ಶ್ರವಣ ಎಂಜಿನಿಯರಿಂಗ್
ಶ್ರವಣ ಎಂಜಿನಿಯರಿಂಗ್ (ಆಡಿಯೋ ಎಂಜಿನಿಯರಿಂಗ್) ಎಂಬುದು ಒಂದು ಪರಿಣತ ವೃತ್ತಿಯಾಗಿದ್ದು, ಧ್ವನಿಗಳ ಮುದ್ರಿಸುವಿಕೆ, ಬೆರೆಸುವಿಕೆ ಮತ್ತು ಪ್ರತಿ ಮಾಡುವಿಕೆಗಳಿಗೆ ಸಂಬಂಧಿಸಿರುವ ಯಂತ್ರೋಪಕರಣ ಹಾಗೂ ಉಪಕರಣದ ಬಳಕೆಯೊಂದಿಗೆ ಅದು ವ್ಯವಹರಿಸುತ್ತದೆ. ವಿದ್ಯುನ್ಮಾನ ಶಾಸ್ತ್ರ, ಶ್ರವಣ ವಿಜ್ಞಾನ, ಮನೋಶ್ರವಣ ವಿಜ್ಞಾನ, ಮತ್ತು ಸಂಗೀತ ಕ್ಷೇತ್ರಗಳನ್ನು ಒಳಗೊಂಡಂತೆ ಅನೇಕ ಕಲಾತ್ಮಕ ಮತ್ತು ವೃತ್ತಿಪರ ವಲಯಗಳ ಮೇಲೆ ಈ ಕ್ಷೇತ್ರವು ಅವಲಂಬಿಸುತ್ತದೆ. ವಿಭಿನ್ನ ಬಗೆಯ ಧ್ವನಿಮುದ್ರಣ ಮಾಧ್ಯಮಗಳೊಂದಿಗೆ ಓರ್ವ ಶ್ರವಣ ಎಂಜಿನಿಯರ್ ಪ್ರಾವೀಣ್ಯತೆಯನ್ನು ಪಡೆದಿರುತ್ತಾನೆ ಹಾಗೂ ಸಾದೃಶ್ಯ ಟೇಪು (ಅನಲಾಗ್ ಟೇಪ್), ಅಂಕೀಯ ಬಹುಪಥ ಧ್ವನಿಮುದ್ರಕಗಳು (ಡಿಜಿಟಲ್ ಮಲ್ಟಿಟ್ರಾಕ್ ರೆಕಾರ್ಡರ್ಸ್) ಮತ್ತು ಕಾರ್ಯಕೇಂದ್ರಗಳಂಥ ಮಾಧ್ಯಮಗಳು, ಹಾಗೂ ಕಂಪ್ಯೂಟರ್ ಜ್ಞಾನ ಇವೇ ಮೊದಲಾದವು ಸದರಿ ಪರಿಣತಿಯ ವ್ಯಾಪ್ತಿಯಲ್ಲಿ ಬರುತ್ತವೆ. ಅಂಕೀಯ ಯುಗವು ಉದಯವಾಗುವುದರೊಂದಿಗೆ ಇದು ಹೆಚ್ಚು ಹೆಚ್ಚು ಪ್ರಾಮುಖ್ಯತೆಯನ್ನು ಗಳಿಸಿಕೊಳ್ಳುತ್ತಿದೆ. ಹೀಗಾಗಿ, ಸಮನ್ವಯಗೊಳಿಸುವಿಕೆಯಿಂದ ಸಾದೃಶ್ಯ ಸ್ವರೂಪಕ್ಕೆ, ಸಾದೃಶ್ಯ ಸ್ವರೂಪದಿಂದ ಅಂಕೀಯ ಸ್ವರೂಪಕ್ಕೆ ಮಾಡುವ ವರ್ಗಾವಣೆಗಳಿಗೆ ಸಂಬಂಧಿಸಿದ ತಂತ್ರಾಂಶ ಮತ್ತು ಯಂತ್ರಾಂಶದ ಸಮಗ್ರೀಕರಣವನ್ನು ಅರ್ಥೈಸಿಕೊಳ್ಳುವಲ್ಲಿ ಓರ್ವ ಶ್ರವಣ ಎಂಜಿನಿಯರ್ ನಿಷ್ಣಾತನಾಗಿರಬೇಕಾಗುತ್ತದೆ.
ಧ್ವನಿವಿಜ್ಞಾನದ ಎಂಜಿನಿಯರಿಂಗ್ ಎಂಬುದಾಗಿ ಕರೆಯಲ್ಪಡುವ ಔಪಚಾರಿಕ ಎಂಜಿನಿಯರಿಂಗ್ ಶಿಕ್ಷಣದ ವಿಷಯಕ್ಕೆ ಪ್ರತಿಯಾಗಿ, ಧ್ವನಿಗಳು ಮತ್ತು ಸಂಗೀತದ ಸೃಜನಶೀಲ ಹಾಗೂ ಪ್ರಾಯೋಗಿಕ ಮಗ್ಗುಲುಗಳ ಕುರಿತಾಗಿ ಶ್ರವಣ ಎಂಜಿನಿಯರಿಂಗ್ ಆಸಕ್ತಿ ವಹಿಸುತ್ತದೆ. ಫಿಲ್ ಎಕ್ ಎಂಬ ಓರ್ವ ನಿರ್ಮಾಪಕ, ಎಂಜಿನಿಯರ್, ಧ್ವನಿ ಸಂಯೋಜಕನು ಶ್ರವಣ ಎಂಜಿನಿಯರಿಂಗ್ ಕುರಿತಾಗಿ ವಿವರಿಸುತ್ತಾ, "ಇದು ಯಾವುದೇ ಯೋಜನೆಯ ಭೌತಿಕ ಮುದ್ರಿಸುವಿಕೆಗೆ (ಧ್ವನಿಮುದ್ರಣಕ್ಕೆ) ಸಂಬಂಧಿಸಿದ ವಿಷಯವಾಗಿದ್ದು, ಓರ್ವ ನಿರ್ಮಾಪಕನು ಆ ಪ್ರಕ್ರಿಯೆಯನ್ನು ನಿರ್ದೇಶಿಸುವ ಆಸಾಮಿಯಾಗಿರುತ್ತಾನೆ; ಧ್ವನಿವರ್ಧಕಗಳನ್ನು ಇರಿಸುವುದು, ಪೂರ್ವ-ವರ್ಧಕ ಗುಬುಟುಗಳನ್ನು (ಪ್ರೀ-ಆಂಪ್ ನಾಬ್ಸ್) ತಿರುಗಿಸುವುದು ಹಾಗೂ ಮಟ್ಟಗಳನ್ನು ನಿಗದಿಪಡಿಸುವುದು ಇವೇ ಮೊದಲಾದವು ಈ ಪ್ರಕ್ರಿಯೆಯಲ್ಲಿ ಸೇರಿರುತ್ತವೆ."