ವಿಷಯಕ್ಕೆ ಹೋಗು

ವಿಶ್ವದ ಅದ್ಭುತಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಶ್ವದಲ್ಲಿಯ ಮಾನವ ನಿರ್ಮಿತ ಮತ್ತು ನೈಸರ್ಗಿಕ ವಿಸ್ಮಯಗಳ ವಿಶ್ವದ ಅದ್ಭುತಗಳನ್ನು ಗುರುತಿಸಲು ಕಾಲಕಾಲಕ್ಕೆ ಹಲವಾರು ರೀತಿಯ ಪಟ್ಟಿಗಳನ್ನು ಮಾಡಲಾಗುತ್ತಿದೆ. ಪ್ರಾಚೀನ ವಿಶ್ವದ ಏಳು ಅದ್ಭುತಗಳು ಈ ರೀತಿಯ ಪಟ್ಟಿ ಗಳಲ್ಲಿ ಮೊದಲನೆಯದು. ಈ ಪಟ್ಟಿಯಲ್ಲಿ ಮಾನವನಿರ್ಮಿತ ಉತ್ಕೃಷ್ಟ ಪ್ರಾಚೀನಾವಶೇಷಗಳನ್ನು ಹೆಲೆನಿಕ್ ಸ್ಥಳ ವೀಕ್ಷಕರ ಮಾಹಿತಿ ಗ್ರಂಥದಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಪಟ್ಟಿ ಮಾಡಿದವುಗಳೆಲ್ಲ ಮೆಡಿಟರೇನಿಯನ್ ಭಾಗದಲ್ಲಿರುವವುಗಳಾಗಿವೆ. ಸಂಖ್ಯೆ 7 ಪರಿಪೂರ್ಣತೆ ಮತ್ತು ಅಧಿಕ್ಯವನ್ನು ಪ್ರತಿನಿಧಿಸುತ್ತದೆ ಎಂದು ಗ್ರೀಕರ ನಂಬಿಕೆಯಿರುವುದರಿಂದ ಈ ಸಂಖ್ಯೆಯನ್ನು ಅಯ್ಕೆಮಾಡಿಕೊಳ್ಳಲಾಗಿದೆ.[] ಮಧ್ಯಯುಗ ಮತ್ತು ಆಧುನಿಕ ಯುಗದ ಅದ್ಭುತಗಳ ಪಟ್ಟಿಯ ಜೊತೆಗೆ ಇದೇ ರೀತಿಯ ಇನ್ನೂ ಹಲವಾರು ಪಟ್ಟಿಗಳನ್ನು ಮಾಡಲಾಗಿದೆ.

ಪ್ರಾಚೀನ ವಿಶ್ವದ ಏಳು ಅದ್ಭುತಗಳು

[ಬದಲಾಯಿಸಿ]
ಗೀಜಾದ ಮಹಾ ಪಿರಾಮಿಡ್, ಇಂದಿಗೂ ಅಸ್ಥಿತ್ವದಲ್ಲಿರುವ ಒಂದೇ ಒಂದು ಪ್ರಾಚೀನ ಜಗತ್ತಿನ ಅದ್ಬುತ
ರೋಮ್‌ನ ಕೊಲೊಸಿಯಮ್
ಚೀನಾದ ಮಹಾ ಗೋಡೆ
ಹಾಗಿಯಾ ಸೋಪಿಯ
ತಾಜ್‌ ಮಹಲ್‌
ಗೋಲ್ಡನ್ ಗೇಟ್ ಸೇತುವೆ
ಚಿತ್ರ:Chichen.JPG
ಚಿಚೆನ್ ಇಟ್ಜಾ
ಜೆರುಸಲೆಮ್ ನ ಪ್ರಾಚೀನ ನಗರ
ದಿ ಅರೋರಾ ಬೋರಿಯಾಲಿಸ್ ಅಥವಾ ನಾರ್ದನ್ ಲೈಟ್ಸ್‌
ಗ್ರ್ಯಾಂಡ್‌ ಕೆನನ್
ಗ್ರೇಟ್ ಬ್ಯಾರಿಯರ್ ರೀಫ್
ಲಂಡನ್ ಒಳಚರಂಡಿ ವ್ಯವಸ್ಥೆಯ ಮೂಲ ಅಬ್ಬೆ ಮಿಲ್ಸ್‌ ಪಂಪಿಂಗ್‌ ಸ್ಟೇಷನ್‌
ಮಾಚು ಪಿಕು

ಇತಿಹಾಸ ತಜ್ಞ ಹೆರೋಡೋಟಸ್ (484 BC–ca. 425 BC)ಮತ್ತು ಅಲೆಗ್ಸಾಂಡ್ರಿಯಾ ವಸ್ತು ಸಂಗ್ರಹಾಲಯದಲ್ಲಿದ್ದ ಸೈರೆನ್ನ ವಿದ್ವಾಂಸ ಕ್ಯಾಲಿಮ್ಯಾಕಸ್, ಏಳು ಅದ್ಭುತಗಳ ಪಟ್ಟಿಯನ್ನು ಮುಂಚಿತವಾಗಿಯೇ ರಚಿಸಿದ್ದರೂ ಉಲ್ಲೇಖ ಹೊರತುಪಡಿಸಿ ಅವನ ಬರವಣಿಗೆ ಅಸ್ತಿತ್ವದಲ್ಲಿ ಉಳಿಯಲಿಲ್ಲ. ಪ್ರಾಚೀನ ಜಗತ್ತಿನ ಏಳು ಅದ್ಭುತಗಳು ಈ ರೀತಿ ಇವೆ:

