಚಲನಚಿತ್ರ ಮರಾಠಿ ಟೈಗರ್ಸ್‌ನಲ್ಲಿ ಬಳಸಲಾಯಿತು. ಇದನ್ನು ಹಿಂದಿ ಭಾಷೆಯಲ್ಲಿ "ದಿಲ್ ಕಿ ಧಡ್ಕನ್" ಎಂದು ಹೆಸರಿಸಲಾಗಿದೆ.

ಚೋದ್ಯವೆಂದರೆ, ಕನ್ನಡದ ಧೀಮಂತ ಚಿತ್ರಸಾಹಿತಿ ಚಿ. ಉದಯಶಂಕರರ ನೆನಪಿನಲ್ಲಿ ಕರುನಾಡಿನ ನಾಯಕನ ಹೆಸರು ಉದಯಶಂಕರಗೌಡ. ತಮಿಳು ಚಿತ್ರಸಾಹಿತಿ ವೈರಮುತ್ತುರನ್ನು ನೆನಪಿಸುವ ಧಾಟಿಯಲ್ಲಿ, ಪ್ರಭುದೇವರ ಹೆಸರು ವೈರಮುತ್ತು.

ಪಾತ್ರವರ್ಗ

[ಬದಲಾಯಿಸಿ]

ನಿರ್ಮಾಣ

[ಬದಲಾಯಿಸಿ]

ಚಿತ್ರದ ಸ್ಕ್ರಿಪ್ಟ್ ಅನ್ನು ಮೊದಲಿಗೆ ೧೯೯೮ ರಲ್ಲಿ ಡಾ. ರಾಜ್‌ಕುಮಾರ್ ಮತ್ತು ರಜನಿಕಾಂತ್ ಇಬ್ಬರನ್ನು ಗಮನದಲ್ಲಿ ಇಟ್ಟು ಉಪೇಂದ್ರ ಬರೆದರು. ಇಬ್ಬರೂ ಚಿತ್ರದ ಕಥೆಯ ಸೂಕ್ಷ್ಮ ಸ್ವರೂಪದಿಂದಾಗಿ ಚಿತ್ರ ಮಾಡಲು ನಿರಾಕರಿಸಿದರು. []

ಧ್ವನಿಪಥ

[ಬದಲಾಯಿಸಿ]

ಸಾಧು ಕೋಕಿಲಾ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಲ್ಲಾ ಹಾಡುಗಳ ಸಾಹಿತ್ಯವನ್ನು ಉಪೇಂದ್ರ ಬರೆದಿದ್ದಾರೆ.

ಬಿಡುಗಡೆ

[ಬದಲಾಯಿಸಿ]

ಹೆಚ್ 2 ಒ ಚಿತ್ರದ ಮೂಲಕ ೨ ವರ್ಷಗಳ ವಿರಾಮದ ನಂತರ ಉಪೇಂದ್ರ ದೊಡ್ಡ ಪರದೆಯತ್ತ ಮರಳಿದರು. ಅದರ ಆಡಿಯೊ ಬಿಡುಗಡೆಯ ನಂತರ, ದಾಖಲೆ ಸಂಖ್ಯೆಯ ಆಡಿಯೊ ಕ್ಯಾಸೆಟ್‌ಗಳು ಮತ್ತು ಸಿಡಿಗಳು ಮಾರಾಟ ಆದುವು. ಈ ಚಿತ್ರವು ಹೊಸ ದಾಖಲೆಯನ್ನು ಸೃಷ್ಟಿಸಿತು ಮತ್ತು ಆಡಿಯೋ ಮಾರಾಟದ ಮೂಲಕ ೧ ಕೋಟಿಗೂ ಹೆಚ್ಚಿನ ವ್ಯವಹಾರವನ್ನು ಮಾಡಿತು. "ಐ ವನ್ನಾ ಸೀ ಮೈ ಡಾರ್ಲಿಂಗ್", "ಹೂವೇ ಹೂವೇ", "ನಾ ನಿನ್ನಾ ಬಿಡಾಲಾರೆ", "ಬೀಡಾ ಬೇಡಾ", ಮತ್ತು "ದಿಲ್ ಇಲ್ಡೆ" ಹೀಗೆ, ಚಿತ್ರದ ಎಲ್ಲಾ ಹಾಡುಗಳು ಜನಪ್ರಿಯವಾದುದು ಮತ್ತು ವರ್ಷದ ಜನಪ್ರಿಯ ಹಾಡುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದವು. []

