ವಿಷಯಕ್ಕೆ ಹೋಗು

ಭೂಶಾಖದ ಶಕ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sustainable energy
Renewable energy
Anaerobic digestion
Hydroelectricity · Geothermal
Microgeneration · Solar
Tidal · Wave · Wind
Energy conservation
Cogeneration · Energy efficiency
Geothermal heat pump
Green building · Passive Solar
Sustainable transport
Plug-in hybrids · Electric vehicles
ಐಸ್‌ಲೆಂಡ್‌ನಲ್ಲಿನ ನೆಸ್ಜಾವೆಲ್ಲಿರ್‌‌ ಭೂಶಾಖದ ಶಕ್ತಿ ಕೇಂದ್ರದಿಂದ ಹಬೆಯು ಮೇಲೇಳುತ್ತಿರುವುದು.

ಭೂಶಾಖದ ಶಕ್ತಿ (ಜಿಯೋಥರ್ಮಲ್‌ ಎಂಬ ಇಂಗ್ಲಿಷ್‌ ಪದ ಗ್ರೀಕ್‌‌ ಮೂಲಗಳಿಂದ ಬಂದಿರುವಂಥದ್ದು: ಜಿಯೋ ಎಂದರೆ ಭೂಮಿ ಎಂದರ್ಥ, ಹಾಗೂ ಥರ್ಮೋಸ್‌ ಎಂದರೆ ಶಾಖ ಎಂದರ್ಥ) ಎಂಬುದು ಭೂಮಿಯಲ್ಲಿ ಶೇಖರಿಸಲ್ಪಟ್ಟ ಶಾಖದಿಂದ ಪಡೆಯಲಾದ ಶಕ್ತಿಯಾಗಿದೆ. ಈ ಭೂಶಾಖದ ಶಕ್ತಿಯು ಗ್ರಹದ ಮೂಲ ಶಿಲಾಸ್ತರದ ಸಮೂಹದಿಂದ, ಖನಿಜಗಳ ವಿಕಿರಣಪಟುತ್ವದ ಕ್ಷಯಿಸುವಿಕೆಯಿಂದ, ಮತ್ತು ಮೇಲ್ಮೈಯಲ್ಲಿ ಹೀರಿಕೊಳ್ಳಲ್ಪಟ್ಟ ಸೌರಶಕ್ತಿಯಿಂದ ಹುಟ್ಟಿಕೊಳ್ಳುತ್ತದೆ. ಪ್ರಾಚೀನ ಶಿಲಾಯುಗದ ಕಾಲದಿಂದಲೂ ಇದನ್ನು ಸ್ನಾನದ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು ಮತ್ತು ಪ್ರಾಚೀನ ರೋಮನ್‌ ಕಾಲದಿಂದಲೂ ಇದನ್ನು ಅವರಣ ತಾಪನಕೇಂದ್ರಕ್ಕಾಗಿ ಬಳಸಲಾಗುತ್ತಿತ್ತು. ಆದರೆ ಈಗ ಇದು ವಿದ್ಯುಚ್ಛಕ್ತಿ ಉತ್ಪಾದನೆಯ ಮೂಲವಾಗಿ ಹೆಚ್ಚು ಚಿರಪರಿಚಿತವಾಗಿದೆ. 2007ರ ವೇಳೆಗೆ ಇದ್ದಂತೆ, ವಿಶ್ವಾದ್ಯಂತವಿರುವ ಭೂಶಾಖದ ಸ್ಥಾವರಗಳು ಸುಮಾರು 10 ಗಿಗಾವ್ಯಾಟ್‌‌ಗಳಷ್ಟು ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಜಾಗತಿಕ ವಿದ್ಯುಚ್ಛಕ್ತಿ ಬೇಡಿಕೆಯ 0.3%ನಷ್ಟು ಭಾಗವನ್ನು ಕಾರ್ಯತಃ ಪೂರೈಸುತ್ತಿವೆ. ಒಂದು ಹೆಚ್ಚುವರಿ 28 ಗಿಗಾವ್ಯಾಟ್‌ಗಳಷ್ಟು ನೇರ ಭೂಶಾಖದ ತಾಪನ ಸಾಮರ್ಥ್ಯವನ್ನು ಜಿಲ್ಲಾ ತಾಪನಕೇಂದ್ರ, ಅವರಣ ತಾಪನಕೇಂದ್ರ, ಖನಿಜ ಜಲಧಾಮ ಕೇಂದ್ರಗಳು, ಕೈಗಾರಿಕಾ ಪ್ರಕ್ರಿಯೆಗಳು, ಲವಣ ನಿರ್ಮೂಲನ ಮತ್ತು ವ್ಯಾವಸಾಯಿಕ ಅನ್ವಯಿಕೆಗಳಿಗಾಗಿ ಸ್ಥಾಪಿಸಲಾಗಿದೆ.

ಭೂಶಾಖದ ಶಕ್ತಿಯು ವೆಚ್ಚ-ಪರಿಣಾಮಕ, ವಿಶ್ವಾಸಾರ್ಹ, ಸಮರ್ಥನೀಯ, ಹಾಗೂ ಪರಿಸರೀಯ ಸ್ನೇಹಿ ಲಕ್ಷಣಗಳನ್ನು ಹೊಂದಿದೆಯಾದರೂ, ಇದು ಭೂಮಿಯ ಹೊರಪದರದ ಗಡಿಗಳಿಗೆ ಹತ್ತಿರವಿರುವ ಪ್ರದೇಶಗಳಿಗೆ ಐತಿಹಾಸಿಕವಾಗಿ ಸೀಮಿತಗೊಳ್ಳುತ್ತಾ ಬಂದಿತ್ತು. ಇತ್ತೀಚಿನ ತಾಂತ್ರಿಕ ಪ್ರಗತಿಗಳು ಕಾರ್ಯಸಾಧ್ಯವಾದ ಸಂಪನ್ಮೂಲಗಳ ವ್ಯಾಪ್ತಿ ಮತ್ತು ಗಾತ್ರವನ್ನು ಎದ್ದುಕಾಣುವಂತೆ, ಅದರಲ್ಲೂ ವಿಶೇಷವಾಗಿ ಮನೆಯ ತಾಪನವ್ಯವಸ್ಥೆಯಂಥ ಅನ್ವಯಿಕೆಗಳಿಗೆ ಸಂಬಂಧಿಸಿದಂತೆ ಪರಿಣಾಮಕಾರಿಯಾಗಿ ವಿಸ್ತರಿಸಿವೆ. ಇದರಿಂದಾಗಿ ಬಹು ವ್ಯಾಪಕವಾದ ಉಪಯೋಗವನ್ನು ಪಡೆಯುವಲ್ಲಿನ ಒಂದು ಸಂಭಾವ್ಯತೆಯನ್ನು ತೆರೆದಿಟ್ಟಂತಾಗಿದೆ. ಭೂಶಾಖದ ಬಾವಿಗಳು ಭೂಮಿಯೊಳಗಿನ ಆಳದ ಸ್ತರದಲ್ಲಿ ಹಿಡಿದಿಡಲ್ಪಟ್ಟಿರುವ ಹಸಿರುಮನೆಯ ಅನಿಲಗಳನ್ನು ಬಿಡುಗಡೆ ಮಾಡುತ್ತವೆಯಾದರೂ, ಪಳೆಯುಳಿಕೆ ಇಂಧನಗಳಿಗೆ ಹೋಲಿಸಿದಾಗ ಈ ಹೊರಸೂಸುವಿಕೆಗಳು ಅವುಗಳಿಗಿಂತ ತಲಾ ಶಕ್ತಿಯ ಏಕಮಾನಕ್ಕೆ ಸಾಕಷ್ಟು ಕಡಿಮೆ ಪ್ರಮಾಣದಲ್ಲಿವೆ. ಇದರ ಪರಿಣಾಮವಾಗಿ, ಭೂಶಾಖದ ಶಕ್ತಿಯು ಒಂದುವೇಳೆ ಪಳೆಯುಳಿಕೆ ಇಂಧನಗಳ ಸ್ಥಾನದಲ್ಲಿ ವ್ಯಾಪಕವಾಗಿ ನೆಲೆಗೊಳಿಸಲ್ಪಟ್ಟರೆ, ಜಾಗತಿಕ ತಾಪಮಾನದ ಏರಿಕೆಯನ್ನು ತಗ್ಗಿಸಲು ನೆರವಾಗುವ ಸಂಭಾವ್ಯತೆಯನ್ನು ಇದು ಹೊಂದಿದೆ ಎಂದು ಹೇಳಬಹುದು.

ಸೈದ್ಧಾಂತಿಕವಾಗಿ ಹೇಳುವುದಾದರೆ, ಭೂಮಿಯ ಭೂಶಾಖದ ಸಂಪನ್ಮೂಲಗಳು ಮಾನವಕುಲದ ಶಕ್ತಿಯ ಅಗತ್ಯತೆಗಳನ್ನು ಪೂರೈಕೆ ಮಾಡುವಲ್ಲಿ ಅಗತ್ಯಕ್ಕಿಂತ ಹೆಚ್ಚಿವೆಯಾದರೂ, ಅದರ ಪೈಕಿ ಕೇವಲ ಕೆಲವೇ ಭಾಗವನ್ನು ಲಾಭದಾಯಕವಾಗಿ ಬಳಸಿಕೊಳ್ಳಬಹುದಾಗಿದೆ. ಆಳದ ಸಂಪನ್ಮೂಲಗಳಿಗೆ ಸಂಬಂಧಿಸಿದ ಕೊರೆಯುವಿಕೆ ಮತ್ತು ಪರಿಶೋಧನಾ ಕಾರ್ಯಗಳಿಗೆ ಹತ್ತಾರು ದಶಲಕ್ಷ ಡಾಲರುಗಳಷ್ಟು ಹಣವು ವೆಚ್ಚವಾಗುತ್ತದೆ, ಮತ್ತು ಯಶಸ್ಸಿನ ಖಾತರಿ ಇಲ್ಲಿರುವುದಿಲ್ಲ. ಭೂಶಾಖದ ಶಕ್ತಿಯ ಭವಿಷ್ಯದ ವ್ಯಾಪಿಸುವಿಕೆಗೆ ಸಂಬಂಧಿಸಿದ ಮುನ್ಸೂಚನೆಗಳು, ತಂತ್ರಜ್ಞಾನದ ಬೆಳವಣಿಗೆ, ಶಕ್ತಿಯ ಬೆಲೆ, ಸಹಾಯಧನಗಳು, ಹಾಗೂ ಬಡ್ಡಿದರಗಳನ್ನು ಕುರಿತಾದ ಎಣಿಕೆಗಳನ್ನು ಅವಲಂಬಿಸಿರುತ್ತವೆ.

ವಿದ್ಯುಚ್ಛಕ್ತಿ

[ಬದಲಾಯಿಸಿ]

ಇಪ್ಪತ್ತ-ನಾಲಕ್ಕು ದೇಶಗಳು 2005ರಲ್ಲಿ ಭೂಶಾಖದ ಶಕ್ತಿಯಿಂದ ಒಟ್ಟು 56,786 ಗಿಗಾವ್ಯಾಟ್‌-ಗಂಟೆಗಳಷ್ಟು (GW·h) (204 PJ) ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿದ್ದು, ಇದು ವಿಶ್ವಾದ್ಯಂತದ ವಿದ್ಯುಚ್ಛಕ್ತಿ ಬಳಕೆಯ 0.3%ನಷ್ಟು ಪಾಲನ್ನು ಪೂರೈಸಿದಂತಾಗಿದೆ.[] ಎಲ್ಲಾ ಮೂಲಗಳಿಂದ ಬರುವ ಜಾಗತಿಕ ವಿದ್ಯುಚ್ಛಕ್ತಿ ಉತ್ಪಾದನೆಯೊಂದಿಗೆ ಸಮಗತಿಯಲ್ಲಿ ಹೆಜ್ಜೆಹಾಕುತ್ತಾ ಉತ್ಪಾದನೆಯು ವಾರ್ಷಿಕವಾಗಿ 3%ನಷ್ಟು ಬೆಳೆಯುತ್ತಿದೆ.[] ಸ್ಥಾವರಗಳ ಸಂಖ್ಯೆಯಲ್ಲಿನ ಒಂದು ಹೆಚ್ಚಳದ ಮೂಲಕವಷ್ಟೇ ಅಲ್ಲದೇ ಅವುಗಳ ಸಾಮರ್ಥ್ಯದ ಅಂಶಗಳಲ್ಲಿನ ಸುಧಾರಣೆಗಳ ಮೂಲಕವೂ ಸಹ ಬೆಳವಣಿಗೆಯನ್ನು ಸಾಧಿಸಲಾಗುತ್ತಿದೆ.[] ಏಕೆಂದರೆ, ಉದಾಹರಣೆಗೆ ಗಾಳಿಶಕ್ತಿ ಅಥವಾ ಸೌರಶಕ್ತಿಗಳಂತಿರದ ಭೂಶಾಖದ ಶಕ್ತಿಯು, ಶಕ್ತಿಯ ಬದಲಾಗುವ ಮೂಲಗಳ ಮೇಲೆ ನೆಚ್ಚಿಕೊಂಡಿರುವುದಿಲ್ಲ. ಇದರ ಸಾಮರ್ಥ್ಯದ ಅಂಶವು ಸಾಕಷ್ಟು ದೊಡ್ಡದಿದ್ದು, 96%ನಷ್ಟರವರೆಗೆ ಅದು ಸಮರ್ಥಿಸಲ್ಪಟ್ಟಿದೆ.[] 2005ರಲ್ಲಿ ಇದರ ಜಾಗತಿಕ ಸರಾಸರಿ ಪ್ರಮಾಣವು 73%ನಷ್ಟಿತ್ತು. ಜಾಗತಿಕ ಮಟ್ಟದಲ್ಲಿನ ಇದರ ನೆಲೆಗೊಳಿಸಲಾದ ಅಥವಾ ಅಳವಡಿಸಲ್ಪಟ್ಟ ಸಾಮರ್ಥ್ಯವು 2007ರಲ್ಲಿ 10 ಗಿಗಾವ್ಯಾಟ್‌ಗಳಷ್ಟು (GW) ಇತ್ತು.[]

