ಬಿಪಾಶಾ ಬಸು
ಬಿಪಾಶಾ ಬಸು | |
---|---|
ಜನನ | |
ವೃತ್ತಿ(ಗಳು) | ಸಿನಿಮಾ ನಟಿ, Model |
ಸಕ್ರಿಯ ವರ್ಷಗಳು | 2001 – present |
ಸಂಗಾತಿ | Karan Singh Grover (2016–present) |
partner | John Abraham (2002–2011) |
ಜಾಲತಾಣ | http://bipashabasunet.com |
ಬಿಪಾಶಾ ಬಸು (ಬೆಂಗಾಲಿ: বিপাশা বসু) ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ಅಭಿನೇತ್ರಿಯಾಗಿದ್ದಾರೆ. ಮಾಜಿ ರೂಪದರ್ಶಿಯಾಗಿರುವ ಇವರು, 1996ರಲ್ಲಿ ಫೋರ್ಡ್ಸ್ ಗೋದ್ರೇಜ್ ಸಿಂಥಾಲ್ ಸೂಪರ್‌ಮಾಡೆಲ್ ಸ್ಪರ್ಧೆಯ ವಿಜೇತೆಯಾಗಿದ್ದರು.
ಆರಂಭಿಕ ಜೀವನ
[ಬದಲಾಯಿಸಿ]ಬಸು ಅವರು 1979ರ ಜನವರಿ 7ರಂದು [೧] ನವದೆಹಲಿಯಲ್ಲಿ ಬೆಂಗಾಲಿ ಹಿಂದು ಕುಟುಂಬದಲ್ಲಿ ಜನಿಸಿದರು. ಅವರು ತಮ್ಮ ತಂದೆತಾಯಿಗಳ ಮೂವರು ಪುತ್ರಿಯರಲ್ಲಿ ಎರಡನೆಯವಳಾಗಿದ್ದು, ಹಿರಿಯ ಪುತ್ರಿ ಬಿದಿಶಾ, ಕಿರಿಯವಳು-ವಿಜಯೇತಾ. ಬಿಪಾಶಾ ನವದೆಹಲಿಯಲ್ಲಿ ಜನಿಸಿದರೂ ಕೂಡ ಅವರ ಕುಟುಂಬ ಅನಂತರ ಕೋಲ್ಕತ್ತಾಗೆ ಸ್ಥಳಾಂತರಗೊಂಡಿತು.[ಸೂಕ್ತ ಉಲ್ಲೇಖನ ಬೇಕು].
ಒಂದು ಸಂದರ್ಶನದಲ್ಲಿ, ತಾವು ಆರಂಭದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಯೋಜಿಸಿದ್ದರು, ಆದರೆ ಆಕಸ್ಮಿಕವಾಗಿ ಮಾಡಲಿಂಗ್ ಮತ್ತು ನಟನೆಗೆ ಪ್ರವೇಶಿಸಬೇಕಾಗಿ ಬಂತು ಎಂದು ಹೇಳಿದ್ದಾರೆ.