ಮೈಕ್ರೋಸಾಫ್ಟ್ ವಿಷುಯಲ್ ಸ್ಟುಡಿಯೋ
The Microsoft Visual Studio logo. | |
ಅಭಿವೃದ್ಧಿಪಡಿಸಿದವರು | Microsoft |
---|---|
ಕ್ರಮವಿಧಿಯ ಭಾಷೆ | C++ |
ಕಾರ್ಯಾಚರಣಾ ವ್ಯವಸ್ಥೆ | Microsoft Windows |
ಲಭ್ಯವಿರುವ ಭಾಷೆ(ಗಳು) | Chinese (Simplified), Chinese (Traditional), English, French, German, Italian, Japanese, Korean, Spanish, Russian |
ವಿಧ | Integrated Development Environment |
ಪರವಾನಗಿ | Microsoft EULA |
ಅಧೀಕೃತ ಜಾಲತಾಣ | msdn.microsoft.com/vstudio |
ಮೈಕ್ರೋಸಾಫ್ಟ್ ವಿಷುಯಲ್ ಸ್ಟುಡಿಯೋ ಮೈಕ್ರೋಸಾಫ್ಟ್ ನವರೇ ಹೊರತಂದ ಸಂಯೋಜಿತ ಅಭಿವೃದ್ಧಿ ಸನ್ನಿವೇಶಕಾರಕ(IDE). ಇದನ್ನು ಉಪಯೋಗಿಸಿ ಕಾನ್ಸೋಲ್(ಮಾನೀಟರ್ ಮತ್ತು ಕೀಬೋರ್ಡ್ ಇರುವಂತಹ ಗಣಕಘಟಕ)ಅಭಿವೃದ್ಧಿ ಮತ್ತು ಚಿತ್ರೋಪಯೋಗಿ ಸಂಪರ್ಕಸಾಧನಗಳನ್ನು ವಿಂಡೋಸ್ ರೀತಿಯ ಅನ್ವಯಗಳಿಗೆ, ಜಾಲತಾಣಗಳಿಗೆ, ಜಾಲ ಅನ್ವಯಿಕೆಗಳಿಗೆ ಮತ್ತು ಜಾಲ ಸೇವೆಗಳಿಗೆ ಸ್ಥಾನಿಕ ಸಂಕೇತಗಳ ಮೂಲಕವೂ, ವ್ಯವಸ್ಥಿತವಾದ ಸಂಕೇತಗಳೊಡನೆಯೂ ಮೈಕ್ರೋಸಾಫ್ಟ್ ವಿಂಡೋಸ್, ವಿಂಡೋಸ್ ಮೊಬೈಲ್, ವಿಂಡೋಸ್ CE, NET ಫ್ರೇಂವರ್ಕ್, ಸಂಕ್ಷೇಪ ಫ್ರೇಂವರ್ಕ್ ಮತ್ತು ಮೈಕ್ರೋಸಾಪ್ಟ್ ಸಿಲ್ವರ್ಲೈಟ್ ಬೆಂಬಲಿಸುವ ಎಲ್ಲಾ ಪ್ಲ್ಯಾಟ್ ಫಾರ್ಮ್(ಒಂದು ವಿಧದ ಕಂಪ್ಯೂಟರ್ ಕ್ರಮ)ಗಳ ವೃದ್ಧಿಗೆ ಉಪಯೋಗಿಸಬಹುದು.
ವಿಷುಯಲ್ ಸ್ಟುಡಿಯೋ ಇಂಟೆಲಿಸೆನ್ಸ್ ಅನ್ನು ಬೆಂಬಲಿಸುವ ಸಂಕೇತ ಸಂಪಾದಕ ಮತ್ತು ಸಂಕೇತ ಮರುಅಂಶದಾಯಿತ್ವಗಳನ್ನು ಒಳಗೊಂಡಿರುತ್ತದೆ. ಇದರಲ್ಲಿನ ಸಂಯೋಜಿತ ದೋಷಸೂಚಕವು ಮೂಲ-ಸ್ತರದ ದೋಷಸೂಚಕವಾಗಿಯೂ, ಮತ್ತು ಯಂತ್ರ-ಸ್ತರದ ದೋಷಸೂಚಕವಾಗಿಯೂ ಕಾರ್ಯವೆಸಗುತ್ತದೆ.
ಇತರೆ ಅಂತರ್ಗತ ಸಲಕರಣೆಗಳೆಂದರೆ GU ಅನ್ವಯಿಕೆಗಳನ್ನು ನಿರ್ಮಿಸಲು ಬೇಕಾದ ವಿನ್ಯಾಸಮಾದರಿಗಳು, ಜಾಲ ವಿನ್ಯಾಸಕಾರಕ, ಶ್ರೇಣಿ ವಿನ್ಯಾಸಕಾರಕ, ಮತ್ತು ದತ್ತಸಂಚಯ ಯೋಜನಾ ವಿನ್ಯಾಸಕಾರಕಗಳು. ಅದು ಕ್ರಿಯಾತ್ಮಕತೆಯನ್ನು ವೃದ್ಧಿಸುವ ಎಲ್ಲಾ ಅಳವಡಿಕೆ-ಸಾಧನಗಳಿಗೆ ಪ್ರತಿ ಹಂತದಲ್ಲೂ ಸಕಾರಾತ್ಮವಾಗಿರುತ್ತದೆ; ಆಕರ ಹತೋಟಿಯ ವ್ಯವಸ್ಥೆಗಳಿಂದ ಸಬ್ ವರ್ಷನ್(ಅಡಿಮೇಲಾಗಿಸುವಿಕೆಯ ರೀತಿಯದು) ಮತ್ತು ವಿಷುಯಲ್ ಸೋರ್ಸ್ ಸೇಫ್ ಗಳಂತಹದ್ದು)ಹಿಡಿದು ನವೀನ ಸಲಕರಣೆಗಳ ಪಟ್ಟಿಗಳಾದ ವ್ಯಾಪ್ತಿ-ಸಂಬಂಧಿತ ಭಾಷೆಗಳಿಗಾಗಿ ಸಂಪಾದಕಗಳು ಮತ್ತು ದೃಶ್ಯ ವಿನ್ಯಾಸಕಗಳು ಅಥವಾ ಇತರ ತಂತ್ರಾಂಶ ಅಭಿವೃದ್ಧಿ ಜೀವನಚಕ್ರದ ವಿಷಯಗಳಿಗಾಗಿ ಸಲಕರಣೆಗಳ ಪಟ್ಟಿಯ (ಟೀಂ ಫೌಂಡೇಷನ್ ಸರ್ವರ್ ಕ್ಲಿಯೆಂಟ್: ಟೀಂ ಪರಿಶೋಧಕಗಳಂತಹವು)ವರೆಗೆ ಬೆಂಬಲವನ್ನು ನೀಡುತ್ತದೆ.
ವಿಷುಯಲ್ ಸ್ಟುಡಿಯೋ ಭಾಷಾ ಸೇವೆಗಳ ಮೂಲಕ ಭಾಷೆಗಳನ್ನು ಬೆಂಬಲಿಸುವಂತಿದ್ದು, ತನ್ಮೂಲಕ ಸಂಕೇತ ಸಂಪಾದಕ ಮತ್ತು ದೋಷಸೂಚಕಗಳು ಸುಮಾರು ಎಲ್ಲಾ ಕ್ರಮವಿಧಿ ಭಾಷೆಗಳನ್ನು ಬೆಂಬಲಿಸಲು(ವಿವಿಧ ಮಟ್ಟಗಳವರೆಗೆ) ಅನುವುಮಾಡಿಕೊಡುತ್ತದೆ; ಇದಕ್ಕೆ ಪೂರಕವಾಗಿ ಭಾಷಾ-ಉದ್ದೇಶಿತ ಸೇವೆಗಳು ಲಭ್ಯವಿರಬೇಕಷ್ಟೆ. ಅಂತರ್ಗತವಾದ ಭಾಷೆಗಳಲ್ಲಿ C/C++ (ವಿಷುಯಲ್ C++ ಮೂಲಕ), VB.NET (ವಿಷುಯಲ್ ಬೇಸಿಕ್ .NET ಮೂಲಕ), ಮತ್ತು C# (ವಿಷುಯಲ್ C# ಮೂಲಕ) ಸೇರಿವೆ. ಇತರ ಭಾಷೆಗಳ ಪೈಕಿ F#, M, ಪೈಥಾನ್, ಮತ್ತು ರೂಬಿಗಳಿಗೆ ಪ್ರತ್ಯೇಕವಾಗಿ ಅನುಸ್ಥಾಪಿತವಾದ ಭಾಷಾ ಸೇವೆಗಳ ಮೂಲಕ ಬೆಂಬಲವು ದೊರೆಯುತ್ತದೆ. XML, XSLT, HTML, XHTML, ಜಾವಾಸ್ಕ್ರಿಪ್ಟ್ ಮತ್ತು CSS ಗಳನ್ನೂ ಇದು ಬೆಂಬಲಿಸುತ್ತದೆ. ಭಾಷಾ-ನಿಶ್ಚಿತ ವಿಷುಯಲ್ ಸ್ಟುಡಿಯೋದ ಮಾದರಿಗಳು ಸಹ ಚಾಲ್ತಿಯಲ್ಲಿದ್ದು ಇವು ಗ್ರಾಹಕರಿಗೆ ಹೆಚ್ಚು ನಿಯಮಿತ ಭಾಷಾ ಸೇವೆಗಳನ್ನು ಒದಗಿಸುತ್ತವೆ. ಈ ಒಂದೊಂದು ಪ್ಯಾಕೇಜ್ ಗಳನ್ನು ಮೈಕ್ರೋಸಾಫ್ಟ್ ವಿಷುಯಲ್ ಬೇಸಿಕ್, ವಿಷುಯಲ್ J#, ವಿಷುಯಲ್ C#, ಮತ್ತು ವಿಷುಯಲ್ C++ ಎಂದು ಕರೆಯಲಾಗುತ್ತದೆ.
ಮೈಕ್ರೋಸಾಫ್ಟ್ ತನ್ನ ವಿಷುಯಲ್ ಸ್ಟುಡಿಯೋ 2008ರ ಭಾಗಗಳಾದ ವಿಷುಯಲ್ ಬೇಸಿಕ್, ವಿಷುಯಲ್ C#, ವಿಷುಯಲ್ C++ ಮತ್ತು ವಿಷುಯಲ್ ವೆಬ್ ಡೆವೆಲಪರ್ ಗಳ "ಎಕ್ಸ್ ಪ್ರೆಸ್" ಆವೃತ್ತಿಗಳನ್ನು ಬಿಟ್ಟಿಯಾಗಿ ಒದಗಿಸುತ್ತದೆ. ವಿಷುಯಲ್ ಸ್ಟುಡಿಯೋ 2008 ಮತ್ತು 2005 ಪ್ರೊಫೆಷನಲ್ ಆವೃತ್ತಿಗಳು, ವಿಷುಯಲ್ ಸ್ಟುಡಿಯೋ 2005ಭಾಷಾ-ನಿಶ್ಚಿತ ಮಾದರಿಗಳನ್ನೊಳಗೊಂಡಂತೆ(ವಿಷುಯಲ್ ಬೇಸಿಕ್, C++, C#, J#)ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್ಟ್ ನ ಡ್ರೀಂಸ್ಪಾರ್ಕ್ ಕ್ರಮವಿಧಿಯ ಮೂಲಕ ಬಿಟ್ಟಿಯಾಗಿ ಡೌನ್ ಲೋಡ್(ಇಳಿಸಿಕೊಳ್ಳುವಿಕೆ) ಮಾಡಿಕೊಳ್ಳುವ ಸೌಲಭ್ಯವಿದೆ. ವಿಷುಯಲ್ ಸ್ಟುಡಿಯೋ 2010 ಈಗ ರಿಲೀಸ್ ಕ್ಯಾಂಡಿಡೇಟ್ ನಲ್ಲಿ ಲಭ್ಯವಿದ್ದು, ಸಾರ್ವಜನಿಕರು ಇದನ್ನು ಬಿಟ್ಟಿಯಾಗಿ ತಮ್ಮ ಕಂಪ್ಯೂಟರ್ ಗಳಿಗೆ ಇಳಿಸಿಕೊಳ್ಳಬಹುದು.[೧]
ವಾಸ್ತು ಶೈಲಿ
[ಬದಲಾಯಿಸಿ]ವಿಷುಯಲ್ ಸ್ಟುಡಿಯೋ ಯಾವುದೇ ಕಾರ್ಯನಿಯೋಜಕ ಭಾಷೆಯನ್ನು, ಪರಿಹಾರಗಳನ್ನು ಅಥವಾ ಸಾಧನಗಳನ್ನು ಸ್ವಭಾವತಃ ಬೆಂಬಲಿಸುವುದಿಲ್ಲ ಬದಲಿಗೆ ಅದು ವಿವಿಧ ಕಾರ್ಯವಿಧಾನಗಳನ್ನು ಆಳವಡಿಸಲು ಅನುವುಮಾಡಿಕೊಡುತ್ತದೆ. ನಿರ್ದಿಷ್ಟವಾದ ಕಾರ್ಯವಿಧಾನಗಳನ್ನು VSಪ್ಯಾಕೇಜ್ ಎಂದು ಸಂಕೇತ ನೀಡಲಾಗಿದೆ. ಅಡಕಗೊಳಿಸಿದಾಗ, ಈ ಕಾರ್ಯವಿಧಾನಗಳು ಸೇವೆ ಯಾಗಿ ಲಭ್ಯವಾಗುತ್ತವೆ. IDEಯು ಮೂರು ಸೇವೆಗಳನ್ನು ಒದಗಿಸುತ್ತದೆ: ಯೋಜನೆಗಳನ್ನು ಮತ್ತು ಪರಿಹಾರಗಳನ್ನು ನಮೂದಿಸುವ ಸಾಮರ್ಥ್ಯವುಳ್ಳ SVsಸಲ್ಯೂಷನ್, ವಿಂಡೋಯಿಂಗ್ ಮತ್ತು UI ಕಾರ್ಯವೈಖರಿಯನ್ನು ಒದಗಿಸುವ SVsUIಷೆಲ್,(ಮುಂತಳ್ಳು(Tab), ಉಪಕರಣಪಟ್ಟಿಕೆ (toolbar) ಮತ್ತು ಉಪಕರಣ ಕಿಟಕಿಗಳನ್ನೊಳಗೊಂಡಂತೆ)ಮತ್ತು Vsಪ್ಯಾಕೇಜ್ ಗಳ ನೋಂದಾವಣಿ ವ್ಯವಹಾರಕ್ಕೆ ಅನುವಾಗುವ SVsಷೆಲ್. ಅಲ್ಲದೆ IDEಯು ಸೇವೆಗಳ ನಡುವೆ ಸಂಪರ್ಕಗಳು ಸಂಭವಿಸಲು ಸಹಕಾರ ನೀಡಲು ಮತ್ತು ಹೊಂದಿಸಲು ಬದ್ಧವಾಗಿರುತ್ತದೆ.[೨] ಎಲ್ಲಾ ಸಂಪಾದಕಗಳು, ವಿನ್ಯಾಸಕಗಳು, ಯೋಜನಾ ಮಾದರಿಗಳು ಮತ್ತು ಇತರ ಸಲಕರಣೆಗಳು VSಪ್ಯಾಕೇಜ್ ನಲ್ಲಿ ಅಳವಡಿಸಲ್ಪಟ್ಟಿವೆ. ವಿಷುಯಲ್ ಸ್ಟುಡಿಯೋ Vsಪ್ಯಾಕೇಜ್ ಗಳನ್ನು ತಲುಪಲು COM ಅನ್ನು ಬಳಸುತ್ತದೆ. ವಿಷುಯಲ್ ಸ್ಟುಡಿಯೋ SDK ವ್ಯವಸ್ಥಿತ ಪ್ಯಾಕೇಜ್ ಫ್ರೇಂವರ್ಕ್ (MPF )ಅನ್ನು ಒಳಗೊಂಡಿದ್ದು, ಅದು ಒಂದು COM-ಸಂಪರ್ಕಸಾಧನಗಳ ಸುತ್ತಲೂ ಸುತ್ತಿದ ವ್ಯವಸ್ಥಿತ ರಟ್ಟುಗಳಾಗಿದ್ದು, ಕಟ್ಟುಗಳನ್ನು CLI ಸಂಬಂಧಿತ ಭಾಷೆಯಲ್ಲಿ ಬರೆಯಲು ಅನುವು ಮಾಡಿಕೊಡುತ್ತದೆ.[೩] ಆದರೆ MPF ವಿಷುಯಲ್ ಸ್ಟುಡಿಯೋ COM ಸಂಪರ್ಕಸಾಧನಗಳಿಂದ ಬಹಿರಂಗಗೊಳಿಸಲ್ಪಟ್ಟ ಎಲ್ಲಾ ಕ್ರಿಯಾತ್ಮಕತೆಗಳನ್ನೂ ಒದಗಿಸುವುವುದಿಲ್ಲ.[೪] ಆಗ ಇದರ ಸೇವೆಗಳನ್ನು ಇತರ ಕಟ್ಟುಗಳ ರಚನೆಗಾಗಿ ಬಳಸಿಕೊಳ್ಳಬಹುದು ಮತ್ತು ತನ್ಮೂಲಕ ವಿಷುಯಲ್ ಸ್ಟುಡಿಯೋ IDEಗೆ ಕ್ರಿಯಾತ್ಮಕತೆಯನ್ನು ಸಂಕಲನ ಮಾಡಬಹುದು.
ನಿಯೋಜಕ ಭಾಷೆಗಳಿಗೆ ಬೆಂಬಲವನ್ನು ನಿರ್ದಿಷ್ಟವಾದ Vsಪ್ಯಾಕೇಜ್ ಗಳನ್ನು ಉಪಯೋಗಿಸುವುದರ ಮೂಲಕ ಸೇರಿಸಬಹುದು ಮತ್ತು ಇದನ್ನು ಭಾಷಾ ಸೇವೆ ಎಂದು ಕರೆಯಲಾಗುತ್ತದೆ. ಭಾಷಾ ಸೇವೆಯು ಹಲವಾರು ಸಂಪರ್ಕಸಾಧನಗಳನ್ನು ವರ್ಣಿಸುವಂತಿದ್ದು, ಅವನ್ನು Vsಪ್ಯಾಕೇಜ್ ಅಳವಡಿಕೆಯು ಅಳವಡಿಸಲಾಗುವಂತಿದ್ದು ತನ್ಮೂಲಕ ಹಲವಾರು ಕಾರ್ಯವಿಧಿಗಳಿಗೆ ಬೆಂಬಲವನ್ನು ನೀಡಿದಂತಾಗುತ್ತದೆ.[೫] ಹೀಗೆ ಸೇರಿಸಬಲ್ಲ ಕಾರ್ಯವಿಧಿಗಳಲ್ಲಿ ಭಾಷಾನಿಯಮ ವರ್ಣಪ್ರದಾನ, ಹೇಳಿಕೆಯ ಪೂರ್ಣಗೊಳಿಸುವಿಕೆ, ಜೋಡಿ ಹೊಂದಿಸುವಿಕೆ, ಪ್ರಾಚರ ಮಾಹಿತಿ, ಸಲಕರಣಾಗ್ರಗಳು, ಸದಸ್ಯ ಪಟ್ಟಿಗಳು ಮತ್ತು ಹಿನ್ನೆಲೆ ಜೋಡಣೆಗಾಗಿ ದೋಷ ದರ್ಶಕಗಳು ಒಳಗೊಂಡಿವೆ.[೫] ಈ ಸಂಪರ್ಕಸಾಧನಗಳನ್ನು ಅಳವಡಿಸಿದರೆ ಭಾಷೆಗೆ ಬೇಕಾದ ಕಾರ್ಯವಿಧಿಯು ಲಭ್ಯವಾಗುತ್ತದೆ. ಭಾಷಾ ಸೇವೆಗಳನ್ನು ಪ್ರತಿ-ಭಾಷೆಗೆ ಎಂಬ ಆಧಾರದ ಕ್ರಮದಲ್ಲೇ ಅನುಷ್ಠಾನಗೊಳಿಸಬೇಕು. ಈ ಅನುಷ್ಠಾನಗಳು ಭಾಷೆಗಾಗಿ ವಿಂಗಡಣಕಾರಕ (ಪಾರ್ಸರ್) ಅಥವಾ ಜೋಡಕಗಳಿಂದ ಮತ್ತೆ ಸಂಕೇತಗಳನ್ನು ಉಪಯೋಗಿಸಬಹುದು.[೫] ಭಾಷಾ ಸೇವೆಗಳನ್ನು ಸ್ಥಾನಿಕ ಸಂಕೇತಗಳಲ್ಲಿಯೂ ಅಥವಾ ವ್ಯವಸ್ಥಿತ ಸಂಕೇತಗಳಲ್ಲಿಯೂ ಅಳವಡಿಸಬಹುದು. ಸ್ಥಾನಿಕ ಸಂಕೇತಕ್ಕೆ ಸ್ಥಾನಿಕ ಸಂಪರ್ಕಸಾಧನಗಳು ಅಥವಾ ಬಾಬೆಲ್ ಫ್ರೇಂವರ್ಕ್(ವಿಷುಯಲ್ ಸ್ಟುಡಿಯೋ SDK ಯ ಒಂದು ಅಂಗ)ಗಳನ್ನು ಬಳಸಿಕೊಳ್ಳಬಹುದು.[೬] ವ್ಯವಸ್ಥಿತ ಸಂಕೇತಗಳಿಗೆ, MPF ವ್ಯವಸ್ಥಿತ ಭಾಷಾ ಸೇವೆಗಳನ್ನು ಬರೆಯಲು ಕವಚಗಳನ್ನು(ಹೊರಹೊದಿಕೆಗಳನ್ನು) ಒಳಗೊಂಡಿರುತ್ತದೆ.[೭]
ವಿಷುಯಲ್ ಸ್ಟುಡಿಯೋದಲ್ಲಿ ಅಂತರ್ಗತವಾದ ಆಕರ ಹತೋಟಿ ಬೆಂಬಲಗಳು ಇಲ್ಲವಾದರೂ ಅದು MSSCCI (ಮೈಕ್ರೋಸಾಫ್ಟ್ ಸೋರ್ಸ್ ಕೋಡ್ ಕಂಟ್ರೋಲ್ ಇಂಟರ್ಫೇಸ್) ಅನ್ನು ಅರ್ಥಗೊಳಿಸಲು ಸಹಾಯಕವಾಗುತ್ತದೆ ಮತ್ತು ಹೀಗೆ ಅಳವಡಿಸಲ್ಪಟ್ಟ ಈ ಅನುಕೂಲದ ಮೂಲಕ ಆಕರ ಹತೋಟಿ ವ್ಯವಸ್ಥೆಗಳು IDEಯೊಡನೆ ಹೊಂದಿಕೊಳ್ಳಬಹುದು.[೮] MSSCCI ವಿವಿಧ ಆಕರ ಹತೋಟಿ ಕಾರ್ಯವಿಧಿಗಳನ್ನು ಅಳವಡಿಸಲು ಬಳಸತಕ್ಕ ಕಾರ್ಯವಿಧಿಗಳ ಒಂದು ಜೋಡಿಯನ್ನು ವಿವರಿಸುತ್ತದೆ.[೯] MSSCCI ಅನ್ನು ಮೊದಲು ವಿಷುಯಲ್ ಸೋರ್ಸ್ ಸೇಫ್ ಸಂಯೋಜನೆಗಾಗಿ ವಿಷುಯಲ್ ಸ್ಟುಡಿಯೋ 6.0ರಲ್ಲಿ ಉಪಯೋಗಿಸಲಾಗಿತ್ತು ಆದರೆ ನಂತರ ವಿಷುಯಲ್ ಸ್ಟುಡಿಯೋ SDK ಮೂಲಕ ಬಹಿರಂಗಗೊಂಡಿತು, ವಿಷುಯಲ್ ಸ್ಟುಡಿಯೋ .NET 2003ಯು MSSCCI 1.2ವನ್ನು ಉಪಯೋಗಿಸಿತು. ವಿಷುಯಲ್ ಸ್ಟುಡಿಯೋ 2005 ಮತ್ತು 2008 ಎರಡೂ MSSCCI 1.3ರ ಮಾದರಿಯನ್ನು ಉಪಯೋಗಿಸುತ್ತವೆ; ಇದು ಮರುಹೆಸರಿಸು ಮತ್ತು ತೆಗೆದುಹಾಕು ಉತ್ಪಾದಿಸುತ್ತದೆ ಮತ್ತು ಏಕಕಾಲಿಕ ಹೊಂದಾಣಿಕೆಯಿಲ್ಲದ ಆರಂಭಕ್ಕೆ ಬೆಂಬಲವನ್ನು ಸೇರಿಸುತ್ತದೆ.[೮]
ವಿಷುಯಲ್ ಸ್ಟುಡಿಯೋ ಅನೇಕ ಗಣಕವಾತಾವರಣದ ಸಂದರ್ಭಗಳ ಚಾಲನೆಗೆ ಬೆಂಬಲವೀಯುತ್ತದೆ(ಪ್ರತಿಯೊಂದೂ ತನ್ನದೇ ಆದ Vsಪ್ಯಾಕೇಜ್ ನೊಂದಿಗೆ). ಈ ಸಂದರ್ಭಗಳು ವಿವಿಧ ನೋದಣಿ ಗೂಡುಗಳನ್ನು MSDNರ "ನೋಂದಣಿ ಗೂಡು " ಎಂಬ ಪದದ "ವಿವರಣೆ"ಯನ್ನು ಇಲ್ಲಿ ಉಪಯೋಗಿಸಿರುವ ಅರ್ಥದಲ್ಲಿ ನೋಡಿರಿ) ತಮ್ಮ ಸಂರಚನಾ ಸ್ಥಿತಿಯನ್ನು ಶೇಖರಿಸಲು ಉಪಯೋಗಿಸುತ್ತವೆ ಮತ್ತು ತಮ್ಮ AppId (ಅನ್ವಯಿಕ ID)ಯಿಂದ ಗುರುತಿಸಲ್ಪಡುತ್ತವೆ. ಆ ಸಂದರ್ಭಗಳನ್ನು ಅಪ್ ಲೋಡ್ ನಿರ್ಧಿಶ್ಟ ಫೈಲ್ ನಿಂದ ಸಂಚಲಿಸಲ್ಪಟ್ಟು ಅದು ಅಪ್ ಲೋಡ್ ಗಳನ್ನು ಆಯ್ಕೆ ಮಾಡುತ್ತದೆ, ಮೂಲ ಗೂಡನ್ನು ಸ್ಥಾಪಿಸುತ್ತದೆ ಮತ್ತು IDEಯನ್ನು ಚಿಮ್ಮಿಸುತ್ತದೆ. ಒಂದು ಅಪ್ ಲೋಡ್ ಗಾಗಿ ನೋಂದಾಯಿಸಿದ Vsಪ್ಯಾಕೇಜ್ ಗಳು ಇತರ
ಅಪ್ ಲೋಡ್ ಗಳೊಡನೆ VSಪ್ಯಾಕೇಜ್ ಗಳ ಮೂಲಕ ಸಮ್ಮಿಳಿತವಾಗಿ ಆ ಅಪ್ ಲೋಡ್ ಗಾಗಿ ನೋಂದಾಯಿಸಲಾಗುತ್ತದೆ. ವಿಷುಯಲ್ ಸ್ಟುಡಿಯೋದ ವಿವಿಧ ಉತ್ಪನ್ನದ ಆವೃತ್ತಿಗಳು ವಿವಿಧ Appldsಗಳನ್ನು ಉಪಯೋಗಿಸಿ ಸೃಷ್ಠಿಸಲ್ಪಡುತ್ತವೆ. ವಿಷುಯಲ್ ಸ್ಟುಡಿಯೋ ಎಕ್ಸ್ ಪ್ರೆಸ್ ಆವೃತ್ತಿಯ ವಸ್ತುಗಳನ್ನು ಅವುಗಳದೇ ಆದ ಅಪ್ಗ ಲೋಡ್ ಗಳೊಂದಿಗೆ ಸ್ಥಾಪಿಸಲಾಗುತ್ತದೆ, ಆದರೆ ಸ್ಟಾಂಡರ್ಡ್ ಪ್ರೊಫೆಷನಲ್ ಮತ್ತು ಟೀಂ ಸ್ಯೂಟ್ ಪದಾರ್ಥಗಳು ಒಂದೇ Appldಯನ್ನು ಹಂಚಿಕೊಳ್ಳುತ್ತವೆ. ತತ್ಪರಿಣಾಮವಾಗಿ ಎಕ್ಸ್ ಪ್ರೆಸ್ ಆವೃತ್ತಿಗಳನ್ನು ಬೇರೆ ಆವೃತ್ತಿಗಳ ಪಕ್ಕಪಕ್ಕವೇ ಸ್ಥಾಪಿಸಬಹುದು, ಇದು ಇತರ ಸ್ಥಾಪಿತವಾದುದನ್ನೇ ಅಂದಿಗೆ ಉತ್ತಮಗೊಳಿಸುವ ರೀತಿಗಿಂತಲೂ ಭಿನ್ನವಾಗಿದೆ. ಪ್ರೊಫೆಷನಲ್ ಆವೃತ್ತಿಯು Vsಪ್ಯಾಕೇಜ್ ಗಳ ಒಂದು ಸೂಪರ್ ಸೆಟ್ ಅನ್ನು ಸ್ಟಾಂಡರ್ಡ್ ಆವೃತ್ತಿಯಲ್ಲೂ ಮತ್ತು ಟೀಂ ಸ್ಯೂಟ್ Vsಪ್ಯಾಕೇಜ್ ಗಳ ಒಂದು ಸೂಪರ್ ಸೆಟ್ ಅನ್ನು ಮಿಕ್ಕೆರಡು ಆವೃತ್ತಿಗಳಲ್ಲೂ ಹೊಂದಿರುತ್ತವೆ. AppId ಕ್ರಮಗಳು ವಿಷುಯಲ್ ಸ್ಟುಡಿಯೋ 2008ರಲ್ಲಿ ವಿಷುಯಲ್ ಸ್ಟುಡಿಯೋ ಕವಚದಿಂದ ಮೀಟಲ್ಪಡುತ್ತದೆ.[೧೦]
ವೈಶಿಷ್ಟ್ಯಗಳು
[ಬದಲಾಯಿಸಿ]ಸಂಕೇತ ಸಂಪಾದಕ
[ಬದಲಾಯಿಸಿ]ಯಾವುದೇ ಇತರ IDEಗಳಂತೆಯೇ ವಿಷುಯಲ್ ಸ್ಟುಡಿಯೋ ಸಹ ಸಂಕೇತ ಸಂಪಾದಕವನ್ನು ಹೊಂದಿದ್ದು, ಇದು ಭಾಷಾನಿಯಮ ಎತ್ತಿತೋರಿಸುವಿಕೆ ಮತ್ತು ಸಂಕೇತ ಪೂರ್ಣಗೊಳಿಸುವಿಕೆಗಳನ್ನು ಇಂಟೆಲಿಸೆನ್ಸ್ ಬಳಕೆಯ ಮೂಲಕ ಚರಾಂಕಗಳು, ಕಾರ್ಯಭಾರಗಳು, ಮತ್ತು ಕಾರ್ಯರೂಪಗಳು ಮತ್ತು ರೀತಿಗಳಿಗಷ್ಟೇ ಅಲ್ಲದೆ ಭಾಷಾ ನಿರ್ಮಿತವಾದ ಆವರ್ತನೆಗಳು ಮತ್ತು ಪ್ರಶ್ನೆಗಳನ್ನೂ ಬೆಂಬಲಿಸುತ್ತದೆ.[೧೧] ಇಂಟೆಲಿಸೆನ್ಸ್ ತನ್ನೊಳಗೊಂಡ ಭಾಷೆಗಳಿಗೆ ಬೆಂಬಲ ಪಡೆಯುತ್ತದೆ; ಅಂತೆಯೇ XML ಮತ್ತು ಶ್ರೇಣೀಕೃತ ಶೈಲಿಯ ಹಾಳೆಗಳು ಹಾಗೂ ಜಾವಾ ಸ್ಕ್ರಿಪ್ಟ್ ಗಳನ್ನುಪಯೋಗಿಸಿ ಜಾಲತಾಣಗಳು ಮತ್ತು ಜಾಲ ಅನ್ವಯಿಕೆಗಳನ್ನು ಅಭಿವೃದ್ಧಿಗೊಳಿಸಲು ಸಹ ಇದು ಬೆಂಬಲಿಸುತ್ತದೆ.[೧೨][೧೩] ಸ್ವಯಂ ಪೂರ್ಣಗೊಳಿಸು ಸೂಚನೆಗಳು ನಿಶ್ಚಿತ ಸ್ಥಿತಿಯಿಲ್ಲದ ಪಟ್ಟಿಯಾವರಣದಲ್ಲಿ ತಲೆಯೆತ್ತುತ್ತವೆ, ಇವು ಸಂಕೇತ ಸಂಪಾದಕದ ಮೇಲೆ ವಿಸ್ತೃತವಾಗಿರುತ್ತವೆ. 2008ರ ನಂತರದ ವಿಷುಯಲ್ ಸ್ಟುಡಿಯೋಗಳಲ್ಲಿ ಇದನ್ನು ತಾತ್ಕಾಲಿಕವಾಗಿ ಭಾಗಶಃ ಪಾರದರ್ಶಕವಾಗಿಸಿ ಯಾವ ಸಂಕೇತಗಳಿಗೆ ಅಡ್ಡಿಯುಂಟಾಗಿದೆ ಎಂದು ನೋಡಬಹುದು.[೧೧] ಸಂಕೇತ ಸಂಪಾದಕವನ್ನು ಎಲ್ಲಾ ಬೆಂಬಲಿತ ಭಾಷೆಗಳಿಗೆ ಉಪಯೋಗಿಸಲಾಗುತ್ತದೆ.
