ವಿಷಯಕ್ಕೆ ಹೋಗು

ಮಾನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾನು
ಜನನ
ಕೃಷ್ಣಮೂರ್ತಿ ಶರ್ಮಾ

ವೃತ್ತಿ(ಗಳು)ನಟಿ, ನೃತ್ಯಪಟು
ಸಕ್ರಿಯ ವರ್ಷಗಳು೧೯೯೮ - ೨೦೧೪

ಮಾನು ಒಬ್ಬ ಭಾರತೀಯ ನರ್ತಕಿ ಮತ್ತು ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಹೆಸರುವಾಸಿಯಾದ ಮಾಜಿ ನಟಿ. ಸರನ್‌‌ನ ಕಾದಲ್ ಮನ್ನನ್ (೧೯೯೮) ನಲ್ಲಿ ತಮ್ಮ ಮೊದಲ ನಟನೆಯನ್ನು ಮಾಡಿದ ನಂತರ, ಅವರು ನಟನಾ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಪ್ರದರ್ಶನ ಕಲೆಗಳ ಕಂಪನಿಯನ್ನು ಸ್ಥಾಪಿಸುವ ಮೂಲಕ ಮತ್ತು ವಿಶ್ವಾದ್ಯಂತ ನೃತ್ಯ ತಂಡಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನೃತ್ಯಗಾರ್ತಿಯಾಗಿ ತಮ್ಮ ಉತ್ಸಾಹವನ್ನು ಮುಂದುವರಿಸಿದರು. ಅವರು ೨೦೧೧ ರಲ್ಲಿ ನಟ ರಜನಿಕಾಂತ್ ಅವರು ಅನಾರೋಗ್ಯಕ್ಕೆ ಒಳಗಾದಾಗ ಸಿಂಗಾಪುರದಲ್ಲಿ ಚೇತರಿಸಿಕೊಳ್ಳಲು ನೆರವಾದರು. [] [] ನಂತರ ಎನ್ನಾ ಸತಮ್ ಇಂಧಾ ನೀರಮ್ (೨೦೧೪) ಮೂಲಕ ಮತ್ತೆ ನಟನೆಗೆ ಮರಳಿದರು.

ವೃತ್ತಿ

[ಬದಲಾಯಿಸಿ]

ಮಾನು ಅಸ್ಸಾಂಗುವಾಹಟಿಯಲ್ಲಿ ಹುಟ್ಟಿ ಬೆಳೆದರು. ಇವರು ೪ ನೇ ವಯಸ್ಸಿನಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದರು. ೧೯೯೨ ಮತ್ತು ೧೯೯೫ ರಲ್ಲಿ ಗುರುಮೋನಿ ಸಿನ್ಹಾ ಸಿಂಗ್, ಗುರು ಅರಬಿಂದ ಕಲಿತಾ ಮತ್ತು ಗುರು ಹಜುವಾರಿ ಅವರ ಮಾರ್ಗದರ್ಶನದಲ್ಲಿ ಅವರು ಮಣಿಪುರಿಯಲ್ಲಿ ಬಿಷಾರದ್ ಮತ್ತು ಕಥಕ್ ನೃತ್ಯವನ್ನು ಪೂರ್ಣಗೊಳಿಸಿದರು. ನಂತರ ಅವರು ಭರತನಾಟ್ಯದಲ್ಲಿ ವ್ಯಾಪಕವಾಗಿ ತರಬೇತಿ ಪಡೆದರು. ಮತ್ತು ೧೯೯೫ ರಲ್ಲಿ ತಮ್ಮ ಗುರು ಪದ್ಮಾ ಹರಗೋಪಾಲ್ ಅವರ ಮೇಲ್ವಿಚಾರಣೆಯಲ್ಲಿ ತಮ್ಮ ರಂಗೇತ್ರವನ್ನು ಪ್ರದರ್ಶಿಸಿದರು. ರಾಷ್ಟ್ರೀಯ ನೃತ್ಯ ಪ್ರವಾಸವನ್ನು ಪ್ರಾರಂಭಿಸಿದ ನಂತರ ನೃತ್ಯದ ಮೇಲಿನ ಅವರ ಉತ್ಸಾಹವು ಧನಂಜಯನ್ಸ್ ಅವರಲ್ಲಿ ತರಬೇತಿ ಪಡೆಯಲು ಚೆನ್ನೈಗೆ ಕರೆತಂದಿತು. [] ನೃತ್ಯ ಕಾರ್ಯಕ್ರಮವೊಂದರಲ್ಲಿ ಅವರ ಪ್ರದರ್ಶನವನ್ನು ನೋಡಿದ ನಂತರ ನಟ ವಿವೇಕ್ ಅವರು ನಿರ್ದೇಶಕ ಸರಣ್‌ಗೆ ಶಿಫಾರಸ್ಸು ಮಾಡಿದರು. ನಂತರ ಅವರು ತಮ್ಮ ಚೊಚ್ಚಲ ನಿರ್ದೇಶನದ ಕಾದಲ್ ಮನ್ನನ್ (೧೯೯೮) ನಲ್ಲಿ ಪ್ರಮುಖ ಪಾತ್ರವನ್ನು ನೀಡಿದರು. ಮಾನು ಆರಂಭದಲ್ಲಿ ಅವಕಾಶವನ್ನು ನಿರಾಕರಿಸಿದರು. ಆದರೆ ಆರು ತಿಂಗಳ ನಂತರ ಅವರ ಪೋಷಕರು ಒಪ್ಪಿಗೆ ನೀಡಿದ ನಂತರ ಸಹಿ ಹಾಕಿದರು. [] ಚಿತ್ರದ ಯಶಸ್ಸಿನ ಹೊರತಾಗಿಯೂ ಮಾನು ನಟಿಯಾಗಿ ಮುಂದುವರಿಯದಿರಲು ನಿರ್ಧರಿಸಿದರು. ಹಾಗೆಯೇ ಮಾನು ಆರ್ಟ್ಜ್ ಎಂಬ ಸ್ವಂತ ನೃತ್ಯ ಕಂಪನಿಯನ್ನು ಸ್ಥಾಪಿಸಿದರು. ಅವರು ಶಿವಗಾಮಿ, ಲಿವಿಂಗ್ ಟ್ರೀ, ಮಾಧವಿ ಮತ್ತು ಕೊಂಜುಮ್ ಸಾಲಂಗೈ, ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳಲ್ಲಿ ಪ್ರಮುಖ ಸ್ಪರ್ಧಿಯಾಗಿ ವಿಶ್ವದಾದ್ಯಂತ ನೃತ್ಯ ತಂಡಗಳೊಂದಿಗೆ ಭಾಗವಹಿಸಿದರು. []