ಕೌತುಕ

[ಬದಲಾಯಿಸಿ]

ಕಾವೇರಿ ಎಂಬ ಹುಡುಗಿಯ ಪ್ರೀತಿಗಾಗಿ ಸ್ಪರ್ಧಿಸುತ್ತಿರುವ ಕನ್ನಡಿಗ ಮತ್ತು ತಮಿಳರ ನಡುವಿನ ತ್ರಿಕೋನ ಪ್ರೇಮಕಥೆಯು ಹೆಚ್.ಟು.ಓ ಆಗಿದೆ. ಇದು ನಿಜಕ್ಕೂ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿಯ ವಿವಾದಕ್ಕೆ ಒಂದು ರೂಪಕ ಉಲ್ಲೇಖವಾಗಿದೆ. ಕರುನಾಡು-ತಮಿಳುನಾಡು, ಎರಡೂ ರಾಜ್ಯಗಳನ್ನು ಸಯಾಮಿ ಅವಳಿಗಳಿಗೆ ಹೋಲಿಸಿ, ಕಥೆ ಬರೆದ ಉಪೇಂದ್ರ, "ಕಾವೇರಿ ವಿವಾದಕ್ಕೆ ಹೋರಾಡುವ ಬದಲು ಸಾಮರಸ್ಯದ ಜೀವನವೇ ಸೂಕ್ತ ಪರಿಹಾರ ಎಂದು ಸಂವಹನ ಮಾಡಲು ಪ್ರಯತ್ನಿಸಿದರು." []

ಬಿಡುಗಡೆ

[ಬದಲಾಯಿಸಿ]

ಕರ್ನಾಟಕ ಮತ್ತು ತಮಿಳುನಾಡಿನ ರಾಜಕೀಯ ಕಾರ್ಯಕರ್ತರು ಚಿತ್ರವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದರಿಂದ ಚಿತ್ರವು ವಿವಾದಕ್ಕೆ ಕಾರಣವಾಯಿತು. ಎರಡೂ ರಾಜ್ಯಗಳಲ್ಲಿನ ಭಾವನೆಗಳನ್ನು ಸಮಾಧಾನಪಡಿಸಲು ಉಪೇಂದ್ರ ಅವರು ಚಿತ್ರದಲ್ಲಿನ ತಮಿಳು ಸಂಭಾಷಣೆಗಳನ್ನು ಕನ್ನಡಕ್ಕೆ ತದ್ವಿರುದ್ಧವಾಗಿ ಡಬ್ ಮಾಡುವ ಮೂಲಕ ರಾಜಿ ಮಾಡಿಕೊಳ್ಳಬೇಕಾಯಿತು. ರಾಜಕೀಯ ಪಕ್ಷಗಳ ಧ್ವಜಗಳನ್ನು ಹೊಂದಿರುವ ದೃಶ್ಯಗಳನ್ನು ಮರು ಬಿಡುಗಡೆ ಮಾಡುವ ಮುನ್ನ ಕಟ್ ಮಾಡಲಾಯಿತು. []

ವಿಮರ್ಶಾತ್ಮಕ ಸ್ವಾಗತ

[ಬದಲಾಯಿಸಿ]

ಚಿತ್ರ ಬಿಡುಗಡೆಯಾದ ನಂತರ ಹೆಚ್ಚು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಕಾವೇರಿ ನದಿ ನೀರಿನ ವಿವಾದದಂತಹ ಸೂಕ್ಷ್ಮ ವಿಷಯವನ್ನು ವಾಣಿಜ್ಯ ರೀತಿಯಲ್ಲಿ ನಿರೂಪಿಸಲು ಉಪೇಂದ್ರ ನಿರ್ವಹಿಸಿದ ವಿಧಾನವನ್ನು ವಿಮರ್ಶಕರು ಶ್ಲಾಘಿಸಿದರು. []

ಗಲ್ಲಾಪೆಟ್ಟಿಗೆ ಪ್ರದರ್ಶನ

[ಬದಲಾಯಿಸಿ]

