ಬ್ರೂಕ್ಲಿನ್ ಸೇತುವೆ

Coordinates: 40°42′20″N 73°59′47″W / 40.70569°N 73.99639°W / 40.70569; -73.99639 (Brooklyn Bridge)
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ರೂಕ್ಲಿನ್ ಸೇತುವೆ
ಸಾಗಾಣೆMotor vehicles (cars only)
Elevated trains (until 1944)
Streetcars (until 1950)
Pedestrians, and bicycles
ದಾಟುEast River
ಪ್ರಾದೇಶಿಕನ್ಯೂ ಯಾರ್ಕ್ ನಗರ (ManhattanBrooklyn)
ಉಸ್ತುವಾರಿNew York City Department of Transportation
ವಿನ್ಯಾಸಗಾರJohn Augustus Roebling
ವಿನ್ಯಾಸSuspension/Cable-stay Hybrid
ಒಟ್ಟು ಉದ್ದ5,989 feet (1825 m)[೧]
ಅಗಲ೮೫ feet (೨೬ m)
Longest span1,595 feet 6 inches (486.3 m)
ಕೆಳಗಿನ ತೆರವು೧೩೫ feet (೪೧ m) at mid-span
ತೆರವುMay ೨೪, ೧೮೮೩
ದಾರಿಸುಂಕFree both ways
ದೈನಂದಿನದ ವಾಹನದಟ್ಟಣಿ೧೨೩,೭೮೧ (೨೦೦೮)[೨]
ನಿರ್ದೇಶಾಂಕಗಳು40°42′20″N 73°59′47″W / 40.70569°N 73.99639°W / 40.70569; -73.99639 (Brooklyn Bridge)
Lua error in ಮಾಡ್ಯೂಲ್:Location_map at line 525: Unable to find the specified location map definition: "Module:Location map/data/USA New York City" does not exist.
Brooklyn Bridge
NYC Landmark
Built1883
Architectural styleGothic
NRHP reference #೭೫೦೦೧೨೩೭
Significant dates
Added to NRHP೧೯೬೬[೩]
Designated NHLJanuary 29, 1964[೪]

ಬ್ರೂಕ್ಲಿನ್ ಸೇತುವೆ ಎಂಬುದು ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಅತ್ಯಂತ ಹಳೆಯ ತೂಗು ಸೇತುವೆಗಳಲ್ಲಿ ಒಂದಾಗಿದೆ. ಇದನ್ನು ೧೮೮೩ ರಲ್ಲಿ ನಿರ್ಮಿಸಲಾಯಿತು. ಇದು ಪಶ್ಚಿಮ ನದಿಯ(ಈಸ್ಟ್ ರಿವರ್) ಮೂಲಕ ಮ್ಯಾನ್ ಹ್ಯಾಟನ್ನ್ಯೂಯಾರ್ಕ್ ನಗರದ ಬರೋಗ್ರಾಮ ಪ್ರಾಂತ್ಯಗಳನ್ನು ಹಾಯ್ದು, ಬ್ರೂಕ್ಲಿನ್ ಅನ್ನು ಜೋಡಿಸುತ್ತದೆ. ಇದರ ಜೊತೆಯಲ್ಲಿ ಈ ಟೆಂಪ್ಲೇಟು:Ft to m ಅಳತೆಯ ಪ್ರಮುಖ ಕಮಾನು ಹೊಂದಿದೆ. ಇದನ್ನು ನಿರ್ಮಿಸಿದಾಗಿನಿಂದ, ೧೯೦೩ರ ವರೆಗೆ ಮತ್ತು ಕಬ್ಬಿಣದ ತಂತಿಯ ಮೊದಲ ತೂಗು ಸೇತುವೆಯನ್ನು ನಿರ್ಮಿಸುವ ವರೆಗೂ ಇದು ಪ್ರಪಂಚದಲ್ಲಿರುವ ಅತ್ಯಂತ ಉದ್ದದ ತೂಗು ಸೇತುವೆಯಾಗಿತ್ತು.

ಮೂಲತಃ ಇದನ್ನು ನ್ಯೂಯಾರ್ಕ್ ಮತ್ತು ಬ್ರೂಕ್ಲಿನ್ ಸೇತುವೆ ಎಂದು ಉಲ್ಲೇಖಿಸಲಾಗುತ್ತಿತ್ತು. ಬ್ರೂಕ್ಲಿನ್ ಡ್ಯೇಲಿ ಈಗಲ್ ನ ಸಂಪಾದಕರಿಗೆ ರವಾನಿಸಲಾದ ೧೮೬೭ ರ ಜನವರಿ ೨೫ ರ ಪತ್ರದಲ್ಲಿ ಇದಕ್ಕೆ ಬ್ರೂಕ್ಲಿನ್ ಸೇತುವೆ ಎಂದು ನಾಮಕರಣ ಮಾಡಲಾಗಿತ್ತು.[೫] ನಗರ ಸರ್ಕಾರವು ೧೯೧೫ ರಲ್ಲಿ ಈ ಹೆಸರನ್ನು ಅಧಿಕೃತವಾಗಿಸಿತು. ಇದು ಆರಂಭಗೊಂಡಾಗಿನಿಂದಲೂ, ನ್ಯೂಯಾರ್ಕ್ ಬಾನಗೆರೆಯ ಸಾಂಪ್ರದಾಯಿಕ ನಿರ್ಮಾಣದ ಭಾಗವಾಗಿದೆ. ಇದನ್ನು ೧೯೬೪ ರಲ್ಲಿ ರಾಷ್ಟ್ರೀಯ ಐತಿಹಾಸಿಕ ಹೆಗ್ಗುರುತೆಂದು [೪][೬][೭] ಹಾಗು ೧೯೭೨ ರಲ್ಲಿ ರಾಷ್ಟ್ರೀಯ ಐತಿಹಾಸಿಕ ನಾಗರಿಕ ಶಿಲ್ಪ ಶಾಸ್ತ್ರದ ಹೆಗ್ಗುರುತೆಂದು ಪರಿಗಣಿಸಲಾಗಿದೆ.[೮]

ನಿರ್ಮಾಣ[ಬದಲಾಯಿಸಿ]

ಬ್ರೂಕ್ಲಿನ್ ಸೇತುವೆಯನ್ನು ಆರಂಭದಲ್ಲಿ ಜರ್ಮನ್ ವಲಸೆಗಾರ ಜಾನ್ ಅಗಸ್ಟಸ್ ರಾಬ್ಲಿಂಗ್ ಎಂಬುವವರು ವಿನ್ಯಾಸಗೊಳಿಸಿದ್ದರು. ಇವರು ಮೊದಲೇ ಪೆನ್ಸಿಲ್ವೇ ನಿಯಾದ ಲ್ಯಾಕ್ ವ್ಯಾಕ್ಸನ್ ನಲ್ಲಿರುವ ರಾಬ್ಲಿಂಗ್ಸ್ ಡೆಲವೇರ್ ನಾಲೆ ಯಂತಹ ಮತ್ತು ಓಹಿಯೊ ದ ಸಿನ್ಸಿನಾಟಿಯಲ್ಲಿರುವ ಜಾನ್ ಎ. ರಾಬ್ಲಿಂಗ್ ತೂಗು ಸೇತುವೆಯಂತಹ ಸಣ್ಣ ತೂಗು ಸೇತುವೆಗಳನ್ನು ವಿನ್ಯಾಸಗೊಳಿಸಿ,ನಿರ್ಮಿಸಿದ್ದರು.

ಸೇತುವೆಯ ಯೋಜನೆಗಳಿಗೆಂದು ಸರ್ವೇಕ್ಷಣೆಗಳನ್ನು ನಡೆಸುತ್ತಿದ್ದಾಗ, ಹಾಯುವ ದೋಣಿಯ ಕಟ್ಟುವ, ಎತ್ತರವಾದ ಜಾಗದಲ್ಲಿದ್ದ ದುಂಡುಗಂಬಕ್ಕೆ ತಗುಲಿ ರಾಬ್ಲಿಂಗ್ ಅವರ ಕಾಲಿಗೆ ಪೆಟ್ಟಾಯಿತು. ಅವರ ಪೆಟ್ಟಾದ ಕಾಲ್ಬೆರಳುಗಳನ್ನು ಅಂಗಛೇದನೆಯ ಮೂಲಕ ತೆಗೆದುಹಾಕಿದ ನಂತರ ಅವರಿಗೆ ಧನುರ್ವಾಯು ಸೋಂಕು ತಗುಲಿತು. ಈ ರೋಗವು ಅವರನ್ನು ಅಶಕ್ತನನ್ನಾಗಿಸಿತು ಮತ್ತು ಶೀಘ್ರದಲ್ಲೆ ಉಲ್ಬಣಿಸಿ ಅವರ ಸಾವಿಗೆ ಕಾರಣವಾಯಿತು. ಇವರ ಮರಣದ ಸ್ವಲ್ಪ ಸಮಯದ ನಂತರ ಈ ಯೋಜನೆಯನ್ನು ನಿರ್ವಹಿಸಲು ಅವರ ೩೨ ವರ್ಷದ ಪುತ್ರ ವಾಷಿಂಗ್ಟನ್ ರಾಬ್ಲಿಂಗ್ ರನ್ನು ನೇಮಿಸಲಾಯಿತು.[೯]

