ರೇಖಿ
Reiki | |||||||||||||
---|---|---|---|---|---|---|---|---|---|---|---|---|---|
ಚೀನೀ ಹೆಸರು | |||||||||||||
ಸಾಂಪ್ರದಾಯಿಕ ಚೀನೀ | 靈氣 | ||||||||||||
ಸರಳೀಕಸರಿಸಿದ ಚೀನೀ | 灵气 | ||||||||||||
| |||||||||||||
ಜಪಾನೀ ಹೆಸರು | |||||||||||||
ಹಿರಗನ | れいき | ||||||||||||
Kyūjitai | 靈氣 | ||||||||||||
ಶಿಂಜಿತಾಯ್ | 霊気 | ||||||||||||
| |||||||||||||
Korean name | |||||||||||||
Hangul | 영기 | ||||||||||||
Hanja | 靈氣 | ||||||||||||
| |||||||||||||
Vietnamese name | |||||||||||||
Quốc ngữ | linh khí |
Reiki (霊気?, English pronunciation: /ˈreɪkiː/)ಎಂಬುದು ಆಧ್ಯಾತ್ಮಿಕ ಅಭ್ಯಾಸ[೧] ವಾಗಿದ್ದು, ಇದನ್ನು ೧೯೨೨ರಲ್ಲಿ ಜಪಾನಿನ ಬೌದ್ಧ ಮತೀಯ ಮಿಕಾವೊ ಉಸುಯಿ ಅಭಿವೃದ್ಧಿಪಡಿಸಿದರು. ಇದು ಸಾಮಾನ್ಯವಾಗಿ ಪಾಮ್ ಹೀಲಿಂಗ್ ಎಂದು ಕರೆಯಲ್ಪಡುವ ವಿಧಾನವನ್ನು ಪೂರಕ ಮತ್ತು ಪರ್ಯಾಯ ಚಿಕಿತ್ಸೆಯ ರೂಪದಲ್ಲಿ ಬಳಸುತ್ತದೆ ಹಾಗು ಕೆಲ ವೃತ್ತಿಪರರು ಇದನ್ನು ಕೆಲವೊಮ್ಮೆ ಪೌರಸ್ತ್ಯ ಚಿಕಿತ್ಸೆ ಎಂದು ವರ್ಗೀಕರಿಸುತ್ತಾರೆ.[೨] ಈ ವಿಧಾನದ ಮೂಲಕ ವೈದ್ಯರು, ಗುಣಪಡಿಸುವ ಶಕ್ತಿಯನ್ನು ಕೀ ನ ರೂಪದಲ್ಲಿ ಅಂಗೈ ಮೂಲಕ ವರ್ಗಾವಣೆ ಮಾಡುತ್ತಾರೆ.[೩]
ರೇಖಿಯ ಎರಡು ಪ್ರಮುಖ ಶಾಖೆಗಳನ್ನು ಸಾಮಾನ್ಯವಾಗಿ ಸಾಂಪ್ರದಾಯಿಕ ಜಪಾನೀಸ್ ರೇಖಿ ಮತ್ತು ಪಾಶ್ಚಿಮಾತ್ಯ ರೇಖಿ ಎಂದು ಸೂಚಿಸಲಾಗುತ್ತದೆ. ರೇಖಿಯ ಸಾಂಪ್ರದಾಯಿಕ ಮತ್ತು ಪಾಶ್ಚಿಮಾತ್ಯ ರೂಪಗಳಲ್ಲಿ, ಮೂರು ರೀತಿಯ ಶೈಕ್ಷಣಿಕ ಹಂತಗಳಿವೆ.ಇವುಗಳನ್ನು ಸಾಮಾನ್ಯವಾಗಿ ಮೊದಲನೆಯದು,ಎರಡನೆಯದು ಮತ್ತು ತಜ್ಞ/ಶಿಕ್ಷಕ ಹಂತ ಎಂದು ಕರೆಯಲಾಗುತ್ತದೆ. ರೇಖಿ ವೈದ್ಯರು ಮತ್ತು ತಜ್ಞರ ಪ್ರಕಾರ, ಮೊದಲ ಹಂತದ ಪದವಿಯಲ್ಲಿ, ರೇಖಿಯನ್ನು ಅಭ್ಯಸಿಸುವವರು ಸ್ವತಃ ತಮ್ಮನ್ನು ಹಾಗು ಇತರರನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಎರಡನೆಯ ಪದವಿ ಹಂತದಲ್ಲಿ ವೈದ್ಯರು ವಿಶಿಷ್ಟ ಸಂಕೇತಗಳನ್ನು ಬಳಸಿಕೊಂಡು ದೂರದಿಂದಲೆ(ಸಾಮಾನ್ಯವಾಗಿದೂರ ಚಿಕಿತ್ಸೆ ) ಇತರರನ್ನು ಗುಣಪಡಿಸಬಲ್ಲರು. ಶಿಕ್ಷಕ ಹಂತದಲ್ಲಿ (ನಿರ್ದಿಷ್ಟವಾಗಿ ತಜ್ಞ/ಶಿಕ್ಷಕ ಹಂತ) ಅವರು ರೇಖಿಯನ್ನು ಇತರರಿಗೆ ಬೋಧಿಸಬಲ್ಲವರಾಗಿರುತ್ತಾರೆ ಹಾಗು ರೇಖಿಯನ್ನು ಇತರರಿಗೆ ಕಲಿಯಲು ಅನುವು ಮಾಡಿಕೊಡುತ್ತಾರೆ.
೨೦೦೮ರಲ್ಲಿ ನಡೆಸಲಾದ ಯಾದೃಚ್ಛೀಕರಿಸಲಾದ ಪ್ರಾಯೋಗಿಕ ಪರೀಕ್ಷೆಗಳ [೪] ಒಂದು ಕ್ರಮಬದ್ಧ ವಿಮರ್ಶೆ ಕೆಳಕಂಡಂತೆ ತಿಳಿಸಿದೆ: "..ಅಧ್ಯಯನ ನಡೆಸಲಾದಂತಹ ಸ್ಥಿತಿಗಳನ್ನು(ಖಿನ್ನತೆ, ನೋವು ಹಾಗು ಆತಂಕ, ಹಾಗು ಇತರೆ) ಆಧಾರವಾಗಿಟ್ಟುಕೊಂಡು ರೇಖಿಯು ಒಂದು ಪರಿಣಾಮಕಾರಿ ಚಿಕಿತ್ಸೆಯೆಂದು ಸೂಚಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ.."
ಇತಿಹಾಸ
[ಬದಲಾಯಿಸಿ]ಹೆಸರಿನ ನಿಷ್ಪತ್ತಿ
[ಬದಲಾಯಿಸಿ]ಇಂಗ್ಲೀಷ್ ಪದವಾದ ರೇಖಿ , "ಪರ್ಯಾಯ ಚಿಕಿತ್ಸಾ ವಿಧಾನ" ಎಂಬ ಅರ್ಥವನ್ನು ನೀಡುತ್ತದೆ, ಇದನ್ನು ಜಪಾನಿ ಸ್ವೀಕೃತ ಪದ ರೇಖಿ 霊気ಯಿಂದ ತೆಗೆದುಕೊಳ್ಳಲಾಗಿದೆ, ಇದು "ನಿಗೂಢ ವಾತಾವರಣ ಅಥವಾ ಭಾವನೆ" ಎಂಬ ಅರ್ಥವನ್ನು ನೀಡುತ್ತದೆ, ಇದು ಚೈನೀಸ್ ಸ್ವೀಕೃತ ಪದ ಲಿಂಗ್ಕಿ 靈氣ಯಿಂದ ಜನ್ಯವಾಗಿದೆ, ಇದರರ್ಥ "ಆಧ್ಯಾತ್ಮಿಕ ವಾತಾವರಣ; ಬುದ್ಧಿವಂತಿಕೆ". ಈ ಪದಕ್ಕೆ ಆಕ್ಸ್ಫರ್ಡ್ ಆಂಗ್ಲ ನಿಘಂಟಿನಲ್ಲಿ ಸಮಗ್ರವಾಗಿ ಅರ್ಥ ನಿರೂಪಿಸಲಾಗಿದೆ.
ರೇಖಿ , ನಾಮಪದ. ಪರ್ಯಾಯ ಚಿಕಿತ್ಸೆ. ಬ್ರಿಟ್. /ˈreɪki/, U.S. /ˈreɪki/. ರೂಪಗಳು: ದೊಡ್ದಕ್ಷರದ ಆದ್ಯಕ್ಷರದೊಂದಿಗೂ ಸಹಿತ.
[‹ಜಪಾನೀಸ್ ರೇಖಿ , ಸಾಮಾನ್ಯವಾಗಿ 'ನಿಗೂಢ ವಾತಾವರಣ, ಆಶ್ಚರ್ಯಕರ ಸಂಕೇತ' ಎಂಬ ಅರ್ಥ ನೀಡುವ ವಿಶೇಷ ಪದ(1001; ಚೈನೀಸ್ ಲಿಂಗ್ಕಿ ಗೆ ಹೋಲಿಕೆ ಆಧ್ಯಾತ್ಮಿಕ ವಾತಾವರಣ)‹ ರೇಯಿ ಚೇತನ, ಅಮೂರ್ತ ಚೇತನ(< ಮಧ್ಯ ಚೈನೀಸ್) + ಕಿ ಜೀವಾಧಾರಕ ಶಕ್ತಿ (< ಚೈನೀಸ್ ಕಿ ಚಿ ಯ ಮಧ್ಯ ಚೈನೀಸ್ ಆಧಾರ ನಾಮಪದ 2).]
ಆಧ್ಯಾತ್ಮಿಕ ಜೀವನ ಶಕ್ತಿ, ಅಥವಾ ಜೀವಾಧಾರಕ ಆಧ್ಯಾತ್ಮಿಕ ಶಕ್ತಿ, ಇದು ಎಲ್ಲ ಜೀವಿಗಳಲ್ಲಿ ಸ್ವಭಾವಗತವಾಗಿರುತ್ತವೆಂದು ಹೇಳಲಾಗುತ್ತದೆ (cf. ಚಿ ನಾಮಪದ.೨). ಪರಿಣಾಮವಾಗಿ: ಸ್ಪಷ್ಟವಾಗಿ ಪುರಾತನ ಟಿಬೇಟಿಯನ್ ಬೌದ್ಧಧರ್ಮದ ವಿಧಾನವನ್ನು ಆಧಾರಿಸಿದ ಒಂದು ಚಿಕಿತ್ಸೆಯನ್ನು, ಜಪಾನಿನಲ್ಲಿ ೧೯ನೇ ಶತಮಾನದ ನಂತರ ಭಾಗದಲ್ಲಿ ಅಥವಾ ೨೦ನೇ ಶತಮಾನದ ಆರಂಭದಲ್ಲಿ ಡಾ. ಮಿಕಾವೋ ಉಸುಯಿ(೧೮೬೫–೧೯೨೬) ಅಭಿವೃದ್ಧಿಪಡಿಸಿದರು, ಈ ವಿಧಾನದಲ್ಲಿ ಚಿಕಿತ್ಸಕರು ಈ ಶಕ್ತಿಯನ್ನು ಆತನಿಂದ- ಅಥವಾ ಆಕೆಯಿಂದ ರೋಗಿಗೆ ಕೈಗಳ ಮೇಲೆ ತಮ್ಮ ಕೈಯನ್ನು ಮೃದುವಾಗಿ ಇರಿಸುವ ಮೂಲಕ ವರ್ಗಾಯಿಸುತ್ತಾರೆ, ಇದರಿಂದ ರೋಗಿಯ ದೇಹದ ಸ್ವಾಭಾವಿಕ ರಕ್ಷಣಾ ಪ್ರಕ್ರಿಯೆಯು ಚುರುಕುಗೊಳ್ಳುವುದರ ಜೊತೆಗೆ ಶಾರೀರಿಕ ಹಾಗು ಭಾವನಾತ್ಮಕವಾಗಿ ಆರೋಗ್ಯ ಸ್ಥಿತಿಯು ಮೊದಲಿನಂತಾಗುತ್ತದೆ.[೫]
OED ಪಟ್ಟಿಯ ಪ್ರಕಾರ 1975ರಲ್ಲಿ ಮೊದಲ ಬಾರಿಗೆ ರೇಖಿ ಎಂಬ ಪದವನ್ನು ಬಳಸಲಾಯಿತೆಂದು ದಾಖಲಿಸಲಾಗಿದೆ.[೬] ಸಾಮಾನ್ಯ ಲಿಪ್ಯಂತರಣಕ್ಕೆ ಬದಲಾಗಿ, ಕೆಲ ಆಂಗ್ಲ-ಭಾಷಾ ಲೇಖಕರು, ರೇಖಿಯನ್ನು "ಸಾರ್ವತ್ರಿಕ ಜೀವನಾಧಾರ ಶಕ್ತಿಯೆಂದು" ಸಡಿಲವಾಗಿ ತರ್ಜುಮೆ ಮಾಡುತ್ತಾರೆ,[೭] ಇದು ಜಪಾನೀಸ್ ಭಾಷೆಯ ಅರ್ಥಕ್ಕಿಂತ ಭಿನ್ನವಾಗಿರುತ್ತದೆ. "ನಿಗೂಢ ವಾತಾವರಣ" ಎಂಬ ಅರ್ಥವನ್ನು ನೀಡುವ ಜಪಾನೀಸ್ರೇಖಿ ಪದವನ್ನು ಶಿಂಜಿತೈ ಕಾಂಜಿನಲ್ಲಿ (ಹೊಸ ಚೈನೀಸ್ ಅಕ್ಷರ ರೂಪಗಳು) 霊気 ಅಥವಾ レイキ ಎಂದು ಕತಕಾನ ಮಾತ್ರಾಕ್ಷರಮಾಲೆಯಲ್ಲಿ(ಮಾದರಿಯಾಗಿ ವಿದೇಶಿ ಪದಗಳನ್ನು ಲಿಪ್ಯಂತರಿಸಲು ಬಳಸಲಾಗುತ್ತದೆ) ಬರೆಯಲಾಗುತ್ತದೆ. ಇದು "ಅಳಿದ ಚೇತನ, ಆತ್ಮ; ಅಮೂರ್ತ ಚೇತನ, ಚೈತನ್ಯ; ನಿಗೂಢತೆ, ಪವಿತ್ರವಾದ, ದೈವಿಕ" ಎಂಬ ಅರ್ಥವನ್ನು ನೀಡುವ ರೇಯಿ 霊 ಹಾಗು "ಅನಿಲ, ಆವಿ; ವಾತಾವರಣ; ಜೀವಾಧಾರಕ ಶಕ್ತಿ, ಚೈತನ್ಯ, ಜೀವನಕ್ಕೆ ಉಸಿರು, ಜೀವಶಕ್ತಿ; ಶಕ್ತಿ, ಬಲ; ಸ್ವಾಭಾವಿಕ ವಿದ್ಯಮಾನ; ಚೇತನ, ಮನಸ್ಸು, ಜಾಗೃತಿ..."