ಹಿಂದಿನ ಪಟ್ಟಿಯು ಅಲೆಗ್ಸಾಂಡ್ರಿಯಾದ ದೀಪಸ್ತಂಭದ ಬದಲಾಗಿ ಇಶ್ತಾರ್ ಗೇಟ್ನ್ನು ಜಗತ್ತಿನ ಏಳನೆಯ ಅದ್ಭುತವಾಗಿ ಗುರುತಿಸಿತ್ತು. ಗ್ರೀಕ್‌ರೂ ಕೂಡ ಒಂದು ಪಟ್ಟಿಯನ್ನು ಮಾಡಿದ್ದು, ಅದನ್ನು ವಿಶ್ವದ ಅದ್ಭುತಗಳ ಪಟ್ಟಿ ಎಂದು ಕರೆಯಲಾಗುವುದಿಲ್ಲ. ಆದರೆ ಅದನ್ನು ಅವರು ತೌಮಾಟಾ (ಗ್ರೀಕ್:Θαύματα ), ಇದನ್ನು, "ನೋಡಲೇಬೇಕಾದಂತವುಗಳು" ಎಂದು ಸುಮಾರಾಗಿ ಅರ್ಥೈಸಬಹುದು. ಇಂದು ನಮಗೆ ತಿಳಿದಿರುವ ಪಟ್ಟಿಯು ಸಕಲನಗೊಂಡಿದ್ದು ಮಧ್ಯ ಯುಗೀನ ಕಾಲದಲ್ಲಿ, ಆ ಸಮಯದಲ್ಲಾಗಲೇ ಹಲವಾರು ಸ್ಥಳಗಳು ಅಸ್ತಿತ್ವದಲ್ಲಿ ಉಳಿದಿರಲಿಲ್ಲ. ಈಗ, ಇಂದಿಗೂ ಅಸ್ತಿತ್ವದಲ್ಲಿರುವ ಒಂದೇ ಒಂದು ಪ್ರಾಚೀನ ವಿಶ್ವದ ಅದ್ಭುತವೆಂದರೆ ಅದು ಗೀಜಾದ ಮಹಾ ಪಿರಾಮಿಡ್.

ಮಧ್ಯಯುಗದ ಅದ್ಭುತಗಳು :

[ಬದಲಾಯಿಸಿ]

ಈ ಪಟ್ಟಿಗಳಲ್ಲಿರುವ ಇತರ ಸ್ಥಳಗಳು:

ಆಧುನಿಕ ವಿಶ್ವದ ಅದ್ಭುತಗಳು

[ಬದಲಾಯಿಸಿ]

ಆಧುನಿಕ ಯುಗದಲ್ಲಿ ನಿರ್ಮಾಣವಾದ ಶ್ರೇಷ್ಠ ರಚನೆಗಳನ್ನು ಅಥವಾ ಪ್ರಸ್ತುತ ವಿಶ್ವದಲ್ಲಿರುವ ಅದ್ಭುತಗಳನ್ನು ನಮೂದಿಸುವ ಸಲುವಾಗಿ ಅನೇಕ ಪಟ್ಟಿಗಳನ್ನು ರಚಿಸಲಾಗಿದೆ. ಕೆಲವು ಗಮನಾರ್ಹವಾದ ಪಟ್ಟಿಗಳನ್ನು ಈ ಕೆಳಗೆ ನೀಡಲಾಗಿದೆ.

ಅಮೇರಿಕನ್ ಸೊಸೈಟಿ ಆಪ್ ಸಿವಿಲ್ ಎಂಜಿನಿಯರ್ಸ್

[ಬದಲಾಯಿಸಿ]

ಅಮೇರಿಕನ್ ಸೊಸೈಟಿ ಆಪ್ ಸಿವಿಲ್ ಎಂಜಿನಿಯರ್ಸ್ ಆಧುನಿಕ ವಿಶ್ವದ ಅದ್ಭುತಗಳನ್ನು ಪಟ್ಟಿ ಮಾಡಿದೆ[೧೦].