೧೮೭೦ರ ಜನವರಿ ೩ ರಿಂದ ಸೇತುವೆಯ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಇದನ್ನು ನಿರ್ಮಿಸಲು ಪ್ರಾರಂಭಿಸಿದ ಸ್ವಲ್ಪ ಸಮಯದಲ್ಲಿಯೇ, ವಾಷಿಂಗ್ಟನ್ ರಾಬ್ಲಿಂಗ್ ರವರು ಕೂಡ ನಿಶ್ಯಕ್ತಿ ಕಾಯಿಲೆಯಿಂದ ಬಳಲಿದರು.ಕೇಸನ್ ರೋಗದಿಂದುಂಟಾದ ಪಾರ್ಶ್ವವಾಯುವಿನಿಂದ ನರಳಿದರು.[೧೦] ಈ ಸ್ಥಿತಿಯನ್ನು ಯೋಜನೆಯ ವೈದ್ಯರಾದ ಡಾ.ಆಂಡ್ರೀವ್ ಸ್ಮಿತ್ ರವರು ಮೊದಲು "ಕೇಸನ್ ರೋಗ"ವೆಂದು ಕರೆದರು. ಈ ಕೇಸನ್ ಕಾಯಿಲೆ(ಆಳದಲ್ಲಿ ನೀರಿಳಿಯದ ದೊಡ್ಡ ಪೆಟ್ಟಿಗೆಯಲ್ಲಿ ಕೆಲಸ ಮಾಡುವಾಗ ಉಂಟಾಗುವ ವೇದನೆ) ಇಂತಹ ಕೆಲಸ ಮಾಡುವ ಕಾರ್ಮಿಕರಲ್ಲಿ ಅನೇಕರನ್ನು ಪೀಡಿಸುತ್ತಿತ್ತು.[೧೧][೧೨] ರಾಬ್ಲಿಂಗ್, ಅವರ ದುರ್ಬಲ ಸ್ಥಿತಿಯಿಂದಾಗಿ ನಿರ್ಮಾಣವನ್ನು ಖುದ್ದಾಗಿ(ಸ್ವತಃ) ಹೋಗಿ ನೋಡಿಕೊಳ್ಳಲು ಅಸಮರ್ಥರಾದರು. ಅನಂತರ ಅವರ ಪತ್ನಿ ಎಮಿಲಿ ವಾರೆನ್ ರಾಬ್ಲಿಂಗ್ ರವರು ಸ್ಥಳದಲ್ಲಿದ್ದ ಇಂಜಿನಿಯರ್ ಗಳು ಮತ್ತು ತಮ್ಮ ಪತಿ ನಡುವೆ ಯೋಜನೆಗೆ ಅಗತ್ಯವಿದ್ದ ವಿಮರ್ಶಾತ್ಮಕ ಬರವಣಿಗೆಯ ಸಂಪರ್ಕವನ್ನು ಒದಗಿಸಿದರು.[೧೩] ತನ್ನ ಪತಿಯ ಮಾರ್ಗದರ್ಶನದಲ್ಲಿ, ಎಮಿಲಿ ಉನ್ನತ ಗಣಿತಶಾಸ್ತ್ರವನ್ನು, ತೂಗು ಸರಪಣಿಯಂಥ ಸೇತುವೆಗೆ ಅಗತ್ಯ ವಕ್ರರೇಖೆಗಳ ಗಣನೆಯನ್ನು, ವಸ್ತುಗಳ ಬಲವನ್ನು, ಸೇತುವೆಯ ವಿವರಗಳನ್ನು, ಮತ್ತು ಕೇಬಲ್ ನಿರ್ಮಾಣದ ಜಟಿಲತೆಯನ್ನು ಅಧ್ಯಯನ ಮಾಡಿದರು.[೧೪][೧೫][೧೬] ಸೇತುವೆಯ ನಿರ್ಮಾಣ ನೋಡಿಕೊಳ್ಳಲು ವಾಷಿಂಗ್ಟನ್ ರಾಬ್ಲಿಂಗ್ ಅವರಿಗೆ ಸಹಾಯ ಮಾಡುವುದರಲ್ಲಿ ಅವರು ತಮ್ಮ ಮುಂದಿನ ೧೧ ವರ್ಷಗಳನ್ನು ಕಳೆದರು.

ಕೇಸನ್ ನ ತಳದಲ್ಲಿರುವ ಕಬ್ಬಿಣದ ಸರಳುಗಳು ತಳಬಂಡೆ, ನಿರೀಕ್ಷಿಸಿದ ಮಟ್ಟಕ್ಕಿಂತ ಇನ್ನಷ್ಟು ಆಳದಲ್ಲಿದೆ ಎಂಬುದನ್ನು ಅಧ್ಯಯನಗಳು ಗುರುತಿಸಿದವು. ಆಗ ರಾಬ್ಲಿಂಗ್ ಕೇಸನ್ ರೋಗದ ದ ಅಪಾಯ ಹೆಚ್ಚಬಹುದೆಂದು ನಿರ್ಮಾಣವನ್ನು ಸ್ವಲ್ಪಕಾಲದವರೆಗೆ ತಡೆದರು. ತಳಬಂಡೆ ಒಟ್ಟು ೩೦ ಅಡಿ (೯ m) ಕೆಳಗಿರಬಹುದೆಂದು ಅವರು ಅಭಿಪ್ರಾಯಪಟ್ಟರು. ಇದು ಸೇತುವೆಯ ಆಧಾರವನ್ನು ಗಟ್ಟಿಗೊಳಿಸಿ ಬೆಂಬಲಿಸಲು ಸಾಕಾಗಿದೆ ಎಂದವರು ತಿಳಿದರು.[೧೭]

ಹದಿಮೂರು ವರ್ಷಗಳ ನಂತರ ಬ್ರೂಕ್ಲಿನ್ ಸೇತುವೆ ಸಂಪೂರ್ಣಗೊಂಡಿತು. ಅಲ್ಲದೇ ಇದನ್ನು ೧೮೮೩ ರ ಮೇ ೨೪ ರಂದು ಸಂಚಾರಕ್ಕಾಗಿ ಮುಕ್ತಗೊಳಿಸಲಾಯಿತು. ಉದ್ಘಾಟನ ಸಮಾರಂಭದಲ್ಲಿ ಸಾವಿರಾರು ಜನರು ಉಪಸ್ಥಿತರಿದ್ದರು. ಅಲ್ಲದೇ ಈ ಸಮಾರಂಭಕ್ಕಾಗಿ ಈಸ್ಟ್ ಬೇಯಲ್ಲಿನ ಅನೇಕ ಹಡಗುಗಳು ಸಾಕ್ಷಿಯಾದವು. ಅಧ್ಯಕ್ಷರಾದ ಚೆಸ್ಟರ್ ಎ. ಅರ್ಥರ್ ಮತ್ತು ನ್ಯೂಯಾರ್ಕ್ ನ ಮೇಯರ್, ಫ್ರಾಂಕ್ಲಿನ್ ಎಡ್ಸನ್ ಸೇತುವೆಯನ್ನು ದಾಟುವ ಮೂಲಕ ಗಾಡಿ ತೋಪು ಇರುವ ಜಾಗಕ್ಕೆ ತೆರಳಿದರು.ಇವರು ಬ್ರೂಕ್ಲಿನ್ ನ ಪಕ್ಕದ ಗೋಪುರಕ್ಕೆ ಬಂದಾಗ ಅವರನ್ನು ಬ್ರೂಕ್ಲಿನ್ ನ ಮೇಯರ್ ಸೆಥ್ ಲಾ ರವರು ಸ್ವಾಗತಿಸಿದರು. ಸಮಾರಂಭದ ನಂತರ ಅರ್ಥರ್ ರವರು ವಾಷಿಂಗ್ಟನ್ ರಾಬ್ಲಿಂಗ್ ರವರ ನಿವಾಸಕ್ಕೆ ತೆರಳಿ, ಅವರ ಕೈ ಕುಲುಕುವ ಮೂಲಕ ಅಭಿನಂದಿಸಿದರು. ರಾಬ್ಲಿಂಗ್ ರವರಿಗೆ ಉದ್ಘಾಟನ ಸಮಾರಂಭಕ್ಕೆ ಹೋಗಲು ಆಗಲಿಲ್ಲ.(ಅಲ್ಲದೇ ಅಪರೂಪವಾಗಿ ಸೇತುವೆಯನ್ನು ನೋಡಲು ಹೋಗುತ್ತಿದ್ದರು), ಆದರೆ ಸೇತುವೆ ಉದ್ಘಾಟನೆಯ ದಿನದಂದು ಅವರ ಮನೆಯಲ್ಲಿ ಅದ್ದೂರಿ ಔತಣಕೂಟ ಏರ್ಪಡಿಸಿದ್ದರು. ಮುಂದಿನ ಹಬ್ಬಾಚರಣೆಯು, ವಾದ್ಯವೃಂದದ ಗೋಷ್ಟಿ, ನೌಕೆಗಳಿಂದ ಖುಶಾಲ ತೋಪು ಹಾರಿಸುವುದು ಮತ್ತು ಸುಡುಮದ್ದು ಪ್ರದರ್ಶನಗಳನ್ನು ಒಳಗೊಂಡಿತ್ತು.[೧೮]

ಮೊದಲನೆಯ ದಿನ ಒಟ್ಟು ೧,೮೦೦ ವಾಹನಗಳು ಮತ್ತು ೧೫೦,೩೦೦ ಜನರು ಸೇತುವೆಯನ್ನು ಹಾಯ್ದು ಹೋದರು. ಇದು ಮ್ಯಾನ್ ಹ್ಯಾಟನ್ ಮತ್ತು ಬ್ರೂಕ್ಲಿನ್ ನಡುವೆ ಸಂಚಾರಕ್ಕಿರುವ ಏಕೈಕ ಭೂಮಾರ್ಗವಾಗಿದೆ. ಎಮಿಲಿ ವರೇನ್ ರಾಬ್ಲಿಂಗ್ ರವರು ಸೇತುವೆಯನ್ನು ದಾಟಿದವರಲ್ಲಿ ಮೊದಲಿಗರಾಗಿದ್ದಾರೆ. ಪಶ್ಚಿಮ ನದಿಯ ಮೇಲಿರುವ ಸೇತುವೆಯ ಪ್ರಧಾನ ಕ್ರಮಣದ ಅಂತರಯುಳ್ಳ ಕಮಾನು ೧,೫೯೫ ಅಡಿ ೬ ಅಂಗುಲವಿದೆ(486.3 m). ಸೇತುವೆ ನಿರ್ಮಿಸಲು$15.5 million ನಷ್ಟು ವೆಚ್ಚವಾಯಿತು. ಅಲ್ಲದೇ ಇದರ ನಿರ್ಮಾಣದ ಸಂದರ್ಭದಲ್ಲಿ ಸರಿಸುಮಾರು ೨೭ ಜನರು ಮೃತಪಟ್ಟರು.[೧೯]

ಇದರ ಉದ್ಘಾಟನೆಯ ಒಂದು ವಾರದ ನಂತರ, ೧೮೮೩ ರ ಮೇ ೩೦ ರಂದು ನೂಕುನುಗ್ಗಲಿನಿಂದಾಗಿ ಸೇತುವೆ ಕುಸಿಯಲಿದೆ ಎಂಬ ವದಂತಿ ಹರಡಿತು. ಈ ನೂಕುನುಗ್ಗಲಿನಲ್ಲಿ ಹನ್ನೆರಡು ಜನ ಮೃತಪಟ್ಟಿದ್ದರು.[೨೦] ೧೮೮೪ ರ ಮೇ ೧೭ ರಂದು ಪಿ. ಟಿ. ಬರ್ನುಮ್ ರವರು ಸೇತುವೆಯ ಸುಭದ್ರತೆಯ ಬಗ್ಗೆ ಇದ್ದ ಅನುಮಾನಗಳನ್ನು ಹೋಗಲಾಡಿಸಲು ಸಹಾಯಮಾಡಿದರು. ಅವರ ಜನಪ್ರಿಯ ಸರ್ಕಸ್ ನ ಪ್ರಚಾರ ಸಂದರ್ಭದಲ್ಲಿ, ಅವರ ಅತ್ಯಂತ ಜನಪ್ರಿಯ ಆಕರ್ಷಣೆಗಳಲ್ಲಿ ಒಂದಾದ ಜಂಬೂ, ಬ್ರೂಕ್ಲಿನ್ ಸೇತುವೆಯ ಮೇಲೆ ಸುಮಾರು ೨೧ ಆನೆಗಳನ್ನೊಳಗೊಂಡ ಮೆರವಣಿಗೆಯನ್ನು ಮಾಡಲಾಯಿತು.[೨೧][೨೨][೨೩][೨೪]

