ರೆಸೂಲ್ ಪೂಕುಟ್ಟಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರೆಸೂಲ್ ಪೂಕುಟ್ಟಿ

'ಸ್ಲಮ್ ಡಾಗ್ ಮಿಲಿಯನೇರ್ ' ಚಲನಚಿತ್ರದ ಧ್ವನಿಮಿಶ್ರಣ ಸಂಗೀತಕ್ಕಾಗಿ ಆಸ್ಕರ್ ಪ್ರಶಸ್ತಿಪಡೆದ, 'ರೆಸೂಲ್ ಪೂಕುಟ್ಟಿ'. (ಬಿಜು ಎಂದು ಅವರ ಊರಿನಲ್ಲಿ ಪ್ರಸಿದ್ಧರು) ಮೂಲತಃ 'ಕೊಲ್ಲುಂ ಜಿಲ್ಲೆ' ಯ 'ವಿಲಕ್ಕುಪಾರಾ' ಗ್ರಾಮದವರು. 'ಚಲನಚಿತ್ರಕ್ಕಾಗಿ ವಿಶ್ವದ ಅತ್ಯುತ್ತಮ ಪ್ರಶಸ್ತಿ' ( ಆಸ್ಕರ್ ಪ್ರಶಸ್ತಿ) ಪಡೆದ ಏಕಮಾತ್ರಭಾರತೀಯ, ಮತ್ತು ಏಶ್ಯಾದವನೆಂಬ ಹಿರಿಮೆಯನ್ನು ಸಂಪಾದಿಸಿದ್ದಾರೆ. 'ಸ್ಲಮ್ ಡಾಗ್ ಮಿಲಿಯನೇರ್ 'ಚಿತ್ರಕ್ಕೆ ಒಟ್ಟು ೮ ಆಸ್ಕರ್ ಗಳು ದೊರೆತಿದ್ದು, ಅದರಲ್ಲಿ ಭಾರತೀಯರಿಗೆ, ೩ ಪ್ರಶಸ್ತಿಗಳು ದೊರೆತಿವೆ. (ಅಂದರೆ, ಏ. ಆರ್. ರೆಹಮಾನ್ ರಿಗೆ ಎರಡು, ಹಾಗೂ ರೆಸೂಲ್ ಪೂಕುಟ್ಟಿಯವರಿಗೆ, ಒಂದು) ಆಸ್ಕರ್ ಪ್ರಶಸ್ತಿಯೆಂಬುದು, ಅಮೆರಿಕದ " ಅಕ್ಯಾಡಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸ್ (AMPAS) ಸಂಸ್ಥೆ ಕೊಡುವ ' ಅಕ್ಯಾಡಮಿ ಅವಾರ್ಡ್ಸ್ ' ನ ಜನಪ್ರಿಯ ಹೆಸರು'. ಈ ಪಾರಿತೋಷಕವನ್ನು ಕೊಡುವವಿಶೇಷ ಸಮಾರಂಭವೇ, 'ಜಗತ್ತಿನ ಅತಿಪ್ರಸಿದ್ಧಸಿನೆಮಾ ಉತ್ಸವವಾದ ಆಸ್ಕರ್ ಸೆರಿಮನಿ'.

'ರೆಸೂಲ್ ಪೂಕುಟ್ಟಿಯವರ, ಬಾಲ್ಯ ಮತ್ತು ಮನೆಯ ವಾತಾವರಣ[ಬದಲಾಯಿಸಿ]