[೧] ಸದರಿ ಪ್ರಕ್ರಿಯೆ ಮತ್ತು ಕಲೆಯನ್ನು ವರ್ಧಿಸುವುದಕ್ಕೆ ಸಂಬಂಧಿಸಿದ ಹೊಸ ತಂತ್ರಜ್ಞಾನ, ಉಪಕರಣ ಹಾಗೂ ಕೌಶಲಗಳನ್ನೂ ಸಹ ಅನೇಕ ಧ್ವನಿಮುದ್ರಣ ಎಂಜಿನಿಯರ್‌ಗಳು ಕಂಡುಹಿಡಿದಿದ್ದಾರೆ.[೨]
ನಿಘಂಟಿನ ವಿವಾದ
[ಬದಲಾಯಿಸಿ]"ಶ್ರವಣ ಎಂಜಿನಿಯರ್" ಮತ್ತು "ಧ್ವನಿ ಎಂಜಿನಿಯರ್" ಎಂಬ ಅಭಿವ್ಯಕ್ತಿಗಳು ಅನಿರ್ಧಾರಿತವಾಗಿವೆ. ಧ್ವನಿ ಮತ್ತು ಸಂಗೀತ ನಿರ್ಮಾಣದಲ್ಲಿ ಕೆಲಸ ಮಾಡುತ್ತಿರುವ ಓರ್ವ ವ್ಯಕ್ತಿಗೆ ಮಾತ್ರವೇ ಅಲ್ಲದೇ, ಈ ವಿಷಯಗಳಿಗೆ ಸಂಬಂಧಿಸಿದಂತೆ ವೃತ್ತಿಪರ ಉಪಕರಣವನ್ನು ವಿನ್ಯಾಸಗೊಳಿಸುವ ಓರ್ವ ಪದವೀಧರ ಎಂಜಿನಿಯರ್‌ಗೂ ಇಂಥ ಪರಿಭಾಷೆಗಳು ಉಲ್ಲೇಖಿಸಲ್ಪಡುತ್ತವೆ. ಅಂದರೆ, ಓರ್ವ ಪದವೀಧರ ಎಂಜಿನಿಯರ್‌ನ ವೃತ್ತಿಯು ಧ್ವನಿ ಮತ್ತು ಸಂಗೀತ ನಿರ್ಮಾಣದಲ್ಲಿ ಕೆಲಸ ಮಾಡುತ್ತಿರುವವನಿಗೆ ಅಗತ್ಯವಾಗಿರುವ ಸಾಧನಗಳನ್ನು ಅನೇಕವೇಳೆ ಅಭಿವೃದ್ಧಿಪಡಿಸುತ್ತದೆ. ಜರ್ಮನ್ ಮತ್ತು ಇಟಾಲಿಯನ್‌ನಂಥ ಇತರ ಭಾಷೆಗಳು, ಈ ಚಟುವಟಿಕೆಗಳನ್ನು ಉಲ್ಲೇಖಿಸುವುದಕ್ಕೆ ಸಂಬಂಧಿಸಿದಂತೆ ವಿಭಿನ್ನ ಪದಗಳನ್ನು ಹೊಂದಿವೆ. ಉದಾಹರಣೆಗೆ, ಜರ್ಮನ್ ಭಾಷೆಯಲ್ಲಿ ಟೋನ್‌ಟೆಕ್ನಿಕರ್ (ಶ್ರವಣ ತಂತ್ರಜ್ಞ) ಎಂದು ಕರೆಯಲ್ಪಡುವ ವೃತ್ತಿಪರಿಣಿತನು ಶ್ರವಣ ಉಪಕರಣವನ್ನು ಚಲಾಯಿಸುವವನಾಗಿರುತ್ತಾನೆ.ಟೋನ್‌ಮೀಸ್ಟರ್ (ಧ್ವನಿ ಪರಿಣಿತ) ಎಂಬುದಾಗಿ ಕರೆಯಲ್ಪಡುವ ವೃತ್ತಿಪರಿಣಿತನು ಧ್ವನಿಮುದ್ರಣಗಳನ್ನು ಸೃಷ್ಟಿಸುವವನಾಗಿರುತ್ತಾನೆ ಅಥವಾ ಸಂಗೀತವನ್ನು ಪ್ರಸಾರಮಾಡುವವನಾಗಿರುತ್ತಾನೆ; ಸದರಿ ಟೋನ್‌ಮೀಸ್ಟರ್ ಸಾಂಗೀತಕವಾಗಿ ('ಶಾಸ್ತ್ರೀಯ' ಸಂಗೀತ ಮತ್ತು ಶಾಸ್ತ್ರೀಯವಲ್ಲದ ಪ್ರಕಾರಗಳಲ್ಲಿ) ಆಳವಾಗಿ ತರಬೇತು ಪಡೆದಿರುವುದು ಮಾತ್ರವಲ್ಲದೇ, ವಸ್ತುತಃ ಧ್ವನಿಯ ಎಲ್ಲಾ ಮಗ್ಗುಲುಗಳ ಕುರಿತಾಗಿ ಒಂದು ವಿಸ್ತೃತವಾದ ತಾತ್ತ್ವಿಕ ಹಾಗೂ ಪ್ರಾಯೋಗಿಕ ಜ್ಞಾನವನ್ನೂ ಸಹ ಹೊಂದಿರುತ್ತಾನೆ; ಅದೇ ವೇಳೆಗೆ, ಟೋನಿಜಿನಿಯರ್ (ಶ್ರವಣ ಎಂಜಿನಿಯರ್) ಎಂದು ಕರೆಯಲ್ಪಡುವ ವೃತ್ತಿಪರಿಣಿತನು ಸದರಿ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವ, ನಿರ್ಮಿಸುವ ಮತ್ತು ದುರಸ್ತಿಮಾಡುವ ವಲಯಗಳಲ್ಲಿ ಪರಿಣಿತನಾಗಿರುತ್ತಾನೆ.
