ಸೃಜನ್ ಲೋಕೇಶ್
ಸೃಜನ್ ಲೋಕೇಶ್ | |
---|---|
ಜನನ | |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ನಟ, ರೇಡಿಯೋ ರೇಡಿಯೋ, ದೂರದರ್ಶನ ನಿರೂಪಕ |
ಸಕ್ರಿಯ ವರ್ಷಗಳು | 2002– |
ದೂರದರ್ಶನ | ಮಜಾ ಟಾಕೀಸ್ (2011) ಸೈ ಮಜಾ ಟಾಕೀಸ್(2015) |
ಸಂಗಾತಿ | ಗ್ರೀಷ್ಮ |
ಮಕ್ಕಳು | 2 |
ಪೋಷಕ(ರು) | ಲೋಕೇಶ್ ಗಿರಿಜಾ ಲೋಕೇಶ್ |
ಸಂಬಂಧಿಕರು | ಸುಬ್ಬಯ್ಯ ನಾಯ್ಡು (ಅಜ್ಜ) ಪೂಜಾ ಲೋಕೇಶ್ (ತಂಗಿ) |
ಸೃಜನ್ ಲೋಕೇಶ್ (ಜನನ ಜೂನ್ ೨೮, ೧೯೮೦) ಕನ್ನಡ ಚಲನಚಿತ್ರ ನಟ , ದೂರದರ್ಶನ ನಿರೂಪಕ , ರೇಡಿಯೋ ನಿರೂಪಕ , ನಿರ್ಮಾಪಕರು. ಅವರ ತಂದೆ ಲೋಕೇಶ್ ಅವರು ರಂಗಭೂಮಿಯ ಕಲಾವಿದರು ಮತ್ತು ಚಲನಚಿತ್ರ ನಟರಾಗಿದ್ದರು. ಅವರ ತಾಯಿ ಗಿರಿಜಾ ಲೋಕೇಶ್ ಅವರು ದೂರದರ್ಶನದ ನಟಿ. ಅವರ ಅಜ್ಜ ಸುಬ್ಬಯ್ಯ ನಾಯ್ಡು ಕನ್ನಡ ಮೂಕ ಚಲನಚಿತ್ರದ ಪ್ರಪ್ರಥಮ ನಟನಾಗಿದ್ದರು. [೧]
ಕುಟುಂಬ
[ಬದಲಾಯಿಸಿ]ಸೃಜನ್ ರವರು ಬೆಂಗಳೂರಿನಲ್ಲಿ ಜನಿಸಿದರು. ೨೦೦೧ರಲ್ಲಿ ಅವರು ಎಸ್.ಎಸ್.ಎಮ್.ಆರ್.ವಿ ಕಾಲೇಜಿನಲ್ಲಿ ಪದವಿ ಪಡೆದರು. ಅವರ ತಂಗಿ ಪೂಜಾ ಲೋಕೇಶ್ ಕನ್ನಡ ಹಾಗು ತಮಿಳಿನ ಕಲಾವಿದೆ. ಅವರ ಪತ್ನಿ ಗ್ರೀಷ್ಮ ರಂಗಭೂಮಿ ಕಲಾವಿದೆ, ದೂರದರ್ಶನದ ನಟಿ ಹಾಗು ಕಥಕ್ಕಳಿ ನೃತ್ಯಗಾರ್ತಿ .
