ವಿಷಯಕ್ಕೆ ಹೋಗು

ಮೊಹಮ್ಮದ್ ಇಕ್ಬಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೊಹಮದ್ ಇಕ್ಬಾಲ
ಜನನ೯ ನವೆಂಬರ್ ೧೮೮೭
ಮರಣ೨೧ ಎಪ್ರಿಲ್ ೧೯೩೮
ವೃತ್ತಿಕವಿ,ತತ್ವಜ್ಞಾನಿ,ರಾಜಕಾರಣಿ
ಪ್ರಕಾರ/ಶೈಲಿಕಥೆ,ಕವಿತೆ,ವಿಮರ್ಶೆ
ವಿಷಯದೇಶ,ಪರಿಸರ

ಪ್ರಭಾವಗಳು
  • ಸರ್ ಥಾಮಸ್ ಅರ್ನಾಲ್ಡ್

ಮೊಹಮ್ಮದ್ ಇಕ್ಬಾಲ್ ಅವರು ನವೆಂಬರ್ ೯, ೧೮೮೭ರಲ್ಲಿ ಜನಿಸಿದರು .[] ಇವರು ಅಲ್ಲಮ ಇಕ್ಬಾಲ್ ಎಂದು ಪ್ರಸಿದ್ದಿಯಾಗಿದ್ದರು. ಇವರು ಕವಿ ಅಲ್ಲದೆ ರಾಜಕರಣಿ ಹಾಗೂ ತತ್ವಙ್ಞಾನಿ ಕೂಡ ಹೌದು. ಇವರನ್ನು ಉರ್ದು ಸಾಹಿತ್ಯದ ಬಹುದೊಡ್ಡ ಆಸ್ತಿ ಎಂದು ಪರಿಗಣಿಸಲಾಗಿದೆ. ಇಕ್ಬಾಲ್ ಅವರು ಲೇಖನಗಳನ್ನು ಉರ್ದು ಹಾಗು ಪರ್ಸಿಯನ್ ಭಾಷೆಗಳಲ್ಲಿ ಬರೆದ್ದಿದಾರೆ. ಇವರನ್ನು ಭಾರತ, ಪಾಕಿಸ್ಥಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಲ್ಲಿ ಉತ್ತಮ ಕವಿ ಎಂದು ಗೌರವಿಸಲಾಗುತ್ತದೆ. ಇವರ ಪ್ರಮುಕ ಕವನ ಸಂಕಲನಗಳು ಅಸರ್-ಇ-ಖುದಿ, ರುಮಜ್-ಐ-ಬೇಖುದಿ ಹಾಗೂ ಇತ್ಯಾದಿ. ೧೯೨೨ರಲ್ಲಿ ಕಿಂಗ್ ಜಾರ್ಜ್ ಅವರು 'ಸರ್' ಎಂಬ ಬಿರುದನ್ನು ನೀಡಿದರು. ಇಂಗ್ಲೆಂಡ್ ನಲ್ಲಿ ಕಾನೂನು ಕಲಿಯುತ್ತಿರುವಾಗ ಲಂಡನಿನ ಭಾರತೀಯ ಇಸ್ಲಾಂ ಲೀಗಿನ ಸದಸ್ಯರಾಗಿದ್ದರು. ನಂತರ ಅವರ ಪ್ರಮುಖ ಭಾಷಣವೊಂದರಲ್ಲಿ ಇಸ್ಲಾಂ ಜನಗಳಿಗಾಗಿ ಬೇರೆ ರಾಜ್ಯವೊಂದು ಬೇಕೆಂದು ಬೇಡಿಕೆ ಇಟ್ಟರು. ಇದು ನಡೆದದು ಡಿಸಂಬರ್ ೧೯೩೦ ರಲ್ಲಿ. ಪಾಕಿಸ್ಥಾನ ಸರ್ಕಾರ ಇವರನ್ನು ರಾಷ್ಟ್ರ ಕವಿ ಇಂದು ಘೋಷಿಸಿತು. ಭಾರತದಲ್ಲಿ ಇವರು ಬರೆದಿರುವ 'ಸಾರೇ ಜಹಾನ್ ಸೇ ಅಚ್ಚ' ಎಂಬ ಪ್ರಸಿದ್ಧ ಗೀತೆಗಾಗಿ ಇವರನ್ನು ಸ್ಮರಿಸಲಾಗುತ್ತದೆ.[] []

ವೈಯಕ್ತಿಕ ಜೀವನ

[ಬದಲಾಯಿಸಿ]