[೮] ಎಂಬ ಅರ್ಥವನ್ನು ನೀಡುವ ಕಿ 気ಎಂಬ ಪದಗಳನ್ನು ಸಂಯೋಗಿಸುತ್ತದೆ. ಈ ಕಿಯನ್ನು(ಅಂದರೆ, ಚೈನೀಸ್ ಕಿ ಅಥವಾ ಚಿ)ರೇಖಿ ಯಲ್ಲಿ "ಆಧ್ಯಾತ್ಮಿಕ ಶಕ್ತಿ[[; ಜೀವಧಾರಕ ಶಕ್ತಿ; ಜೀವಶಕ್ತಿ; ಜೀವನದ ಶಕ್ತಿ" ಎಂದು ಪರಿಗಣಿಸಲಾಗುತ್ತದೆ.[೯]]] ಜಪಾನೀಸ್-ಆಂಗ್ಲ ನಿಘಂಟುಗಳಲ್ಲಿ ಕಂಡುಬರುವ ರೇಖಿ ಪದದ ಕೆಲ ಸಮಾನಾಂತರ ತರ್ಜುಮೆಗಳೆಂದರೆ:"ನಿಗೂಢ ಭಾವ",[೧೦]"ನಿಗೂಢತೆಯ ವಾತಾವರಣ(ಭಾವನೆ)",[೧೧] ಹಾಗು "ಒಂದು ಅಲೌಕಿಕ ವಾತಾವರಣ(ಇದನ್ನು ದೇವಾಲಯದ ಪವಿತ್ರ ಪ್ರಾಕಾರದಲ್ಲಿ ಅನುಭವಿಸಬಹುದು);(ಅನುಭವಿಸುವುದು, ಇಂದ್ರೀಯ ಶಕ್ತಿ) ಒಂದು ಆಧ್ಯಾತ್ಮಿಕ(ದೈವಿಕ)ಉಪಸ್ಥಿತಿ."[೧೨] ಸಾಮಾನ್ಯವಾಗಿ ರೇಖಿ ಪದಕ್ಕಿರುವ ಸಿನೋ-ಜಪಾನೀಸ್ ಉಚ್ಚಾರಣೆಯ ಜೊತೆಯಲ್ಲಿ, ಈ ಕಾಂಜಿ 霊気 ಪರ್ಯಾಯ ಜಪಾನೀಸ್ ಅರ್ಥವಿವರಣೆಯನ್ನು ಹೊಂದಿದೆ,ರಯೋಗೆ , ಅರ್ಥ "ರಾಕ್ಷಸ; ಪ್ರೇತ"(ಅದರಲ್ಲೂ ವಿಶೇಷವಾಗಿ ಅಲೌಕಿಕ ಜೀವಿಯ ಸ್ವಾಧೀನದಲ್ಲಿರುವಾಗ).[೧೩]
ಚೈನೀಸ್ಲಿಂಗ್ಕಿ ಯನ್ನು 靈氣 ಮೊದಲ ಬಾರಿಗೆ (ಸುಮಾರು. ೩೨೦ BCE)ಯಲ್ಲಿ ಗುವಾಂಜಿ ವಿಭಾಗದ "ಆಂತರ್ಯ ತರಬೇತಿ" ನೆಯಿಯೇ ನಲ್ಲಿ ದಾಖಲು ಮಾಡಲಾಯಿತು, ಇದು ಪ್ರಾಚೀನ ದಾವೊಯಿಸ್ಟ್ ಧ್ಯಾನ ವಿಧಾನಗಳಲ್ಲಿ ವಿವರಿಸಲಾಗಿದೆ. "ಮನಸ್ಸಿನಲ್ಲಿರುವ ಆ ನಿಗೂಢ ಜೀವಧಾರಕ ಶಕ್ತಿ: ಒಂದು ಕ್ಷಣದಲ್ಲಿ ಇದು ಆಗಮಿಸಿ, ಮತ್ತೊಂದು ಕ್ಷಣದಲ್ಲಿ ಹೊರಟುಹೋಗುತ್ತದೆ. ಇದು ಎಷ್ಟು ಸೂಕ್ಷ್ಮವೆಂದರೆ, ಇದರೊಳಗೆ ಏನೂ ಇರುವುದಿಲ್ಲ; ಎಷ್ಟು ವ್ಯಾಪಕವೆಂದರೆ, ಇದರಾಚೆಗೂ ಏನೂ ಇರುವುದಿಲ್ಲ. ಮಾನಸಿಕ ಕ್ಷೋಭೆ ಉಂಟುಮಾಡುವ ಹಾನಿಯಿಂದಾಗಿ ಇದನ್ನು ನಾವು ಕಳೆದುಕೊಳ್ಳುತ್ತೇವೆ."[೧೪] ಆಧುನಿಕ ಪ್ರಮಾಣಕ ಚೈನೀಸ್ಲಿಂಗ್ಕಿ ಯನ್ನು ಚೈನೀಸ್-ಇಂಗ್ಲಿಷ್ ನಿಘಂಟುಗಳು:(ಸುಂದರವಾದ ಪರ್ವತಗಳ) ಆಧ್ಯಾತ್ಮಿಕ ಪ್ರಭಾವ ಅಥವಾ ವಾತಾವರಣ";[೧೫]"೧.ಬುದ್ಧಿವಂತಿಕೆ; ಗ್ರಹಣಾ ಶಕ್ತಿ; ೨.ಅಲೌಕಿಕ ಶಕ್ತಿ ಅಥವಾ ಯಕ್ಷ ಕಥೆಗಳಲ್ಲಿ ಬರುವ ಶಕ್ತಿ; ಪವಾಡ ಸದೃಶ ಶಕ್ತಿ ಅಥವಾ ಬಲ;[೧೬] ಹಾಗು "೧.ಆಧ್ಯಾತ್ಮಿಕ ಪ್ರಭಾವ(ಪರ್ವತಗಳ/ಮುಂತಾದವುಗಳ ಪ್ರಭಾವ.) ಎಂದು ತರ್ಜುಮೆ ಮಾಡಿವೆ.; ೨.ಜಾಣತನ; ಬುದ್ಧಿವಂತಿಕೆ".[೧೭]
ಮೂಲಗಳು
[ಬದಲಾಯಿಸಿ]- ಫೈವ್ ಪ್ರಿಸೆಪ್ಟ್ಸ್ ಹಾಗು ಟೈಮ್ ಲೈನ್ ಆಫ್ ರೇಖಿ ಹಿಸ್ಟರಿಯನ್ನೂ ಸಹ ನೋಡಿ
ರೇಖಿಯನ್ನುಮಿಕಾವೋ ಉಸುಯಿ(臼井甕男) ೧೯೨೨ರಲ್ಲಿ, ಮೌಂಟ್ ಕುರಾಮ ಮೇಲೆ ಆಯೋಜಿಸಲಾಗಿದ್ದ ಇಪ್ಪತ್ತೊಂದು ದಿನದ ಬೌದ್ಧ ತರಬೇತಿ ಶಿಬಿರಇಸ್ಯು ಗುವೋ ನಡೆಸುವಾಗ ಅಭಿವೃದ್ಧಿಪಡಿಸಿದರು.[೧೮] ಈ ತರಬೇತಿ ಅವಧಿಯಲ್ಲಿ ಉಸುಯಿಯವರು ಏನು ಮಾಡಿದ್ದರೆಂಬ ಬಗ್ಗೆ ಖಚಿತವಾದ ಮಾಹಿತಿಯಿಲ್ಲ, ಆದಾಗ್ಯೂ ಶಿಬಿರದಲ್ಲಿ ಧ್ಯಾನ,ಉಪವಾಸ, ಮಂತ್ರ ಪಠಣ, ಹಾಗು ಪ್ರಾರ್ಥನೆಗಳು ಇದ್ದಿರಬಹುದು.[೧೯][೨೦] ಒಂದು ಆಧ್ಯಾತ್ಮಿಕ ದಿವ್ಯಜ್ಞಾನದ ಮೂಲಕ, ಉಸುಯಿ ರೇಖಿಯ ಬಗ್ಗೆ ಜ್ಞಾನವನ್ನು ಪಡೆಯುವುದರ ಜೊತೆಗೆ ಆಧ್ಯಾತ್ಮಿಕ ಶಕ್ತಿಯನ್ನು ಬಳಸುವ ಹಾಗು ಇತರರಿಗೆ ಬಳಸಲು ಅನುವು ಮಾಡಿಕೊಟ್ಟರೆಂದು ಹೇಳಲಾಗುತ್ತದೆ, ಇದು ಅವರ ಶರೀರಕ್ಕೆ ಮುಕುಟ ಚಕ್ರದ ಮೂಲಕ ಪ್ರವೇಶಿಸಿತೆಂದು ಪ್ರತೀತಿಯಿದೆ.[೧೯] ಏಪ್ರಿಲ್ ೧೯೨೨ರಲ್ಲಿ, ಉಸುಯಿ ಟೋಕಿಯೋಗೆ ಸ್ಥಳಾಂತರಗೊಂಡುಉಸುಯಿ ರೇಖಿ ರಯೋಹೋ ಗಕ್ಕೈ ಯನ್ನು ಸ್ಥಾಪಿಸುತ್ತಾರೆ(ಸಾಂಪ್ರದಾಯಿಕವಾಗಿ ಮ್ಯಾಂಡರಿನ್ ನಲ್ಲಿ "臼井靈氣療法學會", ಇದುಉಸುಯಿ'ಸ್ ಸ್ಪಿರಿಚುವಲ್ ಎನರ್ಜಿ ಥೆರಪಿ ಮೆಥಡ್ ಸೊಸೈಟಿ ಎಂಬ ಅರ್ಥವನ್ನು ನೀಡುತ್ತದೆ), ಸಂಸ್ಥೆಯು ರೇಖಿಯ ಮೂಲಕ ದೊಡ್ಡ ಪ್ರಮಾಣದಲ್ಲಿ ಜನರಿಗೆ ಚಿಕಿತ್ಸೆಯನ್ನು ಮುಂದುವರೆಸುವ ಉದ್ದೇಶವನ್ನು ಹೊಂದಿತ್ತು.[೧೯][೨೧]
ಅವರ ಸ್ಮಾರಕ ಶಿಲೆಯ ಮೇಲೆ ಕೆತ್ತಲಾದ ಬರೆಹದ ಪ್ರಕಾರ,[೨೨] ಉಸುಯಿ, ತಮ್ಮ ಜೀವಿತಾವಧಿಯಲ್ಲಿ ೨೦೦೦ಕ್ಕೂ ಮೇಲ್ಪಟ್ಟ ಜನರಿಗೆ ತಮ್ಮ ರೇಖಿ ವಿದ್ಯೆಯನ್ನು ಧಾರೆ ಎರೆದಿದ್ದಾರೆ, ಹಾಗು ಅವರ ಇಷ್ಟು ಮಂದಿ ಶಿಷ್ಯರಲ್ಲಿ ಹದಿನಾರು ಜನರುಶಿನ್ಪಿಡೆನ್ ಮಟ್ಟದವರೆಗೂ ಕಲಿತಿದ್ದಾರೆ, ಇದು ಪಾಶ್ಚಿಮಾತ್ಯ ಮೂರನೇ, ಅಥವಾ ತಜ್ಞ/ಶಿಕ್ಷಕ ಮಟ್ಟದ ಪದವಿಗೆ ಸಮಾನಾಂತರವಾಗಿದೆ.[೨೨][೨೩] ಫುಕುಯಾಮದಲ್ಲಿ (福山市,ಫುಕುಯಾಮ-ಶಿ ) ರೇಖಿಯನ್ನು ಕಲಿಸುವಾಗ, ಉಸುಯಿ ಪಾರ್ಶ್ವವಾಯುವಿಗೆ ತುತ್ತಾಗಿ, ೯ ಮಾರ್ಚ್ ೧೯೨೬ರಲ್ಲಿ ನಿಧನರಾಗುತ್ತಾರೆ.[೨೨]
ಆರಂಭಿಕ ಬೆಳವಣಿಗೆ
[ಬದಲಾಯಿಸಿ]ಉಸುಯಿಯವರ ನಿಧನದ ನಂತರ, ಉಸುಯಿಯವರ ಒಬ್ಬ ಶಿಷ್ಯರಾದ ಶ್ರೀ. J. ಉಷಿಡ, ಗಕ್ಕೈನ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸುತ್ತಾರೆ.[೨೪] ಉಸುಯಿಯವರ ಸ್ಮಾರಕವನ್ನು ನಿರ್ಮಾಣ ಮಾಡುವ ಹಾಗು ಕೆತ್ತುವ ಜವಾಬ್ದಾರಿಯನ್ನೂ ಸಹ ಇವರು ಹೊಂದಿದ್ದರು ಜೊತೆಗೆ ಸ್ಮಾರಕವಿರುವ ಜಾಗವನ್ನು ರಕ್ಷಿಸುವ ಹೊಣೆ ಹೊತ್ತಿದ್ದರು.[೨೪] ಶ್ರೀ.ಉಷಿಡರ ನಂತರ ಶ್ರೀ.ಐಚಿ ಟಕೆಟೊಮಿ, ಶ್ರೀ.ಯೋಶಿಹಾರು ವಾಟನಾಬೆ, ಶ್ರೀ.ಕಿಮಿಕೋ ಕೊಯಾಮ ಇದರ ಜವಾಬ್ದಾರಿ ವಹಿಸಿಕೊಂಡರು ಹಾಗು ಉಸುಯಿಯವರ ಪ್ರಸಕ್ತದ ಉತ್ತರಾಧಿಕಾರಿ, ಶ್ರೀ. ಕೊಂಡೋ, ೧೯೯೮ರಲ್ಲಿ ಇದರ ಅಧ್ಯಕ್ಷ ಪದವಿಯನ್ನು ಸ್ವೀಕರಿಸಿದರು.[೨೪] ಉಸುಯಿ ಕಲಿಸಿದ ಹದಿನಾರು ಬೋಧಕರಲ್ಲಿ ತೊಶಿಹಿರೋ ಇಗುಚಿ, ಜುಸಬುರೋ ಗುಯಿಡ, ಇಲಿಚಿ ಟಕೆಟೊಮಿ, ತೊಯೋಯಿಚಿ ವನಮಿ, ಯೋಶಿಹಿರು ವಾಟನಬೆ, ಕೆಯಿಜೋ ಒಗಾವ, J. ಉಷಿಡ, ಹಾಗು ಚುಜಿರೋ ಹಯಾಶಿ ಸೇರಿದ್ದಾರೆ.[೨೪][೨೫] ಚುಜಿರೋ ಹಯಾಶಿ(林 忠次郎 ಹಯಾಶಿ ಚುಜಿರೋ ) ಉಸುಯಿಯವರ ರೇಖಿ ರಯೋಹೋ ಗಕ್ಕೈನ್ನು ತೊರೆದು ತಮ್ಮದೇ ಆದ ಚಿಕಿತ್ಸಾಲಯ ಆರಂಭಿಸುತ್ತಾರೆ, ಇಲ್ಲಿ ಇವರು ರೇಖಿ ಚಿಕಿತ್ಸೆಗಳನ್ನು ನೀಡುವುದರ ಜೊತೆಗೆ, ಅದರ ಬಗ್ಗೆ ಬೋಧನೆ, ಹಾಗು ಜನರಿಗೆ ರೇಖಿಯನ್ನು ಕಲಿಯಲು ಅನುವು ಮಾಡಿಕೊಡುತ್ತಾರೆ, ಹಾಗು ಈ ಚಿಕಿತ್ಸಾಲಯಕ್ಕೆ ಹವಾಯೋ ತಕಾತ ನಿರ್ದೇಶಕರಾಗುತ್ತಾರೆ.[೨೪] ಹಯಾಶಿ ರೇಖಿ ಬೋಧನೆಗಳನ್ನು ಸರಳಗೊಳಿಸುತ್ತಾರೆ, ಹೆಚ್ಚು ಕ್ರಮಬದ್ಧವಾಗಿ ರಚನೆ ಹಾಗು ರೇಖಿ ವಿಧಾನಗಳ ಸರಳ ರಚನೆಯನ್ನು ಬಳಸಿಕೊಂಡು ಶಾರೀರಿಕ ಉಪಶಮನಕ್ಕೆ ಒತ್ತು ನೀಡುತ್ತಾರೆ.[೨೬]