ನಟನಾವೃತ್ತಿ
[ಬದಲಾಯಿಸಿ]ಸೃಜನ್ ಲೋಕೇಶ್ ಆರಂಭದಲ್ಲಿ ನಟಿಸಿದ ಚಲನಚಿತ್ರದಲ್ಲಿ ಯಶಸ್ಸನ್ನು ಕಾಣಲಿಲ್ಲ . ಇತ್ತೀಚಿನ ದಿನಗಳಲ್ಲಿ , ಅವರ ದೂರದರ್ಶನ ಕಾರ್ಯಕ್ರಮ ಮಜಾ ವಿತ್ ಸೃಜಾ , ಮಜಾ ಟಾಕೀಸ್ ಪ್ರಸಿದ್ದಿ ಪಡೆಯಿತು.[೨]
ಬಾಲ ನಟನಾಗಿ
[ಬದಲಾಯಿಸಿ]ಅವರ ಸುತ್ತ ಚಲನಚಿತ್ರ ಹಾಗು ರಂಗಭೂಮಿಯ ಕಲಾವಿದರು ಇದ್ದುದರಿಂದ ಅವರಿಗೆ ನಟನಾವೃತ್ತಿಯಲ್ಲಿ ಮುಂದು ಹೋಗಲು ಪ್ರೇರೇಪಣೆಯಾಗಿತ್ತು. ಅವರು ೧೯೯೦ರಲ್ಲಿ ತೆರೆ ಕಾಣಿದ ಬುಜಂಗಯ್ಯನ ದಶಾವಾತಾರ ಮತ್ತು ೧೯೯೧ರಲ್ಲಿ ಬಿಡುಗಡೆಯಾದ ವೀರಪ್ಪನ್ ಎಂಬ ಚಲನಚಿತ್ರದಲ್ಲಿ ಬಾಲನಟನಾಗಿ ಚಿತ್ರಮಂದಿರಕ್ಕೆ ಕಾಲಿಟ್ಟರು.
ಪಾತ್ರಗಳಲ್ಲಿ
[ಬದಲಾಯಿಸಿ]ಸೃಜನ್ ಅವರು ರಾಧಿಕಾ ಕುಮಾರಸ್ವಾಮಿ ಜೊರೆ ನಟಿಸಿದ ನೀಲ ಮೇಘ ಶ್ಯಾಮ ಎಂಬ ಚಲನಚಿತ್ರದಿಂದ ತಮ್ಮ ಅಭಿನಯದ ವೃತ್ತಿಜೀವನವನ್ನು ಆರಂಭಿಸಿದರು. ಅವರು ನಟನಾಗಿ ಯಶಸ್ಸನ್ನು ಕಾಣಲಿಲ್ಲ. ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಲು ಮುಂದುವರಿಸಿದರು. ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ಚಲನಚಿತ್ರಗಳು ಪೊರ್ಕಿ, ನವಗ್ರಹ , ಚಿಂಗಾರಿ , ಎದೆಗಾರಿಕೆ , ಅಂದರ್ ಬಾಹರ್ , ಸ್ನೇಹಿತರು , ಐಪಿಸಿ ಸೆಕ್ಷನ್ ೩೦೦ ಮತ್ತು ಹಲವಾರು . ಅವರು ಹಲವಾರು ರಿಯಾಲಿಟಿ ಶೋಗಳನ್ನು ಹೋಸ್ಟ್ ಮಾಡಿದ್ದಾರೆ. ಆನೆ ಪಟಾಕಿ ಎನ್ನುವ ಚಲನಚಿತ್ರವು ಹನ್ನೊಂದು ವರ್ಷಗಳ ನಂತರ ಅವರ ಎರಡನೇಯ ಚಿತ್ರವಾಗಿತ್ತು .[೩]