ಬಡ ಮುಸಲ್ಮಾನ್ ಕುಟುಂಬದ ೮ ಜನ ಮಕ್ಕಳಲ್ಲಿ ಕೊನೆಯವರಾಗಿ ರೆಸೂಲ್, ೧೯೭೧ ರಲ್ಲಿ ಜನಿಸಿದರು. ತಂದೆ, ಖಾಸಗಿ ಬಸ್ ಕಂಡಕ್ಟರ್. ಶಾಲೆಗೆಹೋಗಲು ರಸೂಲ್ ಪ್ರತಿದಿನ, ೬ ಮೈಲು ನಡಿಗೆ, ರಾತ್ರಿ ಚಿಮಿಣಿಎಣ್ಣೆಯ ದೀಪದಡಿಯಲ್ಲಿ ವ್ಯಾಸಂಗ. ಇಂತಹ ವಿಷಮಪರಿಸ್ಥಿತಿಯಲ್ಲೂ ಹುಟ್ಟಿನಿಂದ ಬೆನ್ನಿಗಂಟಿದ್ದ ಸಂಗೀತದ ಒಲವನ್ನು ರೆಸೂಲ್ ಬಿಟ್ಟಿಕೊಡಲಿಲ್ಲ. ಇಂತಹ ಜನ್ಮ ಜನ್ಮಾಂತರಗಳ ಸೆಳೆತವೇ ರಸೂಲ್ ರವರನ್ನು ಪುಣೆಯ, "Film and Television Institute", ಗೆ, ಕರೆತಂದಿತ್ತು.

ಮುಂಬಯಿ ನ ಪರಿಸರದಲ್ಲಿ ರೆಸೂಲ್ ರವರ ಸಂಗೀತಪ್ರತಿಭೆ, ಮತ್ತಷ್ಟು ವಿಕಾಸಗೊಂಡಿತು[ಬದಲಾಯಿಸಿ]

೧೯೯೫ ರಲ್ಲಿ ಪುಣೆಯಿಂದ ಪದವಿಯನಂತರ ರೆಸೂಲ್ ರವರು, ನೇರವಾಗಿ ಮುಂಬಯಿನಗರಕ್ಕೆ ಪಾದಾರ್ಪಣೆಮಾಡಿದರು. ಜಾಹಿರಾತು, ಟೀವಿ ಸೀರಿಯಲ್ ಗಳಲ್ಲಿ ನೌಕರಿಯನ್ನು ಪಡೆದರು. ಸಂಜಯ ಲೀಲಾ ಬನ್ಸಾಲ್ ತಯಾರಿಸಿದ 'ಬ್ಲಾಕ್' ಎಂಬ ಚಲನಚಿತ್ರಕ್ಕೆ ಹಿನ್ನೆಲೆಸಂಗೀತವನ್ನು ಕೊಡುವಲ್ಲಿ ಅವರಿಗೆ ಮೊದಲ ಸುವರ್ಣಾವಕಾಶ ಸಿಕ್ಕಿತು. ಹೀಗೆ ತೆರೆದ ಹಿಂದಿ ಚಿತ್ರೋದ್ಯಮದ ದ್ವಾರವನ್ನು ಪ್ರವೇಶಿಸಿ, ಅವರು, ಮುಸಾಫಿರ್, ಜಿಂದಾ, ಟ್ರಾಫಿಕ್ ಸಿಗ್ನಲ್, ಗಾಂಧಿ ಮೈಫಾದರ್, ಸಾವರಿಯಾ, ದಸ್ ಕಹಾನಿಯಾ, ಮುಂತಾದ ಚಿತ್ರಗಳಿಗೆ ಸಂಗೀತ ಒದಗಿಸಿ, ಜನಪ್ರಿಯರಾದರು. ಬೆಳೆಯುತ್ತಾ ಹೋದ ರಸೂಲ್, ೨೦೦೮ ರಲ್ಲಿ 'ಸ್ಲಮ್ ಡಾಗ್ ಮಿಲಿಯನೇರ್ ಚಿತ್ರ' ಕ್ಕೆ ಸಂಗೀತ ಒದಗಿಸಿದ್ದಲ್ಲದೆ, ಬಾಲಿವುಡ್ ನ ಸೂಪರ ಸ್ಟಾರ್, ಅಮೀರ್ ಖಾನರ ಸೂಪರ್ ಹಿಟ್ ಚಿತ್ರ, 'ಗಜನಿ' ಚಿತ್ರಕ್ಕೂ ಧ್ವನಿ ಸಂಯೋಜಿಸಿದ್ದರು.