ವಿಷುಯಲ್ ಸ್ಟುಡಿಯೋ ಸಂಕೇತ ಸಂಪಾದಕವು ತ್ವರಿತ ಯಾನಕ್ಕಾಗಿ ಪುಟ ಗುರುತುಗಳನ್ನು ಸ್ಥಾಪಿಸುವುದನ್ನು ಬೆಂಬಲಿಸುತ್ತದೆ. ಇತರ ಯಾನಸಹಾಯಕಗಳೆಂದರೆ ಸಾಮಾನ್ಯ ಪಠ್ಯ ಶೋಧ ಮತ್ತು ರೆಜೆಕ್ಸ್(ರೆಗ್ಯುಲರ್ ಸರ್ಚ್ ಅರ್ಥಾತ್ ನಿಯತವಾಧ ಶೋಧ)ಶೋಧಗಳೊಂದಿಗೆ, ಕುಸಿಯುವ ಸಂಕೇತ ಉಪವಿಭಾಗಗಳು ಮತ್ತು ವೃದ್ಧಿತ ಶೋಧ.[೧೪] ಸಂಕೇತ ಸಂಪಾದಕದಲ್ಲಿ ಅನೇಕ-ವಸ್ತುಗಳ ನಕಲುಫಲಕ ಮತ್ತು ಕಾರ್ಯ ಪಟ್ಟಿಯೂ ಇರುತ್ತವೆ.[೧೪] ಸಂಕೇತ ಸಂಪಾದಕವು ಪುನಃ ಸಂಕೇತವಾಗಿಸಲು ಸಿದ್ಧವಿನ್ಯಾಸಪುಟಗಳಲ್ಲಿ ಸಂರಕ್ಷಿಸಿರುವ ಸಂಕೇತದ ತುಣುಕುಗಳನ್ನು ಬೆಂಬಲಿಸುತ್ತದೆ ಮತ್ತು ಇದನ್ನು ಸಂಕೇತದಲ್ಲಿ ಗಿಡುಕಿ, ಎಸಗುತ್ತಿರುವ ಯೋಜನೆಗೆ ಅನುಗುಣವಾಗುವಂತೆ ಅದನ್ನು ಗ್ರಾಹಕೀಯಗೊಳಿಸಬಹುದು. ಸಂಕೇತ ತುಣುಕುಗಳಿಗಾಗಿ ಒಂದು ವ್ಯವಸ್ಥಾ ಸಲಕರಣೆಯನ್ನು ಒಳಗೇ ನಿರ್ಮಿಸಲಾಗುತ್ತದೆ. ಈ ಸಲಕರಣೆಗಳನ್ನು ತೇಲುವ ಕಿಟಕಿಗಳಂತೆ ಕ್ಷೇತ್ರಕ್ಕೆ ಬರಮಾಡಿ, ಉಪಯೋಗಿಸದಿದ್ದಾಗ ಅಥವಾ ತೆರೆಯ ಪಕ್ಕಕ್ಕೆ ಸರಿಸಲ್ಪಟ್ಟಾಗ ಸ್ವಯಂ ಮರೆಗೆ ಹೋಗುವಂತೆ ವ್ಯವಸ್ಥೆಗೊಳಿಸಬಹುದು. ವಿಷುಯಲ್ ಸ್ಟುಡಿಯೋ ಸಂಕೇತ ಸಂಪಾದಕವು ಸಂಕೇತ ಮರು-ಅಂಶಕರಣವನ್ನೂ ಬೆಂಬಲಿಸುತ್ತದಲ್ಲದೆ ಪ್ರಾಚರ ಮರುಕ್ರಮಗೊಳಿಸುವಿಕೆ, ಚರಾಂಶ ಮತ್ತು ವಿಧಿ ಮರುನಾಮಕರಣ, ಸಂಪರ್ಕಸಾಧನಗಳ ಉತ್ಖನನ ಮತ್ತು ಗುಣವಿಶೇಷಗಳ ಒಳಗೆ ಶ್ರೇಣಿಯ ಸದಸ್ಯವಿಷಯಗಳ ಕೋಶಾವೃತತ್ವ ಮತ್ತು ಇತರ ಹಲವು ಅಂಶಗಳನ್ನೂ ಬೆಂಬಲಿಸುತ್ತದೆ.
ವಿಷುಯಲ್ ಸ್ಟುಡಿಯೋದ ವೈಶಿಷ್ಟ್ಯ ಹಿನ್ನೆಲೆ ಸಂಕಲನಕ್ರಿಯೆ.(ವೃದ್ಧಿಸುವ ಸಂಕಲನಕ್ರಿಯೆಯೆಂದೂ ಕರೆಯಲಾಗುತ್ತದೆ)[೧೫] [೧೬] ಸಂಕೇತವನ್ನು ಬರೆಯುತ್ತಿರುವಂತಯೇ ವಿಷುಯಲ್ ಸ್ಟುಡಿಯೋ, ಭಾಷಾನಿಯಮಗಳ ಮತ್ತು ಸಂಕಲಿಕೆಯ ದೋಷಗಳ ಬಗ್ಗೆ ಮಾಹಿತಿ ನೀಡಲೋಸುಗ, ಅದನ್ನು ಹಿನ್ನೆಲೆಯಲ್ಲೂ ಸಂಗ್ರಹಿಸುತ್ತಾ ಸಾಗುತ್ತದೆ. ದೋಷ, ತಪ್ಪುಗಳು ಕಂಡುಬಂದಲ್ಲಿ ಕೆಂಪು ಅಲೆಗಳ ಅಡಿಸಾಲಿನಿಂದ ಅವನ್ನು ಸೂಚಿಸಲಾಗುತ್ತದೆ ಎಚ್ಚರಿಕೆಗಳನ್ನು ಹಸಿರು ಅಡಿಗೆರೆಗಳಿಂದ ಸೂಚಿಸಲಾಗುತ್ತದೆ ಹಿನ್ನೆಲೆ ಸಂಕಲನಕ್ರಿಯೆಯು ಉಪಯೋಗಿಸಬಲ್ಲ ಸಂಕೇತಗಳನ್ನು ಉತ್ಪಾದಿಸುವುದಿಲ್ಲವೇಕೆಂದರೆ ಉಪಯೋಗಿಸಬಲ್ಲ ಸಂಕೇತಗಳನ್ನು ಉತ್ಪಾದಿಸಲು ಬೇರೆಯೇ ಸಂಕಲನಕಾರಕವು ಬೇಕಾಗುತ್ತದೆ.[೧೭] ಹಿನ್ನೆಲೆ ಸಂಕಲನವು ಮೈಕ್ರೋಸಾಫ್ಟ್ ವಿಷುಯಲ್ ಬೇಸಿಕ್ ನಲ್ಲಿ ಮೊದಲು ಪರಿಚಯಿಸಲ್ಪಟ್ಟಿತು, ಆದರೆ ಈಗ ಎಲ್ಲಾ ಸೇರ್ಪಡೆಯಾದ ಭಾಷೆಗಳಿಗೂ ವಿಸ್ತರಿಸಲಾಗಿದೆ.[೧೬]
ದೋಷಸೂಚಕ
[ಬದಲಾಯಿಸಿ]ವಿಷುಯಲ್ ಸ್ಟುಡಿಯೋವು ಒಂದು ದೋಷಸೂಚಕವನ್ನು ಹೊಂದಿದ್ದು ಅದು ಮೂಲ-ನೆಲೆಗಟ್ಟಿನ ದೋಷಸೂಚಕವಾಗಿಯೂ, ಯಂತ್ರ-ದೋಷಸೂಚಕವಾಗಿಯೂ ಕಾರ್ಯವೆಸಗುತ್ತದೆ. ಅದು ವ್ಯವಸ್ಥಿತ ಸಂಕೇತಗಳೊಡನೆಯೂ ಹಾಗೂ ಸ್ಥಾನಿಕ ಸಂಕೇತಗಳೊಡನೆಯೂ ಕಾರ್ಯವೆಸಗುವಂತಿದ್ದು ವಿಷುಯಲ್ ಸ್ಟುಡಿಯೋವು ಬೆಂಬಲಿಸುವ ಯಾವುದೇ ಭಾಷೆಯಲ್ಲಿ ಬರೆದ ಅನ್ವಯಗಳ ದೋಷಸೂಚಕವಾಗಿ ಉಪಯೋಗಿಸಬಹುದು. ಜೊತೆಗೆ, ಅದು ಜಾರಿಯಲ್ಲಿರುವ ಸಂಸ್ಕರಣ(process)ಗಳೊಂದಿಗೆ ಸೇರಬಹುದಾಗಿದೆ ಮತ್ತು ಆ ಸಂಸ್ಕರಣಗಳನ್ನು ಗಮನಿಸುತ್ತಾ ದೋಷಸೂಚನೆಗಳನ್ನು ನೀಡುತ್ತದೆ.[೧೮] ಜಾರಿಯಲ್ಲಿರುವ ಸಂಸ್ಕರಣಕ್ಕೆ ಮೂಲ ಸಂಕೇಗಳು ಲಭ್ಯವಿದ್ದಲ್ಲಿ, ಅದು ಸಂಕೇತಗಳು ಸಾಗುತ್ತಿರುವ ಜಾಡನ್ನು ಪ್ರದರ್ಶಿಸುತ್ತದೆ. ಮೂಲ ಸಂಕೇತಗಳು ಅಲಭ್ಯವಾದಲ್ಲಿ, ಅದು ನಿರ್ಜೋಡಣಾವಿಧಿ(disassembly)ಯನ್ನು ತೋರಿಸಬಲ್ಲುದಾಗಿದೆ. ವಿಷುಯಲ್ ಸ್ಟುಡಿಯೋ ದೋಷಸೂಚಕವು ಸ್ಮ್ರತಿ ಗೋದಾಮುಗಳನ್ನು ಸೃಷ್ಠಿಸಬಲ್ಲುದು ಮತ್ತು ನಂತರ ದೋಷಸೂಚನೆಗಾಗಿ ಅವನ್ನು ತುಂಬಿಸಬಹುದು.[೧೯] ಬಹಳ-ಹೆಣಿಕೆಗಳುಳ್ಳ ಕಾರ್ಯಗಳನ್ನೂ ಇದು ಬೆಂಬಲಿಸುತ್ತದೆ. ವಿಷುಯಲ್ ಸ್ಟುಡಿಯೋದ ಹೊರಗಿನ ಕ್ಷೇತ್ರದಲ್ಲಿ ಜಾರಿಯಲ್ಲಿರುವ ಅನ್ವಯಿಕೆಯೊಂದು ಸ್ಥಗಿತಗೊಂಡಾಕ್ಷಣ ದೋಷಸೂಚಕವು ಕಾರ್ಯೋನ್ಮುಖವಾಗುವಂತೆ ಸಂರಚಿಸಬಹುದು.
ದೋಷಸೂಚಕವು ಭಿನ್ನತಾ-ಸ್ಥಾನಗಳನ್ನು ಸ್ಥಾಪಿಸಲು ಅನುವುಮಾಡಿಕೊಡಿತ್ತದೆ(ಇದರಿಂದ ಕಾರ್ಯವನ್ನೆಸಗುವುದನ್ನು ಒಂದು ನಿರ್ದಿಷ್ಟ ಜಾಗದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲು ಸಹಾಯವಾಗುತ್ತದೆ) ಮತ್ತು ಕಾವಲುಗಳನ್ನು ಸ್ಥಾಪಿಸುತ್ತದೆ(ಇವು ಕಾರ್ಯವು ಜರುಗುತ್ತಿರುವಂತೆಯೇ ಚರಾಂಕಗಳ ಮೌಲ್ಯಗಳನ್ನು ಗಮನಿಸುತ್ತಿರುತ್ತದೆ).[೨೦] ಭಿನ್ನತಾ-ಸ್ಥಾನಗಳು ನಿಬಂಧನಾಧೀನವಾಗಿರಬಹುದು, ಎಂದರೆ ಒಂದು ನಿಬಂಧನೆಯನ್ನು ಅಳವಡಿಸಿದಾಗ ಮಾತ್ರ ಇವು ಕಾರ್ಯೋನ್ಮುಖವಾಗಬಹುದು. ಸಂಕೇತಗಳನ್ನು ಉಲ್ಲಂಘಿಸಬಹುದು, ಎಂದರೆ, (ಮೂಲ ಸಂಕೇತದ) ೊಂದು ಬಾರಿಗೆ ಒಂದೊಂದೇ ಸಾಲನ್ನು ಚಲಾಯಿಸಬಹುದು.[೨೧] ಅದು ಯೋಜನೆಗಳ ಒಳಗೆ ಹೆಜ್ಜೆಯಿಟ್ಟು ಒಳಗೆ ದೋಷಸೂಚನೆ ಮಾಡಬಹುದು,ಅಥವಾ ಅದರ ಉಲ್ಲಂಘನೆ ಮಾಡಬಹುದು, ಎಂದರೆ, ಕಾರ್ಯವೆಸಗುವ ಕಾರ್ಯವೈಖರಿಯು ವ್ಯಕ್ತಿಯ ಅವಗಾಹನೆಗೆ ನಿಲುಕುವುದಿಲ್ಲ.[೨೧] ದೋಷಸೂಚಕವು ಸರಿಮಾಡು ಮತ್ತು ಮುಂದುವರಿ ಯನ್ನು ಬೆಂಬಲಿಸುತ್ತದೆ, ಎಂದರೆ, ಅದು ದೋಷಸೂಚಿಸುತ್ತಿರುವಂತೆಯೇ ಸಂಕೇತಗಳನ್ನು ಸರಿಮಾಡಲು ಅನುವು ಮಾಡಿಕೊಡುತ್ತದೆ(೩೨ ಬಿಟ್ ಗಳಲ್ಲಿ ಮಾತ್ರ; ೬೪ ಬಿಟ್ ಗಳಲ್ಲಿ ಈ ಸೌಲಭ್ಯವಿಲ್ಲ).[೨೨] ದೋಷಸೂಚನಾಕ್ರಿಯೆ ನಡೆಯುತ್ತಿರುವಾಗ, ಯಾವುದೇ ಚರಾಂಕದ ಮೇಲೆ ಮೌಸ್ ನ ಸೂಚಕವು ಸುಳಿದಾಡಿದರೆ, ಆ ಚರಾಂಕದ ಆಗಿನ ಮೌಲ್ಯವು ಸಲಕರಣಾಗ್ರ(ಟೂಲ್ ಟಿಪ್)ನಲ್ಲಿ ಪ್ರದರ್ಶಿತವಾಗುತ್ತದೆ, ಅಗತ್ಯವಿದ್ದರೆ ಅದನ್ನು ಅಲ್ಲಿಯೇ ಮಾರ್ಪಡಿಸುವ ಸಹ ಸಾಧ್ಯವಾಗುತ್ತದೆ. ಸಂಕೇತಗೊಳಿಸುವ ಸಮಯದಲ್ಲಿ ವಿಷುಯಲ್ ಸ್ಟುಡಿಯೋ ದೋಷಸೂಚಕವು ಕೆಲವು ಕ್ರಿಯೆಗಳನ್ನು ಖುದ್ಧಾಗಿ(ಮಾನವಕೃತವಾಗಿ) ತುರ್ತು
ಸಲಕರಣಾ ಕಿಟಕಿಯಿಂದ ಅಳವಡಿಸಲು ಅವಕಾಶವೀಯುತ್ತದೆ. ಆ ಕ್ರಿಯೆಗೆ ಬೇಕಾದ ಪರಿಮಿತಿಗಳನ್ನು ತುರ್ತು ಕಿಟಕಿಯು ಒದಗಿಸುತ್ತದೆ.[೨೩]
ವಿನ್ಯಾಸಕ
[ಬದಲಾಯಿಸಿ]ಈ ವಿಭಾಗದಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (May 2008) |
ವಿಷುಯಲ್ ಸ್ಟುಡಿಯೋ ಅನ್ವಯಗಳ ಅಬಿವೃದ್ಧಿಗೆ ಪೂರಕವಾಗುವ ಸಲುವಾಗಿ ಹಲವಾರು ವಿಷುಯಲ್ ವಿನ್ಯಾಸಕಗಳನ್ನು ಹೊಂದಿರುತ್ತದೆ. ಈ ಸಲಕರಣೆಗಳು ಯಾವುವೆಂದರೆ:
- ವಿಂಡೋಸ್ ರೂಪಗಳ ವಿನ್ಯಾಸಕ
- ವಿಂಡೋಸ್ ರೂಪಗಳ ವಿನ್ಯಾಸಕವನ್ನು, ವಿಂಡೋಸ್ ರೂಪಗಳನ್ನು ಉಪಯೋಗಿಸಿ,GUI ಅನ್ವಯಿಕೆಗಳ ನಿರ್ಮಾಣಕ್ಕಾಗಿ ಬಳಸಲಾಗುವುದು. ಅದು UI ವಿಡ್ಜೆಟ್ ಗಳ ಒಂದು ವರ್ಣಪಟ್ಟಿಕೆಯನ್ನು ಮತ್ತು ಹತೋಟಿಗಳನ್ನು ಹೊಂದಿದ್ದು (ಗುಂಡಿಗಳು, ಪ್ರಗತಿ ಪಟ್ಟಿಗಳು, ಚಿಹ್ನೆಗಳು, ರೂಪವಿನ್ಯಾಸ ಕೋಶಗಳು ಮತ್ತು ಇತರ ನಿಯಂತ್ರಕಗಳನ್ನು ಹೊಂದಿದಂತೆ)ಅವುಗಳನ್ನು ಕರ್ಷಿಸಿ ವಿಹಿತ ಕ್ಷೇತ್ರದ ಮೇಲೆ ಅವರೋಹಿಸಬಹುದು. ರೂಪವಿನ್ಯಾಸವನ್ನು ಇತರ ಕೋಶಗಳಲ್ಲಿ ಅಡಕವಾಗಿಸಿ ಅಥವಾ ಸಂರಚಿತ ಕ್ಷೇತ್ರದ ಪಾರ್ಶ್ವಗಳಿಗೆ ಭದ್ರವಾಗಿ ಸಿಕ್ಕಿಸಿ ಹತೋಟಿಯಲ್ಲಿಟ್ಟುಕೊಳ್ಳಬಹುದು. ದತ್ತ(ಪಠ್ಯ ಪೆಟ್ಟಿಗೆ,ಪರಿವಿಡಿ ಪೆಟ್ಟಿಗೆ, ಹೆಣಿಗೆ ದರ್ಶನ,ಇತ್ಯಾದಿ)ವಾದುವನ್ನು ಪ್ರದರ್ಶಿಸುವ ನಿಯಂತ್ರಕಗಳನ್ನು ದತ್ತಮೂಲಗಳಾದ ದತ್ತಸಂಚಯ ಅಥವಾ ಪ್ರಶ್ನೆಗಳಿಗೆ ದತ್ತಬಂಧವಾಗಿಸಬಹುದು. ಒಂದು ಸಂಗತಿ-ಚಾಲಿತ ಕ್ರಿಯಾತ್ಮಕ ಮಾದರಿಯನ್ನು ಉಪಯೋಗಿಸಿ UI ಅನ್ನು ಸಂಕೇತಗಳಿಗೆ ಸೇರಿಸಬಹುದು. ಈ ವಿನ್ಯಾಸಕವು ಅನ್ವಯಿಕಕ್ಕೆಂದು C#, ಅಥವಾ VB.NET ಅನ್ನು ಉತ್ಪಾದಿಸುತ್ತದೆ.
- WPF ವಿನ್ಯಾಸಕ
- ವಿಂಡೋಸ್ ಫಾರ್ಮ್ಸ್ ವಿನ್ಯಾಸಕದಂತೆಯೇ ಇದು ಕರ್ಷಣ ಮತ್ತು ಉತಾರಣ ಲಕ್ಷಣರೂಪಕಗಳ ಉಪಯೋಗಗಳನ್ನು ಬೆಂಬಲಿಸುತ್ತದೆ. ವಿಂಡೋಸ್ ಪ್ರೆಸೆಂಟೇಷನ್ ಫೌಂದೇಷನ್ ಅನ್ನು ಗುರಿಯಾಗಿರಿಸಿಕೊಂಡು ಗ್ರಾಹಕ ಸಂಪರ್ಕಸಾಧನಗಳನ್ನು ಬರೆಯಲು ಇದನ್ನು ಬಳಸಲಾಗುತ್ತದೆ. ಇದು ಎಲ್ಲಾ WPF ನ ಎಲ್ಲಾ ಕ್ರಿಯೆಗಳಿಗೂ ಬೆಂಬಲ ನೀಡುವುದಾಗಿದ್ದ ದತ್ತಸಂಕಲನ ಮತ್ತು ಸ್ವಯಂ ರೂಪವಿನ್ಯಾಸ ವ್ಯವಸ್ಥಾಪನೆಯೂ ಅದರಲ್ಲಿ ಒಳಗೊಂಡಿದೆ. ಇದು UIಗೆ XAML ಸಂಕೇತವನ್ನು ಉತ್ಪಾದಿಸಿಕೊಡುತ್ತದೆ. ಹೀಗೆ ಉತ್ಪಾದಿತವಾದ XAML ಕಡತವು ವಿನ್ಯಾಸಕ-ಉದ್ದೇಶಿತ ಉತ್ಪನ್ನವಾದ ಮೈಕ್ರೋಸಾಫ್ಟ್ ಎಕ್ಸ್ ಪ್ರೆಷನ್ ವಿನ್ಯಾಸಕ್ಕೆ ಅನುಗುಣವಾಗಿದೆ. XAML ಸಂಕೇತವು ಕೋಡ್-ಬಿಹೈಂಡ್ ಮಾದರಿಯಿಂದ ಸಂಪರ್ಕಿತವಾಗಿದೆ.
- ಜಾಲ ವಿನ್ಯಾಸಕ/ಅಭಿವೃದ್ಧಿ
- ವಿಷುಯಲ್ ಸ್ಟುಡಿಯೋ ಜಾಲ ತಾಣ ಸಂಪಾದಕ ಮತ್ತು ವಿನ್ಯಾಸಕವನ್ನೂ ಹೊಂದಿದ್ದು, ಇವು ಸೆಳೆದು, ಉರುಳಿಸುವ ವಿಡ್ಜೆಟ್ ಗಳಿಂದ ಜಾಲ ಪುಟಗಳನ್ನು ಬರೆಯಲು ಅನುಮತಿಸುತ್ತವೆ. ಇದನ್ನು ASP.NET ಅನ್ವಯಿಕಗಳನ್ನು ಅಭಿವೃದ್ಧಿಗೊಳಿಸಲು ಉಪಯೋಗಿಸಲಾಗುತ್ತದೆ ಮತ್ತು HTML, CSS, ಮತ್ತು ಜಾವಾಸ್ಕ್ರಿಪ್ಟ್ ಗಳನ್ನು ಬೆಂಬಲಿಸುತ್ತದೆ. ಇದು ಸಂಕೇತ-ಹಿನ್ನೆಲೆ ಮಾದರಿಯನ್ನು ಉಪಯೋಗಿಸಿ ASP.NET ಸಂಕೇತದೊಡನೆ ಸಂಪರ್ಕ ಸಾಧಿಸುತ್ತದೆ. ವಿಷುಯಲ್ ಸ್ಟುಡಿಯೋ 2008ರಿಂದ ಜಾಲ ವಿನ್ಯಾಸಕವು ಉಪಯೋಗಿಸುವ ರೂಪವಿನ್ಯಾಸ ಎಂಜಿನ್ ಅನ್ನು ಮೈಕ್ರೋಸಾಫ್ಟ್ ಎಕ್ಸ್ ಪ್ರೆಷನ್ ವೆಬ್ ನೊಡನೆ ಹಂಚಿಕೊಳ್ಳಲಾಗುತ್ತಿದೆ. ಅಲ್ಲದ MVC ತಾಂತ್ರಿಕತೆಗೆ ಪ್ರತ್ಯೇಕ ಡೌನ್ ಲೋಡ್[೧] ಆಗಿ ASP.NET MVC ಬೆಂಬಲ, ಹಾಗೂ ಕ್ರಿಯಾತ್ಮಕ ದತ್ತ ಯೋಜನೆಗಳು ಮೈಕ್ರೋಸಾಫ್ಟ್[೨]ನಿಂದ ಲಭ್ಯವಿದೆ.