ಅಂಕೀಯ ಸಂಕೇತ ಸಂಸ್ಕರಣೆ (ಡಿಜಿಟಲ್ ಸಿಗ್ನಲ್ ಪ್ರೊಸೆಸಿಂಗ್) ಮತ್ತು ಕಂಪ್ಯೂಟರ್ ಸಂಗೀತದ ಸಮಸ್ಯೆಗಳಿಗೆ ಸಂಬಂಧಿಸಿದ ಲೆಕ್ಕಾಚಾರಗಳಿಗೆ ಆಕಾರ ನೀಡುವ ಮೂಲಕ ಕೋಣೆಗಳ ಧ್ವನಿವಿಜ್ಞಾನದ ಅನುಕರಣೆಗಳನ್ನು ವಿನ್ಯಾಸ ಮಾಡುವ, ಧ್ವನಿ ಮತ್ತು ಶ್ರವಣ ಎಂಜಿನಿಯರಿಂಗ್‌ನ ಇತರ ಮುಂದುವರಿದ ಕ್ಷೇತ್ರಗಳ ಕುರಿತಾಗಿ ಸಾಂಸ್ಥಿಕ ಸಂಶೋಧನೆಯನ್ನು ನಿರ್ವಹಿಸುವ ವ್ಯಕ್ತಿಗಳು, ಬಹುತೇಕವಾಗಿ ಅಧಿಕೃತವಾಗಿ ಮನ್ನಣೆ ಪಡೆದಿರುವ ಕಾಲೇಜು ಅಥವಾ ವಿಶ್ವವಿದ್ಯಾಲಯವೊಂದರ ಪದವೀಧರರಾಗಿರುತ್ತಾರೆ, ಅಥವಾ ಒಂದು ಕಷ್ಟಕರವಾದ ನಾಗರಿಕ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರಾಗಿರುತ್ತಾರೆ.
ಸ್ಥಳೀಯ ವೃತ್ತಿಪರ ಎಂಜಿನಿಯರಿಂಗ್ ಘಟಕದ ಓರ್ವ ನೋಂದಾಯಿತ ಸದಸ್ಯನಾಗಿರದ ಯಾವುದೇ ವ್ಯಕ್ತಿಯು ಎಂಜಿನಿಯರ್ ಎಂಬ ವಿಶಿಷ್ಟನಾಮದ ಬಳಕೆಮಾಡುವುದನ್ನು ಕೆಲವೊಂದು ಅಧಿಕಾರ ವ್ಯಾಪ್ತಿಗಳು ನಿರ್ದಿಷ್ಟವಾಗಿ ನಿಷೇಧಿಸುತ್ತವೆ; ಸದರಿ ಘಟಕವು ಎಂಜಿನಿಯರಿಂಗ್ ವೃತ್ತಿಗೆ ಸಂಬಂಧಿಸಿದಂತೆ ನೀತಿಸೂತ್ರಗಳು ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ನಿಯಂತ್ರಿಸುವುದಕ್ಕಾಗಿ ಹೊಣೆಗಾರನಾಗಿರುತ್ತದೆ, ಹಾಗೂ ಅನೇಕ ವೇಳೆ ಈ ಘಟಕವು ಶ್ರವಣ ಎಂಜಿನಿಯರ್‌ಗಳನ್ನು ಒಳಗೊಂಡಿರದೇ ಇರಬಹುದು. ಇಂಥ ಸನ್ನಿವೇಶಗಳಲ್ಲಿ ಅವರನ್ನು ಔಪಚಾರಿಕವಾಗಿ ಶ್ರವಣ ತಂತ್ರಜ್ಞರು ಎಂಬುದಾಗಿ ಉಲ್ಲೇಖಿಸಲಾಗುತ್ತದೆ.
ವೃತ್ತಿಗಾರರು
[ಬದಲಾಯಿಸಿ]ಶ್ರವಣ ಎಂಜಿನಿಯರ್ ಆಗಿರುವ ಓರ್ವನು, ಯಾಂತ್ರಿಕ (ಸಾದೃಶ್ಯ) ಅಥವಾ ಅಂಕೀಯ ವಿಧಾನಗಳ ಮೂಲಕ ಧ್ವನಿಯ ನಿರ್ಮಾಣ ಮತ್ತು ಅದರ ಕುಶಲ ಬಳಕೆಯಲ್ಲಿ ಅನುಭವ ಹಾಗೂ ತರಬೇತಿಯನ್ನು ಪಡೆದಿರುವ ಓರ್ವ ವೃತ್ತಿ ಪರಿಣಿತನಾಗಿರುತ್ತಾನೆ. ಒಂದು ವೃತ್ತಿಪರವಾದ ವಿಶಿಷ್ಟನಾಮವನ್ನು ಹೊಂದಿರುವ ಈ ವ್ಯಕ್ತಿಯನ್ನು ಕೆಲವೊಮ್ಮೆ ಓರ್ವ ಧ್ವನಿ-ಎಂಜಿನಿಯರ್ ಅಥವಾ ಧ್ವನಿಮುದ್ರಣದ ಎಂಜಿನಿಯರ್ ಎಂದು ಅದರ ಬದಲಿಗೆ ಹೆಸರಿಸಲಾಗುತ್ತದೆ. ಈ ವಿಶಿಷ್ಟನಾಮಗಳ ಪೈಕಿ ಒಂದನ್ನು ಹೊಂದಿರುವ ವ್ಯಕ್ತಿಯೊಬ್ಬನನ್ನು, ವಾಣಿಜ್ಯ ಸಂಗೀತದ ಅನೇಕ ಧ್ವನಿಮುದ್ರಣಗಳ (ಮತ್ತು ಧ್ವನಿಯನ್ನು ಒಳಗೊಳ್ಳುವ ಚಲನಚಿತ್ರಗಳಂಥ ಇತರ ನಿರ್ಮಾಣಗಳ) ಉಪಕಾರ-ಸ್ಮರಣೆಯಲ್ಲಿ ಸಾಮಾನ್ಯವಾಗಿ ಹೆಸರಿಸಲಾಗುತ್ತದೆ.
