ಮೇಳಕರ್ತ ರಾಗಗಳ ಪಟ್ಟಿ
ಕರ್ನಾಟಕ ಸಂಗೀತದಲ್ಲಿ ಎರಡು ಬಗೆಯ ಮೇಳಕರ್ತ ಪದ್ಧತಿಗಳು ರೂಢಿಯಲ್ಲಿವೆ. ಈಗ ಹೆಚ್ಚಿಗೆ ಪ್ರಚಾರದಲ್ಲಿರುವುದು ಸಂಪೂರ್ಣಮೇಳಗಳ ಪದ್ಧತಿ. ಈ ಪದ್ಧತಿಯಲ್ಲಿ, ಎಲ್ಲ ಮೇಳಕರ್ತ ರಾಗಗಳೂ ಕ್ರಮ ಸಂಪೂರ್ಣ ಆರೋಹಣ-ಅವರೋಹಣ ಸಂಚಾರಗಳನ್ನು (ಅಂದರೆ ಸರಿಗಮಪದನಿಸ- ಸನಿದಪಮಗರಿಸ) ಹೊಂದಿರುತ್ತವೆ, ಈ ಕೆಳಗಿನ ಪಟಿಯಲ್ಲಿ ಈ ಪದ್ಧತಿಗೆ ಸೇರಿದ ಮೇಳಕರ್ತರಾಗಗಳನ್ನು ಸೂಚಿಸಲಾಗಿದೆ, ಇವುಗಳನ್ನು ಸಂಸ್ಕೃತದ “ಕಟಪಯಾದಿ” ನಿಯಮಕ್ಕೆ ಅನುಗುಣವಾಗಿ ಹೆಸರಿಸಲಾಗಿದೆ. ರಾಗದ ಹೆಸರಿನ ಮೊದಲೆರಡು ಅಕ್ಷರಗಳು ಆ ರಾಗದ ಮೇಳ ಸಂಖ್ಯೆಯನ್ಮು ಸೂಚಿಸುತ್ತದೆ. ಕಟಪಯಾದಿ ನಿಯಮದ ಸಂಖ್ಯಾನಾ ವಾಮತೋಗತಿಃ (ಎಂದರೆ ಬಲದಿಂದ ಎಡಕ್ಕೆ ) ಸೂತ್ರಕ್ಕೆ ಅನುಗುಣವಾಗಿ ಈ ಹೆಸರುಗಳಿವೆ.
ಕಟಪಯಾದಿ ಎಂದರೆ “ಕಾದಿ ನವ, ಟಾದಿ ನವ, ಪಾದಿ ಪಂಚ, ಯಾದ್ಯಷ್ಟ” ( ವ್ಯಂಜನಗಳಾದ ಕ ದಿಂದ ಝ ದ ವರೆಗಿನ ಒಂಭತ್ತು ವ್ಯಂಜನಗಳು ಕ್ರಮವಾಗಿ ೧ ರಿಂದ ೯, ನಂತರದ ಟ ದಿಂದ ಧ ವರೆಗಿನ ವ್ಯಂಜನಗಳಿಗೂ ಹೀಗೆಯೇ ೧ ರಿಂದ ೯, ಪ ದಿಂದ ಮ ವರೆವಿಗೆ ೧ ರಿಂದ ೫ ಹಾಗು ಯ ದಿಂದ ಹ ವರೆಗಿನ ವ್ಯಂಜನಗಳಿಗೆ ೧ ರಿಂದ ೮; ಹೀಗೆ ಸಂಖ್ಯೆಗಳಿವೆ.