ತಮ್ಮ ಚಿಕಿತ್ಸಾಲಯದಲ್ಲಿ ಹಯಾಶಿಯವರ ಶಿಕ್ಷಾರ್ಥಿಯಾಗಿ ರೇಖಿಯ ವ್ಯಾಸಂಗಾವಧಿಯಲ್ಲಿ, ಕಿಬ್ಬೊಟ್ಟೆ ನೋವು ಹಾಗು ಅಸ್ತಮಾಕ್ಕೆ ಚಿಕಿತ್ಸೆ ನೀಡುವುದನ್ನು ಒಳಗೊಂಡಂತೆ, ಹಯಾಶಿ ತಕಾತರಿಗೆ ವಿಧಿವತ್ತಾಗಿ ರೇಖಿಯನ್ನು ಬಳಸುವ ಬಗ್ಗೆ ತರಬೇತಿ ನೀಡುತ್ತಾರೆ,[೨೭][೨೮] ಜೊತೆಗೆ ೨೧ ಫೆಬ್ರವರಿ ೧೯೩೮ರಲ್ಲಿ ಅವರನ್ನೊಬ್ಬ ರೇಖಿ ತಜ್ಞೆಯನ್ನಾಗಿ ಮಾಡುತ್ತಾರೆ.[೨೭][೨೯] ತಕಾತ ಹವಾಯಿಯುದ್ದಕ್ಕೂ ಹಲವಾರು ರೇಖಿ ಚಿಕಿತ್ಸಾಲಯಗಳನ್ನು ಸ್ಥಾಪಿಸುತ್ತಾರೆ, ಇದರಲ್ಲಿ ಒಂದು ಹಿಲೋನಲ್ಲಿ ಸ್ಥಿತವಾಗಿದೆ,[೨೭] ಹಾಗು ನಂತರದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದುದ್ದಕ್ಕೂ ಪ್ರಯಾಣಿಸಿ, ರೇಖಿ ವೃತ್ತಿಯನ್ನು ನಡೆಸುವುದರ ಜೊತೆಗೆ ಇತರರಿಗೆ ಮೊದಲ ಎರಡು ಹಂತಗಳನ್ನು ಕಲಿಸುತ್ತಾರೆ,[೩೦] ಹಾಗು ೧೯೭೦ರವರೆಗೂ ತಕಾತ ರೇಖಿ ತಜ್ಞರು ವಿಧಿವತ್ತಾಗಿ ವೃತ್ತಿಯನ್ನು ಆರಂಭಿಸಲು ಅನುವು ಮಾಡಿಕೊಡಲಿಲ್ಲ.[೩೧] ಈ ಹಂತದಲ್ಲಿ, ತಕಾತ,ಶಿನ್ಪಿಡೆನ್ ಮಟ್ಟಕ್ಕೆ ರೇಖಿ ಪರಿಣಿತ ನೆಂಬ ಪದವನ್ನೂ ಸಹ ಪರಿಚಯಿಸಿದರು.[೩೨] ರೇಖಿ ಚಿಕಿತ್ಸೆಗಳಿಗೆ ಹಾಗು ಬೋಧನೆಗಳಿಗೆ ಶುಲ್ಕವನ್ನು ವಿಧಿಸುವ ಪ್ರಾಮುಖ್ಯತೆಗೆ ಅವರು ಒತ್ತು ನೀಡಿದರು ಜೊತೆಗೆ ಸಂಪೂರ್ಣವಾಗಿ ನಿಪುಣತೆಯನ್ನು ಪಡೆಯುವ ತರಬೇತಿಗಾಗಿ $೧೦,೦೦೦ ಶುಲ್ಕವನ್ನು ನಿಗದಿ ಮಾಡಿದರು(ಅಂದಾಜು £೬,೫೦೦ ಅಥವಾ €೭,೪೦೦).[೩೧]
ತಕಾತ ೧೧ ಡಿಸೆಂಬರ್ ೧೯೮೦ರಲ್ಲಿ ನಿಧನರಾಗುತ್ತಾರೆ,[೩೧][೩೩] ಆ ಅವಧಿಯಲ್ಲಿ ಆಕೆ ೨೨ ರೇಖಿ ತಜ್ಞರಿಗೆ ತರಬೇತಿ ನೀಡಿದ್ದರು,[೩೪][೩೫] ಹಾಗು ಜಪಾನಿನಾಚೆಗೂ ವಿಸ್ತರಿಸಿದ ಬಹುತೇಕ ಎಲ್ಲ ರೇಖಿ ಶಿಕ್ಷಣವು ಅವರ ಪ್ರಯತ್ನದ ಫಲವೆಂದು ಹೇಳಬಹುದು.[೩೬]
ಐದು ಸೂತ್ರಗಳು
[ಬದಲಾಯಿಸಿ]ಉಸುಯಿ,ಚಕ್ರವರ್ತಿ ಮೆಯಿಜಿಯವರ(明治天皇ಮೆಯಿಜಿ ಟೆನ್ನೋ )ಸಾಹಿತ್ಯಕ ಕೃತಿಗಳ ಅಭಿಮಾನಿಯಾಗಿದ್ದರು. ರೇಖಿ ಪದ್ಧತಿಯನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿ, ಉಸುಯಿ, ಚಕ್ರವರ್ತಿಯ ಕೆಲ ಕೃತಿಗಳನ್ನು ನೀತಿಸೂತ್ರಗಳ ಒಂದು ಸಂಗ್ರಹವಾಗಿ ಸಂಕ್ಷಿಪ್ತಗೊಳಿಸುತ್ತಾರೆ, ಇದು ನಂತರದಲ್ಲಿ ಐದು ರೇಖಿ ಆಚಾರಸೂತ್ರಗಳಾಗಿ ಪರಿಚಯವಾಯಿತು(五戒 ಗೊಕೈ, ಅರ್ಥ, "ಐದು ದೈವಾಜ್ಞೆಗಳು," ಇದು ಹತ್ಯೆಗೈಯ್ಯುವುದು, ದರೋಡೆ ಮಾಡುವುದು, ಲೈಂಗಿಕವಾಗಿ ಅನುಚಿತ ವರ್ತನೆ, ಸುಳ್ಳು ಹೇಳುವುದು ಹಾಗು ಸಂಯಮರಾಹಿತ್ಯದ ವಿರುದ್ಧ ಬೋಧಿಸುವ ಬೌದ್ಧ ಉಪದೇಶಗಳಿಂದ ಆಯ್ದುಕೊಳ್ಳಲಾಗಿದೆ). ಸಾಮಾನ್ಯವಾಗಿ ರೇಖಿ ಪದ್ಧತಿಯನ್ನು ಬೋಧಿಸುವವರು ಹಾಗು ಚಿಕಿತ್ಸೆ ನೀಡುವವರು ಈ ಐದು ಆಚಾರ ಸೂತ್ರಗಳು, ಅಥವಾ ನಿಯಮಗಳಿಗೆ ಬದ್ಧರಾಗಿರಬೇಕಾಗುತ್ತದೆ.[೩೭]
ಕಾಂಜಿ 招福の秘法, 今日丈けは:
朝夕合掌して心に念じ, 心身改善. 肇祖,
|
ರೋಮಾಜಿ ಶೋಫುಕು ನೋ ಹಿಹೋ, ಕ್ಯೋ ಡಾಕೆ ವಾ:
ಅಸಾಯು ಗಾಷೋ ಶಿತೆ ಕೊಕೊರೋ ನಿ ನೆಂಜಿ, ಶಿನ್ಶಿನ್ ಕೈಜೆನ್. ಚೋಸೋ,
|
ಆಂಗ್ಲ ಸಂತೋಷವನ್ನು ಆಹ್ವಾನಿಸುವ ಗುಪ್ತ ಕಲೆ ಕಡೆ ಪಕ್ಷ ಇಂದು:
ಪ್ರತಿ ದಿನ ಬೆಳಿಗ್ಗೆ ಹಾಗು ಸಂಜೆ, ಕೈಯನ್ನು ಮುಗಿದು ಹೃದಯಪೂರ್ವಕವಾಗಿ ಧ್ಯಾನವನ್ನು ಹಾಗು ಪ್ರಾರ್ಥನೆಯನ್ನು ಮಾಡು. ದೇಹ ಹಾಗು ಮನಸ್ಸಿನ ಸುಧಾರಣೆಗಾಗಿ. ಸ್ಥಾಪಕ,
|
ಸಂಪ್ರದಾಯಗಳು[ಬದಲಾಯಿಸಿ]ಇಂದು ರೇಖಿಯಲ್ಲಿ ಹಲವಾರು ಶಾಖೆಗಳಿವೆ, ಆದಾಗ್ಯೂ ಎರಡು ಪ್ರಮುಖ ಸಂಪ್ರದಾಯಗಳು ಅಸ್ತಿತ್ವದಲ್ಲಿವೆ, ಇವುಗಳನ್ನು ಕ್ರಮವಾಗಿ ಸಾಂಪ್ರದಾಯಿಕ ಜಪಾನೀಸ್ ರೇಖಿ ಹಾಗು ಪಾಶ್ಚಿಮಾತ್ಯ ರೇಖಿ ಎಂದು ಕರೆಯಲಾಗುತ್ತದೆ. ಸಾಂಪ್ರದಾಯಿಕ ಜಪಾನೀಸ್ ರೇಖಿ[ಬದಲಾಯಿಸಿ]ಸಾಂಪ್ರದಾಯಿಕ ಜಪಾನೀಸ್ ರೇಖಿ ಯನ್ನು ಸಾಧಾರಣವಾಗಿ ಉಸುಯಿಯವರ ಮೂಲ ಬೋಧನೆಗಳಿಂದ ಜನ್ಯವಾದ ನಿರ್ದಿಷ್ಟ ಪದ್ಧತಿಯನ್ನು ವಿವರಿಸಲು ಬಳಸಲಾಗುತ್ತದೆ[೩೮] ಹಾಗು ಈ ಬೋಧನೆಗಳು ಜಪಾನಿಗೆ ಮಾತ್ರ ಸೀಮಿತವಾಗಿದೆ. ೧೯೯೦ರ ಸುಮಾರಿಗೆ, ಪಾಶ್ಚಿಮಾತ್ಯ ಬೋಧಕರು ರೇಖಿಯ ಈ ನಿರ್ದಿಷ್ಟ ಸಂಪ್ರದಾಯವನ್ನು ಕಲಿಯಲು ಜಪಾನಿಗೆ ಪ್ರಯಾಣಿಸಿದರಾದರೂ, ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಹೀಗಾಗಿ ಅವರುಗಳು ರೇಖಿ ಶಾಲೆಗಳನ್ನು ತೆರೆಯಲು ಆರಂಭಿಸಿದರು, ಜೊತೆಗೆ ಜಪಾನಿಯರಿಗೆ ರೇಖಿಯ ಒಂದು ಹಾಗು ಎರಡನೇ ಹಂತವನ್ನು ಕಲಿಸಲು ಆರಂಭಿಸಿದರು. ೧೯೯೩ರ ಸುಮಾರಿಗೆ, ಜರ್ಮನಿಯ ರೇಖಿ ತಜ್ಞ, ಫ್ರ್ಯಾಂಕ್ ಅರ್ಜಾವ ಪೆಟ್ಟರ್, ಬೋಧಕ/ಶಿಕ್ಷಕ ಹಂತ, ಹಾಗು ಇದರ ಪರಿಣಾಮವಾಗಿ, ಜಪಾನಿಯರು ಸಾಂಪ್ರದಾಯಿಕ ರೇಖಿಯ ಬಗೆಗಿರುವ ತಮ್ಮ ಜ್ಞಾನವನ್ನು ಬೋಧಿಸಲು ಆರಂಭಿಸಿದರು. ಅಲ್ಲಿಂದೀಚೆಗೆ, ಸಾಂಪ್ರದಾಯಿಕ ಜಪಾನೀಸ್ ರೇಖಿಯ ಹಲವಾರು ಸಂಪ್ರದಾಯಗಳು ಹುಟ್ಟಿಕೊಂಡಿವೆ, ಪ್ರಮುಖ ಸಂಪ್ರದಾಯಗಳನ್ನು ಕೆಳಕಂಡಂತೆ ಪಟ್ಟಿ ಮಾಡಲಾಗಿದೆ.[೩೯]
ಉಸುಯಿ ರೇಖಿ ರಯೋಹೋ ಹಿಕ್ಕೆಯಿ ನಲ್ಲಿ(臼井靈氣療法必携,ಉಸುಯಿ ರೇಖಿ ಚಿಕಿತ್ಸಾ ಕೈಪಿಡಿ )ನೀಡಲಾದ, ಉಸುಯಿಯವರು ಬಳಸುವುದರ ಜೊತೆಗೆ ಅವರು ಸಂಕಲಿಸಿದ ಜಪಾನೀಸ್ ರೇಖಿ ಕೈಗಳ ಭಂಗಿಗಳ ಬಳಕೆಯು ಪಾಶ್ಚಿಮಾತ್ಯ ರೇಖಿಯಲ್ಲಿ ಬಳಸಲಾಗುವ ಕೈಗಳ ಭಂಗಿಗಳಿಗಿಂತ ಹೆಚ್ಚು ವ್ಯಾಪಕ ಬಳಕೆಯಲ್ಲಿದೆ.[೪೪] ಪಾಶ್ಚಿಮಾತ್ಯ ರೇಖಿ[ಬದಲಾಯಿಸಿ]ಪಾಶ್ಚಿಮಾತ್ಯ ರೇಖಿ (西洋レイキ,ಸೇಯಿಯೋ ರೇಖಿ ) ಪದ್ಧತಿಯು ಹವಾಯೋ ತಕಾತರ ಪದ್ಧತಿಯೆಂದು ಭಾವಿಸಬಹುದು.[೪೫] ಸಂಪ್ರದಾಯಗಳ ನಡುವೆ ಇರುವ ಪ್ರಮುಖ ವ್ಯತ್ಯಾಸವೆಂದರೆ, ರೆಯಿಜಿ-ಹೋ ಗೆ ಬದಲಾಗಿ ಆಂತರಿಕ ಚಿಕಿತ್ಸೆಗಳಿಗೆ ಬಳಸಲಾಗುವ ಕೈಯಿನ ಬಳಕೆ, ಇದು "ಕೈಯನ್ನು ಎಲ್ಲಿ ಇರಿಸಬೇಕೆಂಬುದನ್ನು ಅರಿತಿರುವ ಅಂತರ್ಬೋಧೆಯಿಂದ ಗ್ರಹಿಸಲಾದ ಕೌಶಲ."[೩೯] ಈ ರೇಖಿ ಪದ್ಧತಿಯು ಅಸ್ವಸ್ಥತೆಯ ಶಮನಕ್ಕೆ ಹೆಚ್ಚು ಒತ್ತು ನೀಡಿತು, ಜೊತೆಗೆ ಉನ್ನತ ಮಟ್ಟದ ಅನುಷ್ಠಾನಗಳನ್ನು ಹೆಚ್ಚು ವಿಧ್ಯುಕ್ತಗೊಳಿಸಲಾಗಿದೆ.[೩೯] ಹಯಾಶಿಯವರಿಂದ ತರಬೇತಿಯನ್ನು ಪಡೆದ ನಂತರ, ತಕಾತ ತಮ್ಮೊಂದಿಗೆ ರೇಖಿ ಪದ್ಧತಿಯನ್ನು ಹವಾಯಿಗೆ ಕೊಂಡೊಯ್ಯುತ್ತಾರೆ. ಅಲ್ಲಿ ಚಿಕಿತ್ಸಾಲಯಗಳನ್ನು ಸ್ಥಾಪಿಸಿದ ನಂತರವಷ್ಟೇ, ರೇಖಿಯು ಉಳಿದ ಪಾಶ್ಚಿಮಾತ್ಯದ ದೇಶಗಳಲ್ಲಿ ಜನಪ್ರಿಯವಾಯಿತು. ಎರಡನೇ ವಿಶ್ವ ಸಮರದ ಪರಿಣಾಮವಾಗಿ, ತಕಾತ, ಸಾಂಪ್ರದಾಯಿಕ ಜಪಾನೀಸ್ ರೇಖಿ ಪದ್ಧತಿಯನ್ನು ಹೆಚ್ಚು ಗ್ರಾಹ್ಯವಾಗಿ ಹಾಗು ಪಾಶ್ಚಿಮಾತ್ಯ ಮನೋಧರ್ಮಕ್ಕೆ ನಂಬಿಕೆ ಹುಟ್ಟಿಸುವ ಸಲುವಾಗಿ ಅದನ್ನು ಮಾರ್ಪಡಿಸಲು ನಿರ್ಧರಿಸಿದರು.