ಇವರು ಸಿಯಾಲ್ಕೋಟ್‍ನಲ್ಲಿ ನವೆಂಬರ್ ೯, ೧೮೭೭ರಲ್ಲಿ ಜನಿಸಿದರು.[]ಇವರ ತಾತಂದೀರು ಕಾಶ್ಮೀರದ ಪಂಡಿತರು. ೧೯ನೇ ಶತಮಾನದಲ್ಲಿ ಸಿಖ್ ರಾಜರು ಕಾಶ್ಮೀರವನ್ನು ಆಳುತ್ತಿದ್ದರು, ಆ ಸಂದರ್ಭದಲ್ಲಿ ಅವರ ತಾತನ ಕುಟುಂಬ ಪಂಜಾಬಿಗೆ ಸ್ಥಳಾಂತರವಾಯಿತು. ಇವರ ತಂದೆ ಶೇಖ್ ನೂರ್ ಮುಹಮಮದ್ ಅನಕ್ಷರಸ್ಥರು. ಇವರ ತಾಯಿ ಇಮಾನ್ ಬೀಬಿ. ಅವರ ತಾಯಿ ನವೆಂಬರ್ ೯, ೧೯೧೪ ರಲ್ಲಿ ನಿಧನರಾದರು. ಅವರು ತಾಯಿಯನ್ನು ತುಂಬ ಪ್ರೀತಿಸುತ್ತಿದ ಕಾರಣ ಮನಸ್ಸಿನ ಸಂಕಟವನ್ನು ಕವಿತೆಗಳ ಮೂಲಕ ವ್ಯಕ್ತಪಡಿಸಿದರು. ಅವರನ್ನು ಖುರಾನ್ ಕಲಿಯಲು ನಾಲ್ಕು ವರ್ಷವಿರುವಾಗ ಮಸೀದಿಗೆ ಸೇರಿಸಲಾಯಿತು.[]

ಅವರು ಅರೇಬಿಕ್ ಭಾಷೆಯನ್ನು ಅವರ ಶಿಕ್ಷಕರಾದ ಸೈಯದ್ ಮೀರ್ ಅವರ ಬಳಿ ಕಲಿತರು. ೧೮೯೫ರಲ್ಲಿ ಸರ್ಕಾರಿ ಕಾಲೇಜಿನಲ್ಲಿ ಬಿ.ಎ. ಪದವಿಗೆ ಸೇರಿದರು. ೧೮೯೯ರಲ್ಲಿ ಎಂ.ಎ.ಪದವಿಯನ್ನು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಪಡೆದರು. ಅವರು ಮೂರು ಭಾರಿ ವಿವಾಹವಾದರು, ೧೮೯೫ರಲ್ಲಿ ಬಿ.ಎ., ಓದುವಾಗ ಕರೀನ್ ಬೀಬಿ ಅವರ ಜೊತೆ ವಿವಾಹವಾದರು. ಇವರ ಮಗಳು ಮಿರಜ್ ಬೇಗಂ ಹಾಗು ಮಗ ಅಫಾಬ್ ಇಕ್ಬಾಲ್. ಎರಡನೇ ಮದುವೆ ಸರ್ದಾರ್ ಬೇಗಂ ಅವರ ಜೊತೆ ಹಾಗು ಮೂರನೇ ಮದುವೆ ಮುಕ್ತಾರ್ ಬೇಗಂ ಅವರ ಜೊತೆ ೧೯೧೪ನಲ್ಲಿ ನಡೆಯಿತು.

ಯುರೋಪ್‍ನಲ್ಲಿ ಉನ್ನತ ವ್ಯಾಸಂಗ

[ಬದಲಾಯಿಸಿ]

೧೮೯೯ರಲ್ಲಿ ಇಕ್ಬಾಲ್ ಅವರು ಸರ್ ಥಾಮಸ್ ಅರ್ನಾಲ್ಡ್ ಅವರಿಂದ ಪ್ರಭಾವಗೊಂಡರು. ೧೯೦೫ರಲ್ಲಿ ಇಂಗ್ಲೆಂಡಿಗೆ ಹೋದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿವೇತನ ದೊರೆಯಿತು, ನಂತರ ೧೯೦೬ರಲ್ಲಿ ಬಿ.ಎ. ಪದವಿ ಪಡೆದರು. ೧೯೦೭ರಲ್ಲಿ ಜರ್ಮನಿ ತತ್ವಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಫ್ರೆಡ್ರಿಕ್ ಅವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿ ಸಂಶೋದನೆಯನ್ನು ಪ್ರಕಟಿಸಿದರು. ಯುರೋಪ್ ನಲ್ಲಿ ಅವರು ಓದುತ್ತಿರುವ ಸಂದರ್ಭದಲ್ಲಿ ಬರೆಯಲು ಆರಂಭಿಸಿದರು.[][][]