ಆದ್ಭುತಗಳು ಆರಂಭಗೊಂಡ ದಿನಾಂಕ ಮುಕ್ತಾಯಗೊಂಡ ದಿನಾಂಕ ಸ್ಥಳ
ಸುರಂಗ ಕಾಲುವೆ ಡಿಸೆಂಬರ್ 1, 1987 ಮೇ 6, 1994 ಯುನೈಟೆಡ್‌ ಕಿಂಗ್‌ಡಮ್‌ ಮತ್ತು ಫ್ರಾನ್ಸ್ ನಡುವಿನ ಡೊವರ್ ಜಲಸಂಧಿ
ಸಿಎನ್‌ ಗೋಪುರ ಫೆಬ್ರುವರಿ 6, 1973 ಜೂನ್ 26, 1976, ಯಾವುದೇ ಆಧಾರವಿಲ್ಲದೆ ನಿಂತಿರುವ ಜಗತ್ತಿನ ಅತ್ಯಂತ ಎತ್ತರದ ಗೋಪುರ 1976-2007. ಟೊರಾಂಟೊ, ಒಂಟೆರಿಯೊ, ಕೆನಡಾ
ಎಂಪೈರ್ ಸ್ಟೇಟ್ ಬಿಲ್ಡಿಂಗ್ ಜನವರಿ 22, 1930 ಮೇ 1, 1931, ಜಗತ್ತಿನ ಅತ್ಯಂತ ಎತ್ತರದ ರಚನೆ 1931-1967. ನೂರಕ್ಕೂ ಹೆಚ್ಚು ಮಹಡಿ ಹೊಂದಿರವ ಮೊದಲ ಕಟ್ಟಡ ನ್ಯೂಯಾಕ್೯, NY, U.S.
ಗೋಲ್ಡನ್ ಗೇಟ್ ಸೇತುವೆ ಜನವರಿ 5, 1933 ಮೇ 27, 1937 ಗೋಲ್ಡನ್ ಗೇಟ್ ಜಲಸಂಧಿ, ದಕ್ಷಿಣ ಸ್ಯಾನ್ ಪ್ರಾನ್ಸಿಸ್ಕೊ, ಕ್ಯಾಲಿಪೋರ್ನಿಯಾ,U.S.
ಇತೈಪು ಆಣೆಕಟ್ಟು ಜನವರಿ 1970 ಮೇ 5, 1984 ಬ್ರಾಜಿಲ್ ಮತ್ತು ಪೆರುಗ್ವೆ ನಡುವಿನ ಪರಾನ ನದಿ
ಡೆಲ್ಟಾ ವರ್ಕ್ಸ್ ಜ್ಯೂಡರ್ಜಿ ವರ್ಕ್ಸ್ 1950 ಮೇ 10, 1997 ನೆದರ್ಲೆಂಡ್ಸ್‌
ಪನಾಮ ಕಾಲುವೆ ಜನವರಿ 1, 1880 ಜನವರಿ7, 1914 ಪನಾಮಾ ಭೂಸಂಧಿ