- ಶ್ರೇಣಿ ವಿನ್ಯಾಸಕ
- ಶ್ರೇಣಿ ವಿನ್ಯಾಸಕವನ್ನು, UML ಮಾದರಿಗಳನ್ನು ಬಳಸಿ, ಶ್ರೇಣಿಗಳನ್ನು ಬರೆಯಲು ಮತ್ತು ಸಂಪಾದಿಸಲು ಉಪಯೋಗಿಸಲಾಗುತ್ತದೆ.(ಅದರ ಅಂಗಗಳು ಮತ್ತು ಅವುಗಳ ತಲುಪುವಿಕೆಯ ರೀತಿಗಳನ್ನು ಒಳಗೊಂಡಂತೆ) ಈ ಶ್ರೇಣಿ ವಿನ್ಯಾಸಕವು C# ಮತ್ತು VB.NET ಸಂಕೇತ ರೂಪರೇಷೆಗಳನ್ನು, ಶ್ರೇಣಿಗಳಿಗಾಗಿ ಮತ್ತು ವಿಧಿಗಳಿಗಾಗಿ, ಉತ್ಪಾದಿಸಬಲ್ಲದು. ಇದು ಶ್ರೇಣಿ ನಕ್ಷೆಗಳನ್ನು ಹಾಗೂ ಕೈಯಲ್ಲಿ ಬರೆದ ಶ್ರೇಣಿಗಳನ್ನೂ ಸಹ ಉತ್ಪಾದಿಸಬಲ್ಲದು.
- ದತ್ತ ವಿನ್ಯಾಸಕ
- ದತ್ತ ವಿನ್ಯಾಸಕವನ್ನು ಚಿತ್ರಗಳ ಮೂಲಕ,ಟೈಪ್ ಮಾಡಲ್ಪಟ್ಟ ಕ್ರಮಪಟ್ಟಿಗಳು, ಮೂಲ ಹಾಗೂ ಬಾಹ್ಯ ಕೀಲಿಗಳು, ಮತ್ತು ನಿರ್ಬಂಧಗಳನ್ನು ಒಳಗೊಂಡಂತೆ, ದತ್ತಸಂಚಯ ಯೋಜನೆಗಳನ್ನು ಸಂಪಾದಿಸಲು(ತಿದ್ದಲು) ಉಪಯೋಗಿಸಬಹುದು; ಚಿತ್ರದರ್ಶನದ ಮೂಲಕ ಪ್ರಶ್ನೆಗಳನ್ನು ವಿನ್ಯಾಸಗೊಳಿಸಲು ಸಹ ಇದನ್ನು ಉಪಯೋಗಿಸಬಹುದು.
- ನಕ್ಷೆ ವಿನ್ಯಾಸಕ
- ವಿಷುಯಲ್ ಸ್ಟುಡಿಯೋ 2008ರಿಂದ ಆರಂಭವಾಗಿ, ನಕ್ಷೆಗಳನ್ನು ರೂಪಿಸುವ ವಿನ್ಯಾಸಕವನ್ನು LINQ ನಿಂದ SQLವರೆಗೂ ದತ್ತವನ್ನು ಕೋಶಗತಗೊಳಿಸುವ ಶ್ರೇಣಿಗಳ ಮತ್ತು ದತ್ತಸಂಚಯ ಯೋಜನೆಗಳ ನಡುವೆ ನಕ್ಷೆ ರಚನೆಯ ವಿನ್ಯಾಸವನ್ನು ರೂಪಿಸಲು ಬಳಸಲಾಗುತ್ತಿದೆ. ಈಗಿನ ORM ಕ್ರಮದ ಹೊಸ ಪರಿಹಾರಕವಾದ ADO.NET ಎಂಟಿಟಿ ಫ್ರೇಂವರ್ಕ್ ಹಳೆಯ ತಾಂತ್ರಿಕ ಅಂಶಗಳನ್ನು ಬದಲಾಯಿಸುತ್ತದೆ ಮತ್ತು ಉತ್ತಮಗೊಳಿಸುತ್ತದೆ.
ಇತರೆ ಸಾಧನಗಳು
[ಬದಲಾಯಿಸಿ]ಈ ವಿಭಾಗದಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (May 2008) |
- ತೆರೆದ ಮುಂತಳ್ಳು ವೀಕ್ಷಕ
- ತೆರೆದ ಮುಂತಳ್ಳು ವೀಕ್ಷಕವನ್ನು ಎಲ್ಲಾ ತೆರೆದ ಮುಂತಳ್ಳುಗಳನ್ನು ಪಟ್ಟಿಮಾಡಲು ಮತ್ತು ಅವುಗಳ ನಡುವೆ ಬದಲಾಯಿಸಲು ಬಳಸುತ್ತಾರೆ. ಅದನ್ನು
CTRL+TAB
ಒತ್ತುವುದರ ಮೂಲಕ ಆಹ್ವಾನಿಸಲಾಗುತ್ತದೆ.
- ಗುಣವಿಶೇಷಗಳ ಸಂಪಾದಕ
- ಗುಣವಿಶೇಷ ಸಂಪಾದಕ ಸಲಕರಣೆಯು ವಿಷುಯಲ್ ಸ್ಟುಡಿಯೋದೊಳಗಿನ GUI ಪೇನ್ ನ ಗುಣವಿಶೇಷಗಳನ್ನು ಸಂಪಾದಿಸಲು/ತಿದ್ದಲು ಬಳಸಲಾಗುತ್ತದೆ. ಅದು ಶ್ರೇಣಿಗಳು, ವಿಧಿಗಳು, ರೂಪಗಳು, ಜಾಲ ಪುಟಗಳು ಮತ್ತ ಇತರ ಎಲ್ಲಾ ಲಭ್ಯವಾದ ವಸ್ತುಗಳ ಎಲ್ಲಾ ಲಭ್ಯವಾದ ಗುಣವಿಶೇಷಗಳನ್ನೂ (ಓದಲು-ಮಾತ್ರ ಮತ್ತು ಅಳವಡಿಸಲು ಸಾಧ್ಯವಾಗುವಂತಹುದು ಎರಡನ್ನೂ)ಪಟ್ಟಿ ಮಾಡುತ್ತದೆ.
- ವಸ್ತು ವೀಕ್ಷಕ
- ವಸ್ತು ವೀಕ್ಷಕ ವು ಮೈಕ್ರೋಸಾಫ್ಟ್ .NETನ ಒಂದು ನಾಮತೆರವು ಮತ್ತು ಶ್ರೇಣಿ ಗ್ರಂಥಾಲಯ ವೀಕ್ಷಕವಾಗಿದೆ. ಇದನ್ನು (ಕ್ರಮಾಗತವಾಗಿ ಜೋಡಣೆ ಮಾಡಲ್ಪಟ್ಟಿದ್ದು)ವ್ಯವಸ್ಥಿತ ಜೋಡಣೆಗಳಲ್ಲಿ ನಾಮತೆರವುಗಳನ್ನು ವೀಕ್ಷಿಸಲು ಉಪಯೋಗಿಸಬಹುದು. ಕ್ರಮಾನುಗತ ಜೋಡಣೆಯು ಕಡತ ಕ್ರಮದಲ್ಲಿನ ಸಂಘಟನೆಯನ್ನು ಬಿಂಬಿಸಲೂ ಬಹುದು, ಬಿಂಬಿಸದಿರಲೂಬಹುದು.
- ಪರಿಹಾರ ಶೋಧಕ
- ವಿಷುಯಲ್ ಸ್ಟುಡಿಯೋ ಭಾಷೆಯಲ್ಲಿ, ಪರಿಹಾರ ಎಂದರೆ ಒಂದು ಅನ್ವಯವನ್ನು ರಚಿಸಲು ಅಗತ್ಯವಾದ ಒಂದು ಜೊತೆ ಸಂಕೇತ ಕಡತಗಳು ಮತ್ತು ಇತರ ಸಂಪನ್ಮೂಲಗಳು. ಪರಿಹಾರದ ಕಡತಗಳಲ್ಲಿ ಪರಿಹಾರವು ಆರಂಭಗೊಂಡ ಆಧಾರದ ಮೇಲೆ ವ್ಯವಸ್ಥೆ ಮಾಡಲಾಗುವುದು ಹಾಗೂ ಇದು ಕಡತವ್ಯವಸ್ಥೆಯಲ್ಲಿನ ಕ್ರಮವನ್ನು ಬಿಂಬಿಸಿಯೂ, ಬಿಂಬಿಸದೆಯೂ ಇರಬಹುದು. ಪರಿಹಾರ ಶೋಧಕ ವನ್ನು ಪರಿಹಾರದಲ್ಲಿನ ಕಡತಗಳನ್ನು ವ್ಯವಸ್ಥೆಗೊಳಿಸಲು ಮತ್ತು ವೀಕ್ಷಿಸಲು ಬಳಸಲಾಗುತ್ತದೆ.
- ತಂಡ ಶೋಧಕ
- ತಂಡ ಶೋಧಕ ವನ್ನು IDE ಒಳಗಿನ ಪುನರಾವರ್ತನ ಹತೋಟಿ ವ್ಯವಸ್ಥೆ(ಮತ್ತು ಬಹಿರಂಗ ಮೂಲ ಯೋಜನೆಗಳಿಗಾಗಿ ಮೈಕ್ರೋಸಾಫ್ಟ್ ಕೋಡ್ ಪ್ಲೆಕ್ಸ್ ಹೋಸ್ಟಿಂಗ್ ಎಂವಿರಾನ್ಮೆಂಟ್)ಯಾದ ಟೀಂ ಫೌಂಡೇಷನ್ ಸರ್ವರ್ ನ ಸಾಮರ್ಥ್ಯಗಳನ್ನು ಸಂಯೋಜಿಸಲು ಬಳಸಲಾಗುತ್ತದೆ. ಮೂಲ ಹತೋಟಿಯಲ್ಲದೆ ಇದು ಪ್ರತಿ ಕ್ರಿಯಾವಿಷಯಗಳನ್ನು(ದೋಷಗಳು, ಕಾರ್ಯಗಳು ಮತ್ತು ಇತರ ದಸ್ತಾವೇಜುಗಳು) ವೀಕ್ಷಿಸಲು ಹಾಗೂ ವ್ಯವಸ್ಥಿತ ರೀತಿಯಲ್ಲಿರಿಸಲು ಮತ್ತು TFS ಅಂಕಿ-ಅಂಶಗಳನ್ನು ವೀಕ್ಷಿಸಲು ಸಾಮರ್ಥ್ಯವನ್ನು ನೀಡುತ್ತದೆ. ಇದನ್ನು TFSನ ಒಂದು ಭಾಗವಾಗಿ ಸೇರಿಸಿಕೊಳ್ಳಲಾಗುತ್ತದೆ ಮತ್ತು ವಿಷುಯಲ್ ಸ್ಟುಡಿಯೋ 2005[೨೪] ಮತ್ತು 2008ಗಳಿಗೆ ಡೌನ್ ಲೋಡ್ ಆಗಿಯೂ ಲಭ್ಯವಿದೆ.[೨೫] ತಂಡ ಶೋಧಕವು ಒಂಟಿಯಾದ ಗಣಕಪರಿಸರವಾಗಿಯೂ TFS ಸೇವೆಗಳನ್ನು ತಲುಪು ಉದ್ದೇಶಗಳಿಗಾಗಿ ಲಭ್ಯವಿದೆ.
- ದತ್ತ ಶೋಧಕ
- ದತ್ತ ಶೋಧಕ ವು ಮೈಕ್ರೋಸಾಫ್ಟ್ SQL ಗಣಕಪೂರೈಕೆ ಸಂದರ್ಭಗಳಲ್ಲಿ ದತ್ತಸಂಚಯಗಳನ್ನು ವ್ಯವಸ್ಥಿತವಾಗಿರಿಸಲು ಬಳಸಲಾಗುತ್ತದೆ. ಇದು ದತ್ತಸಂಚಯ ಪಟ್ಟಿಗಳ ರಚನೆ ಆಥವಾ ಮಾರ್ಪಡಿಸುವಿಕೆಗೆ ಅನುವು ಮಾಡಿಕೊಡುತ್ತದೆ(T-SQL ಆದೇಶಗಳನ್ನು ನೀಡುವುದರ ಮೂಲಕ ಅಥವಾ ದತ್ತ ವಿನ್ಆಸಕವನ್ನು ಬಳಸುವುದರ ಮೂಲಕ). ಪ್ರಶ್ನೆಗಳನ್ನು ಮತ್ತು ಸಂಗ್ರಹಿತ ವಿಧಿಗಳನ್ನು ಸೃಷ್ಟಿಸಲೂ ಇದನ್ನು ಬಳಸಬಹುದಾಗಿದ್ದು, ಸಂಗ್ರಹಿತ ವಿಧಿಗಳನ್ನು T-SQL ಅಥವಾ ವ್ಯವಸ್ಥಿತ ಸಂಕೇತಗಳಿಂದ SQL CLR ಮೂಲಕ ಸೃಷ್ಟಿಸುವುದು. ದೋಷಸೂಚನಕ್ರಿಯೆ ಮತ್ತು ಇಂಟೆಲಿಸೆನ್ಸ್ ಬೆಂಬಲ ಸಹ ಲಭ್ಯವಿದೆ.
- ಪೂರೈಕೆಗಣಕ ಶೋಧಕ
- ಪೂರೈಕೆಗಣಕ ಶೋಧಕ ಸಾಧನವು ಆಗಮನಸಾಧ್ಯವಾದ ಗಣಕದ ದತ್ತಸಂಚಯ ಸಂಪರ್ಕಗಳನ್ನು ವ್ಯವಸ್ಥಿತವಾಗಿಸಲು ಬಳಸಲಾಗುತ್ತದೆ. ಇದನ್ನು ಚಲಿತ ವಿಂಡೋಸ್ ಸರ್ವೀಸ್ ಗಳನ್ನು, ಕಾರ್ಯನಿರ್ವಹಣ ಮುಂಕಿಟಕಿಗಳು, ವಿಂಡೋಸ್ ಈವೆಂಟ್ ಲಾಗ್ ಮತ್ತು ಸಂದೇಶ ಸರದಿಶರಧಿಗಳನ್ನು ವೀಕ್ಷಿಸಲು ಮತ್ತು ಅವನ್ನು ದತ್ತ ಆಕರಗಳಾಗಿ ಬಳಸಲು ಉಪಯೋಗಿಸಲಾಗುತ್ತದೆ.[೨೬]
- ಡಾಟ್ಫಸ್ಕೇಟರ್ ಸಾಫ್ಟ್ ವೇರ್ ಸರ್ವೀಸಸ್ ಕಮ್ಯುನಿಟಿ ಆವೃತ್ತಿ
- ವಿಷುಯಲ್ ಸ್ಟುಡಿಯೋ ಪ್ರಿಯೆಂಪ್ಟಿವ್ ಸಲ್ಯೂಷನ್ಸ್ ನ ಒಂದು ಹಗುರವಾದ ಆವೃತ್ತಿಯಾದ ಡಾಟ್ಫಸ್ಕೇಟರ್ ಉತ್ಪನ್ನವನ್ನು ಸಂಕೇತ ಮಬ್ಬುಗೊಳಿಸುವಿಕೆ ಮತ್ತು ಅನ್ವಯಿಕದ ಗಾತ್ರದ ಇಳಿಸುವಿಕೆಗಾಗಿ ಅಳವಡಿಸಿಕೊಂಡಿದೆ.[೨೭] ವಿಷುಯಲ್ ಸ್ಟುಡಿಯೋ 2010ರಿಂದ ಆರಂಭವಾಗಿ, ಈ ಡಾಟ್ಫಸ್ಕೇಟರ್ ಆವೃತ್ತಿಯು ರನ್ ಟೈಮ್ ಇಂಟೆಲಿಜೆನ್ಸ್ ಒಳಗೊಂಡಿದ್ದು, ಅದು ಲೇಖಕರು ಕೊನೆಯಲ್ಲಿ ಉಪಯೋಗಿಸುವವನ-ಬಳಕೆ, ಕಾರ್ಯನಿರ್ವಹಣೆ, ಮತ್ತು ಸ್ಥಿರತೆಯ ಮಾಹಿತಿಯನ್ನು ಉತ್ಪಾದನೆಯಲ್ಲಿ ಕಾರ್ಯಗತವಾಗಿರುವ ಅವುಗಳ ಅನ್ವಯಿಕಗಳಿಂದ ಪಡೆಯಲು ಅನುವಾಗುತ್ತದೆ.[೨೮]
ವ್ಯಾಪಕತೆ
[ಬದಲಾಯಿಸಿ]ವಿಷುಯಲ್ ಸ್ಟುಡಿಯೋ ಅಭಿವೃದ್ಧಿಕಾರಕವು ಅದರ ಸಾಮರ್ಥ್ಯವನ್ನು ವಿಸ್ತರಿಸುವ ಸಲುವಾಗಿ ವಿಸ್ತರಣೆಗಳನ್ನು ವಿಷುಯಲ್ ಸ್ಟುಡಿಯೋಗೆ ಬರೆಯಲು ಅನುಮತಿಸುತ್ತದೆ. ಈ ವಿಸ್ತರಣೆಗಳು ವಿಷುಯಲ್ ಸ್ಟುಡಿಯೋಗೆ "ಪ್ಲಗ್ ಇನ್" ಆಗುತ್ತವೆ ಮತ್ತು ಅದರ ಕಾರ್ಯವಿಸ್ತಾರವನ್ನು ಹೆಚ್ಚಿಸುತ್ತವೆ. ವಿಸ್ತರಣೆಗಳು ಮ್ಯಾಕ್ರೋಗಳು , ಒಳ-ಜೋಡಕಗಳು ಮತ್ತು ಪ್ಯಾಕೇಜ್ ಗಳ ರೂಪಗಳಲ್ಲಿ ದೊರೆಯುತ್ತವೆ. ಮ್ಯಾಕ್ರೋಗಳು, ಉಳಿಸಲು, ಪುನಃ ಚಾಲನೆಗೊಳಿಸಲು ಮತ್ತು ವಿತರಿಸಲು ಕ್ರಮವಿಧಿಯಂತೆ ಅಭಿವೃದ್ಧಿಕಾರರು ದಾಖಲಿಸಲು ಪುನರಾವರ್ತಿಸಬಹುದಾದ ಕಾರ್ಯಗಳನ್ನು ಮತ್ತು ನಡತೆಗಳನ್ನು, ಪ್ರತಿನಿಧಿಸುತ್ತವೆ. ಆದರೆ ಮ್ಯಾಕ್ರೋಗಳನ್ನು ಹೊಸ ಆದೇಶಗಳನ್ನು ಅಳವಡಿಸಲು ಅಥವಾ ಸಾಧನ ಕಿಟಕಿಗಳನ್ನು ಸೃಷ್ಠಿಸಲು ಉಪಯೋಗಿಸಲಾಗುವುದಿಲ್ಲ. ಅವನ್ನು ವಿಷುಯಲ್ ಬೇಸಿಕ್ ಬಳಸಿ ಬರೆಯಲಾಗಿದ್ದು, ಅವುಗಳು ಜೋಡಿಸಲ್ಪಟ್ಟಿಲ್ಲ.[೪] ಒಳ-ಸಂಕಲನಗಳು ವಿಷುಯಲ್ ಸ್ಟುಡಿಯೋ ಆಬ್ಜೆಕ್ಟ್ ಮಾಡಲ್ ಗೆ ಮಾರ್ಗತೋರುತ್ತವೆ ಮತ್ತು IDE ಸಾಧನಗಳೊಂದಿಗೆ ಪ್ರತಿಸ್ಪಂದಿಸುತ್ತವೆ. ಒಳ-ಸಂಕಲನಗಳು(ಒಳ-ಜೋಡಣೆಗಳು) ಹೊಸ ಕಾರ್ಯರೂಪಗಳನ್ನು ಅಳವಡಿಸಲು ಮತ್ತು ಹೊಸ ಸಾಧನ ಕಿಟಕಿಗಳನ್ನು ಜೋಡಿಸಲು ಬಳಸಲ್ಪಡುತ್ತವೆ. ಒಳಜೋಡಣೆಗಳನ್ನು COM ಮೂಲಕ IDEಗಳಿಗೆ ಜೋಡಿಸಲಾಗುತ್ತವೆ ಮತ್ತು ಯಾವುದೇ COM-ಹೊಂದುವಂತಹ ಭಾಷೆಗಳಲ್ಲಿ ಸೃಜಿಸಬಹುದು.[೪] ಪ್ಯಾಕೇಜ್ ಗಳನ್ನು ವಿಷುಯಲ್ ಸ್ಟುಡಿಯೋ SDK ಬಳಸಿ ಸೃಷ್ಟಿಸಲಾಗುವುದು ಮತ್ತು ಅತಿ ಹೆಚ್ಚು ಮಟ್ಟದ ವಿಸ್ತರಣೆಯನ್ನು ನೀಡುವುವು. ಅವುಗಳನ್ನು ವಿನ್ಯಾಸಕ ಹಾಗೂ ಇತರ ಸಾಧನಗಳನ್ನು ಮಾಡಲು, ಹಾಗೂ ಇತರ ಕ್ರಮವಿಧಿಗಳ ಭಾಷೆಗಳನ್ನು ಪರಸ್ಪರ ಹೊಂದಿಸಲು ಬಳಸಲಾಗುತ್ತದೆ. ವಿಷುಯಲ್ ಸ್ಟುಡಿಯೋ SDK ಅವ್ಯವಸ್ಥಿತ ಮತ್ತು ವ್ಯವಸ್ಥಿತ APIಗಳನ್ನು ಈ ಕಾರ್ಯವೆಸಗುವ ಸಲುವಾಗಿ ನೀಡುತ್ತದೆ. ಆದಾಗ್ಯೂ, ವ್ಯವಸ್ಥಿತ API ಅವ್ಯವಸ್ಥಿತ APIನಷ್ಟು ಸಮಗ್ರವಲ್ಲ.[೪] ವಿಸ್ತರಣೆಗಳನ್ನು ವಿಷುಯಲ್ ಸ್ಟುಡಿಯೋ 2005 ಸ್ಟ್ಯಾಂಡರ್ಡ್ (ಮತ್ತು ಹೆಚ್ಚಿನ)ಆವೃತ್ತಿಗಳಲ್ಲಿ ಬೆಂಬಲಿಸಲಾಗುತ್ತದೆ. ಎಕ್ಸ್ ಪ್ರೆಸ್ ಆವೃತ್ತಿಗಳು ವಿಸ್ತರಣೆಗಳಿಗೆ ಅತಿಥೇಯವಾಗುವುದಿಲ್ಲ.
ವಿಷುಯಲ್ ಸ್ಟುಡಿಯೋ 2008 ವಿಷುಯಲ್ ಸ್ಟುಡಿಯೋ ಷೆಲ್ ಅನ್ನು ಪರಿಚಯಿಸಿದ್ದು, ಇದು ಗಿರಾಕಿಗಳ ಬೇಡಿಕೆಯ ಮೇರೆಗೆ ಮಾಡಿಕೊಡುವ IDE ಆವೃತ್ತಿಗಳ ಅಭಿವೃದ್ಧಿಗೆ ಅವಕಾಶ ನೀಡುತ್ತದೆ.ವಿಷುಯಲ್ ಸ್ಟುಡಿಯೋ ಷೆಲ್ ಯಾವುದೇ IDEಯಲ್ಲಿ ಇರಬೇಕಾದ ಕಾರ್ಯಗುಣಗಳನ್ನು ನೀಡುವಂತಹ Vsಪ್ಯಾಕೇಜ್ ಗಳ ಜೊತೆಯನ್ನು ನಿರೂಪಿಸುತ್ತದೆ. ಅಲ್ಲದೆ, ಇತರ ಪ್ಯಾಕೇಜ್ ಗಳನ್ನೂ ಸಹ ಸ್ಥಾಪನೆಯನ್ನು ಗಿರಾಕೀಕರಣಗೊಳಿಸಲಾಗಿ ಸೇರಿಸಬಹುದು. ಪ್ರತ್ಯೇಕಿಸಿದ ಮಾದರಿಯ ಷೆಲ್ ಹೊಸ Appld ಸೃಷ್ಟಿಸುತ್ತದೆ ಮತ್ತು ಇದರಲ್ಲಿ ಪ್ಯಾಕೇಜ್ ಗಳು ಸ್ಥಾಪಿತವಾಗುತ್ತವೆ. ಇವುಗಳನ್ನು ಪ್ರತ್ಯೇಕ ಕಾರ್ಯಕಾರಿ ಸಾಧನದಿಂದ ಆರಂಭಿಸಬೇಕಾಗುತ್ತದೆ. ಇವುಗಳನ್ನು ಅವಶ್ಯಮಾದರಿಯ ಅಭಿವೃದ್ಧಿಗಾಗಿ ವೃದ್ದಗೊಳಿಸಲ್ಪಟ್ಟಿದ್ದು ನಿರ್ದಿಷ್ಟ ಭಾಷೆ ಅಥವಾ ನಿರ್ದಿಷ್ಟ ಸ್ಥಿತಿಯ ಅಭಿವೃದ್ಧಿಯೇ ಇವುಗಳ ಗುರಿಯಾಗಿದೆ. ಸಂಯೋಜಿತ ಮಾದರಿಯು ಪ್ಯಾಕೇಜ್ ಗಳನ್ನು ಪ್ರೊಫೆಷನಲ್/ಸ್ಟ್ಯಾಂಡರ್ಡ್/ಟೀಂ ಸಿಸ್ಟಮ್ ಆವೃತ್ತಿಗಳ Appldಗಳಲ್ಲಿ ಸ್ಥಾಪಿಸಿ, ಆ ಸಲಕರಣೆಗಳು ಈ ಆವೃತ್ತಿಗಳಲ್ಲಿ ಸಂಯೋಜಿತವಾಗುತ್ತವೆ.[೧೦]
ವಿಷುಯಲ್ ಸ್ಟುಡಿಯೋ ಷೆಲ್ ಬಿಟ್ಟಿ ಡೌನ್ ಲೋಡ್ ಆಗಿ ಲಭ್ಯವಿದೆ.