ಬೋಧನೆಗಳು[ಬದಲಾಯಿಸಿ]ರೇಖಿ ಬೋಧನೆಗಳು, ರೇಖಿ ಅಪರಿಮಿತವೆಂದು ಸಮರ್ಥಿಸುತ್ತವೆ[೫೨][೫೩] ಹಾಗು ಇದರಿಂದ ಪರಿಣಾಮಕಾರಿಯಾಗಿ ರೋಗವನ್ನು ಗುಣಪಡಿಸಬಹುದು.[೫೪] ಈ ವೃತ್ತಿಯನ್ನು ನಡೆಸುವವರು, ಒಬ್ಬ ರೇಖಿ ತಜ್ಞರು ನಡೆಸುವ ಅನುಷ್ಠಾನ ಪ್ರಕ್ರಿಯೆಯ[೫೫] ಮೂಲಕ ಈ ಶಕ್ತಿಯನ್ನು ಯಾರು ಬೇಕಾದರೂ ಪಡೆಯಬಹುದೆಂದು ವಾದಿಸುತ್ತಾರೆ[೫೬].[೫೭] ರೇಖಿ ವೃತ್ತಿಯನ್ನು ಪಾಲಿಸುವವರು ಇದನ್ನು ಸಮಗ್ರ ಚಿಕಿತ್ಸಾ ವಿಧಾನವೆಂದು ವಿವರಿಸುತ್ತಾರೆ, ಇದು ಶಾರೀರಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಹಾಗು ಆಧ್ಯಾತ್ಮಿಕ ಮಟ್ಟಗಳಲ್ಲಿ ಉಪಶಮನ ಮಾಡುತ್ತದೆ.[೫೮] ಸಾಮಾನ್ಯ ನಂಬಿಕೆಯೆಂದರೆ ಶಕ್ತಿಯು, ರೋಗಿಯ ಕೈಗಳ ಮೇಲೆ ವೈದ್ಯರು ಕೈಗಳನ್ನು ಇರಿಸಿದಾಗ, ಅಥವಾ ಒಬ್ಬ ಸಂಭಾವ್ಯ ಗ್ರಾಹಕನ ಮೇಲೆ ಇರಿಸಿದಾಗ, ಶಕ್ತಿಯ ಸಂಚಾರವಾಗುತ್ತದೆ. ಕೆಲವು ಬೋಧನೆಗಳು, ವೈದ್ಯರ ಉದ್ದೇಶ ಅಥವಾ ಈ ಉಪಸ್ಥಿತಿಯ ಪ್ರಾಮುಖ್ಯತೆಗೆ ಒತ್ತು ನೀಡುತ್ತದೆ, ಮತ್ತೆ ಕೆಲವು ಬೋಧನೆಗಳು, ಶಕ್ತಿಯು, ಸ್ವಾಭಾವಿಕ ಪರಿಹಾರ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುವ ಅಥವಾ ಅಧಿಕಗೊಳಿಸುವ ರೋಗಿಗೆ ಉಂಟಾದ ಪೆಟ್ಟಿನಿಂದ ಒಳಕ್ಕೆ ಎಳೆದು ಕೊಳ್ಳಲಾಗುತ್ತದೆಂದು ವಾದಿಸುತ್ತವೆ.[೫೯] ಈ ಕಲ್ಪನೆಗೆ ಮತ್ತಷ್ಟು ಪುಷ್ಟಿ ನೀಡುವಂತೆ ನಂಬಿಕೆಯೆಂದರೆ, ಶಕ್ತಿಯು "ಬುದ್ಧಿವಂತಿಕೆಯಿಂದ" ಕೂಡಿದೆ,[೬೦] ಇದರರ್ಥ, ವೈದ್ಯರ ಕೈಗಳು ಗುಣಪಡಿಸಬೇಕಿರುವ ನಿರ್ದಿಷ್ಟ ಜಾಗದಲ್ಲಿ ಇಲ್ಲದಿದ್ದರೂ ಸಹ ಯಾವ ಭಾಗದಲ್ಲಿ ಶಮನ ಮಾಡಬೇಕೆಂಬುದು ರೇಖಿಗೆ ತಿಳಿದಿದೆ. ತರಬೇತಿ[ಬದಲಾಯಿಸಿ]ಜಪಾನಿನ ಹೊರಗೆ ಬೋಧಿಸಲಾಗುವ ರೇಖಿಯನ್ನು ಸಾಮಾನ್ಯವಾಗಿ ಮೂರು ಹಂತಗಳಾಗಿ ವಿಂಗಡಿಸಲಾಗುತ್ತದೆ,[೬೧] ಅಥವಾ ಪದವಿಗಳು, ಇದರಲ್ಲಿ ಬಹಳ ಸಾಮಾನ್ಯವಾದ ಹಂತಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ. ಸಾಂಪ್ರದಾಯಿಕ ಜಪಾನೀಸ್ ರೇಖಿಯನ್ನು ಉಸುಯಿಯವರ ಮಾರ್ಗದರ್ಶನದಡಿಯಲ್ಲಿ ವ್ಯಾಪಕವಾಗಿ ತರಬೇತಿ ನೀಡಲಾಗುತ್ತದೆ, ಜೊತೆಗೆ ವಾರಕ್ಕೊಮ್ಮೆ ಧ್ಯಾನ ಕೂಟಗಳಲ್ಲಿ ರೇಖಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಜೊತೆಗೆ ಪ್ರಬಲ ಪರಿಹಾರವನ್ನು ಒದಗಿಸುವ ಸಲುವಾಗಿ ದೇಹವನ್ನು ಸ್ಕ್ಯಾನ್ ಮಾಡಲಾಗುತ್ತದೆ,[೬೨] ಜಪಾನೀಸ್ ಭಾಷೆಯಲ್ಲಿ ಇದನ್ನು ಬ್ಯೋಸೇನ್-ಹೋ ಎಂದು ಕರೆಯಲಾಗುತ್ತದೆ, ಏಕೆಂದರೆ ಜಪಾನೀಸ್ ರೇಖಿ ಚಿಕಿತ್ಸೆಯು ಅಂತರ್ಬೋಧೆಯ ಗ್ರಹಿಕೆಯಿಂದ ಕೂಡಿದ್ದು, ಪಾಶ್ಚಿಮಾತ್ಯ ರೇಖಿ ಚಿಕಿತ್ಸೆಗೆ ಹೋಲಿಸಿದರೆ ಇದು ನಿರ್ದಿಷ್ಟವಾಗಿ ನಿರ್ದೇಶಿಸುತ್ತದೆ, ಇದು ನಿರ್ದಿಷ್ಟ ಜಾಗಗಳಿಗೆ ಬದಲಾಗಿ ಸಾಧಾರಣವಾಗಿ ಸಂಪೂರ್ಣ ದೇಹಕ್ಕೆ ಚಿಕಿತ್ಸೆಯನ್ನು ನೀಡುತ್ತದೆ. ಮೊದಲ ಹಂತದ ಪದವಿ[ಬದಲಾಯಿಸಿ]ಮೊದಲ ಹಂತದ ಪದವಿ ಕೋರ್ಸ್ ನ್ನು,[೬೩] ಕೆಲವೊಂದು ಬಾರಿ ಷೋಡೆನ್ ("初伝" ಜಪಾನೀಸ್ ನಲ್ಲಿ, "'ಪ್ರಾರಂಭಿಕ/ಪ್ರವೇಶ ಮಟ್ಟದ ಬೋಧನೆಗಳು" ಎಂಬ ಅರ್ಥವನ್ನು ನೀಡುತ್ತದೆ)ಎಂಬ ಜಪಾನೀಸ್ ಹೆಸರಿನಿಂದ ಕರೆಯಲಾಗುತ್ತದೆ,[೬೪] ಇದು ಮೂಲ ಸಿದ್ಧಾಂತಗಳು ಹಾಗು ವಿಧಾನಗಳ ಬಗ್ಗೆ ತರಬೇತಿ ನೀಡುತ್ತದೆ. ಹಲವಾರು "ಅನುಷ್ಠಾನಗಳನ್ನು" ಶಿಕ್ಷಕರು ವಿದ್ಯಾರ್ಥಿಗೆ ನೀಡುತ್ತಾರೆ.[೬೫] ವಿದ್ಯಾರ್ಥಿಗಳು, ಚಿಕಿತ್ಸೆಯನ್ನು ಪಡೆಯುವವರ ಕೈಗಳ ಮೇಲೆ ತಮ್ಮ ಕೈಗಳನ್ನು ಇರಿಸುವ ಕ್ರಮದ ಬಗ್ಗೆ ತಿಳಿದುಕೊಳ್ಳುತ್ತಾರೆ, ಇದು ಸಂಪೂರ್ಣ ದೇಹಾ ಚಿಕಿತ್ಸಾ ಪ್ರಕ್ರಿಯೆಗೆ ಹೆಚ್ಚು ಸಹಾಯಕವೆಂದು ಪರಿಗಣಿಸಲಾಗುತ್ತದೆ.[೬೬] ಮೊದಲ ಹಂತದ ಪದವಿಯನ್ನು ಪೂರ್ಣಗೊಳಿಸಿದ ನಂತರ, ರೇಖಿ ವೈದ್ಯರು ಸ್ವತಃ ತಮಗೆ ಹಾಗು ಇತರರಿಗೆ ರೇಖಿ ಪದ್ಧತಿಯ ಮೂಲಕ ಚಿಕಿತ್ಸೆಯನ್ನು ನೀಡಬಲ್ಲ ಸಾಮರ್ಥ್ಯವನ್ನು ಪಡೆಯುತ್ತಾರೆ. ತರಬೇತಿಯ ಅವಧಿಯು ರೇಖಿ ತಜ್ಞರ ಬೋಧನೆಯ ಮೇಲೆ ಅವಲಂಬಿಸಿರುತ್ತದೆ; ಕೆಲವರು ಹಲವು ದಿನಗಳನ್ನು ಒಳಗೊಂಡ ನಾಲ್ಕು ಅವಧಿಯನ್ನು ನಡೆಸುತ್ತಾರೆ, ಮತ್ತೆ ಕೆಲವರು ಎರಡು ದಿನಗಳ ಎರಡು ಅವಧಿಯಲ್ಲಿ ಪೂರ್ಣಗೊಳಿಸುತ್ತಾರೆ.[೬೭] ಎರಡನೇ ಹಂತದ ಪದವಿ[ಬದಲಾಯಿಸಿ]ಎರಡನೇ ಹಂತದ ರೇಖಿ ಕೋರ್ಸ್ ನ್ನು,[೬೮] ಕೆಲವೊಂದು ಬಾರಿ ಒಕುಡೆನ್ ಎಂಬ ಜಪಾನೀಸ್ ಹೆಸರಿನಿಂದ ಕರೆಯಲಾಗುತ್ತದೆ("奥伝" ಜಪಾನೀಸ್ ಭಾಷೆಯಲ್ಲಿ "ಆಂತರಿಕ ಬೋಧನೆಗಳು" ಎಂಬ ಅರ್ಥವನ್ನು ನೀಡುತ್ತದೆ),[೬೯] ಈ ಹಂತದಲ್ಲಿ ವಿದ್ಯಾರ್ಥಿಯು ಶಕ್ತಿಯನ್ನು ಅಧಿಕಗೊಳಿಸುವ ಹಾಗು ದೂರದಿಂದಲೇ ರೇಖಿ ಚಿಕಿತ್ಸೆಯ ಮೂಲಕ ಗುಣಪಡಿಸುವ ಹಲವಾರು ಸಂಕೇತಗಳನ್ನು ಬಳಸುವುದನ್ನು ಕಲಿಯುತ್ತಾನೆ.[೭೦] ಇದು ವೈದ್ಯ ಹಾಗು ಗ್ರಾಹಿಯ ನಡುವೆ ತಾತ್ಕಾಲಿಕ ಸಂಪರ್ಕವನ್ನು ರೂಪಿಸುವ ಸಂಕೇತಗಳ ಬಳಕೆಯನ್ನು ಒಳಗೊಂಡಿದೆ, ಇದು ಸ್ಥಳ ಹಾಗು ಕಾಲವನ್ನು ಪರಿಗಣಿಸದೆ, ರೇಖಿ ಶಕ್ತಿಯನ್ನು ಕಳುಹಿಸಲಾಗುತ್ತದೆ.[೭೧][೭೨] ಮತ್ತೊಂದು ಅನುಷ್ಠಾನವನ್ನು ನೀಡಲಾಗುತ್ತದೆ, ಇದು ವಿದ್ಯಾರ್ಥಿಯ ಮೂಲಕ ಹರಿದುಬರುವ ರೇಖಿ ಶಕ್ತಿಯ ಸಾಮರ್ಥ್ಯವನ್ನು ಮತ್ತಷ್ಟು ಅಧಿಕಗೊಳಿಸುವುದರ ಜೊತೆಗೆ ಸಂಕೇತಗಳ ಬಳಕೆಗೆ ಅಧಿಕಾರ ನೀಡುತ್ತದೆ.[೭೩] ಎರಡನೇ ಹಂತದ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ವಿದ್ಯಾರ್ಥಿಯು ಗ್ರಾಹಿಯ ಎದುರು ಶಾರೀರಿಕವಾಗಿ ಹಾಜರಿರದೆ ಚಿಕಿತ್ಸೆಯನ್ನು ನೀಡಬಹುದು - ಈ ವಿಧಾನವನ್ನು "ದೂರದಿಂದಲೇ ನೀಡಲಾಗುವ ಚಿಕಿತ್ಸೆ"(ಡಿಸ್ಟನ್ಟ್ ಹೀಲಿಂಗ್) ಎಂದು ಕರೆಯಲಾಗುತ್ತದೆ.[೭೪] ಜಪಾನಿನ ವಿದ್ಯಾರ್ಥಿಗಳು ಕೆಲವೊಂದು ಬಾರಿ ಕೇವಲ ಎರಡನೇ ಹಂತದ ಪದವಿಯನ್ನು, ಉಸುಯಿಯವರ ಅಧ್ಯಾಪಕತ್ವದಲ್ಲಿ ೧೦ ವರ್ಷಗಳ ಅಥವಾ ಕೆಲವೊಂದು ಬಾರಿ ೨೦ ವರ್ಷಗಳ ನಂತರ ಪಡೆಯುತ್ತಿದ್ದರು ಹಾಗು ಬಹುತೇಕ ವಿದ್ಯಾರ್ಥಿಗಳು ಮೂರನೇ ಹಂತದ ಪದವಿಯನ್ನು ಪಡೆಯುತ್ತಿರಲಿಲ್ಲ.[೭೫] ಮೂರನೇ ಹಂತದ ಪದವಿ[ಬದಲಾಯಿಸಿ]ಮೂರನೇ ಹಂತದ ಪದವಿ, ಅಥವಾ "ತಜ್ಞ ತರಬೇತಿಯ" ಮೂಲಕ,[೭೬] ಕೆಲವೊಂದು ಬಾರಿ ಜಪಾನೀಸ್ ಹೆಸರು ಶಿನ್ಪಿಡೆನ್ ("神秘伝"ಜಪಾನೀಸ್ ನಲ್ಲಿ, "ಗುಪ್ತ ಬೋಧನೆಗಳು" ಎಂಬ ಅರ್ಥವನ್ನು ನೀಡುತ್ತದೆ)ಎಂಬ ಜಪಾನೀಸ್ ಹೆಸರಿನಿಂದ ಕರೆಯಲ್ಪಡುವ ಇದರ ಮೂಲಕ,[೬೪] ವಿದ್ಯಾರ್ಥಿಯು ರೇಖಿ ತಜ್ಞನೆನಿಸಿಕೊಳ್ಳುತ್ತಿದ್ದನು. ರೇಖಿ ಪರಿಭಾಷೆಯಲ್ಲಿ,"ತಜ್ಞ" ಎಂಬ ಪದವು ಆಧ್ಯಾತ್ಮಿಕ ಜ್ಞಾನೋದಯಕ್ಕೆ ವ್ಯಕ್ತವಾಗುವುದಿಲ್ಲ, ಜೊತೆಗೆ ಈ ತಪ್ಪು ಗ್ರಹಿಕೆಯನ್ನು ತಡೆಗಟ್ಟುವ ಸಲುವಾಗಿ ಇದನ್ನು ಕೆಲವೊಂದು ಬಾರಿ "ತಜ್ಞ/ಶಿಕ್ಷಕ" ಎಂದು ಬದಲಾವಣೆ ಮಾಡಲಾಗುತ್ತದೆ. ರೇಖಿಯ ನಿರ್ದಿಷ್ಟ ಶಾಖೆಯ ಪ್ರಕಾರ, ಒಂದು ಅಥವಾ ಅದಕ್ಕೂ ಹೆಚ್ಚಿನ ಅನುಷ್ಠಾನವನ್ನು ಮಾಡಿಕೊಳ್ಳಬಹುದು ಹಾಗು ವಿದ್ಯಾರ್ಥಿಯು ಮತ್ತಷ್ಟು ಸಂಕೇತಗಳನ್ನು ಕಲಿಯುತ್ತಾನೆ.