ಕನಕಾಂಗಿ ಎಂಬ ಮೇಳಕರ್ತ ರಾಗದ ಮೊದಲೆರಡು ಅಕ್ಷರಗಳಾದ ಕ ಮತ್ತು ನ ಗಳು ಕ್ರಮವಾಗಿ ೧ ಹಾಗು ೦ ಯನ್ನು ಸೂಚಿಸುತ್ತವೆ. ಇವನ್ನು ಬಲದಿಂದ ಎಡಕ್ಕೆ (ಸಂಖ್ಯಾನಾ ಸೂತ್ರದಂತೆ) ಓದುವಾಗ ೦೧ ಎಂದಾಗುತ್ತದೆ, ಎಂದರೆ ಒಂದನೇ ಮೇಳಕರ್ತ ರಾಗ ಎಂಬುದು ಅರಿವಾಗುತ್ತದೆ. ಎಲ್ಲಾ ಎಪ್ಪತ್ತೆರಡು ಮೇಳಕರ್ತ ರಾಗಗಳಿಗೂ ಇದೇ ಸೂತ್ರಕ್ಕನುಗುಣವಾಗಿ ಹೆಸರನ್ನಿಡಲಾಗಿದೆ. ಮೇಳಕರ್ತ ರಾಗದ ಮೊದಲೆರಡು ಅಕ್ಷರಗಳ ಸಂಖ್ಯೆಯನ್ನು ಕಟಪಯಾದಿ ನಿಯಮದಲ್ಲಿ ಕಂಡುಕೊಂಡು ಬಲದಿಂದ ಎಡಕ್ಕೆ ಓದಿಕೊಂಡಲ್ಲಿ (ಸಂಖ್ಯೆಯನ್ನು) ಅದು ಎಷ್ಟನೇಯ ಮೇಳಕರ್ತವೆಂಬುದನ್ನು ಅರಿತುಕೊಳ್ಳಬಹುದಾಗಿದೆ.
ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಮುತ್ತುಸ್ವಾಮಿ ದೀಕ್ಷಿತರು ಅಸಂಪೂರ್ಣ ಮೇಳ ಪದ್ಧತಿಯನ್ನು ಅನುಸರಿಸಿ ಕೃತಿರಚನೆ ಮಾಡಿದ್ದಾರೆ. ಅದರಲ್ಲಿಯ ಮೇಳ ರಾಗಗಳ ಲಕ್ಷಣವೂ, ಹೆಸರುಗಳೂ ಬೇರೆಯಾಗಿವೆ.
ಸಂಖ್ಯೆ | ರಾಗದ ಹೆಸರು | ಆರೋಹಣ | ಅವರೋಹಣ | ಚಕ್ರ |
---|---|---|---|---|
೧ | ಕನಕಾಂಗಿ | ಸ ರಿ೧ ಗ೧ ಮ೧ ಪ ದ೧ ನಿ೧ ಸ | ಸ ನಿ೧ ದ೧ ಪ ಮ೧ ಗ೧ ರಿ೧ ಸ | ಚಕ್ರ ೧ ಇಂದು |
೨ | ರತ್ನಾಂಗಿ | ಸ ರಿ೧ ಗ೧ ಮ೧ ಪ ದ೧ ನಿ೨ ಸ | ಸ ನಿ೨ ದ೧ ಪ ಮ೧ ಗ೧ ರಿ೧ ಸ | ಚಕ್ರ ೧ ಇಂದು |
೩ | ಗಾನಮೂರ್ತಿ | ಸ ರಿ೧ ಗ೧ ಮ೧ ಪ ದ೧ ನಿ೩ ಸ | ಸ ನಿ೩ ದ೧ ಪ ಮ೧ ಗ೧ ರಿ೧ ಸ | ಚಕ್ರ ೧ ಇಂದು |