ಪ್ರಪಂಚದಲ್ಲಿನ ಭೂಶಾಖದ ಶಕ್ತಿ ಸ್ಥಾವರಗಳ ಅತ್ಯಂತ ದೊಡ್ಡ ಗುಂಪನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಗಳ(USA) ಕ್ಯಾಲಿಫೋರ್ನಿಯಾದಲ್ಲಿನ ಒಂದು ಭೂಶಾಖದ ಕ್ಷೇತ್ರವಾದ ದಿ ಗೀಸರ್ಸ್‌‌ ಎಂಬಲ್ಲಿ ಸ್ಥಾಪಿಸಲಾಗಿದೆ.[] 2004ರ ವೇಳೆಗೆ ಇದ್ದಂತೆ, ಐದು ದೇಶಗಳು (ಎಲ್‌ ಸಾಲ್ವೆಡಾರ್‌‌, ಕೀನ್ಯಾ, ಫಿಲಿಪ್ಪೀನ್ಸ್‌‌, ಐಸ್‌ಲೆಂಡ್‌, ಮತ್ತು ಕೋಸ್ಟ ರಿಕಾ) ತಮ್ಮ ವಿದ್ಯುಚ್ಛಕ್ತಿಯ ಪೈಕಿ 15%ಗಿಂತ ಹೆಚ್ಚು ಭಾಗವನ್ನು ಭೂಶಾಖದ ಮೂಲಗಳಿಂದ ಉತ್ಪಾದಿಸುತ್ತವೆ.[]

ತೀರಾ ಇತ್ತೀಚಿನವರೆಗೆ ಭೂಶಾಖದ ವಿದ್ಯುತ್‌ ಸ್ಥಾವರಗಳನ್ನು ಭೂಮಿಯ ಹೊರಪದರಗಳ ಅಂಚುಗಳ ಮೇಲೆ ಏಕಮಾತ್ರವಾಗಿ ಕಟ್ಟಿಕೊಂಡು ಬರಲಾಗಿದೆ. ಭೂಮಿಯ ಹೊರಪದರಗಳಲ್ಲಿ ಮೇಲ್ಮೈಗೆ ಸಮೀಪದಲ್ಲಿ ಉನ್ನತ ತಾಪಮಾನದ ಭೂಶಾಖದ ಸಂಪನ್ಮೂಲಗಳು ಲಭ್ಯವಿರುವುದು ಇದಕ್ಕೆ ಕಾರಣ. ಅವಳಿ ಆವರ್ತನ ಶಕ್ತಿಸ್ಥಾವರಗಳ ಅಭಿವೃದ್ಧಿ ಹಾಗೂ ಕೊರೆಯುವಿಕೆ ಮತ್ತು ಸಾರತೆಗೆಯುವಿಕೆ ತಂತ್ರಜ್ಞಾನದಲ್ಲಿನ ಸುಧಾರಣೆಗಳು, ಒಂದು ಹೆಚ್ಚು ಬೃಹತ್ತಾಗಿರುವ ಭೌಗೋಳಿಕ ವ್ಯಾಪ್ತಿಯ ಮೇಲೆ ವರ್ಧಿಸಲ್ಪಟ್ಟ ಭೂಶಾಖದ ಪದ್ಧತಿಗಳಿಗೆ ಅವಕಾಶ ಕಲ್ಪಿಸಬಹುದು.[] ಪ್ರಮಾಣೀಕರಣ ಯೋಜನೆಗಳು ಜರ್ಮನಿಯ ಲ್ಯಾಂಡೌ-ಫಾಲ್ಜ್‌, ಮತ್ತು ಫ್ರಾನ್ಸ್‌‌‌ನ ಸೌಲ್ಟ್ಜ್‌-ಸೌಸ್‌-ಫೋರೆಟ್ಸ್‌‌ ಎಂಬಲ್ಲಿ ಕಾರ್ಯಾತ್ಮಕವಾಗಿದ್ದರೆ, ಸ್ವಿಜರ್‌ಲೆಂಡ್‌ನ ಬೇಸೆಲ್‌ ಎಂಬಲ್ಲಿನ ಒಂದು ಮುಂಚಿನ ಪ್ರಯತ್ನವನ್ನು ಅದು ಭೂಕಂಪಗಳನ್ನು ಪ್ರಚೋದಿಸಿದ ನಂತರ ಮುಚ್ಚಲಾಯಿತು. ಇತರ ಪ್ರಮಾಣೀಕರಣ ಯೋಜನೆಗಳು

ಆಸ್ಟ್ರೇಲಿಯಾ, ಯುನೈಟೆಡ್‌ ಕಿಂಗ್‌ಡಂ (UK), ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ನಿರ್ಮಾಣದ ಹಂತದಲ್ಲಿವೆ.[]

ನೇರ ಪ್ರಯೋಗ

[ಬದಲಾಯಿಸಿ]

2004ರಲ್ಲಿ, ಸರಿಸುಮಾರು 70 ದೇಶಗಳು ಒಟ್ಟಾರೆಯಾಗಿ 270 ಪೆಟಾಜೌಲ್‌ಗಳಷ್ಟು (PJ) ಪ್ರಮಾಣದ ಭೂಶಾಖದ ತಾಪನದ ನೇರ ಬಳಕೆ ಮಾಡಿಕೊಂಡಿವೆ. ಇದರ ಪೈಕಿಯ ಅರ್ಧಕ್ಕಿಂತ ಹೆಚ್ಚುಭಾಗದ ಶಕ್ತಿಯು ಅವರಣ ತಾಪನಕೇಂದ್ರಕ್ಕಾಗಿ ಬಳಸಲ್ಪಟ್ಟರೆ, ಮತ್ತೊಂದು ಮೂರು ಭಾಗವು ಬಿಸಿಮಾಡಲಾದ ಈಜುಕೊಳಗಳಿಗಾಗಿ ಬಳಕೆಯಾಯಿತು. ಉಳಿಕೆಯಾದ ಭಾಗವು ಕೈಗಾರಿಕಾ ಮತ್ತು ವ್ಯಾವಸಾಯಿಕ ಅನ್ವಯಿಕೆಗಳಿಗಾಗಿ ಬಳಸಲ್ಪಟ್ಟಿತು. ಜಾಗತಿಕ ಮಟ್ಟದಲ್ಲಿನ ನೆಲೆಗೊಳಿಸಲ್ಪಟ್ಟ ಸಾಮರ್ಥ್ಯವು 28 GWನಷ್ಟು ಇತ್ತಾದರೂ, ಚಳಿಗಾಲದಲ್ಲಿ ಶಾಖವು ಬಹುಪಾಲು ಅಗತ್ಯವಾಗುತ್ತದೆಯಾದ್ದರಿಂದ, ಸಾಮರ್ಥ್ಯದ ಅಂಶಗಳು ಕಡಿಮೆಯಾಗಿರುವಂತೆ (ಸರಾಸರಿಯಾಗಿ 30%ನಷ್ಟು) ಕಂಡುಬಂದವು. ಮೇಲೆ ನಮೂದಿಸಲಾಗಿರುವ ಅಂಕಿ-ಅಂಶಗಳಲ್ಲಿ 88 PJಯಷ್ಟು ಅವರಣ ತಾಪನದ ಪ್ರಮಾಣವು ಎದ್ದುಕಾಣುವಂತಿದೆ. ಇದನ್ನು 15 GWನಷ್ಟು ಒಂದು ಒಟ್ಟು ಸಾಮರ್ಥ್ಯದೊಂದಿಗಿನ, ಒಂದು ಅಂದಾಜಿಸಲ್ಪಟ್ಟ 1.3 ದಶಲಕ್ಷ ಭೂಶಾಖದ ಶಾಖ ಪಂಪುಗಳಿಂದ ಪಡೆಯಲಾಗಿದೆ.[] ಶಾಖದ ಪಂಪುಗಳು ಭೂಶಾಖದ ಶಕ್ತಿಯನ್ನು ಬಳಕೆಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಅತ್ಯಂತ-ವೇಗವಾಗಿ ಬೆಳೆಯುತ್ತಿರುವ ಸಾಧನಗಳಾಗಿದ್ದು, ಶಕ್ತಿ ಉತ್ಪಾದನೆಯಲ್ಲಿ 30%ನಷ್ಟು ಪ್ರಮಾಣದಲ್ಲಿರುವ ಒಂದು ಜಾಗತಿಕ ವಾರ್ಷಿಕ ಬೆಳವಣಿಗೆಯನ್ನು ಅವು ಹೊಂದಿವೆ.[] ಇವುಗಳ ಪೈಕಿ ಬಹುಪಾಲು ಹೊಸ ಶಾಖದ ಪಂಪುಗಳು ಗೃಹಸಂಬಂಧಿ ತಾಪನಕಾರ್ಯಗಳಿಗಾಗಿ ಅಳವಡಿಸಲ್ಪಡುತ್ತಿವೆ.

ನೇರ ತಾಪನ ಪ್ರಕ್ರಿಯೆಯು ತನ್ನೆಲ್ಲಾ ಸ್ವರೂಪಗಳಲ್ಲಿ ವಿದ್ಯುಚ್ಛಕ್ತಿ ಉತ್ಪಾದನೆಗಿಂತ ತುಂಬಾ ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಶಾಖ ಸಂಪನ್ಮೂಲದ ಮೇಲೆ ಇದು ಕಡಿಮೆ ಬೇಡಿಕೆಯನ್ನುಳ್ಳ ತಾಪಮಾನದ ಅವಶ್ಯಕತೆಗಳನ್ನು ಇರಿಸುತ್ತದೆ. ಶಾಖವು ಒಂದು ಭೂಶಾಖದ ವಿದ್ಯುತ್ತಿನ ಸ್ಥಾವರದೊಂದಿಗಿನ ಸಹ-ಉತ್ಪಾದನೆಯಿಂದ ಅಥವಾ ಸಣ್ಣದಾಗಿರುವ ಬಾವಿಗಳಿಂದ ಅಥವಾ ಆಳವಿಲ್ಲದ ನೆಲದಲ್ಲಿ ಹುದುಗಿಸಲ್ಪಟ್ಟಿರುವ ಶಾಖ ವಿನಿಮಯಕಾರಕಗಳಿಂದ ಬರಬಹುದು. ಇದರ ಪರಿಣಾಮವಾಗಿ, ಒಂದು ಸಾಕಷ್ಟು ಹೆಚ್ಚಿನ ಭೌಗೋಳಿಕ ವ್ಯಾಪ್ತಿಯ ಮೇಲೆ ಭೂಶಾಖದ ತಾಪನವು ಭೂಶಾಖದ ವಿದ್ಯುಚ್ಛಕ್ತಿಗಿಂತ ಮಿತವ್ಯಯಕಾರಿಯಾಗಿದೆ. ನೈಸರ್ಗಿಕ ಬಿಸಿನೀರಿನ ಬುಗ್ಗೆಗಳು ಲಭ್ಯವಿರುವ ಜಾಗಗಳಲ್ಲಿ ಕಾಯಿಸಿದ ನೀರನ್ನು ನೇರವಾಗಿ ಶಾಖ ಪ್ರಸಾರಕಗಳೊಳಗೆ ಹಾಯಿಸಬಹುದು. ಒಂದುವೇಳೆ, ನೆಲವು ಬಿಸಿಯಾಗಿದ್ದರೂ ಶುಷ್ಕವಾಗಿದ್ದರೆ, ಭೂಮಿಯ ಕೊಳವೆಗಳು ಅಥವಾ ಕೆಳಕುಳಿಯ ಶಾಖ ವಿನಿಮಯಕಾರಕಗಳು ಶಾಖವನ್ನು ಸಂಗ್ರಹಿಸಬಲ್ಲವು. ಆದರೆ, ನೆಲವು ಕೋಣೆಯ ತಾಪಮಾನಕ್ಕಿಂತಲೂ ತಂಪಾಗಿರುವ ಪ್ರದೇಶಗಳಲ್ಲಿಯೂ, ಸಾಂಪ್ರದಾಯಿಕ ಕುಲುಮೆಗಳಿಂದ ಉತ್ಪಾದಿಸಬಹುದಾದುದಕ್ಕಿಂತ ಹೆಚ್ಚು ವೆಚ್ಚ-ಪರಿಣಾಮಕವಾಗಿರುವ ಹಾಗೂ ಚೊಕ್ಕವಾಗಿರುವ ರೀತಿಯಲ್ಲಿ ಶಾಖವನ್ನು ಒಂದು ಭೂಶಾಖದ ಶಾಖ ಪಂಪಿನಿಂದ ಪಡೆದುಕೊಳ್ಳಲು ಸಾಧ್ಯವಿದೆ.[] ಈ ಉಪಕರಣಗಳು ಸಾಂಪ್ರದಾಯಿಕವಾದ ಭೂಶಾಖದ ತಂತ್ರಗಳಿಗಿಂತ ಮಿಗಿಲಾಗಿ, ಸಾಕಷ್ಟು ಮೇಲುಮೇಲಿನ ಭಾಗದಲ್ಲಿರುವ ಹಾಗೂ ತಂಪಾಗಿರುವ ಸಂಪನ್ಮೂಲಗಳನ್ನು ಸೆಳೆಯುತ್ತವೆ, ಮತ್ತು ಹವಾ ನಿಯಂತ್ರಣ, ಕಾಲೋಚಿತವಾದ ಶಕ್ತಿ ಸಂಗ್ರಹಣೆ, ಸೌರಶಕ್ತಿ ಸಂಗ್ರಹಿಸುವಿಕೆ, ಹಾಗೂ ವಿದ್ಯುತ್‌ ತಾಪನವನ್ನು ಒಳಗೊಂಡಂತೆ ಒಂದು ವೈವಿಧ್ಯಮಯವಾದ ಇತರ ಚಟುವಟಿಕೆಗಳನ್ನು ಅವು ಆಗಿಂದಾಗ್ಗೆ ಸಂಯೋಜಿಸುತ್ತವೆ. ಭೂಶಾಖದ ಶಾಖ ಪಂಪುಗಳನ್ನು ಪ್ರಪಂಚದ ಯಾವುದೇ ಭಾಗದಲ್ಲಿ ಅವರಣ ತಾಪನ ಪ್ರಕ್ರಿಯೆಗಾಗಿ ಅವಶ್ಯವಾಗಿ ಬಳಸಿಕೊಳ್ಳಬಹುದು.

