ಪರಮಾಣು ಪ್ರಸರಣ-ಮಾಡದಿರುವ ಒಡಂಬಡಿಕೆ
ಸಹಿ ಮಾಡಿದ ದಿನ | 1 July 1968 |
---|---|
ಸ್ಥಳ | New York, United States |
Effective | 5 March 1970 |
Condition | Ratification by the United Kingdom, the Soviet Union, the United States, and 40 other signatory states. |
Parties | 189 (Complete List) |
ಪರಮಾಣು ಶಸ್ತ್ರಾಸ್ತ್ರಗಳನ್ನು ಪ್ರಸರಣ-ಮಾಡದಿರುವುದರ ಮೇಲಿನ ಒಡಂಬಡಿಕೆ ಎಂದಷ್ಟೇ ಅಲ್ಲದೇ ಪರಮಾಣು ಪ್ರಸರಣ-ಮಾಡದಿರುವ ಒಡಂಬಡಿಕೆ (NPT ಅಥವಾ NNPT ) ಎಂದೂ ಕರೆಯಲ್ಪಡುವ ಈ ಒಪ್ಪಂದವು ಪರಮಾಣು ಶಸ್ತ್ರಾಸ್ತ್ರಗಳ ಹರಡುವಿಕೆಯನ್ನು (ಪ್ರಸರಣವನ್ನು) ಸೀಮಿತಗೊಳಿಸಲು ಇರುವ ಒಂದು ಒಡಂಬಡಿಕೆಯಾಗಿದೆ. 1970ರ ಮಾರ್ಚ್ 5ರಂದು ಈ ಒಡಂಬಡಿಕೆಯು ಜಾರಿಗೆ ಬಂತು ಮತ್ತು ಪ್ರಸ್ತುತ ಈ ಒಡಂಬಡಿಕೆಯಲ್ಲಿ 189 ರಾಷ್ಟ್ರಗಳು ಪಾಲ್ಗೊಳ್ಳುತ್ತಿದ್ದು, ಅವುಗಳ ಪೈಕಿ ಐದು ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರ ರಾಷ್ಟ್ರಗಳೆಂದು ಗುರುತಿಸಲ್ಪಟ್ಟಿವೆ. ಅವುಗಳೆಂದರೆ: ಅಮೆರಿಕಾ ಸಂಯುಕ್ತ ಸಂಸ್ಥಾನಗಳು, ರಷ್ಯಾ, ಯುನೈಟೆಡ್ ಕಿಂಗ್‌ಡಂ, ಫ್ರಾನ್ಸ್, ಮತ್ತು ಚೀನಾ (ಇವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯ ರಾಷ್ಟ್ರಗಳು ಕೂಡಾ ಆಗಿವೆ).
ಸದರಿ ಒಡಂಬಡಿಕೆಯಲ್ಲಿ ಪಾಲ್ಗೊಳ್ಳದ ನಾಲ್ಕು ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ ಎಂದು ತಿಳಿದುಬಂದಿದೆ ಅಥವಾ ನಂಬಲಾಗಿದೆ. ಭಾರತ, ಪಾಕಿಸ್ತಾನ ಮತ್ತು ಉತ್ತರ ಕೊರಿಯಾ ದೇಶಗಳು ಬಹಿರಂಗವಾಗಿ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗಳನ್ನು ನಡೆಸಿದ್ದರ ಜೊತೆಗೆ, ತಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದಾಗಿ ಘೋಷಿಸಿಕೊಂಡಿದ್ದರೆ, ಇಸ್ರೇಲ್ ದೇಶವು ತನ್ನ ಸ್ವಂತದ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಸೂಚಿಗೆ ಸಂಬಂಧಿಸಿದಂತೆ ಒಂದು ಅಪಾರದರ್ಶಕತೆಯ ಕಾರ್ಯನೀತಿಯನ್ನು ಹೊಂದಿದೆ. ಉತ್ತರ ಕೊರಿಯಾ ದೇಶವು ಒಡಂಬಡಿಕೆಗೆ ಸಮ್ಮತಿಸಿತು, ಅದನ್ನು ಉಲ್ಲಂಘಿಸಿತು, ಮತ್ತು 2003ರಲ್ಲಿ ಒಡಂಬಡಿಕೆಯಿಂದ ಹಿಂದೆ ಸರಿಯಿತು.
ಈ ಒಡಂಬಡಿಕೆಯು ಐರ್ಲೆಂಡ್ ಹಾಗೂ ಫಿನ್ಲೆಂಡ್ ದೇಶಗಳಿಂದ ಪ್ರಸ್ತಾವಿಸಲ್ಪಟ್ಟಿತು ಮತ್ತು ಅದಕ್ಕೆ ಮೊದಲಿಗೆ ಸಹಿಹಾಕಿದ ದೇಶಗಳೂ ಅವೇ ಆಗಿದ್ದವು.