ವಿಷುಯಲ್ ಸ್ಟುಡಿಯೋ 2008ರ ಬಿಡುಗಡೆಯ ನಂತರ,ಮೈಕ್ರೋಸಾಫ್ಟ್ ವಿಷುಯಲ್ ಸ್ಟುಡಿಯೋ ಗ್ಯಾಲರಿ Archived 2009-03-09 ವೇಬ್ಯಾಕ್ ಮೆಷಿನ್ ನಲ್ಲಿ.ಯನ್ನು ಸೃಷ್ಟಿಸಿತು. ಅದು ವಿಷುಯಲ್ ಸ್ಟುಡಿಯೋದ ವಿಸ್ತರಣೆಗಳ ಬಗ್ಗೆ ಮಾಹಿತಿಯನ್ನು ತುಂಬಲು ಕೇಂದ್ರಸ್ಥಾನವಾಗಿ ಬಳಸಲಾಗುತ್ತದೆ. ಪಂಗಡ ಅಭಿವೃದ್ಧಿಕಾರಕಗಳು ಮತ್ತು ವಾಣಿಜ್ಯ ಅಭಿವೃದ್ಧಿಕಾರಕಗಳು ತಾವು ವಿಷುಯಲ್ ಸ್ಟುಡಿಯೋ ಈ ಮಾಹಿತಿಗಳನ್ನು .NET 2002ಕ್ಕೆ ಮಾಡಿದ ವಿಸ್ತರಣೆಗಳನ್ನು ವಿಷುಯಲ್ ಸ್ಟುಡಿಯೋ 2008ರ ಮೂಲಕ ಅಪ್-ಲೋಡ್ ಮಾಡಬಹುದು. ಈ ಸೈಟ್ ಅನ್ನು ಬಳಸುವವರು ವಿಸ್ತರಣೆಗಳನ್ನು ವಿಮರ್ಶಿಸಿ, ಶ್ರೇಣೀಕರಿಸುವುದರ ಮೂಲಕ ಸೇರಿಸಲ್ಪಡುತ್ತಿರುವ ವಿಸ್ತರಣೆಗಳ ಗುಣಮಟ್ಟದ ವಿಶ್ಲೇಷಣೆ ಮಾಡಬಹುದು. RSS ಜೋಡಣೆಗಳು ಗ್ರಾಹಕರಿಗೆ ಸೈಟ್ ಗೆ ಮಾಡಿದ ಅಭಿವೃದ್ಧಿಗಳು ಸೂಚಿಸುತ್ತವೆ ಮತ್ತು ತಂತುಗೊಳಿಸುವ ಲಕ್ಷಣಗಳೂ ಹಂಚಿಕೆಯಲ್ಲಿವೆ.[೨೯]
ಬೆಂಬಲಿತ ಉತ್ಪನ್ನಗಳು
[ಬದಲಾಯಿಸಿ]ಸೇರಿಸಲ್ಪಟ್ಟ ಉತ್ಪನ್ನಗಳು
[ಬದಲಾಯಿಸಿ]- ಮೈಕ್ರೋಸಾಫ್ಟ್ ವಿಷುಯಲ್ C++
- ಮೈಕ್ರೋಸಾಫ್ಟ್ ವಿಷುಯಲ್ C++ ಮೈಕ್ರೋಸಾಫ್ಟ್ ನ C ಮತ್ತು C++ನ ಜೋಡಣೆಗಳ ಮತ್ತು ಸಂಬಂಧಿತ ಭಾಷೆಗಳ ಸೇವೆಗಳ ಮತ್ತು ವಿಷುಯಲ್ ಸ್ಟುಡಿಯೋ IDEಯೊಂದಿಗೆ ಸಂಯೋಜಿತವಾಗುವ ನಿರ್ದಿಷ್ಟ ಸಲಕರಣೆಗಳ ಅಳವಡಿಕೆಯಾಗಿದೆ. ಇದು Cಕ್ರಮದಲ್ಲಾಗಲೀ, ಅಥವಾ C++ ಕ್ರಮದಲ್ಲಾಗಲೀ ಜೋಡಣೆಗಳನ್ನು ಮಾಡಲು ಸಮರ್ಥವಾಗಿದೆ. Cಗೆ ಅದು ISO ಗುಣಮಟ್ಟಗಳನ್ನು, C99ನ ಕೆಲವು ಭಾಗಗಳ ನಿಬಂಧನೆಗಳೊಂದಿಗೆ ಹಾಗೂ ಗ್ರಂಥಾಲಯದ ರೂಪದಲ್ಲಿ MS-ನಿಬಂಧಿತ ಜೋಡಣೆಗಳೊಡಗೂಡಿ, ಅನುಸರಿಸುತ್ತದೆ.[೩೦] C++ಗೆ ANSI C++ ಆದೇಶಗಳನ್ನು, ಕೆಲವು C++0x ಲಕ್ಷಣಗಳನ್ನೂ ಅನುಸರಿಸುತ್ತದೆ.[೩೧] ಇದು ವ್ಯವಸ್ಥಿತ ಸಂಕೇತಗಳನ್ನು ಬರೆಯಲು ಮತ್ತು (ಸ್ಥಾನಿಕ ಮತ್ತು ವ್ಯವಸ್ಥಿತ ಸಂಕೇತಗಳ) ಮಿಶ್ರ ಸಂಕೇತವೊಂದನ್ನು ಬರೆಯಲು C++/CLI ಆದೇಶಗಳನ್ನು ಬೆಂಬಲಿಸುತ್ತದೆ. ಮೈಕ್ರೋಸಾಫ್ಟ್ ವಿಷುಯಲ್ C++ ಅನ್ನು ಸ್ಥಾನಿಕ ಸಂಕೇತ ಅಥವಾ ಸ್ಥಾನಿಕ ಮತ್ತು ವ್ಯವಸ್ಥಿತ ಸಂಕೇತಗಳ ಉಪಭಾಗಗಳನ್ನೊಳಗೊಂಡ ಸಂಕೇತವನ್ನು ಅಭಿವೃದ್ಧಿಗೊಳಿಸಲು ಇರಿಸಿಕೊಂಡಿದೆ. ವಿಷುಯಲ್ C++ COMಮತ್ತು MFC ಗ್ರಂಥಾಲಯ ಎರಡನ್ನೂ ಬೆಂಬಲಿಸುತ್ತದೆ. MFC ಅಭಿವೃದ್ಧಿಗಾಗಿ MFC ಬಾಯ್ಲರ್ ಪ್ಲೇಟ್ ಸಂಕೇತಗಳನ್ನು ಸೃಷ್ಟಿಸಲು ಮತ್ತು ಗಿರಾಕೀಕರಣಗೊಳಿಸಲು ಮತ್ತು MFC ಬಳಸಿ GUI ಅನ್ವಯಿಕಗಳನ್ನು ಸೃಷ್ಟಿಸಲು ಒಂದು ಜೊತೆ ವಿಝರ್ಡ್ ಗಳನ್ನು ಒದಗಿಸುತ್ತದೆ. ವಿಷುಯಲ್ C++ ವಿಷುಯಲ್ ಸ್ಟುಡಿಯೋ ಫಾರ್ಮ್ಸ್ ವಿನ್ಯಾಸಕವನ್ನು ಬಳಸಿ UI ಅನ್ನು ಸಹ ಸಚಿತ್ರವಾಗಿ ಸೃಷ್ಟಿಸಬಲ್ಲುದು. ವಿಷುಯಲ್ C++ ವಿಂಡೋಸ್ APIನೊಂದಿಗೆ ಬಳಸಬಹುದು. ಇದು ಅಂತರ್ನಿರ್ಮಿತ ಕಾರ್ಯವಿಧಿ [೩೨]ಗಳನ್ನು ಸಹ ಬೆಂಬಲಿಸುತ್ತದೆ, ಹಾಗೂ ಆ ಅಂತರ್ನಿರ್ಮಿತ ಕಾರ್ಯವಿಧಿಗಳನ್ನು ಜೋಡಕವು ಮಾತ್ರ ಗುರುತಿಸುತ್ತದೆ ಮತ್ತು ಗ್ರಂಥಾಲಯವಾಗಿ ಸ್ಥಾಪಿತವಾಗುವುದಿಲ್ಲ. ಅಂತರ್ನಿರ್ಮಿತ ಕಾರ್ಯವಿಧಿಗಳು ಆಧುನಿಕ CPUಗಳಲ್ಲಿನ SSEಗಳನ್ನು ಬಹಿರಂಗಗೊಳಿಸಲು ಬಳಸಲಾಗುತ್ತವೆ. ವಿಷುಯಲ್ C++ ನಲ್ಲಿ ಓಪನ್MP (ಆವೃತ್ತಿ 2.0) ನಿರ್ದಿಷ್ಟ ಸಹ ಅಡಕವಾಗಿದೆ.[೩೩]
ಈ ವಿಭಾಗದಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (May 2008) |
- ಮೈಕ್ರೋಸಾಫ್ಟ್ ವಿಷುಯಲ್ C#
- ಮೈಕ್ರೋಸಾಫ್ಟ್ ವಿಷುಯಲ್ C# ಮೈಕ್ರೋಸಾಫ್ಟ್ ನ C# ಭಾಷೆಯ ಅಳವಡಿಕೆಯಾಗಿದ್ದು, .NET ಚೌಕಟ್ಟುಗಳನ್ನು ಗುರಿಯಾಗಿ ಹೊಂದಿರುವುದಲ್ಲದೆ, ವಿಷುಯಲ್ ಸ್ಟುಡಿಯೋ IDEಯು C# ಕ್ರಮವಿಧಿಗಳನ್ನು ಬೆಂಬಲಿಸುವಂತಹ ಭಾಷಾ ಸೇವೆಯನ್ನೂ ಉದ್ದೇಶವಾಗಿರಿಸಿಕೊಮಡಿದೆ. ಭಾಷಾ ಸೌಲಭ್ಯಗಳು ವಿಷುಯಲ್ ಸ್ಟುಡಿಯೋದ ಒಂದು ಅಂಗವೇ ಆಗಿದ್ದರೂ, ಜೋಡಕವು ಪ್ರತ್ಯೇಕವಾಗಿ .NET ಚೌಕಟ್ಟಿನ ಒಂದು ಭಾಗವಾಗಿ ದೊರೆಯುತ್ತದೆ. ವಿಷುಯಲ್ C# 2008 ಜೋಡಕವು C# ಭಾಷೆಯ ಆವೃತ್ತಿ 3.0ರ ಸೂಚನೆಗಳನ್ನು ಬೆಂಬಲಿಸುತ್ತದೆ. ವಿಷುಯಲ್ C# ವಿಷುಯಲ್ ಸ್ಟುಡಿಯೋ ಶ್ರೇಣಿ ವಿನ್ಯಾಸಕ, ಮಾದರಿಗಳ ವಿನ್ಯಾಸಕ, ಮತ್ತು ದತ್ತ ವಿನ್ಯಾಸಕಗಳನ್ನು ಮತ್ತಿತರ ವಿನ್ಯಾಸಕಗಳನ್ನು ಬೆಂಬಲಿಸುತ್ತದೆ .[೩೪]
- ಮೂಕ್ರೋಸಾಫ್ಟ್ ವಿಷುಯಲ್ ಬೇಸಿಕ್
- ಮೈಕ್ರೋಸಾಫ್ಟ್ ವಿಷುಯಲ್ ಬೇಸಿಕ್ ಮೈಕ್ರೋಸಾಫ್ಟ್ ನ VB.NET ಭಾಷೆಯ ಅಳವಡಿಕೆಯಾಗಿದೆ ಮತ್ತು ಸಲಕರಣೆಗಳು ಹಾಗೂ ಭಾಷಾ ಸೇವೆಗಳೊಂದಿಗೆ ಮಿಳಿತವಾಗಿದೆ. ಇದನ್ನು ವಿಷುಯಲ್ ಸ್ಟುಡಿಯೋ .NETನೊಂದಿಗೆ ಪರಿಚಯಿಸಲಾಯಿತು (2002). ಮೈಕ್ರೋಸಾಫ್ಟ್ ವಿಷುಯಲ್ ಬೇಸಿಕ್ ಅನ್ನು ರಾಪಿಡ್ ಅಪ್ಲಿಕೇಷನ್ ಡೆವಲಪ್ಮೆಂಟ್(ಶೀಘ್ರ ಆನ್ವಯಿಕ ಅಭಿವೃದ್ಧಿ)ಗಾಗಿ ಸ್ಥಾಪಿಸಿದೆ. ವಿಷುಯಲ್ ಬೇಸಿಕ್ ಅನ್ನು ಕಂಸೋಲ್ ಅನ್ವಯಿಕಗಳಿಗೂ ಹಾಗೂ GUI ಅನ್ವಯಿಕಗಳಿಗೂ ಬರೆಯಲು ಉಪಯೋಗಿಸಬಹುದಾಗಿದೆ ವಿಷುಯಲ್ C#ನಂತೆಯೇ ವಿಷುಯಲ್ ಬೇಸಿಕ್ ಸಹ ವಿಷುಯಲ್ ಸ್ಟುಡಿಯೋ ಶ್ರೇಣಿ ವಿನ್ಯಾಸಕ, ಮಾದರಿಗಳ ವಿನ್ಯಾಸಕ, ಮತ್ತು ದತ್ತ ವಿನ್ಯಾಸಕಗಳನ್ನು ಮತ್ತಿತರ ವಿನ್ಯಾಸಕಗಳನ್ನು ಬೆಂಬಲಿಸುತ್ತದೆ C#ನಂತೆಯೇ, VB.NET ಜೋಡಕವು .NET ಚೌಕಟ್ಟಿನ ಅಂಗವಾಗಿ ದೊರೆಯುತ್ತದೆ ಆದರೆ VB.NET ಕ್ರಮವಿಧಿಗಳನ್ನು ವಿಷುಯಲ್ ಸ್ಟುಡಿಯೋದಲ್ಲಿ ಅಭಿವೃದ್ಧಿಗೊಳಿಸುವ ಭಾಷಾ ಸೇವೆಗಳು,.NET ಚೌಕಟ್ಟಿನ ಅಂಗವಾಗಿ ದೊರೆಯುತ್ತವೆ.
- ಮೈಕ್ರೋಸಾಫ್ಟ್ ವಿಷುಯಲ್ ವೆಬ್(ಜಾಲ) ಅಭಿವೃದ್ಧಿಕಾರಕ
- ಮೈಕ್ರೋಸಾಫ್ಟ್ ವಿಷುಯಲ್ ಜಾಲ ಅಭಿವೃದ್ಧಿಕಾರಕವು ASP.NET ಅನ್ನು ಬಳಸಿ ಜಾಲ ತಾಣಗಳು, ಜಾಲ ಅನ್ವಯಿಕಗಳು ಮತ್ತು ಜಾಲ ಸೇವೆಗಳನ್ನು ಸೃಜಿಸಲೆಂದು ರಚಿಸಲಾಗಿದ್ದು, C# ಅಥವಾ VB.NET ಭಾಷೆಗಳಲ್ಲಿ ಇದನ್ನು ಬಳಸಬಹುದಾಗಿದೆ. ಜಾಲ ಪುಟ ವಿನ್ಯಾಸಗಳನ್ನು ಚಿತ್ರಸಹಿತ ವಿನ್ಯಾಸಗೊಳಿಸಲು ವಿಷುಯಲ್ ಸ್ಟುಡಿಯೋ ಜಾಲ ವಿನ್ಯಾಸಕವನ್ನು ವಿಷುಯಲ್ ಜಾಲ ಅಭಿವೃದ್ಧಿಕಾರಕವು ಬಳಸಬಹುದು.
- ಟೀಂ ಫೌಂಡೇಷನ್ ಸರ್ವರ್
- ವಿಷುಯಲ್ ಸ್ಟುಡಿಯೋ ಟೀಂ ಸಿಸ್ಟಮ್ ನಲ್ಲಿ ಮಾತ್ರ ಅಡಕವಾಗಿರುವ ವಿಷುಯಲ್ ಫೌಂಡೇಷನ್ ಸರ್ವರ್ ಸಹಕಾರಿ ತಂತ್ರಾಂಶ ಅಭಿವೃದ್ಧಿಗಾಗಿ ಯೋಜಿತವಾಗಿದ್ದು, ಸರ್ವರ್ ಭಾಗದ ಹಿನ್ನೆಲೆಯಾಗಿ ಪಾತ್ರವಹಿಸುತ್ತಾ ಆಕರ ನಿಯಂತ್ರಣ, ದತ್ತ ಸಂಗ್ರಹ, ವರದಿ ಮಾಡುವಿಕೆ ಮತ್ತು ಕ್ರಮವಿಧಿ ಜಾಡು ಕ್ರಿಯಾರೂಪಗಳನ್ನು ಒದಗಿಸುತ್ತದೆ. ಅಲ್ಲದೆ ಟೀಂ ಎಕ್ಸ್ ಪ್ಲೋರರ್ , TFS ಸೇವೆಗಳಿಗಾಗಿ ಗ್ರಾಹಕ ಸಲಕರಣೆಗಳನ್ನು ಹೊಂದಿದ್ದು, ಇವು ವಿಷುಯಲ್ ಸ್ಟುಡಿಯೋ ಟೀಂ ಸಿಸ್ಟಮ್ ನಲ್ಲಿ ಸಂಯೋಜಿತವಾಗಿವೆ.
ಹಿಂದಿನ ಉತ್ಪಾದನೆಗಳು
[ಬದಲಾಯಿಸಿ]- ವಿಷುಯಲ್ ಫಾಕ್ಸ್ ಪ್ರೋ
- ವಿಷುಯಲ್ ಫಾಕ್ಸ್ ಪ್ರೋ ಒಂದು ದತ್ತ-ಕೇಂದ್ರಿತ, ವಿಷಯ-ಉದ್ದೇಶಿತ ಮತ್ತು ಕ್ರಮಬದ್ಧವಾದ ಕ್ರಮವಿಧಿ ಭಾಷೆಯಾಗಿದ್ದು ಮೈಕ್ರೋಸಾಫ್ಟ್ ಇದನ್ನು ಹೊರತಂದಿದೆ. ಇದು ಫಾಕ್ಸ್ ಪ್ರೋದಿಂದ ಪಡೆದದ್ದಾಗಿದೆ(ಮೊದಲು FoxBASE ಎಂದು ಪರಿಚಿತವಾಗಿದ್ದ ಇದು ಫಾಕ್ಸ್ ಸಾಫ್ಟ್ ವೇರ್ ನವರಿಂದ 1984ರ ಆದಿಯಲ್ಲಿ ಅಭಿವೃದ್ಧಿಗೊಳಿಸಲ್ಪಟ್ಟಿತು). ವಿಷುಯಲ್ ಫಾಕ್ಸ್ ಪ್ರೋ ತನ್ನದೇ ಆದ ಸಂಬಂಧಿತ ದತ್ತಸಂಚಯ ಎಂಜಿನ್ ಗೆ ದೃಢವಾಗಿ ಸಂಯೋಜಿಸಲ್ಪಟ್ಟಿದ್ದು, ಫಾಕ್ಸ್ ಪ್ರೋದ xBase ಸಾಮರ್ಥ್ಯಗಳನ್ನು SQL ಪ್ರಶ್ನೆ ಮತ್ತು ದತ್ತ ನಿರ್ವಾಹಕ್ಕೆ ವಿಸ್ತರಿಸಲು ಬೆಂಬಲಿಸುತ್ತದೆ. ವಿಷುಯಲ್ ಫಾಕ್ಸ್ ಪ್ರೋ ಒಂದು ಸಂಪೂರ್ಣ ಲಕ್ಷಣಗಳುಳ್ಳ, ಕ್ರಿಯಾಶೀಲ ಕ್ರಮವಿಧಿ ಭಾಷೆಯಾಗಿದ್ದು ಇದಕ್ಕೆ ಹೆಚ್ಚುವರಿ ಸಾಮಾನ್ಯ-ಉದ್ದೇಶಪರ ಕ್ರಮವಿಧಿ ವಾತಾವರಣದ ಅವಶ್ಯಕತೆಯಿಲ್ಲ. 2007ರಲ್ಲಿ ವಿಷುಯಲ್ ಫಾಕ್ಸ್ ಪ್ರೋವನ್ನು, ಆವೃತ್ತಿ 9, ಪೂರೈಕೆಗಣಕ ಕಟ್ಟು 2ರ ನಂತರ ಸ್ಥಗಿತಗೊಳಿಸಲಾಗಿದೆಯೆಂದೂ, ಆದರೆ 2015ರವರೆಗೂ ಬೆಂಬಲಿತವಾಗಿ ಇರುವುದೆಂದು ಮೈಕ್ರೋಸಾಫ್ಟ್ ಘೋಷಿಸಿತು.[೩೫]
- ವಿಷುಯಲ್ ಸೋರ್ಸ್ ಸೇಫ್
- ಮೈಕ್ರೋಸಾಫ್ಟ್ ವಿಷುಯಲ್ ಸೋರ್ಸ್ ಸೇಫ್ ಒಂದು ಆಕರ ನಿಯಂತ್ರಣ ತಂತ್ರಾಂಶ ಪ್ಯಾಕೇಜ್ ಆಗಿದ್ದು ಸಣ್ಣ ತಂತ್ರಂಶ ಅಭಿವೃದ್ಧಿ ಯೋಜನೆಗಳಿಗೆ ಉದ್ದೇಶಿತವಾಗಿದೆ. ಸೋರ್ಸ್ ಸೇಫ್ ದತ್ತಸಂಚಯವು ವಿವಿಧೋದ್ದೇಶ, ವಿವಿಧೋಪಯೋಗ ಕಡತ-ವ್ಯವಸ್ಥಾ ದತ್ತಸಂಚಯವಾಗಿದ್ದು, ಬೆಂಬಲ ಹಂಚಿಕೊಳ್ಳುವಿಕೆ ಮತ್ತು ಬೀಗಹಾಕುವಿಕೆ(ಭದ್ರಪಡಿಸಲು)ಯನ್ನು ವಿಂಡೋಸ್ ಕಡರ ವ್ಯವಸ್ಥೆಯ ದತ್ತಸಂಚಯ ಮೂಲಗಳನ್ನುಪಯೋಗಿಸಿ ಒದಗಿಸುತ್ತದೆ ಎಲ್ಲಾ ಆವೃತ್ತಿಗಳು ವಿವಿಧೋಪಯೋಗಿ, SMB (ಕಡತ ಪೂರೈಕೆಗಣಕ) ನೆಟ್ ವರ್ಕಿಂಗ್ ಬಳಸಿ.[೩೬][೩೭][೩೮] ಆದರೆ, ವಿಷುಯಲ್ ಸೋರ್ಸ್ ಸೇಫ್ 2005ರೊಂದಿಗೆ ಇತರ ಗ್ರಾಹಕ-ಪೂರಕ ವಿಧಿಗಳನ್ನು ಸೇರಿಸಲಾಯಿತು(ಲ್ಯಾನ್ ಬೂಸ್ಟರ್ ಮತ್ತು VSS ಅಂತರಜಾಲ), ಪ್ರಾಯಶಃ ಬೇರೆ ಯಾವುದೋ ನಿಯಮಗಳನ್ನು ಬಳಸಿ? ವಿಷುಯಲ್ ಸೋರ್ಸ್ ಸೇಫ್ 6.0 ಪ್ರತ್ಯೇಕ ವಸ್ತು[೩೯]ವಾಗಿ ದೊರಕುತ್ತಿತ್ತು ಮತ್ತು ವಿಷುಯಲ್ ಸ್ಟುಡಿಯೋ 6.0ರೊಡನೆ ಮತ್ತು ಇತರ ಉತ್ಪಾದನೆಗಳಾದ ಆಫೀಸ್ ಡೆವಲಪರ್ ಆವೃತ್ತಿಗಳಂತದ್ದರೊಡನೆ ಸೇರಿಸಲಾಗಿತ್ತು. ವಿಷುಯಲ್ ಸೋರ್ಸ್ ಸೇಫ್ 2005 ಪ್ರತ್ಯೇಕ ಉತ್ಪಾದನೆಯಾಗಿ ಲಭ್ಯವಿತ್ತು ಮತ್ತು 2005 ಟೀಂ ಸ್ಯೂಟ್ ನಲ್ಲಿ ಸೇರಿಸಲಾಯಿತು. ವಿಷುಯಲ್ ಸ್ಟುಡಿಯೋ ಟೀಂ ಸಿಸ್ಟಮ್ ಆಕರ ನಿಯಂತ್ರಣಕ್ಕಾಗಿ ಟೀಂ ಫೌಂಡೇಷನ್ ಸರ್ವರ್ ಅನ್ನು ಸೇರಿಸಿಕೊಂಡಿತು.
- ಮೈಕ್ರೋಸಾಫ್ಟ್ ವಿಷುಯಲ್ J++/ಮೈಕ್ರೋಸಾಫ್ಟ್ ವಿಷುಯಲ್ J#
- ಮೈಕ್ರೋಸಾಫ್ಟ್ ವಿಷುಯಲ್ J++ ಮೈಕ್ರೋಸಾಫ್ಟ್ ನ ಜಾವಾ ಭಾಷೆಯ ಅಳವಡಿಕೆಯಾಗಿತ್ತು(ಮೈಕ್ರೋಸಾಫ್ಟ್ ಸೂಚಿತ ವಿಸ್ತರಣೆಗಳೊಂದಿಗೆ) ಮತ್ತು ಭಾಷಾ ಸೌಲಭ್ಯಗಳಿಗೆ ಸಂಬಂಧಿತವಾಗಿತ್ತು. ಸನ್ ಮೈಕ್ರೋಸಿಸ್ಟಮ್ಸ್ ಹೂಡಿದ ದಾವೆಯ ಕಾರಣ ಅದನ್ನು ಸ್ಥಗಿತಗೊಳಿಸಲಾಯಿತು ಮತ್ತು ಆ ತಾಂತ್ರಿಕತೆಯನ್ನು ವಿಷುಯಲ್ J#, ಮೈಕ್ರೋಸಾಫ್ಟ್ ನ ಜಾವಾ ಜೋಡಕವನ್ನು, .NET ಚೌಕಟ್ಟಿಗೆ ಆವರ್ತನಗೊಳಿಸಲಾಯಿತು J# ವಿಷುಯಲ್ ಸ್ಟುಡಿಯೋ 2005ರಲ್ಲಿ ಲಭ್ಯವಿತ್ತು, ಅದರೆ ವಿಷುಯಲ್ ಸ್ಟುಡಿಯೋ 2008ರಲ್ಲಿ ಕೈಬಿಡಲಾಯಿತು.
- ವಿಷುಯಲ್ ಇಂಟರ್ ಡೆವ್
- ವಿಷುಯಲ್ ಇಂಟರ್ ಡೆವ್ ಅನ್ನು ಮೈಕ್ರೋಸಾಫ್ಟ್ ಕ್ರಿಯಾಶೀಲ ಪೂರೈಕೆ ಪುಟಗಳನ್ನು (ASP) ತಾಂತ್ರಿಕತೆಯನ್ನು ಉಪಯೋಗಿಸಿ ಜಾಲ ಅನ್ವಯಿಕಗಳನ್ನು ಸೃಷ್ಟಿಸಲು ಬಳಸಲಾಗುತ್ತಿತ್ತು. ಅದು ಸಂಕೇತ ಪೂರ್ಣಗೊಳಿಸುವಿಕೆಯನ್ನು ಬೆಂಬಲಿಸುತ್ತದೆ ಮತ್ತು ದತ್ತಸಂಚಯ ಪೂರೈಕೆಗಣಕ ವ್ಯವಸ್ಥಾ ಸಲಕರಣೆಗಳನ್ನು ಹೊಂದಿರುತ್ತದೆ. ಅದರ ಸ್ಥಾನವನ್ನು ಮೈಕ್ರೋಸಾಫ್ಟ್ ವಿಷುಯಲ್ ಜಾಲ ಅಭಿವೃದ್ಧಿಕಾರಕವು ಆಕ್ರಮಿಸಿದೆ.