೪ | ವನಸ್ಪತಿ | ಸ ರಿ೧ ಗ೧ ಮ೧ ಪ ದ೨ ನಿ೨ ಸ | ಸ ನಿ೨ ದ೨ ಪ ಮ೧ ಗ೧ ರಿ೧ ಸ | ಚಕ್ರ ೧ ಇಂದು |
೫ | ಮಾನವತಿ | ಸ ರಿ೧ ಗ೧ ಮ೧ ಪ ದ೨ ನಿ೩ ಸ | ಸ ನಿ೩ ದ೨ ಪ ಮ೧ ಗ೧ ರಿ೧ ಸ | ಚಕ್ರ ೧ ಇಂದು |
೬ | ತಾನರೂಪಿ | ಸ ರಿ೧ ಗ೧ ಮ೧ ಪ ದ೩ ನಿ೩ ಸ | ಸ ನಿ೩ ದ೩ ಪ ಮ೧ ಗ೧ ರಿ೧ ಸ | ಚಕ್ರ ೧ ಇಂದು |
೭ | ಸೇನಾವತಿ | ಸ ರಿ೧ ಗ೨ ಮ೧ ಪ ದ೧ ನಿ೧ ಸ | ಸ ನಿ೧ ದ೧ ಪ ಮ೧ ಗ೨ ರಿ೧ ಸ | ಚಕ್ರ ೨ ನೇತ್ರ |
೮ | ಹನುಮತೋಡಿ | ಸ ರಿ೧ ಗ೨ ಮ೧ ಪ ದ೧ ನಿ೨ ಸ | ಸ ನಿ೨ ದ೧ ಪ ಮ೧ ಗ೨ ರಿ೧ ಸ | ಚಕ್ರ ೨ ನೇತ್ರ |
೯ | ಧೇನುಕಾ | ಸ ರಿ೧ ಗ೨ ಮ೧ ಪ ದ೧ ನಿ೩ ಸ | ಸ ನಿ೩ ದ೧ ಪ ಮ೧ ಗ೨ ರಿ೧ ಸ | ಚಕ್ರ ೨ ನೇತ್ರ |
೧೦ | ನಾಟಕಪ್ರಿಯ | ಸ ರಿ೧ ಗ೨ ಮ೧ ಪ ದ೨ ನಿ೨ ಸ | ಸ ನಿ೨ ದ೨ ಪ ಮ೧ ಗ೨ ರಿ೧ ಸ | ಚಕ್ರ ೨ ನೇತ್ರ |
೧೧ | ಕೋಕಿಲಪ್ರಿಯ | ಸ ರಿ೧ ಗ೨ ಮ೧ ಪ ದ೨ ನಿ೩ ಸ | ಸ ನಿ೩ ದ೨ ಪ ಮ೧ ಗ೨ ರಿ೧ ಸ | ಚಕ್ರ ೨ ನೇತ್ರ |
೧೨ | ರೂಪವತಿ | ಸ ರಿ೧ ಗ೨ ಮ೧ ಪ ದ೩ ನಿ೩ ಸ | ಸ ನಿ೩ ದ೩ ಪ ಮ೧ ಗ೨ ರಿ೧ ಸ | ಚಕ್ರ ೨ ನೇತ್ರ |
೧೩ | ಗಾಯಕಪ್ರಿಯ | ಸ ರಿ೧ ಗ೩ ಮ೧ ಪ ದ೧ ನಿ೧ ಸ | ಸ ನಿ೧ ದ೧ ಪ ಮ೧ ಗ೩ ರಿ೧ ಸ | ಚಕ್ರ ೩ ಆಗ್ನಿ |
೧೪ | ವಕುಲಾಭರಣ | ಸ ರಿ೧ ಗ೩ ಮ೧ ಪ ದ೧ ನಿ೨ ಸ | ಸ ನಿ೨ ದ೧ ಪ ಮ೧ ಗ೩ ರಿ೧ ಸ | ಚಕ್ರ ೩ ಆಗ್ನಿ |
೧೫ | ಮಾಯಾಮಾಳವ ಗೌಳ | ಸ ರಿ೧ ಗ೩ ಮ೧ ಪ ದ೧ ನಿ೩ ಸ | ಸ ನಿ೩ ದ೧ ಪ ಮ೧ ಗ೩ ರಿ೧ ಸ | ಚಕ್ರ ೩ ಆಗ್ನಿ |