'ಗಾಂಧಿ ಮೈ ಫಾದರ್,' ರೆಸೂಲ್ ಪೂಕುಟ್ಟಿಯವರ ಅತ್ಯಂತ ಪ್ರಿಯವಾದ ಚಿತ್ರ[ಬದಲಾಯಿಸಿ]

ರಸೂಲ್ ಪೂಕುಟ್ಟಿಯವರು ಭಾವುಕರಾಗಿದ್ದು, 'ಗಾಂಧಿ ಮೈ ಫಾದರ್,' ಚಿತ್ರಕ್ಕೆ 'ಸೌಂಡ್ ಮಿಕ್ಸ್' ಮಾಡಿದ ಸಂದರ್ಭದಲ್ಲಿ, ಮಗುವಿನಂತೆ ಬಿಕ್ಕಿ-ಬಿಕ್ಕಿ ಅತ್ತಿದ್ದರು. ಆ ಚಿತ್ರದ ಧ್ವನಿಯ ಹಿಂದೆ, ರಸೂಲ್ ರವರ ಭಾವೋದ್ವೇಗದ ಪಡಿಯಚ್ಚು ನಿಚ್ಚಳವಾಗಿ ಕಾಣಬರುತ್ತಿತ್ತು. ೨೦೦೫ ರಲ್ಲಿ ಮುಸಾಫಿರ್ ಚಿತ್ರಕ್ಕೆ, ಅವರಿಗೆ 'ಝೀ ಸಿನೆಅವಾರ್ಡ್ ' ಲಭ್ಯವಾಗಿತ್ತು. ಆದರೆ ಅದರಿಂದ ಸಂಪೂರ್ಣ ತೃಪ್ತಿ ಅವರಿಗಾಗಲಿಲ್ಲ. ' ಬಾಲಿವುಡ್ ನಲ್ಲಿ ತಾಂತ್ರಿಕ ಕಲಾವಿದರಿಗೆ ಮನ್ನಣೆಯಿಲ್ಲ. ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಓಡಿದರೆ ಮಾತ್ರ ತಾಂತ್ರಿಕ ಸಿಬ್ಬಂದಿಗೂ ಸ್ವಲ್ಪ ಹೆಸರು ದೊರೆಯುತ್ತದೆ. ವಿದೇಶಗಳಲ್ಲಿನ ರೀತಿಯೇ ಭಿನ್ನವಾದದ್ದು. ಚಿತ್ರ ಗೆಲ್ಲಲಿ ಅಥವಾ ಸೋಲಲಿ, ಅದರ ಹಿಂದಿನ ತಂತ್ರಜ್ಞಾನ ಚೆನ್ನಾಗಿದ್ದರೆ, ಮನ್ನಣೆ ದೊರೆಯುತ್ತದೆ" ಯೆಂದು ಒಂದು ಸಂದರ್ಶನದಲ್ಲಿ ರೆಸೂಲ್ ತಮ್ಮ ದುಖಃವನ್ನು ತೋಡಿಕೊಂಡಿದ್ದರು.

'ಸ್ಲಮ್ ಡಾಗ್ ಮಿಲಿಯನೇರ್, ' ಚಿತ್ರಕ್ಕೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ನಾಮಕರಣದ ಸುದ್ದಿ[ಬದಲಾಯಿಸಿ]