ಧ್ವನಿ ಮುದ್ರಿಸುವಿಕೆಯ, ಧ್ವನಿ ಬಲವರ್ಧನೆಯ ವ್ಯವಸ್ಥೆಯ, ಅಥವಾ ದೊಡ್ಡ ಮತ್ತು ಚಿಕ್ಕ ಸ್ವರೂಪ ಪೆಟ್ಟಿಗೆಗಳನ್ನು ಒಳಗೊಂಡಂತೆ ಧ್ವನಿ ಪ್ರಸಾರ ಮಾಡುವ ಉಪಕರಣದ ವಿನ್ಯಾಸ, ಅಳವಡಿಕೆ, ಮತ್ತು/ಅಥವಾ ಕಾರ್ಯನಿರ್ವಹಣೆಯೊಂದಿಗೆ, ಶ್ರವಣ ಎಂಜಿನಿಯರ್‌ಗಳು ಸಾಮಾನ್ಯವಾಗಿ ಪರಿಶ್ರಮ-ಪ್ರಾವೀಣ್ಯತೆಯನ್ನು ಪಡೆದಿರುತ್ತಾರೆ. ಶ್ರವಣ ಎಂಜಿನಿಯರ್ ಆಗಿರುವ ಓರ್ವನು ತಾಂತ್ರಿಕ ವಿಧಾನಗಳನ್ನು ಬಳಸಿಕೊಂಡು, ಧ್ವನಿಮುದ್ರಣ ಸ್ಟುಡಿಯೊದ ಪರಿಸರದಲ್ಲಿ ಧ್ವನಿಯನ್ನು ಮುದ್ರಿಸುತ್ತಾನೆ, ಸಂಕಲಿಸುತ್ತಾನೆ, ಕುಶಲಬಳಕೆ ಮಾಡುತ್ತಾನೆ, ಹದವಾಗಿ ಬೆರೆಸುತ್ತಾನೆ, ಮತ್ತು/ಅಥವಾ ಉತ್ಕೃಷ್ಟತೆಯನ್ನು ನೀಡುತ್ತಾನೆ; ಇದರ ಹಿನ್ನೆಲೆಯಲ್ಲಿ ಓರ್ವ ಕಲಾವಿದನ ಅಥವಾ ಧ್ವನಿಮುದ್ರಿಕೆಯ ನಿರ್ಮಾಪಕನ ಸೃಜನಶೀಲ ದೃಷ್ಟಿಕೋನವನ್ನು ನೆರವೇರಿಸುವ ಉದ್ದೇಶವಿರುತ್ತದೆ. ಸಾಮಾನ್ಯವಾಗಿ ಸಂಗೀತ ನಿರ್ಮಾಣದೊಂದಿಗೆ ಸಂಬಂಧ ಹೊಂದಿರುವುದರ ಜೊತೆಗೆ, ಓರ್ವ ಶ್ರವಣ ಎಂಜಿನಿಯರ್ ಆದವನು ಒಂದು ವ್ಯಾಪಕ ಶ್ರೇಣಿಯ ಅನ್ವಯಿಕೆಗಳಿಗೆ ಸಂಬಂಧಿಸಿದಂತೆ ಧ್ವನಿಯ ಪರಿಷ್ಕರಣೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ; ವಿಡಿಯೋ ಮತ್ತು ಚಲನಚಿತ್ರ, ಪ್ರತ್ಯಕ್ಷ ಧ್ವನಿ ಬಲವರ್ಧನೆ, ಜಾಹೀರಾತು, ಮಲ್ಟಿಮೀಡಿಯಾ, ಮತ್ತು ಪ್ರಸಾರ ಮಾಡುವಿಕೆಗೆ ಸಂಬಂಧಿಸಿದ ನಿರ್ಮಾಣಾನಂತರದ ಕಾರ್ಯಗಳು ಇದರಲ್ಲಿ ಸೇರಿರುತ್ತವೆ. ವಿಡಿಯೋ ಆಟಗಳ ಕುರಿತಾಗಿ ಉಲ್ಲೇಖಿಸುವಾಗ, ಓರ್ವ ಶ್ರವಣ ಎಂಜಿನಿಯರ್ ಎನಿಸಿಕೊಂಡವನು ಓರ್ವ ಕಂಪ್ಯೂಟರ್ ಪ್ರೋಗ್ರ್ಯಾಮರ್ ಆಗಿರುವ ಸಾಧ್ಯತೆಗಳೂ ಇರುತ್ತವೆ.
ದೊಡ್ಡದಾದ ನಿರ್ಮಾಣಗಳಲ್ಲಿ, ಒಂದು ಧ್ವನಿಮುದ್ರಣ ಅಥವಾ ಇತರ ಶ್ರವಣ ನಿರ್ಮಾಣದ ತಾಂತ್ರಿಕ ಮಗ್ಗುಲುಗಳಿಗೆ ಸಂಬಂಧಿಸಿದಂತೆ ಓರ್ವ ಶ್ರವಣ ಎಂಜಿನಿಯರ್ ಹೊಣೆಗಾರನಾಗಿರುತ್ತಾನೆ ಮತ್ತು ಓರ್ವ ಧ್ವನಿಮುದ್ರಿಕೆಯ ನಿರ್ಮಾಪಕ ಅಥವಾ ನಿರ್ದೇಶಕನೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಾನೆ; ಆದರೂ, ಎಂಜಿನಿಯರ್‌ನ ಪಾತ್ರವು ನಿರ್ಮಾಪಕನ ಪಾತ್ರದೊಂದಿಗೆ ಸಂಯೋಜಿಸಲ್ಪಟ್ಟಿರುವ ಸಾಧ್ಯತೆಗಳೂ ಇರುತ್ತವೆ. ಚಿಕ್ಕದಾದ ನಿರ್ಮಾಣಗಳು ಮತ್ತು ಸ್ಟುಡಿಯೊಗಳಲ್ಲಿ, ಧ್ವನಿ ಎಂಜಿನಿಯರ್ ಮತ್ತು ನಿರ್ಮಾಪಕ ಈ ಎರಡೂ ಅನೇಕವೇಳೆ ಒಬ್ಬನೇ ಮತ್ತು ಅದೇ ವ್ಯಕ್ತಿಯೇ ಆಗಿರುತ್ತಾನೆ.