೧೬ | ಚಕ್ರವಾಕ | ಸ ರಿ೧ ಗ೩ ಮ೧ ಪ ದ೨ ನಿ೨ ಸ | ಸ ನಿ೨ ದ೨ ಪ ಮ೧ ಗ೩ ರಿ೧ ಸ | ಚಕ್ರ ೩ ಆಗ್ನಿ |
೧೭ | ಸೂರ್ಯಕಾಂತ | ಸ ರಿ೧ ಗ೩ ಮ೧ ಪ ದ೨ ನಿ೩ ಸ | ಸ ನಿ೩ ದ೨ ಪ ಮ೧ ಗ೩ ರಿ೧ ಸ | ಚಕ್ರ ೩ ಆಗ್ನಿ |
೧೮ | ಹಾಟಕಾಂಬರಿ | ಸ ರಿ೧ ಗ೩ ಮ೧ ಪ ದ೩ ನಿ೩ ಸ | ಸ ನಿ೩ ದ೩ ಪ ಮ೧ ಗ೩ ರಿ೧ ಸ | ಚಕ್ರ ೩ ಆಗ್ನಿ |
೧೯ | ಝಂಕಾರಧ್ವನಿ | ಸ ರಿ೨ ಗ೨ ಮ೧ ಪ ದ೧ ನಿ೧ ಸ | ಸ ನಿ೧ ದ೧ ಪ ಮ೧ ಗ೨ ರಿ೨ ಸ | ಚಕ್ರ ೪ ವೇದ |
೨೦ | ನಠಭೈರವಿ | ಸ ರಿ೨ ಗ೨ ಮ೧ ಪ ದ೧ ನಿ೨ ಸ | ಸ ನಿ೨ ದ೧ ಪ ಮ೧ ಗ೨ ರಿ೨ ಸ | ಚಕ್ರ ೪ ವೇದ |
೨೧ | ಕೀರವಾಣಿ | ಸ ರಿ೨ ಗ೨ ಮ೧ ಪ ದ೧ ನಿ೩ ಸ | ಸ ನಿ೩ ದ೧ ಪ ಮ೧ ಗ೨ ರಿ೨ ಸ | ಚಕ್ರ ೪ ವೇದ |
೨೨ | ಖರಹರಪ್ರಿಯ | ಸ ರಿ೨ ಗ೨ ಮ೧ ಪ ದ೨ ನಿ೨ ಸ | ಸ ನಿ೨ ದ೨ ಪ ಮ೧ ಗ೨ ರಿ೨ ಸ | ಚಕ್ರ ೪ ವೇದ |
೨೩ | ಗೌರಿಮನೋಹರಿ | ಸ ರಿ೨ ಗ೨ ಮ೧ ಪ ದ೨ ನಿ೩ ಸ | ಸ ನಿ೩ ದ೨ ಪ ಮ೧ ಗ೨ ರಿ೨ ಸ | ಚಕ್ರ ೪ ವೇದ |
೨೪ | ವರುಣಪ್ರಿಯ | ಸ ರಿ೨ ಗ೨ ಮ೧ ಪ ದ೩ ನಿ೩ ಸ | ಸ ನಿ೩ ದ೩ ಪ ಮ೧ ಗ೨ ರಿ೨ ಸ | ಚಕ್ರ ೪ ವೇದ |
೨೫ | ಮಾರರಂಜನಿ | ಸ ರಿ೨ ಗ೩ ಮ೧ ಪ ದ೧ ನಿ೧ ಸ | ಸ ನಿ೧ ದ೧ ಪ ಮ೧ ಗ೩ ರಿ೨ ಸ | ಚಕ್ರ ೫ ಬಾಣ |
೨೬ | ಚಾರುಕೇಶಿ | ಸ ರಿ೨ ಗ೩ ಮ೧ ಪ ದ೧ ನಿ೨ ಸ | ಸ ನಿ೨ ದ೧ ಪ ಮ೧ ಗ೩ ರಿ೨ ಸ | ಚಕ್ರ ೫ ಬಾಣ |