[೭೭] ತಜ್ಞ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಹೊಸ ರೇಖಿ ತಜ್ಞರು ಇತರರಿಗೆ ರೇಖಿಯನ್ನು ಅಭ್ಯಸಿಸಲು ಅನುವು ಮಾಡಿಕೊಡುವುದರ ಜೊತೆಗೆ ಮೂರು ಪದವಿ ಹಂತಗಳಿಗೆ ತರಬೇತಿಯನ್ನು ನೀಡಬಹುದು. ತಜ್ಞ ತರಬೇತಿಯ ಅವಧಿಯು ಒಂದು ದಿನದಿಂದ ಹಿಡಿದು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯದ್ದಾಗಿರಬಹುದು, ಇದು ತರಬೇತಿ ಶಾಲೆ ಹಾಗು ತರಬೇತಿಯನ್ನು ನೀಡುವ ರೇಖಿ ತಜ್ಞರ ಪದ್ಧತಿಯನ್ನು ಅವಲಂಬಿಸಿರುತ್ತದೆ. ತಜ್ಞರಲ್ಲಿ ಎರಡು ಸಾಮಾನ್ಯ ಮಾದರಿಗಳಿವೆ: ತಜ್ಞ ಬೋಧಕ ಹಾಗು ತಜ್ಞ ವೈದ್ಯ ; ತಜ್ಞ ಬೋಧಕರು ರೇಖಿಯ ತಜ್ಞರಾಗಿದ್ದು, ರೇಖಿಯನ್ನು ಕಲಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ(ಅದೆಂದರೆ ಇತರರು ಕಲಿಯಲು ಅನುವು ಮಾಡಿಕೊಡುವುದು),ತಜ್ಞ ವೈದ್ಯರು ರೇಖಿಯ ತಜ್ಞರಾಗಿದ್ದರೂ ಸಹ, ರೇಖಿ ತರಬೇತಿಯನ್ನು ನೀಡುವುದಿಲ್ಲ. ಮಾರ್ಪಾಡುಗಳು[ಬದಲಾಯಿಸಿ]ತರಬೇತಿ ವಿಧಾನಗಳು, ತರಬೇತಿಯು ಪೂರ್ಣಗೊಳ್ಳುವ ಅವಧಿ(ಉದಾಹರಣೆಗೆ.,ಹೊಂದಾವಣೆ), ಹಾಗು ವೆಚ್ಚಗಳಲ್ಲಿ ಹೆಚ್ಚು ವ್ಯತ್ಯಾಸಗಳಿವೆ. ಆದಾಗ್ಯೂ, ರೇಖಿಗೆ ವೃತ್ತಿಯನ್ನು ಪ್ರಮಾಣೀಕರಿಸಲು ಯಾವುದೇ ಅಧಿಕೃತ ಸಂಸ್ಥೆ ಹಾಗು ಪ್ರಮುಖ ಅಂಗವಿಲ್ಲ, ಅಥವಾ ಇದನ್ನು ವೃತ್ತಿಯಾಗಿ ಸ್ವೀಕರಿಸುವುದಕ್ಕೆ ಯಾವುದೇ ನಿಯಮಗಳಿರುವುದಿಲ್ಲ, ಯುನೈಟೆಡ್ ಕಿಂಗ್ಡಂನೊಳಗೆ ರೇಖಿ ಹಾಗು ರೇಖಿ ವೃತ್ತಿಯನ್ನು ಪ್ರಮಾಣಕವಾಗಿಸುವ ಸಂಸ್ಥೆಗಳಿವೆ, ಉದಾಹರಣೆಗೆ UK ರೇಖಿ ಫೆಡರೇಶನ್ [೭೮] ಹಾಗು ರೇಖಿ ಕೌನ್ಸಿಲ್(UK).[೭೯] ಆನ್ಲೈನ್ ಮೂಲಕವೂ ರೇಖಿ ತರಬೇತಿಯನ್ನು ನೀಡಲಾಗುತ್ತದೆ, ಆದಾಗ್ಯೂ ಸಂಪ್ರದಾಯವಾದಿಗಳು, ಚಿಕಿತ್ಸೆಯು ಪರಿಣಾಮಕಾರಿಯಾಗಿರಬೇಕಾದರೆ ವೈಯಕ್ತಿಕವಾಗಿ ಅನುಷ್ಠಾನವನ್ನು ಮಾಡಿಕೊಳ್ಳಬೇಕು, ಅನುಷ್ಠಾನವನ್ನು ಮಾಡುವ ರೇಖಿ ತಜ್ಞ/ಬೋಧಕ, ಅನುಷ್ಠಾನಕ್ಕೆ ಒಳಪಡುವ ವ್ಯಕ್ತಿಯ ಶಕ್ತಿ ಕ್ಷೇತ್ರವನ್ನು ವಾಸ್ತವವಾಗಿ ಮುಟ್ಟುವ ಸಾಮರ್ಥ್ಯವನ್ನು ಹೊಂದಿರಬೇಕು. ದೂರದಿಂದಲೇ ನೀಡಲಾಗುವ ರೇಖಿ ಚಿಕಿತ್ಸೆಗೆ ಮಾಡಿಕೊಳ್ಳಲಾಗುವ ಅನುಷ್ಠಾನಗಳನ್ನು ಕೆಲವು ರೇಖಿ ಫೆಡರೇಶನ್ ಗಳು ಗುರುತಿಸುವುದಿಲ್ಲ, ಉದಾಹರಣೆಗೆ UK ರೇಖಿ ಫೆಡರೇಶನ್, "ಎಲ್ಲ ತರಬೇತಿಯು "ವೈಯಕ್ತಿಕವಾಗಿರಬೇಕು" ಅಥವಾ "ಮುಖಾಮುಖಿಯಾಗಿರಬೇಕು"(ದೂರದಲ್ಲಿ ಮಾಡುವ ಅನುಷ್ಠಾನಗಳು ಸ್ವೀಕೃತವಾಗುವುದಿಲ್ಲ) ."[೮೦] ಕೆಲವು ಸಂಪ್ರದಾಯವಾದಿಗಳು, ರೇಖಿಯನ್ನು "ತ್ವರಿತ"ವಾಗಿ ಕಲಿಸುವ ವಿಧಾನಗಳು ಪರಿಪೂರ್ಣವಾಗಿರುವುದಿಲ್ಲವೆಂದು ಹೇಳುತ್ತಾರೆ, ಏಕೆಂದರೆ ರೇಖಿಯಲ್ಲಿ ತಜ್ಞತೆ ಪಡೆಯುವ ಅನುಭವ ಹಾಗು ಸಹನೆಗೆ ಯಾವುದೇ ಪರ್ಯಾಯವಿರುವುದಿಲ್ಲ. ವೃತ್ತಿಯಾಗಿ[ಬದಲಾಯಿಸಿ]ಪಾಶ್ಚಿಮಾತ್ಯ ರೇಖಿಯಲ್ಲಿ, ರೇಖಿಯು, ಕೈಯಿನ-ಭಂಗಿಗಳನ್ನು ಬಳಸಿಕೊಂಡು ಶಿಖರ ಶಕ್ತಿ ರೇಖೆಗಳು ಹಾಗು ಚಕ್ರಗಳ ಸಂಯೋಗದಿಂದ ಕಾರ್ಯನಿರ್ವಹಿಸುತ್ತದೆಂದು ಕಲಿಸಲಾಗುತ್ತದೆ, ಇದು ಸಾಮಾನ್ಯವಾಗಿ ದೇಹದಲ್ಲಿರುವ ಏಳು ಪ್ರಮುಖ ಚಕ್ರಗಳಿಗೆ ಹೊಂದಿಕೆಯಾಗುತ್ತದೆ. ಈ ಕೈಗಳ-ಭಂಗಿಗಳನ್ನು ದೇಹದ ಮುಂಭಾಗ ಹಾಗು ಹಿಂಭಾಗ ಎರಡಕ್ಕೂ ಬಳಸಲಾಗುತ್ತದೆ, ಹಾಗು ಇವುಗಳು ಕೆಲವು ನಿರ್ದಿಷ್ಟ ಜಾಗಗಳನ್ನು ಒಳಗೊಳ್ಳುತ್ತವೆ(ಕೇಂದ್ರೀಕೃತ ಚಿಕಿತ್ಸೆ ವಿಭಾಗವನ್ನು ನೋಡಿ). ಜೇಮ್ಸ್ ಡೆಕೊನ್ ನಂತಹ ಬರಹಗಾರರ ಪ್ರಕಾರ, ಉಸುಯಿ ಕೇವಲ ಐದು ವಿಧ್ಯುಕ್ತ ಕೈಗಳ-ಭಂಗಿಗಳನ್ನು ಬಳಸಿದರು, ಇದು ತಲೆ ಹಾಗು ಕುತ್ತಿಗೆ ಭಾಗದ ಚಿಕಿತ್ಸೆಗೆ ಹೆಚ್ಚು ಒತ್ತು ನೀಡಿತು.[೮೧] ಮೊದಲು ತಲೆ ಹಾಗು ಕುತ್ತಿಗೆ ಭಾಗಕ್ಕೆ ರೇಖಿ ಚಿಕಿತ್ಸೆಯನ್ನು ನೀಡಿದ ನಂತರ, ಅಸಮತೋಲನ ಉಂಟಾಗಿರುವ ದೇಹದ ನಿರ್ದಿಷ್ಟ ಭಾಗಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.[೮೧] ಸಾಂಪ್ರದಾಯಿಕ ಜಪಾನೀಸ್ ರೇಖಿಯಷ್ಟಲ್ಲದಿದ್ದರೂ ಪಾಶ್ಚಿಮಾತ್ಯ ರೇಖಿಯೊಳಗೆ ಚಕ್ರಗಳ ಬಳಕೆಯು ಬಹಳ ಜನಪ್ರಿಯವಾಗಿದೆ, ಏಕೆಂದರೆ ಇದು ಬ್ಯೋಸೇನ್-ಹೋ ಹಾಗು ರೆಯಿಜಿ-ಹೋ ನಂತಹ ವಿಧಾನಗಳನ್ನು ಬಳಸಿಕೊಂಡು ದೇಹದ ನಿರ್ದಿಷ್ಟ ಪ್ರದೇಶಗಳಿಗೆ ಚಿಕಿತ್ಸೆ ನೀಡುವ ಕಡೆಗೆ ಹೆಚ್ಚು ಗಮನ ಹರಿಸುತ್ತದೆ, ಈ ವಿಧಾನಗಳನ್ನು, ಸೆಳವರಿವುಗಳು ಹಾಗು ದೇಹದಲ್ಲಿ ಉಂಟಾಗುವ ನೋವಿರುವ(ಅಸೌಖ್ಯವಿರುವ) ಜಾಗಗಳನ್ನು ಗುರುತಿಸಲು ಬಳಸಲಾಗುತ್ತದೆ. ಗುಣಪಡಿಸುವಿಕೆ[ಬದಲಾಯಿಸಿ]ಉಸುಯಿ ರೇಖಿ ರಯೋಹೋ ಯಾವುದೇ ಮದ್ದು ಅಥವಾ ಉಪಕರಣಗಳನ್ನು ಬಳಸುವುದಿಲ್ಲ, ಆದರೆ ನೋಡುವುದು,ಓದುವುದು, ಮೆತ್ತಗೆ ತಟ್ಟುವುದು,ಹಾಗು ಸ್ಪರ್ಶಿಸುವುದನ್ನು ಮಾಡುತ್ತದೆ.[೮೨] ಫ್ರ್ಯಾಂಕ್ ಅರ್ಜಾವ ಪೆಟ್ಟರ್ ರ ಪ್ರಕಾರ, ಉಸುಯಿ ದೇಹದಲ್ಲಿ ಹಾನಿಯಾದ ಭಾಗವನ್ನು ಮುಟ್ಟುತ್ತಿದ್ದರು,ಅವುಗಳಿಗೆ ಮಸಾಜು ಮಾಡುತ್ತಿದ್ದರು,ಮೆಲ್ಲಗೆ ತಟ್ಟುತ್ತಿದ್ದರು,ಪೆಟ್ಟನ್ನು ನೀಡುತ್ತಿದ್ದರು,ಆ ಭಾಗಕ್ಕೆ ಜೋರಾಗಿ ಊದುತ್ತಿದ್ದರು,ಹಾಗು ನಿರ್ದಿಷ್ಟವಾಗಿ ಶಕ್ತಿಯನ್ನು ನೀಡುತ್ತಿದ್ದರು,[೮೩] ಜೊತೆಗೆ ಪಾಮ್ ಹೀಲಿಂಗ್ (ಕೈಯಿಂದ ಮೂಲಕ ಚಿಕಿತ್ಸೆ ನೀಡುವುದು) ಎಂದು ಸಾಮಾನ್ಯವಾಗಿ ಕರೆಯಲ್ಪಡುವ ವಿಧಾನವನ್ನು ಪೂರಕ ಹಾಗು ಪರ್ಯಾಯ ಚಿಕಿತ್ಸೆಯಾಗಿ ಬಳಸುತ್ತಿದ್ದರು. ಈ ಪಾಮ್ ಹೀಲಿಂಗ್ ನ್ನು ಬಳಸುವ ಮೂಲಕ(ಕೆಲವೊಂದು ಬಾರಿ "ತೆನೋಹಿರ " ಎಂದು ಸೂಚಿತವಾಗುತ್ತದೆ(掌, ಅರ್ಥ "ಅಂಗೈ"),ವೈದ್ಯರು ಅಂಗೈಗಳ ಮೂಲಕ ಕಿ ನ ರೂಪದಲ್ಲಿ ಶಾಮಕ ಶಕ್ತಿಯನ್ನು ವರ್ಗಾಯಿಸುತ್ತಾರೆ.[೩] ಸಂಪೂರ್ಣ ದೇಹದ ಚಿಕಿತ್ಸೆ[ಬದಲಾಯಿಸಿ]ಮಾದರಿಯಾದ ಒಂದು ಸಂಪೂರ್ಣ-ದೇಹದ ರೇಖಿ ಚಿಕಿತ್ಸೆಯಲ್ಲಿ,[೮೪] ರೇಖಿ ವೈದ್ಯರು ಚಿಕಿತ್ಸೆಯನ್ನು ಪಡೆಯುವವರಿಗೆ, ಸಾಮಾನ್ಯವಾಗಿ ಮಸಾಜು ಮಾಡುವ ಮೇಜಿನ ಮೇಲೆ ಮಲಗಿ ವಿರಮಿಸಲು ಸೂಚಿಸುತ್ತಾರೆ. ಚಿಕಿತ್ಸೆಯ ಸಮಯದಲ್ಲಿ ಸಡಿಲವಾದ,ಹಿತಕರವಾದ ಉಡುಪನ್ನು ಧರಿಸಲಾಗುತ್ತದೆ. ಒಂದು ಶಾಂತವಾದ ಅಥವಾ ಮನಸ್ಸಿನ ಒಂದು ಧ್ಯಾನಸ್ಥ ಸ್ಥಿತಿಯನ್ನು ತಲುಪಲು ವೈದ್ಯರು ಕೆಲವು ಕ್ಷಣಗಳನ್ನು ತೆಗೆದುಕೊಳ್ಳುತ್ತಾರೆ ಹಾಗು ಚಿಕಿತ್ಸೆ ನೀಡಲು ಮಾನಸಿಕವಾಗಿ ಸಿದ್ಧರಾಗುತ್ತಾರೆ,[೮೫] ಇದನ್ನು ಸಾಮಾನ್ಯವಾಗಿ ಯಾವುದೇ ಅನಗತ್ಯ ಮಾತುಕತೆಗಳಿಲ್ಲದೆ ನಡೆಸಲಾಗುತ್ತದೆ.