[೨] ಬಸು 12ನೇ ತರಗತಿವರೆಗೆಭವನ್ಸ್ ಗಂಗಾಬಕ್ಸ್ ಕಾನೋರಿಯ ವಿದ್ಯಾಮಂದಿರದಲ್ಲಿ ವಿಜ್ಞಾನ ವಿಷಯವನ್ನು ಅಧ್ಯಯನ ಮಾಡಿದರು, ನಂತರ ಭವಾನಿಪುರ್ ಗುಜರಾತಿ ಎಜುಕೇಶನ್ ಸೊಸೈಟಿ ಕಾಲೇಜಿನಲ್ಲಿ ವಾಣಿಜ್ಯ ಶಿಕ್ಷಣ ಪಡೆದರು. ಇದು ಕೊಲ್ಕತ್ತಾ ವಿಶ್ವವಿದ್ಯಾಲಯದಡಿ ಬರುವ ಶಿಕ್ಷಣ ಸಂಸ್ಥೆಯ ಪದವಿಪೂರ್ವ ಕಾಲೇಜು. ಕೊಲ್ಕತ್ತಾದಲ್ಲಿ ಅವರು ರೂಪದರ್ಶಿ ಮತ್ತು ರಾಂಪ್ ಪ್ರದರ್ಶನಗಳನ್ನು ಅರೆಕಾಲಿಕ ವೃತ್ತಿಯಾಗಿ ಮಾಡಿದರು.[೩] ಆದಾಗ್ಯೂ, 1996ರಲ್ಲಿ ಅವರು ರೂಪದರ್ಶಿ ಮೆಹರ್ ಜೆಸ್ಸಿಯಾ ಅವರನ್ನು ಕೊಲ್ಕತ್ತಾದಲ್ಲಿ ಭೇಟಿಯಾದರು. ಬಸು ಗೋದ್ರೇಜ್ ಸಿಂಥಾಲ್ ಸೂಪರ್‌ಮಾಡೆಲ್ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಜೆಸ್ಸಿಯಾ ಸಲಹೆ ನೀಡಿದರು. ಬಸು ಭಾಗವಹಿಸಿದರಲ್ಲದೇ, ಸ್ಪರ್ಧೆಯಲ್ಲಿ ಜಯಗಳಿಸಿದರು.[೨]
ವೃತ್ತಿಜೀವನ
[ಬದಲಾಯಿಸಿ]ಫೋರ್ಡ್ ಗೋದ್ರೇಜ್ ಸಿಂಥಾಲ್ ಸ್ಪರ್ಧೆಯಲ್ಲಿ ಜಯಗಳಿಸಿದ ನಂತರ, ಬಸು ಅವರನ್ನು ಪೋರ್ಡ್ ಕಂಪನಿ ನ್ಯೂಯಾರ್ಕ್‌ಗೆ ಕಳಿಸಿತು. ಅಲ್ಲಿ ಅವರು 17ರ ವಯಸ್ಸಿನಲ್ಲೇ ರೂಪದರ್ಶಿ ವೃತ್ತಿಜೀವನದಲ್ಲಿ ಯಶಸ್ವಿಯಾದರು.[೨]
ಬಸು, ಅಬ್ಬಾಸ್ ಮಸ್ತಾನ್ ಅವರ ಅಜನಬೀ ಚಲನಚಿತ್ರದಲ್ಲಿ ಅಕ್ಷಯಕುಮಾರ್, ಬಾಬಿ ಡಿಯೊಲ್ ಮತ್ತು ಕರೀನಾ ಕಪೂರ್ ಅವರೊಂದಿಗೆ ಚಿತ್ರರಂಗಕ್ಕೆ ಚೊಚ್ಚಲ ಪ್ರವೇಶ ಮಾಡಿದರು. ಈ ಚಲನಚಿತ್ರದಲ್ಲಿ ಅವರು, ವಿವಾಹಿತ ಮಹಿಳೆಯೊಬ್ಬಳು ತನ್ನ ಪತಿಯ ವಿವಾಹಿತ ಸ್ನೇಹಿತನನ್ನು ಮೋಹಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂತಿಮವಾಗಿ ಈ ಚಲನಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಫಿಲ್ಮ್ ಫೇರ್ ಅತ್ಯುತ್ತಮ ಆರಂಭಿಕ ನಟಿ ಪ್ರಶಸ್ತಿಯನ್ನು ನೀಡಲಾಯಿತು.
