ವಿಷಯಕ್ಕೆ ಹೋಗು

ರಾಮಾ ರಾಮಾ ರೇ... (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಮಾ ರಾಮಾ ರೇ...
ನಿರ್ದೇಶನಡಿ. ಸತ್ಯ ಪ್ರಕಾಶ್
ನಿರ್ಮಾಪಕಕನ್ನಡ ಕಲರ್ ಸಿನಿಮಾಸ್
ಲೇಖಕಡಿ. ಸತ್ಯ ಪ್ರಕಾಶ್
ಚಿತ್ರಕಥೆಧನಂಜಯ್ ರಂಜನ್
ನಾಗೇಂದ್ರ ಎಚ್ ಎಸ್
ಡಿ. ಸತ್ಯ ಪ್ರಕಾಶ್
ಕಥೆಡಿ. ಸತ್ಯ ಪ್ರಕಾಶ್
ಪಾತ್ರವರ್ಗಕೆ ಜಯರಾಮ್
ನಟರಾಜ್
ಧರ್ಮಣ್ಣ ಕಡೂರು
ಬಿಂಬಶ‍್ರೀ ನೀನಾಸಂ
ಎಂ ಕೆ ಮಠ
ರಾಧಾ ರಾಮಚಂದ್ರ
ಶ್ರೀಧರ್
ಪ್ರಿಯಾ ಸುದರ್ಶನ್
ಸಂಗೀತಹಿನ್ನೆಲೆ ಸಂಗೀತ:
ನೊಬಿನ್ ಪೌಲ್
ಹಾಡುಗಳು:
ವಾಸುಕಿ ವೈಭವ್
ಛಾಯಾಗ್ರಹಣಲವಿತ್
ಸಂಕಲನಬಿ. ಎಸ್. ಕೆಂಪರಾಜ್
ಸ್ಟುಡಿಯೋಕನ್ನಡ ಕಲರ್ ಸಿನಿಮಾಸ್
ವಿತರಕರುಎನ್ ಎಂ ಎಂಟರ್‌ಟೈನ್ಮೆಂಟ್
ಬಿಡುಗಡೆಯಾಗಿದ್ದು
  • 21 ಅಕ್ಟೋಬರ್ 2016 (2016-10-21)
ಅವಧಿ112 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ರಾಮಾ ರಾಮಾ ರೇ... ಡಿ ಸತ್ಯ ಪ್ರಕಾಶ್ ಬರೆದು ನಿರ್ದೇಶಿಸಿದ 2016 ರ ಭಾರತೀಯ ಕನ್ನಡ ಚಲನಚಿತ್ರವಾಗಿದೆ. [] [] ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯೊಬ್ಬ ಜೈಲಿನಿಂದ ತಪ್ಪಿಸಿಕೊಂಡು, ಕೊನೆಗೆ ಆಕಸ್ಮಿಕವಾಗಿ ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿಯೊಂದಿಗೆ ಪ್ರಯಾಣಿಸುವ ಕಥೆಯಾಗಿದೆ. ಈ ಚಿತ್ರವು 21 ಅಕ್ಟೋಬರ್ 2016 ರಂದು ಬಿಡುಗಡೆಯಾಯಿತು [] ಈ ಚಿತ್ರವನ್ನು 2018 ರಲ್ಲಿ ರಾಕ್‌ಲೈನ್ ವೆಂಕಟೇಶ್ ಅವರು ಆಟಗಧರಾ ಶಿವ ಎಂಬ ಹೆಸರಿನಲ್ಲಿ ತೆಲುಗಿನಲ್ಲಿ ರೀಮೇಕ್ ಮಾಡಿದರು. [] ಸದ್ಯ ಈ ಚಿತ್ರ ಮರಾಠಿಗೆ ರಿಮೇಕ್ ಆಗುತ್ತಿದೆ. []