೨೭ | ಸರಸಾಂಗಿ | ಸ ರಿ೨ ಗ೩ ಮ೧ ಪ ದ೧ ನಿ೩ ಸ | ಸ ನಿ೩ ದ೧ ಪ ಮ೧ ಗ೩ ರಿ೨ ಸ | ಚಕ್ರ ೫ ಬಾಣ |
೨೮ | ಹರಿಕಾಂಭೋಜಿ | ಸ ರಿ೨ ಗ೩ ಮ೧ ಪ ದ೨ ನಿ೨ ಸ | ಸ ನಿ೨ ದ೨ ಪ ಮ೧ ಗ೩ ರಿ೨ ಸ | ಚಕ್ರ ೫ ಬಾಣ |
೨೯ | ಧೀರಶಂಕರಾಭರಣ | ಸ ರಿ೨ ಗ೩ ಮ೧ ಪ ದ೨ ನಿ೩ ಸ | ಸ ನಿ೩ ದ೨ ಪ ಮ೧ ಗ೩ ರಿ೨ ಸ | ಚಕ್ರ ೫ ಬಾಣ |
೩೦ | ನಾಗಾನಂದಿನಿ | ಸ ರಿ೨ ಗ೩ ಮ೧ ಪ ದ೩ ನಿ೩ ಸ | ಸ ನಿ೩ ದ೩ ಪ ಮ೧ ಗ೩ ರಿ೨ ಸ | ಚಕ್ರ ೫ ಬಾಣ |
೩೧ | ಯಾಗಪ್ರಿಯ | ಸ ರಿ೩ ಗ೩ ಮ೧ ಪ ದ೧ ನಿ೧ ಸ | ಸ ನಿ೧ ದ೧ ಪ ಮ೧ ಗ೩ ರಿ೩ ಸ | ಚಕ್ರ ೬ ಋತು |
೩೨ | ರಾಗವರ್ಧಿನಿ | ಸ ರಿ೩ ಗ೩ ಮ೧ ಪ ದ೧ ನಿ೨ ಸ | ಸ ನಿ೨ ದ೧ ಪ ಮ೧ ಗ೩ ರಿ೩ ಸ | ಚಕ್ರ ೬ ಋತು |
೩೩ | ಗಾಂಗೇಯಭೂಷಿಣಿ | ಸ ರಿ೩ ಗ೩ ಮ೧ ಪ ದ೧ ನಿ೩ ಸ | ಸ ನಿ೩ ದ೧ ಪ ಮ೧ ಗ೩ ರಿ೩ ಸ | ಚಕ್ರ ೬ ಋತು |
೩೪ | ವಾಗಧೀಶ್ವರಿ | ಸ ರಿ೩ ಗ೩ ಮ೧ ಪ ದ೨ ನಿ೨ ಸ | ಸ ನಿ೨ ದ೨ ಪ ಮ೧ ಗ೩ ರಿ೩ ಸ | ಚಕ್ರ ೬ ಋತು |
೩೫ | ಶೂಲಿನಿ | ಸ ರಿ೩ ಗ೩ ಮ೧ ಪ ದ೨ ನಿ೩ ಸ | ಸ ನಿ೩ ದ೨ ಪ ಮ೧ ಗ೩ ರಿ೩ ಸ | ಚಕ್ರ ೬ ಋತು |
೩೬ | ಚಲನಾಟ | ಸ ರಿ೩ ಗ೩ ಮ೧ ಪ ದ೩ ನಿ೩ ಸ | ಸ ನಿ೩ ದ೩ ಪ ಮ೧ ಗ೩ ರಿ೩ ಸ | ಚಕ್ರ ೬ ಋತು |
೩೭ | ಸಾಲಗ | ಸ ರಿ೧ ಗ೧ ಮ೨ ಪ ದ೧ ನಿ೧ ಸ | ಸ ನಿ೧ ದ೧ ಪ ಮ೨ ಗ೧ ರಿ೧ ಸ | ಚಕ್ರ ೭ ಋಷಿ |
೩೮ | ಜಲಾರ್ಣವ | ಸ ರಿ೧ ಗ೧ ಮ೨ ಪ ದ೧ ನಿ೨ ಸ | ಸ ನಿ೨ ದ೧ ಪ ಮ೨ ಗ೧ ರಿ೧ ಸ | ಚಕ್ರ ೭ ಋಷಿ |