ನಿರ್ಮಾಣ
[ಬದಲಾಯಿಸಿ]೨೦೧೩ರಲ್ಲಿ ಲೋಕೇಶ್ ಪ್ರೊಡಕ್ಷನ್ಸ್ ಪ್ರಾರಂಭಿಸಿದರು. ಇದನ್ನು ಸೃಜನ್ ಲೋಕೇಶ್ ಮತ್ತು ಗಿರಿಜಾ ಲೋಕೇಶ್ ನಿಭಾಯಿಸುತ್ತಿದ್ದಾರೆ. ಅವರ ನಿರ್ಮಾಣದಲ್ಲಿ ಹಲವಾರು ದೂರದರ್ಶನ ಕಾರ್ಯಕ್ರಮಗಳು ಹೊರಬಂದಿದೆ. ಚಾಲೆಂಜ್ , ಛೋಟಾ ಚಾಂಪಿಯನ್ಸ್ , ಕಾಸಿಗೆ ಟಾಸು . ಪ್ರಸ್ತುತ ಮಜಾ ಟಾಕೀಸ್ ಎನ್ನುವ ಕಾರ್ಯಕ್ರಮವನ್ನು ನಿರ್ಮಾಣಿಸಿದ್ದಾರೆ . ಕಾಸಿಗೆ ಟಾಸ್ ಎನ್ನುವ ರಿಯಾಲಿಟಿ ಕಾರ್ಯಕ್ರಮವನ್ನು ಕನ್ನಡದ ಬಿಗ್ ಬಾಸ್ ಸ್ಪರ್ದಿ ರೋಹಿತ್ ನಡೆಸಿ ಕೊಟ್ಟರು . ಪ್ರಸ್ತುತ ಮಜಾ ಟಾಕೀಸ್ ಎಂಬ ಕಾರ್ಯಕ್ರಮವನ್ನು ಸೃಜನವರು ಹಾಸ್ಯವನ್ನು ಪ್ರಧಾನಿಸುತ್ತದೆ . ಈ ಕಾರ್ಯಕ್ರಮವನ್ನು ಸೃಜನವರೇ ನಿರ್ದೇಶಿಸಿದ್ದಾರೆ . ಹಿಂದಿಯ ಕಾಮಿಡಿ ನೈಟ್ಸ್ ವಿತ್ ಕಪಿಲ್ ಎನ್ನುವ ಕಾರ್ಯಕ್ರಮದ ಮೇಲೆ ಆಧಾರಿತವಾಗಿದೆ .[೪]
ಪ್ರಶಸ್ತಿಗಳು ಮತ್ತು ಗೌರವಗಳು
[ಬದಲಾಯಿಸಿ]*೨೦೧೧ರಲ್ಲಿ ಸುವರ್ಣ ಚಾನೆಲ್ ಅವರು ಅತ್ಯುತ್ತಮ ನಿರೂಪಕ ಎನ್ನುವ ಪ್ರಶಸ್ತಿ ನೀಡಿದ್ದಾರೆ .
*೨೦೧೧ರಲ್ಲಿ ಬಿಗ್ ಎಂಟರ್ಟೇಂಮೆಂಟ್ ಅವಾರ್ಡ್ ನಲ್ಲಿ ಅತ್ಯಂತ ಜನಪ್ರಿಯ ವರ್ಗದಲ್ಲಿ ಅತ್ಯುತ್ತಮ ನಿರೂಪಕ ಎನ್ನುವ ಪ್ರಶಸ್ತಿ ಲಭಿಸಿದೆ.
*೨೦೧೨ & ೨೦೧೩ರ ಮಾಧ್ಯಮ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ಅಂಕರ್ ಎನ್ನುವ ವರ್ಗದಲ್ಲಿ ಪ್ರಶಸ್ತಿ ದೊರಕಿದೆ.