1867ರಲ್ಲಿ ಬ್ರೂಕ್ಲಿನ್ ಸೇತುವೆಗೆಂದು ವಿನ್ಯಾಸಗೊಳಿಸಿದ್ದ ಒಂದು ಗೋಪುರದ ನಕ್ಷೆ,

ಇದನ್ನು ಉದ್ಘಾಟಿಸಿದ ಸಮಯದಲ್ಲಿ ಮತ್ತು ಅನೇಕ ವರ್ಷಗಳವರೆಗೆ ಇದು ಪ್ರಪಂಚದಲ್ಲಿರುವ ಅತ್ಯಂತ ಉದ್ದದ ತೂಗು ಸೇತುವೆಯಾಗಿತ್ತು. ಹಿಂದೆ ಕಟ್ಟಲಾದ ಯಾವುದೇ ಸೇತುವೆಗಿಂತ ೫೦ ಪ್ರತಿಶತದಷ್ಟು ಹೆಚ್ಚು ಉದ್ದವಿತ್ತು. ಅಲ್ಲದೇ ಇದು ಅಮೂಲ್ಯ ಹೆಗ್ಗುರುತಾಯಿತು. ಇದರ ವಾಸ್ತುಶಿಲ್ಪೀಯ ಗುಣ ಲಕ್ಷಣಗಳನ್ನು ಎದ್ದು ಕಾಣುವಂತೆ ಮಾಡಲು ೧೯೮೦ರಿಂದ ರಾತ್ರಿಯ ಹೊತ್ತಿನಲ್ಲಿ ಇದರ ಮೇಲೆ ಹೊನಲು ದೀಪದ ಬೆಳಕು ಹಾಯಿಸಲಾಗುತ್ತದೆ. ಗೋಪುರವನ್ನು ಸುಣ್ಣದಕಲ್ಲು, ಗ್ರ್ಯಾನೈಟ್, ಮತ್ತು ರೋಸೆಂಡೇಲ್ ಸಿಮೆಂಟ್ ನಿಂದ ಕಟ್ಟಲಾಗಿದೆ. ಇವರು ಆಧುನಿಕ ಫ್ರೆಂಚ್ ನಿಯೋ-ಗಾತಿಕ್ ವಾಸ್ತುಶಿಲ್ಪ ಶೈಲಿಯನ್ನು ಬಳಸಿದ್ದಾರೆ. ಈ ಶೈಲಿಯಲ್ಲಿ ಕಲ್ಲು ಗೋಪುರಗಳ ಮೂಲಕ ನಡುವಣಂಕದ ಮೇಲೆ ಚೂಪು ಕಮಾನುಗಳನ್ನು ನಿರ್ಮಿಸಲಾಗಿದೆ. ಸೇತುವೆಗೆ "ಬ್ರೂಕ್ಲಿನ್ ಸೇತುವೆ ಟ್ಯಾನ್" (ಪೇಪರ್ ಬಣ್ಣ) ಮತ್ತು "ಬೆಳ್ಳಿ(ಸಿಲ್ವರ್)" ಬಣ್ಣಗಳನ್ನು ಬಳಸಲಾಗಿದೆ. ಆದರೂ ಇದಕ್ಕೆ ಬಳಸಲಾಗಿರುವ ಬಣ್ಣ "ರೌಲಿನ್ ಕೆಂಪೆಂದು" ವಾದಿಸಲಾಗಿದೆ.[೨೫]

ಸೇತುವೆ ನಿರ್ಮಾಣದ ಸಮಯದಲ್ಲಿ, ಸೇತುವೆ ಕಟ್ಟಡದ ವಾಯುಬಲವಿಜ್ಞಾನವನ್ನು ಬಳಸಲಾಗಲಿಲ್ಲ. ೧೯೫೦ರ ವರೆಗೆ ಸೇತುವೆಗಳನ್ನು ವಿಂಡ್ ಟನಲ್ (ಗಾಳಿ ಸುರಂಗ)ಗಳಲ್ಲಿ ಪರೀಕ್ಷಿಸಲಾಗುತ್ತಿರಲಿಲ್ಲ. ಅಲ್ಲದೇ ಮೂಲ ಟ್ಯಾಕೊಮ ನ್ಯಾರೋಸ್ ಸೇತುವೆಗಾಳಿಗೆ ಹೊಯ್ದಾಡುವ(ಗ್ಯಾಲೋಪಿಂಗ್ ಗರ್ಟೈ) ೧೯೪೦ ರಲ್ಲಿ ಕುಸಿದು ಹೋದನಂತರ ವಿಂಡ್ ಟನಲ್ ಗಳಲ್ಲಿ ಪರೀಕ್ಷಿಸಲು ಆರಂಭಿಸಿದರು. ಆದ್ದರಿಂದ ತೆರೆದ ಬಿಗಿಯಾದ ಆಸರೆಕಟ್ಟಿನ ವಿನ್ಯಾಸವು ಅಟ್ಟಕ್ಕೆ ಪೂರಕ ಬೆಂಬಲ ನೀಡಿದೆ. ಇದು ಅದರ ಸಹಜವಾದ ವಿನ್ಯಾಸದಿಂದ ವಾಯುಬಲ ವಿಜ್ಞಾನಕ್ಕೆ (ಚಲನೆಯಲ್ಲಿರುವ ಅನಿಲ ಬಲಗಳಿಗೆ) ಸಂಬಂಧಿಸಿದ ಸಮಸ್ಯೆಗಳಿಗೆ ಹೆಚ್ಚಾಗಿ ತುತ್ತಾಗುವುದಿಲ್ಲ. ರಾಬ್ಲಿಂಗ್ ವಿನ್ಯಾಸಗೊಳಿಸಿದ ಸೇತುವೆ ಮತ್ತು ಆಸರೆಕಟ್ಟಿನ ವ್ಯವಸ್ಥೆ ಎಷ್ಟರ ಮಟ್ಟಿಗೆ ಧೃಢವಾಗಿರಬೇಕೆಂದುಕೊಂಡಿದ್ದರೋ ಅದಕ್ಕಿಂತಲೂ ಆರು ಪಟ್ಟು ಹೆಚ್ಚು ಗಟ್ಟಿಯಾಗಿದೆ. ಈ ಕಾರಣದಿಂದಲೇ , ಅದೇ ಸಮಯದಲ್ಲಿ ನಿರ್ಮಿಸಿದ ಅನೇಕ ಸೇತುವೆಗಳು ಇತಿಹಾಸದಲ್ಲಿ ಸೇರಿಹೋಗಿ, ಪುನಃ ನಿರ್ಮಾಣಗೊಂಡರೂ ಕೂಡ ಬ್ರೂಕ್ಲಿನ್ ಸೇತುವೆ ಇನ್ನೂ ಭದ್ರವಾಗಿ ನಿಂತುಕೊಂಡಿದೆ. ಗುತ್ತಿಗೆದಾರರಾದ ಜೆ. ಲಾಯ್ಡ್ ಹೈಗ್ ರವರು ಸರಬರಾಜು ಮಾಡಿದ ಕಳಪೆಗುಣಮಟ್ಟದ ಲೋಹದ ಕಂಬಿಗಳ ಹೊರತಾಗಿಯೂ ಈ ಸೇತುವೆ ಭದ್ರವಾಗಿದೆ. ಉತ್ತಮ ಗುಣಮಟ್ಟದ ಲೋಹದ ಕಂಬಿಯನ್ನು ಕಂಡುಹಿಡಿದಾಗ ಆಗಲೇ ನಿರ್ಮಿಸಲಾಗಿದ್ದ ಕೇಬಲಿಂಗ್ ಅನ್ನು ಬದಲಾಯಿಸಲು ತಡವಾಗಿತ್ತು. ರಾಬ್ಲಿಂಗ್, ಕಳಪೆಗುಣಮಟ್ಟದ ಕಂಬಿಯನ್ನು ಬಳಸಿದ್ದ ಕಾರಣ ಅಗತ್ಯಕ್ಕಿಂತ ಆರು ಪಟ್ಟು ಹೆಚ್ಚು ಭದ್ರವಾಗಿ ಕಟ್ಟಲು ೨೫೦ ಕೇಬಲ್ ಗಳನ್ನು ಅಧಿಕವಾಗಿ ಬಳಸಿದರು. ಸೇತುವೆ ಬಿಗಿ-ಭದ್ರಗೊಳಿಸಲು ಓರೆಸಾಲು ಕೇಬಲ್ ಗಳನ್ನು ಸೇತುವೆಯ ತುದಿಯಿಂದ(ಗೋಪುರದಿಂದ) ನೆಲದ ವರೆಗೂ ಅಳವಡಿಸಲಾಯಿತು. ಅವುಗಳ ಅಗತ್ಯವಿರಲಿಲ್ಲ, ಆದರೂ ಅವುಗಳ ವಿಶೇಷ ಸೌಂದರ್ಯದಿಂದಾಗಿ ಅವುಗಳನ್ನು ಹಾಗೆಯೇ ಇರಿಸಲಾಯಿತು.

೨೦೦೭ರಲ್ಲಿ ಮಿನ್ನೆಪೋಲಿಸ್ ನಗರದಲ್ಲಿ I-೩೫W ಹೆದ್ದಾರಿ ಸೇತುವೆ ಕುಸಿದ ನಂತರ, ಸಾರ್ವಜನಿಕ ಆಸಕ್ತಿ ಹೆಚ್ಚಾಗಿ US ನುದ್ದಕ್ಕೂ ಇರುವ ಸೇತುವೆಗಳ ಸ್ಥಿತಿಯ ಬಗ್ಗೆ ಆಸಕ್ತಿ ಹೊಂದುವಂತೆ ಮಾಡಿತು. ಅಲ್ಲದೇ ಬ್ರೂಕ್ಲಿನ್ ಸೇತುವೆಯ ರಸ್ತೆ ತಡೆಗಳ ಅಂತಿಮ ಪರಿಶೀಲನೆಯಲ್ಲಿ "ಕಳಪೆ" ರೇಟಿಂಗ್(ವೀಕ್ಷಕರ ಮಟ್ಟದ ದರ) ಅನ್ನು ಪಡೆದುಕೊಂಡಿತೆಂದು ವರದಿ ಮಾಡಲಾಯಿತು.[೨೬] NYC ಡಿಪಾರ್ಟ್ಮೆಂಟ್ ಆಫ್ ಟ್ರಾನ್ಸ್ ಪೋರ್ಟೇಷನ್ ಸ್ಪೋಕ್ಸ್ ಮನ್ ಪ್ರಕಾರ, "ಕಳಪೆ ರೇಟಿಂಗ್ ಪಡೆದಿದೆ ಎಂದಾಕ್ಷಣ ಅದು ಅಸುರಕ್ಷಿತವೆಂದಾಗುವುದಿಲ್ಲ. ಪುನಃ ನಿರ್ಮಿಸಬೇಕಿರುವ ಕೆಲವೊಂದು ಘಟಕಗಳಿವೆ ಎಂಬುದು ಕಳಪೆ ರೇಟಿಂಗ್ ನ ಅರ್ಥವಾಗಿದೆ." ಒಂದು $725 million ಯೋಜನೆಯಂತೆ ಕೆಲವೊಂದು ಘಟಕಗಳನ್ನು ಬದಲಾಯಿಸುವ ಮತ್ತು ಸೇತುವೆಗೆ ಮತ್ತೊಮ್ಮೆ ಬಣ್ಣ ಬಳಿಯುವ ಕಾರ್ಯವನ್ನು ೨೦೦೯ರಲ್ಲಿ ಪ್ರಾರಂಭಿಸಲು ನಿಗದಿಪಡಿಸಲಾಯಿತು.[೨೭]