ಹೆಚ್ ಟು ಒ ಕರ್ನಾಟಕದಾದ್ಯಂತದ ೨೮ ಚಿತ್ರಮಂದಿರಗಳಲ್ಲಿ ೫೦ ದಿನಗಳ ಓಟವನ್ನು ಪೂರ್ಣಗೊಳಿಸಿತು ಮತ್ತು ವಿವಾದಗಳ ನಡುವೆಯೂ ಬೆಂಗಳೂರಿನಲ್ಲಿ ೭೫ ದಿನಗಳ ಓಟವನ್ನು ಪೂರ್ಣಗೊಳಿಸಿತು. ಹೆಚ್ಚಿನ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ . ದುಬಾರಿ ನಿರ್ಮಾಣ ವೆಚ್ಚ ಮತ್ತು ಬಿಡುಗಡೆಯಲ್ಲಿ ಆದ ವಿಳಂಬದಿಂದ ಹೆಚ್ ಟು ಒ ಗಲ್ಲಾಪೆಟ್ಟಿಗೆಯಲ್ಲಿ 'ಸೆಮಿ ಹಿಟ್' ಆಗಿತ್ತು. [] [] ವಾಣಿಜ್ಯಿಕವಾಗಿ ಯಶಸ್ಸನ್ನು ಕಂಡರೂ, [] ಇದು ಕೇವಲ ೭೫ ದಿನಗಳ ಓಟವನ್ನು ಪೂರ್ಣಗೊಳಿಸುವ ಮೂಲಕ ದೀರ್ಘಾವಧಿಯ ದೃಷ್ಟಿಯಿಂದ ಉಪೇಂದ್ರರ ಅವರ ಹಿಂದಿನ ಚಿತ್ರಗಳಾದ (೧೯೯೮), ಉಪೇಂದ್ರ (೧೯೯೯), ಪ್ರೀತ್ಸೇ (೨೦೦೦) ಗೆ ಹೋಲಿಸಿದರೆ ಕೊಂಚ ಗಳಿಕೆಯಲ್ಲಿ ಹಿನ್ನಡೆ ಪಡೆಯಿತು, ಉಪೇಂದ್ರರ ಹಿಂದಿನ ಎಲ್ಲಾ ಚಿತ್ರಗಳೂ, ೧೭೫ ದಿನಗಳ ಓಟವನ್ನು ಪೂರ್ಣಗೊಳಿಸಿದ್ದವು. ಆ ಕಾಲದ ಇತರ ಉಪೇಂದ್ರ ಚಿತ್ರಗಳಿಗಿಂತ ಭಿನ್ನವಾಗಿ, ಮುಖ್ಯವಾಗಿ ಋತ್ಮಕ ವಿವಾದಗಳು ಮತ್ತು ಚಿತ್ರದ ಮೇಲಿನ ತಾತ್ಕಾಲಿಕ ನಿಷೇಧದಿಂದಾಗಿ ಹೆಚ್ ಟು ಒಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷೆ ಮಾಡಿದಷ್ಟು ಹಣವನ್ನು ಗಳಿಸಲು ಸಾಧ್ಯವಾಗಲಿಲ್ಲ.

ಆದಾಗ್ಯೂ, ಅದರ ಕಡಿಮೆ ಕಾರ್ಯಕ್ಷಮತೆಯನ್ನು ಲೆಕ್ಕಿಸದೆ, ವಿತರಕರು ಮತ್ತು ಪ್ರದರ್ಶಕರು ಹೆಚ್ ಟು ಒನಿಂದ ಭಾರಿ ವ್ಯಾಪಾರವನ್ನು ಮಾಡಿದರು. [] ಹೆಚ್ ಟು ಒ ನ ವಿತರಕರು ಭಾರಿ ಲಾಭ ಗಳಿಸಿದರೂ ಮತ್ತು ಚಿತ್ರದ ಸಂಗ್ರಹಗಳು ಆ ಕಾಲದ ಇತರ ಹಿಟ್ ಚಿತ್ರಗಳಿಗೆ ಸಮನಾಗಿದ್ದರೂ, [] [೧೦] ಚಲನಚಿತ್ರವು ನಿರೀಕ್ಷೆಗಳನ್ನು ತಲುಪದ ಕಾರಣ ಇದನ್ನು ಮಾಧ್ಯಮಗಳು ಫ್ಲಾಪ್ ಎಂದು ಕರೆಯುತ್ತಿದ್ದವು. ನಿರ್ಮಾಪಕ ಧನರಾಜ್ ಅವರು ಉಪೇಂದ್ರ ವಿರುದ್ಧ ಉಚಿತ ಕಾಲ್ ಶೀಟ್ ಕೋರಿ ಮುಷ್ಕರ ನಡೆಸಿದರು. ಚಲನಚಿತ್ರದಿಂದ ಭಾರಿ ನಷ್ಟವನ್ನು ಅನುಭವಿಸಿದ್ದಾರೆ ಎಂದು ಧನರಾಜ್ ಹೇಳಿದ್ದು ಉಪೇಂದ್ರ ಅಭಿಮಾನಿಗಳಲ್ಲಿ ಆಕ್ರೋಶ ಮೂಡಿಸಿತು. [೧೧]