NPTಯು ಒಂದು ಪೀಠಿಕಾಭಾಗ ಹಾಗೂ ಹನ್ನೊಂದು ಕಲಮುಗಳನ್ನು ಒಳಗೊಂಡಿದೆ. NPTಯಲ್ಲಿನ ಯಾವ ಭಾಗದಲ್ಲಿಯೂ "ಆಧಾರಸ್ತಂಭಗಳು" ಎಂಬ ಪರಿಕಲ್ಪನೆಯು ಕಾಣಿಸುವುದಿಲ್ಲವಾದರೂ, ಒಡಂಬಡಿಕೆಯನ್ನು ಕೆಲವೊಮ್ಮೆ ಒಂದು ಮೂರು ಆಧಾರಸ್ತಂಭ ದ ವ್ಯವಸ್ಥೆ ಎಂದು ವ್ಯಾಖ್ಯಾನಿಸಲಾಗುತ್ತದೆ ಮತ್ತು ಅವುಗಳ ನಡುವೆ ಒಂದು ಸೂಚ್ಯವಾದ ಅಥವಾ ಅಂತರ್ಗತವಾದ ಸಮತೋಲನವಿದೆ. ಆ ಮೂರು ಆಧಾರಸ್ತಂಭಗಳೆಂದರೆ:
ಪರಮಾಣು ಶಸ್ತ್ರಾಸ್ತ್ರಗಳನ್ನು ಪ್ರಸರಣ-ಮಾಡದಿರುವ ಒಡಂಬಡಿಕೆಗೆ ಸಂಬಂಧಿಸಿದ, ಸಹಭಾಗಿಗಳ ಅವಲೋಕನದ ಸಮಾವೇಶಗಳೆಂದು ಕರೆಯಲ್ಪಡುವ ಸಭೆಗಳಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಒಡಂಬಡಿಕೆಯು ಅವಲೋಕಿಸಲ್ಪಡುತ್ತದೆ. ಇದರ ಜೊತೆಗೆ, ಅವಲೋಕನದ ಸಮಾವೇಶಕ್ಕಾಗಿರುವ ಪೂರ್ವಸಿದ್ಧತಾ ಸಮಿತಿಯ ಅಧಿವೇಶನಗಳು ಇದರ ನಡುವಣ ವರ್ಷಗಳಲ್ಲಿ ನಡೆಯುತ್ತವೆ. ಸಮಾನಕಾಲಿಕವಾಗಿ, ಪೂರ್ವಸಿದ್ಧತಾ ಸಮಿತಿಗಳಿಗೆ ಮೆಚ್ಚುಗೆ ಸೂಚಿಸುವ ವರದಿಗಳು ಹಾಗೂ ಶಿಫಾರಸುಗಳನ್ನು ಒದಗಿಸಲು ಸ್ವತಂತ್ರ ಸಂಸ್ಥೆಗಳು, ಪರಿಣಿತರ ಗುಂಪುಗಳು, ಚಿಂತಕರ ಚಾವಡಿಗಳು ಹಾಗೂ NGOಗಳಿಂದ ಸಂಘಟಿಸಲ್ಪಡುವ ಅನೇಕ ಘಟನೆಗಳು ಅಥವಾ ಕಾರ್ಯಕ್ರಮಗಳು ವಿಶ್ವಾದ್ಯಂತ ನಡೆಯುತ್ತವೆ.[೨]
25 ವರ್ಷಗಳ ಒಂದು ಸೀಮಿತ ಅವಧಿಯೊಂದಿಗೆ ಒಡಂಬಡಿಕೆಯನ್ನು ಮೂಲತಃ ಗ್ರಹಿಸಲಾಗಿತ್ತಾದರೂ, 1995ರ ಮೇ 11ರಂದು ನ್ಯೂಯಾರ್ಕ್ ನಗರದಲ್ಲಿ ನಡೆದ ಅವಲೋಕನದ ಸಮಾವೇಶದ ಅವಧಿಯಲ್ಲಿ, ಸಹಿಹಾಕುವ ಸಹಭಾಗಿಗಳು ಬಹುಮತಾಭಿಪ್ರಾಯದ ಮೂಲಕ ಅನಿರ್ದಿಷ್ಟಾವಧಿಯವರೆಗೆ ಹಾಗೂ ಯಾವುದೇ ಷರತ್ತುಗಳಿಲ್ಲದೆಯೇ ಒಡಂಬಡಿಕೆಯನ್ನು ವಿಸ್ತರಿಸಲು ನಿರ್ಧರಿಸಿದರು.
ಒಡಂಬಡಿಕೆಯ "ಆಧಾರಸ್ತಂಭಗಳು"
[ಬದಲಾಯಿಸಿ]NPTಯು ಮೂರು ಮುಖ್ಯ "ಆಧಾರಸ್ತಂಭಗಳನ್ನು" ಹೊಂದಿದೆ ಎಂಬಂತೆ ಸಾಮಾನ್ಯವಾಗಿ ಅದನ್ನು ವಿವರಿಸಲಾಗುತ್ತದೆ. ಅವುಗಳೆಂದರೆ: ಪ್ರಸರಣ-ಮಾಡದಿರುವಿಕೆ, ನಿರಸ್ತ್ರೀಕರಣ, ಮತ್ತು ಶಾಂತಿಯುತ ಬಳಕೆ.[೩] NPTಯು ಅದರ ಹೆಸರೇ ಸೂಚಿಸುವಂತೆ ಪ್ರಧಾನವಾಗಿ ಪ್ರಸರಣ ಮಾಡದಿರುವಿಕೆಯನ್ನು ಕುರಿತದ್ದಾಗಿದೆ ಎಂದು ನಂಬುವ, ಮತ್ತು ಮೂರು ಅಂಶಗಳು ಸಹ ಸಮಾನವಾದ ಪ್ರಾಮುಖ್ಯತೆಯನ್ನು ಹೊಂದಿವೆ ಎಂದು "ಮೂರು ಆಧಾರಸ್ತಂಭಗಳ" ಭಾಷೆಯು ತಪ್ಪುದಾರಿಗೆಳೆಯುವಂತೆ ಸೂಚಿಸುತ್ತದೆ ಎಂದು ಚಡಪಡಿಸುವ ಅಥವಾ ಆತಂಕಪಡುವ ಕೆಲವರಿಂದ "ಆಧಾರಸ್ತಂಭಗಳ" ಈ ಪರಿಕಲ್ಪನೆಯು ಪ್ರಶ್ನೆಗೊಳಗಾಗಿದೆ.[೪]
ಮೊದಲನೇ ಆಧಾರಸ್ತಂಭ: ಪ್ರಸರಣ-ಮಾಡದಿರುವಿಕೆ