2002ರಲ್ಲಿ, ಬಸು ತಕ್ಕರಿ ದೊಂಗ ಎಂಬ ತೆಲುಗು ಚಲನಚಿತ್ರದಲ್ಲಿ ಹಾಗು ವಿಕ್ರಂ ಭಟ್ಟ್ ರ ರೋಮಾಂಚಕಾರಿ ರಾಜ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು. ರಾಜ್ ವಾಣಿಜ್ಯಿಕವಾಗಿ ಅತ್ಯಂತ ಸಾಧನೆ ಕಂಡಿತಲ್ಲದೇ, ಆ ವರ್ಷದ ಅತ್ಯಂತ ಯಶಸ್ವಿ ಚಲನಚಿತ್ರವಾಯಿತು.[೪] ಈ ಚಿತ್ರದ ಅಭಿನಯಕ್ಕಾಗಿ ಅವರ ಮೊದಲನೆಯ ಅತ್ಯುತ್ತಮ ನಟಿ ನಾಮನಿರ್ದೇಶನವನ್ನು ಫಿಲ್ಮ್ ಫೇರ್ ನಲ್ಲಿ ಪಡೆದುಕೊಂಡರು. ದಿ ಟ್ರಿಬ್ಯೂನ್ ಪತ್ರಿಕೆಯ ಒಂದು ವಿಮರ್ಶೆಯಲ್ಲಿ, "...ಅವರ ಅದ್ಭುತ ಅಭಿನಯದಿಂದಾಗಿ ಬಿಪಾಶಾ ಬಸು ಎಲ್ಲರ ಗಮನ ಸೆಳೆದಿದ್ದಾರೆ" ಎಂದು ಬರೆಯಲಾಗಿದೆ.[೫] 2003 ರ ಯಶಸ್ವಿ ಚಲನಚಿತ್ರ ಜಿಸ್ಮ್ ನಲ್ಲಿ ಜಾನ್ ಅಬ್ರಾಹಂ ನೊಂದಿಗೆ ಸೋನಿಯಾ ಖನ್ನಾ ಎಂಬ ಪಾತ್ರದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಲನಚಿತ್ರ ಅವರಿಗೆ ಫಿಲ್ಮ್ ಫೇರ್ ನ ಅತ್ಯುತ್ತಮ ಖಳನಾಯಕಿ ಪ್ರಶಸ್ತಿ ನಾಮನಿರ್ದೇಶನವನ್ನು ಗಳಿಸಿಕೊಟ್ಟಿತು.
ನಟನೆಯ ಹೊರತಾಗಿ, ಬಸು ಸೋನು ನಿಗಮ್ ರ ಕಿಸ್ಮತ್ ಆಲ್ಬಂಗಾಗಿ ವಿಡಿಯೋ "ತು" ಅನ್ನು ಮಾಡಿದರು. ಬಸು, ಜೇ ಸೀನ್ ರ ಸಂಗೀತ ವಿಡಿಯೋ ಸ್ಟೋಲನ್ ನಲ್ಲಿಯು ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು.[೬]
2006 ರಲ್ಲಿ, ಓಂಕಾರ ಚಿತ್ರದ ಬೀಡಿ ಎಂಬ ಐಟಂ ಹಾಡಿಗೆ ನೃತ್ಯಮಾಡಿದರು. ಇದಕ್ಕಾಗಿ ರೆಡಿಫ್ ಬಸುರವರ ಚಿತ್ರಣವನ್ನು ಗುರುತಿಸಿದೆ.[೭]
2008 ರಲ್ಲಿ ಬಸು ರೇಸ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರು. ಈ ಚಲನಚಿತ್ರ ಅವರು ಬಾಲಿವುಡ್ ಗೆ ಕಾಲಿರಿಸಿದ ಅಬ್ಬಾಸ್ ಮಸ್ತಾನ್ ರವರೊಡನೆ, ಕಾರ್ಯನಿರ್ವಹಿಸಿದ ಎರಡನೆಯ ಚಿತ್ರವಾಗಿದೆ. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್, ಅಕ್ಷಯ್ ಖನ್ನಾ, ಅನಿಲ್ ಕಪೂರ್ ಮತ್ತು ಕತ್ರೀನಾ ಕೈಫ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಸಾಧನೆಯನ್ನು ಕಂಡಿತಲ್ಲದೇ, ಬಸುರವರ ಅಭಿನಯವನ್ನು ವಿಮರ್ಶಕರು ಪ್ರಶಂಸಿಸಿದರು. ಇಂಡಿಯಾFM ನ ತರಣ್ ಆದರ್ಶ್ ಇವರ ಅಭಿನಯವನ್ನು "ಇಲ್ಲಿಯ ವರೆಗೆ ಅವರು ಅಭಿನಯಿಸಿರುವುದರಲ್ಲೆಲ್ಲಾ ಇದು ಅತ್ಯುತ್ತಮವಾಗಿದೆ. ಅವರು ಅತಿ ಸುಂದರವಾಗಿದ್ದಾರೆ" ಎಂದು ವಿವರಿಸಿದ್ದಾರೆ.[೮] ಅವರು ಬಚ್ನಾ ಏ ಹಸೀನೊ ಚಿತ್ರದಲ್ಲಿ ರಣ್ಬೀರ್ ಕಪೂರ್ ಎದುರು ಅಭಿನಯಿಸದ ಪಾತ್ರಕ್ಕಾಗಿ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದರು. ಬಸು, ರಬ್ ನೆ ಬನಾ ದಿ ಜೋಡಿ ಚಿತ್ರದ ಫಿರ್ ಮಿಲೆಂಗೇ ಚಲ್ತೆ ಚಲ್ತೆ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಆ ವರ್ಷವನ್ನು ಪೂರ್ಣಗೊಳಿಸಿದರು.