ಶೈಕ್ಷಣಿಕ

[ಬದಲಾಯಿಸಿ]

ಇಕ್ಬಾಲ್ ಅವರು ೧೮೯೯ರಲ್ಲಿ ಎಂ.ಎ. ಪದವಿಯ ನಂತರ, ಅವರು ಅರೇಬಿಕ್ ಭಾಷೆ ಓದುವುದನ್ನು ತಮ್ಮ ವೃತ್ತಿಯನ್ನಾಗಿ ಒರಿಯೆಂಟ್‌‌ಲ್ ಕಾಲೇಜಿನಲ್ಲಿ ಪ್ರಾರಂಭಿಸಿದರು, ಆನಂತರ ತತ್ವಜ್ಞಾನದ ಉಪನ್ಯಾಸಕರಾಗಿ ಅವರು ವಿಧ್ಯಾಭ್ಯಾಸ ಮುಗಿಸಿದ ಲಹೋರ್‍ನ ಸರ್ಕಾರಿ ಕಾಲೇಜಿನಲ್ಲೇ ಆಯ್ಕೆಯಾದರು. ೧೯೦೫ರವರೆಗೂ ಈ ಕಾರ್ಯ ನಿರ್ವಹಿಸಿದರು. ೧೯೦೮ರಲ್ಲಿ ಇಂಗ್ಲೇಂಡ್‍ನಿಂದ ಹಿಂತಿರುಗಿದ ನಂತರ ಮತ್ತೆ ಅದೇ ಸಂಸ್ಥೆಯಲ್ಲಿ ತತ್ವ ಜ್ಞಾನ ಹಾಗು ಆಂಗ್ಲ ಭಾಷೆಯ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ಅದೇ ಸಮಯದಲ್ಲಿ, ಲಾಹೋರಿನ ಮುಖ್ಯ ನ್ಯಾಯಾಲಯದಲ್ಲಿ ಕಾನೂನು ಅಭ್ಯಾಸ ಮಾಡಿದರು. ಅವರ ಬಹಳಷ್ಟು ಕವನಗಳು ಯುರೋಪಿನ ಭಾಷೆಗಳಿಗೆ ಅನುವಾದ ವಾಗಿವೆ.

ಸಾಹಿತ್ಯ

[ಬದಲಾಯಿಸಿ]

ಇವರ ಮೊದಲನೆ ಉರ್ದು ಕವನ ೧೯೨೪ರಲ್ಲಿ ಪ್ರಕಟವಾಯಿತು.[] ಅವರ ಜೀವನದ ಮೂರು ವಿವಿಧ ಭಾಗಗಳಲ್ಲಿ ಇದನ್ನು ಬರೆಯಲಾಗಿತ್ತು. ೧೯೦೫ರವರೆಗು ಬರೆದ ಕವನಗಳು ತಮ್ಮ ದೇಶ ಹಾಗು ಪರಿಸರವನ್ನು ಕುರಿತದ್ದಾಗಿತ್ತು. ಅವರು ಇಂಗ್ಲಿಷ್ ನಿಲ್ಲಿ ಕೂಡ ಎರಡು ಪುಸ್ತಕಗಳನ್ನು ಬರೆದ್ದಿದ್ದಾರೆ. ಇಕ್ಬಾಲ್ ಅವರು ಕವನಗಳನ್ನು ಉರ್ದು ಭಾಷೆಗಿಂತ ಹೆಚ್ಚಗಿ ಪರ್ಷಿಯನ್ ಭಾಷೆಯಲ್ಲಿ ಬರೆದ್ದಿದ್ದಾರೆ.ಅವರ ಒಟ್ಟು ಹನ್ನೆರಡು ಸಾವಿರ ಕವನಗಳಲ್ಲಿ ಏಳು ಸಾವಿರ ಕವನಗಳನ್ನು ಪರ್ಷಿಯನ್ ಭಾಷೆಯಲ್ಲೇ ಬರೆದ್ದಿದ್ದಾರೆ. ೧೯೧೫ರಲ್ಲಿ ಅವರ ಮೊದಲ ಪರ್ಷಿಯನ್ ಕವನ ಪ್ರಕಟವಾಯಿತು. ಇಕ್ಬಾಲ್ ಅವರು ಹೆಚ್ಚಾಗಿ ಬಳಸುತಿದ್ದ ರೂಹ್ ಪದದ ಅರ್ಥ "ಪ್ರತಿ ಮನಷ್ಯನಲ್ಲಿ ಇರುವ ಒಂದು ದೈವೀಕ ಚೈತನ್ಯ" ಎಂದು. ಇವರನ್ನು 'ಪೂರ್ವ ಕವಿ' ಎಂಬ ಬಿರುದಿನಿಂದ ಕರೆಯಲಾಗುತ್ತದೆ. ಇಕ್ಬಾಲ್ ಅವರನ್ನು ಪಾಕಿಸ್ಥಾನದ "ಚಿಂತಕ" ಎಂದು ಸಹ ಕರೆಯಲಾಗುತ್ತದೆ. ಇರಾನ್ ನಲ್ಲಿ ಇವರು "ಲಾಹೋರ್ ನ ಇಕ್ಬಾಲ್" ಎಂದು ಪ್ರಸಿದ್ದ.