ಭೂಶಾಖದ ಶಾಖವು ಅನೇಕ ಅನ್ವಯಿಕೆಗಳನ್ನು ಬೆಂಬಲಿಸುತ್ತದೆ. ಇಡೀ ಸಮುದಾಯಗಳಲ್ಲಿ ಕಟ್ಟಡಗಳನ್ನು ಬಿಸಿಮಾಡಲು ಜಿಲ್ಲಾ ತಾಪನ ಅನ್ವಯಿಕೆಗಳು ಕೊಳವೆಗಳ ಮೂಲಕ ಸಾಗಿಸಲಾಗುವ ಬಿಸಿನೀರಿನ ಜಾಲಗಳನ್ನು ಬಳಸುತ್ತವೆ. ಐಸ್‌ಲೆಂಡ್‌ನ ರೆಕ್ಜಾವಿಕ್‌ ಎಂಬಲ್ಲಿ, ಜಿಲ್ಲಾ ತಾಪನ ವ್ಯವಸ್ಥೆಯಿಂದ ಬರುವ ಬಳಸಿದ ನೀರನ್ನು, ಮಂಜನ್ನು ಕರಗಿಸಲು ಪಾವಟಿಗೆ ಹಾಗೂ ಪಾದಚಾರಿ ಹಾದಿಗಳ ಕೆಳಗೆ ಕೊಳವೆಗಳ ಮೂಲಕ ಹಾಯಿಸಲಾಗುತ್ತದೆ.[] ಭೂಶಾಖದ ಲವಣ ನಿರ್ಮೂಲನ ವ್ಯವಸ್ಥೆಯನ್ನು ನಿರೂಪಿಸಲಾಗಿದೆ.

ಪರಿಸರೀಯ ಪ್ರಭಾವ

[ಬದಲಾಯಿಸಿ]
ಫಿಲಿಪ್ಪೀನ್ಸ್‌‌ನಲ್ಲಿನ ಭೂಶಾಖದ ಶಕ್ತಿ ಕೇಂದ್ರ
ಈಶಾನ್ಯ ಐಸ್‌ಲೆಂಡ್‌ನಲ್ಲಿನ ಕ್ರಾಫ್ಲಾ ಭೂಶಾಖದ ಕೇಂದ್ರ

ಆಳದ ಭೂಮಿಯಿಂದ ಸೆಳೆಯಲ್ಪಟ್ಟ ದ್ರವ ಪದಾರ್ಥಗಳು ಅನಿಲಗಳ ಒಂದು ಮಿಶ್ರಣವನ್ನು ತಮ್ಮೊಂದಿಗೆ ಒಯ್ಯುತ್ತವೆ. ಅವುಗಳಲ್ಲಿ ಗಮನಾರ್ಹವಾದವುಗಳೆಂದರೆ: ಇಂಗಾಲದ ಡೈಯಾಕ್ಸೈಡು (CO
2
), ಜಲಜನಕದ ಸಲ್ಫೈಡು (H
2
S
), ಮೀಥೇನ್‌ (CH
4
) ಮತ್ತು ಅಮೋನಿಯಾ (NH
3
). ಈ ಮಾಲಿನ್ಯಕಾರಕಗಳು ಒಂದು ವೇಳೆ ಬಿಡುಗಡೆ ಮಾಡಲ್ಪಟ್ಟರೆ, ಜಾಗತಿಕ ತಾಪಮಾನದ ಏರಿಕೆ, ಆಮ್ಲ ಮಳೆ, ಮತ್ತು ಅನಾರೋಗ್ಯಕರ ಅಥವಾ ಹಾನಿಕರ ವಾಸನೆಗಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತವೆ. ಅಸ್ತಿತ್ವದಲ್ಲಿರುವ ಭೂಶಾಖದ ವಿದ್ಯುತ್‌ ಸ್ಥಾವರಗಳು ಪ್ರತಿ ಮೆಗಾವ್ಯಾಟ್‌-ಗಂಟೆಯಷ್ಟು (MW·h) ವಿದ್ಯುಚ್ಛಕ್ತಿಗೆ ಒಂದು ಸರಾಸರಿ 122 ಕೆ.ಜಿ.ಯಷ್ಟು ...CO
2
ನ್ನು ಹೊರಸೂಸುತ್ತವೆ. ಇದು ಸಾಂಪ್ರದಾಯಿಕ ಪಳೆಯುಳಿಕೆ ಇಂಧನ ಸ್ಥಾವರಗಳ ಹೊರಸೂಸುವಿಕೆಯ ತೀವ್ರತೆಯ ಒಂದು ಪುಟ್ಟ ಅಂಶವಾಗಿದೆ.[೧೦] ಉನ್ನತ ಮಟ್ಟಗಳ ಆಮ್ಲಗಳು ಮತ್ತು ಬಾಷ್ಪಶೀಲ ರಾಸಾಯನಿಕಗಳನ್ನು ಕಂಡುಕೊಳ್ಳುವ ಸ್ಥಾವರಗಳು, ನಿಷ್ಕಾಸವನ್ನು ತಗ್ಗಿಸಲು ಹೊರಸೂಸುವಿಕೆಯ-ನಿಯಂತ್ರಣದ ವ್ಯವಸ್ತೆಗಳನ್ನು ಸಾಮಾನ್ಯವಾಗಿ ಅಳವಡಿಸಿಕೊಂಡಿರುತ್ತವೆ. ಸೈದ್ಧಾಂತಿಕವಾಗಿ ಹೇಳುವುದಾದರೆ, ಭೂಶಾಖದ ಸ್ಥಾವರಗಳು ಇಂಗಾಲದ ವಶ ಮತ್ತು ಸಂಗ್ರಹಣೆಯ ಒಂದು ಸ್ವರೂಪದಲ್ಲಿ ಈ ಅನಿಲಗಳನ್ನು ಭೂಮಿಯೊಳಗೆ ಹಿಂದಕ್ಕೆ ಒಳಹೊಗಿಸಬಲ್ಲವು.

ಕರಗಿಹೋಗಿರುವ ಅನಿಲಗಳ ಜೊತೆಯಲ್ಲಿ, ಭೂಶಾಖದ ಮೂಲಗಳಿಂದ ಬರುವ ಬಿಸಿನೀರು ಪಾದರಸ, ಆರ್ಸೆನಿಕ್‌, ಬೋರಾನ್‌, ಆಂಟಿಮನಿ, ಮತ್ತು ಲವಣದಂಥ ವಿಷಕಾರಿ ರಾಸಾಯನಿಕಗಳನ್ನು ಕರಗಿದ ಸ್ಥಿತಿಯಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಹೊಂದಿರಬಹುದು.[೧೧] ಈ ರಾಸಾಯನಿಕಗಳು ನೀರು ತಣ್ಣಗಾದಂತೆ ದ್ರಾವಣದಿಂದ ಆಚೆ ಬರುತ್ತವೆ, ಮತ್ತು ಒಂದು ವೇಳೆ ಇವು ಬಿಡುಗಡೆಯಾದಲ್ಲಿ ಪರಿಸರೀಯ ಹಾನಿಯನ್ನುಂಟುಮಾಡಬಲ್ಲವು. ಬಳಸಲ್ಪಟ್ಟ ಭೂಶಾಖದ ದ್ರವ ಪದಾರ್ಥಗಳನ್ನು ಉತ್ಪಾದನೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಮರಳಿ ಭೂಮಿಗೆ ಒಳಹೊಗಿಸುವ ಆಧುನಿಕ ಪರಿಪಾಠವು, ಈ ಪರಿಸರೀಯ ಅಪಾಯವನ್ನು ತಗ್ಗಿಸುವುದರ ಪಾರ್ಶ್ವ ಪ್ರಯೋಜನವನ್ನು ಹೊಂದಿದೆ.

ನೇರ ಭೂಶಾಖದ ತಾಪನ ವ್ಯವಸ್ಥೆಗಳು ಪಂಪುಗಳು ಮತ್ತು ಸಂಪೀಡಕಗಳನ್ನು ಒಳಗೊಳ್ಳುತ್ತವೆ, ಮತ್ತು ಅವು ಬಳಸಿಕೊಳ್ಳುವ ವಿದ್ಯುಚ್ಛಕ್ತಿಯು ಒಂದು ಮಾಲಿನ್ಯಕಾರಕ ಮೂಲದಿಂದ ಬರಬಹುದು. ಈ ಪರಾವಲಂಬಿ ಹೊರೆಯು ಸಾಮಾನ್ಯವಾಗಿ ಶಾಖ ಉತ್ಪಾದನೆಯ ಒಂದು ಅಂಶವಾಗಿರುತ್ತದೆ, ಆದ್ದರಿಂದ ಇದು ಯಾವಾಗಲೂ ವಿದ್ಯುತ್‌ ತಾಪನಕ್ಕಿಂತಲೂ ಕಡಿಮೆ ಮಾಲಿನ್ಯಕಾರಕವಾಗಿರುತ್ತದೆ. ಆದಾಗ್ಯೂ, ಒಂದುವೇಳೆ ಇಂಧನಗಳನ್ನು ಸುಡುವುದರ ಮೂಲಕ ವಿದ್ಯುಚ್ಛಕ್ತಿಯು ಉತ್ಪಾದಿಸಲ್ಪಟ್ಟರೆ, ಆಗ ಭೂಶಾಖದ ತಾಪನದ ನಿವ್ವಳ ಮಾಲಿನ್ಯವನ್ನು ಶಾಖಕ್ಕಾಗಿ ಇಂಧನವನ್ನು ನೇರವಾಗಿ ಕಾಯಿಸುವುದಕ್ಕೆ ಹೋಲಿಸಬಹುದಾಗಿದೆ. ಉದಾಹರಣೆಗೆ, ಸಂಯೋಜಿತ ಆವರ್ತನದ ನೈಸರ್ಗಿಕ ಅನಿಲ ಸ್ಥಾವರವೊಂದರಿಂದ ಪಡೆದ ವಿದ್ಯುಚ್ಛಕ್ತಿಯಿಂದ ಶಕ್ತಿಪಡೆದ ಒಂದು ಭೂಶಾಖದ ಶಾಖ ಪಂಪು, ಅದೇ ಗಾತ್ರದ, ನೈಸರ್ಗಿಕ ಅನಿಲವನ್ನು ಬಾಷ್ಪೀಕರಿಸುವ ಕುಲುಮೆಯೊಂದು ಉತ್ಪಾದಿಸುವ ಮಾಲಿನ್ಯದಷ್ಟೇ ಸುಮಾರಿನ ಪ್ರಮಾಣದಲ್ಲಿ ಮಾಲಿನ್ಯವನ್ನುಂಟುಮಾಡುತ್ತದೆ.[] ಆದ್ದರಿಂದ, ನೇರ ಭೂಶಾಖದ ತಾಪನ ಅನ್ವಯಿಕೆಗಳ ಪರಿಸರೀಯ ಮೌಲ್ಯವು, ನೆರೆಹೊರೆಯ ವಿದ್ಯುತ್‌ ಚೌಕಟ್ಟಿನ ಹೊರಸೂಸುವಿಕೆಗಳ ತೀವ್ರತೆಯ ಮೇಲೆ ಅತೀವವಾಗಿ ಅವಲಂಬಿತವಾಗಿದೆ.