ಆವೃತ್ತಿಗಳು
[ಬದಲಾಯಿಸಿ]ಮೈಕ್ರೋಸಾಫ್ಟ್ ವಿಷುಯಲ್ ಸ್ಟುಡಿಯೋ ಈ ಆವೃತ್ತಿಗಳಲ್ಲಿ ಲಭ್ಯವಿದೆ:[೪೦]
- ವಿಷುಯಲ್ ಸ್ಟುಡಿಯೋ ಎಕ್ಸ್ ಪ್ರೆಸ್
- ವಿಷುಯಲ್ ಸ್ಟುಡಿಯೋ ಎಕ್ಸ್ ಪ್ರೆಸ್ ಆವೃತ್ತಿಗಳು ಒಂದು ಜೊತೆ ಸರಾಗವಾದ ಹಗುರವಾದ ವೈಯಕ್ತಿಕ IDEಗಳಾಗಿದ್ದು, ವಿಷುಯಲ್ ಸ್ಟುಡಿಯೋ IDEಯ ಸಂಕರ್ಷಿತ ಆವೃತ್ತಿಗಳೊಡನೆ ಭಾಷೆಗೆ ಇಷ್ಟು ಎಂಬ ವಿಧದಲ್ಲಿ ಒದಗಿಸಲಾಗುತ್ತದೆ; ಎಂದರೆ, ಅದು ವೈಯಕ್ತಿಕ ವಿಷುಯಲ್ ಸ್ಟುಡಿಯೋಷೆಲ್ Applds ನಲ್ಲಿ ಯಾವ ಭಾಷೆಗೆ ಬೆಂಬಲವಿದೆಯೋ ಆ ಭಾಷಾ ಸೇವೆಗಳನ್ನು ಅಳವಡಿಸುತ್ತದೆ. ಇತರ ವ್ಯವಸ್ಥೆಗಳಿಗೆ ಹೋಲಿಸಿದರೆ ಇದರಲ್ಲಿ ಬಹಳ ಕಡಿಮೆ ಸಲಕರಣೆಗಳಿವೆ - ದತ್ತ ವಿನ್ಯಾಸ, ಶ್ರೇಣಿ ವಿನ್ಯಾಸಗಳಿಗೆ ಬೆಂಬಲಿಸುವ ಸಾಧನಗಳು, ಹಲವಾರು ಇತರ ಸಲಕರಣೆಗಳು ಮತ್ತು ಲಕ್ಷಣಗಳು ಹಾಗೂ ಪ್ಲಗ್-ಇನ್ ಗಳಿಗೆ ಆಧಾರ - ಇವು ಯಾವುವೂ ಇದರಲ್ಲಿ ಇಲ್ಲ. ವಿಷುಯಲ್ ಸ್ಟುಡಿಯೋ ಎಕ್ಸ್ ಪ್ರೆಸ್ ಆವೃತ್ತಿ IDEಗಳ ಜೋಡಕವಾದ x64 ಸಹ ಇದರಲ್ಲಿಲ್ಲ. ಮೈಕ್ರೋಸಾಫ್ಟ್ ಎಕ್ಸ್ ಪ್ರೆಸ್ IDEಗಳಿಗೆ ವಿದ್ಯಾರ್ಧಿಗಳು ಹಾಗೂ ಹವ್ಯಾಸಿಗಳನ್ನು ಗುರಿಯಾಗಿರಿಸಿಕೊಂಡಿದೆ. ಎಕ್ಸ್ ಪ್ರೆಸ್ ಆವೃತ್ತಿಗಳು ಸಃ ಇಡೀ MSDN ಗ್ರಂಥಾಲಯವನ್ನು ಬಳಸುವುದಿಲ್ಲ, ಆದರೆ MSDN ಎಕ್ಸ್ ಪ್ರೆಸ್ ಗ್ರಂಥಾಲಯವನ್ನು ಬಳಸುತ್ತವೆ. ಎಕ್ಸ್ ಪ್ರೆಸ್ IDEಯ ಅಂಗವಾಗಿ ಲಭ್ಯವಾದ ಭಾಷೆಗಳೆಂದರೆ:
-
-
- ವಿಷುಯಲ್ ಬೇಸಿಕ್ ಎಕ್ಸ್ ಪ್ರೆಸ್
- ವಿಷುಯಲ್ C++ ಎಕ್ಸ್ ಪ್ರೆಸ್
- ವಿಷುಯಲ್ C# ಎಕ್ಸ್ ಪ್ರೆಸ್
- ವಿಷುಯಲ್ ಜಾಲವರ್ಧಕ ಎಕ್ಸ್ ಪ್ರೆಸ್
-
- ವಿಷುಯಲ್ ಸ್ಟುಡಿಯೋ ಸ್ಟಾಂಡರ್ಡ್
- ವಿಷುಯಲ್ ಸ್ಟುಡಿಯೋ ಸ್ಟಾಂಡರ್ಡ್ ಆವೃತ್ತಿಯು ಎಲ್ಲಾ ಬೆಂಬಲಿತ ಉತ್ಪಾದನೆಗಳಿಗೂ ಒಂದು IDE ಒದಗಿಸುತ್ತದೆ ಮತ್ತು ಇಡೀ MSDN ಗ್ರಂಥಾಲಯವನ್ನು ಬೆಂಬಲಿಸಬಹುದಾಗಿದೆ. ಇದು XML ಮತ್ತು XSLT ಸಂಪಾದನೆ, ವಸ್ತುಗಳನ್ನು ಪರೀಕ್ಷಿಸುವ ಬೆಂಚ್ ಗಳನ್ನು ಬೆಂಬಲಿಸುತ್ತದೆ, ಮತ್ತು ಒಮ್ಮೆ ಕ್ಲಿಕ್ ಮಾಡಿ ಯನ್ನು ಮಾತ್ರ ಉಪಯೋಗಿಸುವಂತಹ ಡಿಪ್ಲಾಯ್ಮೆಂಟ್ ಪ್ಯಾಕೇಜನ್ನು ಸೃಷ್ಟಿಸಬಲ್ಲದು. ಆದರೆ, ಇದು ಪೂರೈಕೆಗಣಕ ಶೋಧಕವನ್ನಾಗಲೀ, ಅಥವಾ ಮೈಕ್ರೋಸಾಫ್ಟ್ SQL ಗಣಕಪೂರೈಕೆಯೊಡನೆ ಸಂಯೋಜನೆಯನ್ನಾಗಲೀ ಹೊಂದಿರುವುದಿಲ್ಲ. ಮೂರು ವಿಸ್ತರಣಾ ವಿಧಾನಗಳಲ್ಲಿ ಇದು ಒಳ-ಜೋಡಿಸು(ಆಡ್-ಇನ್)ವನ್ನು ಮಾತ್ರ ಬೆಂಬಲಿಸುತ್ತದೆ. ಚರ ಅಭಿವೃದ್ಧಿ ಬೆಂಬಲವನ್ನು ವಿಷುಯಲ್ ಸ್ಟುಡಿಯೋ 2005 ಸ್ಟ್ಯಾಂಡರ್ಡ್ ನಲ್ಲಿ ಸೇರಿಸಲಾಯಿತು, ಆದರೆ, ವಿಷುಯಲ್ ಸ್ಟುಡಿಯೋ 2008ರಲ್ಲಿ, ಅದು ಕೇವಲ ಪ್ರೊಫೆಷನಲ್ ಮತ್ತು ಉನ್ನತ ಆವೃತ್ತಿಗಳಲ್ಲಿ ಲಭ್ಯವಿದೆ. ದೂರ ನಿಯಂತ್ರಿತ ದೋಷಸೂಚಕವು ವಿಷುಯಲ್ ಸ್ಟುಡಿಯೋ 2008 ಪ್ರೊಫೆಷನಲ್ ಮತ್ತು ಟೀಂ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿದೆ.
- ವಿಷುಯಲ್ ಸ್ಟುಡಿಯೋ ಪ್ರೊಫೆಷನಲ್
- ವಿಷುಯಲ್ ಸ್ಟುಡಿಯೋ ಪ್ರೊಫೆಷನಲ್ ಆವೃತ್ತಿಯು ವಿಷುಯಲ್ ಸ್ಟುಡಿಯೋ ಸ್ಟ್ಯಾಂಡರ್ಡ್ ನಲ್ಲಿರುವ ಸಲಕರಣೆಗಳನ್ನು ಹೊಂದಿದೆ ಮತ್ತು ಇತರ ಕಾರ್ಯಕಾರಕಗಳಾದ ಮೈಕ್ರೋಸಾಫ್ಟ್ SQL ಸರ್ವರ್ ಸಂಯೋಜನೆ(ಇದು ದತ್ತಸಂಚಯಗಳನ್ನು ವಿಷುಯಲ್ ಸ್ಟುಡಿಯೋದ ಒಳಗಿಂದಲೇ ಸೃಜಿಸಲು ಅನುವು ಮಾಡಿಕೊಡುತ್ತದೆ) ಮತ್ತು ಒಂದು ದೂರನಿಯಂತ್ರಿತ ದೋಷಸೂಚಕ(2005ರ ಆವೃತ್ತಿಗಳಿಗೆ)(ದೂರ ನಿಯಂತ್ರಣ ವ್ಯವಸ್ಥೆಯ ಮೇಲೆ ದೋಷಸೂಚಕ ಪೂರೈಕೆಗಣಕವು ಚಲಿತವಾಗಿದ್ದರೆ, ಇದು ವಿಷುಯಲ್ ಸ್ಟುಡಿಯೋ ದೋಷಸೂಚಕದ ಒಳಗಿನಿಂದಲೇ ದೂರನಿಯಂತ್ರಕದಲ್ಲಿನ ದೋಷಸೂಚನೆಯನ್ನು ಅನುಮತಿಸುತ್ತದೆ) ವಿಷುಯಲ್ ಸ್ಟುಡಿಯೋ ಪ್ರೊಫೆಷನಲ್ ಮೂರೂ ವಿಸ್ತರಣಾ ಯಂತ್ರಾಂಶಗಳನ್ನು ಸ್ವೀಕರಿಸುತ್ತದೆ.
- ಆಫೀಸ್ ಗಾಗಿ ವಿಷುಯಲ್ ಸ್ಟುಡಿಯೋ ಸಲಕರಣೆಗಳು
- ಆಫೀಸ್ ಗಾಗಿ ವಿಷುಯಲ್ ಸ್ಟುಡಿಯೋ ಸಲಕರಣೆಗಳು ಎಂಬುದು ವಿಷುಯಲ್ ಸ್ಟುಡಿಯೋಗಾಗಿ ಒಂದು SDK ಮತ್ತು ಒಳ-ಜೋಡಕವಾಗಿದ್ದು, ಮೈಕ್ರೋಸಾಫ್ಟ್ ಆಫೀಸ್ ಪ್ಲ್ಯಾಟ್ ಫಾರ್ಮ್ ಅಭಿವೃದ್ಧಿಗೆ ಬೇಕಾದ ಸಾಧನಗಳನ್ನು ಹೊಂದಿದೆ. ಹಿಂದೆ, ಎಂದರೆ, ವಿಷುಯಲ್ ಸ್ಟುಡಿಯೋ .NET 2003 ಮತ್ತು ವಿಷುಯಲ್ ಸ್ಟುಡಿಯೋ 2005ರಲ್ಲಿ, ಇದು ಪ್ರತ್ಯೇಕ SKU ಆಗಿದ್ದು, ಕೇವಲ ವಿಷುಯಲ್ C# ಮತ್ತು ವಿಷುಯಲ್ ಬೇಸಿಕ್ ಭಾಷೆಗಳನ್ನು ಮಾತ್ರ ಬೆಂಬಲಿಸುತ್ತಿತ್ತು ಅಥವಾ ಟಿಂ ಸ್ಯೂಟ್ ನಲ್ಲಿ ಅಡಕವಾಗಿರುತ್ತಿತ್ತು. ವಿಷುಯಲ್ ಸ್ಟುಡಿಯೋ 2008ರಲ್ಲಿ, ಅದು ಪ್ರತ್ಯೇಕ SKU ಆಗಿಲ್ಲ, ಆದರೆ ಪ್ರೊಫೆಷನಲ್ ಮತ್ತು ಉನ್ನತ ಆವೃತ್ತಿಗಳಲ್ಲಿ ಅಡಕವಾಗಿದೆ. ಒಂದು ಪ್ರತ್ಯೇಕ ಓಟಸಮಯಯು VSTO ಪರಿಹಾರಗಳನ್ನು ವಿಸ್ತರಿಸುವಾಗ ಅವಶ್ಯವಾಗುತ್ತದೆ.
- ವಿಷುಯಲ್ ಸ್ಟುಡಿಯೋ ಟೀಂ ಸಿಸ್ಟಮ್
- ವಿಷುಯಲ್ ಸ್ಟುಡಿಯೋ ಪ್ರೊಫೆಷನಲ್ ನೀಡುವ ಅಂಶಗಳನ್ನೆಲ್ಲಾ ವಿಷುಯಲ್ ಸ್ಟುಡಿಯೋ ಟೀಂ ಸಿಸ್ಟಮ್ ನೀಡುವುದರ ಜೊತೆಗೆ ತಂತ್ರಾಂಶ ಅಭಿವೃದ್ಧಿ, ಹೊಂದಾವಣೆ, ಮಾಪನ ಮತ್ತು ವರದಿಗಾರಿಕೆಗಳಿಗೆ ಒಂದು ಜೊತೆ ಸಲಕರಣೆಗಳನ್ನು ಒದಗಿಸುತ್ತದೆ. VSTS ಯಾವ ತಂತ್ರಂಶ ಅಭಿವೃದ್ಧಿಯ ಪಾತ್ರವನ್ನು ಅದಕ್ಕೆ ವಹಿಸಲ್ಪಟ್ಟಿರುವುದೋ ಆ ಪಾತ್ರಕ್ಕೆ ತಕ್ಕಂತಹ ಸಲಕರಣೆಗಳನ್ನು ಒದಗಿಸುತ್ತದೆ. ಪಾತ್ರ-ನಿರ್ದೇಶಿತ ಅಭಿರುಚಿಗಳು ಯಾವುವೆಂದರೆ:[೪೧][೪೨]
-
-
- ತಂಡ ಶೋಧಕ (ಬೇಸಿಕ್ಸ್ TFS ಕಕ್ಷಿ)
- ಶಿಲ್ಪಕಲಾ ಆವೃತ್ತಿ
- ದತ್ತಸಂಚಯ ಆವೃತ್ತಿ
- ಅಭಿವೃದ್ಧಿ ಆವೃತ್ತಿ
- ಪರೋಕ್ಷಾ ಆವೃತ್ತಿ
-
- ಎಲ್ಲಾ ನಾಲ್ಕು ಆವೃತ್ತಿಗಳ ಒಟ್ಟಾರೆ ಕ್ರಿಯಾವಿಧಿಗಳು ಟೀಂ ಸ್ಯೂಟ್ ಆವೃತ್ತಿಯಲ್ಲಿ ದೊರೆಯುತ್ತದೆ. ದತ್ತಸಂಚಯದ ಆವೃತ್ತಿಯಾದ "ಡಾಟಾಡ್ಯೂಡ್" ಅನ್ನು, ವಿಷುಯಲ್ ಸ್ಟುಡಿಯೋ 2005ರ ಮೊದಲ ಬಿಡುಗಡೆಯ ನಂತರ, ಮೊದಲ ಬಾರಿ ಪ್ರತ್ಯೇಕ ಆವೃತ್ತಿಯಾಗಿಯೇ ಬಿಡುಗಡೆ ಮಾಡಲಾಗಿತ್ತು. ಇದು ವಿಷುಯಲ್ ಸ್ಟುಡಿಯೋ 2008ರಲ್ಲಿ ಪ್ರತ್ಯೇಕ ಆವೃತ್ತಿಯಾಗಿ ಸೇರಿಸಲಾಗಿದೆ, ಆದರೆ ಅದರ ಕ್ರಿಯಾತ್ಮಕತೆಯನ್ನು ಮುಂಬರುವ 2010ರ ಅಭಿವೃದ್ಧಿ ಆವೃತ್ತಿಯಲ್ಲಿ ಸೇರಿಸಿಕೊಳ್ಳಲಾಗುವುದು.[೪೩]
- ಗ್ರಾಹಕ SKUಗಳೊಂದಿಗೆ ವಿಷುಯಲ್ ಸ್ಟುಡಿಯೋ ಟೀಂ ಸಿಸ್ಟಮ್ ಆಕರ ಸಂಕೇತ ನಿಯಂತ್ರಣಕ್ಕಾಗಿ, ಕಾರ್ಯ-ವಿಷಯ ಜಾಡುಹಿಡಿಯುವಿಕೆ, ವರದಿಗಾರಿಕೆ ಮತ್ತು ತಂಡ ವ್ಯವಸ್ಥಾಪನೆಗಳಿಗಾಗಿ ಟೀಂ ಫೌಂಡೇಷನ್ ಸರ್ವರ್ ಅನ್ನು ಸಹ ಒಳಗೊಂಡಿದೆ. ಇತರ ಅನ್ವಯಿಕ ಅಭಿವೃದ್ಧಿ ಕ್ರಮವಿಧಿಗಳೊಂದಿಗೆ, ಟೀಂ ಎಕ್ಸ್ ಪ್ಲೋರರ್ TFS ಗ್ರಾಹಕವಾಗಿದ್ದು, VSTS IDE ಯಲ್ಲಿ ಇದು ಸಂಯೋಜಿತವಾಗಿದೆ.
- ಆವೃತ್ತಿಗಳ ಲಕ್ಷಣಗಳ ಸೂಚಕ</ಆಕರ>
"Visual Studio 2008 Product Comparison". Retrieved 2008-02-07.</ಆಕರ>
ಉತ್ಪನ್ನ | Extensions | ಬಾಹ್ಯ ಸಾಧನಗಳು | ವ್ಯವಸ್ಥಾ ಯೋಜನೆಗಳು | MSDN ಸಂಯೋಜನೆ | ಶ್ರೇಣಿ ರಚಯಕ | ರೆಫಾಕ್ಟೊರಿಂಗ್
ಮರು |
Debugging | Target Native 64 bit | Target Itanium Processors | Visual Studio Tools for Office | Windows Mobile Development |
---|---|---|---|---|---|---|---|---|---|---|---|
ವಿಷುಯಲ್ ಸ್ಟುಡಿಯೋ ಎಕ್ಸ್ ಪ್ರೆಸ್ | No | minimal | reduced functionality | MSDN Express | No | reduced functionality | reduced functionality | No | No | No | No |
ವಿಷುಯಲ್ ಸ್ಟುಡಿಯೋ ಸ್ಟಾಂಡರ್ಡ್ | Yes | Yes | reduced functionality | Yes | Yes | Yes | Yes | Yes | No | No | No |
ವಿಷುಯಲ್ ಸ್ಟುಡಿಯೋ ಪ್ರೊಫೆಷನಲ್ | Yes | Yes | Yes | Yes | Yes | Yes | Yes | Yes | No | Yes | Yes |
ವಿಷುಯಲ್ ಸ್ಟುಡಿಯೋ ಟೀಂ ರೀತಿ ಆವೃತ್ತಿಗಳು | Yes | Yes | Yes | Yes | Yes | Yes | Yes | Yes | Yes | Yes | Yes |
ಆವೃತ್ತಿ ಇತಿಹಾಸ
[ಬದಲಾಯಿಸಿ]ವಿಷುಯಲ್ ಸ್ಟುಡಿಯೋ 97
[ಬದಲಾಯಿಸಿ]ಮೈಕ್ರೋಸಾಫ್ಟ್ ಮೊಟ್ಟಮೊದಲ ಬಾರಿಗೆ ತನ್ನ ಹಲವಾರು ಯೋಜನಕಾರಕ ಸಾಧನಗಳನ್ನು ಒಗ್ಗೂಡಿಸಿ ನಿರ್ಮಿಸಿದ ವಿಷುಯಲ್ ಸ್ಟುಡಿಯೋವನ್ನು 1997ರಲ್ಲಿ ಬಿಡುಗಡೆ ಮಾಡಿತು. ವಿಷುಯಲ್ ಸ್ಟುಡಿಯೋ 97 ಅನ್ನು ಪ್ರೊಫೆಷನಲ್ ಮತ್ತು ಎಂಟರ್ಪ್ರೈಸ್ ಎಂಬ ಎರಡು ಆವೃತ್ತಿಗಳಲ್ಲಿ ಹೊರತರಲಾಯೊತು. ವಿಂಡೋಸ್ ಕಾರ್ಯನಿರ್ವಹಣೆಗೆಂದೇ ಪ್ರಮುಖವಾದ ವಿಷುಯಲ್ ಬೇಸಿಕ್ 5.0 ಮತ್ತು ವಿಷುಯಲ್ C++ 5.೦;ಜಾವಾ ಮತ್ತು ವಿಂಡೋಸ್ ಕಾರ್ಯನಿರ್ವಹಣೆ ಬೆಂಬಲಿಸಲು ಅಗತ್ಯವಾದ ವಿಷುಯಲ್ J++ 1.1 ಮತ್ತು ದತ್ತಸಂಚಯಕ್ಕಾಗಿ, ಅದರಲ್ಲೂ ವಿಶೇಷವಾಗಿ xಬೇಸ್ ಕಾರ್ಯನಿರ್ವಹಣೆಗೆ ಬೆಂಬಲವಾಗಿ ಅವಶ್ಯವಾದ, ವಿಷುಯಲ್ ಫಾಕ್ಸ್ ಪ್ರೋ 5.0 ಗಳು ಈ ವಿಷುಯಲ್ ಸ್ಟುಡಿಯೋದಲ್ಲಿ ಇದ್ದವು. ಸಕ್ರಿಯ ಪೂರೈಕೆ ಗಣಕ ಪುಟಗಳನ್ನು ಉಪಯೋಗಿಸಿ ಕ್ರಿಯಾಶೀಲವಾಗಿ ಉತ್ಪಾದಿಸಿದ ಜಾಲ ತಾಣಗಳನ್ನು ಸೃಷ್ಟಿಸಲು ವಿಷುಯಲ್ ಇಂಟರ್ ಡೆವ್ ಅನ್ನು ಪರಿಚಯಿಸಿತು. ಮೈಕ್ರೋಸಾಫ್ಟ್ ಅಬಿವೃದ್ಧಿ ಜಾಲ ಗ್ರಂಥಾಲಯದ ಚಿತ್ರವೊಂದನ್ನು ಸಹ ಇದರಲ್ಲಿ ಸೇರಿಸಲಾಗಿತ್ತು.
ವಿಷುಯಲ್ ಸ್ಟುಡಿಯೋ 97 ಅನೇಕ ಭಾಷೆಗಳಿಗೆ ಅಭಿವೃದ್ಧಿ ಗಣಕಪರಿಸರವನ್ನು ಉಪಯೋಗಿಸಲು ಮೈಕ್ರೋಸಾಫ್ಟ್ ಮಾಡಿದ ಮೊದಲ ಪ್ರಯತ್ನ. ವಿಷುಯಲ್ C++, ವಿಷುಯಲ್ J++,ಇಂಟರ್ ಡೆವ್, ಮತ್ತು MSDN ಗ್ರಂಥಾಲಯಗಳೆಲ್ಲವೂ ಡೆವೆಲಪರ್ ಸ್ಟುಡಿಯೋ ಎಂಬ ಒಂದು ಗಣಕಪರಿಸರವನ್ನು ಉಪಯೋಗಿಸಿದವು. ವಿಷುಯಲ್ ಬೇಸಿಕ್ ಮತ್ತು ವಿಷುಯಲ್ ಫಾಕ್ಸ್ ಪ್ರೋ ಬೇರೆ ಗಣಕಪರಿಸರವನ್ನು ಉಪಯೋಗಿಸಿದವು.[೧೦]
ವಿಷುಯಲ್ ಸ್ಟುಡಿಯೋ 6.0 (1998)
[ಬದಲಾಯಿಸಿ]ಮುಂದಿನ ಆವೃತ್ತಿಯಾದ, ಆವೃತ್ತಿ 6.0 ಜೂನ್ 1998ರಲ್ಲಿ ಬಿಡುಗಡೆಯಾಯಿತು ಮತ್ತು ಅದು ವಿಂಡೋಸ್ 9x ನಿರೂಪಣೆಯಲ್ಲಿ ಚಾಲನೆಗೊಂಡ ಕಡೆಯ ಆವೃತ್ತಿಯಾಯಿತು.[೪೪] ಅದರ ಎಲ್ಲಾ ಆವೃತ್ತಿಗಳ ಬಿಡಿಭಾಗಗಳ ಸಂಖ್ಯೆಗಳೂ, 6.0ಗೆ ಸರಿದವು; ಈ ಪೈಕಿ ವಿಷುಯಲ್ J++ 1.1ರಿಂದ 6.0ಕ್ಕೆ ಏರಿದರೆ ವಿಷುಯಲ್ ಇಂಟರ್ ಡೆವ್ 1.0ರಿಂದ 6.0ಕ್ಕೆ ಏರಿತು. ಮೈಕ್ರೋಸಾಫ್ಟ್ ತಮ್ಮ ಅಭಿವೃದ್ಧಿಯ ಕೇಂದ್ರಬಿಂದುವನ್ನು .NET ಫ್ರೇಂವರ್ಕ್ ನತ್ತ ವರ್ಗಾಯಿಸುತ್ತಿದ್ದಂತೆಯೇ, ಈ ಆವೃತ್ತಿಯು ಮೈಕ್ರೋಸಾಫ್ಟ್ ನ ಮುಂದಿನ 4 ವರ್ಷಗಳ ಅಭಿವೃದ್ಧಿ ಕ್ರಮಗಳಿಗೆ ಬುನಾದಿಯಾಯಿತು.
ವಿಷುಯಲ್ ಸ್ಟುಡಿಯೋ 6.0 ವಿಷುಯಲ್ ಬೇಸಿಕ್ ನ COM-ಆಧಾರಿತ ಆವೃತ್ತಿಯನ್ನು ಹೊಂದಿದ ಕೊನೆಯ ಆವೃತ್ತಿಯಾಯಿತು; ನಂತರದ ಆವೃತ್ತಿಗಳು .NET ಆಧಾರಿತವಾದ ಭಾಷೆಗಳ ಆವೃತ್ತಿಯನ್ನು ಹೊಂದುವುದೆಂದಾಯಿತು. ಇದು ವಿಷುಯಲ್ J++ ಅನ್ನು ಒಳಗೊಂಡ ಕೊನೆಯ ಆವೃತ್ತಿಯೂ ಹೌದು; ಜಾವಾ ವರ್ಚುಯಲ್ ಮೆಷೀನ್ ಅನ್ನು ಗುರಿಯಾಗಿರಿಸಿಕೊಂದು ಕ್ರಮವಿಧಿಗಳನ್ನು ಉತ್ಪಾದಿಸುವುದನ್ನು ನಿಲ್ಲಿಸಬೇಕೆಂಬ ಮೈಕ್ರೋಸಾಫ್ಟ್ ಮತ್ತು ಸನ್ ಮೈಕ್ರೋಸಿಸ್ಟಮ್ಸ್ ರವರ ನಡುವಣ ರಾಜಿಯ ಒಂದು ಷರತ್ತಿನ ಮೇರೆಗೆ ಇದನ್ನು ಕೈಬಿಡಲಾಯಿತು.
ವಿಷುಯಲ್ ಬೇಸಿಕ್, ವಿಷುಯಲ್ C++ ಮತ್ತು ವಿಷುಯಲ್ ಫಾಕ್ಸ್ ಪ್ರೋಗಳಿಗೆ ಪ್ರತ್ಯೇಕ IDEಗಳಿದ್ದವು, ವಿಷುಯಲ್ ಜ++ ಮತ್ತು ವಿಷುಯಲ್ ಇಂಟರ್ ಡೆವ್ ಗಳು ಒಂದೇ ನೂತನ ಪರಿಸರಗಣಕವನ್ನು ಹಂಚಿಕೊಂಡವು. ಈ ನೂತನ IDE ಯನ್ನು ವಿಸ್ತರಣೆಯನ್ನು ಮನದಲ್ಲಿರಿಸಿಕೊಮಡು ವಿನ್ಯಾಸಗೊಳಿಸಲಾಗಿತ್ತು ಮತ್ತು(ಹಲವಾರು ಒಳಗಿನ ಪುನರಾವರ್ತನೆಗಳ ನಂತರ) ಕಾಲಕ್ರಮೇಣ, ವಿಷುಯಲ್ ಸ್ಟುಡಿಯೋ .NETನ ಬಿಡುಗಡೆಯ ನಂತರ, ಎಲ್ಲಾ ಭಾಷೆಗಳಿಗೂ ಹೊಂದುವಂತಹ ಸಾಮಾನ್ಯ ಪರಿಸರಗಣಕವಾಯಿತು.[೧೦] ವಿಷುಯಲ್ ಸ್ಟುಡಿಯೋ 6.0 ವಿಷುಯಲ್ ಫಾಕ್ಸ್ ಪ್ರೋವನ್ನು ಹೊಂದಿದ್ದಂತಹ ಕಡೆಯ ಆವೃತ್ತಿಯಾಯಿತು.