ಆದಾಗ್ಯೂ, ಮಾಧ್ಯಮಗಳು ಮತ್ತು ಗಲ್ಲಾಪೆಟ್ಟಿಗೆಯ ವಿಶ್ಲೇಷಕರಲ್ಲಿ ಹೆಚ್ ಟು ಒ 'ಹಿಟ್' ಸ್ಥಿತಿಯಲ್ಲಿ ಉಳಿದಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Riti, M. D. (4 January 2001). "Prabhu Deva in a unique tap dance!". Rediff. Retrieved 29 April 2016.
  2. ೨.೦ ೨.೧ ೨.೨ http://www.thehindu.com/todays-paper/tp-national/tp-karnataka/tale-of-love-and-water/article3959807.ece
  3. "Witty words for Upendra-Prabhudeva starrer". The Music Magazine. ourkarnataka.com. Archived from the original on 2 November 2012. Retrieved 2 November 2012.
  4. "H2O". sify movies. Archived from the original on 21 ಜನವರಿ 2005. Retrieved 2 November 2012.
  5. "H2O Director Rajaram Interview".
  6. "P Vasu Interview".
  7. Lakshminarayana, Shruti Indira (7 July 2011). "Two Kannada films will fight it out this weekend". Rediff. Retrieved 2 November 2012.
  8. "Behind the curtains". ದಿ ಹಿಂದೂ. 2 September 2004. Archived from the original on 12 ನವೆಂಬರ್ 2004. Retrieved 2 November 2012. {{cite news}}: More than one of |archivedate= and |archive-date= specified (help); More than one of |archiveurl= and |archive-url= specified (help)
  9. "H2O — Kannada film discussion". Archived from the original on 2015-09-24. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  10. "Title unknown". dhoperchop.com. Archived from the original on 17 ಜೂನ್ 2010. Retrieved 2 November 2012.
  11. "H2O travails continue for Dhanraj". ದಿ ಹಿಂದೂ. 28 May 2002. Archived from the original on 5 ಜುಲೈ 2004. Retrieved 2 November 2012. {{cite news}}: More than one of |archivedate= and |archive-date= specified (help); More than one of |archiveurl= and |archive-url= specified (help)