೩೯ | ಝಾಲವರಾಳಿ | ಸ ರಿ೧ ಗ೧ ಮ೨ ಪ ದ೧ ನಿ೩ ಸ | ಸ ನಿ೩ ದ೧ ಪ ಮ೨ ಗ೧ ರಿ೧ ಸ | ಚಕ್ರ ೭ ಋಷಿ |
೪೦ | ನವನೀತ | ಸ ರಿ೧ ಗ೧ ಮ೨ ಪ ದ೨ ನಿ೨ ಸ | ಸ ನಿ೨ ದ೨ ಪ ಮ೨ ಗ೧ ರಿ೧ ಸ | ಚಕ್ರ ೭ ಋಷಿ |
೪೧ | ಪಾವನಿ | ಸ ರಿ೧ ಗ೧ ಮ೨ ಪ ದ೨ ನಿ೩ ಸ | ಸ ನಿ೩ ದ೨ ಪ ಮ೨ ಗ೧ ರಿ೧ ಸ | ಚಕ್ರ ೭ ಋಷಿ |
೪೨ | ರಘುಪ್ರಿಯ | ಸ ರಿ೧ ಗ೧ ಮ೨ ಪ ದ೩ ನಿ೩ ಸ | ಸ ನಿ೩ ದ೩ ಪ ಮ೨ ಗ೧ ರಿ೧ ಸ | ಚಕ್ರ ೭ ಋಷಿ |
೪೩ | ಗವಾಂಬೋಧಿ | ಸ ರಿ೧ ಗ೨ ಮ೨ ಪ ದ೧ ನಿ೧ ಸ | ಸ ನಿ೧ ದ೧ ಪ ಮ೨ ಗ೨ ರಿ೧ ಸ | ಚಕ್ರ ೮ ವಸು |
೪೪ | ಭವಪ್ರಿಯ | ಸ ರಿ೧ ಗ೨ ಮ೨ ಪ ದ೧ ನಿ೨ ಸ | ಸ ನಿ೨ ದ೧ ಪ ಮ೨ ಗ೨ ರಿ೧ ಸ | ಚಕ್ರ ೮ ವಸು |
೪೫ | ಶುಭಪಂತುವರಾಳಿ | ಸ ರಿ೧ ಗ೨ ಮ೨ ಪ ದ೧ ನಿ೩ ಸ | ಸ ನಿ೩ ದ೧ ಪ ಮ೨ ಗ೨ ರಿ೧ ಸ | ಚಕ್ರ ೮ ವಸು |
೪೬ | ಷಡ್ವಿಧಮಾರ್ಗಿಣಿ | ಸ ರಿ೧ ಗ೨ ಮ೨ ಪ ದ೨ ನಿ೨ ಸ | ಸ ನಿ೨ ದ೨ ಪ ಮ೨ ಗ೨ ರಿ೧ ಸ | ಚಕ್ರ ೮ ವಸು |
೪೭ | ಸುವರ್ಣಾಂಗಿ | ಸ ರಿ೧ ಗ೨ ಮ೨ ಪ ದ೨ ನಿ೩ ಸ | ಸ ನಿ೩ ದ೨ ಪ ಮ೨ ಗ೨ ರಿ೧ ಸ | ಚಕ್ರ ೮ ವಸು |
೪೮ | ದಿವ್ಯಾಮಣಿ | ಸ ರಿ೧ ಗ೨ ಮ೨ ಪ ದ೩ ನಿ೩ ಸ | ಸ ನಿ೩ ದ೩ ಪ ಮ೨ ಗ೨ ರಿ೧ ಸ | ಚಕ್ರ ೮ ವಸು |
೪೯ | ಧವಳಾಂಬರಿ | ಸ ರಿ೧ ಗ೩ ಮ೨ ಪ ದ೧ ನಿ೧ ಸ | ಸ ನಿ೧ ದ೧ ಪ ಮ೨ ಗ೩ ರಿ೧ ಸ | ಚಕ್ರ ೯ ಬ್ರಹ್ಮ |
೫೦ | ನಾಮನಾರಾಯಣಿ | ಸ ರಿ೧ ಗ೩ ಮ೨ ಪ ದ೧ ನಿ೨ ಸ | ಸ ನಿ೨ ದ೧ ಪ ಮ೨ ಗ೩ ರಿ೧ ಸ | ಚಕ್ರ ೯ ಬ್ರಹ್ಮ |