[ಬದಲಾಯಿಸಿ]NPTಯು ಐದು ರಾಷ್ಟ್ರಗಳನ್ನು ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ರಾಷ್ಟ್ರಗಳೆಂದು (NWS) ಗುರುತಿಸಿದೆ. ಅವುಗಳೆಂದರೆ: ಚೀನಾ (1992ರಲ್ಲಿ ಸಹಿಹಾಕಿತು), ಫ್ರಾನ್ಸ್ (1992), ಸೋವಿಯೆಟ್ ಒಕ್ಕೂಟ (1968; ಕಟ್ಟುಪಾಡುಗಳು ಹಾಗೂ ಹಕ್ಕುಗಳನ್ನು ಈಗ ರಷ್ಯಾದ ಒಕ್ಕೂಟವು ವಹಿಸಿಕೊಂಡಿದೆ), ಯುನೈಟೆಡ್ ಕಿಂಗ್‌ಡಂ (1968), ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳು (1968) (1970ರಲ್ಲಿ ಜಾರಿಗೆ ಬಂದ ಒಡಂಬಡಿಕೆಯ ಮೂಲ ಸ್ಥಿರೀಕರಣಕಾರರ ಪೈಕಿ U.S., UK, ಮತ್ತು ಸೋವಿಯೆಟ್ ಒಕ್ಕೂಟಗಳು ಮಾತ್ರವೇ ಇಂಥ ಶಸ್ತ್ರಾಸ್ತ್ರಗಳನ್ನು ಬಹಿರಂಗವಾಗಿ ಹೊಂದಿದ್ದ ರಾಷ್ಟ್ರಗಳಾಗಿದ್ದವು). ಈ ಐದು ರಾಷ್ಟ್ರಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯ ರಾಷ್ಟ್ರಗಳೂ ಆಗಿವೆ. ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಈ ಐದು ರಾಷ್ಟ್ರಗಳು (NWS), "ಪರಮಾಣು ಶಸ್ತ್ರಾಸ್ತ್ರಗಳನ್ನಾಗಲೀ ಅಥವಾ ಇತರ ಪರಮಾಣು ಸ್ಫೋಟಕ ಉಪಕರಣಗಳನ್ನಾಗಲೀ" ವರ್ಗಾಯಿಸದಿರಲು ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರದ ರಾಷ್ಟ್ರವೊಂದನ್ನು (NNWS) ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವಂತೆ "ಯಾವುದೇ ರೀತಿಯಲ್ಲಿ ನೆರವಾಗುವುದು, ಪ್ರೋತ್ಸಾಹಿಸುವುದು ಅಥವಾ ಪ್ರಚೋದಿಸುವುದನ್ನು ಮಾಡದಂತೆ" ಇರುವುದಕ್ಕೆ ಸಮ್ಮತಿಸಿವೆ (ಕಲಮು I). ಪರಮಾಣು ಶಸ್ತ್ರಾಸ್ತ್ರಗಳನ್ನು "ಸ್ವೀಕರಿಸದಿರಲು", "ತಯಾರಿಸದಿರಲು" ಅಥವಾ "ವಶಪಡಿಸಿಕೊಳ್ಳದಿರಲು" ಅಥವಾ "ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಯಾವುದೇ ಸಹಾಯವನ್ನು ಬಯಸದಿರಲು ಅಥವಾ ಸ್ವೀಕರಿಸದಿರಲು NPTಗೆ ಸಂಬಂಧಿಸಿದ NNWS ಸಹಭಾಗಿ ರಾಷ್ಟ್ರಗಳು ಸಮ್ಮತಿಸಿವೆ (ಕಲಮು II). ತಾವು ಪರಮಾಣು ಶಕ್ತಿಯನ್ನು ಶಾಂತಿಯುತ ಬಳಕೆಗಳಿಂದ ಪರಮಾಣು ಶಸ್ತ್ರಾಸ್ತ್ರಗಳಿಗಾಗಲೀ ಅಥವಾ ಇತರ ಪರಮಾಣು ಸ್ಫೋಟಕ ಉಪಕರಣಗಳಿಗಾಗಲೀ ದಿಕ್ಕುಬದಲಿಸುತ್ತಿಲ್ಲ ಎಂಬುದನ್ನು ಪರಿಶೀಲಿಸಲು ಇರುವ ಇಂಟರ್‌ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ ಯಿಂದ (IAEA) ನೀಡಲ್ಪಟ್ಟಿರುವ ರಕ್ಷಣೋಪಾಯಗಳನ್ನು ಸ್ವೀಕರಿಸಲೂ ಸಹ NNWS ಸಹಭಾಗಿಗಳು ಒಪ್ಪಿವೆ (ಕಲಮು III).
ಒಂದು ಪರಮಾಣು ದಾಳಿಗೆ ಪ್ರತಿಯಾಗಿ, ಅಥವಾ ಪರಮಾಣು ಶಸ್ತ್ರಾಸ್ತ್ರಗಳ ರಾಷ್ಟ್ರವೊಂದರ ಜೊತೆಗಿನ ಒಕ್ಕೂಟದಲ್ಲಿನ ಒಂದು ಸಾಂಪ್ರದಾಯಿಕ ದಾಳಿಗೆ ಪ್ರತಿಯಾಗಿ ಮಾಡುವ ದಾಳಿಯನ್ನು ಹೊರತುಪಡಿಸಿ, ಒಂದು NWS-ಅಲ್ಲದ ಸಹಭಾಗಿಯ ವಿರುದ್ಧ ತಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಿಲ್ಲ ಎಂದು ಐದು NWS ಸಹಭಾಗಿಗಳು ವಾಗ್ದಾನಗಳನ್ನು ಮಾಡಿವೆ. ಆದಾಗ್ಯೂ, ಈ ವಾಗ್ದಾನಗಳು ಒಡಂಬಡಿಕೆಯೊಳಗೆ ಔಪಚಾರಿಕವಾಗಿ ಸಂಯೋಜಿಸಲ್ಪಟ್ಟಿಲ್ಲ, ಮತ್ತು