[೮೬] ವೈದ್ಯರು ಚಿಕಿತ್ಸೆಯನ್ನು ಪಡೆಯುವವರ ಮೇಲೆ ಕೈಗಳನ್ನು ಹಲವಾರು ಭಂಗಿಗಳಲ್ಲಿ ಇರಿಸುವ ಮೂಲಕ ಚಿಕಿತ್ಸೆಯು ಮುಂದುವರೆಯುತ್ತದೆ. ಆದಾಗ್ಯೂ,ವೈದ್ಯರುಗಳು ರೋಗಿಯನ್ನು ಮುಟ್ಟದ ವಿಧಾನವನ್ನು ಬಳಸಬಹುದು, ಈ ವಿಧಾನದಲ್ಲಿ ರೋಗಿಯ ದೇಹದ ಕೆಲ ಸೆಂಟಿಮೀಟರುಗಳ ದೂರದಲ್ಲಿ ಕೆಲವು ಅಥವಾ ಎಲ್ಲ ಭಂಗಿಗಳಲ್ಲಿ ಕೈಗಳನ್ನು ಚಾಚಲಾಗುತ್ತದೆ. ಮುಂದಿನ ಭಂಗಿಗೆ ಮುಂದುವರೆಯುವ ಮುನ್ನ ಮೂರರಿಂದ ಐದು ನಿಮಿಷಗಳ ಕಾಲ ಕೈಗಳನ್ನು ಸಾಮಾನ್ಯವಾಗಿ ಒಂದೇ ಭಂಗಿಯಲ್ಲಿ ಇರಿಸಿಕೊಂಡಿರಲಾಗುತ್ತದೆ. ಒಟ್ಟಾರೆಯಾಗಿ, ಕೈಗಳ ಭಂಗಿಗಳು ಸಾಮಾನ್ಯವಾಗಿ ತಲೆಯನ್ನು, ಮುಂಡದ ಮುಂಭಾಗ ಹಾಗು ಹಿಂಭಾಗ,ಮಂಡಿಗಳು,ಹಾಗು ಪಾದಗಳನ್ನು ಮುಚ್ಚಿರುವಂತೆ ಕಂಡುಬರುತ್ತದೆ. ೧೨ ರಿಂದ ೨೦ ಭಂಗಿಗಳನ್ನು ಬಳಸಲಾಗುತ್ತದೆ, ಜೊತೆಗೆ ಸಂಪೂರ್ಣ ಚಿಕಿತ್ಸೆಗೆ ೪೫ ರಿಂದ ೯೦ ನಿಮಿಷಗಳ ಅವಧಿ ಹಿಡಿಯುತ್ತದೆ.[೮೭] ಹಲವು ಪಾಶ್ಚಿಮಾತ್ಯ ವೈದ್ಯರುಗಳು, ನಿರ್ದಿಷ್ಟವಾಗಿ ಕೈಗಳ ೧೨ ಭಂಗಿಗಳನ್ನು ಸಾಮಾನ್ಯವಾಗಿ ಬಳಸುತ್ತಾರೆ,[೬೨] ಆದರೆ ಇತರರು ಚಿಕಿತ್ಸೆಯು ಅಗತ್ಯವಿರುವ ಜಾಗಕ್ಕೆ ಮಾರ್ಗದರ್ಶನ ಪಡೆಯಲು ತಮ್ಮ ಅಂತಃಪ್ರಜ್ಞೆಯನ್ನು ಬಳಸಿಕೊಳ್ಳುತ್ತಾರೆ,[೮೮] ಇದು ಸಾಂಪ್ರದಾಯಿಕ ಜಪಾನೀಸ್ ರೇಖಿಯ ವಿಧಾನವೂ ಸಹ ಹೌದು, ಕೆಲವೊಂದು ಬಾರಿ ಇಂತಹ ಜಾಗಗಳನ್ನು ಗುರುತಿಸಲು ಗ್ರಾಹಿಯನ್ನು "ಸ್ಕ್ಯಾನಿಂಗ್" ಗೆ ಒಳಪಡಿಸಿ ಚಿಕಿತ್ಸೆಯನ್ನು ಆರಂಭಿಸಲಾಗುತ್ತದೆ. ಅಂತಃಪ್ರಜ್ಞೆಗೆ ಪ್ರವೇಶವು,ಅಲ್ಪಾವಧಿ ಅಥವಾ ದೀರ್ಘಾವಧಿಗಳಿಗೆ ಚಿಕಿತ್ಸೆ ನೀಡಲಾಗುವ ವೈಯಕ್ತಿಕ ಭಂಗಿಗಳಿಗೂ ಸಹ ದಾರಿ ಮಾಡಿಕೊಡುತ್ತದೆ. ಸಾಂಪ್ರದಾಯಿಕ ಜಪಾನೀಸ್ ರೇಖಿಯ ಕೇಂದ್ರೀಕೃತ-ಶೈಲಿ ಚಿಕಿತ್ಸೆಗೆ ಹೋಲಿಸಿದರೆ, ಪಾಶ್ಚಿಮಾತ್ಯ ರೇಖಿ ಚಿಕಿತ್ಸೆಯನ್ನು ದೊಡ್ಡ ಪ್ರಮಾಣದ ಚಿಕಿತ್ಸಾ ಮಾದರಿಯೆಂದು ಪರಿಗಣಿಸಲಾಗುತ್ತದೆ.[೭೫] ಹಲವು ಹಂತಗಳಲ್ಲಿ ಶಕ್ತಿಯನ್ನು ತುಂಬುವ ಕೈಗಳ ೧೨ ಭಂಗಿಗಳನ್ನು,[೭೫] ಈ ಮೂಲಕ ಬಳಸಲಾಗುತ್ತದೆ,
ಸಾಮಾನ್ಯವಾಗಿ ರೋಗಿಯು ಚಿಕಿತ್ಸೆ ನೀಡುವ ಜಾಗದಲ್ಲಿ ಸುಖೋಷ್ಣತೆ ಅಥವಾ ಜುಮ್ಮೆನಿಸುವ ಅನುಭವವನ್ನು ಪಡೆಯುತ್ತಾರೆಂದು ವರದಿ ಮಾಡಲಾಗಿದೆ, ಇದು ಮುಟ್ಟದೆ ನೀಡುವ ಚಿಕಿತ್ಸೆಯಲ್ಲೂ ಸಹ ಅನುಭವಕ್ಕೆ ಬಂದಿದೆ. ಆಳವಾದ ಶಮನವನ್ನು ಹೊಂದಿರುವ ಸ್ಥಿತಿಯ ಜೊತೆಯಲ್ಲಿ ಆರೋಗ್ಯಕರವಾಗಿರುವ ಒಂದು ಸಾಮಾನ್ಯ ಭಾವನೆಯು ಚಿಕಿತ್ಸೆಯ ತಕ್ಷಣದ ಪರಿಣಾಮವೆಂದು ಸಾಮಾನ್ಯವಾಗಿ ಗುರುತಿಸಬಹುದು, ಆದಾಗ್ಯೂ ಭಾವನಾತ್ಮಕ ವಿಮುಕ್ತಿಗಳೂ ಸಹ ಉಂಟಾಗಬಹುದು.[೮೯] ರೇಖಿ ಚಿಕಿತ್ಸೆಯು ದೇಹದ ಸ್ವಾಭಾವಿಕ ಶಮನ ಪ್ರಕ್ರಿಯೆಯನ್ನು ಪ್ರಚೋದಿಸುತ್ತದೆಂದು ಹೇಳಲಾಗುತ್ತಾದರೂ,ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿಗೆ ತಕ್ಷಣದ "ಉಪಶಮನಗಳು" ದೊರೆತಿದ್ದರ ಬಗ್ಗೆ ಯಾವುದೇ ಉದಾಹರಣೆಗಳಿಲ್ಲ. ಪರಿಸ್ಥಿತಿಯು ಉಲ್ಬಣಗೊಂಡ ಪಕ್ಷದಲ್ಲಿ, ಮಾದರಿಯಾಗಿ ಒಂದರಿಂದ ಏಳು ದಿನಗಳ ಅವಧಿಯ ನಡುವೆ ನೀಡಲಾಗುವ ಮೂರು ಅಥವಾ ಅದಕ್ಕೂ ಹೆಚ್ಚಿನ ಸರಣಿ ಚಿಕಿತ್ಸೆಗೆ ಶಿಫಾರಸು ಮಾಡಲಾಗುತ್ತದೆ,[೮೭] ಹಾಗು ಉತ್ತಮ ಆರೋಗ್ಯ ಸ್ಥಿತಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ಕ್ರಮಬದ್ಧತೆಯ ಆಧಾರದಲ್ಲಿ ನಿಯಮಿತ ಚಿಕಿತ್ಸೆಗಳನ್ನು ನೀಡಬಹುದು. ಇಂತಹ ಚಿಕಿತ್ಸೆಗಳನ್ನು ಮಾದರಿಯಾಗಿ ಒಂದರಿಂದ ನಾಲ್ಕು ವಾರಗಳ ಅವಧಿಯ ಅಂತರದಲ್ಲಿ ನೀಡಲಾಗುತ್ತದೆ, ಸ್ವಯಂ-ಚಿಕಿತ್ಸೆ ಮಾಡಿಕೊಳ್ಳುವವರು ಸಾಮಾನ್ಯವಾಗಿ ಪ್ರತಿ ನಿತ್ಯವೂ ಚಿಕಿತ್ಸೆಯನ್ನು ಮಾಡಿಕೊಳ್ಳುವುದರಿಂದ ಇದಕ್ಕೆ ಹೊರತಾಗಿರುತ್ತಾರೆ.[೮೭] ಕೇಂದ್ರೀಕೃತ ಚಿಕಿತ್ಸೆ[ಬದಲಾಯಿಸಿ]ಕೇಂದ್ರೀಕೃತ ರೇಖಿ ಚಿಕಿತ್ಸೆಯಲ್ಲಿ, ವೈದ್ಯರು ತಮ್ಮ ಕೈಗಳನ್ನು ಹಾನಿಗೊಳಪಟ್ಟ ದೇಹದ ನಿರ್ದಿಷ್ಟ ಅಂಗದ ಸಮೀಪ ಅಥವಾ ಅದರ ಮೇಲೆ ವಿವಿಧ ಅವಧಿಯಲ್ಲಿ ಇರಿಸುತ್ತಾರೆ. ಆ ತಕ್ಷಣದ ಗಾಯಗಳಿಗೆ ಸಾಮಾನ್ಯವಾಗಿ ಈ ಮಾದರಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ,[೯೦] ಜೊತೆಗೆ ಗಾಯಗೊಂಡ ಭಾಗಕ್ಕೆ ನಿರ್ದಿಷ್ಟವಾಗಿ ಚಿಕಿತ್ಸೆ ನೀಡಲಾಗುತ್ತದೆ. ಇಂತಹ ಚಿಕಿತ್ಸೆಗಳನ್ನು ನೀಡುವ ಕಾಲಾವಧಿಯಲ್ಲಿ ಬಹಳ ವ್ಯತ್ಯಾಸಗಳಿರುತ್ತವೆ, ಆದಾಗ್ಯೂ, ೨೦ ನಿಮಿಷಗಳ ಅವಧಿಯ ಚಿಕಿತ್ಸೆಯು ಮಾದರಿಯಾಗಿದೆ. ತಕಾತ "ಕೇಂದ್ರೀಕೃತ ಚಿಕಿತ್ಸೆಯನ್ನು", ದೂರ ಅಥವಾ "ಅನುಪಸ್ಥಿತವಾಗಿ ಶಮನ ಮಾಡುವುದಕ್ಕೆ" ಹೋಲಿಸಿದರೆ 'ಸಕ್ರಿಯ ಚಟುವಟಿಕೆ' ಎಂದು ವಿವರಿಸಿದ್ದಾರೆ.[೯೧] ಕೆಲವು ವೈದ್ಯರುಗಳು, ಕೆಲ ನಿರ್ದಿಷ್ಟ ಕಾಯಿಲೆಗಳಿಗೆ ಕೇಂದ್ರೀಕೃತ ಚಿಕಿತ್ಸೆಯನ್ನು ಬಳಸುತ್ತಾರೆ, ಹಾಗು ಕೆಲವು ಪ್ರಕಾಶನಾಲಯಗಳು ಕೈಗಳ ಸೂಕ್ತ ಭಂಗಿಗಳನ್ನು ಪಟ್ಟಿ ಮಾಡಿವೆ,[೯೨][೯೩] ಆದಾಗ್ಯೂ, ಇತರ ವೈದ್ಯರುಗಳು, ಸಮಗ್ರ ಪರಿಣಾಮದ ಆಧಾರದ ಮೇಲೆ ಎಲ್ಲ ತೀವ್ರತರ ಪರಿಸ್ಥಿತಿಗಳಲ್ಲಿ ಸಂಪೂರ್ಣ ದೇಹಕ್ಕೆ ಚಿಕಿತ್ಸೆ ನೀಡಲು ಬಯಸುತ್ತಾರೆ.[೯೪] ಮತ್ತೊಂದು ವಿಧಾನದಲ್ಲಿ ಸಂಪೂರ್ಣ ದೇಹಕ್ಕೆ ಮೊದಲು ಚಿಕಿತ್ಸೆ ನೀಡಲಾಗುತ್ತದೆ, ನಂತರ ಯಾವುದೇ ನಿರ್ದಿಷ್ಟ ಅಸ್ವಸ್ಥತೆಗೆ ಕೇಂದ್ರೀಕೃತ ಚಿಕಿತ್ಸೆ ನೀಡಲಾಗುತ್ತದೆ.[೯೫] ಉಸುಯಿ, ಕೆಲ ನಿರ್ದಿಷ್ಟ ಅಸ್ವಸ್ಥತೆಗಳು ಹಾಗು ನೋವುಗಳಿಗಾಗಿ ಅಸೌಖ್ಯ) ಕೆಲವು ನಿರ್ದಿಷ್ಟ ಕೈಗಳ ಭಂಗಿಗಳನ್ನು ಬಳಸಿದರು,[೯೬] ಇದರಲ್ಲಿ ನರಮಂಡಲದ ಅಸ್ವಸ್ಥತೆ(ಉದಾಹರಣೆಗೆ ಚಿತ್ತಕ್ಷೋಭೆ),[೯೭] ಉಸಿರಾಟದ ತೊಂದರೆಗಳು(ಉದಾಹರಣೆಗೆ ಶ್ವಾಸನಾಳದ ಉರಿಯೂತ),[೯೮] ಜೀರ್ಣಾಂಗ ತೊಂದರೆಗಳು(ಉದಾಹರಣೆಗೆ ಜಠರದ ಹುಣ್ಣುಗಳು),[೯೯] ರಕ್ತಪರಿಚಲನೆಯ ತೊಂದರೆಗಳು(ಉದಾಹರಣೆಗೆ ತೀವ್ರತರವಾದ ಅಧಿಕ ರಕ್ತದೊತ್ತಡ),[೧೦೦] ಚಯಾಪಚಯ ಹಾಗು ರಕ್ತದ ತೊಂದರೆಗಳು(ಉದಾಹರಣೆಗೆ ರಕ್ತಹೀನತೆ),[೧೦೧] ಮೂತ್ರಾಂಗ ಪ್ರದೇಶದ ತೊಂದರೆಗಳು(ಉದಾಹರಣೆಗೆ ಮೂತ್ರಪಿಂಡದ ಉರಿಯೂತ),[೧೦೨] ಚರ್ಮದ ತೊಂದರೆಗಳು (ಉದಾಹರಣೆಗೆ ದುಗ್ಧಗ್ರಂಥಿಗಳ ಉರಿಯೂತ),[೧೦೩] ಮಕ್ಕಳ ಸಮಸ್ಯೆಗಳು (ಉದಾಹರಣೆಗೆ ದಡಾರ),[೧೦೪] ಮಹಿಳೆಯರ ಆರೋಗ್ಯ ಸಮಸ್ಯೆಗಳು(ಉದಾಹರಣೆಗೆ ಓಕರಿಕೆ),[೧೦೫] ಸಾಂಕ್ರಾಮಿಕ ರೋಗಗಳು(ಉದಾಹರಣೆಗೆ ಟೈಫಾಯ್ಡ್ ಜ್ವರ).