ಎಂದಿನಂತೆಯೇ, ವಿಷುಯಲ್ ಸ್ಟುಡಿಯೋ 6.೦ ಸಹ ಹಲವಾರು ಆವೃತ್ತಿಗಳಲ್ಲಿ ಹೊರಬಂದಿತು: ಸ್ಟಾಂಡರ್ಡ್, ಪ್ರೊಫೆಷನಲ್ ಮತ್ತು ಎಂಟರ್ ಪ್ರೈಸ್. ಎಂಟರ್ ಪ್ರೈಸ್ ಆವೃತ್ತಿಯಲ್ಲಿ ಸ್ಟಾಂಡರ್ಡ್ ಅಥವಾ ಪ್ರೊಫೆಷನಲ್ ಆವೃತ್ತಿಗಳಲ್ಲಿ ಇರದಂತಹ ಹಲವು ವಿಶೇಷ ಗುಣಗಳಿವೆ. ಅವುಗಳು:
- ಅನ್ವಯಿಕ ಕಾರ್ಯನಿರ್ವಾಹ ಶೋಧಕ
- ಸ್ವಯಂಚಾಲನೆಯ ವ್ಯವಸ್ಥಾಪಕ
- ಮೈಕ್ರೋಸಾಫ್ಟ್ ವಿಷುಯಲ್ ಮಾಡೆಲರ್
- ರೆಮ್ ಆಟೋ ಸಂಪರ್ಕ ವ್ಯವಸ್ಥಾಪಕ
- ವಿಷುಯಲ್ ಸ್ಟುಡಿಯೋ ವಿಶ್ಲೇಷಕ
ವಿಷುಯಲ್ ಸ್ಟುಡಿಯೋ .NET (2002)
[ಬದಲಾಯಿಸಿ]ರೈನಿಯರ್ ಎಂಬ ಸಂಕೇತನಾಮವನ್ನು(ವಾಷಿಂಗ್ಟನ್ ನ ಮೌಂಟ್ ರೈನಿಯರ್ ನ ಹೆಸರಿನಲ್ಲಿ) ಹೊಂದಿರುವ ವಿಷುಯಲ್ ಸ್ಟುಡಿಯೋ .NET ಅನ್ನು ಮೈಕ್ರೋಸಾಫ್ಟ್ 2002ರಲ್ಲಿ ಬಿಡುಗಡೆ ಮಾಡಿತು.(ಇದರ ಬೀಟಾ ಆವೃತ್ತಿಯು ಮೈಕ್ರೋಸಾಫ್ಟ್ ನೆಟ್ ವರ್ಕ್ ಡೆವಲಪರ್ ಮೂಲಕ 2001ರಲ್ಲಿ ಬಿಡುಗಡೆ ಹೊಂದಿತ್ತು). ಇದರಲ್ಲಿನ ಬಲು ದೊಡ್ಡ ಬದಲಾವಣೆಯೆಂದರೆ .NET Fಫ್ರೇಂವರ್ಕ್ ಬಳಸಿಕೊಂಡು ವ್ಯವಸ್ಥಿತ ಸಂಕೇತ ಅಭಿವೃದ್ಧಿ ಗಣಕವಾತಾವರಣದ ಸೇರ್ಪಡೆಯುಂಟು ಮಾಡಿದುದು. .NET ಉಪಯೋಗಿಸಿ ಅಭಿವೃದ್ಧಿಗೊಳಿಸಿದ ಕ್ರಮವಿಧಿಗಳು ಯಂತ್ರಭಾಷೆಗೆ ಸೇರ್ಪಡೆಯಾಗುವುದಿಲ್ಲ(ಉದಾಹರಣೆಗೆ C++) ಆದರೆ ಬದಲಿಗೆ ಮೈಕ್ರೋಸಾಫ್ಟ್ ಇಂಟರ್ಮೀಡಿಯೆಟ್ ಲಾಂಗ್ವೇಜ್ (MSIL)ಎಂಬ ಒಂದು ರಚನೆಯ ಅಥವಾ ಕಾಮನ್ ಇಂಟರ್ಮೀಡಿಯೆಟ್ ಲ್ಯಾಂಗ್ವೇಜ್ (CIL)ಮೂಲಕ ಸೇರ್ಪಡೆಗೊಳಿಸಲಾಗುವುದು. [[MSIL ಅನ್ವಯವನ್ನು ನಿರ್ವಹಿಸುವಾಗ, ಅದು ನಿರ್ವಹಣೆಯಾಗುತ್ತಿರುವಾಗಲೇ, ಯಾವ ಉದ್ದೇಶಕ್ಕಾಗಿ ಅದು ನಿರ್ವಹಿತವಾಗುತ್ತದೆಯೋ ಆ ಉದ್ದೇಶಕ್ಕೆ ಸೂಕ್ತವಾದ ಯಂತ್ರ ಭಾಷೆಗಳಿಗೆ ಸಂಕಲನಗೊಳ್ಳುತ್ತದೆ]] ಮತ್ತು ತನ್ಮೂಲಕ ಸಂಕೇತವು ಹಲವು ಉದ್ದೇಶಿತ ಕಾರ್ಯವಿಧಿಗಳಿಗೆ ಸಂಚರಿಸುವಂತಾಗುತ್ತದೆ. MSILಗೆ ಸಂಕಲಿತವಾದ ಕ್ರಮವಿಧಿಗಳು ಸಾಮಾನ್ಯ ಭಾಷಾ ಸೌಲಭ್ಯಗಳನ್ನು ಅಳವಡಿಸಿರುವ ನೆಲೆಗಟ್ಟಗಳಲ್ಲಿ ಮಾತ್ರ ಕಾರ್ಯಗತಗೊಳಿಸಬಹುದು. MSIL ಕ್ರಮವಿಧಿಗಳನ್ನು ಲೈನಕ್ಸ್, ಅಥವಾ Mac OS Xಗಳಲ್ಲಿ ಮೈಕ್ರೋಸಾಫ್ಟ್ .NET ಹೊರತಾದ ಸಲಕರಣೆಗಳಾದ ಮಾನೋ ಮತ್ತು DotGNUಗಳನ್ನು ಉಪಯೋಗಿಸಿ ಚಲಾಯಿಸಬಹುದು.
ಇದು NT-ಆಧಾರಿತ ವಿಂಡೋಸ್ ನೆಲೆಗಟ್ಟನ್ನು ಅಳವಡಿಸಬೇಕಾದ ಮೊದಲ ವಿಷುಯಲ್ ಆವೃತ್ತಿಯಾಗಿತ್ತು.[೪೫] ಅಳವಡಿಸುವ ಯಂತ್ರಾಂಶವು ಈ ಬೇಡಿಕೆಯನ್ನು ಬಲವಂತವಾಗಿ ಹೇರುತ್ತದೆ.
ವಿಷುಯಲ್ ಸ್ಟುಡಿಯೋ .NET 2002 ನಾಲ್ಕು ಆವೃತ್ತಿಗಳಲ್ಲಿ ಜಾರಿಯಾಯಿತು: ಅಕಾಡೆಮಿಕ್, ಪ್ರೊಫೆಷನಲ್, ಎಂಟರ್ಪ್ರೈಸ್ ಡೆವಲಪರ್ ಮತ್ತು ಎಂಟರ್ಪ್ರೈಸ್ ಆರ್ಕಿಟೆಕ್ಟ್. ಮೈಕ್ರೋಸಾಫ್ಟ್ .NET ಅನ್ನು ಗುರಿಯಾಗಿರಿಸಿಕೊಂಡು ಒಂದು ಹೊಸ ಕ್ರಮವಿಧಿ ಭಾಷೆಯಾದ C# (C-ಷಾರ್ಪ್) ಅನ್ನು ಪರಿಚಯಿಸಿತು.ವಿಷುಯಲ್ J++ನ ಮುಂದಿನ ಪೀಳಿಗೆಯಾದ ವಿಷುಯಲ್ J# ಸಹ ಪರಿಚಯಿಸಿತು. ವಿಷುಯಲ್ J# ಕ್ರಮವಿಧಿಗಳು ಜಾವಾದ ಭಾಷಾನಿಯಮಗಳನ್ನು ಉಪಯೋಗಿಸುತ್ತವೆ. ಆದರೆ, ವಿಷುಯಲ್ J++ ಕ್ರಮವಿಧಿಗಳಂತಲ್ಲದೆ, ವಿಷುಯಲ್ J# ಕ್ರಮವಿಧಿಗಳು ಕೇವಲ .NET ಚೌಕಟ್ಟನ್ನು ಮಾತ್ರ ತಲುಪಬಲ್ಲವೇ ಹೊರತು ಮಿಕ್ಕೆಲ್ಲಾ ಸಲಕರಣೆಗಳು ಗುರಿಯಿಡುವಂತೆ ಜಾವಾ ವರ್ಚುಯಲ್ ಮೆಷಿನ್ ಅನ್ನು ತಲುಪಲಾಗುವುದಿಲ್ಲ.
ವಿಷುಯಲ್ ಬೇಸಿಕ್ ಅನ್ನು ತೀವ್ರವಾಗಿ ಬದಲಾಯಿಸಿ ಹೊಸ ಚೌಕಟ್ಟಿಗೆ ಹೊಂದುವಂತೆ ಮಾಡಲಾಯಿತುಮತ್ತು ಈ ಹೊಸ ಆವೃತ್ತಿಯನ್ನು ವಿಷುಯಲ್ ಬೇಸಿಕ್.NET ಎಂದು ಕರೆಯಲಾಯಿತು. ಮೈಕ್ರೋಸಾಫ್ಟ್ C++ಗೂ ವಿಸ್ತರಣೆಗಳನ್ನು ಮಾಡಿ ಅದನ್ನು C++ಗೆ ವ್ಯವಸ್ಥಿತ ವಿಸ್ತರಣೆಯೆಂದು ಕರೆಯಿತು, ಹೀಗೆ C++ ಕಾರ್ಯವಿಧಿಗಳು .NET ಕಾರ್ಯವಿಧಿಗಳನ್ನು ಸೃಷ್ಠಿಸಲು ಸಾಧ್ಯವಾಯಿತು.
ವಿಷುಯಲ್ ಸ್ಟುಡಿಯೋ .NET ಅನ್ನು ವಿಂಡೋಸ್ ಅನ್ನು ಗುರಿಯಾಗಿರಿಸಿಕೊಂಡ ಅನ್ವಯಿಕೆಗಳನ್ನು (.NET ಫ್ರೇಂವರ್ಕ್ ನ ಭಾಗವಾದ ವಿಂಡೋಸ್ ರೀತಿಗಳನ್ನು ಉಪಯೋಗಿಸಿ), ಜಾಲ(ASP.NET ಮತ್ತು ಜಾಲಸೇವೆಗಳನ್ನು ಉಪಯೋಗಿಸಿ)ಮತ್ತು, ಒಂದು ಒಳ-ಸಂಕಲನಕಾರಕವನ್ನು ಉಪಯೋಗಿಸಿ, ಒಯ್ಯಬಲ್ಲ ಸಲಕರಣೆಗಳನ್ನು(.NET ಸಂಕ್ಷೇಪ ಚೌಕಟ್ಟನ್ನು ಉಪಯೋಗಿಸಿ)ನಿರ್ಮಿಸಲು ಉಪಯೋಗಿಸಬಹುದು.
ವಿಷುಯಲ್ ಸ್ಟುಡಿಯೋ .NET ಗಣಕ ವಾತಾವರಣವನ್ನು ಭಾಗಶಃ .NET ಉಪಯೋಗಿಸುವ ಸಲುವಾಗಿ ಮರುಲೇಖಿಸಲಾಯಿತು. ಎಲ್ಲಾ ಭಾಷೆಗಳೂ ಒಂದು ಗಣಕ ವಾತಾವರಣದಡಿಯಲ್ಲಿ ಸಂಯೋಜಿತವಾಗಿವೆ. ಹಿಂದಿನ ವಿಷುಯಲ್ ಸ್ಟುಡಿಯೋ ಆವೃತ್ತಿಗಳಿಗೆ ಹೋಲಿಸಿದರೆ ಇದರಲ್ಲಿ ಸ್ವಚ್ಛವಾದ ಸಂಪರ್ಕಸಾಧನಗಳು ಮತ್ತು ಹೆಚ್ಚು ಹೊಂದಾಣಿಕೆಯಿವೆ. ಇದು ಹೆಚ್ಚು ಗಿರಾಕೀಕರಣಗೊಳಿಸಲು ಸಾಧ್ಯವಿದ್ದು, ಉಪಯೋಗಿಸದಿರುವಾಗ ಸ್ವಯಂ ಮರೆಗೆ ಸರಿಯುವ ವಿಂಡೋಸ್ ಸಲಕರಣೆಗಳಿವೆ. ವಿಷುಯಲ್ ಫಾಕ್ಸ್ ಪ್ರೋ 7 ವಿಷುಯಲ್ ಸ್ಟುಡಿಯೋ 7ರ ಆಂಗವಾಗಿಯೇ ಆರಂಭವಾದರೂ ಮತ್ತು ಮೊದಮೊದಲ VS ಬೀಟಾಗಳು VFP-ಆಧಾರಿತ DLLಗಳಲ್ಲಿ ದೋಷಸೂಚಕಗಳನ್ನು ಅನುಮತಿಸಿದರೂ, ಅದರದೇ ಅಭಿವೃದ್ಧಿ ಪಥವನ್ನು ಅನುಸರಿಸಲು ಅದನ್ನು ಬಿಡುಗಡೆಗೆ ಮುಂಚೆಯೇ ತೆಗೆದುಹಾಕಲಾಯಿತು.
ವಿಷುಯಲ್ ಸ್ಟುಡಿಯೋ .NETನ ಒಳಾಂಗಣ ಆವೃತ್ತಿಯ ಸಂಖ್ಯೆಯು 7.0. ಮೈಕ್ರೋಸಾಫ್ಟ್ ವಿಷುಯಲ್ ಸ್ಟುಡಿಯೋ .NET 2002ಕ್ಕಾಗಿ ಮಾರ್ಚ್ 2005ರಲ್ಲಿ ಸರ್ವೀಸ್ ಪ್ಯಾಕ್ 1 ಅನ್ನು ಬಿಡುಗಡೆ ಮಾಡಿತು.[೪೬]
ವಿಷುಯಲ್ ಸ್ಟುಡಿಯೋ .NET 2003
[ಬದಲಾಯಿಸಿ]ಏಪ್ರಿಲ್ 2003ರಲ್ಲಿ ಮೈಕ್ರೋಸಾಫ್ಟ್ ವಿಷುಯಲ್ ಸ್ಟುಡಿಯೋ .NETಗೆ ಎವೆರೆಟ್ ಎಂಬ ಸಂಕೇತನಾಮ(ಅದೇ ಹೆಸರಿನ ನಗರದ ಹೆಸರಿನಲ್ಲಿ) ಹೊಂದಿದ ವಿಷುಯಲ್ ಸ್ಟುಡಿಯೋ .NET 2003 ಒಂದು ಸಣ್ಣ ಔನ್ನತ್ಯಕಾರಕವನ್ನು ಪರಿಚಯಿಸಿತು. ಅದರಲ್ಲಿ .NET ಚೌಕಟ್ಟಿಗೆ ಔನ್ನತ್ಯಗೊಳಿಸಲ್ಪಟ್ಟ ಆವೃತ್ತಿ ೧.೧ ಇದ್ದು, ಅದು ASP.NET ಅಥವಾ .NET ಸಂಕ್ಷೇಪ ಚೌಕಟ್ಟನ್ನು ಬಳಸಿ ಚರ ಉಪಕರಣಗಳಿಗೆ ಕ್ರಮವಿಧಿಯನ್ನು ಅಭಿವೃದ್ಧಿಗೊಳಿಸಲು ಬೆಂಬಲಿಸುವ ಮೊದಲು ಬಿಡುಗಡೆಯಾದ ಆವೃತ್ತಿಯಾಯಿತು. ವಿಷುಯಲ್ C++ ಜೋಡಕದ ಶ್ರೇಣಿಗಳ-ಹೊಂದಾಣಿಕೆಯನ್ನು ಉತ್ತಮಗೊಳಿಸಲಾಯಿತು, ವಿಶೇಷವಾಗಿ ಭಾಗಶಃ ಸಿದ್ಧವಿನ್ಯಾಸಪುಟ ತಜ್ಞತೆಯ ವಿಷಯದಲ್ಲಿ. ವಿಷುಯಲ್ C++ ಸಲಕರಣೆಕೋಶ 2003 ಅದೇ C++ ಜೋಡಕದ ಬಿಟ್ಟಿ ಆವೃತ್ತಿಯಾಗಿದ್ದು ಅದನ್ನು ವಿಷುಯಲ್ ಸ್ಟುಡಿಯೋ .NET 2003ರೊಡನೆ IDE ರಹಿತವಾಗಿ ರವಾನಿಸಲ್ಪಟ್ಟಿತು; ಅದು ಈಗ ಲಭ್ಯವಿಲ್ಲ ಮತ್ತು ಅದಕ್ಕಿಂತಲೂ ಉನ್ನತ ಆವೃತ್ತಿಗಳು ಅದನ್ನು ಹಿನ್ನೆಲೆಗೆ ಸರಿಸಿವೆ. ವಿಷುಯಲ್ ಸ್ಟುಡಿಯೋ .NET 2003ರ ಒಳಾಂಗಣ ಆವೃತ್ತಿಯ ಸಂಖ್ಯೆಯು 7.1 ಮತ್ತು ಕಡತ ಮಾದರಿಯ ಆವೃತ್ತಿಯ ಸಂಖ್ಯೆಯು 8.0.[೪೭]
ವಿಷುಯಲ್ ಸ್ಟುಡಿಯೋ .NET 2003 ನಾಲ್ಕು ಆವೃತ್ತಿಗಳನ್ನು ಹೊರತಂದಿತು: ಅಕಾಡೆಮಿಕ್, ಪ್ರೊಫೆಷನಲ್, ಎಂಟರ್ಪ್ರೈಸ್ ಡೆವೆಲಪರ್ ಮತ್ತು ಎಂಟರ್ಪ್ರೈಸ್ ಆರ್ಕಿಟೆಕ್ಟ್. ವಿಷುಯಲ್ ಸ್ಟುಡಿಯೋ .NET 2003 ವಿಷುಯಲ್ ಸ್ಟುಡಿಯೋ .NET 2003 ಎಂಟರ್ಪ್ರೈಸ್ ಆರ್ಕಿಟೆಕ್ಟ್ ಆವೃತ್ತಿಯು ಮೈಕ್ರೋಸಾಫ್ಟ್ ವಿಷಿಯೋ 2002ರ ರಚನಾ ತಾಂತ್ರಿಕತೆಗಳನ್ನು ಅನುಷ್ಠಾನಗೊಳಿಸಿರುವುದನ್ನು ಒಳಗೊಂಡಿದ್ದು, ಅದರಲ್ಲಿ ಅನ್ವಯಿಕದ ವಿನ್ಯಾಸಕಲೆಯ ಸಂಯೋಜಿತ ರಚನಾ ಭಾಷೆ-ಆಧಾರಿತ ದೃಶ್ಯ ಪ್ರಾತಿನಿಧ್ಯಗಳನ್ನು ರಚಿಸಲು ಬೇಕಾದ ಸಲಕರಣೆಗಳಿರುತ್ತವೆ ಮತ್ತು ಒಂದು ಪ್ರಬಲವಾದ ಉದ್ದೇಶ-ಪಾತ್ರ ರಚನೆ(ORM) ಹಾಗೂ ತಾರ್ಕಿಕ ದತ್ತಸಂಚಯ ರಚನಾ ಪರಿಹಾರಗಳು ಇರುತ್ತವೆ. "ಎಂಟರ್ಪ್ರೈಸ್ ಟೆಂಪ್ಲೇಟ್ಗಳು"(ಪ್ರೇರಕ ಸಿದ್ಧವಿನ್ಯಾಸ ಪುಟಗಳು) ಸಹ ಪರಿಚಯಿಸಲ್ಪಟ್ಟು, ಹೆಚ್ಚಿನ ಅಭಿವೃದ್ಧಿ ತಂಡಗಳು ಸಂಕೇತಗೊಳಿಸುವ ಶೈಲಿಗಳನ್ನು ಶ್ರೇಷ್ಠವಾಗಿಸಲು ಮತ್ತು ಬಿಡಿಭಾಗಗಳ ಉಪಯೋಗ ಮತ್ತು ಗುಣವಿಶೇಷಗಳ ಸಿದ್ಧತೆಗಳ ಸುತ್ತಲೂ ನೀತಿಸಂಹಿತೆಗಳನ್ನು ಹೇರಲುಸಹಾಯಕವಾಗುತ್ತವೆ.
ಸೇವಾ ಕಟ್ಟು (ಸರ್ವೀಸ್ ಪ್ಯಾಕ್) 1 ಸೆಪ್ಟೆಂಬರ್ 13, 2006ರಂದು ಬಿಡುಗಡೆಯಾಯಿತು.[೪೮]
ವಿಷುಯಲ್ ಸ್ಟುಡಿಯೋ 2005
[ಬದಲಾಯಿಸಿ]ವ್ಹಿಡ್ಬೇ (ಪ್ಯುಜೆಟ್ ಸೌಂಡ್ ನಲ್ಲಿರುವ ವ್ಹಿಡ್ಬೇ ದ್ವೀಪವನ್ನು ಆಕರವಾಗಿಸಿಕೊಂಡು) ಎಂಬ ಸಂಕೇತನಾಮವನ್ನಿರಿಸಿಕೊಡ ವಿಷುಯಲ್ ಸ್ಟುಡಿಯೋ 2005 ಅಕ್ಟೋಬರ್ 2005ರಲ್ಲಿ ಪ್ರತ್ಯಕ್ಷಸಂಪರ್ಕದಲ್ಲಿ (ಆನ್-ಲೈನ್) ಬಿಡುಗಡೆಯಾಗಿ, ಕೆಲವು ವಾರಗಳ ನಂತರ ಚುಂಗಡಿ ಅಂಗಡಿ (ರೀಟೇಲ್ ಸ್ಟೋರ್ಸ್)ಗಳಿಗೆ ಬಿಡುಗಡೆ ಮಾಡಲಾಯಿತು. ಮೈಕ್ರೋಸಾಫ್ಟ್ ".NET" ಪಟ್ಟಿಯನ್ನು ವಿಷುಯಲ್ ಸ್ಟುಡಿಯೋ 2005ರಿಂದ ತೆಗೆದುಹಾಕತು(ಅಂತೆಯೇ ಯಾವ ಯಾವ ಉತ್ಪನ್ನಗಳು .NET ಪಟ್ಟಿಯನ್ನು ಹೊಂದಿದ್ದವೋ ಅವೆಲ್ಲದರಿಂದಲೂ), ಆದರೆ ಅದು ಇಂದಿಗೂ .NET ಚೌಕಟ್ಟನ್ನು ಪ್ರಮುಖವಾಗಿ ಉದ್ದೇಶಿಸುತ್ತದೆ; ಇದು ಆವೃತ್ತಿ 2.0ಗೆ ಉನ್ನತಗೊಳಿಸಲ್ಪಟ್ಟಿತ್ತು. ವಿಂಡೋಸ್ 2000ಕ್ಕೆ ದೊರೆತಿರುವ ಕೊನೆಯ ಆವೃತ್ತಿಯಿದು. ವಿಷುಯಲ್ ಸ್ಟುಡಿಯೋ 2005ರ ಒಳಾಂಗಣ ಆವೃತ್ತಿಯ ಸಂಖ್ಯೆಯು 8.0 ಮತ್ತು ಕಡತ ಮಾದರಿಯ ಆವೃತ್ತಿಯ ಸಂಖ್ಯೆಯು 9.0.[೪೭] ವಿಷುಯಲ್ ಸ್ಟುಡಿಯೋ 2005ರ ಸರ್ವೀಸ್ ಪ್ಯಾಕ್ 1 ಅನ್ನು ಮೈಕ್ರೋಸಾಫ್ಟ್ ಡಿಸೆಂಬರ್ 14, 2006ರಂದು ಬಿಡುಗಡೆ ಮಾಡಿತು.[೪೯] ಹೆಚ್ಚು ಆಧುನಿಕಗೊಳಿಸಿದ ವಿಂಡೋಸ್ ವಿಸ್ಟಾಗೆ ಹೊಂದಾವಣೆಯಾಗುವಂತಹ ಸರ್ವೀಸ್ ಪ್ಯಾಕ್ 1ಅನ್ನು ಜೂನ್ 3, 2007ರಂದು ಒದಗಿಸಲಾಯಿತು.[೫೦]
ವಿಷುಯಲ್ ಸ್ಟುಡಿಯೋ 2005, .NET ಚೌಕಟ್ಟು 2.0ರಲ್ಲಿ ಪರಿಚಯಿಸಲ್ಪಟ್ಟ ಎಲ್ಲಾ ನೂತನ ಗುಣಗಳನ್ನೂ, ಜೆನೆರಿಕ್ಸ್ ಮತ್ತು ASP.NET 2.0.ಗಳನ್ನೂ ಸೇರಿದಂತೆ,ಬೆಂಬಲಿಸುವ ಹಾಗೆ ಉನ್ನತಗೊಳಿಸಲ್ಪಟ್ಟಿತು. ವಿಷುಯಲ್ ಸ್ಟುಡಿಯೋದಲ್ಲಿನ ಇಂಟೆಲಿಸೆನ್ಸ್ ಲಕ್ಷಣಗಳನ್ನು ಜೆನೆರಿಕ್ಸ್ ಗಾಗಿ ಉತ್ಕೃಷ್ಟಗೊಳಿಸಲಾಯಿತು ಮತ್ತು ನವೀನ ಕ್ರಮವಿಧಿಗಳ ವಿಧಾನಗಳನ್ನು ASP.NET ಜಾಲ ಸೇವೆಗಳಿಗೆ ಬೆಂಬಲಿಸಲೋಸುಗ ಜೋಡಣೆ ಮಾಡಲಾಯಿತು. ವಿಷುಯಲ್ ಸ್ಟುಡಿಯೋ 2005ರಲ್ಲಿ ಸ್ಥಾನಿಕ ಜಾಲ ಪೂರೈಕೆ ಗಣಕವನ್ನು IIS ನಿಂದ ಹೊರತಾಗಿ ಹೊಂದಿದ್ದು, ಇದನ್ನು ASP.NET ಅನ್ವಯಿಕೆಗಳನ್ನು, ಅಭಿವೃದ್ಧಿ ಮತ್ತು ಪರೀಕ್ಷಾ ಸಮಯಗಳಲ್ಲಿ, ಸ್ಥಾಪಿಸಲು ಉಪಯೋಗಿಸಬಹುದು. ಇದು ಎಲ್ಲಾ SQL ಪೂರೈಕೆಗಣಕ 2005 ದತ್ತಸಂಚಯಗಳನ್ನೂ ಬೆಂಬಲಿಸುತ್ತದೆ. ದತ್ತಸಂಚಯ ವಿನ್ಯಾಸಕಗಳನ್ನು ಆಧುನಿಕಗೊಳಿಸಿ ADO.NET 2.0ವನ್ನು ಬೆಂಬಲಿಸುವಂತೆ ಮಾಡಲಾಯಿತು, ಇದು .NET ಚೌಕಟ್ಟು 2.0ವಿನಲ್ಲಿ ಒಳಗೊಂಡಿದೆ. C++ ಸಹ ಇದೇ ರೀತಿ C++/CLI ಜೋಡಣೆಯ ಮೂಲಕ ಉತ್ತಮಗೊಳಿಸಲ್ಪಟ್ಟು, ಇದು ವ್ಯವಸ್ಥಿತ C++ ಅನ್ನು ಬದಿಗೊತ್ತಿ ಆ ಸ್ಥಾನವನ್ನು ತುಂಬಲಿದೆ.[೫೧] ವಿಷುಯಲ್ ಸ್ಟುಡಿಯೋ 2005ರ ಇತರ ನೂತನ ಲಕ್ಷಣಗಳಲ್ಲಿ "ಡಿಪ್ಲಾಯ್ಮೆಂಟ್ ಡಿಸೈನರ್"(ವ್ಯವಸ್ಥಿತ ವಿಂಗಡಣ ವಿನ್ಯಾಸಕ) ಎಂಬುದು ಅನ್ವಯಿಕ ವಿನ್ಯಾಸಗಳು ವ್ಯವಸ್ಥಿತ ವಿಂಗಡಣೆಗೆ ಮುನ್ನ ಸ್ಥಿರೀಕೃತವಾಗಲು ಅನುವಾಗಿಸುತ್ತದೆ; ಇದು ASP.NET 2.0 ಜೊತೆಗೂಡಿ ಜಾಲ ಪ್ರಕಟಣೆಗಾಗಿ ಉತ್ತಮತೆಗೊಂಡ ಗಣಕ ವಾತಾವರಣವನ್ನು ನಿರ್ಮಿಸುತ್ತದೆ ಮತ್ತು ವಿವಿಧ ರೀತಿಯ ಗ್ರಾಹಕ ಹೊರೆಗಳನ್ನು ಹೇರಿದಾಗ ಅನ್ವಯಿಕದ ಕಾರ್ಯಕ್ಷಮತೆ ಅರಿಯಲು ಹೊರೆ ಪರೀಕ್ಷೆ ನಡೆಸುತ್ತದೆ. ವಿಷುಯಲ್ ಸ್ಟುಡಿಯೋ 2005 ವ್ಯಾಪಕವಾದ 64-ಬಿಟ್ ಗಳ ಬೆಂಬಲವನ್ನು ಸಹ ಸೇರಿಸಿಕೊಂಡಿತು. ಅಭಿವೃದ್ಧಿ ಗಣಕವಾತಾವರಣವು ಕೇವಲ 32-ಬಿಟ್ ಅನ್ವಯಿಕವಷ್ಟೇ ಆದರೂ, ವಿಷುಯಲ್ C++ 2005 x86-64 (AMD64 ಮತ್ತು ಇಂಟೆಲ್ 64) ಹಾಗೂ IA-64 (Itanium)ಗಳ ಜೋಡಣೆಗೆ ಬೆಂಬಲವೀಯುತ್ತದೆ.[೫೨] ನೆಲೆಗಟ್ಟು SDK 64-ಬಿಟ್ ಜೋಡಕಗಳು ಮತ್ತು 64-ಬಿಟ್ ನ ಗ್ರಂಥಾಲಯ ಆವೃತ್ತಿಗಳನ್ನು ಸೇರಿಸಿಕೊಂಡಿತು.