ಲಾಹೋರಿನಲ್ಲಿರುವ ಮೊಹಮ್ಮದ್ ಇಕ್ಬಾಲ್ ವಿಮಾನ ನಿಲ್ದಾಣ

ಕೊನೆಯ ವರ್ಷಗಳು ಹಾಗು ಮರಣ

[ಬದಲಾಯಿಸಿ]

೧೯೩೩ರಲ್ಲಿ ಸ್ಪೈನ್ ಹಾಗು ಅಫ್ಘಾನಿಸ್ಥಾನದ ಪ್ರವಾಸದ ನಂತರ ಗಂಟಲಿಗೆ ಸಂಭಂದಿಸಿದ ಕಾಯಿಲೆಯಿಂದ ಬಳಲುತಿದ್ದರು. ಅವರ ಕಡೆಯಕಾಲದಲ್ಲಿ ದರ್ಗಗೆ ಹೋಗುತಿದ್ದರು. ಕೆಲವು ತಿಂಗಳು ಕಾಯಿಲೆಯಿಂದ ಬಳಲಿ ೨೧ ಎಪ್ರಿಲ್ ೧೯೩೮ರಲ್ಲಿ ಮರಣ ಹೊಂದಿದರು. ಅವರ ಜನ್ಮದಿನವನ್ನು ಪಾಕಿಸ್ಥಾನದಲ್ಲಿ ಇಕ್ಬಾಲ್ ದಿನವೆಂದು ಆಚರಿಸುತ್ತಾರೆ. ಭಾರತ ವಿಶ್ವಮಹಾಯುದದಲ್ಲಿ ಭಾಗವಹಿಸುವುದನ್ನು ಇವರು ನಿರಾಕರಿಸಿದರು. ಅವರ ಮರಣದ ನಂತರ, ಅವರ ನೆನಪಿಗಾಗಿ ಲಾಹೋರ್‌ನಲ್ಲಿ, ಅಂತರ್ ರಾಷ್ಟ್ರಿಯಾ ವಿಮಾನ ನಿಲ್ದಾಣವೊಂದನ್ನು ನಿರ್ಮಿಸಿ, ಅದಕ್ಕೆ ಅವರ ಹೆಸರನ್ನು ಇಡಲಾಗಿದೆ.[೧೦]

ಉಲ್ಲೇಖಗಳು

[ಬದಲಾಯಿಸಿ]
  1. https://www.thehindu.com/profile/author/Mohammed-Iqbal-681/
  2. https://theprint.in/features/allama-iqbal-pakistans-national-poet-the-man-who-gave-india-saare-jahan-se-achha/147155/
  3. "Allama Muhammad Iqbal". web.archive.org. 5 March 2012. Archived from the original on 5 ಮಾರ್ಚ್ 2012. Retrieved 12 January 2020.{{cite web}}: CS1 maint: bot: original URL status unknown (link)
  4. Rehman, Javaid (7 June 2005). "Islamic State Practices, International Law and the Threat from Terrorism: A Critique of the 'Clash of Civilizations' in the New World Order" (in ಇಂಗ್ಲಿಷ್). Hart Publishing. Retrieved 12 January 2020.
  5. http://pu.edu.pk/home/department/29/Department-of-Iqbal-Studies
  6. https://historypak.com/allama-muhammad-iqbal-1877-1938/
  7. https://books.google.co.in/books?id=w6flsOIT5PsC&redir_esc=y&hl=en
  8. https://books.google.co.in/books?id=Okxr1alsVqIC&redir_esc=y&hl=en
  9. https://www.britannica.com/biography/Muhammad-Iqbal
  10. https://www.thefamouspeople.com/profiles/muhammad-iqbal-3595.php


ಹೊರಗಿನ ಸಂಪರ್ಕಗಳು

[ಬದಲಾಯಿಸಿ]