ಪ್ರಮೋದ್ ಸಾವಂತ್
ಪ್ರಮೋದ್ ಸಾವಂತ್ | |
---|---|
೨೦೧೯ರಲ್ಲಿ ಸಾವಂತ್ | |
ಗೋವಾದ ೧೩ನೇ ಮುಖ್ಯಮಂತ್ರಿ
| |
ಹಾಲಿ | |
ಅಧಿಕಾರ ಸ್ವೀಕಾರ ೧೯ ಮಾರ್ಚ್ ೨೦೧೯ | |
ರಾಜ್ಯಪಾಲ | ಮೃದುಲಾ ಸಿನ್ಹ ಸತ್ಯಪಾಲ್ ಮಲಿಕ್ ಭಗತ್ ಸಿಂಗ್ ಕೋಶ್ಯಾರಿ |
ಪ್ರತಿನಿಧಿ | ಮನೋಹರ್ ಅಜ್ಗಾಂವ್ಕರ್ (೨೮ ಮಾರ್ಚ್ ೨೦೧೯ರಿಂದ) ಚಂದ್ರಕಾಂತ್ ಕವ್ಳೇಕರ್ (೧೪ ಜುಲೈ ೨೦೧೯ರಿಂದ) |
ಪೂರ್ವಾಧಿಕಾರಿ | ಮನೋಹರ್ ಪರಿಕ್ಕರ್ |
ಗೋವಾ ವಿಧಾನಸಭೆಯ ಸ್ಪೀಕರ್
| |
ಅಧಿಕಾರ ಅವಧಿ ೨೨ ಮಾರ್ಚ್ ೨೦೧೭ – ೧೮ ಮಾರ್ಚ್ ೨೦೧೯ | |
ಪೂರ್ವಾಧಿಕಾರಿ | ಅನಂತ್ ಶೇಠ್ |
ಉತ್ತರಾಧಿಕಾರಿ | ರಾಜೇಶ್ ಪಾಟ್ನೇಕರ್ |
ಗೋವಾ ವಿಧಾನಸಭೆಯ ಶಾಸಕ
| |
ಹಾಲಿ | |
ಅಧಿಕಾರ ಸ್ವೀಕಾರ ೨೦೧೨ | |
ಮತಕ್ಷೇತ್ರ | ಸಾಂಖಳಿಂ |
ವೈಯಕ್ತಿಕ ಮಾಹಿತಿ | |
ಜನನ | ಗೋವ, ಭಾರತ | ೨೪ ಏಪ್ರಿಲ್ ೧೯೭೩
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಸಂಗಾತಿ(ಗಳು) | ಸುಲಕ್ಷಣಾ ಸಾವಂತ್ |
ಪ್ರಮೋದ್ ಪಾಂಡುರಂಗ ಸಾವಂತ್ (ಹುಟ್ಟು- ೨೪ ಏಪ್ರಿಲ್ ೧೯೭೩) ಒಬ್ಬ ಭಾರತೀಯ ರಾಜಕಾರಣಿಯಾದ್ದು, ಗೋವಾದ ೧೩ನೇ ಹಾಗೂ ಹಾಲಿ ಮುಖ್ಯಮಂತ್ರಿಯಾಗಿದ್ದಾರೆ.[೧][೨] ಸಾವಂತ್ ಗೋವಾ ವಿಧಾನಸಭೆಯಲ್ಲಿ ಸಾಂಖಳಿಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ.[೩]
ಇವರು ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿದ್ದಾರೆ.[೪] ಮುಖ್ಯಮಂತ್ರಿ ಆಗುವ ಮುಂಚೆ ವಿಧಾನಸಭೆಯ ಸ್ಪೀಕರ್ ಆಗಿದ್ದರು. ಮನೋಹರ್ ಪರಿಕ್ಕರ್ ಅವರ ನಿಧನದ ನಂತರ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು.