ಮೈಕ್ರೋಸಾಫ್ಟ್ ಅನ್ವಯಿಕೆಗಳಿಗೆ ವಿಷುಯಲ್ ಸ್ಟುಡಿಯೋ ಸಲಕರಣೆಗಳು ಎಂಬುದು ಅನ್ವಯಿಕಗಳಿಗೆ ವಿಷುಯಲ್ ಬೇಸಿಕ್ (VBA) ಮತ್ತು VSA (ಅನ್ವಯಿಕೆಗಳಿಗೆ ವಿಷುಯಲ್ ಸ್ಟುಡಿಯೋ) ಮುಂದಿನ ಆವೃತ್ತಿಗಳೆಂದು ಘೋಷಿಸಿತು. VSTA 1.0ಅನ್ನು ಆಫೀಸ್ 2007ರೊಡೆನೆ ತಯಾರಿಕೆಗೆಂದು ಬಿಡುಗಡೆ ಮಾಡಲಾಯಿತು. ಅದು ಆಫೀಸ್ 2007 ಅನ್ನು ಒಳಗೊಂಡಿದ್ದು, ವಿಷುಯಲ್ ಸ್ಟುಡಿಯೋ 2005 SDKಯ ಒಂದು ಭಾಗವೂ ಆಗಿದೆ.VSTA ವಿಷುಯಲ್ ಸ್ಟುಡಿಯೋ 2005ರ IDE ಮೇಲೆ ಆಧಾರಿತವಾದ ಗ್ರಾಹಕೀಕೃತ IDEಯನ್ನು ಹೊಂದಿದೆ ಮತ್ತು ಅನ್ವಯಿಕಗಳಲ್ಲಿ ಹುದುಗಿಸಬಹುದಾದ ಚಾಲನವೇಳೆಯನ್ನು ಹೊಂದಿದ್ದು ಇದು .NET ವಸ್ತು ಮಾದರಿಯ ಮೂಲಕ ಗುಣಲಕ್ಷಣಗಳು ಬಹಿರಂಗಗೊಳ್ಳಲು ಸಹಾಯಕವಾಗುತ್ತದೆ. ಆಫೀಸ್ 2007 ಅನ್ವಯಿಕಗಳು VBAಯೊಂದಿಗೆ ಸಂಯೋಜಿತವಾಗುವುದು ಮುಂದುವರಿದಿರುತ್ತದೆ, ಇದಕ್ಕೆ ಅಪವಾದವೆಂದರೆ ಇಂಪೋಪಾಥ್ 2007 - ಇದು VSTAಯೊಡನೆ ಸಂಯೋಜಿತವಾಗುತ್ತದೆ. ಪ್ರಸ್ತುತ VSTA ಆವೃತ್ತಿಯು (ವಿಷುಯಲ್ ಸ್ಟುಡಿಯೋ 2008 ಆಧಾರಿತ ಆವೃತ್ತಿ 2.0)ಏಪ್ರಿಲ್ 2008ರಲ್ಲಿ ಬಿಡುಗಡೆಯಾಯಿತು.[೫೩] ಇದು ಮೊದಲ ಆವೃತ್ತಿಗಿಂತಲೂ ಗಮನಾರ್ಹ ರೀತಿಯಲ್ಲಿ ವಿಭಿನ್ನವಾಗಿದ್ದು ಕ್ರಿಯಾತ್ಮಕ ಕ್ರಮವಿಧಿವಿಧಾನ ಮತ್ತು WPF, WCF, WF, LINQ ಮತ್ತು .NET 3.5 ಚೌಕಟ್ಟುಗಳಿಗೆ ಬೆಂಬಲ ನೀಡುವಂತಹ ಲಕ್ಷಣಗಳನ್ನು ಹೊಂದಿದೆ.
ವಿಷುಯಲ್ ಸ್ಟುಡಿಯೋ 2008
[ಬದಲಾಯಿಸಿ]ವಿಷುಯಲ್ ಸ್ಟುಡಿಯೋ 2008 [೫೪] ಮತ್ತು ವಿಷುಯಲ್ ಸ್ಟುಡಿಯೋ ಟೀಮ್ ಸಿಸ್ಟಮ್ಸ್ 2008,[೫೫] ಸಂಕೇತನಾಮ ಓರ್ಕಾಸ್ ಎಂದಿದ್ದು, MSDN ಚಂದಾದಾರರಿಗೆ .NET ಚೌಕಟ್ಟು 3.5ರೊಡನೆ ನವೆಂಬರ್ 19, 2007ರಂದು ಬಿಡುಗಡೆಮಾಡಲಾಯಿತು. ವ್ಹಿಡ್ಬೇಯಂತೆಯೇ, ಓರ್ಕಾಸ್ ಎಂಬ ಸಂಕೇತನಾಮವೂ ಸಹ ಪ್ಯುಜೆಟ್ ಸೌಂಡ್ ನಲ್ಲಿನ ಓರ್ಕಾಸ್ ದ್ವೀಪದ ಹೆಸರನ್ನಾಧಾರಿಸಿ ಇಡಲ್ಪಟ್ಟಿದೆ. ವಿಷುಯಲ್ ಸ್ಟುಡಿಯೋ 2008 IDEಯ ಮೂಲ ಸಂಕೇತವು ಹಂಚಿಕೊಂಡ ಮೂಲ ಪರವಾನಗಿಯಡಿಯಲ್ಲಿ ಮೈಕ್ರೋಸಾಫ್ಟ್ ನ ಸಹಭಾಗಿಗಳಿಗೆ ಮತ್ತು ISVಗಳಿಗೆ ದೊರಕುತ್ತದೆ.[೫೬] ವಿಷುಯಲ್ ಸ್ಟುಡಿಯೋ 2008ರ ಸರ್ವೀಸ್ ಪ್ಯಾಕ್ 1 ಅನ್ನು ಮೈಕ್ರೋಸಾಫ್ಟ್ ಆಗಸ್ಟ್ 11, 2008ರಂದು ಬಿಡುಗಡೆಮಾಡಿತು.[೫೭] ವಿಷುಯಲ್ ಸ್ಟುಡಿಯೋ 2008ರ ಒಳಾಂಗಣ ಆವೃತ್ತಿಯ ಸಂಖ್ಯೆಯು 9.0 ಮತ್ತು ಕಡತ ಮಾದರಿಯ ಆವೃತ್ತಿಯ ಸಂಖ್ಯೆಯು 10.0.
ವಿಷುಯಲ್ ಸ್ಟುಡಿಯೋ 2008 ವಿಂಡೋಸ್ ವಿಸ್ಟಾ, 2007 ಆಫೀಸ್ ಸಿಸ್ಟಮ್ ಮತ್ತು ವೆಬ್ ಅಪ್ಲಿಕೇಷನ್ಸ್ ಗಳನ್ನು ಅಭಿವೃದ್ಧಿಗೊಳಿಸುವ ಉದ್ದೇಶವನ್ನು ಹೊಂದಿ, ತತ್ಕಾರಣ ಕಾರ್ಯಗತವಾಗಿದೆ. ವಿಷುಯಲ್ ಡಿಸೈನ್ ಗಾಗಿ ಮೈಕ್ರೋಸಾಫ್ಟ್ ಎಕ್ಸ್ ಪ್ರೆಷನ್ ಡೆಬ್ ನಿಂದ ಪ್ರಭಾವಿತವಾದ ಒಂದು ನೂತನ ವಿಂಡೋಸ್ ಪ್ರೆಸೆಂಟೇಷನ್ ಫೌಂಡೇಷನ್ ವಿಷುಯಲ್ ಡಿಸೈನರ್ ಮತ್ತು ನೂತನ HTML/CSS ಸಂಪಾದಕಗಳನ್ನು ಸೇರಿಸಲಾಯಿತು. J# ಸೇರಿಸಲಾಗಿಲ್ಲ. ವಿಷುಯಲ್ ಸ್ಟುಡಯಯೋ 2008 .NET 3.5 ಚೌಕಟ್ಟನ್ನು ಅವಲಂಬಿಸಿದ್ದು, ತನ್ಮೂಲಕ ಅಪ್ರಯತ್ನವಾಗಿಯೇ ಸಂಕಲಿತ ಜೋಡಣೆಗಳನ್ನು ಸಂರಚಿಸುವ ಮೂಲಕ .NET ಫ್ರೇಂವರ್ಕ್ 3.5 ನಲ್ಲಿ ಚಲಿಸಲು ಅನುವಾಗಿಸುತ್ತದೆ, ಆದರೆ ಅದು ವಿವಿಧೋದ್ದೇಶಗಳನ್ನೂ ಬೆಂಬಲಿಸುವುದರಿಂದ ಅಭಿವೃದ್ಧಿಕಾರಕಗಳು ಯಾವ .NET ಫ್ರೇಂವರ್ಕ್ ನ ಆವೃತ್ತಿಯಲ್ಲಿ(2.0, 3.0, 3.5, ಸಿಲ್ವರ್ ಲೈಟ್ ಕೋರ್CLR ಅಥವಾ .NET ಸಂಕ್ಷೇಪ ಚೌಕಟ್ಟುಗಳಲ್ಲಿ ಯಾವುದಾದರೂ) ತಮ್ಮ ಜೋಡಣೆಗಳು ಸಾಗಬೇಕೆಂದು ಆಯ್ಕೆ ಮಾಡಬಹುದು. ವಿಷುಯಲ್ ಸ್ಟುಡಿಯೋ 2008 ಸಂಕೇತ ವಿಶ್ಲೇಷಕ ಸಾಧನಗಳನ್ನೂ ಒಳಗೊಂಡಿದ್ದು, ಅವುಗಳ ಪೈಕಿ ನೂತನ ಸಂಕೇತ ಮಾಪನ ಸಲಕರಣೆ(ಟೀಂ ಆವೃತ್ತಿ ಮತ್ತು ಟೀಂ ಸ್ಯೂಟ್ ಆವೃತ್ತಿಗಳಲ್ಲಿ ಮಾತ್ರ)ಯೂ ಸೇರಿದೆ.[೫೮] ವಿಷುಯಲ್ C++ಗಾಗಿ ವಿಷುಯಲ್ ಸ್ಟುಡಿಯೋ ಮೈಕ್ರೋಸಾಫ್ಟ್ ಫೌಂಡೇಷನ್ ಶ್ರೇಣಿಗಳ ಒಂದು ನೂತನ ಆವೃತ್ತಿ(MFC 9.0)ಯನ್ನು ಸೇರಿಸಿದ್ದು, ಈ ಜೋಡಣೆಯು ವಿಷುಯಲ್ ಶೈಲಿಗಳನ್ನು ಮತ್ತು UI ಹತೋಟಿಗಳನ್ನು ವಿಂಡೋಸ್ ವಿಸ್ತಾದೊಂದಿಗೆ ಪರಿಚಯಿಸಿದೆ.[೫೯] ಸ್ಥಾನಿಕ ಮತ್ತು ವ್ಯವಸ್ಥಿತ ಸಂಕೇತ ಪರಸ್ಪರಕಾರ್ಯವಹಣೆಗಾಗಿ ವಿಷುಯಲ್ C++ STL/CLR ಎಂಬ C++ ಸ್ಟ್ಯಾಂಡರ್ಡ್ ಪೂರ್ವಸಿದ್ಧತಾ ಪಟ್ಟಿಯ ಗ್ರಂಥಾಲಯ (STL) ಪಾತ್ರಗಳನ್ನು ಮತ್ತು ವ್ಯವಸ್ಥಿತ ಸಂಕೇತಗಳಿಗಾಗಿ ಕ್ರಮಾವಳಿಯನ್ನು ಪರಿಚಯಿಸಿತು. C++/CLI ವ್ಯವಸ್ಥಿತ ವಸ್ತುಗಳನ್ನಾಧರಿಸಿ ಕಾರ್ಯವೆಸಗುವ STL-ಮಾದರಿಯ ಪಾತ್ರಗಳನ್ನು(ತುಂಬಿಡಲು ಉಪಯೋಗಿಸುವ ಸಾಧನಗಳು), ಇಂಟೆರೇಟರ್ ಗಳು ಮತ್ತು ಕ್ರಮಾವಳಿಗಳನ್ನು STL/CLR ವಿವರಿಸುತ್ತದೆ.[೬೦][೬೧]
ವಿಷುಯಲ್ ಸ್ಟುಡಿಯೋ 2008 XAML ಆಧಾರಿತ ವಿನ್ಯಾಸಕ (ಸಂಕೇತನಾಮ Cider ), ಕಾರ್ಯಕ್ರಮಣಸೂಚಕ ವಿನ್ಯಾಸಕ, LINQ ನಿಂದ SQL ವಿನ್ಯಾಸಕ (ನಕ್ಷೆರಚನಾ ವಿಧಿಗಳ ವಿವರಣೆಗಾಗಿ ಮತ್ತು ವಸ್ತು ಕೋಶಾಂತಕಾರಕ SQL ಪೂರೈಕೆ ಗಣಕ ದತ್ತಕ್ಕಾಗಿ ), XSLT ದೋಷಸೂಚಕ, ಜಾವಾಸ್ಕ್ರಿಪ್ಟ್ ಇಂಟೆಲಿಸೆನ್ಸ್ ಬೆಂಬಲ, ಜಾವಾಸ್ಕ್ರಿಪ್ಟ್ ದೋಷಸೂಚಕ ಬೆಂಬಲ, UAC ಮ್ಯಾನಿಫೆಸ್ಟ್ ಗಳಿಗೆ ಬೆಂಬಲ, ಒಂದು ಸಮಸಾಮಯಿಕ ನಿರ್ಮಾಣ ವ್ಯವಸ್ಥೆ, ಮತ್ತು ಇತರ ಲಕ್ಷಣಗಳನ್ನು ಒಳಗೊಂಡಿದೆ.[೬೨] ವೀಡೋನ್ ಫಾರ್ಮ್ಸ್ ಮತ್ತು WPFಗಳೆರಡಕ್ಕೂ ಇದು ಹೆಚ್ಚುವರಿಯಾದ UI ವಿಡ್ಜೆಟ್ ಗಳೊಂದಿಗೆ ಪೂರೈಸಲಾಗುತ್ತದೆ. ಅಲ್ಲದೆ ದತ್ತವಾದ ಯೋಜನೆಯಲ್ಲಿ ಅನೇಕ ತಂತುಗಳ ಹರಹಿನ ಮೂಲಕ ಏಕಕಾಲದಲ್ಲಿ ಅನೇಕ ಮೂಲ ಕಡತಗಳನ್ನು ಸಂಕಲಿಸಲು (ಮತ್ತು ಕಾರ್ಯಕ್ಷಮ ಕಡತವನ್ನು ರಚಿಸಲು)ಅನೇಕತಂತುಗಳುಳ್ಳ ನಿರ್ಮಾಣ ಎಂಜಿನ್ (MSBuild)ಅನ್ನೂ ಒಳಗೊಂಡಿದೆ. ವಿಂಡೋಸ್ ವಿಸ್ತಾದಲ್ಲಿ ಪರಿಚಯಿಸಿರುವ PNG ಸಂಕ್ಷೇಪಗೊಂಡ ಲಾಂಛನ ಆಕರಗಳ ಜೋಡಣಾಕಾರ್ಯಕ್ಕೂ ಇದು ಬೆಂಬಲವನ್ನು ಕೊಡುತ್ತದೆ. XML ಸ್ಕೀಮಾದ ಒಂದು ವಿಸ್ತರಿತ ವಿನ್ಯಾಸಕವು ವಿಷುಯಲ್ ಸ್ಟುಡಿಯೋ 2008ರ ಬಿಡುಗಡೆಯ ಕೆಲವು ದಿನಗಳ ನಂತರ ಪ್ರತ್ಯೇಕವಾಗಿ ರವಾನಿಸಲಾಗುತ್ತದೆ.[೬೩]
ವಿಷುಯಲ್ ಸ್ಟುಡಿಯೋ ದೋಷಸೂಚಕವು ಅನೇಕ-ತಂತುಗಳ ಅನ್ವಯಿಕೆಗಳ ದೋಷಸೂಚನೆಯನ್ನು ಸರಳಗೊಳೆಸುವ ಲಾಕ್ಷಣಿಕಗಳನ್ನು ಉದ್ದೇಶವಾಗಿರಿಸಿಕೊಂಡಿದೆ. ದೋಷಸೂಚಕ ವಿಧಿಯಲ್ಲಿ, ಎಲ್ಲಾ ತಂತುಗಳನ್ನು ಪಟ್ಟಿಮಾಡುವ ತಂತು ಕಿಟಕಿಯು, ತಂತುವಿನ ಮೇಲೆ ಸುಳಿಯುತ್ತಾ ಆ ತಂತುವಿನ ರಾಶಿಯ ಜಾಡನ್ನು ಸಲಕರಣಾಗ್ರಗಳಲ್ಲಿ ಪ್ರದರ್ಶಿಸುತ್ತದೆ.[೬೪] ಸುಲಭ ಗುರುತಿಸುವಿಕೆಗಾಗಿ ಕಿಟಕಿಯಿಂದಲೇ ಆ ತಂತುಗಳನ್ನು ನೇರವಾಗಿ ಹೆಸರಿಸಬಹುದು ಮತ್ತು ಚಿಹ್ನೆಗಳನ್ನು ಅಳವಡಿಸಬಹುದು.[೬೫] ಜೊತೆಗೆ, ಸಂಕೇತ ಕಿಟಕಿಯಲ್ಲಿ, ಪ್ರಸ್ತುತ ತಂತುವಿನಲ್ಲಿ ಪ್ರಸ್ತುತ ಸಮಯದಲ್ಲಿ ನಡೆಯುತ್ತಿರುವ ಸೂಚನೆಗಳ ಸ್ಥಾನಗಳನ್ನು ಸೂಚಿಸುವುದಲ್ಲದೆ, ಇತರ ತಂತುಗಳಲ್ಲಿ ಪ್ರಸ್ತುತ ಸಮಯದಲ್ಲಿ ನಡೆಯುತ್ತಿರುವ ಸೂಚನೆಗಳನ್ನೂ ಸಹ ಸೂಚಿಸಲಾಗುತ್ತದೆ.[೬೫][೬೬] ವಿಷುಯಲ್ ಸ್ಟುಡಿಯೋ ದೋಷಸೂಚಕವು .NET 3.5 ಚೌಕಟ್ಟಿನ ಬೇಸ್ ಕ್ಲಾಸ್ ಲೈಬ್ರರಿ(BCL) ಯ ಸಂಯೋಜಿತ ದೋಷಸೂಚಕಗಳನ್ನು ಬೆಂಬಲಿಸಿದ್ದು,ಇದು ಕ್ರಿಯಾತ್ಮಕವಾಗಿ BCL ಮೂಲ ಸಂಕೇತ ಹಾಗೂ ದೋಷಸೂಚಕ ಚಿಹ್ನೆಗಳನ್ನು ಡೌನ್ ಲೋಡ್ ಮಾಡಲು ಮತ್ತು BCL ಮೂಲಕ್ಕೆ ದೋಷಸೂಚನಾ ಸಮುಗಳಲ್ಲಿ ಅಡಿಯಿಡಲು ಬೆಂಬಲಿಸುತ್ತದೆ.[೬೭] ಪ್ರಸ್ತುತ BCL ಮೂಲದ ಒಂದು ನಿಯಮಿತ ಉಪಜೋಡಿಯು ಲಭ್ಯವಿದ್ದು, ವರ್ಷದ ಮುಮದಿನ ದಿನಗಳಲ್ಲಿ ಹೆಚ್ಚು ಗ್ರಂಥಾಲಯ ಬೆಂಬಲವನ್ನು ಪಡೆಯುವ ಹಂಚಿಕೆಯಿದೆ.
ವಿಷುಯಲ್ ಸ್ಟುಡಿಯೋ 2010
[ಬದಲಾಯಿಸಿ]This article is outdated. |
ವಿಷುಯಲ್ ಸ್ಟುಡಿಯೋ 2010ರ ಕಡೆಯ ಆವೃತ್ತಿಯು ಏಪ್ರಿಲ್ 12-14ರ ಡೆವ್ ಕನೆಕ್ಷನ್ಸ್ ಕಾಂಫೆರೆನ್ಸ್ ನಲ್ಲಿ ಪ್ರಸ್ತುತಪಡಿಸುವುದೆಂದು ನಿಶ್ಚಿತವಾಗಿದೆ.[೬೮] ವಿಷುಯುಲ್ ಸ್ಟುಡಿಯೋವೇ ಏಪ್ರಿಲ್ 12, 2010ರಂದು ಬಿಡುಗಡೆಮಾಡಲ್ಪಡುವುದು ಎಂದು ಮೈಕ್ರೋಸಾಫ್ಟ್ನ ಜಾಲತಾಣವು ಉಲ್ಲೇಖಿಸಿದೆ.[೬೯]
ವಿಷುಯಲ್ ಸ್ಟುಡಿಯೋ 2010 IDEಯು ಮರುವಿನ್ಯಾಸಗೊಳಿಸಲ್ಪಟ್ಟಿದ್ದು, ಇದು, ಮೈಕ್ರೋಸಾಫ್ಟ್ ಪ್ರಕಾರ, UI ಸಂಘಟನೆಗಳನ್ನು ತೆರವುಗೊಳಿಸುತ್ತದೆ ಮತ್ತು "ಗಲಿಬಿಲಿ ಮತ್ತು ಸಂಕೀರ್ಣತೆಗಳನ್ನು ತಗ್ಗಿಸುತ್ತದೆ."[೭೦] ನೂತನ IDEಯು ಅನೇಕ ದಸ್ತಾವೇಜು ಕಿಟಕಿಗಳನ್ನು ಮತ್ತು ತೇಲುವ ಸಲಕರಣೆ ಕಿಟಕಿ[೭೦]ಗಳನ್ನು ಬೆಂಬಲಿಸುವುದಲ್ಲದೆ, ಉತ್ತಮಗೊಂಡ ಬಗೆಯಲ್ಲಿ ಅನೇಕ-ಪ್ರದರ್ಶಕ ಬೆಂಬಲವನ್ನು ಮುಂದೊಡ್ಡುತ್ತದೆ. IDE ಕವಚವು ವಿಂಡೋಸ್ ಪ್ರೆಸೆಂಟೇಷನ್ ಫೌಂಡೇಷನ್ (WPF)[೭೧]ಮೂಲಕ ಮರುಲಿಖಿತವಾಗಿದ್ದು,ಒಳಾಂಗಣಗಳನ್ನು ವ್ಯವಸ್ಥಿತ ವಿಸ್ತರಣಾ ಚೌಕಟ್ಟು ಬಳಸುವುದರ ಮೂಲಕ ಮರುವಿನ್ಯಾಸಗೊಳಿಸಲ್ಪಟ್ಟಿದ್ದು, ಅದು IDEಗಳ ನಡವಳಿಕೆಯನ್ನು ಮಾರ್ಪಡಿಸುವ ಆಳವಡಿಕೆಗಳನ್ನು ಅನುಮತಿಸುತ್ತಿದ್ದ IDEಯ ಹಿಂದಿನ ಆವೃತ್ತಿಗಳಿಗಿಂತಲೂ ಹೆಚ್ಚಿನ ವಿಸ್ತರಣಾ ಬಿಂದುಗಳನ್ನು ಮುಂದೊಡ್ಡುತ್ತದೆ.[೭೨] ನೂತನ ಬಹು-ಕ್ರಿಯಾಮಾಲೆ ಕ್ರಮವಿಧಿ ಭಾಷೆಯಾದ ML-ನ ಪ್ರತಿರೂಪವಾದ F# ವಿಷುಯಲ್ ಸ್ಟುಡಿಯೋ 2010ರ ಒಂದು ಭಾಗವಾಗಲಿದೆ;[೭೩] ಓಸ್ಲೋ ಇನಿಷಿಯೇಟಿವ್ ನ ಅಂಗಗಳಾದ ಗ್ರಾಂಥಿಕ ಮಾದರಿಯ ಭಾಷೆಯಾದ M ಮತ್ತು ವಿಷುಯಲ್ ಮಾದರಿ ವಿನ್ಯಾಸಕ ಕ್ವಾಡ್ರೆಂಟ್ ಸಹ ಇದರಲ್ಲಿ ಅಡಕವಾಗಿರುತ್ತವೆ.[೭೪]
ವಿಷುಯಲ್ ಸ್ಟುಡಿಯೋ 2010 .NET ಚೌಕಟ್ಟಿನ 4 ಆವೃತ್ತಿಗಳಲ್ಲಿ ಬರಲಿದೆ ಮತ್ತು ವಿಂಡೋಸ್ 7 ಉದ್ದೇಶಿತ ಅನ್ವಯಿಕೆಗಳ ಅಭಿವೃದ್ಧಿಯನ್ನು ಬೆಂಬಲಿಸಲಿದೆ.[೭೦] ಇದು IBM DB2 ಮತ್ತು ಒರಾಕಲ್ ದತ್ತಸಂಚಯಗಳನ್ನು (ಹೆಚ್ಚಿನ ಮಾಹಿತಿಗಾಗಿ IBM.com ಮತ್ತು TeamFuze.net ನೋಡಿ), ಅಲ್ಲದೆ ಮೈಕ್ರೋಸಾಫ್ಟ್ SQL ಗಣಕಪೂರೈಕೆಗಳನ್ನೂ ಬೆಂಬಲಿಸುತ್ತದೆ.[೭೦] ಪರಸ್ಪರ ಚಟುವಟಿಕೆ ವಿನ್ಯಾಸಕವನ್ನಲ್ಲದೆ ಮೈಕ್ರೋಸಾಫ್ಟ್ ಸಿಲ್ವರ್ ಲೈಟ್ ಅನ್ವಯಿಕಗಳನ್ನು ಅಭಿವೃದ್ಧಿಗೊಳಿಸಲು ಇದರಲ್ಲಿ ಸಂಯೋಜಿತ ಬೆಂಬಲವಿರುತ್ತದೆ.[೭೦] ವಿಷುಯಲ್ ಸ್ಟುಡಿಯೋ 2010 ಏಕಕಾಲಿಕ ಕ್ರಮವಿಧಿಗಳನ್ನು ಸರಳಗೊಳಿಸುವ ಅನೇಕ ಸಲಕರಣೆಗಳನ್ನು ಒಡ್ಡಲಿದೆ; .NET ಚೌಕಟ್ಟಿಗೆ ಸೇರಿದ ಸಮಾನಾಂತರ ವಿಸ್ತರಣೆಗೆ ಮತ್ತು ಸ್ಥಾನಿಕ ಸಂಕೇತಗಳಿಗಾಗಿ ಸಮಾನಾಂತರ ಕ್ರಮ ಗ್ರಂಥಾಲಯಗಳಲ್ಲದೆ, ವಿಷುಯಲ್ ಸ್ಟುಡಿಯೋ 2010 ಸಮಾನಾಂತರ ಅನ್ವಯಿಕೆಗಳ ದೋಷಸೂಚಕಗಳಿಗೆ ಬೇಕಾದ ಸಲಕರಣೆಗಳನ್ನೂ ಒಳಗೊಂಡಿರುತ್ತದೆ. ಈ ಹೊಸ ಸಾಧನಗಳು ಏಕಕಾಲಿಕ ಕಾರ್ಯಗಳನ್ನು ಅನುಮತಿಸುತ್ತವೆ ಮತ್ತು ಅವುಗಳ ಓಟಸಮಯ ರಾಶಿಗಳನ್ನು ದರ್ಶಿಸಲು ಅನುವು ಮಾಡಿಕೊಡುತ್ತವೆ.[೭೫] ಸಮಾನಾಂತರ ಅನ್ವಯಿಕೆಗಳ ರೂಪರೇಖೆಗಳನ್ನು ತಂತುಗಳ ನಿರೀಕ್ಷಾ ಸಮಯಗಳ ಮತ್ತು ತಂತುಗಳ ಸಂಸ್ಕರಣ ಮೂಲಗಳಿಂದ ವರ್ಗಾಂತರಗೊಳ್ಳುವ ಪೂರ್ವದರ್ಶನಕ್ಕಾಗಿ ಉಪಯೋಗಿಸುವ ಸಾಧನಗಳು ಇದರಲ್ಲಿವೆ.[೭೬] ಇಂಟೆಲ್ ಮತ್ತು ಮೈಕ್ರೋಸಾಫ್ಟ್ ನವರು ಜಂಟಿಯಾಗಿ ವಿಷುಯಲ್ ಸ್ಟುಡಿಯೋ 2010[೭೭]ರಲ್ಲಿನ ಒಂದು ನೂತನ ಏಕಕಾಲಿಕ ಓಟಸಮಯದ ಬೆಂಬಲ ಮಾಡುವುದಾಗಿ ಹೇಳಿವೆ ಮತ್ತು ಇಂಟೆಲ್ ಸಮಾನಾಂತರ ಸ್ಟುಡಿಯೋದಲ್ಲಿ ಸಮಾನಾಂತರಿತ ಬೆಂಬಲವನ್ನು ವಿಷುಯಲ್ ಸ್ಟುಡಿಯೋಗೆ ಜೋಡಣೆಯಾಗಿ ಆರಂಭಿಸಿದೆ.[೭೮]
ವಿಷುಯಲ್ ಸ್ಟುಡಿಯೋ 2010 ಸಂಕೇತ ಸಂಪಾದಕವು ಈಗ ಆಕರಗಳನ್ನು ಎತ್ತಿತೋರಿಸುತ್ತದೆ; ಯಾವುದೇ ಚಿಹ್ನೆಯನ್ನು ಆಯ್ಕೆ ಮಾಡಿದಾಗಲೂ, ಆ ಚಿಹ್ನೆಯ ಇತರ ಎಲ್ಲಾ ಉಪಯೋಗಗಳೂ ಪ್ರಕಾಶಿತವಾಗುತ್ತವೆ.[೭೯] ಅಲ್ಲದೆ C++, C# ಮತ್ತು VB.NET ಕ್ರಮವಿಧಿಗಳಲ್ಲಿ ಎಲ್ಲಾ ಚಿಹ್ನೆಗಳಲ್ಲಿಯೂ ಹೆಚ್ಚುವರಿ ಶೋಧವನ್ನು ನಡೆಸುವ ಲಾಕ್ಷಣಿಕವಾದ ಕ್ಷಿಪ್ರ ಶೋಧ ವನ್ನೂ ಒಳಗೊಂಡಿದೆ. ಕ್ಷಿಪ್ರ ಶೋಧವು ಸಬ್ ಸ್ಟ್ರೀಂಗ್ ಹೊಂದುವಿಕೆ ಮತ್ತು ಕ್ಯಾಮಲ್ ಕೇಸ್ ಶೋಧಗಳಿಗೆ ಅನುವು ಮಾಡಿಕೊಡುತ್ತದೆ.[೭೯] ಕರೆ ಕ್ರಮಾನುಗತ ಲಕ್ಷಣಗಳು ಅಭಿವೃದ್ಧಿಕಾರಕವು ಪ್ರಸ್ತುತ ಮಾದರಿಯಿಂದ ಆಹ್ವಾನಿತವಾದ ಹಾಗೂ ಪ್ರಸ್ತುತ ಮಾದರಿಯನ್ನು ಆಹ್ವಾನಿಸಿದ ಎಲ್ಲಾ ಮಾದರಿಗಳನ್ನೂ ನೋಡಲು ಅನುಮತಿಸುತ್ತವೆ.[೭೯] ವಿಷುಯಲ್ ಸ್ಟುಡಿಯೋದಲ್ಲಿನ ಇಂಟೆಲಿಸೆನ್ಸ್ ಕಂಸ್ಯೂಮ್-ಫಸ್ಟ್ ರೀತಿಯನ್ನು ಬೇಬಲಿಸುವಂತಿದ್ದು, ಇದುನ್ನ ಅಭವೃದ್ಧಿಕಾರಕವು ಸ್ವೀಕರಿಸಬಹುದಾಗಿದೆ. ಈ ಕ್ರಮದಲ್ಲಿ ಇಂಟೆಲಿಸೆನ್ಸ್ ಗುರುತಿಸುವಿಕೆಗಳನ್ನು ಸ್ವಯಂ-ಪೂರ್ಣಗೊಳಿಸುವುದಿಲ್ಲ;ಇದರಿಂದ ಅಭಿವೃದ್ಧಿಕಾರಕವು ವಿವರಣಾರಹಿತ ಗುರುತಿಸುವಿಕೆಗಳನ್ನು ಉಪಯೋಗಿಸಲು (ಬದಲಾಗಬಹುದಾದ ಹಾಗೂ ಕ್ರಮ ನಾಮಗಳಂತೆ) ಮತ್ತು ಅವನ್ನು ನಂತರ ವಿವರಿಸಲು ಅನುವಾಗುತ್ತದೆ. ವಿಷುಯಲ್ ಸ್ಟುಡಿಯೋ 2010, ಬಳಸುವಿಕೆಯ ಮೂಲಕ ಅವುಗಳ ಮಾದರಿಯನ್ನು ಅರಿಯಲಾದಲ್ಲಿ, ಅವುಗಳನ್ನು ಸ್ವಯಂ ವಿವರಿಸುವುದರ ಮೂಲಕ ಸಹಾಯಕವಾಗಬಹುದು.[೭೯]
ವಿಷುಯಲ್ ಸ್ಟುಡಿಯೋ ತಂಡ ವ್ಯವಸ್ಥೆ 2010ವು ಸಂಕೇತನಾಮವಾಗಿ ರೊಸಾರಿಯೋ [೮೦] ವನ್ನು ಹೊಂದಿದ್ದು, ಅನ್ವಯಿಕ ಜೀವನಕ್ರಮ ವ್ಯವಸ್ಥೆಗೆಂದೇ ಇರಿಸಲಾಗಿದೆ. ಅದರಲ್ಲಿ ಆರ್ಕಿಟೆಕ್ಚರ್ ಎಕ್ಸ್ ಪ್ಲೋರರ್ ನಂತಹ ನವೀನ ವಿನ್ಯಾಸಕ ಸಾಧನಗಳಿದ್ದು,[೮೧] ಇವು ಸಚಿತ್ರವಾಗಿ ಕ್ರಮವಿಧಿಗಳನ್ನು ಮತ್ತು ಶ್ರೇಣಿಗಳನ್ನು ಹಾಗೂ ಅವುಗಳ ನಡುವಣ ಸಂಬಂಧವನ್ನು ಪ್ರದರ್ಶಿಸುತ್ತವೆ.[೮೨][೮೩] ಇದು UML ಚಟುವಟಿಕೆಯ ನಕ್ಷೆ, ಉಪಭಾಗಗಳ ನಕ್ಷೆ,(ತಾರ್ಕಿಕ) ಶ್ರೇಣಿ ನಕ್ಷೆ, ಅನುಕ್ರಮ ನಕ್ಷೆ ಮತ್ತು ಬಳಕೆ ಕೋಶ ನಕ್ಷೆಗಳಿಗೆ ಬೆಂಬಲವೀಯುತ್ತದೆ.[೮೩] ವಿಷುಯಲ್ ಸ್ಟುಡಿಯೋ ತಂಡ ವ್ಯವಸ್ಥೆ 2010 ಪರೀಕ್ಷಾ ಪ್ರಭಾವ ವಿಶ್ಲೇಷಣೆ ಯನ್ನೂ ಹೊಂದಿದ್ದು, ಇದು, ನಿಜಸ್ಥಿತಿಯಲ್ಲಿ ಪರೀಕ್ಷೆಗಳನ್ನು ನಡೆಸದೆಯೇ, ಮೂಲ ಸಂಕೇತಗಳ ಮಾರ್ಪಾಡುಗಳು ಯಾವ ಪರೀಕ್ಷಾ ಕ್ರಮಗಳ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುವುದೆಂಬ ಸೂಚನೆಗಳನ್ನು ನೀಡುತ್ತದೆ.[೮೪] ಇದು ಬೇಡವಾದ ಪರೀಕ್ಷೆಗಳನ್ನು ತಪ್ಪಿಸಿ, ಅಗತ್ಯ ಪರೀಕ್ಷೆಗಳನ್ನು ಮಾತ್ರ ಮಾಡುವ ಮೂಲಕ, ಯೋಜೆನಗಳನ್ನು ತ್ವರಿತಗೊಳಿಸುತ್ತದೆ.