ಧ್ವನಿ-ಬಲವರ್ಧನೆಯ ವಿಶಿಷ್ಟ ಅನ್ವಯಿಕೆಗಳಲ್ಲಿ, ಶ್ರವಣ ಎಂಜಿನಿಯರ್‌ಗಳು ಅನೇಕವೇಳೆ ನಿರ್ಮಾಪಕನ ಪಾತ್ರವನ್ನು ವಹಿಸಿಕೊಂಡು ಕಲಾತ್ಮಕ ಮತ್ತು ತಾಂತ್ರಿಕ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ, ಮತ್ತು ಕೆಲವೊಮ್ಮೆ ಕಾರ್ಯ ನಿಯೋಜನೆಯ ಹಾಗೂ ಖರ್ಚುವೆಚ್ಚದ ತೀರ್ಮಾನಗಳನ್ನೂ ತೆಗೆದುಕೊಳ್ಳುತ್ತಾರೆ.[೩]
ವಿಭಿನ್ನ ವೃತ್ತಿಪರ ಶಾಖೆಗಳು
[ಬದಲಾಯಿಸಿ]ಧ್ವನಿಮುದ್ರಣವೊಂದರ ವಾಣಿಜ್ಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾಲ್ಕು ವಿಶಿಷ್ಟ ಹಂತಗಳು ಅಸ್ತಿತ್ವದಲ್ಲಿವೆ. ಅವುಗಳೆಂದರೆ: ಧ್ವನಿಮುದ್ರಿಸುವಿಕೆ, ಸಂಕಲನ, ಬೆರೆಸುವಿಕೆ, ಮತ್ತು ಉತ್ಕೃಷ್ಟತೆಯನ್ನು ನೀಡುವಿಕೆ. ವಿಶಿಷ್ಟವೆಂಬಂತೆ, ಇವುಗಳ ಪೈಕಿ ಪ್ರತಿಯೊಂದು ಹಂತವನ್ನೂ ಓರ್ವ ಧ್ವನಿ ಎಂಜಿನಿಯರ್ ನಿರ್ವಹಿಸುತ್ತಾನೆ; ಈತ ನಿರ್ಮಾಣದ ಆ ಭಾಗದಲ್ಲಷ್ಟೇ ವಿಶೇಷ ಪರಿಣತಿಯನ್ನು ಪಡೆದಿರುತ್ತಾನೆ.
- ಸ್ಟುಡಿಯೊ ಎಂಜಿನಿಯರ್: ಓರ್ವ ಎಂಜಿನಿಯರ್ ಆಗಿರುವ ಈತ, ಸ್ಟುಡಿಯೊ ಸೌಲಭ್ಯವೊಂದರೊಳಗೆ ಓರ್ವ ನಿರ್ಮಾಪಕನ ಜೊತೆಯಲ್ಲಿ ಅಥವಾ ಸ್ವತಂತ್ರವಾಗಿ ಕೆಲಸ ಮಾಡುತ್ತಿರುತ್ತಾನೆ
- ಧ್ವನಿಮುದ್ರಣದ ಎಂಜಿನಿಯರ್: ಈತ ಧ್ವನಿಯನ್ನು ಮುದ್ರಿಸುವ ಎಂಜಿನಿಯರ್ ಆಗಿರುತ್ತಾನೆ.
- ಸಹಾಯಕ ಎಂಜಿನಿಯರ್: ಅನೇಕವೇಳೆ ಈತನನ್ನು ದೊಡ್ಡದಾದ ಸ್ಟುಡಿಯೊಗಳಲ್ಲಿ ನೇಮಿಸಲಾಗಿರುತ್ತದೆ ಹಾಗೂ ಪೂರ್ಣಕಾಲಿಕ ಎಂಜಿನಿಯರನ್ನಾಗಿಸುವ ದೃಷ್ಟಿಯಿಂದ ಅವನಿಗೆ ತರಬೇತಿ ನೀಡಲಾಗುತ್ತದೆ. ಧ್ವನಿವರ್ಧಕ ಸಜ್ಜಿಕೆಗಳು, ಅವಧಿ ಕುಸಿತಗಳು, ಹಾಗೂ ಕೆಲವೊಂದು ನಿದರ್ಶನಗಳಲ್ಲಿ ಅಪರಿಷ್ಕೃತ ಮಿಶ್ರಣಗಳ ಕಾರ್ಯದಲ್ಲಿ ಅವರು ಅನೇಕವೇಳೆ ಪೂರ್ಣಕಾಲಿಕ ಎಂಜಿನಿಯರ್‌ಗಳಿಗೆ ನೆರವಾಗುತ್ತಾರೆ.[೪]
- ಬೆರೆಸುವ ಕಾರ್ಯದ ಎಂಜಿನಿಯರ್: ಈತನು ಬಹು-ಪಥದ ಧ್ವನಿಮುದ್ರಣಗಳ ಮಿಶ್ರಣಗಳನ್ನು ಸೃಷ್ಟಿಸುವ ಓರ್ವ ವ್ಯಕ್ತಿಯಾಗಿರುತ್ತಾನೆ. ಒಂದು ವಾಣಿಜ್ಯ ಧ್ವನಿಮುದ್ರಿಕೆಗೆ ಸಂಬಂಧಿಸಿ ಹೇಳುವುದಾದರೆ, ಅದು ಒಂದು ಸ್ಟುಡಿಯೊದಲ್ಲಿ ಧ್ವನಿಮುದ್ರಿಸಲ್ಪಟ್ಟು, ನಂತರದಲ್ಲಿ ಇತರ ಸ್ಟುಡಿಯೊಗಳಲ್ಲಿನ ವಿಭಿನ್ನ ಎಂಜಿನಿಯರ್‌ಗಳಿಂದ ಬೆರೆಸಲ್ಪಡುವ ಪ್ರಕ್ರಿಯೆಯು ಈಗ ಸಾಮಾನ್ಯವಾಗಿದೆ.
- ಉತ್ಕೃಷ್ಟತೆಯ ಎಂಜಿನಿಯರ್: ವಿಶಿಷ್ಟವೆಂಬಂತೆ, ಈತನು ಬೆರೆಸುವ ಕಾರ್ಯದ ಎಂಜಿನಿಯರ್ ನಿರ್ಮಿಸುವ ಅಂತಿಮ ಸ್ಟೀರಿಯೊ ಧ್ವನಿಪಥಗಳನ್ನು (ಅಥವಾ ಕೆಲವೊಮ್ಮೆ ಕೇವಲ ಕೆಲವೇ ಪಥಗಳು ಅಥವಾ ಭಾಗಗಳನ್ನು) ಬೆರೆಸುವ ವ್ಯಕ್ತಿಯಾಗಿರುತ್ತಾನೆ. ಉತ್ಕೃಷ್ಟತೆಯ ಎಂಜಿನಿಯರ್ ಎನಿಸಿಕೊಂಡವನು, ವಾಣಿಜ್ಯ ಸ್ವರೂಪದಲ್ಲಿ ಪ್ರತಿಗಳನ್ನು ಸೃಷ್ಟಿಸುವುದಕ್ಕೆ ಮುಂಚಿತವಾಗಿ, ಅಂತಿಮ ಹಂತದಲ್ಲಿನ ಧ್ವನಿಮುದ್ರಿಕೆಯ ಒಟ್ಟಾರೆ ಧ್ವನಿಗೆ ಯಾವುದೇ ಅಂತಿಮ ಹೊಂದಾಣಿಕೆಗಳನ್ನು ಮಾಡುತ್ತಾನೆ. ಧ್ವನಿಯ ವರ್ಣವಿನ್ಯಾಸ ಕ್ರಮವನ್ನು ಉಂಟುಮಾಡುವ ಸಲುವಾಗಿ, ಉತ್ಕೃಷ್ಟತೆಯ ಎಂಜಿನಿಯರ್‌ಗಳು ಸಮೀಕರಣ ಮತ್ತು ಸಂಪೀಡನದ ತತ್ತ್ವಗಳನ್ನು ಬಳಸುತ್ತಾರೆ.