೫೧ | ಕಾಮವರ್ಧಿನಿ | ಸ ರಿ೧ ಗ೩ ಮ೨ ಪ ದ೧ ನಿ೩ ಸ | ಸ ನಿ೩ ದ೧ ಪ ಮ೨ ಗ೩ ರಿ೧ ಸ | ಚಕ್ರ ೯ ಬ್ರಹ್ಮ |
೫೨ | ರಾಮಪ್ರಿಯ | ಸ ರಿ೧ ಗ೩ ಮ೨ ಪ ದ೨ ನಿ೨ ಸ | ಸ ನಿ೨ ದ೨ ಪ ಮ೨ ಗ೩ ರಿ೧ ಸ | ಚಕ್ರ ೯ ಬ್ರಹ್ಮ |
೫೩ | ಗಮನಶ್ರಮ | ಸ ರಿ೧ ಗ೩ ಮ೨ ಪ ದ೨ ನಿ೩ ಸ | ಸ ನಿ೩ ದ೨ ಪ ಮ೨ ಗ೩ ರಿ೧ ಸ | ಚಕ್ರ ೯ ಬ್ರಹ್ಮ |
೫೪ | ವಿಶ್ವಾಂಬರಿ | ಸ ರಿ೧ ಗ೩ ಮ೨ ಪ ದ೩ ನಿ೩ ಸ | ಸ ನಿ೩ ದ೩ ಪ ಮ೨ ಗ೩ ರಿ೧ ಸ | ಚಕ್ರ ೯ ಬ್ರಹ್ಮ |
೫೫ | ಶ್ಯಾಮಲಾಂಗಿ | ಸ ರಿ೨ ಗ೨ ಮ೨ ಪ ದ೧ ನಿ೧ ಸ | ಸ ನಿ೧ ದ೧ ಪ ಮ೨ ಗ೨ ರಿ೨ ಸ | ಚಕ್ರ ೧೦ ದಿಶಿ |
೫೬ | ಷಣ್ಮುಖಪ್ರಿಯ | ಸ ರಿ೨ ಗ೨ ಮ೨ ಪ ದ೧ ನಿ೨ ಸ | ಸ ನಿ೨ ದ೧ ಪ ಮ೨ ಗ೨ ರಿ೨ ಸ | ಚಕ್ರ ೧೦ ದಿಶಿ |
೫೭ | ಸಿಂಹೇಂದ್ರ ಮಧ್ಯಮ | ಸ ರಿ೨ ಗ೨ ಮ೨ ಪ ದ೧ ನಿ೩ ಸ | ಸ ನಿ೩ ದ೧ ಪ ಮ೨ ಗ೨ ರಿ೨ ಸ | ಚಕ್ರ ೧೦ ದಿಶಿ |
೫೮ | ಹೇಮಾವತಿ | ಸ ರಿ೨ ಗ೨ ಮ೨ ಪ ದ೨ ನಿ೨ ಸ | ಸ ನಿ೨ ದ೨ ಪ ಮ೨ ಗ೨ ರಿ೨ ಸ | ಚಕ್ರ ೧೦ ದಿಶಿ |
೫೯ | ಧರ್ಮವತಿ | ಸ ರಿ೨ ಗ೨ ಮ೨ ಪ ದ೨ ನಿ೩ ಸ | ಸ ನಿ೩ ದ೨ ಪ ಮ೨ ಗ೨ ರಿ೨ ಸ | ಚಕ್ರ ೧೦ ದಿಶಿ |
೬೦ | ನೀತಿಮತಿ | ಸ ರಿ೨ ಗ೨ ಮ೨ ಪ ದ೩ ನಿ೩ ಸ | ಸ ನಿ೩ ದ೩ ಪ ಮ೨ ಗ೨ ರಿ೨ ಸ | ಚಕ್ರ ೧೦ ದಿಶಿ |
೬೧ | ಕಾಂತಾಮಣಿ | ಸ ರಿ೨ ಗ೩ ಮ೨ ಪ ದ೧ ನಿ೧ ಸ | ಸ ನಿ೧ ದ೧ ಪ ಮ೨ ಗ೩ ರಿ೨ ಸ | ಚಕ್ರ ೧೧ ರುದ್ರ |