ನ್ಯೂ 7 ವಂಡರ್ಸ್‌ ಪೌಂಡೇಷನ್‌ ಪಟ್ಟಿ ಮಾಡಿರುವ ವಿಶ್ವದ ಏಳು ಅದ್ಭುತಗಳು

[ಬದಲಾಯಿಸಿ]
  • 2001ರಲ್ಲಿ ಮೊದಲ ಬಾರಿಗೆ ಸ್ವಿಸ್ ಕಾರ್ಫೊರೇಶನ್‌ನ ನ್ಯೂ 7 ವಂಡರ್ಸ್‌ ಸಂಸ್ಥೆಯು, ಪಟ್ಟಿಮಾಡಿರುವ 200 ಸ್ಮಾರಕಗಳಲ್ಲಿ ವಿಶ್ವದ ಹೊಸ ಏಳು ಅದ್ಭುತಗಳನ್ನ ಅಯ್ಕೆ ಮಾಡಿತು.[೧೧] ಮೊದಲು ಜನವರಿ 1, 2006.[೧೨] ರಲ್ಲಿ ಇಪ್ಪತ್ತೊಂದು ಅಂತಿಮ ಸ್ಪರ್ಧಿಗಳನ್ನು ಘೋಷಣೆ ಮಾಡಲಾಯಿತು.
  • ಈಜಿಪ್ಟ್‌ ಈ ಸಂಗತಿಯಿಂದಾಗಿ ಅಷ್ಟು ಸಂತೋಷಗೊಳ್ಳಲಿಲ್ಲ. ಕೇವಲ ಮೂಲ ಅದ್ಭುತಗಳು ಅಂದರೆ ಸ್ವಾತಂತ್ರ್ಯ ದೇವಿ ಪ್ರತಿಮೆ, ಸಿಡ್ನಿಯ ಒಪೆರಾ ಹೌಸ್ ಹಾಗೂ ಇತರ ಚಾರಿತ್ರಿಕ ಹೆಗ್ಗುರುತುಗಳು ಮಾತ್ರ ಸ್ಪರ್ಧಿಸಬೇಕಿತ್ತು. ಆದ್ದರಿಂದ ಇದನ್ನು ಈಜಿಪ್ಟ್‌ ಇದೊಂದು ಅಸಂಬದ್ಧ ಯೋಜನೆಯೆಂದು ಹೆಸರಿಸಿತು. ಈ ಸಮಸ್ಯೆಯನ್ನು ಪರಿಹರಿಸುವುದಕ್ಕೋಸ್ಕರ ಗೀಜಾವನ್ನು ಗೌರವಾರ್ಥ ಅಭ್ಯರ್ಥಿಯನ್ನಾಗಿ ಹೆಸರಿಸಲಾಯಿತು[೧೩]
  • ಫಲಿತಾಂಶವನ್ನು ಜುಲೈ 7, 2007 ರಂದು ಪೋರ್ಚುಗಲ್‌ ಲಿಸ್‌ಬೊನ್‌ನಲ್ಲಿನ ಬೆ‍ನ್‌ಪಿಕಾ ಕ್ರೀಡಾಂಗಣದಲ್ಲಿ ವಿದ್ಯುಕ್ತವಾಗಿ ಘೋಷಿಸಲಾಯಿತು. ಅಂದು ಪ್ರಕಟಿಸಲಾದ ಅದ್ಭುತಗಳ ಪಟ್ಟಿಯನ್ನು ಕೆಳಗೆ ನಮೂದಿಸಲಾಗಿದೆ[೧೪]
ಅದ್ಭುತಗಳು ರಚನೆಯ ದಿನಾಂಕ ಸ್ಥಳ
ಚೀನಾದ ಮಹಾ ಗೋಡೆ ಕ್ರಿ.ಪೂ 5 ನೇ ಶತಮಾನ –ಕ್ರಿ.ಶ 16ನೇ ಶತಮಾನ ಚೀನಾ
ಪೆಟ್ರಾ c. 100 BCE ಜೋರ್ಡಾನ್
ವಿಮೋಚಕ ಕ್ರಿಸ್ತ ಆರಂಭ 12 ಅಕ್ಟೋಬರ್1931 ಬ್ರೆಜಿಲ್‌
ಮಾಚು ಪಿಕು c. 1450 ಪೆರು
ಚಿಚೆನ್ ಇಟ್ಜಾ c. 600 ಮೆಕ್ಸಿಕೊ
ರೋಮ್‌ನ ಕೊಲೋಸಿಯಮ್ ಮುಕ್ತಾಯ 80 CE ಇಟಲಿ
ತಾಜ್‌ ಮಹಲ್‌ ಮುಕ್ತಾಯc. 1648 ಭಾರತ
ಗ್ರೇಟ್ ಪಿರಾಮಿಡ್ (ಗೌರವಾರ್ಥ ಅಭ್ಯರ್ಥಿ) ಮುಕ್ತಾಯ c. ಕ್ರಿ.ಪೂ 2560 ಈಜಿಪ್ಟ್‌

ಯು.ಎಸ್.ಎ ಟುಡೆಯ ಹೊಸ ಏಳು ಅದ್ಭುತಗಳು

[ಬದಲಾಯಿಸಿ]
  • ನವೆಂಬರ್ 2006ರಲ್ಲಿ, ಅಮೇರಿಕಾದ ರಾಷ್ಟ್ಟ್ರೀಯ ವೃತ್ತ ಪತ್ರಿಕೆ ಯು.ಎಸ್.ಎ ಟುಡೆ ಅಮೇರಿಕಾದ ದೂರದರ್ಶನ ಕಾರ್ಯಕ್ರಮ ಗುಡ್ ಮಾರ್ನಿಂಗ್ ಅಮೇರಿಕಾ ದ ಸಹಯೋಗದೊಂದಿಗೆ ಆರು ತೀರ್ಪುಗಾರರಿಂದ ಆಯ್ಕೆಗೊಂಡ ವಿಶ್ವದ ಹೊಸ ಏಳು ಅದ್ಭುತಗಳನ್ನು ಬಹಿರಂಗಗೊಳಿಸಿತು.[೧೫]
  • ದಿನಕ್ಕೊಂದರಂತೆ ವಾರದ ಏಳುದಿನ ಗುಡ್ ಮಾರ್ನಿಂಗ್ ಅಮೇರಿಕಾ ಕಾರ್ಯಕ್ರಮದಲ್ಲಿ ಅದ್ಭುತಗಳನ್ನು ಘೋಷಿಸಲಾಯಿತು. ಎಂಟನೆಯ ಅದ್ಭುತವು ನವೆಂಬರ್ 24ರಂದು ವೀಕ್ಷಕರ ಅಭಿಪ್ರಾಯದ ಮೇರೆಗೆ ಆಯ್ಕೆಯಾಯಿತು.[೧೬]
ಕ್ರಮ ಸಂಖ್ಯೆ ಆದ್ಭುತ ಪ್ರದೇಶ
1 ಪೊಟಾಲಾ ಅರಮನೆ ಲ್ಹಾಸಾ, ಟಿಬೇಟ್, ಚೀನಾ
2 ಜೆರುಸಲೆಮ್ ನ ಪ್ರಾಚೀನ ನಗರ ಜೆರುಸಲೆಮ್, ಇಸ್ರೇಲ್
3 ಧೃವ ಪ್ರದೇಶದ ಮಂಜುಗುಡ್ಡಗಳು ಧೃವ ಪ್ರದೇಶ
4 ಪಾಪಾನೊಮ್‌ಮೌವ್‌ಕುಕಿ ಮರೈನ್‌ನ ರಾಷ್ಟ್ರೀಯ ಪ್ರತಿಮೆ ಹವಾಯಿ, ಸಂಯುಕ್ತ ರಾಷ್ಟ್ರ
5 ಅಂತರಜಾಲ ಲಭ್ಯವಿಲ್ಲ
6 ಮಾಯಾ ಭಗ್ನಾವಶೇಷಗಳು ಯುಕಾಟನ್ ಪೆನಿನ್ಸುಲಾ, ಮೆಕ್ಷಿಕೊ
7 ಸೆರೆಂಗೆಟಿ ಮತ್ತು ಮಸೈ ಮಾರಾದ ಮಹಾವಲಸೆ ತಾಂಜಾನಿಯ ಮತ್ತು ಕೀನ್ಯಾ
8 ಮಹಾ ಕಣಿವೆ (ವೀಕ್ಷಕರಿಂದ ಆಯ್ಕೆಗೊಂಡ ಎಂಟನೆಯ ಅದ್ಭುತ) ಅರಿಜೊನಾ, ಸಂಯುಕ್ತ ರಾಷ್ಟ್ರ