ಬ್ರೂಕ್ಲಿನ್ ಸೇತುವೆಯ ನಿರ್ಮಾಣವನ್ನು , ಡೇವಿಡ್ ಮ್ಯಾಕ್ ಕುಲೊಗ್[೧೩] ರವರು ಬರೆದ ದಿ ಗ್ರೇಟ್ ಬ್ರಿಡ್ಜ್ ಎಂಬ ೧೯೭೮ರ ಪುಸ್ತಕದಲ್ಲಿ ಮತ್ತು ಬ್ರೂಕ್ಲಿನ್ ಬ್ರಿಡ್ಜ್ (೧೯೮೧) ಎಂಬ ಪುಸ್ತಕದಲ್ಲಿ, ಹಾಗು ಕೆನ್ ಬರ್ನ್ಸ್ ರವರು ನಿರ್ಮಿಸಿದ ಮೊದಲನೆಯ PBS ಸಾಕ್ಷ್ಯಚಿತ್ರದಲ್ಲಿ ವಿವರಿಸಲಾಗಿದೆ.[೨೮] ಬರ್ನ್ಸ್ ರವರು ಸಾಕ್ಷ್ಯಚಿತ್ರಕ್ಕಾಗಿ ಮ್ಯಾಕ್ ಕುಲೊಗ್ಸ್ ರವರ ಪುಸ್ತಕವನ್ನು ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಅಲ್ಲದೇ ಈ ಚಿತ್ರದಲ್ಲಿ ಅವರನ್ನು ನಿರೂಪಕನಾಗಿ ಬಳಸಿಕೊಂಡಿದ್ದಾರೆ.[೨೯] ಇಷ್ಟೇ ಅಲ್ಲದೇ ಇದನ್ನು ಸೆವೆನ್ ವಂಡರ್ಸ್ ಆಫ್ ದಿ ಇಂಡಸ್ಟ್ರಿಯಲ್ ವಲ್ಡ್ ನಲ್ಲಿಯೂ ಕೂಡ ವಿವರಿಸಲಾಗಿದೆ. ಇದು ಪುಸ್ತಕದೊಂದಿಗೆ BBC ಯ ಸಾಕ್ಷ್ಯಚಿತ್ರ ಸರಣಿಯಾಗಿದೆ.

ಪಾದಚಾರಿ ಮತ್ತು ವಾಹನಗಳ ಪ್ರವೇಶಾವಕಾಶ[ಬದಲಾಯಿಸಿ]

ಕ್ರಾಸ್ ಸೆಕ್ಷನ್ ರೇಖಾಚಿತ್ರ

ಅನೇಕ ಸಂದರ್ಭಗಳಲ್ಲಿ, ಸೇತುವೆಯ ಮೇಲೆ ಕುದುರೆಗಳನ್ನು ಸಾಗಿಸಲಾಗುತ್ತದೆ ಮತ್ತು ತಳ್ಳು ಬಂಡಿಗಳ ಸಂಚಾರವೂ ಇರುತ್ತದೆ; ಪ್ರಸ್ತುತದಲ್ಲಿ ಮೋಟಾರು ವಾಹನಗಳಿಗಾಗಿ ಇದು ಆರು ಮಾರ್ಗಗಳನ್ನು ಹೊಂದಿದೆ. ಇದರ ಜೊತೆಯಲ್ಲಿ ಪಾದಚಾರಿಗಳಿಗೆ ಮತ್ತು ಬೈಸಿಕಲ್ಲು ಗಳಿಗಾಗಿ ಮಧ್ಯಗೆರೆಯಿರುವ ಪ್ರತ್ಯೇಕ ನಡೆದಾರಿಯನ್ನು ಹೊಂದಿದೆ. ರಸ್ತೆಗಳ ಎತ್ತರ (11 ft (3.4 m) ರೇಖೆಗಳ ಮೂಲಕ ಸಂಕೇತಿಸಲಾಗಿದೆ.) ಮತ್ತು ಭಾರದ (6,000 lb (2,700 kg) ವಾಹನಗಳಿಗೆ ಗುರುತು ಪರಿಮಿತಿಗಳಿಂದಾಗಿ, ವಾಣಿಜ್ಯ ವಾಹನಗಳು ಮತ್ತು ಬಸ್ಸುಗಳು ಈ ಸೇತುವೆಯನ್ನು ಬಳಸದಂತೆ ನಿಷೇಧಿಸಲಾಗಿದೆ. ಎರಡು ಒಳ ಸಂಚಾರ ಬೀದಿಮಾರ್ಗಳಲ್ಲಿ ಒಂದು, ಬ್ರೂಕ್ಲಿನ್ ನಿಂದ BMTಯ ಮೇಲೆತ್ತರದ ಎಲಿವೇಟೆಡ್ ರೈಲುಗಳನ್ನು ಪಾರ್ಕ್ ರಾ ಮತ್ತು ಸ್ಯಾಂಡ್ಸ್ ಸ್ಟ್ರೀಟ್ ನ ಅಂತಿಮ ನಿಲ್ದಾಣಗಳ ವರೆಗೆ ಕೊಂಡೊಯ್ಯುತ್ತದೆ. ಸೇತುವೆಯ ಬಳಕೆಯನ್ನು ೧೯೪೪ರಲ್ಲಿ ಎಲಿವೇಟೆಡ್ ರೈಲುಗಳು ನಿಲ್ದಾಣದ ವರೆಗೆ ಮತ್ತು ಅವು ಸುರಕ್ಷಿತ ಮಧ್ಯ ರಸ್ತೆಯಲ್ಲಿ ಸಂಚರಿಸಲು ಪ್ರಾರಂಭಿಸುವ ವರೆಗೂ,ಟ್ರ್ಯಾಮ್ ಕಾರುಗಳು ಪ್ರಸ್ತುತದಲ್ಲಿರುವ ಎರಡು ನಿಗದಿತ ಕೇಂದ್ರ ರೇಖಾ ಮಾರ್ಗಗಳಲ್ಲಿ ಚಲಿಸುತ್ತಿದ್ದವು. (ಮತ್ತೊಂದು ಸಂಚಾರದೊಡನೆ ಹಂಚಿಕೊಂಡಿದೆ). 1950ರಲ್ಲಿ ಟ್ರ್ಯಾಮ್ ಕಾರುಗಳು ಕೂಡ ಸಂಚಾರವನ್ನು ನಿಲ್ಲಿಸಿದವು. ಅಲ್ಲದೇ ಸೇತುವೆಯನ್ನು ಮೋಟಾರು ಸಂಚಾರದ ಆರು ಮಾರ್ಗಗಳನ್ನು ನಿರ್ಮಿಸಲು ಪುನಃ ಕಟ್ಟಲಾಯಿತು.

ಬ್ರೂಕ್ಲಿನ್ ಸೇತುವೆಯನ್ನು ಟಿಲ್ಲರಿ/ಆಡಮ್ಸ್ ಸ್ಟ್ರೀಟ್ಸ್, ಸ್ಯಾಂಡ್ಸ್/ಪರ್ಲ್ ಸ್ಟ್ರೀಟ್ಸ್, ಮತ್ತು ಪೂರ್ವದ ಕಡೆಗೆ ಹೋಗುವ ಬ್ರೂಕ್ಲಿನ್ -ಕ್ವೀನ್ಸ್ ಎಕ್ಸ್ ಪ್ರೆಸ್ ವೇ ನ ನಿರ್ಗಮನ ೨೮Bಯ ಬ್ರೂಕ್ಲಿನ್ ದ್ವಾರಗಳ ಮೂಲಕ ಪ್ರವೇಶಿಸಬಹುದು. ಮ್ಯಾನ್ ಹ್ಯಾಟನ್ ನಲ್ಲಿ, ಮೋಟಾರು ಕಾರುಗಳು FDR ಡ್ರೈವ್, ಪಾರ್ಕ್ ರಾ, ಚೇಂಬರ್/ಸೆಂಟರ್ ಸ್ಟ್ರೀಟ್ಸ್, ಮತ್ತು ಪರ್ಲ್/ಫ್ರಾಂಕ್ ಫೋರ್ಟ್ ಸ್ಟ್ರೀಟ್ಸ್ ಗಳ ಕಡೆಯಿಂದಲೂ ಪ್ರವೇಶಿಸಬಹುದು. ಪಾದಚಾರಿಗಳು, ಸೇತುವೆಯನ್ನು ಬ್ರೂಕ್ಲಿನ್ ಕಡೆಯಿಂದ ಟಿಲ್ಲರಿ/ಆಡಮ್ಸ್ ಸ್ಟ್ರೀಟ್ಸ್ (ಆಟೋ ಪ್ರವೇಶ/ನಿರ್ಗಮನದ ನಡುವೆ),ಅಥವಾ ಕ್ಯಾಡ್ ಮನ್ ಪ್ಲಾಜಾ ಪೂರ್ವ ಮತ್ತು ಪಶ್ಚಿಮಗಳ ನಡುವೆ ಇರುವ ಪ್ರಾಸ್ಪೆಕ್ಟ್ St ಯ ಮೇಲಿರುವ ಮೆಟ್ಟಿಲುಗಳಿಂದ ಪ್ರವೇಶಿಸಬಹುದು. ಮ್ಯಾನ್ ಹ್ಯಾಟನ್ ನಲ್ಲಿ, ಪಾದಚಾರಿಯ ನಡೆದಾರಿಯನ್ನು ಸೆಂಟರ್ ಸ್ಟ್ರೀಟ್ ನ ಕೊನೆಯಿಂದ ಅಥವಾ, ಬ್ರೂಕ್ಲಿನ್ ಬ್ರಿಡ್ಜ್-ಸಿಟಿ ಹಾಲ್ IRT ಸುರಂಗ ನಿಲ್ದಾಣದ ದಕ್ಷಿಣ ಮೆಟ್ಟಿಲುಗಳ ಮೂಲಕವೂ ಪ್ರವೇಶಿಸಬಹುದು.

ಪಾದಚಾರಿ ನಡೆದಾರಿಯಿಂದ ಒಂದು ನೋಟ. ಸೇತುವೆಯ ಕೇಬಲ್ ಜೋಡಣೆಯು ವಿಭಿನ್ನ ಬಲೆ ರೀತಿಯ ಮಾದರಿ ನಿರ್ಮಿಸಿದೆ.

ಬ್ರೂಕ್ಲಿನ್ ಸೇತುವೆ, ನಡೆದುಕೊಂಡು ಹೋಗುವವರಿಗೆ ಮತ್ತು ಸೈಕಲ್ಲು ಸವಾರರಿಗೆ ಮುಕ್ತ,ಅಗಲವಾದ ಪಾದಚಾರಿ ಮಾರ್ಗ ಹೊಂದಿದೆ. ಇದು ಸೇತುವೆಯ ಮಧ್ಯದಲ್ಲಿರುವುದಲ್ಲದೇ, ಮೋಟಾರು ಸಂಚಾರ ಮಾರ್ಗಗಳಿಗಿಂತ ದೊಡ್ಡದಾಗಿದೆ. ಸೇತುವೆಯುದ್ದಕ್ಕೂ ಪಾದಚಾರಿಗಳಿಗೆ ಸ್ಥಳಾವಕಾಶ ಮಾಡಿಕೊಡಲಾಗಿದೆ. ಪೂರ್ವ ನದಿಯನ್ನು ದಾಟಲು ಸಾಧ್ಯವಾಗದಂತಹ ಕಷ್ಟದ ಸಮಯದಲ್ಲಿ ನೂರಾರು ಜನರನ್ನು ಸುರಕ್ಷಿತ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.