ಸ್ಥಾವರ ನಿರ್ಮಾಣವು ನೆಲದ ಸ್ಥಿರತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು. ನ್ಯೂಜಿಲೆಂಡ್‌‌‌ನ[] ವೈರೇಕೀ ಕ್ಷೇತ್ರದಲ್ಲಿ ಹಾಗೂ ಜರ್ಮನಿಯ ಸ್ಟೌಫೆನ್‌ ಇಮ್‌ ಬ್ರೀಸ್ಗೌನಲ್ಲಿ ಕುಸಿತವು ಸಂಭವಿಸಿದೆ.[೧೨] ಜಲಸಂಪೀಡಿತ ಸೀಳಾಗುವಿಕೆಯ ಭಾಗವಾಗಿ ವರ್ಧಿಸಲ್ಪಟ್ಟ ಭೂಶಾಖದ ವ್ಯವಸ್ಥೆಗಳು ಭೂಕಂಪಗಳನ್ನು ಪ್ರಚೋದಿಸಬಹುದು. ನೀರು ಒಳಹೊಗಿಸುವ ಪ್ರಕ್ರಿಯೆಯ ಮೊದಲ 6 ದಿನಗಳ ಅವಧಿಯ ನಂತರದಲ್ಲಿ ರಿಕ್ಟರ್‌ ಮಾಪಕದ ಮೇಲೆ 3.4ರಷ್ಟು ಪ್ರಮಾಣದವರೆಗಿನ 10,000ಕ್ಕೂ ಹೆಚ್ಚಿನ ಭೂಕಂಪ ಸಂಬಂಧಿ ಘಟನೆಗಳು ಸಂಭವಿಸಿದ್ದರಿಂದಾಗಿ, ಸ್ವಿಜರ್‌ಲೆಂಡ್‌‌‌ನ ಬೇಸೆಲ್‌‌ನಲ್ಲಿನ ಯೋಜನೆಯನ್ನು ರದ್ದುಗೊಳಿಸಲಾಯಿತು.[೧೩]

ಭೂಶಾಖದ ಸ್ಥಾವರವು ಕನಿಷ್ಟತಮ ಭೂಮಿ ಹಾಗೂ ಸಿಹಿನೀರಿನ ಅವಶ್ಯಕತೆಗಳನ್ನು ಹೊಂದಿದೆ. ಕಲ್ಲಿದ್ದಲಿನ ಶಾಖೋತ್ಪನ್ನ ಸೌಕರ್ಯಗಳು ಹಾಗೂ ಗಾಳಿಯ ಕೇಂದ್ರಗಳಿಂದ ಕ್ರಮವಾಗಿ ಬಳಸಲ್ಪಡುವ 32 ಮತ್ತು 12 ಚದರ ಕಿಲೋಮೀಟರುಗಳ ಸ್ಥಳಾವಕಾಶಕ್ಕೆ ಪ್ರತಿಯಾಗಿ, ಭೂಶಾಖದ ಸ್ಥಾವರಗಳು ಪ್ರತಿ ಗಿಗಾವ್ಯಾಟ್‌ನಷ್ಟು ವಿದ್ಯುತ್ತಿನ ಉತ್ಪಾದನೆಗೆ (ಸಾಮರ್ಥ್ಯವಲ್ಲ) 3.5 ಚದರ ಕಿಲೋಮೀಟರುಗಳಷ್ಟು ಸ್ಥಳಾವಕಾಶವನ್ನು ಬಳಸಿಕೊಳ್ಳುತ್ತವೆ.[] ಪ್ರತಿ MW·h ಪ್ರಮಾಣದ ಉತ್ಪಾದನೆಗೆ ಅವು 20 ಲೀಟರುಗಳಷ್ಟು ಸಿಹಿನೀರನ್ನು ಬಳಸಿಕೊಂಡರೆ, ಪರಮಾಣು, ಕಲ್ಲಿದ್ದಲು, ಅಥವಾ ತೈಲ ಸಂಬಂಧಿ ವ್ಯವಸ್ಥೆಗಳು ಪ್ರತಿ MW·h ಪ್ರಮಾಣದ ಉತ್ಪಾದನೆಗೆ 1000 ಲೀಟರುಗಳಿಗೂ ಹೆಚ್ಚಿನ ಪ್ರಮಾಣದ ಸಿಹಿನೀರನ್ನು ಬಳಸುತ್ತವೆ.[]

ಆರ್ಥಿಕತೆ

[ಬದಲಾಯಿಸಿ]

ಭೂಶಾಖದ ಶಕ್ತಿಗೆ ಯಾವುದೇ ಇಂಧನವು ಬೇಕಾಗಿಲ್ಲವಾದ್ದರಿಂದ, ಇಂಧನ ವೆಚ್ಚದ ಏರಿಳಿತಗಳಿಂದ ಅದು ವಿಮುಕ್ತಿಯನ್ನು ಪಡೆದಿದೆ. ಆದರೆ ಇದರ ಬಂಡವಾಳ ವೆಚ್ಚಗಳು ಹೆಚ್ಚಿನ ಮಟ್ಟದಲ್ಲಿರುವುದು ಕಂಡುಬರುತ್ತದೆ. ಅರ್ಧಕ್ಕಿಂತ ಹೆಚ್ಚು ಹಣವು ಕೊರೆಯುವಿಕೆಯೆಡೆಗಿನ ವೆಚ್ಚಗಳಿಗೇ ಹೋಗುತ್ತದೆ, ಮತ್ತು ಆಳದ ಸಂಪನ್ಮೂಲಗಳ ಪರಿಶೋಧನಾ ಕಾರ್ಯವು ಗಣನೀಯ ಮಟ್ಟದ ಅಪಾಯಗಳಿಗೆ ಈಡುಮಾಡುತ್ತದೆ. ನೆವಡಾದಲ್ಲಿನ ಒಂದು ವಿಶಿಷ್ಟವಾದ ಜೋಡಿಬಾವಿಯು 4.5 ಮೆಗಾವ್ಯಾಟ್‌‌ಗಳಷ್ಟು (MW) ವಿದ್ಯುಚ್ಛಕ್ತಿ ಉತ್ಪಾದನೆಯನ್ನು ಹಾಗೂ ಕೊರೆತಕ್ಕಾಗಿ ಸುಮಾರು 10 ದಶಲಕ್ಷ $ನಷ್ಟು ವೆಚ್ಚಗಳನ್ನು 20%ನಷ್ಟಿರುವ ಒಂದು ವೈಫಲ್ಯ ಪ್ರಮಾಣದೊಂದಿಗೆ ಬೆಂಬಲಿಸಬಲ್ಲದು.[೧೪] ಒಟ್ಟಾರೆಯಾಗಿ, ವಿದ್ಯುತ್ತಿನ ಸ್ಥಾವರ ನಿರ್ಮಾಣ ಮತ್ತು ಬಾವಿಯನ್ನು ಕೊರೆಯುವಿಕೆಗೆ ಪ್ರತಿ MWನ ವಿದ್ಯುತ್ತಿನ ಸಾಮರ್ಥ್ಯಕ್ಕೆ ಸುಮಾರು 2-5 ದಶಲಕ್ಷ €ನಷ್ಟು ವೆಚ್ಚವಾದರೆ, ಸಮಗೊಳಿಸಲಾದ ಶಕ್ತಿ ವೆಚ್ಚವು ಪ್ರತಿ kW·hಗೆ 0.04-0.10 €ನಷ್ಟಿರುತ್ತದೆ.[೧೫] 2007ರಲ್ಲಿ ಪ್ರತಿ MWಗೆ ಬಂಡವಾಳ ವೆಚ್ಚಗಳು 4 ದಶಲಕ್ಷ $ಗಿಂತಲೂ ಹೆಚ್ಚಿರುವುದರೊಂದಿಗೆ ಮತ್ತು ಪ್ರತಿ kW·hಗೆ ಸಮಗೊಳಿಸಲಾದ ವೆಚ್ಚಗಳು 0.054 $ನಷ್ಟು ಇರುವುದರೊಂದಿಗೆ, ವರ್ಧಿಸಲ್ಪಟ್ಟ ಭೂಶಾಖದ ವ್ಯವಸ್ಥೆಗಳು ಈ ವ್ಯಾಪ್ತಿಯ ಉನ್ನತ ಭಾಗದ ಕಡೆ ಇರುವಲ್ಲಿ ಒಲವು ತೋರಿಸುತ್ತವೆ.[೧೬] ನೇರ ತಾಪನದ ಅನ್ವಯಿಕೆಗಳು ಕಡಿಮೆ ತಾಪಮಾನಗಳೊಂದಿಗಿನ ಹೆಚ್ಚು ಮೇಲುಮೇಲಿರುವ ಬಾವಿಗಳನ್ನು ಬಳಸಬಲ್ಲವಾದ್ದರಿಂದ, ಕಡಿಮೆ ಮಟ್ಟದ ವೆಚ್ಚಗಳು ಹಾಗೂ ಅಪಾಯಗಳೊಂದಿಗಿನ ಸಣ್ಣ ವ್ಯವಸ್ಥೆಗಳು ಕಾರ್ಯಸಾಧ್ಯ ಅಥವಾ ಉಪಯೋಗಕರವಾಗಿವೆ. 10 ಕಿಲೋವ್ಯಾಟ್‌ನಷ್ಟು (kW) ಒಂದು ಸಾಮರ್ಥ್ಯದೊಂದಿಗಿನ ವಾಸದ ಬಳಕೆಯ ಭೂಶಾಖದ ಶಾಖ ಪಂಪುಗಳು, ಪ್ರತಿ ಕಿಲೋವ್ಯಾಟ್‌ಗೆ ಸುಮಾರು 1–3 ಸಾವಿರ ಡಾಲರುಗಳ ವೆಚ್ಚದಲ್ಲಿ ವಾಡಿಕೆಯಂತೆ ಅಳವಡಿಸಲ್ಪಡುತ್ತವೆ. ನಗರಗಳಲ್ಲಿರುವಂತೆ ಒಂದು ವೇಳೆ ಬೇಡಿಕೆಯು ಭೌಗೋಳಿಕವಾಗಿ ದಟ್ಟವಾಗಿದ್ದರೆ ಜಿಲ್ಲಾ ತಾಪನ ವ್ಯವಸ್ಥೆಗಳು ಪ್ರಮಾಣಾನುಗುಣ ಉಳಿತಾಯಗಳಿಂದ ಪ್ರಯೋಜನವನ್ನು ಪಡೆಯಬಹುದಾದರೂ, ಅದಿಲ್ಲವಾದಲ್ಲಿ ಕೊಳವೆಗಳನ್ನು ಅಳವಡಿಸುವಿಕೆಯ ವೆಚ್ಚವು ಬಂಡವಾಳ ವೆಚ್ಚಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಕ್ರಮಿಸಿಕೊಳ್ಳುತ್ತದೆ. ಬವೇರಿಯಾದಲ್ಲಿನ ಇಂಥದೊಂದು ಜಿಲ್ಲಾ ತಾಪನ ವ್ಯವಸ್ಥೆಯ ಬಂಡವಾಳ ವೆಚ್ಚವು ಪ್ರತಿ MWಗೆ ಏನಿಲ್ಲವೆಂದರೂ 1 ದಶಲಕ್ಷ €ಗಿಂತ ಹೆಚ್ಚಿನ ಮಟ್ಟದಲ್ಲಿ ಅಂದಾಜಿಸಲ್ಪಟ್ಟಿತ್ತು.[೧೭] ಯಾವುದೇ ಗಾತ್ರದ ನೇರ ವ್ಯವಸ್ಥೆಗಳು ವಿದ್ಯುತ್‌ ಉತ್ಪಾದಕಗಳಿಗಿಂತ ಹೆಚ್ಚು ಸರಳವಾಗಿದ್ದು, ಪ್ರತಿ kW·hಗೆ ಕಡಿಮೆ ಮಟ್ಟದ ನಿರ್ವಹಣಾ ವೆಚ್ಚಗಳನ್ನು ಹೊಂದಿವೆ; ಆದರೆ ಪಂಪುಗಳು ಹಾಗೂ ಸಂಪೀಡಕಗಳನ್ನು ನಡೆಸಲು ಅವು ವಿದ್ಯುಚ್ಛಕ್ತಿಯನ್ನು ಬಳಸಲೇಬೇಕಾಗುತ್ತದೆ. ಕೆಲವೊಂದು ಸರ್ಕಾರಗಳು ವಿದ್ಯುಚ್ಛಕ್ತಿ ಉತ್ಪಾದನೆಗಾಗಿ ಅಥವಾ ನೇರ ಅನ್ವಯಿಕೆಗಳಿಗೆ ಸಂಬಂಧಿಸಿದಂತೆ ಭೂಶಾಖದ ಶಕ್ತಿಯನ್ನು ತಗ್ಗಿಸಿದ ಬೆಲೆಯಲ್ಲಿ ನೀಡುತ್ತವೆ.