ವಿಶ್ವದ ಏಳು ನೈಸರ್ಗಿಕ ಅದ್ಭುತಗಳು

[ಬದಲಾಯಿಸಿ]

ಇತರ ಅದ್ಭುತಗಳ ಪಟ್ಟಿಯಂತೆ, ವಿಶ್ವದ ಹೊಸ ಏಳು ನೈಸರ್ಗಿಕ ಅದ್ಭುತಗಳ ಪಟ್ಟಿಗಳ ಬಗ್ಗೆ ಒಮ್ಮತವಿರಲಿಲ್ಲ, ಅಲ್ಲದೆ ವಿವರಗಳ ಪಟ್ಟಿ ಎಷ್ಟು ವಿಸ್ತಾರವಾಗಿರಬೇಕು ಎನ್ನುವುದರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಸಿಎನ್ಎನ್‌ ನಿಂದ ಸಂಗ್ರಹಿಸಲ್ಪಟ್ಟ ವಿವರಗಳ ಒಂದು ಪಟ್ಟಿ :[೧೭]

ಜಾಗತಿಕ ಮತದಾನದ ಮೂಲಕ ಜನರಿಂದ ಆಯ್ಕೆಗೊಂಡ ಹೊಸ ಏಳು ನೈಸರ್ಗಿಕ ಅದ್ಭುತಗಳ ರಚನೆ ನ್ಯೂ ಸೆವೆನ್ ವಂಡರ್ಸ್ ಅಪ್ ನೇಚರ್‌ನ ಒಂದು ಸಮಕಾಲೀನ ಪ್ರಯತ್ನ. ಇದನ್ನು ಸಂಘಟಿಸಿದ್ದು ವಿಶ್ವದ ಹೊಸ ಏಳು ಅದ್ಬುತಗಳು ಎಂಬ ಕಾರ್ಯಾಚರಣೆಯನ್ನು ಆರಂಭಿಸಿದ್ದು ನ್ಯೂ ಒಪನ್ ವರ್ಲ್ಡ್ ಕಾರ್ಪೊರೇಶನ್ (NOWC) ಏಳು ನೈಸರ್ಗಿಕ ಅದ್ಭುತಗಳು:ಇದನ್ನು ಈಗಾಗಲೆ ಸ್ಥಾಪಿಸಲ್ಪಟ್ಟಿರುವ ಏಳು ನೈಸರ್ಗಿಕ ಅದ್ಭುತಗಳನ್ನು ರಕ್ಷಣೆ ಮಾಡುವುದಕ್ಕೋಸ್ಕರ ರಚಿಸಲಾಗಿತ್ತು ಹೊರತು ಇದು ಲಾಭದ ಕಾರ್ಯಾಚರಣೆಯಾಗಿರಲಿಲ್ಲ.[೧೮]

ವಿಶ್ವದ ಜಲಾಂತರ್ಗತ ಏಳು ಅದ್ಭುತಗಳು

[ಬದಲಾಯಿಸಿ]

ವಿಶ್ವದ ಜಲಾಂತರ್ಗತ ಏಳು ಅದ್ಭುತಗಳ ಪಟ್ಟಿಯನ್ನು ರಚನೆ ಮಾಡಿದ್ದು ಸಮುದ್ರ ಸಂರಕ್ಷಣೆ ಮತ್ತು ಸಂಶೋಧನೆಗೆ ಮೀಸಲಾಗಿರುವ ಅಮೇರಿಕಾ ಮೂಲದ ಸಾಮಾಜಿಕ ಮೌಲ್ಯೋತ್ಪಾದಕ ಸಂಘಟನೆಯಾದ ಸಿಇಡಿಎಎಮ್ ಇಂಟರ್‌ನ್ಯಾಷನಲ್‌. ಸಂರಕ್ಷಣೆಗೆ ಯೋಗ್ಯವಾದ ನೀರೊಳಗಿನ ಪ್ರದೇಶವನ್ನು ಆಯ್ಕೆ ಮಾಡುವುದಕ್ಕೋಸ್ಕರ ಸಿಇಡಿಎ‌ಎಮ್ 1989ರಲ್ಲಿ ಡಾ.ಯುಗೀನ್ ಕ್ಲಾರ್ಕ್ ಸೇರಿದಂತೆ ಜಲವಿಜ್ಞಾನಿ ತಜ್ಞರ ಸಮಿತಿ ರಚನೆ ಮಾಡಿತು. ಸೀ ಹಂಟ್ ಕಿರುತೆರೆ ಕಾಯ೯ಕ್ರಮದ ನಟ ಲಾಯಿಡ್ ಬ್ರಿಡ್ಜ್‌ಸ್ ವಾಷಿಂಗ್‌ಟನ್ ನ್ಯಾಶನಲ್ ಅಕ್ವೇರಿಯಮ್‌ನಲ್ಲಿ ಈ ಫಲಿತಾಂಶವನ್ನು ಘೋಷಿಸಿದರು.[೧೯]{3/