2005 ರಲ್ಲಿ ಬಿಪಾಶಾ ಮತ್ತು ಜಾನ್ ಅಬ್ರಾಹಂ ಎರೋಸ್ ನೊಂದಿಗೆ ಬಾಲಿವುಡ್ ಬಾಡೀಸ್ ಎಂಬ ಫಿಟ್ ನೆಸ್ ವಿಡಿಯೋ ಮಾಡಿದರು.[೯] 2010 ರಲ್ಲಿ ಅವರು BB - ಲವ್ ಯುವರ್ ಸೆಲ್ಫ್ ಎಂಬ ಬ್ಯಾನರ್ ನಡಿ ಶಿಮ್ರೋನೊಂದಿಗೆ ಅವರದೇ ವಿಡಿಯೋ ಸರಣಿಗಳನ್ನು ಬಿಡುಗಡೆ ಮಾಡಿದರು. ಮೊದಲು ಬಿಡುಗಡೆ ಮಾಡಿದ ವಿಡಿಯೋವನ್ನು ಫಿಟ್ ಅಂಡ್ ಫ್ಯಾಬುಲಸ್ ಯು ಎಂದು ಕರೆಯಲಾಗುತ್ತದೆ. [೧೦][೧೧]
ವೈಯಕ್ತಿಕ ಜೀವನ
[ಬದಲಾಯಿಸಿ]ಬಸು ಪ್ರಸ್ತುತದಲ್ಲಿ ನಟ ಜಾನ್ ಅಬ್ರಾಹಂ ರವರೊಂದಿಗೆ ವಿಹರಿಸುತ್ತಿದ್ದಾರೆ.[೧೨][೧೩] 2002 ರಿಂದ ಇವರು ಒಟ್ಟಿಗಿರುವರಲ್ಲದೇ, ಭಾರತೀಯ ಮಾಧ್ಯಮದಲ್ಲಿ ಇವರನ್ನು ಸೂಪರ್ ಕಪಲ್ ಎಂದು ಕರೆಯಲಾಗುತ್ತದೆ.[೧೪] ಹಿಂದೆ ಅವರು ಬಾಲಿವುಡ್ ನ ನಟರಾದ ಡಿನೊ ಮೋರಿಯಾರೊಂದಿಗೆ ವಿಹರಿಸಿದ್ದರು.[೧೫]
2006 ರಲ್ಲಿ ನ್ಯೂಜೆರ್ಸಿ ಯಾ ಎಡಿಸನ್ ನಲ್ಲಿ ನಡೆದ ಇಂಡಿಯಾ ಡೇ ಪರೇಡ್ ನ ಕೆಲವು ಸಂಘಟಕರಿಂದ ಕಿರುಕುಳಕೊಳಗಾಗಿದ್ದಾರೆಂದು ಬಸು ವಾದಿಸಿದ್ದಾರೆ. 2006 ರ ಆಗಸ್ಟ್ 13 ರಂದು ನಡೆದ ಪರೇಡ್ ಅನ್ನು ಆರಂಭದಲ್ಲಿ ಬಸು ನಿರ್ದೇಶಿಸಬೇಕಿತ್ತು. ಆದರೆ ಅಂತಿಮವಾಗಿ ಬಸು ವೇದಿಕೆಯ ಮೇಲೆ ತಡವಾಗಿ ಬಂದರು. ಅವರ ಪ್ರಕಾರ ಕಿರುಕುಳವೇ ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ. ಅವರು, "ನಾನು ಪರೇಡ್ ಗೆ ಹೋಗಬೇಕೆಂದಿದ್ದೆ ಆದರೆ ನನ್ನಿಂದ ಸಾಧ್ಯವಾಗಲಿಲ್ಲ" ವೆಂದು ತಿಳಿಸಿದ್ದಾರೆ. ಪರೇಡ್ ಗೆ ಅವರನ್ನು ಕಾರ್ ನಲ್ಲಿ ಕೊಂಡುಯ್ಯುತ್ತಿದ್ದ ಇಬ್ಬರು ವ್ಯಕ್ತಿಗಳಿಂದ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳವನ್ನು ಅನುಭವಿಸಿದರು ಎಂದು ವಿವರಿಸಿದ್ದಾರೆ.[೧೬]
2005 ರಲ್ಲಿ ಮತ್ತು 2007 ರಲ್ಲಿ UK ನಿಯತಕಾಲಿಕೆ ಈಸ್ಟರ್ನ್ ಐ ಬಸುರವರನ್ನು "ಸೆಕ್ಸಿಯೆಸ್ಟ್ ವುಮೆನ್ ಇನ್ ಏಷ್ಯಿಯಾ" ಎಂದು ಕರೆದಿದೆ.[೧೭]
