ಬ್ರಾಹ್ಮಿ ಸೊಪ್ಪಿನ ಚಟ್ನಿ
ಬ್ರಾಹ್ಮಿ ಸೊಪ್ಪಿನ ಚಟ್ನಿ
ಇತರ ಹೆಸರು | ತಿಮರೆಯ ಚಟ್ನಿ |
---|---|
ಬಗೆ | ಚಟ್ನಿ |
ಮೂಲ | ಭಾರತ |
ಪ್ರದೇಶ ಅಥವಾ ರಾಜ್ಯ | ಕುಡ್ಲ, ಉಡುಪಿ |
ಸೇವೆಯ ತಾಪಮಾನ | ಬಿಸಿ/ ತಣ್ಣಗೆ |
ಮುಖ್ಯ ಸಲಕರಣೆ | ಬ್ರಾಹ್ಮಿ ಎಲೆ |
ತುಳುವಿನ ಮಳೆಗಾಲದ ಅತೀ ನೆಚ್ಚಿನ ತಿಮರೆದ ಚಟ್ನಿ ಕನ್ನಡದಲ್ಲಿ ಬ್ರಾಹ್ಮಿ ಸೊಪ್ಪಿನ ಚಟ್ನಿ , ಒಂದೆಲಗ ಅಥಾವಾ ಬ್ರಾಹ್ಮಿ ಎಲೆಯಿಂದ ಮಾಡುವ ಚಟ್ನಿ ಆಗಿದೆ. ಬ್ರಾಹ್ಮಿ ಸೊಪ್ಪಿನ ಚಟ್ನಿ ಸೇವನೆಯಿಂದ ನೆನಪು ಶಕ್ತಿ ಹೆಚ್ಚಾಗುತ್ತದೆ ಎನ್ನುವುದು ಆಯುರ್ವೇದ ಶಾಸ್ತ್ರಗಳಲ್ಲಿ ಇದೆ. ವಿಶೇಷವಾಗಿ ತುಳುನಾಡಿನಲ್ಲಿ ಗಂಜಿಯೊಟ್ಟಿಗೆ, ದೋಸೆಯ ಜೊತೆಗೆ ನೆಚ್ಚಿಕೊಳ್ಲುವುದಕ್ಕಾಗಿ ಬ್ರಾಹ್ಮಿ ಸೊಪ್ಪಿನ ಚಟ್ನಿಮಾಡುತ್ತಾರೆ. ಆದರೆ ರಾತ್ರಿಯ ಸಮಯದಲ್ಲಿ ಈ ಬ್ರಾಹ್ಮಿ ಸೊಪ್ಪಿನ ಚಟ್ನಿಯನ್ನು ಉಪಯೋಗ ಮಾಡುವುದಿಲ್ಲ.[೧]
ಬ್ರಾಹ್ಮಿ ಅನ್ನುವ ಹೆಸರು ಬರಲು ಕಾರಣ
[ಬದಲಾಯಿಸಿ]ಬ್ರಾಹ್ಮಿ ಅಥಾವೋ ತಿಮರೆ ಅಥಾವಾ ಒಂದೆಲಗ ಒಂದು ಔಷಧೀಯ ಮೂಲಿಕೆ ಹಾಗಾಗಿ ಪುರಾತನ ಗ್ರಂಥಗಳ ಪ್ರಕಾರ ಇದರಿಂದ ನೆನಪು ಶಕ್ತಿ ಜಾಸ್ತಿ ಆಗುತ್ತದೆ ಅನ್ನುವ ನಂಬಿಕೆ ಇದೆ. ತಿಮರೆಯ ಹೆಸರು ಪೌರಾಣಿಕ ಸೃಷ್ಟಿಕರ್ತ ಬ್ರಹ್ಮದೇವರ ಹೆಸರಿಂದ ಬಂದಿದೆ. ಹಾಗೆಯೇ ಮೆದುಳು ಮನುಷ್ಯನ ಎಲ್ಲಾ ಚಟುವಟಿಕಿಗೆ ಮೂಲ ಕಾರಣ. ಹಿಂದಿನಿಂದಲೂ ತಿಮರೆ/ ಬ್ರಾಹ್ಮಿ ಜ್ಞಾಪಕಶಕ್ತಿ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚು ಮಾಡುತಿತ್ತು ಅಂತ ಹಿರಿಯರು ಹೇಳುತ್ತಿದ್ದರು .[೨]
ವೈಜ್ಞಾನಿಕವಾಯಿದ್ ತಿಮರೆ
[ಬದಲಾಯಿಸಿ]ತಿಮರೆಯ ಅಥಾವಾ ಒಂದೆಲಗ ಆಥಾವಾ ಬ್ರಾಹ್ಮಿಯ ವೈಜ್ಞಾನಿಕ ಹೆಸರು ಸೆಂಟೆಲ್ಲಾ ಏಷ್ಯಾಟಿಕಾ.