ಜಗತ್ತಿನ ಏಳು ಕೈಗಾರಿಕಾ ಅದ್ಭುತಗಳು

[ಬದಲಾಯಿಸಿ]

ಜಗತ್ತಿನ ಏಳು ಕೈಗಾರಿಕಾ ಅದ್ಭುತಗಳು ಎಂಬ ಪುಸ್ತಕ ಬರೆದವರು ಬ್ರಿಟೀಷ್ ಲೇಖಕ ದೆಬೋರಾ ಕ್ಯಾಡ್‌ಬರಿ. ಈ ಪುಸ್ತಕ ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಆರಂಭದ ಯಂತ್ರವಿಜ್ಞಾನದ ಏಳು ಅದ್ಭುತಗಳ ಕತೆಯನ್ನು ಹೇಳುತ್ತದೆ.ಈ ಪುಸ್ತಕದ ಮೇಲೆ 2003 ರಲ್ಲಿ ಬಿಬಿಸಿ ಏಳು ಭಾಗಗಳಿರುವ ಸಾಕ್ಷ್ಯಚಿತ್ರ ಸರಣಿಯನ್ನು ರಚಿಸಿತು. ಈ ಕೈಗಾರಿಕಾ ಅದ್ಭುತಗಳಲ್ಲಿ ಪ್ರತಿಯೊಂದನ್ನೂ ಈ ಮೊದಲು ಹೇಗೆ ಕಟ್ಟಿರಬಹುದು ಎಂಬುದನ್ನು ಈ ಸಾಕ್ಷ್ಯ ಚಿತ್ರಗಳಲ್ಲಿ ಮರುಸೃಷ್ಟಿ ಮಾಡಲಾಗಿತ್ತು. ಏಳು ಕೈಗಾರಿಕಾ ಅದ್ಭುತಗಳು:

ಜಗತ್ತಿನ ಪ್ರವಾಸಿ ಅದ್ಭುತಗಳು

[ಬದಲಾಯಿಸಿ]

ಪ್ರಮುಖ ಮಾನವ ನಿರ್ಮಿತ ಅದ್ಭುತಗಳ ಪಟ್ಟಿಯ ಸಂಕಲನಕಾರರಲ್ಲಿ ಪ್ರವಾಸಿ ಬರಹಗಾರನಾದ ಹಾವರ್ಡ್‌ ಹಿಲ್‌ಮನ್ ಕೂಡ ಒಬ್ಬ[೨೦] ಮತ್ತು ನೈಸರ್ಗಿಕ[೨೧] ಜಗತ್ತಿನ ಯಾತ್ರಿಕರ ಪ್ರವಾಸಿ ಅದ್ಭುತಗಳು:

ಮಾನವ ನಿರ್ಮಿತ ಪ್ರವಾಸಿ ಅದ್ಬುತಗಳು

[ಬದಲಾಯಿಸಿ]
  1. ಗೀಜಾದ ಪಿರಾಮಿಡ್ ಸಂಕೀರ್ಣ
  2. ಚೀನಾದ ಮಹಾ ಗೋಡೆ
  3. ತಾಜ್‌ ಮಹಲ್‌
  4. ಮಾಚು ಪಿಚು
  5. ಬಾಲಿ
  6. ಅಂಕೂರ್ ವಾಟ್
  7. ನಿಷೇಧಿತ ನಗರ
  8. ಬಾಗನ್ ದೇವಾಲಯ ಮತ್ತು ಪವಿತ್ರ ಭವನ
  9. ಕರ್ನಾಕ್ ದೇವಾಲಯ
  10. ಟಿಹೋತಿಹ್ಯೂಕಾನ್