- ಆಟದ ಶ್ರವಣ ವಿನ್ಯಾಸಕ ಎಂಜಿನಿಯರ್: ಈತನು ಆಟದ ಅಭಿವೃದ್ಧಿಯ ಧ್ವನಿ ಮಗ್ಗುಲುಗಳೊಂದಿಗೆ ವ್ಯವಹರಿಸುತ್ತಾನೆ.
- ಪ್ರತ್ಯಕ್ಷ ಧ್ವನಿಯ ಎಂಜಿನಿಯರ್: ಈತನು ಪ್ರತ್ಯಕ್ಷ ಧ್ವನಿಯ ಬಲವರ್ಧನೆಯೊಂದಿಗೆ ವ್ಯವಹರಿಸುವ ಓರ್ವ ವ್ಯಕ್ತಿಯಾಗಿರುತ್ತಾನೆ. ಇದರಲ್ಲಿ ಸಾಮಾನ್ಯವಾಗಿ, ಧ್ವನಿವರ್ಧಕ ಯಂತ್ರಗಳ ಯೋಜನೆ ಮತ್ತು ಅಳವಡಿಕೆ, ಕೇಬಲ್‌ಗಳ ಹಾಗೂ ಉಪಕರಣದ ಅಳವಡಿಕೆ, ಮತ್ತು ಪ್ರದರ್ಶನ-ಕಾರ್ಯಕ್ರಮದ ಅವಧಿಯಲ್ಲಿ ಧ್ವನಿಯನ್ನು ಬೆರೆಸುವಿಕೆ ಇವೇ ಮೊದಲಾದ ಕಾರ್ಯಗಳು ಸೇರಿರುತ್ತವೆ. ಇದು ಹಿಮ್ಮಡಿಕೆಯ ಧ್ವನಿಯ ಓಡಿಸುವಿಕೆಯನ್ನು ಒಳಗೊಂಡಿರಬಹುದು ಅಥವಾ ಇಲ್ಲದಿರಬಹುದು. ಪ್ರತ್ಯಕ್ಷ/ಧ್ವನಿ ಬಲವರ್ಧನೆಯ ಓರ್ವ ಎಂಜಿನಿಯರ್, ಸಂಗೀತಮಯ ಮೂಲದ್ರವ್ಯವನ್ನು ಕೇಳಿಸಿಕೊಳ್ಳುತ್ತಾನೆ ಮತ್ತು ವ್ಯವಸ್ಥೆಯ ಕಾರ್ಯಕ್ಷಮತೆಯೊಂದಿಗೆ ಆ ಶಬ್ದದ ಅನುಭವವನ್ನು ಪರಸ್ಪರ ಸಂಬಂಧಿಸಲು ಪ್ರಯತ್ನಿಸುತ್ತಾನೆ.[೫]
- ಹಿಮ್ಮಡಿಕೆಯ ಅಥವಾ ಮೇಲ್ವಿಚಾರಣೆಯ ಎಂಜಿನಿಯರ್: ಈತನು ಪ್ರತ್ಯಕ್ಷ ಕಾರ್ಯಕ್ರಮವೊಂದರ ಅವಧಿಯಲ್ಲಿ ಹಿಮ್ಮಡಿಕೆಯ ಧ್ವನಿಯನ್ನು ಓಡಿಸುವ ಓರ್ವ ವ್ಯಕ್ತಿಯಾಗಿರುತ್ತಾನೆ. "ಹಿಮ್ಮಡಿಕೆಯ" ಎಂಬ ಶಬ್ದವು ಹಳತಾಗಿದ್ದು, FOH (ಫ್ರಂಟ್ ಆಫ್ ಹೌಸ್) ಬೆರೆಸುವಿಕೆಯ ಪೆಟ್ಟಿಗೆಯಿಂದ ಶ್ರವಣ ಸಂಕೇತಗಳನ್ನು ಹಿಂದಕ್ಕೆ ಮಡಿಸುವ ಪರಿಪಾಠಕ್ಕೆ ಅದು ಉಲ್ಲೇಖಿಸಲ್ಪಡುತ್ತದೆ; ಸಂಗೀತಗಾರರು ತಮ್ಮ ಪ್ರಸ್ತುತಿಯನ್ನು ನೀಡುವ ಸಂದರ್ಭದಲ್ಲಿ, ಸ್ವತಃ ತಮ್ಮ ಧ್ವನಿಯನ್ನು ಕೇಳಿಸಿಕೊಳ್ಳುವುದಕ್ಕೆ ಅನುವಾಗಲು ಈ ವ್ಯವಸ್ಥೆಯಿರುತ್ತದೆ. ಮೇಲ್ವಿಚಾರಣಾ ಎಂಜಿನಿಯರ್‌ಗಳು ಸಾಮಾನ್ಯವಾಗಿ FOH ಎಂಜಿನಿಯರ್‌ಗಳಿಂದ ಪ್ರತ್ಯೇಕವಾಗಿರುವ ಒಂದು ಶ್ರವಣ ವ್ಯವಸ್ಥೆಯನ್ನು ಹೊಂದಿರುತ್ತಾರೆ ಹಾಗೂ ಪ್ರೇಕ್ಷಕರು ಕೇಳಿಸಿಕೊಳ್ಳುವ ಧ್ವನಿಯ ಶ್ರವಣ ಸಂಕೇತಗಳನ್ನು ಸ್ವತಂತ್ರವಾಗಿ ಕುಶಲಬಳಕೆ ಮಾಡುತ್ತಾರೆ; ವೇದಿಕೆಯ ಮೇಲಿರುವ ಪ್ರತಿಯೊಬ್ಬ ಪ್ರದರ್ಶನ ಕಲಾವಿದನ ಅವಶ್ಯಕತೆಗಳನ್ನು ತೃಪ್ತಿಪಡಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತದೆ. ಕೇಳಿಸಿಕೊಳ್ಳುವ ವ್ಯವಸ್ಥೆಗಳಲ್ಲಿ, ಮೇಲ್ವಿಚಾರಣಾ ಎಂಜಿನಿಯರ್‌ಗಳು ವಿಶಿಷ್ಟವೆಂಬಂತೆ ಅಂಕೀಯ ಮತ್ತು ಸಾದೃಶ್ಯ ಬೆರೆಸುವಿಕೆ ಪೆಟ್ಟಿಗೆಗಳು, ಹಾಗೂ ಒಂದು ವೈವಿಧ್ಯಮಯವಾದ ಧ್ವನಿವರ್ಧಕ ಯಂತ್ರದ ಆವರಣಗಳನ್ನು ಬಳಸುತ್ತಾರೆ. ಇದರ ಜೊತೆಗೆ, ಬಹುತೇಕ ಮೇಲ್ವಿಚಾರಣಾ ಎಂಜಿನಿಯರ್‌ಗಳು ನಿಸ್ತಂತು ಅಥವಾ RF (ರೇಡಿಯೋ-ಆವೃತ್ತಿ) ಉಪಕರಣದೊಂದಿಗೆ ಪರಿಶ್ರಮವನ್ನು ಪಡೆದಿರಬೇಕಾಗುತ್ತದೆ ಮತ್ತು ಪ್ರತಿ ಕಾರ್ಯಕ್ರಮ ಪ್ರಸ್ತುತಿಯ ಅವಧಿಯಲ್ಲಿ ಕಲಾವಿದರೊಂದಿಗೆ ವ್ಯಕ್ತಿಗತವಾಗಿ ಸಂಪರ್ಕ ಏರ್ಪಡಿಸುವುದು ಅಗತ್ಯವಾಗಿರುತ್ತದೆ.