ಟ್ರಾನ್ಸ್ ಪ್ರೋರ್ಟ್ ವರ್ಕರ್ಸ್ ಯೂನಿಯನ್ ೧೯೮೦ ಮತ್ತು ೨೦೦೫ ರಲ್ಲಿ ನಡೆಸಿದ ಸಾಗಣೆ ಮುಷ್ಕರಗಳ ಸಮಯದಲ್ಲಿ, ಈ ಸೇತುವೆಯನ್ನು ಜನರು ಬಳಸಿದರು. ಇದರ ಜೊತೆಯಲ್ಲಿ ಮೇಯರ್ ಗಳಾದ ಕೋಚ್ ಮತ್ತು ಬ್ಲೂಮ್ ಬರ್ಗ್ ತೊಂದರೆಗೆ ಸಿಲುಕಿದ್ದ ಸಾರ್ವಜನಿಕರಿಗೆ ಸೂಚನೆಯೆಂಬಂತೆ ಸೇತುವೆಯನ್ನು ಸಾಂಕೇತಿಕವಾಗಿ ದಾಟಿದರು.[೩೦][೩೧]

೧೯೬೫, ೧೯೭೭ ಮತ್ತು ೨೦೦೩ ರ ಪ್ರತಿಭಟನೆಗಳು, ಅಂಧಕಾರಕಕ್ರಿಯೆಗಳನ್ನು ಪರಿಗಣಿಸಿ ಹಾಗು ವಿಶ್ವ ವಾಣಿಜ್ಯ ಕೇಂದ್ರ ದ ಮೇಲೆ ನಡೆಸಲಾದ ೨೦೦೧ ರ ಸೆಪ್ಟೆಂಬರ್ ೧೧ ರ ದಾಳಿಯ ನಂತರ ಸುರಂಗ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಇದಾದ ನಂತರ ಮ್ಯಾನ್ ಹ್ಯಾಟನ್ ನಲ್ಲಿನ ಜನರು, ನಗರವನ್ನು ತೊರೆಯಲು ಸೇತುವೆ ಬಳಸಿದರು. ಸೇತುವೆಯ ಮೂಲ ವಿನ್ಯಾಸಗಾರ ಜಾನ್ ರಾಬ್ಲಿಂಗ್, ಸೇತುವೆಯ ಮೇಲೆ ಬೃಹತ್ ಪ್ರಮಾಣದ ಜನ ಸಂಚಾರವನ್ನು ನಿರೀಕ್ಷಿಸಿರಲಿಲ್ಲವಾದರೂ, ಸೇತುವೆಯ ಅನಿರೀಕ್ಷಿತ ಒತ್ತಡಗಳನ್ನು ನಿಭಾಯಿಸುವ ಮೂರು ಪ್ರತ್ಯೇಕ ವ್ಯವಸ್ಥೆಗಳೊಂದಿಗೆ ಇದನ್ನು ಆಗ ವಿನ್ಯಾಸಗೊಳಿಸಿದ್ದರು. ಸೇತುವೆಯು, ತೂಗು ವ್ಯವಸ್ಥೆ, ಓರೆಸಾಲು ವ್ಯವಸ್ಥೆ, ಮತ್ತು ಭದ್ರಗೊಳಿಸಿದ ಆಸರೆಕಟ್ಟನ್ನು ಹೊಂದಿದೆ. "ರಾಬ್ಲಿಂಗ್, [ಅವರ] ವ್ಯವಸ್ಥೆಗಳಲ್ಲಿ ಯಾವುದಾದರೂ ಒಂದು ವ್ಯವಸ್ಥೆಗೆ ಏನಾದರೂ ಅವಘಡ ಸಂಭವಿಸಿದರೆ, 'ಸೇತುವೆಯು ವಾಲಬಹುದು,ಆದರೆ ಅದು ಕುಸಿಯುವುದಿಲ್ಲವೆಂದು ಹೇಳಿದ್ದಾರೆ.'"[೩೨][೩೨] ಬೃಹತ್ ಪ್ರಮಾಣದ ಜನರು ಸೇತುವೆಯ ಮೇಲೆ ಬಂದಾಗ, ಪಾದಚಾರಿಗಳು ತೂಗಾಟ ಅಥವಾ "ಓಲಾಟ" ಅನುಭವಿಸಿದರು. ಜನರ ಗುಂಪು ಒಂದರ ಹಿಂದೆ ಮತ್ತೊಂದು ಹೆಜ್ಜೆಯನ್ನು ಹಾಕುವಾಗ ಜನರು ಓಲಾಡಲು ಪ್ರಾರಂಭಿಸಿದರು. ಅಲ್ಲದೇ ಕೆಲವರು ಏಕಕಾಲದ ಓಟದಲ್ಲಿ ಅನಿವಾರ್ಯವಾಗಿ ಕೆಳಗೆ ಬಿದ್ದರು. ಜನರು ನಡೆಯುವಾಗ ಸಹಜವಾಗಿ ಉಂಟಾದ ಓಲಾಟ ಸೇತುವೆ ಎಡ ಅಥವಾ ಬಲಭಾಗದಲ್ಲಿ ಸಣ್ಣ ತೂಗಾಟ ಉಂಟಾಗುವಂತೆ ಮಾಡಿತು. ಇದರಿಂದಾಗಿ ಸೇತುವೆಯ ಮೇಲಿರುವ ಜನರು ಹೆಜ್ಜೆಹಾಕುತ್ತ ತೂಗಾಡುವಂತಾಯಿತು. ಅಲ್ಲದೇ ಸೇತುವೆಯ ತೂಗಾಟದ ವ್ಯಾಪಕತೆ ಹೆಚ್ಚಿ, ಈ ಪ್ರಭಾವ ಸತತವಾಗಿ ಮುಂದುವರೆಯುವಂತೆ ಮಾಡಿತು. ಈ ರೀತಿಯ ಅಧಿಕ, ದಟ್ಟ ಸಂಚಾರದ ಸೇತುವೆಯ ಪರಿಸ್ಥಿತಿಯು, ೨೦೦೦ರಲ್ಲಿ ಲಂಡನ್ ಮಿಲೇನಿಯಂ ಫೂಟ್ ಸೇತುವೆಯ ಉದ್ಘಾಟನ ಸಂದರ್ಭದಲ್ಲಿ ಆದ ಘಟನೆಗೆ ಹೋಲಿಸಿದಾಗ; ಅನಿಯಮಿತವಾಗಿ ಚಲಿಸುವಂತೆ ಅಥವಾ "ತೂಗಾಡುವಂತೆ" ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.[೩೩]

ಫ್ರಾಂಕ್ ಲೆಸ್ ಲೀ ಯನ್ನು ಚಿತ್ರಿಸಿರುವ ವೃತ್ತಪತ್ರಿಕೆ c.1883

ಗಮನಾರ್ಹ ಘಟನೆಗಳು[ಬದಲಾಯಿಸಿ]

ಮೊದಲು ಜಿಗಿದವನು(ಹಾರಿದವನು)

ರಾಬರ್ಟ್ E. ಒಡ್ಲುಮ್ ಸೇತುವೆಯಿಂದ ಜಿಗಿದ ಮೊದಲ ವ್ಯಕ್ತಿಯಾಗಿದ್ದಾರೆ. ಇವರು ೧೮೮೫ ರ ಮೇ ೧೯ ರಂದು ಹಾರಿದರು. ಇವರು ಒಂದು ಮೂಲೆಯಿಂದ ನೀರಿಗೆ ಜಿಗಿದರು. ಇದಾದ ಸ್ಪಲ್ಪಕಾಲದಲ್ಲೇ ಒಳಗಾಯಗಳಿಂದಾಗಿ ಸಾವನ್ನಪ್ಪಿದರು.[೩೪] ಸ್ಟೀವ್ ಬ್ರಾಡಿ ಎಂಬುವವರು ಅತ್ಯಂತ ಪ್ರಸಿದ್ಧ ಜಿಗಿತಗಾರರಾಗಿದ್ದಾರೆ ಅಥವಾ ಸ್ವಯಂ ಘೋಷಿತ ಜಿಗಿತಗಾರರೆನಿಸಿದ್ದಾರೆ(೧೮೮೬ರಲ್ಲಿ).

ಬಂಗೀ ಜಿಗಿತ

೧೯೯೩ರ ಜೂನ್ ನಲ್ಲಿ, ಲೋಹದ ವಿನ್ಯಾಸದೊಳಗೆ ೧೩ ಸ್ಥಳಾನ್ವೇಷಣೆಗಳನ್ನು ಅನುಸರಿಸಿ, ಮತ್ತು ಪರ್ವತಾರೋಹಣ ಮಾರ್ಗದರ್ಶಕನ ಸಹಾಯದೊಂದಿಗೆ, ಥೆರ್ರಿಡಿವಕ್ಸ್ ಎಂಬುವವರು ಬೆಳಗಿನ ಹೊತ್ತಿನಲ್ಲಿ ಬ್ರೂಕ್ಲಿನ್ ಕಂಬದ ಹತ್ತಿರ ಪೂರ್ವ ನದಿಯ ಮೇಲೆ ದೊಂಬರಾಟದಂತಹ ಎಂಟು ಬಂಗೀ ಜಿಗಿತಗಳನ್ನು ಪ್ರದರ್ಶಿಸಿದರು.(ಕಾನೂನು ಬಾಹಿರವಾಗಿ). ಪ್ರತಿಯೊಂದು ದೊಂಬರಾಟದ ಬಂಗೀಯ ನಡುವೆ ಅವರು ವಿದ್ಯುತ್ ಹಾಯಿಹಗ್ಗದ ರಾಟೆಯನ್ನು ಬಳಸಿದ್ದರು.[೩೫]