ನೈಸರ್ಗಿಕ ಪ್ರವಾಸಿ ಅದ್ಭುತಗಳು

[ಬದಲಾಯಿಸಿ]
  1. ಸೆರೆಂಗೆಟಿ ವಲಸೆ
  2. ಗ್ಯಾಲಪಾಗೋಸ್ ಐಸ್‌ಲ್ಯಾಂಡ್
  3. ಬೃಹದ್ ಕಣಿವೆ
  4. ಇಗುವಾಜು ಜಲಪಾತ
  5. ಅಮೆಜಾನ್ ಮಳೆಕಾಡು
  6. ನುಗೊರೊಂಗೊರೊ ಜ್ವಾಲಾಮುಖಿ
  7. ಮಹಾ ತಡೆಗೋಡೆ
  8. ವಿಕ್ಟೋರಿಯಾ ಜಲಪಾತ
  9. ಬೋರಾ ಬೋರಾ
  10. ಕ್ಯಾಪಡೋಸಿಯ

ವಿವರಗಳಿಗಾಗಿ ನೋಡಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. ಎನಾನ್‌. (1993)ಆಕ್ಸ್‌ಪರ್ಡ್ ವಿಸ್ತೃತ ವಿಶ್ವಕೋಶ ಮೊದಲ ಮುದ್ರಣ, ಆಕ್ಸ್‌ಪರ್ಡ್‌: ಆಕ್ಸ್‌ಪರ್ಡ್‌ ವಿಶ್ವವಿದ್ಯಾಲಯ
  2. ೨.೦ ೨.೧ ಐ ಎಚ್ ಇವಾನ್ಸ್‌ (ರಿವೈಸರ್‌), ಬ್ರೆವರ್ಸ್‌ ಡಿಕ್ಷನರಿ ಆಫ್‌ ಫ್ರೇಸ್‌ ಅಂಡ್ ಫೇಬಲ್‌ (ಸೆಂಟಿನರಿ ಎಡಿಷನ್‌ ನಾಲ್ಕನೇ ಮುದ್ರಣ (ತಿದ್ದುಪಡಿ); ಲಂಡನ್: ಕ್ಯಾಸೆಲ್‌, 1975), ಪುಟ 1163
  3. ೩.೦ ೩.೧ ಹೆರ್ವರ್ಡ್ ಕ್ಯಾರಿಂಗ್‌ಟನ್(1880-1958), " ದಿ ಸೆವೆನ್‌ ವಂಡರ್ಸ್‌ ಆಪ್‌ ದಿ ವರ್ಲ್ಡ್‌ : ಎನ್ಸಿಯೆಂಟ್‌, ಮಿಡಿವಿಯಲ್ ಅಂಡ್ ಮಾಡರ್ನ್‌", ಮರು ಮುದ್ರಣ ಕಂಡದ್ದು ಕ್ಯಾರಿಂಗಟನ್‌ ಕಲೆಕ್ಷನ್ (2003) ಐಎಸ್‌ಬಿಎನ್‌ 0-7661-4378-3, =ZkPdBa1g_78C&pg=PA14& amp;lpg=PA14& amp;dq=% 22seven +wonders+of+the+middle+ages%22&sig=GTtwOV0OsaL-2jdD0o-qCquTofU ಪುಟ14.
  4. ಎಡ್‌ವರ್ಡ್ ಲ್ಯಾಥಮ್.
  5. ಪ್ರಾನ್ಸಿಸ್ ಟ್ರೆವೆಲಿಯನ್ ಮಿಲ್ಲೆರ್, ವುಡ್ರೊ ವಿಲ್ಸನ್, ವಿಲಿಯಮ್ ಹಾವರ್ಡ್ ಟಪ್ಟ್, ಥಿಯೋಡರ್ ರೂಸ್‌ವೆಲ್ಟ್. ಅಮೇರಿಕಾ, ದಿ ಲ್ಯಾಂಡ್ ವಿ ಲವ್ (1915), =PA201&dq=%22seven+ wonders+of+the+middle+ages%22 ಪುಟ 201.
  6. ಪಾಲ್ಪಾ, ಆ‍ಯ್‌ಸ್ ಯು ಲೈಕ್ ಇಟ್ , ಪುಟ 67)
  7. ದಿ ಕಂಪ್ಲೀಟ್ ಈಡಿಯಟ್ಸ್ ಗೈಡ್ ಟು ದಿ ಕ್ರುಸೇಡ್ಸ್ (2001, ಪುಟ 153))
  8. ದಿ ರಫ್ ಗೈಡ್ ಟು ಇಂಗ್ಲೆಂಡ್ (1994, ಪುಟ 596))
  9. ಕ್ಯಾಥೋಲಿಕ್ ವಿಶ್ವಕೋಶ , v.16 (1913), ಪುಟ 74
  10. "ಅಮೇರಿಕನ್ ಸೊಸೈಟಿ ಆಪ್ ಸಿವಿಲ್ ಎಂಜಿನಿಯರ್ಸ್‌ನ ಏಳು ಅದ್ಭುತಗಳು". Archived from the original on 2010-04-02. Retrieved 2009-12-16.
  11. ಹೊಸ ಏಳು ಅದ್ಭುತಗಳು
  12. ಅಂತಿಮ ಸ್ಪರ್ಧಿಗಳ ಪುಟ
  13. eeid=5356431&render =y&ck=&Table=&_lid=332&_lnm=todays+guide+onnet+sevenwonders+tglink&ck=, ಹೊಸ ಅದ್ಭುತಗಳ ಯೋಜನೆಯ ಬಗ್ಗೆ ಈಜಿಪ್ಟಿನ ಕೋಪ
  14. ರಾಯಿಟರ್ಸ್‌ ಮೂಲಕ ಎಬಿಸಿ ನ್ಯೂಸ್‌ ಆಸ್ಟ್ರೇಲಿಯಾ "ಹೊಸ ಅದ್ಭುತಗಳು ಘೋಷಣೆಯಾಗುತ್ತಿದ್ದಂತೆ ಒಪೆರಾ ಹೌಸ್‌ಗೆ ಮುಖಭಂಗವಾಯಿತು." 7 ಜುಲೈ 2007
  15. ಹೊಸ ಏಳು ಅದ್ಭುತಗಳ ತಜ್ಞರ ಸಮಿತಿ
  16. ವಿಶ್ವದ 8ನೇ ಅದ್ಭುತ: ಓದುಗರ ಆಯ್ಕೆ ಮಹಾ ಕಣಿವೆ
  17. ಸಿಎನ್‌ಎನ್‌ ನೈಸರ್ಗಿಕ ಅದ್ಭುತಗಳು
  18. "ಏಳು ನೈಸರ್ಗಿಕ ಅದ್ಭುತಗಳು". Archived from the original on 2009-11-01. Retrieved 2009-12-16.
  19. "ಜಲಾಂತರ್ಗತ ಅದ್ಭುತಗಳು". Archived from the original on 2009-04-21. Retrieved 2009-12-16.
  20. Hillman, Howard. "World's top 10 man-made travel wonders". Hillman Quality Publications. Archived from the original on 2007-06-29. Retrieved 2007-07-07.
  21. Hillman, Howard. "World's top 10 natural travel wonders". Hillman Quality Publications. Archived from the original on 2007-07-05. Retrieved 2007-07-07.