ಭೂಶಾಖದ ಶಕ್ತಿಯು ಅತೀವವಾಗಿ ಆರೋಹಣೀಯವಾಗಿದೆ: ಒಂದು ಬೃಹತ್‌ ಭೂಶಾಖದ ಸ್ಥಾವರವು ಸಂಪೂರ್ಣ ನಗರಗಳಿಗೆ ವಿದ್ಯುತ್‌ ಒದಗಿಸಬಲ್ಲದಾಗಿದ್ದರೆ, ಒಂದು ಚಿಕ್ಕಗಾತ್ರದ ಶಕ್ತಿ ಸ್ಥಾವರವು ಗ್ರಾಮೀಣಪ್ರದೇಶದ ಒಂದು ಹಳ್ಳಿಗೆ ವಿದ್ಯುತ್‌ ಪೂರೈಕೆ ಮಾಡಬಲ್ಲದಾಗಿರುತ್ತದೆ.[೧೮]

ಚೆವರಾನ್‌ ಕಾರ್ಪೊರೇಷನ್ ಸಂಸ್ಥೆಯು ಭೂಶಾಖದ ವಿದ್ಯುಚ್ಛಕ್ತಿಗೆ ಸಂಬಂಧಿಸಿದಂತೆ ಪ್ರಪಂಚದ ಅತಿದೊಡ್ಡ ಖಾಸಗಿ ತಯಾರಕನಾಗಿದೆ.[೧೯] ಕ್ಯಾಲಿಫೋರ್ನಿಯಾದಲ್ಲಿ ದಿ ಗೀಸರ್ಸ್‌‌ ಕ್ಷೇತ್ರವು ಅತೀವವಾಗಿ ಅಭಿವೃದ್ಧಿಹೊಂದಿರುವ ಭೂಶಾಖದ ಕ್ಷೇತ್ರವಾಗಿದೆ.

ಸಂಪನ್ಮೂಲಗಳು

[ಬದಲಾಯಿಸಿ]
ವರ್ಧಿಸಲ್ಪಟ್ಟ ಭೂಶಾಖದ ಪದ್ಧತಿ 1:ಜಲಾಶಯ 2:ಪಂಪು ಗೃಹ 3:ಶಾಖ ವಿನಿಮಯಕಾರಕ 4:ಅನಿಲಚಕ್ರ ಕೋಣೆ 5:ಉತ್ಪಾದನೆ ಬಾವಿ 6:ಒಳಹೊಗಿಸುವಿಕೆಯ ಬಾವಿ 7: ಜಿಲ್ಲಾ ತಾಪನಕ್ಕೆ ಬಿಸಿ ನೀರು 8:ರಂಧ್ರಗಳಿಂದ ತುಂಬಿದ ಸಂಚಯಗಳು 9:ವೀಕ್ಷಣಾ ಬಾವಿ 10:ಸ್ಫಟಿಕದಂಥ ರಚನೆಯನ್ನು ಹೊಂದಿರುವ ತಳಬಂಡೆ

ಭೂಮಿಯ ಆಂತರಿಕ ಶಾಖವು 44.2 ಟೆರಾವ್ಯಾಟ್ಸ್‌‌‌ನ (TW)[೨೦] ಒಂದು ಪ್ರಮಾಣದಲ್ಲಿ ವಹನದ ಮೂಲಕ ಮೇಲ್ಮೈಗೆ ಸ್ವಾಭಾವಿಕವಾಗಿ ಹರಿಯುತ್ತದೆ ಮತ್ತು 30 TWನ ಒಂದು ಪ್ರಮಾಣದಲ್ಲಿ ಖನಿಜಗಳ ವಿಕಿರಣಪಟುತ್ವದ ಕ್ಷಯಿಸುವಿಕೆಯ ಮೂಲಕ ಅದು ಮತ್ತೆ ತುಂಬಲ್ಪಡುತ್ತದೆ.[೨೧] ಈ ಶಕ್ತಿ ಪ್ರಮಾಣಗಳು ಎಲ್ಲಾ ಪ್ರಧಾನ ಮೂಲಗಳಿಂದ ಬರುವ ಮಾನವಕುಲದ ಪ್ರಸಕ್ತ ಶಕ್ತಿ ಬಳಕೆಯ ದುಪ್ಪಟ್ಟು ಪ್ರಮಾಣಕ್ಕಿಂತಲೂ ಹೆಚ್ಚಿದ್ದರೂ, ಅದರ ಬಹುಪಾಲು ಭಾಗವನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಭೂಮಿಯೊಳಗಡೆಯ ಆಳದಿಂದ ಹೊರಹೊಮ್ಮುತ್ತಿರುವ ಶಾಖದ ಜೊತೆಗೆ, ನೆಲದ ಮೇಲ್ಭಾಗದ ಹತ್ತು ಮೀಟರುಗಳಷ್ಟು ಭಾಗವು ಬೇಸಿಗೆಕಾಲದಲ್ಲಿ ಸೌರಶಕ್ತಿಯನ್ನು ಒಟ್ಟುಗೂಡಿಸುತ್ತದೆ (ಅಂದರೆ ಕಾವೇರುತ್ತದೆ), ಮತ್ತು ಆ ಶಕ್ತಿಯನ್ನು ಚಳಿಗಾಲದ ಅವಧಿಯಲ್ಲಿ ಬಿಡುಗಡೆ ಮಾಡುತ್ತದೆ (ಅಂದರೆ ತಣ್ಣಗಾಗುತ್ತದೆ).

ಋತುಯೋಗ್ಯವಾದ ಬದಲಾವಣೆಗಳ ಅಡಿಯಲ್ಲಿ, ಭೂಮಿಯ ಹೊರಪದರದಾದ್ಯಂತದ ತಾಪಮಾನಗಳ ಭೂಶಾಖದ ಪ್ರಣವತೆಯು, ಪ್ರಪಂಚದ ಬಹುತೇಕ ಭಾಗಗಳಲ್ಲಿ ಪ್ರತಿ ಕಿಲೋಮೀಟರಿನಷ್ಟು (km) ಆಳಕ್ಕೆ 25–30 °Cಯಷ್ಟಿದೆ. ಸರಾಸರಿ ಮಟ್ಟದಲ್ಲಿ ಹೇಳುವುದಾದರೆ, ವಹನೀಯ ಶಾಖ ಹರಿವು ಸರಿಸುಮಾರು 0.1 MW/ಕಿ.ಮೀ.2ನಷ್ಟಿದೆ. ಭೂಮಿಯ ಹೊರಪದರವು ತೆಳುವಾಗಿರುವ ಭೂಮಿಯ ಹೊರಪದರದ ಗಡಿಗಳ ಸಮೀಪದಲ್ಲಿ ಈ ಮೌಲ್ಯಗಳು ಸಾಕಷ್ಟು ಹೆಚ್ಚಿರುತ್ತವೆ. ಶಿಲಾಪಾಕದ ನಾಲೆಗಳು, ಬಿಸಿನೀರಿನ ಬುಗ್ಗೆಗಳು, ಜಲೋಷ್ಣೀಯ ಪ್ರಸರಣದ ಮೂಲಕ ಅಥವಾ ಇವೆಲ್ಲದರ ಒಂದು ಸಂಯೋಜನೆಯ ಮೂಲಕ ದ್ರವಪದಾರ್ಥ ಪ್ರಸರಣದಿಂದಾಗಿ ಅವು ಮತ್ತಷ್ಟು ವರ್ಧಿಸಲ್ಪಡಬಹುದು.

ಮನೆಯ ತಾಪನದ ಉದ್ದೇಶಗಳಿಗಾಗಿ ಭೂಶಾಖದ ಶಾಖ ಪಂಪೊಂದು ಪ್ರಪಂಚದಲ್ಲಿನ ಯಾವುದೇ ಭಾಗದ ಆಳವಿಲ್ಲದ ನೆಲದಿಂದ ಸಾಕಷ್ಟು ಶಾಖವನ್ನು ಹೊರತೆಗೆಯಬಲ್ಲದು, ಆದರೆ ಕೈಗಾರಿಕಾ ಅನ್ವಯಿಕೆಗಳಿಗೆ ಆಳದ ಸಂಪನ್ಮೂಲಗಳ ಹೆಚ್ಚಿನ ಮಟ್ಟದ ತಾಪಮಾನಗಳು ಅಗತ್ಯವಾಗಿರುತ್ತವೆ.[] ವಿದ್ಯುಚ್ಛಕ್ತಿ ಉತ್ಪಾದನೆಯ ಶಾಖದ ಪರಿಣಾಮಶೀಲತೆ ಹಾಗೂ ಲಾಭದಾಯಕತೆಯು ನಿರ್ದಿಷ್ಟವಾಗಿ ತಾಪಮಾನಕ್ಕೆ ಸಂವೇದನಾಶೀಲವಾಗಿರುತ್ತದೆ. ಹೆಚ್ಚು ಬೇಡಿಕೆಯನ್ನು ಮುಂದೊಡ್ಡುವ ಅನ್ವಯಿಕೆಗಳು, ಒಂದು ಹೆಚ್ಚಿನ ಮಟ್ಟದ ನೈಸರ್ಗಿಕ ಶಾಖದ ಹರಿವಿನಿಂದ, ಅದರಲ್ಲೂ ಆದರ್ಶಪ್ರಾಯವಾಗಿ ಒಂದು ಬಿಸಿನೀರಿನ ಬುಗ್ಗೆಯನ್ನು ಬಳಕೆಮಾಡಿಕೊಳ್ಳುವುದರಿಂದ ಅತಿ ಹೆಚ್ಚಿನ ಮಟ್ಟದ ಪ್ರಯೋಜನವನ್ನು ಪಡೆಯುತ್ತವೆ. ಒಂದು ವೇಳೆ ಯಾವುದೇ ಬಿಸಿನೀರಿನ ಬುಗ್ಗೆಯು ಲಭ್ಯವಿಲ್ಲದಿದ್ದಲ್ಲಿ, ಒಂದು ಬಿಸಿ ಜಲಕುಹರದೊಳಗೆ ಬಾವಿಯೊಂದನ್ನು ಕೊರೆಯುವುದು ನಂತರದ ಅತ್ಯುತ್ತಮ ಆಯ್ಕೆಯಾಗಿದೆ. ಒಂದು ವೇಳೆ ಬೇಕಾದಷ್ಟು ಪ್ರಮಾಣದಲ್ಲಿ ಜಲಕುಹರವು ಲಭ್ಯವಿಲ್ಲದಿದ್ದಲ್ಲಿ, ತಳಬಂಡೆಯನ್ನು ಜಲೀಯವಾಗಿ ಸೀಳಲು, ನೀರನ್ನು ಒಳಹೊಗಿಸುವ ಮೂಲಕ ಒಂದು ಕೃತಕ ಜಲಕುಹರವನ್ನು ನಿರ್ಮಿಸಬಹುದಾಗಿದೆ. ಈ ಕೊನೆಯ ವಿಧಾನವನ್ನು ಯುರೋಪ್‌ನಲ್ಲಿ ಬಿಸಿ ಶುಷ್ಕ ಬಂಡೆಯ ಭೂಶಾಖದ ಶಕ್ತಿ ಎಂದೂ, ಉತ್ತರ ಅಮೆರಿಕಾದಲ್ಲಿ ವರ್ಧಿಸಲ್ಪಟ್ಟ ಭೂಶಾಖದ ವ್ಯವಸ್ಥೆಗಳು ಎಂದೂ ಕರೆಯಲಾಗುತ್ತದೆ. ನೈಸರ್ಗಿಕ ಜಲಕುಹರಗಳನ್ನು ಸಾಂಪ್ರದಾಯಿಕವಾದ ರೀತಿಯಲ್ಲಿ ಸಂಪರ್ಕಿಸುವುದಕ್ಕಿಂತ ಮಿಗಿಲಾಗಿ ಈ ವಿಧಾನದಿಂದ ಸಾಕಷ್ಟು ಹೆಚ್ಚಿನ ಪ್ರಮಾಣದ ಅನುಕೂಲ್ಯಗಳ ಸಾಧ್ಯತೆಯು ಲಭ್ಯವಾಗಬಹುದಾಗಿದೆ.[]

ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವುದಕ್ಕೆ ಸಂಬಂಧಿಸಿದ ಭೂಶಾಖದ ಶಕ್ತಿಯ ಸಂಭಾವ್ಯತೆಯ ಅಂದಾಜುಗಳು, ಹೂಡಿಕೆಗಳ ಪ್ರಮಾಣವನ್ನವಲಂಬಿಸಿ 35 ರಿಂದ 2000 GWವರೆಗೆ ಬದಲಾಗುತ್ತವೆ.[] ಭೂಶಾಖದ ಸಂಪನ್ಮೂಲಗಳ ಮೇಲ್ಮಟ್ಟದ ಅಂದಾಜುಗಳು ...10 kilometres (6 mi)ನಷ್ಟು ಆಳದಲ್ಲಿ ವರ್ಧಿಸಲ್ಪಟ್ಟ ಭೂಶಾಖದ ಬಾವಿಗಳನ್ನು ಕಲ್ಪಿಸಿಕೊಂಡರೆ, ಅಸ್ತಿತ್ವದಲ್ಲಿರುವ ಭೂಶಾಖದ ಬಾವಿಗಳು ಅಪರೂಪವಾಗಿ ...3 kilometres (2 mi)ಗಿಂತ ಹೆಚ್ಚಿನ ಆಳವನ್ನು ಹೊಂದಿರುತ್ತವೆ.[] ಈ ಆಳದಲ್ಲಿನ ಕೊರೆಯುವಿಕೆಯು ಒಂದು ದುಬಾರಿ ಪ್ರಕ್ರಿಯೆಯಾಗಿದ್ದರೂ, ಈಗ ಅದು ಪೆಟ್ರೋಲಿಯಂ ಉದ್ಯಮದಲ್ಲಿ ಸಾಧ್ಯವಿದೆ. ಪ್ರಪಂಚದಲ್ಲಿನ ಅತ್ಯಂತ ಆಳದ ಸಂಶೋಧನಾ ಬಾವಿಯಾದ ಕೋಲಾ ಎಂಬ ಅತೀವ ಆಳದ ಕೊಳವೆಗಂಡಿಯು ...12 kilometres (7 mi)ನಷ್ಟು ಆಳವನ್ನು ಹೊಂದಿದೆ.[೨೨] ಸಖಾಲಿನ್‌‌ನ ಛಾಯ್ವೋ ಕ್ಷೇತ್ರದಲ್ಲಿರುವ ಎಕ್ಸಾನ್‌‌ನ Z-12 ಬಾವಿಯಂಥ ವ್ಯಾಪಾರೀ ತೈಲಬಾವಿಗಳಿಂದ ಈ ದಾಖಲೆಯು ಇತ್ತೀಚೆಗೆ ಅನುಕರಿಸಲ್ಪಟ್ಟಿದೆ.[೨೩]