೧೯೯೪ ರ ಬ್ರೂಕ್ಲಿನ್ ಸೇತುವೆಯ ಶೂಟಿಂಗ್

೧೯೯೪ರ ಮಾರ್ಚ್ ೧ ರಂದು , ಲೆಬನನ್ ನಲ್ಲಿ ಹುಟ್ಟಿದವರಾದ ರಶೀದ್ ಬಾಜ್ಎಂಬಾತ ಚಾಬಾದ್-ಲುಬವಿಚ್ ಸಾಂಪ್ರದಾಯಿಕ ಯಹೂದೀ ಚಳವಳಿಯ ಸದಸ್ಯರನ್ನು ಕೊಂಡೊಯ್ಯುತ್ತಿದ್ದ ವ್ಯಾನ್ ನ ಮೇಲೆ ಮತ್ತು ಅರಿ ಹಾಲ್ಬರ್ಸ್ಟ್ಯಾಮ್ ಎಂಬ ಹತ್ತಿರದಲ್ಲಿದ್ದ ಹದಿನಾರು ವರ್ಷದ ವಿದ್ಯಾರ್ಥಿಯ ಮೇಲೆ ಮತ್ತು ಸೇತುವೆಯ ಮೇಲೆ ಹೋಗುತ್ತಿದ್ದ ಇತರ ಮೂರು ಜನರ ಮೇಲೆ ಗುಂಡುಹಾರಿಸಿದನು.[೩೬] ಹ್ಯಾಲ್ ಬರ್ಸ್ಟ್ಯಾಮ್ , ಗಾಯಗಳಿಂದಾಗಿ ಐದು ದಿನಗಳ ನಂತರ ಮೃತಪಟ್ಟನು. ಈ ಘಟನೆ ನಡೆಯುವ ಸ್ವಲ್ಪ ದಿನಗಳ ಮೊದಲು ಅಂದರೆ ೧೯೯೪ ರ ಫೆಬ್ರವರಿ ೨೫ ರಂದು ಹಿಬ್ರಾನ್ ದಲ್ಲಿ ಬ್ಯಾರುಕ್ ಗೋಲ್ಡ್ ಸ್ಟ್ಯೇನ್ ಎಂಬಾತ ೨೯ ಮುಸ್ಲೀಮರನ್ನು ಹಿಬ್ರಾನ್ ಕಗ್ಗೊಲೆಪ್ರಕರಣಕ್ಕೆ ಕಾರಣವಾಗಿದ್ದ.ಆ ಸೇಡಿಗಾಗಿ ಈ ಕೃತ್ಯವೆಸಗಿ, ಪ್ರತೀಕಾರವಾಗಿ ಬಾಜ್ ಗುಂಡುಹಾರಿಸಿದ್ದನು. ಬಾಜ್ ನನ್ನು ಕೊಲೆಗಾರನೆಂದು ನಿರ್ಣಯಿಸಲಾಯಿತು; ಮತ್ತು ೧೪೧ ವರ್ಷಗಳ ಕಾಲ ಸೆರೆಮನೆವಾಸವನ್ನು ವಿಧಿಸಲಾಯಿತು. ಈ ಕೊಲೆಯನ್ನು ಒಬ್ಬ ವ್ಯಕ್ತಿ ಸಿಟ್ಟಿನಿಂದ ಮಾಡಲಾದ ಅಪರಾಧವೆಂದು ಪ್ರಾಥಮಿಕವಾಗಿ ವರ್ಗೀಕರಿಸಿದ ನಂತರ ನ್ಯಾಯ ಅಧಿಕಾರ ಇಲಾಖೆ ೨೦೦೦ ರಲ್ಲಿ ಈ ಪ್ರಕರಣವನ್ನು ಭಯೋತ್ಪಾದಕ ದಾಳಿಯೆಂದು ಪುನರ್ಮಿಶಿಸಿತು. ಗುಂಡಿಗೆ ಬಲಿಯಾದವನ ನೆನಪಿಗಾಗಿ ಮ್ಯಾನ್ ಹ್ಯಾಟನ್ ಕಡೆಯಿಂದ ಸೇತುವೆಯನ್ನು ಪ್ರವೇಶಿಸುವ ರಸ್ತೆಗೆ,ಆರಿ ಹ್ಯಾಲ್ ಬರ್ಸ್ಟ್ಯಾಮ್ ಮೆಮೊರಿಯಲ್ ರಾಂಪ್ ಎಂದು ಹೆಸರಿಡಲಾಯಿತು .[೩೭]

೨೦೦೩ರ ವಿಷಯ

೨೦೦೩ರಲ್ಲಿ, ಐಮಾನ್ ಫಾರೀಸ್ ಎಂಬ ಲಾರಿ ಚಾಲಕನಿಗೆ ೨೦ ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಯಿತು.ಅಲ್ ಖೈದಾಕ್ಕೆ ಸಹಾಯವಾಗುವ ವಸ್ತುಗಳನ್ನು ಒದಗಿಸಿದ್ದ ಎಂಬ ಅಪರಾಧದ ಮೇಲೆ ಈತನಿಗೆ ಶಿಕ್ಷಿಸಲಾಯಿತು. ಊದುದೀಪಳಿಂದ ಸೇತುವೆಯ ಆಧಾರವಾಗಿರುವ ವೈರ್ ಗಳನ್ನು ಕತ್ತರಿಸುವ ಮೂಲಕ ಸೇತುವೆಯನ್ನು ನಾಶ ಮಾಡಬೇಕೆಂಬ ಯೋಜನೆಯನ್ನು ರಾಷ್ಟ್ರೀಯ ಭದ್ರತೆ ಸಂಸ್ಥೆಯ ಮಾಹಿತಿಯಿಂದಾಗಿ ವಿಫಲಗೊಳಿಸಲಾಯಿತು. ಈ ಸಂಸ್ಥೆಯು ಅಲ್ ಖೈದಾ ಸೇನಾಧಿಕಾರಿಗಳ ದೂರವಾಣಿ ಮಾತುಕತೆಯನ್ನು ಟ್ಯಾಪ್ ಮಾಡುವ ಮೂಲಕ ಈ ಯೋಜನೆಯ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡಿತು.[೩೮]

೨೦೦೬ ರಲ್ಲಿ ಅಡುಗು ತಾಣ, ಬಂಕರ್ (ಇಂಧನ ಸಂಗ್ರಾಹಕ) ಪತ್ತೆ.

೨೦೦೬ರಲ್ಲಿ, ಶೀತಲ ಸಮರದ ಕಾಲಕ್ಕೆ ಸೇರಿದ ಬಂಕರ್ ಅನ್ನು ನಗರದ ಕಾರ್ಮಿಕರು ಮ್ಯಾನ್ ಹ್ಯಾಟನ್ ನ ಕೆಳ ಪೂರ್ವ ದಿಕ್ಕಿನ ಕಡೆಯಿರುವ ಪೂರ್ವ ನದಿಯ ದಡದ ಹತ್ತಿರ ಪತ್ತೆಹಚ್ಚಿದರು. ಬಂಕರ್, ಕಲ್ಲು ಕಟ್ಟಡದ ಹಡಗುದಾಣದ ಒಳಗಿತ್ತು. ಸೋವಿಯತ್ ಒಕ್ಕೂಟ ಮಾಡಬಹುದಾದ ನ್ಯೂಕ್ಲಿಯರ್ ದಾಳಿಯನ್ನು ಎದುರಿಸಲು ಬೇಕಾದ ಅಗತ್ಯ ವಸ್ತುಗಳು ಇನ್ನೂ ಅದರೊಳಗಿದ್ದವು.[೩೯]

೧೦೦ನೇ ವಾರ್ಷಿಕೋತ್ಸವದ ಆಚರಣೆಗಳು[ಬದಲಾಯಿಸಿ]

೧೯೮೩ ರ ಮೇ ೨೪ ರಂದು ನಡೆದ ಶತಮಾನೋತ್ಸವದ ಆಚರಣೆಯಲ್ಲಿ ಅಧ್ಯಕ್ಷರಾದ ರೊನಾಲ್ಡ್ ರೀಗನ್ರವರ ನೇತೃತ್ವದಲ್ಲಿ ಕಾರುಗಳು ಮೆರವಣಿಗೆಯ ಮೂಲಕ ಸೇತುವೆಯನ್ನು ದಾಟಿದವು. ಬಂದರಿಗೆ ಬಂದಿದ್ದ ಹಡಗುಗಳ ಸಣ್ಣ ಸಮೂಹದ ಮೆರವಣಿಗೆ ನಡೆಯಿತು. ಅಲ್ಲದೇ ಗ್ರೂಸಿ ಕಂಪನಿಯ ಸುಡುಮದ್ದುಗಳ ಮೂಲಕ ಸಾಯಂಕಾಲ ಸೇತುವೆಯ ಮೇಲಣ ಆಕಾಶವನ್ನು ಬೆಳಗಿಸಲಾಯಿತು.[೪೦] ಬ್ರೂಕ್ಲಿನ್ ವಸ್ತುಸಂಗ್ರಾಹಲಯ,ಸೇತುವೆಯ ನಿರ್ಮಾಣಕ್ಕಾಗಿ ವಾಷಿಂಗ್ಟನ್ ರಾಬ್ಲಿಂಗ್, ರವರು ಖುದ್ದಾಗಿ ಚಿತ್ರಿಸಿದ ಮೂಲ ನಕ್ಷಾ-ಚಿತ್ರಗಳನ್ನು ಪ್ರದರ್ಶಿಸಿತು.

೧೨೫ನೇ ವಾರ್ಷಿಕೋತ್ಸವದ ಆಚರಣೆಗಳು[ಬದಲಾಯಿಸಿ]

ಬ್ರೂಕ್ಲಿನ್ ಸೇತುವೆ ಉದ್ಘಾಟನೆಯ ೧೨೫ ನೇ ವಾರ್ಷಿಕೋತ್ಸವವನ್ನು ೨೦೦೮ ರ ಮೇ ೨೨ ರಂದು ಪ್ರಾರಂಭಿಸಿ ಐದು ದಿನಗಳ ಕಾಲ ಆಚರಿಸಲಾಯಿತು. ಈ ಸಮಾರಂಭದಲ್ಲಿ ಬ್ರೂಕ್ಲಿನ್ ಫಿಲ್ ಹ್ಯಾರ್ಮೊನಿಕ್ ಎಂಬ ಆರ್ಕೇಸ್ಟ್ರಾ ಎಂಪೈರ್–ಫುಲ್ಟನ್ ಫೆರಿ ಸ್ಟೇಟ್ ಪಾರ್ಕ್ ನಲ್ಲಿ ನೇರ ಪ್ರದರ್ಶನ ನೀಡಿತು. ಇದರ ಜೊತೆಯಲ್ಲಿ ಸೇತುವೆಯ ಗೋಪುರವನ್ನು ಬೆಳಕಿನಿಂದ ಕಂಗೊಳಿಸುವಂತೆ ಮಾಡಲಾಗಿತ್ತು, ಹಾಗು ಸುಡುಮದ್ದುಗಳ ಪ್ರದರ್ಶನಗಳಿದ್ದವು.[೪೧] ೧೨೫ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇತರ ಆಚರಣೆಗಳೂ ಇದ್ದವು. ಆಕಸ್ಮಿಕವಾಗಿ ಆ ಸಮಯದಲ್ಲಿ ಸ್ಮಾರಕ ದಿನದ ಆಚರಣೆಯೂ ಇತ್ತು, ಈ ವೇಳೆ ನಡೆದ ಇತರ ಕಾರ್ಯಕ್ರಮಗಳು ಈ ಕೆಳಕಂಡತಿವೆ: ಚಲನಚಿತ್ರ ಸರಣಿಗಳು,ಐತಿಹಾಸಿಕ ಪಾದಯಾತ್ರೆಗಳು, ಮಾಹಿತಿ ಒದಗಿಸುವ ತಾತ್ಕಾಲಿಕ ತಂಗುದಾಣಗಳು, ಉಪನ್ಯಾಸಗಳ ಮತ್ತು ವಾಚನಗಳ ಸರಣಿಗಳು , ಬ್ರೂಕ್ಲಿನ್ ನ ಬೈಸಿಕಲ್ಲು ಪ್ರವಾಸ, ಬ್ರೂಕ್ಲಿನ್ ನ ಪ್ರತಿಕೃತಿ ಒಳಗೊಂಡ ವರ್ಣರಂಜಿತ ಗಾಲ್ಫ್ ಮೈದಾನ, ಹಾಗು ಇತರ ಸಂಗೀತ ಮತ್ತು ನೃತ್ಯ ಪ್ರದರ್ಶನಗಳು.[೪೨]