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ಆ‍ಯ್‌ಸ್, ರಸ್ಸೆಲ್‌ರ /0}l, "ಗ್ರೇಟ್ ವಂಡರ್ಸ್ ಅಪ್ ದಿ ವರ್ಲ್ಡ್ ". ಡಾರ್ಲಿಂಗ್ ಕಿಂಡರ್ಸ್‌ಲೆ 2000. ಐಎಸ್‌ಬಿಎನ್‌ 978-0751328868
  • ಕಾಕ್ಸ್, ರೇಗ್, ಮತ್ತು ನೀಲ್ ಮೋರಿಸ್‌ರ ದಿ ಸೆವೆನ್ ವಂಡರ್ಸ್ ಅಪ್ ದಿ ಮಾಡರ್ನ್ ವರ್ಲ್ಡ್ ಚೆಲ್ಸಿಯಾ ಹೌಸ್ ಮುದ್ರಣಾಲಯ: ಗ್ರಂಥಾಲಯ. ಅಕ್ಟೋಬರ್ 2000. ಐಎಸ್‌ಬಿಎನ್‌ 0-7910-6048-9
  • ಕಾಕ್ಸ್, ರೇಗ್, ನೀಲ್ ಮೋರಿಸ್ ಮತ್ತು ಜೇಮ್ಸ್ ಪೀಲ್ಡ್‌ರ ದಿ ಸೆವೆನ್ ವಂಡರ್ಸ್ ಅಪ್ ದಿ ಮಿಡಿವಲ್ ವರ್ಲ್ಡ್ ಚೆಲ್ಸಿಯಾ ಹೌಸ್ ಮುದ್ರಣಾಲಯ: ಗ್ರಂಥಾಲಯ. ಅಕ್ಟೋಬರ್ 2000. ಐಎಸ್‌ಬಿಎನ್‌ 0-7910-6047-0
  • ಡಿ'ಎಪಿರೊ, ಪೀಟರ್, ಮತ್ತು ಮೇರಿ ಡೆಸ್ಮಂಡ್ ಪಿಂಕೋವಿಶ್‌ರ, "ವಾಟ್ ಅರ್ ದಿ ಸೆವೆನ್ ವಂಡರ್ಸ್ ಆಪ್ ದಿ ವರ್ಲ್ಡ್? ಮತ್ತು ಇತರ ಮಹಾನ್ ಸಾಂಸ್ಕೃತಿಕ ಪಟ್ಟಿಗಳು ". ಆ‍ಯ್‌೦ಕರ್.ಡಿಸೆಂಬರ್ 1, 1998. ಐಎಸ್‌ಬಿಎನ್‌ 0-385-49062-3
  • ಮೊರಿಸ್, ನೀಲ್‌ರ "ದಿ ಸೆವೆನ್ ವಂಡರ್ಸ್ ಅಪ್ ದಿ ನ್ಯಾಚುರಲ್ ವರ್ಲ್ಡ್ ಕ್ರಿಸಾಲಿಸ್‌ ಬುಕ್ಸ್‌ ಡಿಸೆಂಬರ್ 30, 2002. ಐಎಸ್‌ಬಿಎನ್‌ 1-84138-495-X

ಹೊರಗಿನ ಕೊಂಡಿಗಳು

[ಬದಲಾಯಿಸಿ]