ಸಮರ್ಥನೀಯತೆ

[ಬದಲಾಯಿಸಿ]

ಭೂಶಾಖದ ಶಕ್ತಿಯ ವ್ಯವಸ್ಥೆಯು ಒಳಗೊಂಡಿರುವ ಶಾಖವನ್ನು ಪಡೆಯುವ ಪ್ರಮಾಣವು ಭೂಮಿಯ ಶಾಖದ ಹೂರಣಕ್ಕೆ ಹೋಲಿಸಿದಾಗ ಸಣ್ಣದಾಗಿರುವುದರಿಂದ, ಭೂಶಾಖದ ಶಕ್ತಿಯು ಸಮರ್ಥನೀಯವಾಗಿದೆಯೆಂದು ಪರಿಗಣಿಸಲ್ಪಟ್ಟಿದೆ. 1031 ಜೌಲ್‌ಗಳಷ್ಟು (3·1015 TW·hr) ಪ್ರಮಾಣದ ಒಂದು ಆಂತರಿಕ ಶಾಖದ ಹೂರಣವನ್ನು ಭೂಮಿಯು ಹೊಂದಿದೆ.[] ಇದರ ಪೈಕಿಯ ಸುಮಾರು 20%ನಷ್ಟು ಭಾಗವು ಗ್ರಹಗಳ ಸಂಚಯದಿಂದ ಬಂದಿರುವ ಉಳಿಕೆಯ ಶಾಖವಾಗಿದೆ, ಮತ್ತು ಉಳಿದ ಭಾಗಕ್ಕೆ ಹಿಂದೆ ಅಸ್ತಿತ್ವದಲ್ಲಿದ್ದ ಉನ್ನತಮಟ್ಟದ ವಿಕಿರಣಪಟುತ್ವದ ಕ್ಷಯಿಸುವಿಕೆಯ ಪ್ರಮಾಣಗಳು ಕಾರಣವಾಗಿವೆ.[೨೪] ನೈಸರ್ಗಿಕ ಶಾಖದ ಹರಿವುಗಳು ಸಮತೋಲನದಲ್ಲಿಲ್ಲ, ಮತ್ತು ಭೂವೈಜ್ಞಾನಿಕ ಕಾಲಪ್ರಮಾಣಗಳ ಮೇಲೆ ಗ್ರಹವು ನಿಧಾನವಾಗಿ ತಣ್ಣಗಾಗುತ್ತಿದೆ. ಮಾನವರಿಂದ ನಡೆಯುವ ಶಾಖಪಡೆಯುವ ಪ್ರಕ್ರಿಯೆಯು, ನೈಸರ್ಗಿಕ ಹೊರಹರಿವಿನ ಒಂದು ಅಲ್ಪಭಾಗವನ್ನು, ಅನೇಕ ವೇಳೆ ಅದರಲ್ಲಿ ವೇಗೋತ್ಕರ್ಷವನ್ನು ಉಂಟುಮಾಡದೆಯೇ ಸಂಗ್ರಹಿಸುತ್ತದೆ.

ಭೂಶಾಖದ ಶಕ್ತಿಯು ವಿಶ್ವವ್ಯಾಪಕವಾಗಿ ಸಮರ್ಥನೀಯವಾಗಿದೆಯಾದರೂ ಸಹ, ಸ್ಥಳೀಯ ಮಟ್ಟದಲ್ಲಿ ಬರಿದುಮಾಡುವಿಕೆಯನ್ನು ತಪ್ಪಿಸುವ ಸಲುವಾಗಿ ಶಾಖ ಪಡೆಯುವ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುವುದು ಈಗಲೂ ಅಗತ್ಯವಾಗಿದೆ.[೨೧] ದಶಕಗಳ ಕಾಲಕ್ರಮದ ನಂತರ, ನೈಸರ್ಗಿಕ ಹರಿವುಗಳೊಂದಿಗಿನ ಒಂದು ಹೊಸ ಸಮತೋಲನವು ತಲುಪುವವರೆಗೂ ಸ್ಥಳೀಯ ತಾಪಮಾನಗಳು ಮತ್ತು ನೀರಿನ ಮಟ್ಟಗಳನ್ನು ಪ್ರತ್ಯೇಕ ಬಾವಿಗಳು ಕೆಳಗೆ ಸೆಳೆಯುತ್ತವೆ. ಲಾರ್ಡೆರೆಲ್ಲೋ, ವೈರೇಕೀ, ಹಾಗೂ ದಿ ಗೀಸರ್ಸ್‌‌ಗಳಲ್ಲಿರುವ ಅತ್ಯಂತ ಹಳೆಯದಾಗಿರುವ ಮೂರೂ ತಾಣಗಳು ಸ್ಥಳೀಯ ಬರಿದುಮಾಡುವಿಕೆಯ ಕಾರಣದಿಂದಾಗಿ, ಉತ್ಪಾದನೆಯನ್ನು ತಮ್ಮ ಅತ್ಯುಚ್ಚ ಬಿಂದುವಿನಿಂದ ತಗ್ಗಿಸಿವೆ. ಶಾಖ ಮತ್ತು ನೀರು, ಅನಿಶ್ಚಿತವಾದ ಪ್ರಮಾಣಗಳಲ್ಲಿ, ಅವು ಮತ್ತೆ ತುಂಬಲ್ಪಡುವುದಕ್ಕಿಂತ ವೇಗವಾಗಿ ಪಡೆಯಲ್ಪಟ್ಟವು. ಒಂದು ವೇಳೆ ಉತ್ಪಾದನೆಯು ತಗ್ಗಿಸಲ್ಪಟ್ಟರೆ ಮತ್ತು ನೀರು ಮರು-ಒಳಹೊಗಿಸಲ್ಪಟ್ಟರೆ, ಈ ಬಾವಿಗಳು ಊಹಾತ್ಮಕವಾಗಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಮರುಗಳಿಸಿಕೊಳ್ಳಬಲ್ಲವು. ಇಂಥ ಶಮನಗೊಳಿಸುವ ಕಾರ್ಯತಂತ್ರಗಳು ಕೆಲವೊಂದು ತಾಣಗಳಲ್ಲಿ ಈಗಾಗಲೇ ಕಾರ್ಯರೂಪಕ್ಕೆ ತರಲ್ಪಟ್ಟಿವೆ. ಭೂಶಾಖದ ಶಕ್ತಿಯ ಸುದೀರ್ಘ-ಅವಧಿಯ ಸಮರ್ಥನೀಯತೆಯು ಇಟಲಿಯಲ್ಲಿನ ಲಾರ್ಡೆರೆಲ್ಲೋ ಕ್ಷೇತ್ರದಲ್ಲಿ 1913ರಿಂದ, ನ್ಯೂಜಿಲೆಂಡ್‌ನಲ್ಲಿನ ವೈರೇಕೀ ಕ್ಷೇತ್ರದಲ್ಲಿ 1958ರಿಂದ[೨೫] ಮತ್ತು ಕ್ಯಾಲಿಫೋರ್ನಿಯಾದಲ್ಲಿನ ದಿ ಗೀಸರ್ಸ್‌‌ ಕ್ಷೇತ್ರದಲ್ಲಿ 1960ರಿಂದ ಪ್ರತ್ಯಕ್ಷವಾಗಿ ನಿರೂಪಿಸಲ್ಪಟ್ಟಿದೆ.[೨೬]

ಹಲವಾರು ಬಿಸಿನೀರಿನ ಬುಗ್ಗೆಯ ಕ್ಷೇತ್ರಗಳ ನಿರ್ಮೂಲನ ಅಥವಾ ಅಳಿಯುವಿಕೆಗೆ ಭೂಶಾಖದ ಶಕ್ತಿ ಅಭಿವೃದ್ಧಿಯೇ ಕಾರಣವಾಗಿದೆ.[೨೭]

ಇತಿಹಾಸ

[ಬದಲಾಯಿಸಿ]
3ನೇ ಶತಮಾನದ BCಯಲ್ಲಿನ ಕಿನ್‌ ರಾಜವಂಶದ ಅವಧಿಯಲ್ಲಿ ಕಟ್ಟಲ್ಪಟ್ಟ, ಒಂದು ಬಿಸಿನೀರಿನ ಬುಗ್ಗೆಯಿಂದ ಪೋಷಿಸಲ್ಪಡುತ್ತಿರುವ ಅತ್ಯಂತ ಹಳೆಯದೆಂದು ಚಿರಪರಿಚಿತವಾಗಿರುವ ಕೊಳ.

ಕಡೇಪಕ್ಷ ಪ್ರಾಚೀನ ಶಿಲಾಯುಗದ ಕಾಲದಿಂದಲೂ ಬಿಸಿನೀರಿನ ಬುಗ್ಗೆಗಳು ಸ್ನಾನ ಮಾಡುವಿಕೆಗೆ ಸಂಬಂಧಿಸಿದಂತೆ ಬಳಕೆಯಾಗುತ್ತಾ ಬಂದಿವೆ.[೨೮] ಅತ್ಯಂತ ಹಳೆಯದೆಂದು ಪರಿಚಿತವಾಗಿರುವ ಖನಿಜ ಜಲಧಾಮ ಕೇಂದ್ರವು ಒಂದು ಕಲ್ಲಿನ ಕೊಳವಾಗಿದ್ದು, ಇದು 3ನೇ ಶತಮಾನ BCಯ ಅವಧಿಯಲ್ಲಿದ್ದ ಕಿನ್‌ ರಾಜವಂಶದ ಅವಧಿಯಲ್ಲಿ ಚೀನಾಲಿಸಾನ್‌ ಪರ್ವತದ ಮೇಲೆ ಕಟ್ಟಲ್ಪಟ್ಟಿತು ಮತ್ತು ಇದೇ ತಾಣದಲ್ಲಿ ಹುವಾಕಿಂಗ್‌ ಚಿ ಅರಮನೆಯು ನಂತರದಲ್ಲಿ ಕಟ್ಟಲ್ಪಟ್ಟಿತು. ಮೊದಲನೇ ಶತಮಾನದ ADಯಲ್ಲಿ, ಇಂಗ್ಲಂಡ್‌‌ಸಾಮರ್‌ಸೆಟ್‌ನ ಬಾತ್‌ ಎಂದು ಈಗ ಕರೆಯಲ್ಪಡುವ ಆಕ್ವೇ ಸೂಲಿಸ್‌‌ ನ್ನು ರೋಮನ್ನರು ಗೆದ್ದುಕೊಂಡರು, ಮತ್ತು ಅಲ್ಲಿದ್ದ ಬಿಸಿನೀರಿನ ಬುಗ್ಗೆಗಳನ್ನು ಸಾರ್ವಜನಿಕ ಸ್ನಾನಗೃಹಗಳು ಮತ್ತು ಕೆಳನೆಲದ ತಾಪನಗಳಿಗೆ ಪೂರೈಕೆ ಮಾಡಲು ಬಳಸಿಕೊಂಡರು. ಈ ಸ್ನಾನಗೃಹಗಳಿಗೆ ಸಂಬಂಧಿಸಿದ ಪ್ರವೇಶ ಶುಲ್ಕಗಳು ಪ್ರಾಯಶಃ ಭೂಶಾಖದ ಶಕ್ತಿಯ ಮೊದಲ ವ್ಯಾಪಾರೀ ಬಳಕೆಯನ್ನು ಪ್ರತಿನಿಧಿಸುತ್ತವೆ. ಫ್ರಾನ್ಸ್‌‌ಚೌಡೆಸ್‌-ಐಗ್ಯೂಸ್‌‌‌ನಲ್ಲಿರುವ ಪ್ರಪಂಚದ ಅತ್ಯಂತ ಹಳೆಯ ಭೂಶಾಖದ ಜಿಲ್ಲಾ ತಾಪನ ವ್ಯವಸ್ಥೆಯು, 14ನೇ ಶತಮಾನದ ಕಾಲದಿಂದಲೂ ಕಾರ್ಯನಿರ್ವಹಣೆಗೆ ಒಳಗಾಗುತ್ತಾ ಬಂದಿದೆ.[] ಅತ್ಯಂತ ಮುಂಚಿನ ಕೈಗಾರಿಕಾ ಸಂಬಂಧಿ ಸಹಜ ಸಂಪನ್ಮೂಲದ ಬಳಕೆಯು 1827ರಲ್ಲಿ ಶುರುವಾಯಿತು. ಇಟಲಿಯ ಲಾರ್ಡೆರೆಲ್ಲೋ ಎಂಬಲ್ಲಿನ ಜ್ವಾಲಾಮುಖಿಯ ಮಣ್ಣಿನಿಂದ ಬೋರಿಕ್‌ ಆಮ್ಲವನ್ನು ಹೊರತೆಗೆಯಲು ಬಿಸಿನೀರಿನ ಬುಗ್ಗೆ ಹಬೆಯನ್ನು ಈ ಸಂದರ್ಭದಲ್ಲಿ ಬಳಸಲಾಯಿತು.