ತಾರಾಗಣ

[ಬದಲಾಯಿಸಿ]
  • ರಾಮಣ್ಣನಾಗಿ ಕೆ.ಜಯರಾಮ್
  • ಸ್ಯಾಂಡಲ್ ರಾಜನಾಗಿ ನಟರಾಜ್
  • ಧರ್ಮಣ್ಣ ಕಡೂರು ಧರ್ಮ ಆಗಿ
  • ಟ್ರಕ್ ಚಾಲಕನಾಗಿ ಭಾಸ್ಕರ್ ದೇವ್
  • ಸುಬ್ಬಿಯಾಗಿ ಬಿಂಬಶ್ರೀ ನೀನಾಸಂ
  • ಕುಡುಕ ಬೈಕ್ ಸವಾರನಾಗಿ ಎಂ.ಕೆ.ಮಠ
  • ಸೈನಿಕನಾಗಿ ಶ್ರೀಧರ್
  • ಅತ್ತೆಯಾಗಿ ರಾಧಾ ರಾಮಚಂದ್ರ
  • ಗರ್ಭಿಣಿಯಾಗಿ ಪ್ರಿಯಾ
  • ರಾಮಣ್ಣನ ಡ್ಯೂಪ್ ಆಗಿ ಪ್ರಕಾಶ್ ಚಂದ್

ನಿರ್ಮಾಣ

[ಬದಲಾಯಿಸಿ]

ಪ್ರಾರಂಭ

[ಬದಲಾಯಿಸಿ]

ಈ ಹಿಂದೆ ಜಯನಗರ 4 ನೇ ಬ್ಲಾಕ್ ಎಂಬ ಕನ್ನಡ ಕಿರುಚಿತ್ರವನ್ನು ನಿರ್ದೇಶಿಸಿದ್ದ ಡಿ ಸತ್ಯ ಪ್ರಕಾಶ್ ಅವರು ಭಗವದ್ಗೀತೆಯಲ್ಲಿದ್ದ ಜೀವನ ಮತ್ತು ಮರಣದ ಬಗೆಗಿನ ಕಥೆಯಿಂದ ಪ್ರಭಾವಿತರಾದಾಗ ಈ ಕಥಾವಸ್ತುವಿನ ಕಲ್ಪನೆಯನ್ನು ಪಡೆದರು. ಅವರು ತಮ್ಮ ಆತ್ಮೀಯ ಸ್ನೇಹಿತ ನಾಗೇಂದ್ರ ಎಚ್‌ ಎಸ್ ಮತ್ತು ಧನಂಜಯ್ ರಂಜನ್ ಅವರೊಂದಿಗೆ ಕಥೆಯ ಸಾರದ ಬಗ್ಗೆ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಅದರ ಸುತ್ತ ಕಥೆಯನ್ನು ಅಭಿವೃದ್ಧಿಪಡಿಸಿದರು. ಆದರೆ, ಶೂಟಿಂಗ್ ಶೆಡ್ಯೂಲ್ ಮುಗಿಯುವವರೆಗೂ ಸ್ಕ್ರಿಪ್ಟ್ ಅನ್ನು ಪರಿಷ್ಕರಿಸುತ್ತಾ ಇದ್ದರು. ಹಾಗಾಗಿ ಚಿತ್ರದ ಸ್ಕ್ರಿಪ್ಟ್ ಎಂದಿಗೂ ಪೂರ್ಣಗೊಂಡಿರಲಿಲ್ಲ ಎನ್ನುತ್ತಾರೆ ನಿರ್ದೇಶಕರು. ನಟರಾಜ್ ಅವರು ತಮ್ಮ ಪಾತ್ರದ ಆಳಕ್ಕೆ ಹೋಗಲು ಸಾಕಷ್ಟು ಸಿದ್ಧತೆಗಳನ್ನು ಮಾಡಬೇಕಾಗಿತ್ತು. ತೂಕ ಇಳಿಸಿಕೊಂಡು ತಿಂಗಳಾನುಗಟ್ಟಲೆ ಆಶ್ರಯ ಇರದಂತೆ ಕಾಣುವ ಮೂಲಕ ಪಾತ್ರಕ್ಕಾಗಿ ತಯಾರಿ ನಡೆಸಿದ್ದರು. ಪಾತ್ರಕ್ಕಾಗಿ ಅವರು ಕಟ್ಟುನಿಟ್ಟಾಗಿ ಕೆಲಸ ಮಾಡಿದರು. ಅವರು ಬೆಳಿಗ್ಗೆ 5 ಗಂಟೆಗೆ ಏಳುತ್ತಿದ್ದರು, 5 ಕಿ. ಮೀ. ಓಡುತ್ತಿದ್ದರು. ಸ್ವಲ್ಪ ಬಾದಾಮಿ ತಿನ್ನುತ್ತಿದ್ದರು.ಅವರ ಊಟದಲ್ಲಿ ಉಪ್ಪು/ಖಾರ/ಮಸಾಲೆ/ಸಿಹಿ ಇರಲಿಲ್ಲ. ಅವರ ಊಟದಲ್ಲಿ ಪ್ರತಿದಿನ ಕೆಲವು ತರಕಾರಿಗಳು ಮತ್ತು 2 ಚಪಾತಿಗಳು ಇದ್ದವು. ಇದು ಅವರ 6 ತಿಂಗಳ ದಿನಚರಿಯಾಗಿತ್ತು. ಪಾತ್ರಕ್ಕಾಗಿ ಅವರು 76 ಕೆಜಿಯಿಂದ 52 ಕೆಜಿಗೆ ಇಳಿಸಿದ್ದರು. ಪ್ರೇಮಿಗಳ ಪಾತ್ರದಲ್ಲಿ ನಟಿಸಿದ ಧರ್ಮಣ್ಣ ಕಡೂರ್ ಮತ್ತು ಬಿಂಬಶ್ರೀ ನೀನಾಸಂ ಅವರನ್ನು ನಂತರ ಇತರ ಪ್ರಮುಖ ಪಾತ್ರಗಳಿಗೆ ಅಂತಿಮಗೊಳಿಸಲಾಯಿತು. ಇದರ ನಂತರ, ತಂಡವು ಸ್ಥಳಗಳ ಹುಡುಕಾಟದಲ್ಲಿ ವಿವಿಧ ಸ್ಥಳಗಳಿಗೆ ಪ್ರಯಾಣಿಸಲು ಪ್ರಾರಂಭಿಸಿತು.

ರಾಮಣ್ಣನ ಪಾತ್ರದಲ್ಲಿ ನಟಿಸಿರುವ ಕೆ.ಜಯರಾಂ ಅವರು ಚಿತ್ರ ಬಿಡುಗಡೆಗೂ ಮುನ್ನವೇ ಮರಣ ಹೊಂದಿದರು. ಚಿತ್ರದ ಆರಂಭಿಕ ಕ್ರೆಡಿಟ್‌ಗಳಲ್ಲಿ ಅವರ ಉಲ್ಲೇಖವೂ ಇದೆ.

ಚಿತ್ರೀಕರಣ

[ಬದಲಾಯಿಸಿ]

ಛಾಯಾಗ್ರಹಣ ನಿರ್ದೇಶಕರು, ನಟರು ಮತ್ತು ನಿರ್ದೇಶಕರನ್ನು ಒಳಗೊಂಡ ತಂಡವು ಕಥೆಗೆ ಬೇಕಾದ ಸ್ಥಳಗಳನ್ನು ಹುಡುಕಲು ಸುಮಾರು 8000 ಕಿಲೋಮೀಟರ್‌ಗಳ ಪ್ರಯಾಣ ಮಾಡಿತು. [] ಅಂತಿಮವಾಗಿ ವಿಜಯಪುರದ ಹತ್ತಿರದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಿ 40 ದಿನಗಳ ಕಾಲ ಚಿತ್ರೀಕರಣ ನಡೆಸಿತು. ಚಿತ್ರದ ಮೊದಲ ಹಾಡಿಗೆ ಪರ್ವತಗಳು, ಕಣಿವೆಗಳು, ಹುಲ್ಲುಗಾವಲು/ಗದ್ದೆಗಳು, ಕೋಟೆಗಳು, ಜಲಪಾತಗಳು, ಕಡಲತೀರಗಳು ಹೀಗೆ ವಿವಿಧ ತಾಣಗಳಲ್ಲಿ ಚಿತ್ರೀಕರಿಸುವ ಅಗತ್ಯವಿತ್ತು. ತಂಡವು 20 ದಿನಗಳಲ್ಲಿ 2,500 ಕಿಮೀ ಪ್ರಯಾಣಿಸಿ ಕರ್ನಾಟಕದ ಕೆಲವು ಉತ್ತಮ ಸ್ಥಳಗಳನ್ನು ಆಯ್ಕೆ ಮಾಡಿತು. ಜೀಪ್ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಒಂದಾಗಿರುವುದರಿಂದ, ತಂಡವು ಹಳೆಯ ಜೀಪನ್ನು ಖರೀದಿಸಿತು ಮತ್ತು ಅಗತ್ಯಕ್ಕೆ ಅನುಗುಣವಾಗಿ ಅದನ್ನು ಬದಲಾಯಿಸಿತು. ಚಿತ್ರದ 90% ಭಾಗವು ವಿಜಯಪುರ (ಬಿಜಾಪುರ) ಪಟ್ಟಣದ ಸಮೀಪವಿರುವ ಹಳ್ಳಿಯೊಂದರ ರಸ್ತೆಯಲ್ಲಿ ಚಿತ್ರೀಕರಣಗೊಂಡರೆ, ಉಳಿದ ಭಾಗವನ್ನು ಬೆಂಗಳೂರಿನ ಸ್ಟುಡಿಯೋಗಳಲ್ಲಿ ಚಿತ್ರೀಕರಿಸಲಾಗಿದೆ.

ಸಂಗೀತ

[ಬದಲಾಯಿಸಿ]

ಹಿನ್ನೆಲೆ ಸಂಗೀತವನ್ನು ನೋಬಿನ್ ಪಾಲ್ ಸಂಯೋಜಿಸಿದ್ದಾರೆ ಮತ್ತು ಹಾಡುಗಳನ್ನು ವಾಸುಕಿ ವೈಭವ್ ಸಂಯೋಜಿಸಿದ್ದಾರೆ. ಎಲ್ಲಾ ಹಾಡುಗಳ ಸಾಹಿತ್ಯವನ್ನು ಸತ್ಯ ಪ್ರಕಾಶ್ ಬರೆದಿದ್ದಾರೆ.

ವಿಮರ್ಶಾತ್ಮಕ ಪ್ರತಿಕ್ರಿಯೆ

[ಬದಲಾಯಿಸಿ]

ಡೆಕ್ಕನ್ ಕ್ರಾನಿಕಲ್‌ನ ಶಶಿಪ್ರಸಾದ್ ಎಸ್‌ ಎಂ ಅವರು ಚಿತ್ರಕ್ಕೆ 4/5 ಸ್ಟಾರ್‌ಗಳನ್ನು ನೀಡಿದರು, "ಜೀವನ ಮತ್ತು ಮರಣದ 'ಮಿಸ್ ಮಾಡಲಾಗದ' ಪ್ರಯಾಣ" ಎಂದು ಹೇಳಿದರು. [] "ಅದರ ಪ್ರತಿಯೊಂದು ಭಾಗವನ್ನು ಇಷ್ಟಪಟ್ಟಿದ್ದೇನೆ. ನಿಸ್ಸಂದೇಹವಾಗಿ ಇದು ವರ್ಷದ ಅತ್ಯುತ್ತಮ ಚಲನಚಿತ್ರ" ಎಂದೂ ಹೇಳಿದರು. []

ಟೈಮ್ಸ್ ಆಫ್ ಇಂಡಿಯಾದ ಸುನಯನಾ ಸುರೇಶ್ ಅವರು ಚಲನಚಿತ್ರವನ್ನು 4/5 ಎಂದು ರೇಟ್ ಮಾಡಿದ್ದಾರೆ, " ಖಂಡಿತವಾಗಿಯೂ ಇಲ್ಲಿ ನಿರೂಪಣೆಯೇ ರಾಜ, ಬಲವಾದ ಪಾತ್ರವರ್ಗ ಮತ್ತು ಚಿತ್ರತಂಡ ಪೂರಕವಾಗಿವೆ" ಎಂದು ಹೇಳಿದ್ದಾರೆ. []

ದಿ ಹಿಂದೂ ಪತ್ರಿಕೆಯ ಅರ್ಚನಾ ನಾಥನ್ ಬರೆದಿದ್ದಾರೆ, " ರಾಮಾ ರಾಮಾ ರೇ ಹಾಡಿನಂತೆ ತೆರೆದುಕೊಳ್ಳುತ್ತದೆ. ನೀವು ಚಿತ್ರಮಂದಿರದಿಂದ ಹೊರಬಂದ ನಂತರವೂ, ಅದು ನಿಮ್ಮ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುತ್ತದೆ." ಐದು ಅತ್ಯುತ್ತಮ ಕನ್ನಡ ಚಿತ್ರಗಳ ಪಟ್ಟಿಯಲ್ಲಿ ನಾಥನ್ ಅವರು ಈ ಚಿತ್ರಕ್ಕೆ ಎರಡನೇ ಸ್ಥಾನ ನೀಡಿದ್ದಾರೆ. [೧೦]

ಪುರಸ್ಕಾರಗಳು

[ಬದಲಾಯಿಸಿ]

 

2016 ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ
  • ಮೊದಲ ಅತ್ಯುತ್ತಮ ಕನ್ನಡ ಚಿತ್ರ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
64 ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್
  • ನಾಮನಿರ್ದೇಶಿತ, ಅತ್ಯುತ್ತಮ ಚಿತ್ರ - ಕನ್ನಡ
  • ಅತ್ಯುತ್ತಮ ಹಿನ್ನೆಲೆ ಗಾಯಕಿ – ಕನ್ನಡ — ಅನನ್ಯ ಭಟ್ ("ನಮ್ಮ ಕಾಯೋ ದೇವರೇ")

ಉಲ್ಲೇಖಗಳು

[ಬದಲಾಯಿಸಿ]
  1. "Rama Rama Re complete — Kannada Movie News". IndiaGlitz.com. 2016-10-11. Archived from the original on 20 October 2016. Retrieved 2016-10-19.
  2. Kumar, Santhosh (2016-09-01). "Rama Rama Re: Celebrities Heap Praises On The Trailer". Filmibeat.com. Retrieved 2016-10-19.
  3. "Rama Rama Re releasing on Oct 21st". Filmykannada.com. Archived from the original on 2016-10-20. Retrieved 2016-10-19.
  4. Chowdhary, Y. Sunita (20 July 2018). "Aatagadara Siva review : Plot so poignant". The Hindu.
  5. "ಲಾಕ್ ಡೌನ್ ಮಧ್ಯೆ 'ರಾಮಾ ರಾಮಾ ರೇ' ಸೌಂಡ್ - Tv5 Kannada". tv5kannada.com. Archived from the original on 2020-05-17.
  6. "Rama Rama Re Movie — Jayaram, Nataraj S Bhat — Dir: Sathya Prakash | Shivu aDDa — Kannada Movies Discussion Forum". Sandalwoodking.rocks. Retrieved 2016-10-19.[ಶಾಶ್ವತವಾಗಿ ಮಡಿದ ಕೊಂಡಿ]
  7. "Rama Rama Re movie review: An 'unmissable' journey of life and death". Deccan Chronicle. SHASHIPRASAD SM. 21 October 2016. Retrieved 21 October 2016.
  8. Upadhyaya, Prakash. "Rama Rama Re movie review: From audience to critics, the movie gets a thumbs-up". International Business Times, India Edition (in ಇಂಗ್ಲಿಷ್).
  9. "Rama Rama Re Movie Review, Trailer, & Show timings at Times of India". The Times of India. Sunayana Suresh. Retrieved 21 October 2016.
  10. Nathan, Archana (2016-10-22). "Kannada film review: Rama Rama Re". The Hindu (in Indian English). ISSN 0971-751X. Retrieved 2016-10-22.

ಬಾಹ್ಯ ಕೊಂಡಿಗಳು

[ಬದಲಾಯಿಸಿ]