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ವರ್ಷ | ಚಿತ್ರ | ಪಾತ್ರ | style="background:#B0C4DE;" | ಪ್ರಶಸ್ತಿ |
---|---|---|---|
2001 | ಅಜನಬೀ | ಸೋನಿಯಾ/ನೀತಾ | ವಿಜೇತೆ, ಫಿಲ್ಮ್ ಫೇರ್ ಅತ್ಯುತ್ತಮ ಆರಂಭಿಕ ನಟಿ ಪ್ರಶಸ್ತಿ |
2002 | ತಕ್ಕರಿ ದೊಂಗ | ಪಾನಸ | ತೆಲುಗು ಚಲನಚಿತ್ರ |
ರಾಜ್ | ಸಂಜನಾ ಧನ್ ರಾಜ್ | ನಾಮನಿರ್ದೇಶಿತ, ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ | |
ಆಂಕೆ | ರಾಯ್ನಾ | ||
ಮೇರೆ ಯಾರ್ ಕಿ ಶಾದಿ ಹೈ | ರಿಯಾ | ||
ಚೋರ್ ಮಚಾಯೇ ಶೋರ್ | ರಂಜಿತ | ||
ಪ್ರಭಾ ನಾರಾಯಣ್ | |||
2003 | ಜಿಸ್ಮ್ | ಸೋನಿಯಾ ಖನ್ನಾ | ನಾಮನಿರ್ದೇಶಿತ, ಫಿಲ್ಮ್ ಫೇರ್ ಅತ್ಯುತ್ತಮ ಖಳನಾಯಕಿ ಪ್ರಶಸ್ತಿ |
ಫುಟ್ ಪಾಥ್ | ಸಂಜನಾ ರಾಯ್ ಶಿಂಗ್ಲಾ ಖಾನ್ | ||
Rules: Pyaar Ka Superhit Formula | ಗೌರವ ನಟಿ | ||
ಜಮೀನ್ | ನಂದಿನಿ | ||
2004 | ಇಷ್ಕ್ ಹೈ ತುಮ್ ಸೆ | ಖುಷ್ಬೂ | |
ಏತ್ಬಾರ್ | ರಿಯಾ ಮಲ್ಹೋತ್ರ | ||
ರುದ್ರಾಕ್ಷ್ | ಗಾಯಿತ್ರಿ | ||
Rakht: What If You Can See the Future | ದ್ರಿಷ್ಟಿ | ||
ಮದ್ಹೋಷಿ | ಅನುಪಮ ಕೌಲ್ | ||
2005 | ಚೆಹ್ರಾ | ಮೇಘಾ | |
ಸಚ್ಚೆನ್ | ಮಂಜು | ತಮಿಳುಚಲನಚಿತ್ರ | |
ವಿರುದ್ಧ್ | ಗೌರವ ನಟಿ | ||
ಬರ್ಸಾತ್ | ಅನ್ನಾ | ||
ನೋ ಎಂಟ್ರಿ | ಬಾಬಿ | ನಾಮನಿರ್ದೇಶಿತ, ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ | |
ಅಪಹರಣ್ | ಮೇಘಾ | ||
ಶಿಕಾರ್ | ನತಾಶ | ||
2006 | ಹಮ್ ಕೊ ದಿವಾನ ಕರ್ ಗಯಿ | ಸೋನಿಯಾ ಬೆರ್ರಿ | |
ಡರ್ನ ಜರೂರಿ ಹೈ | ವರ್ಷ | ||
ಫಿರ್ ಹೇರಾ ಫೇರಿ | ಅನುರಾಧ | ||