'ಡ್ಯಾನಿ ಬೋಯ್ಲ್' ರವರು ನಿರ್ಮಿಸಿದ 'ಸ್ಲಮ್ ಡಾಗ್ ಮಿಲಿಯನೇರ್' ಚಿತ್ರಕ್ಕೆ, ಧ್ವನಿಮಿಶ್ರಣದ ಸಂಗೀತದ ಮ್ಯಾಜಿಕ್ ಗಾಗಿ, ವರ್ಷದ ಆರಂಭದಲ್ಲೆ 'ಬ್ರಿಟಿಷ್ ಸಿನೆಮಾ ಅಕ್ಯಾಡಮಿಯ ಗೌರವ ಪ್ರಶಸ್ತಿ,' ದೊರೆತಿತ್ತು. ಅದರ ಜೊತೆ-ಜೊತೆಯಲ್ಲೇ ಅಭೂತಪೂರ್ವ 'ಆಸ್ಕರ್ ಪ್ರಶಸ್ತಿ' ಗೆ ಆ ಚಿತ್ರದ ನಾಮಕರಣವಾಗಿತ್ತು. ಹಿಂದಿ ಚಿತ್ರದ ಅನೇಕ ನಿರ್ಮಾಪಕರು, ನಟರು ಹಗಲಿರುಳು, ಶ್ರಮಿಸಿ, ನಿರ್ಮಿಸಿದ ಅನೇಕ ಅತ್ಯುತ್ತಮ ಚಿತ್ರಗಳು ಆಸ್ಕರ್ ಪ್ರಶಸ್ತಿಯ ಕನಸನ್ನು ಕಾಣುತ್ತಿದ್ದವು. ಅಮೆರಿಕದಲ್ಲಿ ನಡೆದ "ಆಸ್ಕರ್ ಪ್ರಶಸ್ತಿ ವಿತರಣಾ ಸಮಾರಂಭ " ದಂದು, ಸುಮಾರು ೧೦ ಸಾವಿರಕ್ಕೂ ಮಿಗಿಲು 'ವಿಲಕ್ಕುಪಾರಾ ಹಳ್ಳಿಗರು,' ಇಟೀವಿಯನ್ನು ವೀಕ್ಷಿಸಿ ಸಂಭ್ರಮಪಡುತ್ತಿದ್ದರು. 'ಅವರ ಪ್ರೀತಿಯ ಬಿಜೂ' ಪಡೆಯುವ ಪ್ರಶಸ್ತಿ, ಸನ್ಮಾನಗಳ ಚಿತ್ರಣಗಳನ್ನು ಎವೆಯಿಕ್ಕದೆ ಕಣ್ಣಿನಲ್ಲಿ ಕಾಯ್ದಿಟ್ಟುಕೊಂಡ ವಿಚಾರ, ಅವಿಸ್ಮರಣೀಯವಾದದ್ದು.

ವರ್ಷ ೨೦೦೮ ರ, ಆಸ್ಕರ್ ಪ್ರಶಸ್ತಿ-ವಿತರಣಾ ಸಮಾರಂಭದಲ್ಲಿ ರೆಸೂಲ್ ಪೂಕುಟ್ಟಿ, ಅತ್ಯಂತ-ಭಾವುಕರಾದರು[ಬದಲಾಯಿಸಿ]

ಹಾಲಿವುಡ್ ನ ಸೆಲೆಬ್ರಿಟಿಗಳೆಲ್ಲಾ ಉಪಸ್ಥಿತರಿದ್ದ ಮಂಚದಮೇಲೆ, ಖ್ಯಾತನಟಿ, ಎಂಜಲೀನಾ ಜೂಲಿ, 'ಡಾರ್ಕ್ ನೈಟ್' ಹಾಗೂ, 'ವಾಲ್-ಇ' ಚಿತ್ರಗಳ ಶಬ್ದಮಿಶ್ರಣಗಳನ್ನು ಸಂಯೋಜಿಸಿದ, ತಂತ್ರಜ್ಞಾನಿಗಳು ಹಾಗೂ ಮತ್ತೆಲ್ಲರೂ ಎದ್ದು ನಿಂತು ೨೦೦೮ ರ ೮ ವಿಭಾಗಗಳಲ್ಲಿ ಪಡೆದ ಪ್ರತಿಶ್ಠಿತ ಆಸ್ಕರ್ ಪ್ರಶಸ್ತಿ ಸನ್ಮಾನಕ್ಕಾಗಿ, 'ಸ್ಲಮ್ ಡಾಗ್ ಮಿಲಿಯನೇರ್ ಚಿತ್ರದ-ತಂಡ' ವನ್ನು ಅಭಿನಂದಿಸಿದಾಗ 'ರಸೂಲ್ ಪೂಕುಟ್ಟಿಯವರಿಗೆ' ಎಲ್ಲವೂ ಕನಸಿನಂತೆ ಕಾಣಿಸಿತ್ತು. ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿ, ಮಾತಾಡಲು ಎದ್ದು ನಿಂತ ರಸೂಲ್, ಭಾವುಕರಾಗಿ, ಗರಬಡಿದವರಂತೆ ಕ್ಷಣಕಾಲ ನಿಂತಿದ್ದರು. ಮಾತುಗಳನ್ನೇ ಮರೆತಿದ್ದರು.