ಆರಂಭಿಕ ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ಪ್ರಮೋದ್ ಸಾವಂತ್ ಅವರು ೨೪ ಏಪ್ರಿಲ್ ೧೯೭೩ರಲ್ಲಿ ಪಾಂಡುರಂಗ ಮತ್ತು ಪದ್ಮಿನಿ ಸಾವಂತ್ ದಂಪತಿಗೆ ಹುಟ್ಟಿದರು.[೫][೬] ಗಂಗಾ ಎಜುಕೇಶನ್ ಸೊಸೈಟಿಯ ಕೊಲ್ಲಾಪುರದ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆಯುರ್ವೇದ ವೈದ್ಯ ಪದವಿಯನ್ನು ಪಡೆದರು. ಸಮಾಜ ಸೇವೆಯ ಸ್ನಾತಕ್ಕೋತ್ತರ ಪದವಿಯನ್ನು ಪುಣೆಯಲ್ಲಿರುವ ತಿಲಕ್ ಮಹಾರಾಷ್ಟ್ರ ವಿಶ್ವವಿದ್ಯಾಲದಲ್ಲಿ ಪಡೆದರು.[೪]
ರಾಜಕೀಯ ಜೀವನ
[ಬದಲಾಯಿಸಿ]ಸಾವಂತ್ ಅವರು ೨೦೧೨ರ ಗೋವಾ ವಿಧಾನಸಭಾ ಚುನಾವಣೆಯನ್ನು ಸಾಂಖಳಿಂ ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಪ್ರತಾಪ್ ಗೌನ್ಸ್ ಅವರನ್ನು ೧೪,೨೫೫ (೬೬.೦೨%) ಮತಗಳಿಂದ ಸೋಲಿಸುವ ಮೂಲಕ ಗೆದ್ದರು. ಕೆಲಕಾಲ ಗೋವಾ ಬಿಜೆಪಿಯ ವಕ್ತಾರರಾಗಿ ಕಾರ್ಯನಿರ್ವಹಿಸಿದರು.[೭] ೨೦೧೭ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಧರ್ಮೇಶ್ ಸಗ್ಲಾನಿ ಅವರನ್ನು ೧೦,೦೫೮ (೪೩.೦೪%) ಮತಗಳಿಂದ ಸೋಲಿಸುವ ಮೂಲಕ ಅದೇ ಕ್ಷೇತ್ರದಿಂದ ಮರು ಆಯ್ಕೆಯಾದರು. ೨೨ ಮಾರ್ಚ್ ೨೦೧೭ರಲ್ಲಿ ಗೋವಾ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು.[೮]
ಗೋವಾದ ಮುಖ್ಯಮಂತ್ರಿ
[ಬದಲಾಯಿಸಿ]ಮನೋಹರ್ ಪರಿಕ್ಕರ್ ಅವರ ನಿಧನದ ಮೆರೆಗೆ ಮುಖ್ಯಮಂತ್ರಿಯಾಗಿ ಇನ್ನೊಬ್ಬರನ್ನು ಆಯ್ಕೆಮಾಡಬೇಕಿತ್ತು. ವಿಧಾನಸಭೆಯು ಸಾವಂತ್ ಅವರನ್ನು ಆಯ್ಕೆ ಮಾಡಿದ ನಂತರ, ಗೋವಾದ ೧೩ನೇ ಮುಖ್ಯಮಂತ್ರಿಯಾಗಿ ೧೯ ಮಾರ್ಚ್ ೨೦೧೯ರಲ್ಲಿ ಪ್ರಮಾಣವಚನ ಸ್ವೀಕರಿಸಿದರು.[೯].
ವೈಯಕ್ತಿಕ ಜೀವನ
[ಬದಲಾಯಿಸಿ]ಸಾವಂತ್ ಮರಾಠ ಜಾತಿಯವರಾಗಿದ್ದಾರೆ.[೯] ಸಾವಂತ್ ಅವರ ಹೆಂಡತಿ ಸುಲಕ್ಷಣಾ[೧೦] ಅವರು ಬಿಚೋಲಿಂನ ಶ್ರೀ ಶಾಂತಾದುರ್ಗ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಸಾಯನಶಾಸ್ತ್ರದ ಶಿಕ್ಷಕಿ ಆಗಿದ್ದಾರೆ.[೧೧] ಇವರು ಕೂಡ ಬಿಜೆಪಿ ನಾಯಕಿಯಾಗಿದ್ದು, ಗೋವಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿದ್ದಾರೆ.[೧೨][೧೩][೧೪]
ಉಲ್ಲೇಖಗಳು
[ಬದಲಾಯಿಸಿ]- ↑ Murari Shetye. "Goa speaker Pramod Sawant succeeds Parrikar as CM" The Times of India. 19 March 2019.
- ↑ Gupta, Saurabh (19 March 2019). Jacob, Jimmy (ed.). "Pramod Sawant, Goa's New Chief Minister, Is An Ayurveda Practitioner. H". NDTV.
- ↑ "Archived copy". Archived from the original on 2017-07-24. Retrieved 2017-07-17.
{{cite web}}
: CS1 maint: archived copy as title (link) - ↑ ೪.೦ ೪.೧ "Pramod Pandurang Sawant(Bharatiya Janata Party(BJP)):Constituency- SANQUELIM(NORTH GOA) - Affidavit Information of Candidate:". myneta.info.
- ↑ "CM to lay corner stone for Sankhali bus stand today". The Navhind Times.
- ↑ [೧][ಮಡಿದ ಕೊಂಡಿ]
- ↑ "Wives of 2 MLAs get prominent positions in BJP's new Executive". goanews.com. 20 February 2016. Retrieved 5 September 2020.[ಶಾಶ್ವತವಾಗಿ ಮಡಿದ ಕೊಂಡಿ]
- ↑ Prakash Kamat (22 March 2017). "Pramod Sawant elected as Speaker of Goa Assembly". thehindu.com. Retrieved 5 September 2020.
- ↑ ೯.೦ ೯.೧ "From Ayurveda practioner to Goa CM: All you need to know about Pramod Sawant". India Today. March 19, 2019. Retrieved September 5, 2020.
- ↑ Wives of 2 MLAs get prominent positions in BJP’s new Executive
- ↑ "Pramod Sawant: 10 Interesting facts about CM of Goa". Jagranjosh.com. March 19, 2019.
- ↑ "BJP women's wing demands 33% seats". oHeraldo. Archived from the original on 2021-02-04. Retrieved 2021-01-12.
- ↑ "BJP Mahila Morcha chief: No woman eligible to be candidate - Times of India". The Times of India.
- ↑ "BJP Mahila eyes Porvorim seat in 2017 Assembly polls". The Goan.
- CS1 maint: archived copy as title
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from March 2019
- Articles with invalid date parameter in template
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಸೆಪ್ಟೆಂಬರ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಗೋವ