ರಾಜ್ ರೆಡ್ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಜ್ ರೆಡ್ಡಿ
ಜನನದಬ್ಬಲಾ ರಾಜಗೋಪಾಲ್ ರೆಡ್ಡಿ
೧೩ ಜೂನ್ ೧೯೩೭
ಚಿತ್ತೂರು ಜಿಲ್ಲೆಯ ಕಟೂರು,ಮದ್ರಾಸ್ ಪ್ರೆಸಿಡೆನ್ಸಿ
ವಾಸಸ್ಥಳಯುನೈಟೆಡ್ ಸ್ಟೇಟ್ಸ್
ಪೌರತ್ವಯುನೈಟೆಡ್ ಸ್ಟೇಟ್ಸ್
ರಾಷ್ಟ್ರೀಯತೆಅಮೇರಿಕನ್
ಕಾರ್ಯಕ್ಷೇತ್ರಕೃತಕ ಬುದ್ಧಿಮತ್ತೆ,ರೋಬೊಟಿಕ್ಸ್,ಹ್ಯೂಮನ್ ಕಂಪ್ಯೂಟರ್ ಇಂಟರಾಕ್ಷನ್
ಸಂಸ್ಥೆಗಳುಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ,ಹೈದರಾಬಾದ್,ಕಾರ್ನೆಗೀ ಮೆಲ್ಲನ್ ವಿಶ್ವವಿದ್ಯಾಲಯ,ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ,ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ
ಅಭ್ಯಸಿಸಿದ ವಿದ್ಯಾಪೀಠಮದ್ರಾಸ್ ವಿಶ್ವವಿದ್ಯಾನಿಲಯ,ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯ,ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ
ಗಮನಾರ್ಹ ಪ್ರಶಸ್ತಿಗಳು
  • ಲೀಜನ್ ಆಫ್ ಆನರ್ (೧೯೮೪)
  • ಟ್ಯೂರಿಂಗ್ ಪ್ರಶಸ್ತಿ(೧೯೯೪)
  • ಪದ್ಮಭೂಷಣ ಪ್ರಶಸ್ತಿ(೨೦೦೧)
  • ವಾನ್ನೆವರ್ ಬುಷ್ ಪ್ರಶಸ್ತಿ(೨೦೦೬)

ದಬ್ಬಲಾ ರಾಜಗೋಪಾಲ್ "ರಾಜ್" ರೆಡ್ಡಿ ಅವರು ಭಾರತೀಯ-ಅಮೇರಿಕನ್ ಕಂಪ್ಯೂಟರ್ ವಿಜ್ಞಾನಿ.ಕೃತಕ ಬುದ್ಧಿಮತ್ತೆಯ(ಎಐ) ಆರಂಭಿಕ ಪ್ರವರ್ತಕರಲ್ಲಿ ಒಬ್ಬರಾದ ಇವರು ೫೦ ವರ್ಷಗಳ ಕಾಲ ಸ್ಟ್ಯಾನ್ಫೋರ್ಡ್ ಮತ್ತು ಕಾರ್ನೆಗೀ ಮೆಲ್ಲನ್ ನ ಬೋಧಕವರ್ಗದಲ್ಲಿ ಸೇವೆ ಸಲ್ಲಿಸಿದ್ದಾರೆ.ಅವರು ಕಾರ್ನೆಗೀ ಮೆಲ್ಲನ್ ವಿಶ್ವವಿದ್ಯಾಲಯದಲ್ಲಿ ರೋಬೊಟಿಕ್ಸ್ ಇನ್ಸ್ಟಿಟ್ಯೂಟ್ ನ ಸಂಸ್ಥಾಪಕ ನಿರ್ದೇಶಕರಾಗಿದ್ದರು. ಹೈದರಾಬಾದಿನ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯ(ಐಐಐಟಿ) ಅಧ್ಯಕ್ಷರಾಗಿದ್ದಾರೆ.ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ತನ್ನ ಕೆಲಸಕ್ಕಾಗಿ,೧೯೯೪ರಲ್ಲಿ ಎಸಿಎಂ ಟ್ಯೂರಿಂಗ್ ಪ್ರಶಸ್ತಿಯನ್ನು ಸ್ವೀಕರಿಸಿದ ಏಷ್ಯನ್ ಮೂಲದ ಮೊದಲ ವ್ಯಕ್ತಿ ಇವರಾಗಿದ್ದಾರೆ.[೧]

ಜನನ[ಬದಲಾಯಿಸಿ]

ರಾಜ್ ರೆಡ್ದಿ ಅವರು ೧೩ ಜೂನ್ ೧೯೩೭ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ(ಆಂಧ್ರಪ್ರದೇಶ) ಚಿತ್ತೂರು ಜಿಲ್ಲೆಯ ಕಟೂರಲ್ಲಿ ಜನಿಸಿದರು.ಅವರ ತಂದೆ,ಶ್ರೀನಿವಾಸಲು ರೆಡ್ಡಿ ಮತ್ತು ತಾಯಿ, ಪಿಚಮ್ಮ.[೨]

ವಿದ್ಯಾಭ್ಯಾಸ[ಬದಲಾಯಿಸಿ]

ರಾಜ್ ರೆಡ್ಡಿ ಅವರು ೧೯೫೮ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ(ಈಗ ಅಣ್ಣಾ ವಿಶ್ವವಿದ್ಯಾನಿಲಯ, ಚೆನ್ನೈಗೆ) ಸಂಬಂಧಿಸಿದ ಕಾಲೇಜು ಆಫ್ ಎಂಜನಿಯರಿಂಗ್,ಗಿಂಡಿಯಿಂದ ಸಿವಿಲ್ ಎಂಜನಿಯರಿಂಗ್ ನಲ್ಲಿ ಸ್ನಾತಕೋತರ ಪದವಿಯನ್ನು ಪಡೆದರು.ನಂತರ ರೆಡ್ಡಿಯವರು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದರು.ಅಲ್ಲಿ ಅವರು ೧೯೬೦ರಲ್ಲಿ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದಿಂದ ತಂತ್ರಜ್ಞಾನದಲ್ಲಿ ಸ್ನಾತಕೋತರ ಪದವಿಯನ್ನು ಪಡೆದರು.ಅವರು ೧೯೬೬ರಲ್ಲಿ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು.[೩][೪]

ವೃತ್ತಿ ಜೀವನ[ಬದಲಾಯಿಸಿ]

ರೆಡ್ಡಿ ಅವರು ಕಾರ್ನೆಗೀ ಮೆಲ್ಲನ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ರೋಬೊಟಿಕ್ಸ್ ನ ಪ್ರೊಫೆಸರ್ ಆಗಿದ್ದಾರೆ.೧೯೬೦ರಿಂದ ಅವರು ಆಸ್ಟ್ರೇಲಿಯಾದ ಐಬಿಎಂಗಾಗಿ ಕೆಲಸ ಮಾಡಿದರು.ಅವರು ೧೯೬೬ರಿಂದ ೧೯೬೯ರವರೆಗೆ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ನ ಸಹಾಯಕ ಪ್ರೊಫೆಸರ್ ಆಗಿದ್ದರು.ಅವರು ೧೯೬೯ರಲ್ಲಿ ಕಂಪ್ಯೂಟರ್ ಸೈನ್ಸ್ ನ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ನೆಗೀ ಮೆಲ್ಲನ್ ಬೊಧನ ವಿಭಾಗಕ್ಕೆ ಸೇರಿದರು.೧೯೮೪ರಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದರು.ರೆಡ್ಡಿ ಅವರು ೧೯೭೯ರಿಂದ ೧೯೯೧ರವರೆಗೆ ರೋಬೊಟಿಕ್ಸ್ ಇನ್ಸ್ಟಿಟ್ಯೂಟ್ ಸಂಸ್ಥಾಪಕ ನಿರ್ದೇಶಕರಾಗಿದ್ದರು ಮತ್ತು ೧೯೯೧ರಿಂದ ೧೯೯೯ರವರೆಗೆ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ನ ಡೀನ್ ಆಗಿದ್ದರು.ಎಸಿಸನ್ನ ಓರ್ವ ಡೀನ್ ಆಗಿ,ಅವರು ಭಾಷಾ ತಂತ್ರಜ್ಞಾನಗಳ ಸಂಸ್ಥೆ,ಹ್ಯೂಮನ್ ಕಂಪ್ಯೂಟರ್ ಇಂಟರಾಕ್ಷನ್ ಇನ್ಸ್ಟಿಟ್ಯೂಟ್,ಸೆಂಟರ್ ಫಾರ್ ಆಟೊಮೇಟೆಡ್ ಲರ್ನಿಂಗ್ ಅಂಡ್ ಡಿಸ್ಕವರಿ ಮತ್ತು ಇನ್ಸ್ಟಿಟ್ಯೂಟ್ ಫಾರ್ ಸಾಫ್ಟ್ವೇರ್ ರಿಸರ್ಚ್ ಅನ್ನು ರಚಿಸುವಲ್ಲಿ ನೆರವಾದರು.ಅವರು ಹೈದರಾಬಾದಿನ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ.ರೆಡ್ಡಿ ಅವರು ೧೯೯೯ರಿಂದ ೨೦೦೧ರವರೆಗೆ ಅಧ್ಯಕ್ಷರ ಮಾಹಿತಿ ತಂತ್ರಜ್ಞಾನ ಸಲಹಾ ಸಮಿತಿಯ(ಪಿಐಟಿಎಸಿ) ಸಹ-ಅಧ್ಯಕ್ಷರಾಗಿದ್ದರು.ಅಮೇರಿಕನ್ ಅಸೋಸಿಯೇಷನ್ ಫಾರ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು ಮತ್ತು ೧೯೮೭ರಿಂದ ೧೯೮೯ರವರೆಗೆ ಅದರ ಅಧ್ಯಕ್ಷರಾಗಿದ್ದರು.ಕಡಿಮೆ ಆದಾಯ,ಪ್ರತಿಭಾನಿತ್ವ,ಗ್ರಾಮೀಣ ಯುವಕರ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಭಾರತದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಜ್ಞಾನ ತಂತ್ರಜ್ಞಾನವನ್ನು ರಚಿಸಲು ಸಹಾಯ ಮಾಡುವಲ್ಲಿ ಅವರು ಪ್ರಮುಖ ಪಾತ್ರವಹಿಸಿದರು.[೫][೬]

ಸಂಶೋಧನೆ[ಬದಲಾಯಿಸಿ]

ರೆಡ್ಡಿ ಅವರ ಆರಂಭಿಕ ಸಂಶೋಧನೆಯು ಸ್ಟ್ಯಾನ್ಫೋರ್ಡ್ ನ ಎಐ ಪ್ರಯೋಗಾಲಯಗಳಲ್ಲಿ ಮತ್ತು ಸಿಎಂಯುನಲ್ಲಿ ನಡೆಸ್ಪಟ್ಟಿತ್ತು.ಅವರ ಎಐ ಸಂಶೋಧನೆಯು ಭಾಷೆ,ದೃಷ್ಟಿ ಮತ್ತು ರೋಬೊಟಿಕ್ಸ್ ಗಳ ಮೇಲೆ ಕೇಂದ್ರಿಕೃತವಾಗಿತ್ತು.ರೋಬೊಟ್ ನ ಧ್ವನಿ ನಿಯಂತ್ರಣ,ಅನಿಯಂತ್ರಿತ ಶಬ್ದಕೋಶದ ಡಿಕ್ಟೇಷನ್,ನೈಸರ್ಗಿಕ ದೃಶ್ಯಗಳ ವಿಶ್ಲೇಷಣೆಗಳಿಗೆ ರೆಡ್ಡಿ ಮತ್ತು ಅವರ ಸಹೋದ್ಯೋಗಿಗಳು ಮೂಲ ಕೊಡುಗೆ ನೀಡಿದ್ದಾರೆ.[೭]

ಗೌರವ ಮತ್ತು ಪ್ರಶಸ್ತಿಗಳು[ಬದಲಾಯಿಸಿ]

ಎಸ್.ವಿ.ವಿಶ್ವವಿದ್ಯಾಲಯ,ಹೆನ್ರಿ-ಪೋನ್ಕೇರ್ ವಿಶ್ವವಿದ್ಯಾಲಯ,ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯ,ಜವಾಹರಲಾಲ್ ನೆಹರೂ ತಾಂತ್ರಿಕ ವಿಶ‍್ವವಿದ್ಯಾಲಯ,ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯ, ವಾರ್ವಿಕ್ ವಿಶ್ವವಿದ್ಯಾಲಯ,ಅಣ್ಣಾ ವಿಶ್ವವಿದ್ಯಾಲಯ,ಐಐಐಟಿ(ಅಲಹಾಬಾದ್),ಆಂಧ್ರ ವಿಶ್ವವಿದ್ಯಾಲಯ,ಐಐಟಿ ಖರಗ್ಪುರ ಮತ್ತು ಹಾಂಗ್ ಕಾಂಗ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಿಂದ ಗೌರವಾನ್ವಿತ ಡಾಕ್ಟರೇಟ್ ಪದವಿ ದೊರೆತಿದೆ.೧೯೯೪ರಲ್ಲಿ ಅವರಿಗೆ ಎಸಿಎಂ ಟ್ಯೂರಿಂಗ್ ಪ್ರಶಸ್ತಿಯು ಲಭಿಸಿತು.೧೯೮೪ರಲ್ಲಿ ಪ್ಯಾರಿಸ್ನಲ್ಲಿ"ಸೆಂಟರ್ ಮೊಂಡಿಯಲ್ ಇನ್ಫಾರ್ಮಾಟಿಕ್ಯೂ"ನಲ್ಲಿ ಮುಖ್ಯ ವಿಜ್ಞಾನಿಯಾಗಿ ನೀಡಿದ ಕೊಡುಗೆಗಳಿಗಾಗಿ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಮಿಟ್ಟ್ರಾಂಡ್ ಅವರು ರೆಡ್ಡಿ ಅವರಿಗೆ ಲೀಜನ್ ಆಫ್ ಆನರ್ ಪ್ರಶಸ್ತಿಯನ್ನು ನೀಡಿದರು. ೨೦೦೧ರಲ್ಲಿ ಭಾರತ ಸರ್ಕಾರವು ರೆಡ್ಡಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.೨೦೦೪ರಲ್ಲಿ ಕೃತಕ ಬುದ್ಧಿಮತ್ತೆಯ ಕೊಡುಗೆಗಾಗಿ ರೆಡ್ಡಿ ಅವರಿಗೆ ಒಕಾವಾ ಪ್ರಶಸ್ತಿಯನ್ನು ನೀಡಲಾಗಿದೆ.೨೦೦೫ರಲ್ಲಿ ರೋಬೊಟಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ಅಲ್ಲಿ ಅವರ ಕೊಡುಗೆಗಾಗಿ ಹೋಂಡಾ ಪ್ರಶಸ್ತಿಯನ್ನು ನೀಡಿದ್ದಾರೆ.೨೦೦೬ರಲ್ಲಿ ವಿಜ್ಙಾನ ಮತ್ತು ರಾಷ್ಟ್ರದ ಪರವಾಗಿ ಜೀವಿತಾವಧಿ ಕೊಡುಗೆಗಾಗಿ ಅಮೇರಿಕದ ನ್ಯಾಷನಲ್ ಸೈನ್ಸ ಫೌಂಡೇಶನ್ ನ ಪ್ರಶಸ್ತಿಯಾದ ವಾನ್ನೆವರ್ ಬುಷ್ ಪ್ರಶಸ್ತಿಯನ್ನು ಪಡೆದರು.[೮][೯][೧೦]

ಉಲ್ಲೇಖಗಳು[ಬದಲಾಯಿಸಿ]

  1. https://prabook.com/web/rajagopal.dabbala_raj_reddy/725696
  2. http://scientistsinformation.blogspot.com/2010/02/professor-raj-reddy.html
  3. "ಆರ್ಕೈವ್ ನಕಲು". Archived from the original on 2018-04-20. Retrieved 2019-02-07.
  4. https://www.webindia123.com/personal/abroad/raj.htm
  5. https://www.bloomberg.com/research/stocks/private/person.asp?personId=1101923&privcapId=623525
  6. https://www.ri.cmu.edu/ri-faculty/raj-reddy/
  7. https://www.britannica.com/biography/Raj-Reddy
  8. https://amturing.acm.org/award_winners/reddy_6247682.cfm
  9. http://conferences.computer.org/services/2018/keynotes/rreddy.html
  10. "ಆರ್ಕೈವ್ ನಕಲು". Archived from the original on 2018-11-21. Retrieved 2019-03-18.