೬೨ | ರಿಷಭಪ್ರಿಯ | ಸ ರಿ೨ ಗ೩ ಮ೨ ಪ ದ೧ ನಿ೨ ಸ | ಸ ನಿ೨ ದ೧ ಪ ಮ೨ ಗ೩ ರಿ೨ ಸ | ಚಕ್ರ ೧೧ ರುದ್ರ |
೬೩ | ಲತಾಂಗಿ | ಸ ರಿ೨ ಗ೩ ಮ೨ ಪ ದ೧ ನಿ೩ ಸ | ಸ ನಿ೩ ದ೧ ಪ ಮ೨ ಗ೩ ರಿ೨ ಸ | ಚಕ್ರ ೧೧ ರುದ್ರ |
೬೪ | ವಾಚಸ್ಪತಿ | ಸ ರಿ೨ ಗ೩ ಮ೨ ಪ ದ೨ ನಿ೨ ಸ | ಸ ನಿ೨ ದ೨ ಪ ಮ೨ ಗ೩ ರಿ೨ ಸ | ಚಕ್ರ ೧೧ ರುದ್ರ |
೬೫ | ಮೇಚಕಲ್ಯಾಣಿ | ಸ ರಿ೨ ಗ೩ ಮ೨ ಪ ದ೨ ನಿ೩ ಸ | ಸ ನಿ೩ ದ೨ ಪ ಮ೨ ಗ೩ ರಿ೨ ಸ | ಚಕ್ರ ೧೧ ರುದ್ರ |
೬೬ | ಚಿತ್ರಾಂಬರಿ | ಸ ರಿ೨ ಗ೩ ಮ೨ ಪ ದ೩ ನಿ೩ ಸ | ಸ ನಿ೩ ದ೩ ಪ ಮ೨ ಗ೩ ರಿ೨ ಸ | ಚಕ್ರ ೧೧ ರುದ್ರ |
೬೭ | ಸುಚರಿತ್ರ | ಸ ರಿ೩ ಗ೩ ಮ೨ ಪ ದ೧ ನಿ೧ ಸ | ಸ ನಿ೧ ದ೧ ಪ ಮ೨ ಗ೩ ರಿ೩ ಸ | ಚಕ್ರ ೧೨ ಆದಿತ್ಯ |
೬೮ | ಜ್ಯೋತಿಸ್ವರೂಪಿಣಿ | ಸ ರಿ೩ ಗ೩ ಮ೨ ಪ ದ೧ ನಿ೨ ಸ | ಸ ನಿ೨ ದ೧ ಪ ಮ೨ ಗ೩ ರಿ೩ ಸ | ಚಕ್ರ ೧೨ ಆದಿತ್ಯ |
೬೯ | ಧಾತುವರ್ಧಿನಿ | ಸ ರಿ೩ ಗ೩ ಮ೨ ಪ ದ೧ ನಿ೩ ಸ | ಸ ನಿ೩ ದ೧ ಪ ಮ೨ ಗ೩ ರಿ೩ ಸ | ಚಕ್ರ ೧೨ ಆದಿತ್ಯ |
೭೦ | ನಾಸಿಕಾಭೂಷಿಣಿ | ಸ ರಿ೩ ಗ೩ ಮ೨ ಪ ದ೨ ನಿ೨ ಸ | ಸ ನಿ೨ ದ೨ ಪ ಮ೨ ಗ೩ ರಿ೩ ಸ | ಚಕ್ರ ೧೨ ಆದಿತ್ಯ |
೭೧ | ಕೋಸಲ | ಸ ರಿ೩ ಗ೩ ಮ೨ ಪ ದ೨ ನಿ೩ ಸ | ಸ ನಿ೩ ದ೨ ಪ ಮ೨ ಗ೩ ರಿ೩ ಸ | ಚಕ್ರ ೧೨ ಆದಿತ್ಯ |
೭೨ | ರಸಿಕಪ್ರಿಯ | ಸ ರಿ೩ ಗ೩ ಮ೨ ಪ ದ೩ ನಿ೩ ಸ | ಸ ನಿ೩ ದ೩ ಪ ಮ೨ ಗ೩ ರಿ೩ ಸ | ಚಕ್ರ ೧೨ ಆದಿತ್ಯ |