ಅಲಗ್ | ಸಬ್ಸೇ ಅಲಗ್ ಹಾಡಿನಲ್ಲಿ ಗೌರವ ನಟಿಯಾಗಿ | ||
ಕಾರ್ಪೊರೇಟ್ | ನಿಶಿಗಂಧ ದಾಸ್ ಗುಪ್ತ | ನಾಮನಿರ್ದೇಶಿತ, ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ | |
ಓಂಕಾರ | ಬಿಲ್ಲೊ ಚಮನ್ ಭಾರ್ | ||
ಜಾನೇ ಹೋಗ ಕ್ಯಾ | ಅದಿತಿ | ||
ಧೂಮ್ 2 | ACP ಶೋನಾಲಿ ಬೋಸ್/ ಮೊನಾಲಿ ಬೋಸ್ |
||
2007 | ನೆಹಲೇ ಪೆ ದೆಹ್ಲಾ | ಪೂಜಾ | |
ನೋ ಸ್ಮೋಕಿಂಗ್ | ಫೂಂಕ್ ದೇ ಹಾಡಿನಲ್ಲಿ ಗೌರವ ನಟಿಯಾಗಿ | ||
ಓಂ ಶಾಂತಿ ಓಂ | ಸ್ವತಃ ಅವರೇ, ಗೌರವ ನಟಿಯಾಗಿ | ||
ಧನ್ ಧನಾ ಧನ್ ಗೋಲ್ | ರುಮಾನ | ||
2008 | ರೇಸ್ | ಸೋನಿಯಾ | |
ಬಚ್ನಾ ಏ ಹಸೀನೊ | ರಾಧಿಕ/ಶ್ರೇಯಾ ರಾಥೋಡ್ | ನಾಮನಿರ್ದೇಶಿತ, ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ | |
ರಬ್ ನೆ ಬನಾ ದಿ ಜೋಡಿ | ಫಿರ್ ಮಿಲೆಂಗೇ ಚಲ್ತೆ ಚಲ್ತೆ ಹಾಡಿನಲ್ಲಿ ಗೌರವ ನಟಿಯಾಗಿ | ||
2009 | ಆ ದೇಖೆ ಜರಾ | ಸಿಮಿ ಚಟರ್ಜಿ | |
All The Best: Fun Begins | ದ್ವಿಪಾತ್ರದಲ್ಲಿ: ಜಾಹ್ನವಿ ಚೋಪ್ರಾ /ಲೆಸೊಥೋ ದ ರಾಣಿಯಾಗಿ | ||
ಸೋಬ್ ಚಾರಿತ್ರೋ ಕಾಲ್ಪನಿಕ್ | ರಾಧಿಕ | ಬೆಂಗಾಲಿ ಚಲನಚಿತ್ರ | |
2010 | ಪಂಖ್ | ನಂದಿನಿ (Alter-ego) | |
ಲಮ್ಹ್ | ಅಜಿಜಾ | ||
ಆಕ್ರೋಷ್ | ಗೀತಾ | ||
2011 | ದಮ್ ಮಾರೋ ದಮ್ | ನಿರ್ಮಾಣದ ನಂತರ | |
ಪ್ಲ್ಯೇಯರ್ಸ್ | ಚಿತ್ರೀಕರಣದ ಹಂತದಲ್ಲಿದೆ | ||
ಸಿಂಗ್ಯುಲಾರಿಟಿ | ತುಳಜಾ ನಾಯ್ಕ್ | ಚಿತ್ರೀಕರಣದ ಹಂತದಲ್ಲಿದೆ |
ಇವನ್ನೂ ಗಮನಿಸಿ
[ಬದಲಾಯಿಸಿ]- ಭಾರತೀಯ ಚಲನಚಿತ್ರ ನಟಿಯರ ಪಟ್ಟಿ
ಉಲ್ಲೇಖಗಳು
[ಬದಲಾಯಿಸಿ]- ↑ "Know the Real Me". bipashabasunet.com. Archived from the original on 2011-04-27. Retrieved 2010-01-07.