- ಯಂತ್ರ ವ್ಯವಸ್ಥೆಗಳ ಎಂಜಿನಿಯರ್: ಈತನು ಅನೇಕವೇಳೆ ಅತ್ಯಂತ ಸಂಕೀರ್ಣವಾಗಿರುವ ಆಧುನಿಕ PA ವ್ಯವಸ್ಥೆಗಳ ವಿನ್ಯಾಸ ಸಜ್ಜಿಕೆಗೆ ಸಂಬಂಧಿಸಿದಂತೆ ಹೊಣೆಗಾರನಾಗಿರುತ್ತಾನೆ. ಯಂತ್ರ ವ್ಯವಸ್ಥೆಗಳ ಓರ್ವ ಎಂಜಿನಿಯರ್‌ನ್ನು ಸಾಮಾನ್ಯವಾಗಿ ಪ್ರವಾಸದ ಮೇಲಿರುವ ಓರ್ವ "ಸಿಬ್ಬಂದಿ ಮುಖ್ಯಸ್ಥ" ಎಂಬುದಾಗಿಯೂ ಉಲ್ಲೇಖಿಸಲಾಗುತ್ತದೆ. ಇವನು FOH ಶ್ರವಣ ವ್ಯವಸ್ಥೆಯ ಜೊತೆಗೆ, ಒಟ್ಟಾರೆಯಾಗಿ ಶ್ರವಣ ಸಿಬ್ಬಂದಿಯ ಕಾರ್ಯಕ್ಷಮತೆ ಮತ್ತು ದೈನಂದಿನ ಉದ್ಯೋಗ ಅವಶ್ಯಕತೆಗಳಿಗೆ ಸಂಬಂಧಿಸಿದಂತೆ ಹೊಣೆಗಾರನಾಗಿರುತ್ತಾನೆ.
- ಉತ್ತರ ಭಾಗದ ಶ್ರವಣ ಎಂಜಿನಿಯರ್: ಈತನು ಚಲನಚಿತ್ರ ಮತ್ತು/ಅಥವಾ ದೂರದರ್ಶನಕ್ಕೆ ಸಂಬಂಧಿಸಿದಂತೆ ಶ್ರವಣ ಫಲಿತವನ್ನು ಸಂಕಲಿಸುತ್ತಾನೆ ಮತ್ತು ಬೆರೆಸುತ್ತಾನೆ.
ಶಿಕ್ಷಣ
[ಬದಲಾಯಿಸಿ]ಲಲಿತ ಕಲೆಗಳು, ಪ್ರಸಾರ ಮಾಡುವಿಕೆ, ಸಂಗೀತ ಅಥವಾ ವಿದ್ಯುನ್ಮಾನ ಶಾಸ್ತ್ರದಂಥ ಹಿನ್ನೆಲೆಗಳಿಂದ ಶ್ರವಣ ಎಂಜಿನಿಯರ್‌ಗಳು ಬರುತ್ತಾರೆ. ಪ್ರಪಂಚದಾದ್ಯಂತವಿರುವ ಅನೇಕ ಕಾಲೇಜುಗಳು ಮತ್ತು ಅಧಿಕೃತವಾಗಿ ಮನ್ನಣೆಪಡೆದಿರುವ ಸಂಸ್ಥೆಗಳು ಶ್ರವಣ ಎಂಜಿನಿಯರಿಂಗ್‌ನಲ್ಲಿ ಪದವಿಗಳನ್ನು ಪ್ರದಾನ ಮಾಡುತ್ತವೆ; ಶ್ರವಣ ನಿರ್ಮಾಣದಲ್ಲಿನ ಒಂದು BS ಪದವಿ ಇದಕ್ಕೆ ಉದಾಹರಣೆ. ಮಿಯಾಮಿ ವಿಶ್ವವಿದ್ಯಾಲಯದ ಫಾರೆಸ್ಟ್ ಸ್ಕೂಲ್ ಆಫ್ ಮ್ಯೂಸಿಕ್ ಎಂಬುದು, ಸಂಗೀತದ ಎಂಜಿನಿಯರಿಂಗ್ ತಂತ್ರಜ್ಞಾನದಲ್ಲಿ ನಾಲ್ಕು-ವರ್ಷ ಅವಧಿಯ ಒಂದು ಸ್ನಾತಕ ಸಂಗೀತ ಪದವಿಯನ್ನು ಪ್ರದಾನ ಮಾಡುವುದಕ್ಕೆ ಸಂಬಂಧಿಸಿದಂತೆ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ಮೊದಲ ವಿಶ್ವವಿದ್ಯಾಲಯ ಎನಿಸಿಕೊಂಡಿತ್ತು. ಕಳೆದ 25 ವರ್ಷಗಳಲ್ಲಿ, ಕೆಲವೊಂದು ಸಮಕಾಲೀನ ಸಂಗೀತ ಶಾಲೆಗಳು ಶ್ರವಣ ಎಂಜಿನಿಯರಿಂಗ್ ಕಾರ್ಯಸೂಚಿಗಳನ್ನು ಆರಂಭಿಸಿದ್ದು, ತಮ್ಮ ಪದವೀಧರರಿಗೆ ಒಂದು ಸಂಗೀತದ ಸ್ನಾತಕ ಪದವಿಯನ್ನು ಇವು ಸಾಮಾನ್ಯವಾಗಿ ನೀಡುತ್ತವೆ. ಇದರ ಜೊತೆಗೆ, ಹಲವಾರು ಶ್ರವಣ ಎಂಜಿನಿಯರ್‌ಗಳು ಯಾವುದೇ ಔಪಚಾರಿಕ ತರಬೇತಿಯಿಲ್ಲದೆಯೇ ಸ್ವಯಂಶಿಕ್ಷಿತರು ಎನಿಸಿಕೊಂಡಿದ್ದಾರೆ.
ಸಲಕರಣೆ
[ಬದಲಾಯಿಸಿ]ಶ್ರವಣ ಎಂಜಿನಿಯರ್‌ಗಳು ತಮ್ಮ ದೈನಂದಿನ ಕೆಲಸದಲ್ಲಿ ಈ ಕೆಳಕಂಡ ಸಲಕರಣೆಗಳನ್ನು ಚಲಾಯಿಸುತ್ತಾರೆ ಮತ್ತು ಬಳಸುತ್ತಾರೆ:
|
|
|
ಪ್ರಸಿದ್ಧರಾದ ಧ್ವನಿಮುದ್ರಣ ಎಂಜಿನಿಯರ್‌ಗಳು
[ಬದಲಾಯಿಸಿ]Recording engineers of note
| |||
---|---|---|---|
|
ಪ್ರಸಿದ್ಧರಾದ ಉತ್ಕೃಷ್ಟತೆಯ ಎಂಜಿನಿಯರ್‌ಗಳು
[ಬದಲಾಯಿಸಿ]Mastering engineers of note
| ||
---|---|---|
|
ಪ್ರಸಿದ್ಧರಾದ ಪ್ರತ್ಯಕ್ಷ ಧ್ವನಿಯ ಎಂಜಿನಿಯರ್‌ಗಳು
[ಬದಲಾಯಿಸಿ]Live sound engineers of note
| |||
---|---|---|---|
|
ಇವನ್ನೂ ನೋಡಿ
[ಬದಲಾಯಿಸಿ]
|
|
|
ಬಾಹ್ಯ ಮೂಲಗಳು
[ಬದಲಾಯಿಸಿ]- ಆಡಿಯೋ ಎಂಜಿನಿಯರಿಂಗ್ ಸೊಸೈಟಿ
- ಶ್ರವಣ ಎಂಜಿನಿಯರಿಂಗ್‌ನ ಸೂತ್ರಗಳು ಮತ್ತು ಗಣಕಗಳು
- ಧ್ವನಿಮುದ್ರಣದ ಎಂಜಿನಿಯರ್‌ನ ವಿಡಿಯೋ ಸಂದರ್ಶನಗಳು
- ಶ್ರವಣ ಎಂಜಿನಿಯರ್‌ಗಳಿಗೆ ಸಂಬಂಧಿಸಿದ ಆನ್ಲೈನ್ ಶ್ರವಣ ಸಾಧನಗಳ ಒಂದು ಉಚಿತ ಸಂಗ್ರಹ
- ವಿಕಿರೆಕಾರ್ಡಿಂಗ್ನ ಶ್ರವಣ ಎಂಜಿನಿಯರ್ ನಿರ್ದೇಶಿಕೆ
- ಕ್ರಿಯೆಟಿವ್ ಕಾಮನ್ಸ್ ಪರವಾನಗಿಯ ಅಡಿಯಲ್ಲಿನ ಶ್ರವಣ ಎಂಜಿನಿಯರಿಂಗ್ ಆನ್ಲೈನ್ ಪಠ್ಯಕ್ರಮ Archived 2008-11-21 ವೇಬ್ಯಾಕ್ ಮೆಷಿನ್ ನಲ್ಲಿ.
- ಶ್ರವಣ ಶ್ವೇತಪತ್ರಗಳು, ಲೇಖನಗಳು ಮತ್ತು ಪುಸ್ತಕಗಳು Archived 2011-07-23 ವೇಬ್ಯಾಕ್ ಮೆಷಿನ್ ನಲ್ಲಿ.
- ರಾನೆ ಪ್ರೋ ಆಡಿಯೋ ರೆಫರೆನ್ಸ್ Archived 2012-04-18 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ "Interview with Phil Ek". HitQuarters. 25 May 2009. Retrieved Sep 3, 2010.
- ↑ ಡೇಲಿ, ಡ್ಯಾನ್, "ದಿ ಎಂಜಿನಿಯರ್ಸ್ ಹೂ ಚೇಂಜ್‌ಡ್ ರೆಕಾರ್ಡಿಂಗ್: ಫಾದರ್ಸ್ ಆಫ್ ಇನ್ವೆನ್ಷನ್", ಸೌಂಡ್ ಆನ್ ಸೌಂಡ್ ನಿಯತಕಾಲಿಕ, ಅಕ್ಟೋಬರ್ 2004
- ↑ ಹ್ಯೂಬರ್, D.M. (1995). ಮಾಡರ್ನ್ ರೆಕಾರ್ಡಿಂಗ್ ಟೆಕ್ನಿಕ್ಸ್ . (5ನೇ ಆವೃತ್ತಿ). ಬರ್ಲಿಂಗ್ಟನ್, MA: ಫೋಕಲ್ ಪ್ರೆಸ್
- ↑ ಹ್ಯೂಬರ್, D.M. (1995). ಮಾಡರ್ನ್ ರೆಕಾರ್ಡಿಂಗ್ ಟೆಕ್ನಿಕ್ಸ್ . (5ನೇ ಆವೃತ್ತಿ). ಬರ್ಲಿಂಗ್ಟನ್, MA: ಫೋಕಲ್ ಪ್ರೆಸ್
- ↑ ಡೇವಿಸ್, G., ಜೋನ್ಸ್ R. (1990). ಯಮಾಹಾ ಸೌಂಡ್ ರೀಇನ್ಫೋರ್ಸ್‌ಮೆಂಟ್ ಹ್ಯಾಂಡ್‌ಬುಕ್ . (2ನೇ ಆವೃತ್ತಿ) ಮಿಲ್ವೌಕೀ, WI: ಹಾಲ್ ಲಿಯೋನಾಡ್ ಕಾರ್ಪೊರೇಷನ್.