[೧೦೬] ಉಸಿರಾಟ[ಬದಲಾಯಿಸಿ]ಉಸಿರು ಹಾಗು ಉಸಿರಾಟದ ನಿರ್ದಿಷ್ಟ ಬಳಕೆಯು ಜಪಾನೀಸ್ ರೇಖಿಯ ಹಲವು ಶೈಲಿಗಳಲ್ಲಿ ಪ್ರಮುಖವಾದರೂ ಸಹ, ಇದನ್ನು ಪಾಶ್ಚಿಮಾತ್ಯ ರೇಖಿ ಪದ್ದತಿಯಲ್ಲಿ ಸಾಮಾನ್ಯವಾಗಿ ಉಪೇಕ್ಷಿಸಲಾಗುತ್ತದೆ.[೧೦೭] ಉಸುಯಿ ಜೋಶಿನ್ ಕೊಕ್ಯು-ಹೋ (女神呼吸法) ಎಂಬ ವಿಧಾನವನ್ನು ಬೋಧಿಸಿದರು, ಇದನ್ನು "ಚೇತನವನ್ನು ಶುದ್ಧಮಾಡಲು ಉಸಿರಾಡುವ ವಿಧಾನ" ಎಂದು ಸ್ಥೂಲವಾಗಿ ತರ್ಜುಮೆ ಮಾಡಬಹುದು, ಆದಾಗ್ಯೂ, ಇದನ್ನು ಅಕ್ಷರಶಃ "ದೇವಿಯ ಉಸಿರಾಟ ವಿಧಾನ" ಎಂದು ತರ್ಜುಮೆ ಮಾಡಬಹುದು.[೮೩] ಜೋಶಿನ್ ಕೊಕ್ಯು-ಹೋವನ್ನು ನೇರವಾಗಿ ಕುಳಿತು, ಬೆನ್ನಿನ ಭಾಗವನ್ನು ನೆಟ್ಟಗಿಟ್ಟುಕೊಂಡು, ಮೂಗಿನ ಮೂಲಕ ನಿಧಾನವಾಗಿ ಉಸಿರಾಡುವ ಮೂಲಕ ನಡೆಸಲಾಗುತ್ತದೆ. ವೈದ್ಯರು ಉಸಿರನ್ನು ಎಳೆದುಕೊಂಡಾಗ, ಆಕೆ/ಆತನೂ ಸಹ ದೇಹದ ಶುದ್ಧೀಕರಣಕ್ಕಾಗಿ ರೇಖಿ ಶಕ್ತಿಯನ್ನು ಮುಕುಟ ಚಕ್ರದ ಮೂಲಕ ಉಸಿರಾಡುವುದರ ಜೊತೆಗೆ ರೇಖಿಯ ಸರಾಗ ಹರಿವಿಗೆ ದಾರಿ ಮಾಡಿಕೊಡುತ್ತಾರೆ, ಹಾಗು ಇದನ್ನು ಟ್ಯಾನ್ಡೆನ್ ಗೆ ಎಳೆದುಕೊಳ್ಳಲಾಗುತ್ತದೆ.[೮೩] ರೇಖಿಯ ಮೂರು ಆಧಾರಗಳು[ಬದಲಾಯಿಸಿ]ರೇಖಿಯ ಐದು ನಿಯಮಗಳ ಜೊತೆಯಲ್ಲಿ, ಉಸುಯಿ ತಮ್ಮ ರೇಖಿ ವಿಧಾನವನ್ನು ಇತರ ಮೂರು ಅಭ್ಯಾಸಗಳ ಮೇಲೆ ಸ್ಥಾಪಿಸಿದ್ದಾರೆ; ಗಾಷೋ ,ರೆಯಿಜೋ-ಹೋ , ಹಾಗು ಚಿರ್ಯೋ .[೧೦೮] ಗಾಷೋ[ಬದಲಾಯಿಸಿ]ಗಾಷೋ ("合掌"ಜಪಾನೀಸ್ ನಲ್ಲಿ "ಎರಡು ಕೈಗಳು ಒಟ್ಟಾಗಿ ಸೇರುವುದು" ಎಂಬ ಅರ್ಥವನ್ನು ನೀಡುತ್ತದೆ")ಎಂಬುದು ಧ್ಯಾನಸ್ಥ ಸ್ಥಿತಿಯಾಗಿದ್ದು, ಇದರಲ್ಲಿ ಎರಡೂ ಅಂಗೈಗಳನ್ನು ಒಟ್ಟಾಗಿ ಜೋಡಿಸಲಾಗುತ್ತದೆ, ಹಾಗು ಈ ವಿಧಾನವನ್ನು ಉಸುಯಿಯವರ ರೇಖಿ ಕಾರ್ಯಾಗಾರಗಳು/ಸಭೆಗಳ ಆರಂಭಕ್ಕೆ ಮುನ್ನ ಪ್ರತಿ ಬಾರಿಯೂ ಆಚರಿಸಲಾಗುತ್ತಿತ್ತು. ಗಾಷೋದ ಒಂದು ಪ್ರಯೋಗ ವಿಧಾನವೆಂದರೆ, ಎರಡೂ ಕೈಗಳ ಮಧ್ಯದ ಬೆರಳುಗಳು ಸಂಧಿಸುವ ಬೆರಳಿನ ಮಾಂಸಲಭಾಗದ ಮೇಲೆ ಗಮನವನ್ನು ಕೇಂದ್ರೀಕರಿಸಲಾಗುತ್ತದೆ.[೧೦೮] ರೆಯಿಜಿ-ಹೋ[ಬದಲಾಯಿಸಿ]ರೆಯಿಜಿ-ಹೋ (霊示法,ಅರ್ಥ "ರೇಖಿ ಶಕ್ತಿ ವಿಧಾನದ ಸೂಚನೆ") ವೈದ್ಯರ ಮೂಲಕ ಮೂರು ಬಾರಿ ಹರಿಯುವಂತೆ ಕೇಳಿಕೊಳ್ಳುವ ಮೂಲಕ ರೇಖಿ ಶಕ್ತಿಗೆ ಸಂಪರ್ಕವನ್ನು ಕಲ್ಪಿಸುವ ಮಾರ್ಗ, ಹಾಗು ಇದನ್ನು ಸಾಮಾನ್ಯವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಮೊದಲ ಭಾಗದಲ್ಲಿ ರೇಖಿ ಶಕ್ತಿಯು ವೈದ್ಯರ ಮೂಲಕ ಹರಿಯುವಂತೆ ಕೇಳಿಕೊಳ್ಳಲಾಗುತ್ತದೆ. ಇದು ಮುಕುಟ ಚಕ್ರದ ಮೂಲಕ(ಏಕೆಂದರೆ ಇದು ಉನ್ನತವಾದ ಆರೋಹಣವಾಗಿದೆ),ಅನಾಹತ(ಹೃದಯ)ಚಕ್ರದ ಮೂಲಕ(ರೇಖಿಯ ಶುದ್ಧ ಪ್ರೇಮದಿಂದ ಸೂಚಿತವಾಗುತ್ತದೆ), ಅಥವಾ ಕೈಗಳ ಮೂಲಕ(ನಿರ್ದಿಷ್ಟ ರೇಖಿ ಸಂಕೇತಗಳೊಂದಿಗೆ ಅಂಗೈಗಳನ್ನು ಅನುಷ್ಠಾನಗೊಳಿಸಲಾಗಿರುತ್ತದೆ)ಪ್ರವೇಶಿಸುತ್ತದೆ. ಎರಡನೇ ಹಂತದ ಪದವಿ ವಿದ್ಯಾರ್ಥಿಯು, ಮೂರನೇ/ದೂರದ ಸಂಕೇತವನ್ನು,ರೇಖಿಯೊಂದಿಗೆ ಮೊದಲ/ಶಕ್ತಿ ಸಂಕೇತದ ಜೊತೆಯಲ್ಲಿ ಬಳಸಬಹುದು;ದೂರದ ಸಂಕೇತವನ್ನು ಮೊದಲು ಕಳುಹಿಸಲಾಗುತ್ತದೆ ಹಾಗು ನಂತರದಲ್ಲಿ ಶಕ್ತಿ ಸಂಕೇತದೊಂದಿಗೆ ಭದ್ರಪಡಿಸಲಾಗುತ್ತದೆ.[೧೦೯] ಎರಡನೇ ಭಾಗದಲ್ಲಿ, ರೋಗಿಯು ನಿರ್ದಿಷ್ಟ ಅಸ್ವಸ್ಥತೆಯಿಂದ ಗುಣಮುಖನಾಗಲೆಂದು, ಅಥವಾ ಹಾಗಿಲ್ಲದಿದ್ದಲ್ಲಿ ವ್ಯಕ್ತಿಯ ಉತ್ತಮ ಆರೋಗ್ಯ/ಸ್ಥಿತಿಗೆ ಪ್ರಾರ್ಥಿಸಲಾಗುತ್ತದೆ.[೧೦೯] ಮೂರನೇ ಭಾಗದಲ್ಲಿ, ಎರಡೂ ಅಂಗೈಗಳನ್ನು ಮುಕ್ಕಣ್ಣಿಗೆ(ಎರಡು ಹುಬ್ಬುಗಳ ಮಧ್ಯದ ಭಾಗ) ಎದುರಾಗಿ ಮುಖಾಮುಖಿಯಾಗಿ ಹಿಡಿದುಕೊಳ್ಳಲಾಗುತ್ತದೆ, ಹಾಗು ಶಕ್ತಿಯ ಅಗತ್ಯವಿರುವ ಜಾಗಕ್ಕೆ ಕೈಗಳಿಗೆ ಮಾರ್ಗದರ್ಶನ ನೀಡಬೇಕೆಂದು ರೇಖಿ ಶಕ್ತಿಯನ್ನು ಕೇಳಿಕೊಳ್ಳಲಾಗುತ್ತದೆ.[೧೦೯] ಈ ವಿಧಾನವು ಬ್ಯೋಸೇನ್-ಹೋ ಗೆ ಸದೃಶವಾದರೂ, ರೆಯಿಜಿ ಹೋ ನಿರ್ದಿಷ್ಟವಾಗಿ ಗುಣಪಡಿಸಬೇಕಾದ ಜಾಗಕ್ಕೆ ಅಂತಃಪ್ರಜ್ಞೆಯ ಮೇಲೆ ಅವಲಂಬಿತವಾಗಿದೆ, ಆದರೆ ಬ್ಯೋಸೇನ್-ಹೋ ಕೈಗಳ ಮೂಲಕ ಗುಣಪಡಿಸಬೇಕಾದ ಜಾಗವನ್ನು ಸ್ಕ್ಯಾನ ಮಾಡಿ, ವೈದ್ಯರ ಕೈಗಳ ಸೆಳವರಿವುಗಳು ಹಾಗು ಗ್ರಾಹಿಯ ಸೆಳವರಿವುಗಳಲ್ಲಿ ಉಂಟಾಗುವ ಸೂಕ್ಷ್ಮ ಬದಲಾವಣೆಗಳನ್ನು ಗುರುತಿಸುತ್ತದೆ. ಚಿರ್ಯೋ[ಬದಲಾಯಿಸಿ]ಚಿರ್ಯೋ ದಲ್ಲಿ("治療" ಜಪಾನೀಸ್ ನಲ್ಲಿ "(ವೈದ್ಯಕೀಯ)ಚಿಕಿತ್ಸೆ" ಎಂಬ ಅರ್ಥವನ್ನು ನೀಡುತ್ತದೆ) ವೈದ್ಯರು ಆಕೆ/ಆತನ ಪ್ರಭಾವಿ ಕೈಯನ್ನು ಮುಕುಟ ಚಕ್ರದ ಮೇಲೆ ಇರಿಸಿ ಹಿಬಿಕಿಗೆ(響き, "ಪ್ರತಿಕ್ರಿಯೆ")ಕಾಯಬೇಕಾದ ಅಗತ್ಯವಿರುತ್ತದೆ, ಇದು ಅಂತಃಪ್ರೇರಣೆ ಅಥವಾ ಪ್ರಚೋದನೆಯ ರೂಪದಲ್ಲಿರುತ್ತದೆ, ನಂತರದಲ್ಲಿ ಕೈಗಳನ್ನು ಬಳಸಲಾಗುತ್ತದೆ. ಚಿರ್ಯೋವನ್ನು ನಡೆಸುವ ಅವಧಿಯಲ್ಲಿ, ವೈದ್ಯರು ಕೈಗಳನ್ನು ಸಡಿಲಿಸುತ್ತಾರೆ, ದೇಹಕ್ಕೆ ಹಾನಿಯಾದ ಭಾಗವನ್ನು ಅದಕ್ಕೆ ನೋವು ತಾಗುವವರೆಗೂ ಸ್ಪರ್ಶಿಸುತ್ತಾರೆ ಅಥವಾ ಮತ್ತೊಂದು ಭಾಗಕ್ಕೆ ಕೈಗಳು ಸ್ವಯಂ ಚಲಿಸುವವರೆಗೂ ಮುಟ್ಟುತ್ತಾರೆ.[೧೧೦] ಸಂಶೋಧನೆ, ವಿಮರ್ಶಾತ್ಮಕ ಅರ್ಹತೆ ನಿರ್ಧಾರ, ಹಾಗು ವಿವಾದ[ಬದಲಾಯಿಸಿ]ವೈಜ್ಞಾನಿಕ ಸಂಶೋಧನೆ[ಬದಲಾಯಿಸಿ]ರೇಖಿ ಶಕ್ತಿಯ ಬಗೆಗಿನ ನಿರೂಪಣೆಗಳು ಯಾವುದೇ ಪರಿಚಿತ ಸೈದ್ಧಾಂತಿಕ ಅಥವಾ ಜೀವಭೌತ ಆಧಾರವನ್ನು ಹೊಂದಿಲ್ಲ.[೪][೧೧೧] ೨೦೦೮ರಲ್ಲಿ ನಡೆಸಲಾದ ಯಾದೃಚ್ಛೀಕರಿಸಲಾದ ಪ್ರಾಯೋಗಿಕ ಪರೀಕ್ಷೆಗಳ ಒಂದು ಕ್ರಮಬದ್ಧ ವಿಮರ್ಶೆಯು ರೇಖಿಯ ಬಗೆಗಿನ ಸಾಕ್ಷ್ಯಾಧಾರಗಳನ್ನು ನಿರ್ಣಯಿಸಿತು, ಇದರಂತೆ ಯಾವುದೇ ಪರಿಸ್ಥಿತಿಗೆ ಪರಿಣಾಮಕಾರಿತ್ವವು ನಿರೂಪಿತವಾಗಿಲ್ಲವೆಂದು ತೀರ್ಮಾನಿಸಲಾಯಿತು.[೪] ಒಂಬತ್ತು ಅಧ್ಯಯನಗಳು ಅಂತರ್ವೇಶನ ಮಾನದಂಡಕ್ಕೆ ಸರಿಹೊಂದುತ್ತವೆ; ಮಾರ್ಪಡಿಸಲಾದ ಕ್ರಮಶಾಸ್ತ್ರೀಯ ಗುಣಮಟ್ಟದ ಜಡಾಡ್ ಸ್ಕೋರ್ ನ್ನು ಬಳಸಲಾಯಿತು, ಇದರಲ್ಲಿ ಪ್ರಾಯೋಗಿಕ ಚಿಕಿತ್ಸೆಗಳನ್ನು ನಡೆಸುವ ವೈದ್ಯರುಗಳನ್ನು ಗಣನೆಗೆ ತೆಗೆದುಕೊಳ್ಳುವುದು ಬಹಳ ಕಷ್ಟಕರವಾಯಿತು. ಯಾದೃಚ್ಛೀಕರಿಸದ ಅಧ್ಯಯನಗಳನ್ನು ಕೈಬಿಡಲಾಯಿತು, ಇಂತಹ ಅಧ್ಯಯನಗಳಲ್ಲಿ ಉದ್ದೇಶಿತ ಅಥವಾ ಅನುದ್ದೇಶಿತ ಪೂರ್ವಾಗ್ರಹಗಳ ಸಾಧ್ಯತೆಯು ಬಹಳವಾಗಿ ಕಂಡುಬರುವುದರ ಜೊತೆಗೆ, ಅರ್ಥವಿವರಣೆ ನೀಡಲಾಗದ ಪರಿಣಾಮಗಳನ್ನು ನೀಡುತ್ತಿತ್ತು. ಒಟ್ಟಾರೆಯಾಗಿ, ಸಾಕ್ಷ್ಯಾಧಾರದ ಕ್ರಮಶಾಸ್ತ್ರೀಯ ಗುಣಮಟ್ಟವು ಕಳಪೆಯಾಗಿತ್ತು ಏಕೆಂದರೆ ಹೆಚ್ಚಿನ ಅಧ್ಯಯನಗಳು ಸಣ್ಣದಾದ ಮಾದರಿ, ಸಾಕಷ್ಟಿಲ್ಲದ ಅಧ್ಯಯನ ವಿನ್ಯಾಸ ಹಾಗು ಕಳಪೆ ವರದಿಗಳಂತಹ ಲೋಪಗಳನ್ನು ಎದುರಿಸಿತು, ಜೊತೆಗೆ ಉತ್ತಮ ಗುಣಮಟ್ಟದ ಅಧ್ಯಯನಗಳೂ ಸಹ ಪ್ಲಸಿಬೋ(ಹೊಸ ಔಷಧಗಳ ಪರೀಕ್ಷಾರ್ಥವಾಗಿ ನಡೆಸುವ ಪ್ರಯೋಗಗಳಲ್ಲಿ ತಾಳೆ ನೋಡಲು ಆಧಾರವಾಗಿ, ಪ್ರಮಾಣವಾಗಿ ಇಟ್ಟುಕೊಂಡಿರುವ ಔಷಧ) ಪರಿಣಾಮದ ಮೇಲೆ ಸಂಪೂರ್ಣವಾದ ನಿಯಂತ್ರಣವನ್ನು ಗಳಿಸುವಲ್ಲಿ ವಿಫಲವಾಯಿತು."