ವಾರ್ಷಿಕೋತ್ಸವದ ಆಚರಣೆಯ ಸ್ವಲ್ಪ ಸಮಯದ ಮೊದಲು ಟೆಲಿ ಎಲೆಕ್ಟ್ರೋಸ್ಕೋಪ್ ಅನ್ನು ಸೇತುವೆಯ ಬ್ರೂಕ್ಲಿನ್ ಭಾಗದ ಬದಿಯಲ್ಲಿ ಅಳವಡಿಸಲಾಯಿತು. ಇದು ನ್ಯೂಯಾರ್ಕ್ ಮತ್ತು ಲಂಡನ್ ನಡುವೆ ವಿಡಿಯೋ ಲಿಂಕ್ ಅನ್ನು ಸೃಷ್ಟಿಸುತ್ತಿತ್ತು. ಈ ಇನ್ ಸ್ಟಾಲೇಷನ್ ಆರ್ಟ್ (ಆಚರಣೆಯ ವ್ಯವಸ್ಥೆ ಕಲೆ)ಕೆಲವು ವಾರಗಳ ವರೆಗಿತ್ತು. ಅಲ್ಲದೇ ನ್ಯೂಯಾರ್ಕ್ ನಲ್ಲಿನ ವೀಕ್ಷಕರಿಗೆ ಲಂಡನ್ ನ ಟವರ್ ಬ್ರಿಜ್ (ಗೋಪುರ ಸೇತುವೆ)ಎದುರು ಜನರೊಂದಿಗೆ ಮ್ಯಾಚಿಂಗ್ ಟೆಲಿಸ್ಕೋಪ್ ಅನ್ನು ವೀಕ್ಷಿಸಲೂ ಅವಕಾಶ ನೀಡಲಾಗಿತ್ತು.[೪೩] DUMBO ಗೆ ಸೇರುವ ಹೊಸದಾಗಿ ನವೀಕರಿಸಲಾದ, ಪಾದಚಾರಿ ಮಾರ್ಗ ಬೀದಿಯ ಬಗೆಗಿನ ವಾರ್ಷಿಕೋತ್ಸವ ಆಚರಣೆಯ ವಿಷಯವನ್ನು ಮೊದಲೇ ತಿಳಿಸಲಾಗಿತ್ತು.[೪೪]

ಸಾಂಸ್ಕೃತಿಕ ಅರ್ಥಪೂರ್ಣತೆಯ ಮಹತ್ವ[ಬದಲಾಯಿಸಿ]

ಸಮಕಾಲೀನರು ಇದಕ್ಕೆ ತಕ್ಕುದಾದ ತಂತ್ರಜ್ಞಾನ ಯಾವುದೆಂಬುದರ ಬಗೆಗೆ,ಹಾಗು ಸೇತುವೆ ಆ ಕಾಲದ ಆಶಾದಾಯಕ ಸಂಕೇತವಾಗಿರುವುದಕ್ಕೆ ಬೆರಗುಪಟ್ಟಿದ್ದಾರೆ. ಜಾನ್ ಪೆರ್ರಿ ಬ್ಯಾರ್ಲೊ ರವರು ೨೦ ನೇ ಶತಮಾನದ ಉತ್ತರಾರ್ಧದಲ್ಲಿ "ಬ್ರೂಕ್ಲಿನ್ ಸೇತುವೆಯ ಬಗ್ಗೆ ಇದ್ದ ಅಕ್ಷರಶಃ ಮತ್ತು ನಿಜವಾದ ಧಾರ್ಮಿಕ ಗಡಿಯಾಚೆಗಿನ ನಂಬಿಕೆ"...ಯನ್ನು ಕುರಿತು; "ಬ್ರೂಕ್ಲಿನ್ ಸೇತುವೆಗೆ ತಂತ್ರಜ್ಞಾನ ನಿಯಂತ್ರಿಸುವ ಸಾಮರ್ಥ್ಯದ ಬಗ್ಗೆ ಅದರ ನಿರ್ಮಾಣಕಾರರು ಹೊಂದಿರುವ ನಂಬಿಕೆಯ ಅಗತ್ಯವಿದ್ದುದನ್ನು" ಅವರು ಬರೆದಿದ್ದಾರೆ.[೪೫]

ಅಮೇರಿಕನ್ ಸಂಸ್ಕೃತಿಯ ಸಮೃದ್ಧಿ ತುಂಬಿತುಳುಕುತ್ತಿರುವ "ಬ್ರೂಕ್ಲಿನ್ ಸೇತುವೆಯ ಮಾರಾಟ"ದ ಬಗ್ಗೆಯೂ ಉಲ್ಲೇಖಗಳಿವೆ. ಕೆಲವೊಮ್ಮೆ ಗ್ರಾಮೀಣರು ಸುಲಭವಾಗಿ ಬೆಪ್ಪಾಗಿ ಹೋಗಿರುವಂತಹ ಉದಾಹರಣೆಗಳಿವೆ. ಆದರೆ ಸರಿಯಾಗಿ ವಿಚಾರಿಸದೇ ಮುಗ್ದ ಶೃದ್ದೆಗೆ ಒಳಗಾಗಿರುವ ಸಾಧ್ಯತೆಗಳೂ ಹೆಚ್ಚಿವೆ. ಉದಾಹರಣೆಗೆ, "ನಿಮಗೆ ಮಾರಾಟ ಮಾಡಲು ನನ್ನ ಬಳಿ ಸೇತುವೆ ಇದೆ ಎಂದು ನೀವು that (ಅದನ್ನು) ನಂಬಿದರೆ."[ಸೂಕ್ತ ಉಲ್ಲೇಖನ ಬೇಕು] ಇತ್ತೀಚಿನ ದಿನಗಳಲ್ಲಿ ಉಲ್ಲೇಖಗಳು ಹೆಚ್ಚಾಗಿ ಪರೋಕ್ಷವಾಗಿರುತ್ತವೆ. ಉದಾಹರಣೆಗೆ,"ನಾನು ಬ್ರೂಕ್ಲಿನ್ ನಲ್ಲಿರುವ ಕೆಲ ಸುಂದರ-ಸೊಗಸಾದ ನದೀ ತೀರದ ಜಾಗವನ್ನು ಮಾರಬಲ್ಲೆ...".[ಸೂಕ್ತ ಉಲ್ಲೇಖನ ಬೇಕು] ಎಂಬುದೂ ಸೇರಿದೆ. ಜಾರ್ಜ್ ಸಿ. ಪಾರ್ಕರ್ ಮತ್ತು ವಿಲಿಯಂ ಮ್ಯಾಕ್ ಕ್ಲೌಂಡಿ , ಎಂಬುವವರು ೨೦ನೇ ಶತಮಾನದ ಪೂರ್ವಾರ್ಧದಲ್ಲಿದ್ದ ಅತ್ಯಂತ ಧೈರ್ಯದ ವಂಚಕರೆನಿಸಿದ್ದರು, ಅರಿಯದ ಪ್ರವಾಸಿಗರಿಗೆ (ಹೇಳಲಾದಂತೆ) ಯಶಸ್ವಿಯಾಗಿ ಮೋಸದ ಬಲೆಗೆ ಬೀಳಿಸಿದ್ದರು.[೪೬] ೧೯೪೯ ರ ಬಗ್ಸ್ ಬನ್ನಿವ್ಯಂಗ್ಯಚಿತ್ರ ಬೌರಿ ಬಗ್ಸ್ , ಒಂದು ವಿಡಂಬನೆಯ ಉದಾಹರಣೆಯಾಗಿದ್ದು, ಇದು ಒಂದು ಬಗ್ಸ್ ಬ್ರೂಕ್ಲಿನ್ ಸೇತುವೆಯನ್ನು ಅದನ್ನು ವೀಕ್ಷಿಸಲು ಬಂದ ಮುಗ್ದ ಪ್ರವಾಸಿಗನಿಗೆ "ಮಾರುವ" ಕಥೆಯನ್ನು ಒಳಗೊಂಡಿದೆ.

ಹಾರ್ಟ್ ಕ್ರೇನ್, ಆತನ ದಿ ಬ್ರಿಡ್ಜ್ ಎಂಬ ಎರಡನೆಯ ಪುಸ್ತಕದಲ್ಲಿ, "ಪ್ರೋಯೆಮ್: ಟು ಬ್ರೂಕ್ಲಿನ್ ಬ್ರಿಡ್ಜ್" ಎಂಬ ಶೀರ್ಷಿಕೆಯಡಿಯಲ್ಲಿ ಪದ್ಯಯೊಂದರಿಂದ ಪುಸ್ತಕ ಬರಹ ಪ್ರಾರಂಭಿಸಿದ್ದಾನೆ. ಕ್ರೇನ್ ನ ಪಾಲಿಗೆ ಸೇತುವೆ ಸ್ಪೂರ್ತಿಯ ಸೆಲೆಯಿದ್ದಂತೆ. ಅಲ್ಲದೇ ಸೇತುವೆಯ ವಿಭಿನ್ನ ದೃಷ್ಟಿಕೋನಗಳನ್ನು ನಿರ್ದಿಷ್ಟವಾಗಿ ಪಡೆಯಲು ಆತ ಅನೇಕ ಬಹುಕೊಠಡಿಗಳುಳ್ಳ ಮಹಡಿ ಕಟ್ಟಡಗಳನ್ನು ಕೊಂಡು ಅವುಗಳ ಮುಖಾಂತರ ಸೇತುವೆಯ ವಿವಿಧ ಕೋನಗಳನ್ನು ಅಭ್ಯಸಿಸಿದ.

ಉಲ್ಲೇಖಗಳು[ಬದಲಾಯಿಸಿ]