1892ರಲ್ಲಿ, ಇದಾಹೊನ ಬೋಯ್ಸ್‌‌‌ನಲ್ಲಿನ ಅಮೆರಿಕಾದ ಮೊದಲ ಜಿಲ್ಲಾ ತಾಪನ ವ್ಯವಸ್ಥೆಗೆ ಭೂಶಾಖದ ಶಕ್ತಿಯಿಂದ ನೇರವಾಗಿ ಶಕ್ತಿಯನ್ನು ಒದಗಿಸಲಾಯಿತು, ಮತ್ತು ಇದನ್ನು ಓರೆಗಾಂವ್‌ನ ‌ಕ್ಲಾಮತ್‌ ಜಲಪಾತಗಳಲ್ಲಿ 1900ರಲ್ಲಿ ನಕಲು ಮಾಡಲಾಯಿತು. ಬೋಯ್ಸ್‌ನಲ್ಲಿನ ಹಸಿರುಮನೆಗಳನ್ನು ಬಿಸಿಮಾಡಲು ಒಂದು ಆಳವಾದ ಭೂಶಾಖದ ಬಾವಿಯನ್ನು 1926ರಲ್ಲಿ ಬಳಕೆಮಾಡಲಾಯಿತು, ಮತ್ತು ಹೆಚ್ಚೂಕಮ್ಮಿ ಅದೇ ಸಮಯದಲ್ಲಿ ಐಸ್‌ಲೆಂಡ್‌ ಹಾಗೂ ಟಸ್ಕ್ಯಾನಿಗಳಲ್ಲಿನ ಹಸಿರುಮನೆಗಳನ್ನು ಬಿಸಿಮಾಡಲು ಬಿಸಿನೀರಿನ ಬುಗ್ಗೆಗಳನ್ನು ಬಳಸಲಾಯಿತು.[೨೯] ಚಾರ್ಲೀ ಲೀಬ್‌ ಎಂಬಾತ ತನ್ನ ಮನೆಯನ್ನು ಬಿಸಿಯಾಗಿರಿಸಲು 1930ರಲ್ಲಿ ಮೊದಲ ಕೆಳಕುಳಿಯ ಶಾಖ ವಿನಿಮಯಕಾರಕವನ್ನು ಅಭಿವೃದ್ಧಿಪಡಿಸಿದ. ಬಿಸಿನೀರಿನ ಬುಗ್ಗೆಗಳಿಂದ ಪಡೆಯಲಾದ ಹಬೆ ಮತ್ತು ಬಿಸಿ ನೀರುಗಳು ಐಸ್‌ಲೆಂಡ್‌ನಲ್ಲಿನ ಮನೆಗಳ ತಾಪನಗೊಳಿಸುವಿಕೆಯನ್ನು 1943ರಿಂದ ಮೊದಲ್ಗೊಂಡು ಪ್ರಾರಂಭಿಸಿದವು.

ಜಾಗತಿಕ ಭೂಶಾಖದ ವಿದ್ಯುತ್‌ ಸಾಮರ್ಥ್ಯ. ಮೇಲ್ಭಾಗದ ಕೆಂಪು ರೇಖೆಯು ಅಳವಡಿಸಲಾದ ಸಾಮರ್ಥ್ಯವಾಗಿದೆ;[೧೫] ಕೆಳಭಾಗದ ಹಸಿರು ರೇಖೆಯು ಪಡೆದುಕೊಂಡ ಉತ್ಪಾದನೆಯಾಗಿದೆ.[]

20ನೇ ಶತಮಾನದಲ್ಲಿ, ವಿದ್ಯುಚ್ಛಕ್ತಿಗೆ ಸಂಬಂಧಿಸಿದಂತೆ ಕಂಡುಬಂದ ಬೇಡಿಕೆಯು ಭೂಶಾಖದ ಶಕ್ತಿಯನ್ನು ಒಂದು ಉತ್ಪಾದನಾ ಮೂಲವಾಗಿ ಪರಿಗಣಿಸುವುದಕ್ಕೆ ಕಾರಣವಾಯಿತು. ಪ್ರಿನ್ಸ್‌‌ ಪಿಯೆರೊ ಗಿನೋರಿ ಕಾಂಟಿ ಎಂಬಾತ ಮೊದಲ ಭೂಶಾಖದ ಶಕ್ತಿ ಉತ್ಪಾದಕದ ಪರೀಕ್ಷಾ ಪ್ರಯೋಗವನ್ನು 1904ರ ಜುಲೈ 4ರಂದು ನಡೆಸಿದ. ಭೂಶಾಖದ ಆಮ್ಲದ ಸಾರತೆಗೆಯುವಿಕೆಯು ಶುರುವಾದ ಅದೇ ಲಾರ್ಡೆರೆಲ್ಲೋ ಶುಷ್ಕ ಹಬೆ ಕ್ಷೇತ್ರದಲ್ಲಿ ಈ ಪರೀಕ್ಷೆಯು ನಡೆಯಿತು. ಇದು ನಾಲ್ಕು ದೀಪದ ಬಲ್ಬುಗಳನ್ನು ಯಶಸ್ವಿಯಾಗಿ ಬೆಳಗಿಸಿತು.[೩೦] ನಂತರ, 1911ರಲ್ಲಿ ಪ್ರಪಂಚದ ಮೊದಲ ವ್ಯಾಪಾರೀ ಭೂಶಾಖದ ಶಕ್ತಿ ಸ್ಥಾವರವು ಅಲ್ಲಿ ಕಟ್ಟಲ್ಪಟ್ಟಿತು. 1958ರಲ್ಲಿ ನ್ಯೂಜಿಲೆಂಡ್‌ ಒಂದು ಸ್ಥಾವರವನ್ನು ಕಟ್ಟುವವರೆಗೂ, ಇದು ಪ್ರಪಂಚದ ಕೈಗಾರಿಕಾ ಬಳಕೆಯ ಭೂಶಾಖದ ವಿದ್ಯುಚ್ಛಕ್ತಿಯ ಏಕೈಕ ತಯಾರಕನಾಗಿತ್ತು.

ಅಷ್ಟು ಹೊತ್ತಿಗಾಗಲೇ ಲಾರ್ಡ್‌ ಕೆಲ್ವಿನ್‌ 1852ರಲ್ಲಿ ಶಾಖದ ಪಂಪನ್ನು ಕಂಡುಹಿಡಿದಿದ್ದ, ಮತ್ತು ಇದನ್ನು ಬಳಸಿಕೊಂಡು ನೆಲದಿಂದ ಶಾಖವನ್ನು ಸೆಳೆಯುವ ಪರಿಕಲ್ಪನೆಗೆ ಹೆನ್ರಿಕ್‌ ಜೊಯೆಲ್ಲಿ ಎಂಬಾತ 1912ರಲ್ಲಿ ಸ್ವಾಮ್ಯದ ಹಕ್ಕುಪತ್ರವನ್ನು ಪಡೆದುಕೊಂಡಿದ್ದ.[೩೧] ಆದರೆ 1940ರ ದಶಕದ ಅಂತ್ಯದ ವೇಳೆಗೆ ಭೂಶಾಖದ ಶಾಖ ಪಂಪು ಯಶಸ್ವಿಯಾಗಿ ಅನುಷ್ಠಾನಗೊಳ್ಳುವವರೆಗೆ ಕಾಲ ಕೂಡಿಬರಲಿಲ್ಲ. ಅತ್ಯಂತ ಮುಂಚಿನದು ಎಂದರೆ ಪ್ರಾಯಶಃ ರಾಬರ್ಟ್‌ C. ವೆಬ್ಬರ್ ಎಂಬಾತನ ಗೃಹ-ನಿರ್ಮಿತ 2.2 kW ನೇರ-ವಿನಿಮಯ ವ್ಯವಸ್ಥೆಯಾಗಿತ್ತು, ಆದರೆ ಅವನ ಆವಿಷ್ಕಾರದ ಕರಾರುವಾಕ್ಕಾದ ಸಕಾಲಿಕತೆಯ ಕುರಿತು ಮೂಲಗಳು ಅಸಮ್ಮತಿಯನ್ನು ವ್ಯಕ್ತಪಡಿಸುತ್ತವೆ.[೩೧] (ಓರೆಗಾಂವ್‌ನ ‌ಪೋರ್ಟ್‌ಲೆಂಡ್‌ನ) ಕಾಮನ್‌ವೆಲ್ತ್‌‌ ಕಟ್ಟಡಕ್ಕೆ ತಾಪನ ವ್ಯವಸ್ಥೆಯನ್ನು ನೀಡಲು J. ಡೊನಾಲ್ಡ್‌ ಕ್ರೂಕೆರ್‌ ಎಂಬಾತ ವಾಣಿಜ್ಯ ಬಳಕೆಯ ಮೊದಲ ಭೂಶಾಖದ ಶಾಖ ಪಂಪನ್ನು ವಿನ್ಯಾಸಗೊಳಿಸಿದ ಮತ್ತು ಅದನ್ನು 1946ರಲ್ಲಿ ಪ್ರತ್ಯಕ್ಷವಾಗಿ ನಿರೂಪಿಸಿ ತೋರಿಸಿದ.[೩೨][೩೩] ಓಹಿಯೋ ಸ್ಟೇಟ್‌ ಯೂನಿವರ್ಸಿಟಿಯ ಪ್ರೊಫೆಸರ್‌ ಕಾರ್ಲ್‌ ನೀಲ್ಸೆನ್‌ ಎಂಬಾತ 1948ರಲ್ಲಿ ತನ್ನ ಮನೆಯಲ್ಲಿ ವಾಸದ ಬಳಕೆಯ ಮೊದಲ ಮುಕ್ತ-ಕುಣಿಕೆಯ ಯಂತ್ರದ ಆವೃತ್ತಿಯನ್ನು ನಿರ್ಮಿಸಿದ.[೩೪] 1973ರ ತೈಲ ಬಿಕ್ಕಟ್ಟಿನ ಕಾರಣದಿಂದಾಗಿ ಈ ತಂತ್ರಜ್ಞಾನವು ಸ್ವೀಡನ್‌ನಲ್ಲಿ ಜನಪ್ರಿಯವಾಯಿತು ಮತ್ತು ಅಲ್ಲಿಂದೀಚೆಗೆ ಅದು ವಿಶ್ವಾದ್ಯಂತದ ಮಾನ್ಯತೆಯನ್ನು ನಿಧಾನವಾಗಿ ಗಳಿಸುತ್ತಾ ಬೆಳೆಯುತ್ತಿದೆ. 1979ರಲ್ಲಿ ಕಂಡುಬಂದ ಪಾಲಿಬ್ಯುಟಿಲೀನ್‌ ಕೊಳವೆಯ ಅಭಿವೃದ್ಧಿಯು ಶಾಖದ ಪಂಪಿನ ಮಿತವ್ಯಯದ ಕಾರ್ಯಸಾಧ್ಯತೆಯನ್ನು ಮಹತ್ತರವಾಗಿ ವರ್ಧಿಸಿತು.[೩೨]

1960ರಲ್ಲಿ, ಪೆಸಿಫಿಕ್‌ ಗ್ಯಾಸ್‌ ಅಂಡ್‌ ಇಲೆಕ್ಟ್ರಿಕ್‌ ಕಂಪನಿಯು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಮೊದಲ ಯಶಸ್ವೀ ಭೂಶಾಖದ ವಿದ್ಯುತ್‌ ಶಕ್ತಿ ಸ್ಥಾವರದ ಕಾರ್ಯಾಚರಣೆಯನ್ನು ಕ್ಯಾಲಿಫೋರ್ನಿಯಾದಲ್ಲಿನ ದಿ ಗೀಸರ್ಸ್‌ ಕ್ಷೇತ್ರದಲ್ಲಿ ಶುರುಮಾಡಿತು.[೩೫] ಈ ಮೂಲ ಅನಿಲಚಕ್ರವು 30 ವರ್ಷಗಳಿಗಿಂತಲೂ ಹೆಚ್ಚುಕಾಲ ಬಾಳಿಕೆಬಂದಿತು ಮತ್ತು 11 MWನಷ್ಟು ನಿವ್ವಳಶಕ್ತಿಯನ್ನು ಉತ್ಪಾದಿಸಿತು.[೩೬]