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ವರ್ಷ | ಸಿನಿಮಾಗಳು | ಪಾತ್ರ | ಇತರೆ ಟಿಪ್ಪಣಿಗಳು |
---|---|---|---|
1991 | ವೀರಪ್ಪನ್ | ಬಾಲ ನಟ | |
1990 | ಬುಜಂಗಯ್ಯನ ದಶಾವಾತಾರ | ಬಾಲ ನಟ | |
2002 | ನೀಲ ಮೇಘ ಶ್ಯಾಮ | ಶ್ಯಾಮ | ಮುಖ್ಯ ಪಾತ್ರ |
2005 | ಲಾರ್ಟಿ ಚಾರ್ಜ್ | ||
2007 | ಪ್ರೀತಿಗಾಗಿ | ||
2008 | ನವಗ್ರಹ | ಘೆಂಡೆ | ನಾಯಕ |
2009 | ಐಪಿಸಿ ಸೆಕ್ಷನ್ ೩೦೦ | ||
2010 | ಪೊರ್ಕಿ | ನಾಯಕನ ಸ್ನೇಹಿತ | |
2012 | ಚಿಂಗಾರಿ | ||
2012 | ಸ್ನೇಹಿತರು | ಪರಶುರಾಮ | ನಾಯಕ |
2012 | ಎದೆಗಾರಿಕೆ | ಬಚ್ಚನ್ | |
2013 | ಅಂದರ್ ಬಾಹರ್ | ||
2013 | ಆನೆ ಪಟಾಕಿ | ಬೀರೇಗೌಡ | ಮುಖ್ಯ ಪಾತ್ರ |
2014 | ಟಿಪಿಕಲ್ ಕೈಲಾಸ್ | ಕೈಲಾಸ್ | ಮುಖ್ಯ ಪಾತ್ರ |
2014 | ಪರಮಶಿವ | ||
2015 | ಸಪ್ನೊಂ ಕಿ ರಾಣಿ | ಮುಖ್ಯ ಪಾತ್ರ | |
2015 | ಲವ್ ಯು ಆಲಿಯಾ | ಅತಿಥಿ ಪಾತ್ರ | ʼʼಕಾಮಾಕ್ಷಿ ಕಾಮಾಕ್ಷಿʼʼ ಹಾಡಿನಲ್ಲಿ ಅತಿಥಿ ಪಾತ್ರ |
2016 | ಜಗ್ಗು ದಾದ | ಮಂಜು | |
2017 | ಚಕ್ರವರ್ತಿ | ಕಿಟಪ್ಪ | |
2017 | ಹ್ಯಾಪಿ ಜರ್ನಿ | ಆರ್ಯ | ಮುಖ್ಯ ಪಾತ್ರ |
2018 | ಭೂತಯ್ಯನ ಮೊಮ್ಮಗ ಆಯ್ಯು | ನಿರೂಪಕ | ನಿರೂಪಕ ಧ್ವನಿ |
2019 | ಎಲ್ಲಿದ್ದೆ ಇಲ್ಲಿತನಕ | ಸೂರ್ಯ | ಮುಖ್ಯ ಪಾತ್ರ |
2022 | ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ | ಸೂರ್ಯ |
ಟಿವಿ ಕಾರ್ಯಕ್ರಮಗಳ ಪಟ್ಟಿ
[ಬದಲಾಯಿಸಿ]ವರ್ಷ | ಶೀರ್ಷಿಕೆ | ಪಾತ್ರ | ವಾಹಿನಿ | Ref. |
---|---|---|---|---|
2011 | ಮಜಾ ವಿತ್ ಸೃಜಾ | ನಿರೂಪಕ | ಸುವರ್ಣ | |
ಸೈ | ನಿರೂಪಕ | ಸುವರ್ಣ | ||
2012 | ಕಿಚನ್ ಕಿಲಾಡಿಗಳೂ | ಸಹ-ನಿರೂಪಕ | ಸುವರ್ಣ | [೫] |
ಸ್ಟಾರ್ ಸಿಂಗರ್ ಗ್ರಾಂಡ್ ಫಿನಾಲೆ | ನಿರೂಪಕ | ಸುವರ್ಣ | ||
ಸ್ಟಾರ್ ಸುವರ್ಣ ಆವಾರ್ಡ್ಸ್ | ನಿರೂಪಕ | ಸುವರ್ಣ | ||
ಸೈ 2 | ನಿರೂಪಕ | ಸುವರ್ಣ | ||
ಮಮ್ಮಿ ನಂ. 1 | ನಿರೂಪಕ | ಸುವರ್ಣ | ||
2013 | ಕಾಸ್ ಗೆ ಟಾಸ್ | ನಿರೂಪಕ | ಝೀ ಕನ್ನಡ | |
ಛೋಟಾ ಚಾಂಪಿಯನ್ | ನಿರೂಪಕ | ಝೀ ಕನ್ನಡ | [೬] | |
2014 | ಛೋಟಾ ಚಾಂಪಿಯನ್ 2 | ನಿರೂಪಕ | ಝೀ ಕನ್ನಡ | |
ಬಿಗ್ ಬಾಸ್ ಕನ್ನಡ 2 | ಸ್ಪರ್ಧಿ | ಸುವರ್ಣ | ||
2015–2017 | ಮಜಾ ಟಾಕೀಸ್ | ನಿರೂಪಕ | ಕಲರ್ಸ್ ಕನ್ನಡ (ಈ ಟವಿ ಕನ್ನಡ) | |
2018– 2019 | ಮಜಾ ಟಾಕೀಸ್ | ನಿರೂಪಕ | ಕಲರ್ಸ ಕನ್ನಡ | [೭] |
2019 | ಕಾಮಿಡಿ ಟಾಕೀಸ್ | ಜಡ್ಜ್ | ಕಲರ್ಸ ಕನ್ನಡ ಸೂಪರ್ | |
