ಹರಿವು
ಗೋಚರ
ನದಿ ಅಥವಾ ಹೊಳೆಯಲ್ಲಿನ ಹರಿವು ಎಂದರೆ ತನ್ನ ಅಂತಸ್ಥ ಶಕ್ತಿಯನ್ನು ಕಡಿಮೆ ಮಾಡಿಕೊಳ್ಳಲು ನೀರು ಇಳಿಜಾರಿನಲ್ಲಿ ಸಾಗುವಾಗ ಗುರುತ್ವದಿಂದ ಪ್ರಭಾವಿತವಾದ ನೀರಿನ ಪ್ರವಾಹ. ನೀರಿನ ಪ್ರವಾಹ ಪರಿಮಾಣ, ಹೊಳೆಯ ಇಳಿಜಾರು, ಮತ್ತು ಕಾಲುವೆ ಜ್ಯಾಮಿತಿಯನ್ನು ಅವಲಂಬಿಸಿ ಹೊಳೆಯೊಳಗಿನ ಹರಿವು ಸ್ಥಳರೀತ್ಯಾ ಮತ್ತು ಕಾಲರೀತ್ಯಾ ಬದಲಾಗುತ್ತದೆ. ಉಬ್ಬರವಿಳಿತದ ಪ್ರದೇಶಗಳಲ್ಲಿ, ನದಿಗಳು ಮತ್ತು ಹೊಳೆಗಳಲ್ಲಿನ ಹರಿವು ಇಳಿತದ ಸಮಯದಲ್ಲಿ ಪುನರಾರಂಭವಾಗುವ ಮುಂಚೆ ಪ್ರವಾಹ ಉಬ್ಬರದ ಸಮಯದಲ್ಲಿ ತಿರುಗಬಹುದು.