  1. "NYCDOT Bridges Information". New York City Department of Transportation. Retrieved 2008-08-23.
  2. "New York City Bridge Traffic Volumes 2008" (PDF). New York City Department of Transportation. 2010. p. 63. Retrieved 2010-07-10. {{cite web}}: Unknown parameter |month= ignored (help)
  3. "National Register Information System". National Register of Historic Places. National Park Service. 2007-01-23. Archived from the original on 2008-10-26. Retrieved 2010-11-09.
  4. ೪.೦ ೪.೧ "Brooklyn Bridge". National Historic Landmark summary listing. National Park Service. Archived from the original on 2002-11-28. Retrieved 2010-11-09.
  5. E.P.D. (January 25, 1867). "Bridging the East River – Another Project". The Brooklyn Daily Eagle. p. 2. Retrieved 2007-11-26.
  6. "National Register of Historic Places Inventory-Nomination" (PDF). National Park Service. 1975-02-24. Archived from "The Brooklyn Bridge", February 24, 1975, by James B. Armstrong and S. Sydney Bradford%5d the original on 2007-11-27. Retrieved 2010-11-09. {{cite web}}: Check |url= value (help)
  7. "National Register of Historic Places Inventory-Nomination" (PDF). National Park Service. 1975-02-24. Archived from The Brooklyn Bridge—Accompanying three photos, from 1975.%5d the original on 2007-11-27. Retrieved 2010-11-09. {{cite web}}: Check |url= value (help)
  8. "Brooklyn Bridge". ASCE Metropolitan Section. Archived from the original on 2009-06-01. Retrieved 2010-06-30.
  9. "THE BUILDING OF THE BRIDGE.; ITS COST AND THE DIFFICULTIES MET WITH-- DETAILS OF THE HISTORY OF A GREAT ENGINEERING TRIUMPH". The New York Times. May 24, 1883. Retrieved 2009-10-27.
  10. Butler WP (2004). "Caisson disease during the construction of the Eads and Brooklyn Bridges: A review". Undersea Hyperb Med. 31 (4): 445–59. PMID 15686275. Archived from the original on 2011-08-22. Retrieved 2008-06-19.
  11. Smith, Andrew Heermance (1886). The Physiological, Pathological and Therapeutical Effects of Compressed Air. Detroit: George S. Davis. Retrieved 2009-04-17.
  12. Acott, Chris (1999). "A brief history of diving and decompression illness". South Pacific Underwater Medicine Society journal. 29 (2). ISSN 0813-1988. OCLC 16986801. Archived from the original on 2011-09-05. Retrieved 2009-04-17.
  13. ೧೩.೦ ೧೩.೧ Amazon.com: ದಿ ಗ್ರೇಟ್ ಬ್ರಿಡ್ಜ್: ದಿ ಎಪಿಕ್ ಸ್ಟೋರಿ ಆಫ್ ದಿ ಬಿಲ್ಡಿಂಗ್ ಆಫ್ ದಿ ಬ್ರೂಕ್ಲಿನ್ ಬ್ರಿಡ್ಜ್ : ಜೆ'ಅಯ್ಮ್ ಡ್ರಿಸ್ ಡೆಲ್:ಬುಕ್ಸ್
  14. Weigold, Marilyn (1984). Silent Builder: Emily Warren Roebling and the Brooklyn Bridge. Associated Faculty Press.
  15. McCullough, David (1983). The Great Bridge: The Epic Story of the Building of the Brooklyn Bridge. New York: Simon & Schuster. p. 421.
  16. "Emily Warren Roebling". American Society of Civil Engineers. Archived from the original on 2010-05-28. Retrieved 2010-06-30.
  17. "GlassSteelandStone: Brooklyn Bridge-tower rests on sand". Archived from the original on 2006-10-16. Retrieved 2007-02-20.
  18. Reeves, Thomas C. (1975). Gentleman Boss. New York: Alfred A. Knopf. pp. 359–360. ISBN 0-394-46095-2. {{cite book}}: Cite has empty unknown parameter: |coauthors= (help)
  19. "Brooklyn Daily Eagle 1841–1902 Online". Archived from the original on 2007-11-14. Retrieved 2007-11-23.
  20. "Dead on the New Bridge; Fatal Crush at the Western Approach". The New York Times. May 31, 1883. Retrieved 2010-02-20.
  21. Bildner, Phil (2004). Twenty-One Elephants. New York: Simon & Schuster. ISBN 0689870116.
  22. Prince, April Jones (2005). Twenty-One Elephants and Still Standing. Boston: Houghton Mifflin. ISBN 061844887X.
  23. "P.T. Barnum – MSN Encarta". Archived from the original on 2009-10-31. Retrieved 2010-11-09. {{cite web}}: Unknown parameter |deadurl= ignored (help)
  24. Strausbaugh, John (November 9, 2007). "When Barnum Took Manhattan". The New York Times. Retrieved 2008-09-21.
  25. Gary Buiso, New York Post (May 25, 2010). "A True Cover Up. Brooklyn Bridge Paint Job Glosses over History". Retrieved October 23, 2010.
  26. Chan, Sewell (August 2, 2007). "Brooklyn Bridge Is One of 3 With Poor Rating". The New York Times. Retrieved 2007-09-10.
  27. "Brooklyn Bridge called 'safe' – DOT says span is okay despite getting a 'poor' rating". Courier-Life Publications. Archived from the original on 2008-03-16. Retrieved 2007-08-12.
  28. Burns, Ken. "Why I Decided to Make Brooklyn Bridge". Public Broadcasting Service. Retrieved 2010-02-20.
  29. "Burns, Ken – U.S. Documentary Film Maker". The Museum of Broadcast Communications. Archived from the original on 2011-06-29. Retrieved 2010-02-20.
  30. Quindlen, Anna (April 2, 1980). "Koch Faces Day Ebulliently; He Looks Well Rested". The New York Times. Retrieved 2010-06-30.
  31. Rutenberg, Jim (December 21, 2005). "On Foot, on Bridge and at City Hall, Bloomberg Is Irate". The New York Times. Retrieved 2010-06-30.
  32. ೩೨.೦ ೩೨.೧ Julavits, Robert (August 26, 2003). "Point of Collapse". The Village Voice. Archived from the original on 2010-10-17. Retrieved 2010-02-20.
  33. Steven Henry, Strogatz (2003). Sync: The Emerging Science of Spontaneous Order. New York: Hyperion. pp. 174–175, 312, 320. ISBN 0786868449.
  34. "Odlum's Leap to Death". The New York Times. May 20, 1885. p. 1. Retrieved 2008-04-15.
  35. "Brooklyn Bridge". SunnyDream. Archived from the original on 2010-08-23. Retrieved 2010-06-25.
  36. Sexton, Joe (March 2, 1994). "4 Hasidic Youths Hurt in Brooklyn Bridge Shooting". The New York Times. Retrieved 2010-06-30.
  37. "In Memoriam". Ari Halberstam Memorial Site. Archived from the original on 2021-02-24. Retrieved 2010-06-30.
  38. "Iyman Faris". GlobalSecurity.org. Archived from the original on 2020-04-23. Retrieved 2010-06-30.
  39. Lovgren, Stefan (March 24, 2006). "Cold War "Time Capsule" Found in Brooklyn Bridge". National Geographic. Retrieved 2010-02-20.
  40. NYC Roads. "The Brooklyn Bridge". Retrieved October 23, 2010.
  41. Burke, Kerry; Hutchinson, Bill (May 23, 2008). "Brooklyn Bridge turns 125 with a bang". Daily News. New York. Archived from the original on 2008-09-22. Retrieved 2009-08-01.
  42. "Brooklyn Bridge 125th Anniversary Celebration". ASCE Metropolitan Section. Archived from the original on 2009-01-06. Retrieved 2009-08-01.
  43. Ryzik, Melena (May 21, 2008). "Telescope Takes a Long View, to London". The New York Times. Retrieved 2009-08-01.
  44. Farmer, Ann (May 21, 2008). "This Way to Brooklyn, This Way". The New York Times. Retrieved 2009-08-01.
  45. "ಸಾಂಸ್ಕೃತಿಕ ಮಹತ್ವ". Archived from the original on 2000-10-25. Retrieved 2010-11-09.
  46. Cohen, Gabriel (November 27, 2005). "For You, Half Price". The New York Times. Archived from the original on 2012-02-24. Retrieved 2010-02-20.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • ಕ್ಯಾಡ್ ಬರಿ, ಡೆಬೊರಾ. (೨೦೦೪), ಡ್ರೀಮ್ಸ್ ಆಫ್ ಐರನ್ ಅಂಡ್ ಸ್ಟೀಲ್ . ನ್ಯೂಯಾರ್ಕ್: ಹ್ಯಾರ್ಪರ್ಕಾಲಿನ್ಸ್. ISBN ೦-೭೬೬೦-೨೧೬೭-X.
  • ಹಾ, ರಿಚರ್ಡ್. (೨೦೦೫) ದಿ ಬ್ರೂಕ್ಲಿನ್ ಬ್ರಿಡ್ಜ್  : ಅ ಕಲ್ಚರಲ್ ಹಿಸ್ಟ್ರಿ . ನ್ಯೂ ಬರ್ನ್ಸ್ ವಿಕ್: ರುಟ್ಜರ್ಸ್ ಯುನಿವರ್ಸಿಟಿ ಪ್ರೆಸ್. ISBN ೦-೩೮೫-೪೯೦೬೨-೩
  • ಹಾ, ರಿಚರ್ಡ್. (೨೦೦೮). ಆರ್ಟ್ ಆಫ್ ದಿ ಬ್ರೂಕ್ಲಿನ್ ಬ್ರಿಡ್ಜ್: ಅ ವಿಷ್ಯುಲ್ ಹಿಸ್ಟ್ರಿ . ನ್ಯೂಯಾರ್ಕ್: ರೌಟ್ಲೆಡ್ಜ್. ISBN ೦-೩೮೫-೪೯೦೬೨-೩
  • ಮ್ಯಾಕ್ ಕುಲೊಗ್, ಡೇವಿಡ್. (೧೯೭೨). ದಿ ಗ್ರೇಟ್ ಬ್ರಿಡ್ಜ್ . ನ್ಯೂಯಾರ್ಕ್: ಸಿಮೋನ್ ಅಂಡ್ ಚುಸ್ಟರ್. ISBN ೦-೩೮೫-೪೯೦೬೨-೩
  • ಸ್ಟ್ರಾಗಟ್ಜ್, ಸ್ಟೀವೆನ್. (೨೦೦೩). ಸಿಂಕ್: ದಿ ಎಮರ್ಜಿಂಗ್ ಸೈನ್ಸ್ ಆಫ್ ಸ್ಪಾನ್ಟೇನಿಯಸ್ ಆರ್ಡರ್ . ನ್ಯೂಯಾರ್ಕ್: ಹೈಪರೀಯನ್ ಬುಕ್ಸ್. ೧೦-ISBN ೦-೭೮೬೮-೬೮೪೪-೯; ೧೩-ISBN ೯೭೮-೦-೭೮೬೮-೬೮೪೪-೫ (cloth) [2nd ed., ಹೈಪರೀಯನ್, 2004. 10-ISBN 0-7868-8721-4; 13-ISBN 978-0-7868-8721-7 (ಪೇಪರ್)]
  • ಸ್ಟ್ರಾಗಾರ್ಟ್ಜ್, ಸ್ಟೀವೆನ್, ಡ್ಯಾನಿಯಲ್ M. ಅಬ್ರಾಮ್ಸ್, ಅಲಾನ್ ಮ್ಯಾಕ್ ರೊಬಿ, ಬ್ರುನೊ ಎಕ್ಯಾರ್ಡ್, ಮತ್ತು ಎಡ್ವರ್ಡ್ ಅಟ್ಟೊ. ಅಟ್ ಆಲ್. (೨೦೦೫) "ಥಿಯೋರೆಟಿಕಲ್ ಮೆಕ್ಯಾನಿಕ್ಸ್: ಕ್ರೌಡ್ ಸಿಂಕ್ರನಿ ಆನ್ ದಿ ಮಿಲೇನಿಯಂ ಬ್ರಿಡ್ಜ್," ನೇಚರ್, ಸಂಪುಟ. ೪೩೮, ಪುಟ, ೪೩–೪೪.[javascript:void(0); ಲಿಂಕ್ ಟು ನೇಚರ್ ಆರ್ಟಿಕಲ್][javascript:void(0); ಮಿಲೇನಿಯಂ ಬ್ರಿಡ್ಜ್ ಓಪನಿಂಗ್ ಡೇ ವಿಡಿಯೋ ಇಲ್ಯುಸ್ಟ್ರೇಟಿಂಗ್ "ಕ್ರೌಡ್ ಸಿಂಕ್ರನಿ" ಒಸಿಲೇಷನ್ಸ್]
  • ಟ್ರ್ಯಾಂಚ್ ಟೆನ್ ಬರ್ಗ್, ಅಲ್ಯಾನ್. (೧೯೬೫). ಬ್ರೂಕ್ಲಿನ್ ಸೇತುವೆ : ಫ್ಯಾಕ್ಟ್ ಅಂಡ್ ಸಿಂಬಲ್ . ಶಿಕಾಗೋ: ಯೂನಿವರ್ಸಿಟಿ ಆಫ್ ಚಿಕಾಗೋ ಪ್ರೆಸ್ ISBN ೦೨೨೬೮೧೧೧೫೮ [2nd ed., 1979, ISBN 0-226-81115-8 (ಪೇಪರ್)]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Portal