ನಿಖರವಾದ ವಿವರಗಳು ಕಾಲದಿಂದ ಕಾಲಕ್ಕೆ ಬದಲಾಗಿವೆ. ಒಂದು NWS-ಅಲ್ಲದ ರಾಷ್ಟ್ರವಾದ ಉತ್ತರ ಕೊರಿಯಾವನ್ನು ಗುರಿಯಾಗಿಟ್ಟುಕೊಂಡು U.S. ಕೂಡಾ 1959ರಿಂದ ಪ್ರಾರಂಭಿಸಿ 1991ರವರೆಗೂ ಸಿಡಿತಲೆಗಳನ್ನು (ಕ್ಷಿಪಣಿಗಳನ್ನು) ಹೊಂದಿತ್ತು. ಯುನೈಟೆಡ್ ಕಿಂಗ್‌ಡಂನ ಹಿಂದಿನ ಸಂಸ್ಥಾನದ ರಕ್ಷಣಾ ಕಾರ್ಯದರ್ಶಿಯಾದ ಜೆಫ್ ಹೂನ್ ಎಂಬಾತ ಕೂಡಾ, "ಪುಂಡು ರಾಷ್ಟ್ರಗಳು"[೫] ಮಾಡುವ ಒಂದು ಅಸಾಂಪ್ರದಾಯಿಕ ದಾಳಿಗೆ ಉತ್ತರವಾಗಿ ದೇಶದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದರ ಸಾಧ್ಯತೆಯ ಕುರಿತಾಗಿ ಮುಚ್ಚುಮರೆಯಿಲ್ಲದೆ ಮೊರೆಯಿಟ್ಟಿದ್ದ. ಫ್ರಾನ್ಸ್‌ನ ಅಧ್ಯಕ್ಷನಾದ ಜಾಕ್ವೆಸ್ ಚಿರಾಕ್ 2006ರ ಜನವರಿಯಲ್ಲಿ ಹೇಳಿಕೆಯೊಂದನ್ನು ನೀಡಿ, ಫ್ರಾನ್ಸ್ ಮೇಲಿನ ಒಂದು ರಾಷ್ಟ್ರ-ಪ್ರಾಯೋಜಿತ ಭಯೋತ್ಪಾದನೆಯ ಘಟನೆಯು "ಪುಂಡು-ರಾಷ್ಟ್ರಗಳ" ಅಧಿಕಾರ ಕೇಂದ್ರಗಳನ್ನು ಅಥವಾ ಶಕ್ತಿಕೇಂದ್ರಗಳನ್ನು ನಾಶಪಡಿಸುವುದರ ಕಡೆಗೆ ಗುರಿಯಿಟ್ಟಿರುವ ಒಂದು ಸಣ್ಣ-ಪ್ರಮಾಣದ ಪರಮಾಣು ಪ್ರತೀಕಾರವನ್ನು ಪ್ರಾರಂಭಿಸಬಹುದು ಎಂದು ಸೂಚನೆಯನ್ನು ನೀಡಿದ.[೬][೭]
ಎರಡನೇ ಆಧಾರಸ್ತಂಭ: ನಿರಸ್ತ್ರೀಕರಣ
[ಬದಲಾಯಿಸಿ]ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಗೆ ಒಂದು ತಡೆಯನ್ನು ಒಡ್ಡಲು ಅಗತ್ಯವಾಗಿರುವ ಸನ್ನಿವೇಶಗಳನ್ನು ಒಂದಲ್ಲಾ ಒಂದು ದಿನ ಸೃಷ್ಟಿಸುವುದಕ್ಕಾಗಿ ಅಂತರರಾಷ್ಟ್ರೀಯ ಬಿಕ್ಕಟ್ಟನ್ನು ಸಡಿಲಗೊಳಿಸುವಲ್ಲಿನ ಮತ್ತು ಅಂತರರಾಷ್ಟ್ರೀಯ ವಿಶ್ವಾಸವನ್ನು ಬಲಿಷ್ಠವಾಗಿಸುವಲ್ಲಿನ ಒಡಂಬಡಿಕೆಯ ಸಹಿದಾರರ ಅಭಿಲಾಷೆಯನ್ನು ದೃಢೀಕರಿಸುವ ಪರಿಭಾಷೆಯನ್ನು NPTಯ ಪೀಠಿಕಾಭಾಗವು ಒಳಗೊಂಡಿದೆ, ಮತ್ತು ನಿರ್ದಿಷ್ಟವಾಗಿ ರಾಷ್ಟ್ರೀಯ ಶಸ್ತ್ರಾಸ್ತ್ರ ಸಂಗ್ರಹಗಳಿಂದ ಅಥವಾ ಸಂಗ್ರಹಾಗಾರಗಳಿಂದ ಪರಮಾಣು ಶಸ್ತ್ರಾಸ್ತ್ರಗಳನ್ನು ಮತ್ತು ಅವುಗಳ ವಿತರಣಾ ವಾಹನಗಳನ್ನು ನಿಗ್ರಹಿಸುವ ಸಾರ್ವತ್ರಿಕ ಹಾಗೂ ಸಂಪೂರ್ಣ ನಿರಸ್ತ್ರೀಕರಣದ ಮೇಲಿನ ಒಡಂಬಡಿಕೆಯನ್ನೂ ಇದು ಒಳಗೊಂಡಿದೆ.
NPTಯ ಎಲ್ಲಾ ಸಹಿದಾರರೂ ಪರಮಾಣು ಮತ್ತು ಸಂಪೂರ್ಣ ನಿರಸ್ತ್ರೀಕರಣದ ಸಾರ್ವತ್ರಿಕ ದಿಕ್ಕಿನಲ್ಲಿ ಸಾಗುವಂತೆ ಮಾಡುವಲ್ಲಿ, NPTಯ ಕಲಮು VIರ ಶಬ್ದ-ಸ್ವರೂಪವು ಚರ್ಚಾಸ್ಪದವಾದ ರೀತಿಯಲ್ಲಿ ಅವರ ಮೇಲೆ ಕೇವಲ ಒಂದು ಅಸ್ಪಷ್ಟವಾದ ಕಟ್ಟುಪಾಡನ್ನು ವಿಧಿಸುತ್ತದೆ. ಹೀಗೆ ಕಟ್ಟುಪಾಡು ವಿಧಿಸುವಾಗ, "ಆದಷ್ಟು ಬೇಗ ಪರಮಾಣು ಶಸ್ತ್ರಾಸ್ತ್ರಗಳ ಓಟದ ಪೂರ್ಣ ನಿಲುಗಡೆಗೆ ಸಂಬಂಧಿಸಿದ ಪರಿಣಾಮಕಾರೀ ಕ್ರಮಗಳ ಮೇಲೆ, ಮತ್ತು ಸಾರ್ವತ್ರಿಕವಾದ ಹಾಗೂ ಸಂಪೂರ್ಣವಾದ ನಿರಸ್ತ್ರೀಕರಣ ಒಡಂಬಡಿಕೆಯೊಂದರ ಮೇಲೆ ಒಂದು ಉತ್ತಮವಾದ ಭರವಸೆಯಲ್ಲಿ ಮಾತುಕತೆಗಳನ್ನು ಮುಂದುವರಿಸಲು ಒಡಂಬಡಿಕೆಗೆ ಸಂಬಂಧಿಸಿದ ಸಹಭಾಗಿಗಳು ಪೈಕಿ ಪ್ರತಿಯೊಬ್ಬರೂ ವಾಗ್ದಾನ ಮಾಡಿದ್ದಾರೆ" ಎಂದು ಸದರಿ ಕಲಮು ಹೇಳಿದೆ.