2020 | ಮಜಾ ಟಾಕೀಸ್ | ನಿರೂಪಕ | ಕಲರ್ಸ್ ಕನ್ನಡ | |
2021 | ರಾಜ ರಾಣಿ | ಜಡ್ಜ್ | ಕಲರ್ಸ್ ಕನ್ನಡ | |
2021 - | ನನ್ನಮ್ಮ ಸೂಪರ್ ಸ್ಟಾರ್ | ಜಡ್ಜ್ | ಕಲರ್ಸ್ ಕನ್ನಡ | |
2022 - | ಗಿಚಿಗಿಲಿಗಿಲಿ | ಜಡ್ಜ್ | ಕಲರ್ಸ್ ಕನ್ನಡ | |
2023 - ಪ್ರಸ್ತುತ | ಫ್ಯಾಮಿಲಿ ಗ್ಯಾಂಗ್‌ಸ್ಟರ್ | ನಿರೂಪಕ | ಕಲರ್ಸ್ ಕನ್ನಡ |
ಉಲ್ಲೇಖಗಳು
[ಬದಲಾಯಿಸಿ]- ↑ "ಸೃಜನ್ ಲೋಕೇಶ್'s biography and latest film release news". FilmiBeat. Retrieved 6 January 2020.
- ↑ "'ಮಜಾ ಟಾಕೀಸ್' ನಗುವಿಗೆ ಬ್ರೇಕ್ ಹಾಕಿದ ಸೃಜನ್ ಲೋಕೇಶ್; ಕಾರಣವೇನು?". Vijaya Karnataka. 16 September 2019. Retrieved 6 January 2020.
- ↑ "ತಂದೆಗೆ ಸಿಕ್ಕ ಚಿತ್ರಕಥೆಗಳಿಗಾಗಿ ಕಾಯುತ್ತಿದ್ದೇನೆ: ಸೃಜನ್ ಲೋಕೇಶ್". Kannadaprabha. Retrieved 6 January 2020.
- ↑ "Majja Talkies to have a 104-episode run time - Times of India". The Times of India. Retrieved 6 January 2020.
{{cite news}}
: Cite has empty unknown parameter:|1=
(help) - ↑ "ಸುವರ್ಣದಲ್ಲಿ ಚಂದ್ರು, ಸೃಜನ್ & 'ಕಿಚನ್ ಕಿಲಾಡಿಗಳು'". Filmibeat. 26 January 2012. Archived from the original on 3 February 2018. Retrieved 3 February 2018.
- ↑ "Everyone loves a show with kids: Srujan Lokesh". The Times of India. 12 April 2014. Archived from the original on 3 February 2018. Retrieved 3 February 2018.
- ↑ "Sharan to be first guest of Majaa Talkies Super Season". The Times of India. 31 January 2018. Archived from the original on 2 June 2018. Retrieved 3 February 2018.
- Pages using the JsonConfig extension
- CS1 errors: empty unknown parameters
- Pages using infoboxes with thumbnail images
- Pages using infobox person with multiple parents
- Pages using infobox person with unknown parameters
- Articles with hCards
- ಚಲನಚಿತ್ರ ನಟರು
- ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೬-೧೭
- ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗಾಗಿ ವಿಸ್ತರಿಸಿದ ಲೇಖನ