ಮದುವೆಯಾದ ನಂತರ ಮಾನು ಸಿಂಗಾಪುರಕ್ಕೆ ತೆರಳಿದರು. ೨೦೧೧ರಲ್ಲಿ ಮತ್ತೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡರು. ಅವರು ಸಿಂಗೈಲ್ ಕುರುಷೇತ್ರಂ ಎಂಬ ಸಿಂಗಾಪುರದ ಚಲನಚಿತ್ರವನ್ನು ಭಾರತದಲ್ಲಿ ಪ್ರಚಾರ ಮಾಡುವುದರ ಜೊತೆಗೆ ರಜನಿಕಾಂತ್ ಅವರು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಸಹಾಯ ಮಾಡುವಲ್ಲಿಯೂ ತೊಡಗಿಸಿಕೊಂಡರು. ಚಿತ್ರದ ನಿರ್ಮಾಪಕರು ರಜನಿಕಾಂತ್ ಅವರ ನಿಕಟವರ್ತಿಯಾಗಿದ್ದು, ಅವರು ಸಿಂಗಾಪುರದಲ್ಲಿದ್ದ ಸಮಯದಲ್ಲಿ ನಟನನ್ನು ನೋಡಿಕೊಳ್ಳುವಂತೆ ಮಾನು ಅವರನ್ನು ಕೇಳಿದ್ದರು. [] ಅದೇ ವರ್ಷದಲ್ಲಿ, ಅವರು ಶ್ರೀಲಂಕಾದಲ್ಲಿ ಚಿತ್ರೀಕರಿಸಿದ ಎಝುತಾತ ಕಧೈ ಎಂಬ ಟೆಲಿಫಿಲ್ಮ್‌ಗೆ ಚಿತ್ರೀಕರಣ ಮಾಡಿದರು. ನಂತರ ಕೊಲಂಬೊದಲ್ಲಿನ ವೈದ್ಯಕೀಯ ಶಿಬಿರದಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸಕರಾದ ಅವರ ಪತಿ ಸಂದೀಪ್ ದುರಾಹ್ ಅವರೊಂದಿಗೆ ಕೆಲಸ ಮಾಡಿದರು. [] ಅವರು ಚೆನ್ನೈನಲ್ಲಿ ನಿರ್ಮಾಣದ ಜೊತೆಗೆ ಭೀಷ್ಮ, ದಿ ಗ್ರ್ಯಾಂಡ್‌ಸೈರ್, ದಿ ಪಿತಾಮಹವನ್ನು ಪ್ರದರ್ಶಿಸಲು ಸಹಾಯ ಮಾಡಿದರು. ಇದರಲ್ಲಿ ನಿರ್ದೇಶಕ ಕೆ. ಬಾಲಚಂದರ್, ರಜನಿಕಾಂತ್ ಮತ್ತು ನಟ ವಿವೇಕ್ ಭಾಗವಹಿಸಿದ್ದರು. [] ಅವರು ತಮ್ಮ ಎರಡನೇ ತಮಿಳು ಚಿತ್ರವಾದ ಎನ್ನಾ ಸತಮ್ ಇಂಧ ನೇರಮ್ (೨೦೧೪) ನಲ್ಲಿ ನಾಲ್ಕು ಮಕ್ಕಳ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಹದಿನಾರು ವರ್ಷಗಳ ನಂತರ ನಟನೆಗೆ ಪಾದಾರ್ಪಣೆ ಮಾಡಿದರು. ಚಿತ್ರದ ನಿರ್ದೇಶಕ ಗುರು ರಮೇಶ್ ಸ್ಕ್ರಿಪ್ಟ್ ಹೇಳಿದಾಗ, ಚಿತ್ರದಲ್ಲಿ ನಟಿಸಲು ತನಗೆ ಆಸಕ್ತಿ ಇಲ್ಲ ಎಂದು ಆರಂಭದಲ್ಲಿ ಹೇಳಿದ್ದರು. ನಂತರ ಅವರನ್ನು ಸಿಂಗಾಪುರ ಮೂಲದ ರಂಗಭೂಮಿ ನಟ ಪುರುವಲನ್ ಅವರನ್ನು ಭೇಟಿ ಮಾಡಲು ನಟ ರಜನಿಕಾಂತ್ ಕರೆದೊಯ್ದರು. ನಂತರ ಅವರ ಮುಂದೆ ಸ್ಕ್ರಿಪ್ಟ್ ಅನ್ನು ವಿವರಿಸಿದರು. ರಜನಿಕಾಂತ್ ಅವರ ಸಲಹೆಯ ಮೇರೆಗೆ ಮಾನು ಅಂತಿಮವಾಗಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. [] ಆದರೆ ರಜನೀಕಾಂತ್ ಅವರ ಏಕೈಕ ಕಾಳಜಿಯು ಮಾನು ಅವರು "ನಾಲ್ಕು ಏಳು ವರ್ಷದ ಮಕ್ಕಳ ತಾಯಿಯಾಗಿ" ನಟಿಸಬೇಕೆಂಬುದಾಗಿತ್ತು. ಇದು ಮಾನು ಅವರಿಗೆ ಸಮಸ್ಯೆಯಾಗಿರಲಿಲ್ಲ. ಚಿತ್ರವು ಕಡಿಮೆ-ಪ್ರೊಫೈಲ್ ಬಿಡುಗಡೆಯನ್ನು ಹೊಂದಿತ್ತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ನೀಡಿತು. []