[೮] ಎಲ್ಲಾ ಸಹಿದಾರರೂ ಒಂದು ನಿರಸ್ತ್ರೀಕರಣ ಒಡಂಬಡಿಕೆಯನ್ನು ವಾಸ್ತವವಾಗಿ ತೀರ್ಮಾನಿಸಬೇಕು ಎಂದು ಈ ಅರ್ಥವಿವರಣೆಯ ಅಡಿಯಲ್ಲಿ VIನೇ ಕಲಮು ಕಡ್ಡಾಯವಾಗಿ ಬಯಸುವುದಿಲ್ಲ. ಅದರ ಬದಲಿಗೆ, ಅವರು "ಒಂದು ಒಳ್ಳೆಯ ವಿಶ್ವಾಸದಲ್ಲಿ ಸಂಧಾನವನ್ನು, ಮಾತುಕತೆಯನ್ನು ನಡೆಸಬೇಕು" ಎಂದಷ್ಟೇ ಅದು ಬಯಸುತ್ತದೆ.[೯]
ಮತ್ತೊಂದೆಡೆ, ಕೆಲವೊಂದು ಸರ್ಕಾರಗಳು, ಅದರಲ್ಲೂ ವಿಶೇಷವಾಗಿ ಅಲಿಪ್ತ ಚಳವಳಿಗೆ ಸೇರಿರುವ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿಲ್ಲದ ರಾಷ್ಟ್ರಗಳು, VIನೇ ಕಲಮಿನ ಪರಿಭಾಷೆಯು ಅಸ್ಪಷ್ಟವಾಗಿರುವುದು ಬಿಟ್ಟರೆ ಮತ್ತೇನೂ ಅಲ್ಲ ಎಂದು ವ್ಯಾಖ್ಯಾನಿಸಿವೆ. NPTಯಿಂದ ಗುರುತಿಸಲ್ಪಟ್ಟಿರುವ, ಪರಮಾಣು-ಶಸ್ತ್ರಾಸ್ತ್ರವನ್ನು ಹೊಂದಿರುವ ರಾಷ್ಟ್ರಗಳು ಸ್ವತಃ ತಮ್ಮನ್ನು ಪರಮಾಣು ಶಸ್ತ್ರಾಸ್ತ್ರಗಳಿಂದ ನಿರಸ್ತ್ರೀಕರಣಗೊಳಿಸಿಕೊಳ್ಳುವುದರ ಕುರಿತಾದ ಒಂದು ಔಪಚಾರಿಕ ಹಾಗೂ ನಿರ್ದಿಷ್ಟ ಕಟ್ಟುಪಾಡನ್ನು VIನೇ ಕಲಮು ಒಳಗೊಂಡಿದೆ ಎಂಬುದು ಅವುಗಳ ಅಭಿಪ್ರಾಯವಾಗಿದೆ, ಮತ್ತು ಈ ರಾಷ್ಟ್ರಗಳು ತಮ್ಮ ಕಟ್ಟುಪಾಡನ್ನು ಈಡೇರಿಸುವಲ್ಲಿ ವಿಫಲಗೊಂಡಿವೆ ಎಂಬುದು ಅವುಗಳ ವಾದವಾಗಿದೆ. ನಿರಸ್ತ್ರೀಕರಣದ ಮೇಲಿನ ಸಮಾವೇಶಕ್ಕೆ ಸಂಬಂಧಿಸಿದ ಕೆಲವೊಂದು ಸರ್ಕಾರಿ ನಿಯೋಗಗಳು, ಒಂದು ಸಂಪೂರ್ಣ ಹಾಗೂ ಸಾರ್ವತ್ರಿಕ ನಿರಸ್ತ್ರೀಕರಣಕ್ಕಾಗಿರುವ ಪ್ರಸ್ತಾವಗಳನ್ನು ಮುಂದಿಟ್ಟಿವೆಯಾದರೂ, ಈ ಪ್ರಸ್ತಾವಗಳಿಂದ ಯಾವುದೇ ನಿರಸ್ತ್ರೀಕರಣ ಒಡಂಬಡಿಕೆಯೂ ಹೊರಹೊಮ್ಮಿಲ್ಲ.[ಸೂಕ್ತ ಉಲ್ಲೇಖನ ಬೇಕು] NPTಯಿಂದ ಗುರುತಿಸಲ್ಪಟ್ಟಿರುವ, ಪರಮಾಣು-ಶಸ್ತ್ರಾಸ್ತ್ರವನ್ನು ಹೊಂದಿರುವ ರಾಷ್ಟ್ರಗಳ ಟೀಕಾಕಾರರು ಕೆಲವೊಮ್ಮೆ ವಾದಿಸುವ ಪ್ರಕಾರ, ಪರಮಾಣು ಶಸ್ತ್ರಾಸ್ತ್ರಗಳಿಂದ ತಮ್ಮನ್ನು ನಿರಸ್ತ್ರೀಕರಣಗೊಳಿಸಿಕೊಳ್ಳುವಲ್ಲಿನ, ಅದರಲ್ಲೂ ವಿಶೇಷವಾಗಿ 0}ಶೀತಲ ಸಮರದ-ಯುಗದ ನಂತರದಲ್ಲಿನ ಅವಧಿಯಲ್ಲಿನ, NPTಯಿಂದ ಗುರುತಿಸಲ್ಪಟ್ಟಿರುವ ಪರಮಾಣು-ಶಸ್ತ್ರಾಸ್ತ್ರ ಹೊಂದಿರುವ ರಾಷ್ಟ್ರಗಳ ವೈಫಲ್ಯವಾಗಿ ತಮಗೆ ಕಂಡುಬಂದಿರುವುದು, NPTಯ ಕೆಲವೊಂದು ಪರಮಾಣು-ಶಸ್ತ್ರಾಸ್ತ್ರ ಹೊಂದಿಲ್ಲದ NPT ಸಹಿದಾರರಿಗೆ ಕೋಪತರಿಸಿದೆ. ಪರಮಾಣು-ಶಸ್ತ್ರಾಸ್ತ್ರ ಹೊಂದಿರದ ಸಹಿದಾರರು NPTಯನ್ನು ತೊರೆಯುವಲ್ಲಿ ಹಾಗೂ ತಮ್ಮದೇ ಸ್ವಂತದ ಪರಮಾಣು ಶಸ್ತ್ರಾಸ್ತ್ರ ಸಂಗ್ರಹಗಳನ್ನು ಅಭಿವೃದ್ಧಿಪಡಿಸಿಕೊಳ್ಳುವಲ್ಲಿ ಇಂಥ ವೈಫಲ್ಯವು ಸಮರ್ಥನೆಯನ್ನು ಒದಗಿಸುತ್ತದೆ ಎಂದು ತಮ್ಮ ವಾದಕ್ಕೆ ಈ ಟೀಕಾಕಾರರು ಮತ್ತಷ್ಟು ಅಂಶವನ್ನು ಸೇರಿಸುತ್ತಾರೆ.
ಪ್ರಸರಣ ಮತ್ತು ನಿರಸ್ತ್ರೀಕರಣಗಳ ನಡುವಿನ ಕೊಂಡಿವ್ಯವಸ್ಥೆಯು ಬೇರೆ ರೀತಿಯಲ್ಲೂ ಕೆಲಸ ಮಾಡಬಹುದು ಎಂದು ಕೆಲವೊಂದು ವೀಕ್ಷಕರು ಸೂಚಿಸಿದ್ದಾರೆ. ಅಂದರೆ, ಉದಾಹರಣೆಗೆ ಇರಾನ್ ಹಾಗೂ ಉತ್ತರ ಕೊರಿಯಾದಲ್ಲಿ ಕಂಡುಬಂದಂತೆ, ಪ್ರಸರಣದ ಬೆದರಿಕೆಗಳನ್ನು ಪರಿಹರಿಸುವಲ್ಲಿನ ವೈಫಲ್ಯವು ನಿರಸ್ತ್ರೀಕರಣಕ್ಕೆ ಸಂಬಂಧಿಸಿದ ನಿರೀಕ್ಷೆಗಳನ್ನು ದುರ್ಬಲಗೊಳಿಸುತ್ತದೆ ಎಂಬುದು ಅವರ ಅಭಿಪ್ರಾಯ.[ಸೂಕ್ತ ಉಲ್ಲೇಖನ ಬೇಕು] ಸದರಿ ವೀಕ್ಷಕರು ತಮ್ಮ ವಾದವನ್ನು ಮುಂದುವರಿಸುತ್ತಾ, ಪ್ರಸ್ತುತ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಯಾವ ರಾಷ್ಟ್ರವೂ, ಬೇರೊಂದು ದೇಶವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದಿಲ್ಲ ಎಂಬ ಅತೀವವಾದ ವಿಶ್ವಾಸವಿಲ್ಲದೆಯೇ ತನ್ನ ಕೊನೆಯ ಪರಮಾಣು ಶಸ್ತ್ರಾಸ್ತ್ರಗಳನ್ನು ವರ್ಜಿಸುವುದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಾವಿರಾರು ಸಂಖ್ಯೆಯ ಶಸ್ತ್ರಾಸ್ತ್ರಗಳು ಹಾಗೂ ವಿತರಣಾ ವ್ಯವಸ್ಥೆಗಳ[೧೦] ವರ್ಜಿಸುವಿಕೆಗೆ ಕಾರಣವಾದ, ಬಲಿಷ್ಠ ರಾಷ್ಟ್ರಗಳಿಂದ ಕೈಗೊಳ್ಳಲ್ಪಟ್ಟ ನಿರಸ್ತ್ರೀಕರಣದ ಅತೀವವಾದ ಪ್ರಗತಿಯು, ಒಂದು ಸಣ್ಣ ಶಸ್ತ್ರಾಸ್ತ್ರ ಸಂಗ್ರಹದ ಗ್ರಹಿಸಲ್ಪಟ್ಟ ಕಾರ್ಯತಂತ್ರದ ಮೌಲ್ಯವನ್ನು ಹೆಚ್ಚಿಸುವ ಮೂಲಕ ಪರಮಾಣು ಶಸ್ತ್ರಾಸ್ತ್ರಗಳ ಸ್ವಾಮ್ಯವನ್ನು ಅಂತಿಮವಾಗಿ ಹೆಚ್ಚು ಆಕರ್ಷಕವನ್ನಾಗಿಸಬಹುದು ಎಂದೂ ಸಹ ಕೆಲವೊಂದು ವೀಕ್ಷಕರು ಸೂಚಿಸಿದ್ದಾರೆ. ಓರ್ವ U.S. ಅಧಿಕಾರಿ ಹಾಗೂ NPT ಪರಿಣಿತನು 2007ರಲ್ಲಿ ಎಚ್ಚರಿಸಿದ್ದು ಹೀಗಿತ್ತು: " ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯು ಕುಗ್ಗುತ್ತಾ ಹೋದಂತೆ, ಸೇನಾಬಲದ ಒಂದು ಸಾಧನವಾಗಿ ಪರಮಾಣು ಶಸ್ತ್ರಾಸ್ತ್ರವೊಂದರ 'ಕನಿಷ್ಟಮಟ್ಟದ ಉಪಯುಕ್ತತೆಯು' ಹೆಚ್ಚುತ್ತದೆ ಎಂಬುದನ್ನು ತರ್ಕವು ಸೂಚಿಸುತ್ತದೆ. ಕರಾರುವಾಕ್ಕಾಗಿ, ಸೃಷ್ಟಿಸುವಲ್ಲಿನ ನಿರಸ್ತ್ರೀಕರಣದ ಭರವಸೆಯಾಗಿರುವ ಪರಾಕಾಷ್ಠೆಯ ಸ್ಥಿತಿಯಲ್ಲಿ, ಕೇವಲ ಒಂದು ಅಥವಾ ಎರಡು ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯತಂತ್ರದ ಉಪಯುಕ್ತತೆಯೂ ಸಹ ಬೃಹತ್ತಾಗಿರುತ್ತದೆ."[೧೧]
ಮೂರನೇ ಆಧಾರಸ್ತಂಭ: ಪರಮಾಣು ಶಕ್ತಿಯ ಶಾಂತಿಯುತ ಬಳಕೆ
[ಬದಲಾಯಿಸಿ]ಈ ವಿಭಾಗದಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (March 2008) |
NPT ಸಹಿದಾರ ದೇಶಗಳಲ್ಲಿ ನಾಗರಿಕ ಪರಮಾಣು ಶಕ್ತಿ ಕಾರ್ಯಸೂಚಿಗಳ ಅಭಿವೃದ್ಧಿಗಾಗಿ ಅವುಗಳಿಗೆ ಪರಮಾಣು ತಂತ್ರಜ್ಞಾನ ಹಾಗೂ ಸಾಮಗ್ರಿಗಳನ್ನು ವರ್ಗಾಯಿಸುವುದಕ್ಕಾಗಿ ಮತ್ತು ಪರಸ್ಪರ ಸಮ್ಮತಿಯಿಂದ ನಿರ್ಧರಿಸುವುದಕ್ಕಾಗಿ ಮೂರನೇ ಆಧಾರಸ್ತಂಭವು ಅವಕಾಶ ನೀಡುತ್ತದೆ. ತಮ್ಮ ಪರಮಾಣು ಕಾರ್ಯಸೂಚಿಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಬಳಕೆಯಾಗುತ್ತಿಲ್ಲ ಎಂದು ಆ ದೇಶಗಳು ಎಲ್ಲಿಯವರೆಗೂ ನಿರೂಪಿಸಿ ವಿವರಿಸುತ್ತಿರುತ್ತವೆಯೋ ಅಲ್ಲಿಯವರೆಗೂ ಈ ಅವಕಾಶವಿರುತ್ತದೆ.
ಪರಮಾಣು ಶಕ್ತಿ ಕಾರ್ಯಸೂಚಿಗಳೊಂದಿಗಿನ ರಾಷ್ಟ್ರಗಳ ಪೈಕಿಯ ಕೆಲವೇ ಕೆಲವು ರಾಷ್ಟ್ರಗಳು ಪರಮಾಣು ಶಕ್ತಿಯ ಬಳಕೆಯನ್ನು ಪರಿತ್ಯಜಿಸಲು ಒಪ್ಪುತ್ತಿರುವುದರಿಂದ, NPTಯ ಮೂರನೇ ಆಧಾರಸ್ತಂಭವು IVನೇ ಕಲಮಿನಡಿಯಲ್ಲಿ, ಆದರೆ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ಕಷ್ಟಕರವನ್ನಾಗಿಸುವ ಉದ್ದೇಶದ ಷರತ್ತುಗಳ ಅಡಿಯಲ್ಲಿ ಅದನ್ನೇ ಮಾಡುವುದರ ಸಾಧ್ಯತೆಯನ್ನು ಇತರ ರಾಷ್ಟ್ರಗಳಿಗೂ ಒದಗಿಸುತ್ತದೆ.