ವಿಷುಯಲ್ ಸ್ಟುಡಿಯೋ ತಂಡ ವ್ಯವಸ್ಥೆ 2010 ಐತಿಹಾಸಿಕ ದೋಷಸೂಚಕ ವನ್ನೂ ಹೊಂದಿದೆ. ಪ್ರಸ್ತುತದಲ್ಲಿ ಕ್ರಿಯಾತ್ಮಕವಾಗಿರುವ ಒಟ್ಟುಗಳಲ್ಲಿ ಮಾತ್ರ ದೋಷಸೂಚನೆ ಮಾಡುವ ಈಗಿನ ದೋಷಸೂಚಕಗಳಂತಲ್ಲದೆ, ಐತಿಹಾಸಿಕ ದೋಷಸೂಚಕವು ಮೊದಲಿನ ಎಲ್ಲಾ ವಿಷಯಗಳಾದ ಹಿಂದಿನ ಕ್ರಿಯಾವಿಧಿಗಳನ್ನು, ಕ್ರಮಗಳ ಅಳತೆಗೋಲುಗಳನ್ನು, ಕಾರ್ಯಕ್ರಮಗಳನ್ನು, ಅಪವಾದಗಳನ್ನು ಹಾಗೂ ಇತ್ಯಾದಿಗಳನ್ನು ದಾಖಲಿಸುತ್ತದೆ.ಇದು ಯಾವುದಾದರೂ ದೋಷವುಂಟಾಗಿ, ಅದಕ್ಕೆ ಅಗತ್ಯವಾದ ಭಿನ್ನಸೂಚಕಸ್ಥಳವು ನಿಗದಿತವಾಗಿರದಿದ್ದಲ್ಲಿ, ಸಂಕೇತ ಕಾರ್ಯಾಚರಣೆಯನ್ನು ಮತ್ತೆ ತಿರುವಿಹಾಕಲು ಅವಕಾಶ ನೀಡುತ್ತದೆ.[೮೫] ಈ ಐತಿಹಾಸಿಕ ದೋಷಸೂಚಕವು ಪ್ರಸ್ತುತ ದೋಷಸೂಕಕ್ಕಿಂತಲೂ ಮಂದಗತಿಯಲ್ಲಿ ಅನ್ವಯಿಕಗಳು ಚಲಿಸುವಂತಾಗಿಸುತ್ತದೆ ಹಾಗೂ ಹೆಚ್ಚಿನ ದತ್ತವು ದಾಖಲಾತಿಗಾಗಿ ಅವಶ್ಯವಾದುದರಿಂದ ಹೆಚ್ಚು ಸ್ಮೃತಿಯನ್ನು ಬಳಸುತ್ತದೆ. ಮೈಕ್ರೋಸಾಫ್ಟ್ ಎಷ್ಟು ದತ್ತವು ದಾಖಲಾಗಬೇಕು ಎಂಬುದನ್ನು ಸಂರಚಿಸಿ, ಅಭಿವೃದ್ಧಿಕಾರಕಗಳಿಗೆ ಆಕರಗಳ ಬಳಕೆ ಮತ್ತು ಕಾರ್ಯಕ್ಷಿಪ್ರತೆ ಎರಡರ ಸಮತೋಲನವನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ವಿಷುಯಲ್ ಸ್ಟುಡಿಯೋ ತಂಡ ವ್ಯವಸ್ಥೆ 2010ನ ಪ್ರಯೋಗಾಲಯ ವ್ಯವಸ್ಥಾ ಉಪವಿಭಾಗವು ಭ್ರಾಮಕನೀತಿಯನ್ನಳವಡಿಸಿ ಇದೇ ಮಾದರಿಯ ಗಣಕವಾತಾವರಣವನ್ನು ಪರೀಕ್ಷಕರಿಗೆ ಮತ್ತು ಅಭಿವೃದ್ದಿಕಾರಕಗಳಿಗೆ ಸೃಷ್ಠಿಸಿ ಕೊಡುತ್ತದೆ. ಭ್ರಾಮಕ ಯಂತ್ರಗಳು ತಪಾಸಣಕೇಂದ್ರಗಳಿಗೆ ಲಗತ್ತಿಸಲಾಗಿದ್ದು ತನ್ಮೂಲಕ ನಂತರದ ಕಾಲದಲ್ಲಿ ವಿಷಯಸಂಬಂಧಿತವಾಗಿ ಪರಿವೀಕಿಸಲು ಮತ್ತು ಮರು ಉತ್ಪಾದಿಸಲು ಸಹಾಯಕವಾಗುತ್ತವೆ.[೮೬] ವಿಷುಯಲ್ ಸ್ಟುಡಿಯೋ ತಂಡ ವ್ಯವಸ್ಥೆ 2010 ಕಾರ್ಯಕಾರಿ ಗಣಕವಾತಾವರಣದ ನಿರ್ದಿಷ್ಟವಾದ ಸ್ಥಿತಿಯನ್ನು ಗ್ರಹಿಸುವ ಸಾಮರ್ಥ್ಯಗಳ ಪರೀಕ್ಷಕ ಚಾಲನೆಗಳನ್ನು ದಾಖಲಿಸುವುದಲ್ಲದೆ ಆ ಪರೀಕ್ಷೆಗಳನ್ನು ನಡೆಸಲು ತೆಗೆದುಕೊಂಡ ನಿರ್ದಿಷ್ಟ ಹಂತಗಳನ್ನೂ ದಾಖಲಿಸುತ್ತದೆ. ಈ ಹಂತಗಳನ್ನು ನಂತರ ಪುನರ್ವೀಕ್ಷಿಸಿ ಚಿಷಯಗಳ ಪುನರುತ್ಪಾದನೆ ಮಾಡಬಹುದು.[೮೭]
VS 2010 F#ವನ್ನು ಒಳಗೊಂಡಿದ್ದು, ಇದು ಮೂಲತಃ ಮೈಕ್ರೋಸಾಫ್ಟ್ ಸಂಶೋಧನೆಯಿಂದ ಅಭಿವೃದ್ಧಿಗೊಂಡ ಒಂದು ಕಾರ್ಯಕಾರಿ ಕ್ರಮವಿಧಿ ಭಾಷೆಯಾಗಿದೆ. ಮೊದಲಿಗೆ ಐಚ್ಛಿಕ ವಿಸ್ತರಣೆಯಾಗಿದ್ದ ಇದು ಈಗ ಮುಖ್ಯವಾಹಿನಿ ಸಲಕರಣೆಯಾಗಿ ಬಡ್ತಿ ಪಡೆದಿದೆ.[೮೮]
VS 2010 ಏಪ್ರಿಲ್ 9, 2010ರಿಂದ ಚಿನ್ನದಂತಾಗಿದೆಯೆಂದು ವರದಿಯಾಗಿದೆ.
ಪೂರ್ವ-ಸ್ಥಾಪಿತ ಭ್ರಾಮಕ ಯಂತ್ರಗಳು
[ಬದಲಾಯಿಸಿ]ಮೈಕ್ರೋಸಾಫ್ಟ್ ವಿಷುಯಲ್ ಸ್ಟುಡಿಯೋ ತಂಡ ವ್ಯವಸ್ಥೆ 2008 ಮತ್ತು 2005ರೊಂದಿಗೆ ಭ್ರಾಮಕ ಹಾರ್ಡ್ ಡಿಸ್ಕ್ ರೀತಿಯಲ್ಲಿ ದಸ್ತಾವೇಜಾಗಿ ಪೂರ್ವ-ಸ್ಥಾಪಿತ ಭ್ರಾಮಕ ಯಂತ್ರಗಳನ್ನು ಪ್ರಾಯೋಗಿಕ ಬಳಕೆಗಾಗಿ ನೀಡುತ್ತಲಿದೆ. [೮೯]
ಆಕರಗಳು
[ಬದಲಾಯಿಸಿ]- ↑ "Microsoft Visual Studio 2010 First Look".
- ↑ Visual Studio 2005 SDK. "Visual Studio Development Environment Model". Microsoft. Retrieved 2008-01-01.
{{cite web}}
: CS1 maint: numeric names: authors list (link) - ↑ Visual Studio 2005 SDK. "VSPackages and Managed Package Framework (MPF)". Microsoft. Retrieved 2008-01-01.
{{cite web}}
: CS1 maint: numeric names: authors list (link) - ↑ ೪.೦ ೪.೧ ೪.೨ ೪.೩ Vijay Mehta. "Extending Visual Studio 2005". CodeGuru. Archived from the original on 2010-03-17. Retrieved 2008-01-01.
- ↑ ೫.೦ ೫.೧ ೫.೨ Visual Studio 2005 SDK. "Language Service Essentials". Microsoft. Retrieved 2008-01-01.
{{cite web}}
: CS1 maint: numeric names: authors list (link) - ↑ Visual Studio SDK. "Babel Package Overview". Microsoft. Retrieved 2008-01-01.
- ↑ Visual Studio SDK. "Managed Language Services overview". Microsoft. Retrieved 2008-01-01.
- ↑ ೮.೦ ೮.೧ Alin Constantin. "Microsoft Source Code Control Interface". Archived from the original on 2008-02-18. Retrieved 2008-01-03.
- ↑ Visual Studio SDK. "Source Control Plug-ins". MSDN. Retrieved 2008-01-03.
- ↑ ೧೦.೦ ೧೦.೧ ೧೦.೨ ೧೦.೩ "Visual Studio Extensibility". CoDe Magazine. Retrieved 2008-01-01.
- ↑ ೧೧.೦ ೧೧.೧ Scott Guthrie. "Nice VS 2008 Code Editing Improvements". Retrieved 2007-12-31.
- ↑ Scott Guthrie. "VS 2008 JavaScript IntelliSense". Retrieved 2007-12-31.
- ↑ Scott Guthrie. "VS 2008 Web Designer and CSS Support". Retrieved 2007-12-31.
- ↑ ೧೪.೦ ೧೪.೧ "Visual Studio .NET - Top 10 Code Editor Tips and Tricks". MSDN TV. Retrieved 2007-12-31.
- ↑ "Background compilation, part 1". Archived from the original on 2011-03-16. Retrieved 2007-12-31.
- ↑ ೧೬.೦ ೧೬.೧ Matthew Gertz. "Scaling Up: The Very Busy Background Compiler". MSDN Magazine. Retrieved 2007-12-31.
- ↑ Thomas F. Abraham. "Background Compilation in Visual Studio 2002, 2003 and 2005". Archived from the original on 2008-06-25. Retrieved 2007-12-31.
- ↑ "Attaching to Running Processes". MSDN. Retrieved 2007-12-31.
- ↑ "Dumps". MSDN. Retrieved 2007-12-31.
- ↑ "Breakpoint Overview". MSDN. Retrieved 2007-12-31.
- ↑ ೨೧.೦ ೨೧.೧ "Code Stepping Overview". MSDN. Retrieved 2007-12-31.
- ↑ "Edit and Continue". MSDN. Retrieved 2007-12-31.
- ↑ "Debugging at Design Time". MSDN. Retrieved 2007-12-31.
- ↑ "Team Explorer 2005 (.img file)". Microsoft. Retrieved 2007-03-05.
- ↑ "Visual Studio Team System 2008 Team Explorer". Microsoft. Retrieved 2007-03-05.
- ↑ "How to use the Server Explorer in Visual Studio .NET and Visual Studio 2005". Microsoft. Retrieved 2008-01-01.
- ↑ "Dotfuscator Community Edition 4.0". Msdn.microsoft.com. Retrieved 2009-09-06.
- ↑ "Microsoft and PreEmptive Solutions to Provide Application Feature Monitoring, Usage Expiry and Tamper Defense in Visual Studio 2010: Post-build utility utilizes software plus services and instrumentation to improve application security, portfolio management and usability". Microsoft.com. 2008-10-27. Retrieved 2009-09-06.
- ↑ "The Visual Studio Gallery gets a little more community friendly". Archived from the original on 2009-04-12. Retrieved 2010-05-13.
- ↑ Visual C++ Team. "ISO C Standard Update". MSDN Blogs. Retrieved 2008-01-02.
- ↑ Visual C++ team. "Update On The C++-0x Language Standard". MSDN Blogs.
- ↑ "Compiler Intrinsics". MSDN. Retrieved 2008-01-02.
- ↑ "OpenMP in Visual C++". MSDN. Retrieved 2008-01-02.
- ↑ "Visual C# (MSDN)". MSDN. Retrieved 2009-06-01.
- ↑ "A Message to the Community". MSDN. Retrieved 2008-01-02.
- ↑ De, Alan. "Visual SourceSafe: Microsoft's Source Destruction System". Highprogrammer.com. Retrieved 2009-09-06.
- ↑ "INFO: Required Network Rights for the SourceSafe Directories". Support.microsoft.com. 2005-02-24. Retrieved 2009-09-06.
- ↑ "Microsoft Visual SourceSafe Best Practices". Msdn.microsoft.com. Retrieved 2009-09-06.
- ↑ "Buy Microsoft Visual SourceSafe 6 (324-00269) :: eCostSoftware.com - UK Software Supplier". eCostSoftware.com. Archived from the original on 2008-12-08. Retrieved 2009-09-06.
- ↑ "Visual Studio Editions". TechNet. Retrieved 2008-01-03.
- ↑ "Visual Studio Team System". TechNet. Retrieved 2008-01-03.
- ↑ Name changes for Team System products
- ↑ "Norman Guadagno: Announcing Visual Studio Team System 2010". Channel9. Microsoft. September 29, 2008. Retrieved 2008-09-30.
- ↑ "System Requirements (Visual Studio 6.0)". MSDN. Retrieved 2008-01-02.
- ↑ "System Requirements (Visual Studio .NET)". MSDN. Retrieved 2008-01-02.
- ↑ "Visual Studio .NET 2002 SP1". Microsoft. Retrieved 2008-01-02.
- ↑ ೪೭.೦ ೪೭.೧ "Hacking Visual Studio". Retrieved 2008-01-01.
- ↑ "Microsoft Visual Studio .NET 2003 Service Pack 1". Microsoft. Retrieved 2008-01-02.
- ↑ "Visual Studio 2005 Service Pack 1". Microsoft. Retrieved 2008-01-01.
- ↑ "Visual Studio Service Pack 1 Update". Retrieved 2008-01-01.
- ↑ "New Language Features in Visual C++". Visual Studio 2005 Visual C++ Language Reference. MSDN. Retrieved 2006-12-28.
- ↑ "64-bit and Visual Studio 2005". April 11, 2006. Retrieved 2006-12-28.
- ↑ VSTA vs VSTO in Software Development Kits. In the latest MSDN Flash email I just received, it announces the release of Visual Studio Tools for Applications 2.0 (VSTA).
- ↑ "Microsoft Details Dynamic IT Strategy at Tech-Ed 2007". Archived from the original on 2011-06-05. Retrieved 2007-06-04.
- ↑ "ಆರ್ಕೈವ್ ನಕಲು". Archived from the original on 2019-03-20. Retrieved 2022-10-16.
- ↑ "Microsoft to Give Partners More Access to Orcas IDE Code". Retrieved 2007-11-06.
- ↑ "Download Details: Microsoft Visual Studio 2008 Service Pack 1 (exe)". Retrieved 2008-08-11.
- ↑ Darryl K. Taft. "Microsoft Pushes Secure, Quality Code". eWeek. Archived from the original on 2020-08-20. Retrieved 2007-10-06.
- ↑ Kirants. "Whats New in MFC 9.0 (Orcas)". CodeGuru. Archived from the original on 2010-05-04. Retrieved 2008-01-02.
- ↑ Nikola Dudla. "What Is STL/CLR?". MSDN Blogs. Retrieved 2008-01-02.
- ↑ Visual C++ Team. "Libraries Work In Orcas". MSDN Blogs. Retrieved 2008-01-02.
- ↑ "Download Visual Studio 03/07 CTP". Archived from the original on 2010-06-13. Retrieved 2007-06-14.
- ↑ "XSD Designer in Visual Studio". Archived from the original on 2017-02-11. Retrieved 2008-01-01.
- ↑ S. Somasegar. "Debugging and Profiling Features in VS 2008". MSDN Blogs. Retrieved 2007-07-24.
- ↑ ೬೫.೦ ೬೫.೧ John Robbin. "Neat New Multithreaded Debugging Features in VS 2008". Archived from the original on 2009-09-17. Retrieved 2007-09-24.
- ↑ Scott Hanselman. "Multi-threaded Debugging in Visual Studio 2008". Retrieved 2007-09-24.
- ↑ Scott Guthrie. "Releasing the Source Code for the .NET Framework Libraries". Retrieved 2007-10-04.
- ↑ Microsoft. "Launch Event". Retrieved 2010-01-12.
- ↑ Microsoft. "Microsoft Visual Studio 2010". Retrieved 2010-03-21.
- ↑ ೭೦.೦ ೭೦.೧ ೭೦.೨ ೭೦.೩ ೭೦.೪ "Visual Studio 2010 Team System First Look". Microsoft. Retrieved 2009-04-18.
- ↑ "Writing Visual Studio 2010 shell in WPF Reflects Confidence". One .NET Way. Archived from the original on 2010-04-02. Retrieved 2009-04-18.
- ↑ Carlos Quintero. "Visual Studio 2010 Extensibility moving beyond add-ins and packages". Archived from the original on 2010-06-23. Retrieved 2009-04-18.
- ↑ "F# to ship as part of Visual Studio 2010". Retrieved 2008-12-10.
- ↑ "Microsft details Oslo's modeling language, tools". SDTimes. Archived from the original on 2012-05-01. Retrieved 2009-04-19.
- ↑ Daniel Moth. "Debugging Parallel applications with VS2010". Retrieved 2008-04-18.
- ↑ "More support for parallelism in the next version of Visual Studio". MSDN. Retrieved 2009-04-23.
- ↑ David Worthington. "SD Times: Intel, Microsoft converge on parallel computing". Archived from the original on 2009-06-04. Retrieved 2008-08-20.
- ↑ David Worthington. "Intel addresses development life cycle with Parallel Studio". Archived from the original on 2009-05-28. Retrieved 2009-05-26.
- ↑ ೭೯.೦ ೭೯.೧ ೭೯.೨ ೭೯.೩ S. Somasegar. "Code Focused Development in VS 2010". Retrieved 2008-04-18.
- ↑ "'Visual Studio Team System Rosario'". Retrieved 2008-04-05.
- ↑ "Microsoft Unveils Next Version of Visual Studio and .NET Framework". Microsoft PressPass. Retrieved 2009-08-14.
- ↑ "Doing Architecture with Team System Rosario". Archived from the original on 2008-04-21. Retrieved 2009-04-18.
- ↑ ೮೩.೦ ೮೩.೧ "Visual Studio 2010 Architecture Edition". Retrieved 2009-04-18.
- ↑ "Historical Debugger and Test Impact Analysis in Visual Studio Team System 2010". Channel9. Retrieved 2009-04-18.
- ↑ Habib Heydarian. "What's new in Visual Studio Team System 2010: Episode 2". Retrieved 2008-04-18.
- ↑ "Visual Studio 2010 Lab Management". Archived from the original on 2009-05-10. Retrieved 2009-04-18.
- ↑ Ina Fried. "Visual Studio 2010 to come with 'black box'". CNET News. CBS Interactive Inc. Archived from the original on 2011-11-06. Retrieved 2009-04-18.
- ↑ http://research.microsoft.com/en-us/um/cambridge/projects/fsharp/default.aspx
- ↑ "Team Suite 2008 Virtual Machine".
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ವಿಷುಯಲ್ ಸ್ಟುಡಿಯೋದ ಅಧಿಕೃತ ವೆಬ್ ಸೈಟ್
- Forum Archived 2009-04-19 ವೇಬ್ಯಾಕ್ ಮೆಷಿನ್ ನಲ್ಲಿ., Visual Studio Feature, SDK
- MSDN ಗ್ರಂಥಾಲಯ (KB)
- VSTS
- (0}ಫೋರಮ್ ವಿಸ್ತರಣೆಗಳ ಗ್ಯಾಲರಿ Archived 2009-03-09 ವೇಬ್ಯಾಕ್ ಮೆಷಿನ್ ನಲ್ಲಿ.
- VS2010 ಬೀಟಾ 1 ಸಂದರ್ಶನ, ಉತ್ಪಾದನಾ ವ್ಯವಸ್ಥಾಪಕ, ಟೋನಿ ಗುಡ್ ಹ್ಯೂ. Archived 2012-03-08 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಷುಯಲ್ ಬೇಸಿಕ್ 2008 ಟ್ಯುಟೋರಿಯಲ್ಸ್ Archived 2010-06-18 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- CS1 maint: numeric names: authors list
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using Infobox software with unknown parameters
- Articles with hatnote templates targeting a nonexistent page
- Articles needing additional references from May 2008
- All articles needing additional references
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles lacking reliable references from May 2008
- All articles lacking reliable references
- Wikipedia articles in need of updating
- All Wikipedia articles in need of updating
- ಮೈಕ್ರೋಸಾಫ್ಟ್ ಅಭಿವೃದ್ಧಿ ಸಾಧನಗಳು
- ಮೈಕ್ರೋಸಾಫ್ಟ್ ವಿಷುಯಲ್ ಸ್ಟುಡಿಯೋ
- ಗ್ರಾಹಕ ಸಂಪರ್ಕಸಾಧನ ನಿರ್ಮಾತೃಗಳು
- ಬೀಟಾ ಸಾಫ್ಟ್ ವೇರ್
- ಮಾಹಿತಿ ತಂತ್ರಜ್ಞಾನ
- ತಂತ್ರಾಂಶಗಳು