" ನಂಬಲೇ ಸಾಧ್ಯವಿಲ್ಲದ್ದು ಇದು. ನಾನಿದನ್ನು ನಂಬಲು ಸಾಧ್ಯವಿಲ್ಲ. ಕ್ಷಮಿಸಿ, " ಲೇಡಿಸ್ ಅಂಡ್ ಜಂಟಲ್ಮನ್, ಕ್ಷಮಿಸಿ. ಮುಂಬಯಿನಗರದ ಸಾಮಾನ್ಯ ಜನರಾಡುವ ಶಬ್ದಗಳನ್ನು ಮುಂಬಯಿ ನ ಕರ್ಕಷ ಧ್ವನಿಗಳನ್ನು 'ಸ್ಲಮ್ ಡಗ್ ಮಿಲಿಯನೇರ್,' ಎಂಬ ಹೃದಯಸ್ಪರ್ಶಿ, ಕಲಾತ್ಮಕ, ಮಾರ್ದನಿಯನ್ನಾಗಿ ರೂಪಾಂತರಿಸಿದ ಇಬ್ಬರು ಮಾಂತ್ರಿಕರ ಜೊತೆಗೆ ನಾನೀವೇದಿಕೆಯನ್ನು ಹಂಚಿಕೊಂಡಿದ್ದೇನೆ. ನಾನು ಬಂದಿರುವುದು, ವಿಶ್ವಕ್ಕೆ ಒಂದು ಜಾಗತಿಕ ಶಬ್ದಕೊಟ್ಟ ದೇಶ, ಮತ್ತು ನಾಗರೀಕತೆಯಿಂದ. ಆ ಶಬ್ದದ ಹಿಂದೆ ಇರುವುದು ನಿಶ್ಯಭ್ದ, ಮುಂದಿರುವುದು ಇನ್ನಷ್ಟು ನಿಶ್ಯಬ್ಧ. ಆ ಶಬ್ದವೇ-ಓಂ ! ಈ ಪುರಸ್ಕಾರವನ್ನು ನನ್ನ ದೇಶಕ್ಕೆ ಸಮರ್ಪಿಸುತ್ತಿದ್ದೇನೆ. ಧನ್ಯವಾದಗಳು ಅಕ್ಯಾಡಮಿ...ಇದು ಕೇವಲ ಧ್ವನಿ ಪುರಸ್ಕಾರವಲ್ಲ, ನನ್ನ ಕೈ ಸೇರುತ್ತಿರುವುದು, ಒಂದು ಇತಿಹಾಸ. ನನ್ನ ಗುರುಗಳಿಗೆ ಕೃತಜ್ಞನೆಗಳು, ಡ್ಯಾನಿ ಬೋಯ್ಸ್, ಕ್ರಿಶ್ಚಿಯನ್ ಕೋಲ್ಸನ್, ಪೌಲ್ ರಿಚೀ, ಪರ್ವೇಶ್. ಈ ಚಿತ್ರಕ್ಕೆ ಕೊಡುಗೆ ನೀಡಿದ ಎಲ್ಲರಿಗೂ...ಗ್ಲೆನ್ ಫ್ರೀಮ್ಯಾಂಟಲ್ ಮತ್ತು ಎಲ್ಲ ಸಂಗೀತಕ್ಕೆ ಧ್ವನಿಮಿಶ್ರಣಮಾಡಿದ ಸಂಗಾತಿಗಳಿಗೂ ..ಇದು ನಿಮಗೆ, ಗೆಳೆಯರೆ... ಧನ್ಯವಾದಗಳು ಅಕ್ಯಾಡಮಿ, ಧನ್ಯವಾದಗಳು". ಯಾಂತ್ರಿಕವಾಗಿ ಮಾತುಗಳು ಅವರ ಬಾಯಿನಿಂದ ಹೊರಬಂದಿದ್ದವು.