[] ಚಿತ್ರದ ನಿರ್ದೇಶಕರಲ್ಲಿ ಒಬ್ಬರಾದ ರಾಜಾರಾಮ್ ಸಂದರ್ಶನವೊಂದರಲ್ಲಿ "ಹೆಚ್ ಟು ಒ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿ ನಡೆದರೂ ಸಹಿತ, ಚಿತ್ರದ ಬಗ್ಗೆ ಇದ್ದ ಹೆಚ್ಚಿನ ನಿರೀಕ್ಷೆಯನ್ನು ಮುಟ್ಟಲು ಸಾಧ್ಯವಾಗಲಿಲ್ಲ, ಇತರ ಹಲವು ಕಾರಣಗಳಿಗಾಗಿ" ಎಂದು ಉಲ್ಲೇಖಿಸಿದ್ದಾರೆ. [] ೨೦೧೧ ರಲ್ಲಿ ಟಿವಿ 9 ಗೆ ನೀಡಿದ ಸಂದರ್ಶನದಲ್ಲಿ, ಉಪೇಂದ್ರ ಹೆಚ್ ಟು ಒ ವಿಫಲವಾಗಿದೆ ಎಂಬ ವಾದವನ್ನು ನಿರಾಕರಿಸಿದರು. ಉಪೇಂದ್ರ ಪ್ರಕಾರ, ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚುವರಿ ಸಾಮಾನ್ಯ ತೆರೆಯುವಿಕೆ ಮತ್ತು ಸಂಗ್ರಹಗಳನ್ನು ಪಡೆದುಕೊಂಡಿತು, ಆದರೆ ಅತಿಯಾದ ನಿರೀಕ್ಷೆ, ವಿಳಂಬದ ವಿತರಣೆ ಮತ್ತು ಗಲಭೆಪೂರಿತ ಬಿಡುಗಡೆಯ ವಿವಾದಗಳಿಂದಾಗಿ ೭೫ ದಿನಗಳನ್ನು ಮೀರಿ ಚಿತ್ರಮಂದಿರಗಳಲ್ಲಿ ಓಡಲು ಸಾಧ್ಯವಾಗಲಿಲ್ಲ ಎಂದು ಅಭಿಪ್ರಾಯ ಪಟ್ಟರು. ನಿರ್ಮಾಪಕರಿಂದ ದೋಷಪೂರಿತ ಮಾರ್ಕೆಟಿಂಗ್ ಕಾರಣ ಹೆಚ್ ಟು ಒ ಲಾಭದ ಪ್ರಮುಖ ಭಾಗವು ನಿರ್ಮಾಪಕರ ಬದಲು ವಿತರಕರು ಮತ್ತು ಪ್ರದರ್ಶಕರಿಗೆ ಹೋಯಿತು ಎಂದು ಉಪೇಂದ್ರ ವಿವರಿಸಿದರು. []

ಈ ಚಿತ್ರವು ಕನ್ನಡಿಗ ಮತ್ತು ತಮಿಳಿನ ನಡುವಿನ ತ್ರಿಕೋನ ಪ್ರೇಮಕಥೆಯಾಗಿದ್ದರೂ, ಕಾವೇರಿ ಎಂಬ ಹುಡುಗಿಯ ಪ್ರೀತಿಗಾಗಿ ಪೈಪೋಟಿ ನಡೆಸುತ್ತಿದ್ದರೂ, ಇದು ನಿಜಕ್ಕೂ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿಯ ವಿವಾದಕ್ಕೆ ಒಂದು ರೂಪಕ ಉಲ್ಲೇಖವಾಗಿದೆ. ಚಲನಚಿತ್ರದ ಮುಖ್ಯ ಪರಿಕಲ್ಪನೆಯನ್ನು ವಿವಾದಾತ್ಮಕ ೨೦೧೬ ಮರಾಠಿ ಚಲನಚಿತ್ರ ಮರಾಠಿ ಟೈಗರ್ಸ್‌ನಲ್ಲಿ ಮತ್ತೆ ಬಳಸಲಾಯಿತು - ಇದು ಆಕಸ್ಮಿಕವಾಗಿ ಮರಾಠಿ ಮತ್ತು ಕನ್ನಡಿಗ ನಡುವಿನ ತ್ರಿಕೋನ ಪ್ರೇಮವಾಗಿದ್ದು, ಸೀಮಾ ಎಂಬ ಹುಡುಗಿಯ ಪ್ರೀತಿಗಾಗಿ ಸ್ಪರ್ಧಿಸುತ್ತಿದೆ (ಇದರರ್ಥ ಗಡಿ ಎಂದರ್ಥ) - ಆ ಮೂಲಕ ರೂಪಕವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಗಡಿ ವಿವಾದವನ್ನು ಉಲ್ಲೇಖಿಸುತ್ತದೆ. []

  1. ಉಲ್ಲೇಖ ದೋಷ: Invalid <ref> tag; no text was provided for refs named gan
  2. ಉಲ್ಲೇಖ ದೋಷ: Invalid <ref> tag; no text was provided for refs named ra
  3. "Upendra explains that H2O was a decent hit". YouTube. Retrieved 2 November 2012.
  4. "ಆರ್ಕೈವ್ ನಕಲು". Archived from the original on 2021-10-17. Retrieved 2020-01-07. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)