ವಿಷಯಕ್ಕೆ ಹೋಗು

ವಿ.ಜಿ ಸಿದ್ಧಾರ್ಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿ.ಜಿ ಸಿದ್ದಾರ್ಥ ಕೆಫೆ ಕಾಫಿ ಡೇ ಸಂಸ್ಥಾಪಕ, ಉದ್ಯಮಿ ಕಾಫಿ ಡೇ ಸ್ಥಾಪಕರಾಗಿದ್ದರು .

ಪರಿಚಯ

[ಬದಲಾಯಿಸಿ]
  • ಕಾಫಿ ಕಿಂಗ್ ಸಿದ್ದಾರ್ಥ ಅವರ ಕೆಫೆ ಕಾಫಿ ಡೇಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಕೀರ್ತಿ ವಿಶ್ವ ಭೂಪಟದಲ್ಲಿ ಗುರುತಿಸುವಂತಾಯಿತು. ಹಲವು ದೇಶಗಳಲ್ಲಿ ಕಾಫಿ ಡೇ ಔಟ್ ಲೆಟ್ ತೆರೆದು ಆ ಮೂಲಕ ಚಿಕ್ಕಮಗಳೂರು ಕಾಫಿಯ ಘಮವನ್ನು ಎಲ್ಲೆಡೆ ಪಸರಿಸಿದರು. ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಅಳಿಯ.
  • ಕಡೂರು-ಮಂಗಳೂರು ರಸ್ತೆಯ ಹೊರಭಾಗದಲ್ಲಿ ಬೀನ್ ಕಾಫಿ ಟ್ರೇಡಿಂಗ್ ಕಂಪನಿ ಸ್ಥಾಪಿಸಿದ್ದ ಸಿದ್ದಾರ್ಥ ಹೆಗಡೆ ಅದರ ಮೂಲಕ ಪ್ರಪಂಚಕ್ಕೆ ಬ್ರ್ಯಾಂಡೆಡ್ ಕಾಫಿ ಪರಿಚಯಿಸಿದ್ದರು.[]

ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ್ದು

[ಬದಲಾಯಿಸಿ]
  • ಸಿದ್ದಾರ್ಥ ಹೆಗಡೆ [].

ಸಿದ್ದಾರ್ಥರ ಪತ್ರ

[ಬದಲಾಯಿಸಿ]
  • ಸಿದ್ಧಾರ್ಥ್ ಸಾವಿಗೂ 2 ಮುನ್ನವೇ ತಮ್ಮ ಡೆತ್ ನೋಟ್ ಬರೆದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಮುಂಬೈ ಮೂಲದ ಫೈನಾನ್ಸ್ ಸಂಸ್ಥೆಯಿಂದ ಸಿದ್ಧಾರ್ಥ್ ಸಾವಿರಾರು ಕೋಟಿ ರೂ ಸಾಲ ಪಡೆದು, ಆದೇ ಫೈನಾನ್ಸ್ ಸಂಸ್ಥೆಯಿಂದ ಸಿದ್ಧಾರ್ಥ್ ಕಿರುಕುಳ ಅನುಭವಿಸಿದ್ದರು. ಕಿರುಕುಳ ತಾಳಲಾರದೇ ಸಿದ್ಧಾರ್ಥ್ ಆತ್ಮಹತ್ಯೆಗೆ ಮುಂದಾಗಿದ್ದರು.ಈ ಸಂಬಂಧ ಜುಲೈ 27ರಂದು ಡೆತ್ ನೋಟ್ ಬರೆದಿಟ್ಟಿದ್ದ ಸಿದ್ಧಾರ್ಥ್, ಆ ಪತ್ರದಲ್ಲಿ ಆರ್ಥಿಕ ಒತ್ತಡ ಮತ್ತು ತೆರಿಗೆ ಇಲಾಖೆಯ ಅಧಿಕಾರಿಗಳ ಕಿರುಕುಳದ ಕುರಿತು ಉಲ್ಲೇಖ ಮಾಡಿದ್ದರು. ಅಲ್ಲದೆ ತಮ್ಮ ಸಿಬ್ಬಂದಿಗಳಿಗೆ ನನ್ನಿಂದ ತೊಂದರೆಯಾಗಬಾರದು ಎಂದು ಆಶಿಸಿದ್ದರು.ವ್ಯವಹಾರಿಕವಾಗಿ ನನಗೆ ಸಾಕಷ್ಟು ನಷ್ಟವಾಗಿದೆ. ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಹಾಗೆಂದು ಯಾರಿಗೂ ಮೋಸ ಮಾಡುವ ಉದ್ದೇಶ ನನಗಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಕೆಫೆ ಕಾಫಿ ಡೇ ನಿರ್ದೇಶಕ ಮಂಡಳಿಯ ಸದಸ್ಯರಿಗೆ ಸಿದ್ಧಾರ್ಥ ಜು.27ರಂದು ಪತ್ರ ಬರೆದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.2 ದಿನಗಳ ಹಿಂದೆ ತಮ್ಮ ಕಂಪನಿಯ ನೌಕರರಿಗೆ ಸಿದ್ದಾರ್ಥ್ ಬರೆದಿರುವ ಪತ್ರದಲ್ಲಿ, ಐಟಿಯ ಹಿಂದಿನ ಡಿಜಿ ತಮಗೆ ಅತಿ ಹೆಚ್ಚು ಕಿರುಕುಳ ನೀಡಿದ್ದಾರೆ. 2 ಬಾರಿ ನನ್ನ ಕಂಪನಿಯ ಷೇರುಗಳನ್ನು ಜಪ್ತಿ ಮಾಡಿದರು, ಇದರಿಂದ ನನ್ನ ಮೈಂಡ್ ಟ್ರೀ ಕಂಪನಿಯ ಶೇರು ಮಾರಾಟ ಮಾಡಲು ಸಮಸ್ಯೆಯಾಯಿತು. ಅದಾದ ಬಳಿಕೆ ಕಾಫಿ ಡೇ ಷೇರುಗಳ ಮೇಲೆ ಕಣ್ಣು ಬಿತ್ತು, ಆದಾಯ ತೆರಿಗೆ ಇಲಾಖೆಯಿಂದ ನಿರಂತರವಾಗಿ ನನಗೆ ಕಿರುಕುಳ ನೀಡಲಾಯಿತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.

ವಿಜಿ ಸಿದ್ದಾರ್ಥ ಅವರು ರಾತ್ರಿ ಮಂಗಳೂರಿನ ಸೇತುವೆಯೊಂದರ ಬಳಿ ಜುಲೈ 30 ರಂದು ನಾಪತ್ತೆಯಾಗಿದ್ದರು. ಜುಲೈ 31 ರ ಬೆಳಗ್ಗೆ ಸಿದ್ದಾರ್ಥ ಅವರ ಮೃತದೇಹ ಪತ್ತೆಯಾಗಿತ್ತು. .[] ಅಂತ್ಯ ಸಂಸ್ಕಾರ ಚಿಕ್ಕಮಗಳೂರಿನ ಚಟ್ಟನಹಳ್ಳಿಯಲ್ಲಿ ನೆರವೇರಿತು.ವಿಜಿ ಸಿದ್ದಾರ್ಥ ಅವರ ಚಿತೆಗೆ ಪುತ್ರರು ಅಗ್ನಿ ಸ್ಪರ್ಶ ಮಾಡಿದರು. ಒಕ್ಕಲಿಗ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಹೆಚ್ಚಿನ ಮಾಹಿತಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]