ಬ್ರಾಹ್ಮಿ ಸೊಪ್ಪಿನ ಚಟ್ನಿ ಮಾಡಲು ಬೇಕಾಗುವ ಸಾಮಾನುಗಳು
[ಬದಲಾಯಿಸಿ]ತಿಮರೆಯ ಅಥಾವಾ ಒಂದೆಲಗ ಆಥಾವಾ ಬ್ರಾಹ್ಮಿ - ೧ ಲೋಟ ತುರಿದ ತೆಂಗಿನಕಾಯಿ - ಅರ್ದ ಲೋಟ ತೊಗರಿಬೇಳೆ - ೧ ಚಮಚ. ಉದ್ದಿನ ಬೇಳೆ - ಒಂದುವರೆ ಚಮಚ ಕೆಂಪುಮೆಣಸು -೨ . ಉಪ್ಪು ರುಚಿಗೆ ಬೇಕಾದಸ್ಟು. ಹುಣಸೆ ಹುಳಿ - ಚಿಕ್ಕ ತುಂಡು. ತೆಂಗಿನ ಎಣ್ಣೆ - ೧ ಚಮಚ. ಆದರೆ ತಿಮರೆ/ ಒಂದೆಲಗ/ ಬ್ರಾಹ್ಮಿ ಸೊಪ್ಪಿನ ಚಟ್ನಿ ಯನ್ನು ತೊಗರಿಬೇಳೆ, ಉದ್ದಿನ ಬೇಳೆ ಮತ್ತು ಕೆಂಪುಮೆಣಸು ಹಾಕದೆ ಕೂಡಾ ಮಾಡಬಹುದು.
ಬ್ರಾಹ್ಮಿ ಸೊಪ್ಪಿನ ಚಟ್ನಿ ಮಾಡುವ ವಿಧಾನ
[ಬದಲಾಯಿಸಿ]ಬಾಣಲೆಗೆ ತೆಂಗಿನ ಎಣ್ಣೆ ಹಾಕಿ ಉದ್ದಿನ ಬೇಳೆ, ತೊಗರಿ ಬೇಳೆ, ತುರಿದ ತೆಂಗಿನ ಕಾಯಿ, ಕೆಂಪು ಮೆಣಸು, ಹುಳಿ ಹಾಕಿ ಹದ ಉರಿಯಲ್ಲಿ ಉರಿಸಬೇಕು. ಉರಿಸಿದ ಈ ಸಾಮಾನುಗಳಿಗೆ ತಿಮರೆ ಅಥಾವಾ ಒಂದೆಲಗ ಆಥಾವಾ ಬ್ರಾಹ್ಮಿಯ ಎಲೆಗಳನ್ನು ಹಾಕಿ ಸ್ಡಲ್ಪ ನೀರು ಬೆರೆಸಿ, ಚೆನ್ನಾಗಿ ರುಬ್ಬಬೇಕು. ರುಬ್ಬಿದ ನಂತರ ರುಚಿಗೆ ತಕ್ಕ ಉಪ್ಪು ಹಾಕಿದರೆ ಬ್ರಾಹ್ಮಿ ಸೊಪ್ಪಿನ ಚಟ್ನಿ ಸವಿಯಲು ಸಿಧ್ಧವಾಗಿರುತ್ತದೆ.[೩]
ಬೇರೆ ಭಾಷೆಗಳಲ್ಲಿ ತಿಮರೆದ ಚಟ್ನಿ
[ಬದಲಾಯಿಸಿ]- ಇಂಗ್ಲಿಷ್ - ಬ್ರಾಹ್ಮಿ ಲೀವ್ಸ್ ಚಟ್ನಿ.[೪]
- ಕನ್ನಡ - ಒಂದೆಲಗ/ ಬ್ರಾಹ್ಮಿ ಎಲೆಯ ಚಟ್ನಿ .[೫]
- ಹಿಂದಿ - ಬ್ರಾಹ್ಮಿ ಚಟ್ನಿ .[೬]
ಉಪಯೋಗಗಳು
[ಬದಲಾಯಿಸಿ]ಇಂತಹ ಸಾಮಾನ್ಯ ಸಮಸ್ಯೆಗಳಿಗೆ ತಿಮರೆದ ಚಟ್ನಿ ಉಪಯೋಗ ಆಗುತ್ತದೆ.[೮]
ಉಲ್ಲೇಖಗಳು
[ಬದಲಾಯಿಸಿ]- ↑ "Brahmi chutney recipe | How to make thimare or timare chutney | Ondelaga chutney". www.vegrecipesofkarnataka.com (in ಇಂಗ್ಲಿಷ್). Retrieved 16 July 2022.
- ↑ "Foodialogues Blog & Vlog | Indian Vegetarian Food Recipes". Foodialogues Blog & Vlog | Indian Vegetarian Food Recipes. 6 July 2021. Retrieved 17 July 2022.
- ↑ Kalluraya, Smitha (28 January 2014). "THIMARE CHUTNEY / BRAHMI CHUTNEY". Cook with Smile. Retrieved 16 July 2022.
- ↑ Kalluraya, Smitha. "Brahmi Chutney Recipe". Archana's Kitchen (in ಇಂಗ್ಲಿಷ್). Retrieved 16 July 2022.
- ↑ https://smithakalluraya.com/thimare-chutney-brahmi-chutney-recipe/
- ↑ Kitchen, Archana's. "ब्राहमी चटनी रेसिपी - Brahmi Chutney (Recipe In Hindi)". Archana's Kitchen (in ಇಂಗ್ಲಿಷ್). Retrieved 16 July 2022.
- ↑ "Brahmi Leaves Chutney Recipe by Rajni". Cookpad (in ಇಂಗ್ಲಿಷ್). Retrieved 16 July 2022.
- ↑ Store, Mangalore (4 September 2020). "5 Awesome Benefits Of Brahmi / Timare / Ondelaga Leaves | Mangalore Store". Retrieved 16 July 2022.