- ↑ ೨.೦ ೨.೧ ೨.೨ Verma, Sukanya (23 September 1999). "'Once you enter films, your private life becomes a joke'". Rediff.com. Retrieved 2007-12-29.
- ↑ Verma, Sukanya; Bhattacharya, Priyanka (17 May 2002). "Desperately seeking Bipasha". Rediff.com. Retrieved 2007-12-29.
{{cite web}}
: CS1 maint: multiple names: authors list (link) - ↑ "Box Office 2002". BoxOfficeIndia.Com. Archived from the original on 2012-07-21. Retrieved 2008-04-19.
- ↑ D.P. (3 February 2002). "A fast-paced psycho-thriller". The Tribune. Retrieved 2008-06-05.
{{cite web}}
: Italic or bold markup not allowed in:|publisher=
(help) - ↑ "Powerlist: Top Bollywood Actresses (2006)". Rediff Top Bollywood Actresses of 2006. Retrieved 25 August 2006.
- ↑ "Nach Bipasha, nach!". Retrieved 2008-07-17.
{{cite web}}
: Unknown parameter|piblisher=
ignored (help) - ↑ Adarsh, Taran (21 March 2008). "Movie review - Race". indiafm.com. Retrieved 2008-06-05.
- ↑ "Bollywood Bodies". Archived from the original on 2011-01-17. Retrieved 2011-01-14.
- ↑ "Bipasha Basu's new fitness mantra 'Love Yourself'". Archived from the original on 2012-05-12. Retrieved 2011-01-14.
- ↑ "Love Yourself". Archived from the original on 2011-01-17. Retrieved 2011-01-14.
- ↑ Iyer, Meena (30 August 2009). "Yes, I'm hot & sexy: Bipasha". ದಿ ಟೈಮ್ಸ್ ಆಫ್ ಇಂಡಿಯಾ. Retrieved 2009-09-03.
{{cite web}}
: Italic or bold markup not allowed in:|publisher=
(help) - ↑ Udasi, Harshikaa (27 March 2009). "Just come, sizzle". ದಿ ಹಿಂದೂ. Retrieved 2009-09-03.
{{cite web}}
: Italic or bold markup not allowed in:|publisher=
(help) - ↑ TNN (4 April 2007). "It's London in spring time!". ದಿ ಟೈಮ್ಸ್ ಆಫ್ ಇಂಡಿಯಾ. Retrieved 2009-09-03.
{{cite web}}
: Italic or bold markup not allowed in:|publisher=
(help) - ↑ "Bipasha & Dino share warm vibes". Indiatimes Movies. 1 April 2009. Retrieved 2009-09-03.
{{cite web}}
: Italic or bold markup not allowed in:|publisher=
(help)[permanent dead link] - ↑ "I was harassed in US, says Bipasha Basu".
- ↑ Press Trust of India (PTI) (2007-11-16). "Bipasha is the Sexiest Asian Woman in the World: Eastern Eye". Indiatimes. Retrieved 19 November 2007.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Bipasha Basu ಐ ಎಮ್ ಡಿ ಬಿನಲ್ಲಿ
- Bipasha Basu at the Fashion Model Directory
- Pages using the JsonConfig extension
- CS1 maint: multiple names: authors list
- CS1 errors: markup
- CS1 errors: unsupported parameter
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- Articles with permanently dead external links
- Articles with hCards
- Articles with unsourced statements from May 2010
- Articles with hatnote templates targeting a nonexistent page
- Commons category link is on Wikidata
- ೧೯೭೯ ಜನನ
- ಬದುಕಿರುವ ಜನರು
- ಭಾರತೀಯ ಚಲನಚಿತ್ರ ನಟರು
- ಬೆಂಗಾಲಿ ನಟರು
- ಭಾರತೀಯ ನಟರು
- ಭಾರತೀಯ ಮಹಿಳಾ ರೂಪದರ್ಶಿಗಳು
- ಹಿಂದಿ ಚಲನಚಿತ್ರ ನಟರು
- ಫಿಲ್ಮ್ಫೇರ್ ಪ್ರಶಸ್ತಿ ವಿಜೇತರು
- ಚಲನಚಿತ್ರ ನಟಿಯರು
- ಬಾಲಿವುಡ್ ನಟಿಯರು