ಚಿತ್ರಕಥೆ

[ಬದಲಾಯಿಸಿ]
ವರ್ಷ ಚಲನಚಿತ್ರ ಪಾತ್ರ ಟಿಪ್ಪಣಿಗಳು
೧೯೯೮ ಕಾದಲ್ ಮನ್ನನ್ ತಿಲೋತಮ್ಮ
೨೦೧೪ ಎನ್ನ ಸಾಯಂ ಇಂದ ನೇರಂ ನಾಲ್ಕು ಏಳು ಮಕ್ಕಳ ತಾಯಿ

ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "- Bollywood Movie News - IndiaGlitz.com". IndiaGlitz.com. Archived from the original on 15 August 2015. Retrieved 2018-09-20.
  2. "Ebullient presentation". The Hindu. 2004-04-09. Archived from the original on 2004-11-21. Retrieved 2018-09-20.
  3. "Dancing all the way: Krishnakshi Sharma | Assam Portal". www.assam.org (in ಇಂಗ್ಲಿಷ್). Retrieved 2018-09-20.
  4. ೪.೦ ೪.೧ "My first break -- Maanu". The Hindu (in Indian English). 2009-03-13. ISSN 0971-751X. Retrieved 2018-09-20.
  5. "Ayngaran International". www.ayngaran.com. Retrieved 2018-09-20.
  6. "Maanu is on a high". The Times of India. Retrieved 2018-09-20.
  7. "- Tamil Movie News - IndiaGlitz.com". IndiaGlitz.com. Archived from the original on 15 August 2015. Retrieved 2018-09-20.
  8. "I've grown to call Rajinikanth appa". Deccan Chronicle. 25 November 2013. Archived from the original on 26 November 2013. Retrieved 17 December 2013.
  9. Malathi Rangarajan (14 December 2013). "Act II". The Hindu. Retrieved 17 December 2013.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಮಾನು&oldid=1195021" ಇಂದ ಪಡೆಯಲ್ಪಟ್ಟಿದೆ