ಮೊದಲನೇ ಚಂದ್ರಗುಪ್ತ
ಮೊದಲನೇ ಚಂದ್ರಗುಪ್ತ ಕ್ರಿ.ಶ. ೩೨೦ ರ ಸುಮಾರು ಗುಪ್ತ ಸಾಮ್ರಾಜ್ಯದ ರಾಜನಾಗಿದ್ದನು. ಗುಪ್ತ ಸಾಮ್ರಾಜ್ಯದ ಆಡಳಿತಗಾರನಾಗಿ, ಅವನು ಗಂಗಾ ಪ್ರದೇಶದಲ್ಲಿ ಅನೇಕ ಪ್ರಬಲ ಕುಟುಂಬಗಳ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಪರಿಚಿತನಾಗಿದ್ದಾನೆ.
ಮೊದಲನೇ ಚಂದ್ರಗುಪ್ತನು ಘಟೋತ್ಕಚನ ಮಗ ಮತ್ತು ಶ್ರೀ ಗುಪ್ತನ ಮೊಮ್ಮಗ. ಮಹಾರಾಜರೆಂದು ಪರಿಚಿತವಾಗಿದ್ದ ತನ್ನ ಪೂರ್ವಾಧಿಕಾರಿಗಳಿಂದ ಭಿನ್ನವಾಗಿ, ಅವನು ಮಹಾರಾಜಾಧಿರಾಜ ಎಂದು ಕರೆಯಲ್ಪಡುತ್ತಿದ್ದನು. ಅವನ ತಂದೆ ಘಟೋತ್ಕಚನ ಮರಣದ ನಂತರ ಅವನು ಕ್ರಿ.ಪೂ. ೩೨೦ ರಲ್ಲಿ ಅಧಿಕಾರಕ್ಕೆ ಬಂದನು. ಆದರೆ, ಅವನು ನೆರೆಹೊರೆಯ ರಾಜ್ಯಗಳನ್ನು ಸ್ವಾಧೀನಪಡಿಸಿಕೊಂಡು ಒಂದು ಸಣ್ಣ ಸಂಸ್ಥಾನವನ್ನು ಪ್ರಮುಖ ರಾಜ್ಯದ ಸ್ಥಾನಕ್ಕೆ ಹೇಗೆ ವಿಸ್ತರಿಸಿದನು ಎಂದು ಅಜ್ಞಾತವಾಗಿಯೇ ಉಳಿದಿದೆ. ಅವನು ಒಬ್ಬ ಲಿಚ್ಛವಿ ರಾಜಕುಮಾರಿ ಕುಮಾರಾದೇವಿಯನ್ನೂ ವಿವಾಹವಾದನು. ಇಬ್ಬರ ನಡುವಿನ ವೈವಾಹಿಕ ಸಂಬಂಧಗಳು ಗುಪ್ತ ಸಾಮ್ರಾಜ್ಯದ ರಾಜಕೀಯ ಹಿರಿಮೆಗೆ ಕಾರಣವಾಯಿತು ಎಂದು ಇದು ಸೂಚಿಸುತ್ತದೆ.[೧]
ಅವನ ಸಾಮ್ರಾಜ್ಯದ ನಿಖರ ಗಡಿಗಳು ಅಜ್ಞಾತವಾಗಿ ಉಳಿದಿವೆ. ಅವನಿಗೆ ಇಬ್ಬರು ಮುಖ್ಯ ಪುತ್ರರು. ಹಿರಿಯ ಪುತ್ರ ಕಚಗುಪ್ತ ಮತ್ತು ಕಿರಿಯ ಪುತ್ರ ಸಮುದ್ರಗುಪ್ತ.
ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Majumdar 2007, p. 230.