ಅವಳಿ ಆವರ್ತನ ಶಕ್ತಿ ಸ್ಥಾವರವು 1967ರಲ್ಲಿ ಮೊದಲಬಾರಿಗೆ ರಷ್ಯಾದಲ್ಲಿ ಪ್ರತ್ಯಕ್ಷವಾಗಿ ನಿರೂಪಿಸಲ್ಪಟ್ಟಿತು ಮತ್ತು ನಂತರ 1981ರಲ್ಲಿ USAಗೆ ಪರಿಚಯಿಸಲ್ಪಟ್ಟಿತು.[೩೫] ಹಿಂದೆ ಕಾರ್ಯಸಾಧ್ಯವಾದುದಕ್ಕಿಂತ ಸಾಕಷ್ಟು ಕಡಿಮೆ ಪ್ರಮಾಣದ ತಾಪಮಾನ ಸಂಪನ್ಮೂಲಗಳಿಂದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಈ ತಂತ್ರಜ್ಞಾನವು ಅನುವುಮಾಡಿಕೊಡುತ್ತದೆ. 2006ರಲ್ಲಿ, ಅಲಾಸ್ಕಾದ ಚೆನಾ ಹಾಟ್‌ ಸ್ಪ್ರಿಂಗ್ಸ್‌ ಕಂಪನಿಯು ಮುಂಚೂಣಿಗೆ ಬಂದು, ದಾಖಲಾರ್ಹವೆನ್ನಬಹುದಾದಷ್ಟು ಕಡಿಮೆಯಾದ 57 °Cಯಷ್ಟು ದ್ರವಪದಾರ್ಥದ ತಾಪಮಾನದಿಂದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿತು.[೩೭]

ಇವನ್ನೂ ಗಮನಿಸಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ ೧.೪ ೧.೫ ೧.೬ ೧.೭ Lund, John W. (June 2007), "Characteristics, Development and utilization of geothermal resources" (PDF), Geo-Heat Centre Quarterly Bulletin, vol. 28, no. 2, Klamath Falls, Oregon: Oregon Institute of Technology, pp. 1–9, ISSN 0276-1084, archived from the original (PDF) on 2010-06-17, retrieved 2009-04-16
  2. Lund, John W. (2003), "The USA Geothermal Country Update", Geothermics, European Geothermal Conference 2003, 32 (4–6), Elsevier Science Ltd.: 409–418, doi:10.1016/S0375-6505(03)00053-1, ISSN 0375-6505
  3. ೩.೦ ೩.೧ ೩.೨ ೩.೩ ೩.೪ ೩.೫ ೩.೬ Fridleifsson, Ingvar B.; Bertani, Ruggero; Huenges, Ernst; Lund, John W.; Ragnarsson, Arni; Rybach, Ladislaus (2008-02-11), O. Hohmeyer and T. Trittin (ed.), The possible role and contribution of geothermal energy to the mitigation of climate change (PDF), Luebeck, Germany, pp. 59–80, archived from the original (pdf) on 2010-03-08, retrieved 2009-04-06 {{citation}}: Unknown parameter |conference= ignored (help)CS1 maint: location missing publisher (link)
  4. Khan, M. Ali (2007), The Geysers Geothermal Field, an Injection Success Story (PDF), Annual Forum of the Groundwater Protection Council, archived from the original (pdf) on 2011-07-26, retrieved 2010-01-25
  5. ೫.೦ ೫.೧ Tester, Jefferson W. (Massachusetts Institute of Technology); et al. (2006), The Future of Geothermal Energy (PDF), vol. Impact of Enhanced Geothermal Systems (Egs) on the United States in the 21st Century: An Assessment, Idaho Falls: Idaho National Laboratory, pp. 1–8 to 1–33 (Executive Summary), ISBN 0-615-13438-6, archived from the original (14MB PDF) on 2011-03-10, retrieved 2007-02-07 {{citation}}: Explicit use of et al. in: |first= (help)
  6. Bertani, Ruggero (2009), "Geothermal Energy: An Overview on Resources and Potential" (PDF), Proceedings of the International Conference on National Development of Geothermal Energy Use, Slovakia {{citation}}: Missing or empty |title= (help)CS1 maint: location missing publisher (link)
  7. Lund, John W.; Freeston, Derek H.; Boyd, Tonya L. (24–29 April 2005), "World-Wide Direct Uses of Geothermal Energy 2005" (PDF), Proceedings World Geothermal Congress, Antalya, Turkey, retrieved 2010-01-17 {{citation}}: Missing or empty |title= (help)CS1 maint: location missing publisher (link)[permanent dead link]
  8. ೮.೦ ೮.೧ Hanova, J; Dowlatabadi, H (9 November 2007), "Strategic GHG reduction through the use of ground source heat pump technology", Environmental Research Letters, vol. 2, UK: IOP Publishing, pp. 044001 8pp, doi:10.1088/1748-9326/2/4/044001, ISSN 1748-9326, archived from the original (PDF) on 2016-04-06, retrieved 2009-03-22
  9. Ragnarsson, Árni (24–29 April 2005), "Geothermal Development in Iceland 2000-2004" (PDF), Proceedings World Geothermal Congress, Antalya, Turkey, retrieved 2010-01-17 {{citation}}: Missing or empty |title= (help)CS1 maint: location missing publisher (link)[permanent dead link]
  10. Bertani, Ruggero; Thain, Ian (July 2002), "Geothermal Power Generating Plant CO2 Emission Survey", IGA News (49), International Geothermal Association: 1–3, archived from the original on 2011-07-26, retrieved 2010-01-17
  11. Bargagli1, R.; Catenil, D.; Nellil, L.; Olmastronil, S.; Zagarese, B. (August 1997), "Environmental Impact of Trace Element Emissions from Geothermal Power Plants", Environmental Contamination Toxicology, 33 (2), New York: Springer: 172–181, doi:10.1007/s002449900239, ISSN 0090-4341{{citation}}: CS1 maint: numeric names: authors list (link)
  12. Waffel, Mark (March 19, 2008), "Buildings Crack Up as Black Forest Town Subsides", Spiegel Online International, Der Spiegel, retrieved 2009-02-24
  13. Deichmann, N.; et al. (2007), Seismicity Induced by Water Injection for Geothermal Reservoir Stimulation 5 km Below the City of Basel, Switzerland, American Geophysical Union {{citation}}: Explicit use of et al. in: |first= (help)
  14. Geothermal Economics 101, Economics of a 35 MW Binary Cycle Geothermal Plant, New York: Glacier Partners, October 2009, archived from the original on 2010-05-01, retrieved 2009-10-17
  15. ೧೫.೦ ೧೫.೧ [82]
  16. Sanyal, Subir K.; Morrow, James W.; Butler, Steven J.; Robertson-Tait, Ann (January 22–24, 2007), "Cost of Electricity from Enhanced Geothermal Systems" (PDF), Proc. Thirty-Second Workshop on Geothermal Reservoir Engineering, Stanford, California, retrieved 2010-01-17 {{citation}}: Missing or empty |title= (help)CS1 maint: location missing publisher (link)
  17. Reif, Thomas (January 2008), "Profitability Analysis and Risk Management of Geothermal Projects" (PDF), Geo-Heat Centre Quarterly Bulletin, vol. 28, no. 4, Klamath Falls, Oregon: Oregon Institute of Technology, pp. 1–4, ISSN 0276-1084, archived from the original (PDF) on 2010-06-17, retrieved 2009-10-16
  18. Lund, John W.; Boyd, Tonya (June 1999), "Small Geothermal Power Project Examples" (PDF), Geo-Heat Centre Quarterly Bulletin, vol. 20, no. 2, Klamath Falls, Oregon: Oregon Institute of Technology, pp. 9–26, ISSN 0276-1084, archived from the original (PDF) on 2011-06-14, retrieved 2009-06-02
  19. Davies, Ed; Lema, Karen (June 29, 2008), "Pricey oil makes geothermal projects more attractive for Indonesia and the Philippines", The New York Times, retrieved 2009-10-31
  20. Pollack, H.N. (1993), "Heat Flow from the Earth's Interior: Analysis of the Global Data Set", Rev. Geophys., vol. 30, no. 3, pp. 267–280, archived from the original on 2012-03-03, retrieved 2010-05-31 {{citation}}: Unknown parameter |coauthors= ignored (|author= suggested) (help)
  21. ೨೧.೦ ೨೧.೧ Rybach, Ladislaus (September 2007), "Geothermal Sustainability" (PDF), Geo-Heat Centre Quarterly Bulletin, vol. 28, no. 3, Klamath Falls, Oregon: Oregon Institute of Technology, pp. 2–7, ISSN 0276-1084, archived from the original (PDF) on 2012-02-17, retrieved 2009-05-09
  22. Cassino, Adam (2003), "Depth of the Deepest Drilling", The Physics Factbook, Glenn Elert, retrieved 2009-04-09
  23. Watkins, Eric (February 11, 2008), "ExxonMobil drills record extended-reach well at Sakhalin-1", Oil & Gas Journal, archived from the original on 2011-03-14, retrieved 2009-10-31
  24. Turcotte, D. L. (2002), "4", Geodynamics (2 ed.), Cambridge, England, UK: Cambridge University Press, pp. 136–137, ISBN 978-0-521-66624-4 {{citation}}: Unknown parameter |coauthors= ignored (|author= suggested) (help)
  25. Thain, Ian A. (September 1998), "A Brief History of the Wairakei Geothermal Power Project" (PDF), Geo-Heat Centre Quarterly Bulletin, vol. 19, no. 3, Klamath Falls, Oregon: Oregon Institute of Technology, pp. 1–4, ISSN 0276-1084, archived from the original (PDF) on 2011-06-14, retrieved 2009-06-02
  26. Axelsson, Gudni; Stefánsson, Valgardur; Björnsson, Grímur; Liu, Jiurong (April 2005), "Sustainable Management of Geothermal Resources and Utilization for 100 – 300 Years" (PDF), Proceedings World Geothermal Congress 2005, International Geothermal Association, retrieved 2010-01-17[permanent dead link]
  27. "ಆರ್ಕೈವ್ ನಕಲು". Archived from the original on 2007-06-30. Retrieved 2010-05-31.
  28. Cataldi, Raffaele (August 1993), "Review of historiographic aspects of geothermal energy in the Mediterranean and Mesoamerican areas prior to the Modern Age" (PDF), Geo-Heat Centre Quarterly Bulletin, vol. 15, no. 1, Klamath Falls, Oregon: Oregon Institute of Technology, pp. 13–16, ISSN 0276-1084, archived from the original (PDF) on 2010-06-18, retrieved 2009-11-01
  29. Dickson, Mary H.; Fanelli, Mario (February 2004), What is Geothermal Energy?, Pisa, Italy: Istituto di Geoscienze e Georisorse, archived from the original on 2011-07-26, retrieved 2010-01-17
  30. ತಿವಾರಿ, G. N.; ಘೋಸಾಲ್‌, M. K. ರಿನ್ಯೂಯಬಲ್‌ ಎನರ್ಜಿ ರಿಸೋರ್ಸಸ್‌: ಬೇಸಿಕ್‌ ಪ್ರಿನ್ಸಿಪಲ್ಸ್‌ ಅಂಡ್‌ ಅಪ್ಲಿಕೇಷನ್ಸ್‌. ಆಲ್ಫಾ ಸೈನ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌, 2005 ISBN 1-84265-125-0
  31. ೩೧.೦ ೩೧.೧ Zogg, M. (20–22 May 2008), ""History of Heat Pumps Swiss Contributions and International Milestones" (PDF), 9th International IEA Heat Pump Conference, Zürich, Switzerland {{citation}}: Missing or empty |title= (help)CS1 maint: location missing publisher (link)
  32. ೩೨.೦ ೩೨.೧ Bloomquist, R. Gordon (December 1999), "Geothermal Heat Pumps, Four Plus Decades of Experience" (PDF), Geo-Heat Centre Quarterly Bulletin, vol. 20, no. 4, Klamath Falls, Oregon: Oregon Institute of Technology, pp. 13–18, ISSN 0276-1084, archived from the original (PDF) on 2012-10-31, retrieved 2009-03-21
  33. Kroeker, J. Donald; Chewning, Ray C. (February 1948), "A Heat Pump in an Office Building", ASHVE Transactions, 54: 221–238
  34. Gannon, Robert (February 1978), "Ground-Water Heat Pumps - Home Heating and Cooling from Your Own Well", Popular Science, vol. 212, no. 2, Bonnier Corporation, pp. 78–82, ISSN 0161-7370, retrieved 2009-11-01
  35. ೩೫.೦ ೩೫.೧ Lund, J. (September 2004), "100 Years of Geothermal Power Production" (PDF), Geo-Heat Centre Quarterly Bulletin, vol. 25, no. 3, Klamath Falls, Oregon: Oregon Institute of Technology, pp. 11–19, ISSN 0276-1084, archived from the original (PDF) on 2010-06-17, retrieved 2009-04-13
  36. McLarty, Lynn; Reed, Marshall J. (October 1992), "The U.S. Geothermal Industry: Three Decades of Growth" (PDF), Energy Sources, Part A: Recovery, Utilization, and Environmental Effects, 14 (4), London: Taylor & Francis: 443–455, doi:10.1080/00908319208908739, ISSN 1556-7230, archived from the original (PDF) on 2016-05-16
  37. Erkan, K.; Holdmann, G.; Benoit, W.; Blackwell, D. (2008), "Understanding the Chena Hot Springs, Alaska, geothermal system using temperature and pressure data", Geothermics, 37 (6): 565–585, doi:10.1016/j.geothermics.2008.09.001, ISSN 0375-6505, retrieved 2009-04-11

ಬಾಹ್ಯ ಕೊಂಡಿಗಳು

[ಬದಲಾಯಿಸಿ]