[೪] ಇಂತಹ ಲೋಪಗಳ ಪ್ರಾಯೋಗಿಕ ಪರೀಕ್ಷಾ ವಿಧಾನಗಳು, ಉತ್ಪ್ರೇಕ್ಷಿತವಾದ ಚಿಕಿತ್ಸಾ ಪರಿಣಾಮಗಳನ್ನು ಪ್ರದರ್ಶಿಸುತ್ತಿತ್ತು, ಯಾವುದೇ ವೈದ್ಯಕೀಯ ಪರಿಸ್ಥಿತಿಗೆ ಏಕಮಾತ್ರವಾಗಿ ಅಥವಾ ಸಹಾಯಕ ಚಿಕಿತ್ಸೆಯಾಗಿ ರೇಖಿಯು ಪರಿಣಾಮಕಾರಿಯಾಗಿದೆಯೆಂದು ಸೂಚಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ, ಅಥವಾ ಸಂಭಾವ್ಯ ಪ್ಲಸಿಬೋ ಪರಿಣಾಮಗಳ ಆಚೆಗೂ ಯಾವುದೇ ಪ್ರಯೋಜನಗಳನ್ನು ಹೊಂದಿದೆಯೆಂದು ಹೇಳಲಾಗುವುದಿಲ್ಲ.[೪][೧೧೨] ಒಂದು ವಾಸ್ತವಿಕ ಪ್ಲಸಿಬೋವನ್ನು ವಿನ್ಯಾಸಗೊಳಿಸುವುದು ಕಷ್ಟಕರವಾಗಿರುವ ಕಾರಣದಿಂದಾಗಿ ರೇಖಿಯ ಪ್ಲಸಿಬೋ ಪ್ರಾಯೋಗಿಕ ಪರೀಕ್ಷೆಗಳು ಜಟಿಲವಾಗಿವೆ.[೧೧೩] ೨೦೦೯ರಲ್ಲಿ ದಿ ಜರ್ನಲ್ ಆಫ್ ಆಲ್ಟರ್ನೇಟಿವ್ ಅಂಡ್ ಕಾಮ್ಪ್ಲಿಮೆಂಟರಿ ಮೆಡಿಸಿನ್ ನಲ್ಲಿ ಕಂಡುಬಂದ ಒಂದು ವಿಮರ್ಶೆಯ ಪ್ರಕಾರ "ಅಸ್ತಿತ್ವದಲ್ಲಿರುವ ಸೀಮಿತ ರೇಖಿ ಅಧ್ಯಯನಗಳ ಗಂಭೀರ ಕ್ರಮಶಾಸ್ತ್ರೀಯ ಹಾಗು ವಿವರಣಾತ್ಮಕ ಪ್ರತಿಬಂಧಗಳು, ಅದರ ಪರಿಣಾಮಕಾರಿತ್ವದ ಮೇಲೆ ನಿರ್ಣಾಯಕ ತೀರ್ಮಾನಕ್ಕೆ ಅಡ್ಡಿಪಡಿಸುತ್ತವೆ."[೧೧೪] ಸುರಕ್ಷತೆ ಹಾಗು ಪರಿಣಾಮಕಾರಿತ್ವ[ಬದಲಾಯಿಸಿ]ರೇಖಿಯಲ್ಲಿನ ಸುರಕ್ಷತೆಯ ಬಗ್ಗೆ ಕಾಳಜಿಯು, ಇತರ ಪ್ರಮಾಣೀಕರಿಸದ ಪರ್ಯಾಯ ಚಿಕಿತ್ಸೆಗಳೆಡೆಗೆ ಇರುವ ಕಾಳಜಿಗೆ ಸದೃಶವಾಗಿದೆ. ಔಷಧಶಾಸ್ತ್ರದ ವೈದ್ಯರುಗಳು ಹಾಗು ಅದಕ್ಕೆ ಸಂಬಂಧಿಸಿದ ಆರೋಗ್ಯ ಕಾಳಜಿ ಕೆಲಸಗಾರರು, ಗಂಭೀರ ಪರಿಸ್ಥಿತಿಗಳಲ್ಲಿ ರೋಗಿಗಳು ದೃಢಪಡದ ಪ್ರಾಯೋಗಿಕ ಚಿಕಿತ್ಸೆಗಳನ್ನು ಆಯ್ಕೆ ಮಾಡಿಕೊಂಡು ಪ್ರಾಯೋಗಿಕವಾಗಿ ದೃಢಪಟ್ಟ ಚಿಕಿತ್ಸೆಗಳನ್ನು ತಳ್ಳಿಹಾಕಬಹುದು.[೧೧೫] ರೇಖಿ ವೈದ್ಯರುಗಳು ತಮ್ಮ ರೋಗಿಗಳಿಗೆ ಅವರ ಗಂಭೀರ ಪರಿಸ್ಥಿತಿಗಳಲ್ಲಿ ಔಷಧಶಾಸ್ತ್ರದ ವೈದ್ಯರನ್ನು ಭೇಟಿ ಮಾಡುವಂತೆ ಸಲಹೆ ನೀಡುವುದರ ಜೊತೆಗೆ ರೇಖಿಯನ್ನು ಸಾಂಪ್ರದಾಯಿಕ ಚಿಕಿತ್ಸೆಗೆ ಪೂರಕವಾಗಿ ಬಳಸಬಹುದೆಂದು ತಿಳಿಸಬಹುದು.[೧೧೬] ಪ್ರಾಯೋಗಿಕ ಪರೀಕ್ಷೆಗಳು, ರೇಖಿಯ ಬಳಕೆಯಿಂದ ಯಾವುದೇ ಮಹತ್ವದ ಪ್ರತಿಕೂಲ ಪರಿಣಾಮವನ್ನು ಉಂಟುಮಾಡಿದ್ದಾರ ಬಗ್ಗೆ ವರದಿ ಮಾಡಿಲ್ಲ.[೪] ದಿ ನ್ಯಾಷನಲ್ ಕೌನ್ಸಿಲ್ ಅಗೈನ್ಸ್ಟ್ ಹೆಲ್ತ್ ಫ್ರಾಡ್ ನ ವಿಲ್ಲಿಯಮ್ T. ಜಾರ್ವಿಸ್, Ph.D., ರೇಖಿಯ ಯಾವುದೇ ಪ್ರಾಯೋಗಿಕ ಪರಿಣಾಮವು ಸಲಹೆಯಿಂದ ಉಂಟಾಗಿರಬಹುದೆಂದು ಸೂಚಿಸುತ್ತಾರೆ.[೧೧೭] ಆಂತರಿಕ ವಿವಾದಗಳು[ಬದಲಾಯಿಸಿ]ರೇಖಿ ಕಲಿಕೆಗೆ ಬಳಸಲಾಗುವ ವಿವಿಧ ವಿಧಾನಗಳ ಜೊತೆಯಲ್ಲಿ, ವಿವಿಧ ಗುಂಪುಗಳು, ಶಿಕ್ಷಕರು, ಹಾಗು ವೈದ್ಯರುಗಳ ನಡುವೆ ವಿವಾದಗಳು ಹುಟ್ಟಿಕೊಂಡಿವೆ. ಸ್ವತಃ ರೇಖಿ ಶಕ್ತಿಯ ಸ್ವರೂಪದಂತಹ ವಿಷಯಗಳು, ಕೋರ್ಸ್ ಗಳಿಗೆ ಹಾಗು ಚಿಕಿತ್ಸೆಗಳಿಗೆ ಪಡೆಯಲಾಗುವಂತ ಶುಲ್ಕಗಳ ಬಗ್ಗೆ, ತರಬೇತಿಯ ವಿಧಾನಗಳ ಬಗ್ಗೆ, ಸಂಕೇತಗಳ ಗೋಪ್ಯತೆಯ ಬಗ್ಗೆ, ಹಾಗು ಅನುಷ್ಠಾನ ವಿಧಾನಗಳ ಬಗ್ಗೆ ವಿವಾದಗಳು ಅಸ್ತಿತ್ವದಲ್ಲಿವೆ.[೧೧೮][೧೧೯] ಹವಾಯೋ ತಕಾತರ ನಿಧನದ ನಂತರ, ೧೯೯೦ರ ಉದ್ದಕ್ಕೂ, ರೇಖಿಯ "ಗ್ರ್ಯಾಂಡ್ ಮಾಸ್ಟರ್" ಎಂಬ ಬಿರುದಿನ ಬಗ್ಗೆ ಎದುರಾಳಿಗಳಲ್ಲಿ ಪ್ರತಿಪಾದನೆಗಳು ಉಂಟಾಗಿದ್ದವು. ಆದಾಗ್ಯೂ, ಈ ಪದವನ್ನು ತಕಾತ ಸ್ವತಃ ಸೃಷ್ಟಿಸಿದ್ದೆಂದು ಪತ್ತೆಯಾದ ನಂತರ ಈ ವಿವಾದವು ತಣ್ಣಗಾಯಿತು.[೧೨೦] ಕ್ಯಾಥೊಲಿಕ್ ಚರ್ಚ್ ನ ಕಾಳಜಿಗಳು[ಬದಲಾಯಿಸಿ]ಮಾರ್ಚ್ ೨೦೦೯ರಲ್ಲಿ ಡಾಕ್ಟರಿನ್ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಕಾನ್ಫರೆನ್ಸ್ ಆಫ್ ಕ್ಯಾಥೊಲಿಕ್ ಬಿಶಪ್ಸ್ ಸಮಿತಿಯು ಕಾನೂನನ್ನು ರೂಪಿಸಿತು(ಗೈಡ್ ಲೈನ್ಸ್ ಫಾರ್ ಇವ್ಯಾಲ್ಯುವೇಟಿಂಗ್ ರೇಖಿ ಆಸ್ ಆನ್ ಆಲ್ಟರ್ನೇಟಿವ್ ಥೆರಪಿ ),[೧೨೧] ಇದರಂತೆ ಕೆಲ ಕ್ಯಾಥೊಲಿಕ್ ಆರೈಕೆ ಕೇಂದ್ರಗಳಲ್ಲಿ ಹಾಗು ಆಸ್ಪತ್ರೆಗಳಲ್ಲಿ ಕ್ಯಾಥೊಲಿಕ್ ಗಳು ಚಿಕಿತ್ಸೆಗಾಗಿ ಬಳಸುತ್ತಿದ್ದ ರೇಖಿ ಪದ್ಧತಿಯನ್ನು ಬಳಸದಂತೆ ತಡೆಹಿಡಿಯಿತು. ಕಾನೂನಿನ ತೀರ್ಮಾನವು ಈ ರೀತಿಯಾಗಿತ್ತು "ರೇಖಿ ಚಿಕಿತ್ಸಾ ಪದ್ಧತಿಯು ಕ್ರೈಸ್ತಧರ್ಮದ ಬೋಧನೆ ಅಥವಾ ವೈಜ್ಞಾನಿಕ ಸಾಕ್ಷ್ಯಾಧಾರಕ್ಕೆ ಸಂಗತವಾಗಿರದ ಕಾರಣ, ಕ್ಯಾಥೊಲಿಕ್ ಸಂಸ್ಥೆಗಳಾದ ಕ್ಯಾಥೊಲಿಕ್ ಆರೋಗ್ಯ ಕಾಳಜಿ ಸೌಲಭ್ಯಗಳು ಹಾಗು ಆರೈಕೆ ಕೇಂದ್ರಗಳು, ಅಥವಾ ಚರ್ಚನ್ನು ಪ್ರತಿನಿಧಿಸುವ ವ್ಯಕ್ತಿ, ಉದಾಹರಣೆಗೆ ಕ್ಯಾಥೊಲಿಕ್ ಪಾದ್ರಿಗಳು, ರೇಖಿ ಚಿಕಿತ್ಸಾ ಪದ್ಧತಿಯನ್ನು ಪ್ರಚಾರಪಡಿಸಲು ಅಥವಾ ಅದಕ್ಕೆ ನೆರವು ನೀಡುವುದು ಸಮಂಜಸವಲ್ಲ." ಇವನ್ನೂ ಗಮನಿಸಿ[ಬದಲಾಯಿಸಿ]
ಉಲ್ಲೇಖಗಳು[ಬದಲಾಯಿಸಿ]
ಗ್ರಂಥಸೂಚಿ[ಬದಲಾಯಿಸಿ]
ಬಾಹ್ಯ ಕೊಂಡಿಗಳು[ಬದಲಾಯಿಸಿ]Look up Reiki in Wiktionary, the free dictionary. Wikimedia Commons has media related to Reiki.
|
- Pages using the JsonConfig extension
- CS1 errors: unsupported parameter
- CS1 errors: ISBN
- CS1 errors: external links
- CS1 maint: unrecognized language
- CS1 errors: unrecognized parameter
- CS1 errors: dates
- CS1 maint: bot: original URL status unknown
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: empty unknown parameters
- CS1 errors: access-date without URL
- CS1 errors: missing name
- Articles containing Chinese-language text
- Articles containing Japanese-language text
- Articles containing Korean-language text
- Articles containing Vietnamese-language text
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with hatnote templates targeting a nonexistent page
- Commons category link is on Wikidata
- ಬಯೋಫೀಲ್ಡ್ ಚಿಕಿತ್ಸೆಗಳು
- ಜಪಾನೀಸ್ ಧಾರ್ಮಿಕ ಪದಗಳು
- ನವಯುಗದ ಆಚರಣೆಗಳು
- ಆರೋಗ್ಯ