ಶಾಂತಿಯುತ ಉದ್ದೇಶಗಳಿಗಾಗಿ ಪರಮಾಣು ಶಕ್ತಿಯನ್ನು ಬಳಸುವ ಪರಮಾಧಿಕಾರವನ್ನು ಹೊಂದಿರುವ ರಾಷ್ಟ್ರಗಳ ಹಸ್ತಾಂತರಗೊಳಿಸಲಾಗದ ಹಕ್ಕನ್ನು ಒಡಂಬಡಿಕೆಯು ಗುರುತಿಸುತ್ತದೆ. ಆದರೆ NPT ಸಹಭಾಗಿಗಳಿಗೆ ಸಂಬಂಧಿಸಿದಂತೆ, "Iನೇ ಮತ್ತು IIನೇ ಕಲಮುಗಳೊಂದಿಗಿನ ಅನುಸರಣೆಯಲ್ಲಿ" (ಒಡಂಬಡಿಕೆಯ "ಮೊದಲನೇ ಆಧಾರಸ್ತಂಭ"ವನ್ನು ರೂಪಿಸುವ, ಪ್ರಸರಣ ಮಾಡದಿರುವಿಕೆಯ ಕುರಿತಾದ ಮೂಲಭೂತ ಕಟ್ಟುಪಾಡುಗಳು) ಈ ಹಕ್ಕು ಚಲಾಯಿಸಲ್ಪಡದಂತೆ ಅದು ಪ್ರತಿಬಂಧಿಸುತ್ತದೆ. ವಾಣಿಜ್ಯ ರೀತಿಯಲ್ಲಿ ಜನಪ್ರಿಯವಾಗಿರುವ ಲಘು ನೀರಿನ ರಿಯಾಕ್ಟರಿನ ಪರಮಾಣು ಶಕ್ತಿ ಕೇಂದ್ರವು ಪುಷ್ಟೀಕರಿಸಿದ ಯುರೇನಿಯಂ ಇಂಧನವನ್ನು ಬಳಸುತ್ತದೆಯಾದ್ದರಿಂದ, ರಾಷ್ಟ್ರಗಳು ಒಂದೋ ಯುರೇನಿಯಂನ್ನು ಪುಷ್ಟೀಕರಿಸಬೇಕು ಇಲ್ಲವೇ ಅಂತರರಾಷ್ಟ್ರೀಯ ಮಾರುಕಟ್ಟೆಯೊಂದರಲ್ಲಿ ಯುರೇನಿಯಂನ್ನು ಖರೀದಿಸಬೇಕು ಎಂಬುದನ್ನು ಇದು ಅನುಸರಿಸಿದಂತಾಗುತ್ತದೆ. ಇಂಟರ್‌ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿಯ ಪ್ರಧಾನ ನಿರ್ದೇಶಕನಾದ ಮೊಹಮದ್ ಎಲ್‌ಬರಾಡೇ ಎಂಬಾತ, ಪುಷ್ಟೀಕರಣದ ಹರಡುವಿಕೆ ಹಾಗೂ ಪರಮಾಣು ಪ್ರಸರಣ ಮಾಡದಿರುವ ಪ್ರಚಲಿತ ಪದ್ಧತಿಯ, "ಅಕಿಲೀಸ್‌ನ ಹಿಮ್ಮಡಿ" (ಮರ್ಮಸ್ಥಾನ) ಎಂದು ಕರೆಯಲಾಗುವ ಸಾಮರ್ಥ್ಯಗಳ ಪುನರ್‌ಸಂಸ್ಕರಣೆಗಾಗಿ ಕರೆನೀಡಿದ. 2007ರ ವೇಳೆಗೆ ಇದ್ದಂತೆ, 13 ರಾಷ್ಟ್ರಗಳು ಪುಷ್ಟೀಕರಣದ ಸಾಮರ್ಥ್ಯವೊಂದನ್ನು ಹೊಂದಿವೆ.[೧೨] ದೇಶವೊಂದರ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯ ಪ್ರಯತ್ನಕ್ಕೆ ಸಂಬಂಧಿಸಿದಂತೆ ವಿದಳನೀಯ ಸಾಮಗ್ರಿಯ ಲಭ್ಯತೆಯು ಪ್ರಮುಖ ತೊಡಕಾಗಿ, ಹಾಗೂ "ಗತಿ ನಿಯಾಮಕ ಅಂಶ"ವಾಗಿ ಬಹಳ ಕಾಲದಿಂದಲೂ ಪರಿಗಣಿಸಲ್ಪಟ್ಟಿರುವುದರಿಂದ, ಯುರೇನಿಯಂ ಪುಷ್ಟೀಕರಣ ಹಾಗೂ ಪ್ಲುಟೋನಿಯಂ ಪುನರ್‌ಸಂಸ್ಕರಣದ ತಂತ್ರಜ್ಞಾನವು ಮತ್ತಷ್ಟು ಹರಡುವುದನ್ನು ತಡೆಗಟ್ಟಲು, 2004ರಲ್ಲಿ ಇದನ್ನು U.S. ಕಾರ್ಯನೀತಿಯ ಒಂದು ಪ್ರಮುಖ ಪ್ರಾಶಸ್ತ್ಯವಾಗಿ ಘೋಷಿಸಲಾಯಿತು(ಈ ತಂತ್ರಜ್ಞಾನಕ್ಕೆ ENR ಎಂದೂ ಹೆಸರಿದೆ).[೧೩] ENR ಸಾಮರ್ಥ್ಯಗಳನ್ನು ಹೊಂದಿರುವ ದೇಶಗಳು, ಬೇಡಿಕೆಯ ಮೇರೆಗೆ ಈ ಸಾಮರ್ಥ್ಯವನ್ನು ಶಸ್ತ್ರಾಸ್ತ್ರಗಳ ಬಳಕೆಗೆ ಮೀಸಲಾಗಿರುವ ವಿದಳನೀಯ ಸಾಮಗ್ರಿಯನ್ನು ಉತ್ಪಾದಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಾರಿಯಲ್ಲಿರುವ ಆಯ್ಕೆಯನ್ನು ಹೊಂದುತ್ತವೆ ಎಂಬ ಭಯವಿರುವುದರಿಂದಾಗಿ, ಅವಕ್ಕೆ ಒಂದು "ಪರಿಣಾಮಸಿದ್ಧವಾದ" ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಸೂಚಿ ಎಂಬ ಹೆಸರು ದಕ್ಕಿದೆ. ಆದ್ದರಿಂದ, ENR ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ NPT ಸದಸ್ಯರು ಹೊಂದಿರುವ ಒಂದು "ಹಕ್ಕಿನ" ಮಟ್ಟವು, ಅದರ ಕಾರ್ಯರೂಪಕ್ಕೆ ಬರುವಷ್ಟು ತೀವ್ರವಾಗಿರುವ ಪ್ರಸರಣ ಸೂಚನೆಗಳೇನೇ ಇದ್ದರೂ, ಅದು ಕಾರ್ಯನೀತಿಯ ಹಾಗೂ IVನೇ ಕಲಮಿನ ಅರ್ಥ ಮತ್ತು ಒಡಂಬಡಿಕೆಯ I, II, ಹಾಗೂ IIIನೇ ಕಲಮುಗಳೊಂದಿಗೆ ಅದು ಹೊಂದಿರುವ ಸಂಬಂಧವನ್ನು ಆವರಿಸಿರುವ ಕಾನೂನು ಚರ್ಚೆಗಳ ತೀಕ್ಷ್ಣತೆಯಲ್ಲಿದೆ.
ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರದ ರಾಷ್ಟ್ರಗಳಾಗಿ ಒಡಂಬಡಿಕೆಗೆ ಸಹಿಹಾಕಿರುವ ಮತ್ತು ಆ ಸ್ಥಾನಮಾನವನ್ನು ಕಾಯ್ದುಕೊಂಡಿರುವ ದೇಶಗಳು, ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ಮಿಸದಿರುವ ಒಂದು ಮುರಿಯದ ದಾಖಲೆಯನ್ನು ಹೊಂದಿವೆ. ಆದಾಗ್ಯೂ, ಇರಾಕ್ ದೇಶವು ತನ್ನ NPT ರಕ್ಷಣೋಪಾಯಗಳ ಕಟ್ಟುಪಾಡುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅದಕ್ಕೆ IAEA ಸಮನ್ಸ್ ಜಾರಿ ಮಾಡಿತು ಹಾಗೂ UN ಭದ್ರತಾ ಮಂಡಳಿಯು ಅದರ ಮೇಲೆ ನಿರ್ಬಂಧವನ್ನು ಹೇರಿತು; ಉತ್ತರ ಕೊರಿಯಾ ದೇಶವು ತನ್ನ NPT ರಕ್ಷಣೋಪಾಯದ ಒಪ್ಪಂದದ ಅನುಸಾರವಾಗಿ ನಡೆದುಕೊಳ್ಳಲಿಲ್ಲ ಮತ್ತು ಈ ಉಲ್ಲಂಘನೆಗಳಿಗಾಗಿ[೧೪] ಪದೇಪದೇ ಸಮನ್ಸ್ ಜಾರಿಗೆ ಒಳಗಾಯಿತು ಹಾಗೂ ನಂತರದಲ್ಲಿ ಅದು NPTಯಿಂದ ಹಿಂದೆಗೆದುಕೊಂಡಿತು ಮತ್ತು ಬಹುವಿಧದ ಪರಮಾಣು ಉಪಕರಣಗಳ ಪರೀಕ್ಷೆಯನ್ನು ನಡೆಸಿತು; ರೂಢಿಯದಲ್ಲದ ಬಹುಮತಾಭಿಪ್ರಾಯದ್ದಲ್ಲದ ತೀರ್ಮಾನವೊಂದರಲ್ಲಿ ಇರಾನ್ ದೇಶವು ತನ್ನ NPT ರಕ್ಷಣೋಪಾಯಗಳ ಕಟ್ಟುಪಾಡುಗಳ ಅನುಸಾರವಾಗಿ ಇಲ್ಲದಿರುವುದು ಅಥವಾ ಅನನುವರ್ತನೆಯನ್ನು ತೋರಿಸಿದ್ದು ಕಂಡುಬಂತು, ಏಕೆಂದರೆ, ತನ್ನ ಪುಷ್ಟೀಕರಣ ಕಾರ್ಯಸೂಚಿಯ ವರದಿಯ ದೃಷ್ಟಿಕೋನಗಳಿಗೆ ಸಂಬಂಧಿಸಿದಂತೆ ಅದು "ಸಮಯದ ಒಂದು ವಿಸ್ತರಿಸಲ್ಪಟ್ಟ ಅವಧಿಯ ಕುರಿತಾದ ಹಲವಾರು ನಿದರ್ಶನಗಳಲ್ಲಿ ವಿಫಲಗೊಂಡಿತು"[೧೫][೧೬] ಮತ್ತು ಲಿಬಿಯಾ ದೇಶವು ಪರಮಾಣು ಶಸ್ತ್ರಾಸ್ತ್ರಗಳ ಒಂದು ರಹಸ್ಯವಾದ ಕಾರ್ಯಸೂಚಿಯನ್ನು ಮುಂದುವರಿಸಿತು ಮತ್ತು 2003ರ ಡಿಸೆಂಬರ್‌ನಲ್ಲಿ ಅದನ್ನು ಪರಿತ್ಯಜಿಸಿತು. 1991ರಲ್ಲಿ, ರೊಮೇನಿಯಾ ದೇಶವು ಮುಂಚಿನ ಪ್ರಭುತ್ವದಿಂದ ಹಿಂದೆ ಬಹಿರಂಗವಾಗಿ ಘೋಷಿಸಲ್ಪಡದ ಪರಮಾಣು ಚಟುವಟಿಕೆಗಳನ್ನು ಉಲ್ಲೇಖಿಸಿತು ಹಾಗೂ IAEA ಈ ಅನನುವರ್ತನೆಯನ್ನು ಕೇವಲ ಮಾಹಿತಿಗಾಗಿ ಭದ್ರತಾ ಮಂಡಳಿಗೆ ವರದಿ ಮಾಡಿತು. ಕೆಲವೊಂದು ವಲಯಗಳಲ್ಲಿ, ಎಲ್ಲಾ ನೆರೆಹೊರೆಯ ರಾಷ್ಟ್ರಗಳು ಪ್ರಮಾಣಿಸಿ ಸಮರ್ಥಿಸಬಹುದಾದ ರೀತಿಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತವಾಗಿವೆ ಎಂಬ ಅಂಶವು, ಆ ಶಸ್ತ್ರಾಸ್ತ್ರಗಳನ್ನು ಸ್ವತಃ ತಾವೇ ನಿರ್ಮಿಸುವಲ್ಲಿ ಏಕ ರಾಷ್ಟ್ರಗಳು ಅನುಭವಿಸಬಹುದಾದ ಯಾವುದೇ ಒತ್ತಡವನ್ನು ಕಡಿಮೆ ಮಾಡುತ್ತದೆ. ಒಂದು ವೇಳೆ ನೆರೆಹೊರೆಯ ರಾಷ್ಟ್ರಗಳು ಶಾಂತಿಯುತ ಪರಮಾಣು ಶಕ್ತಿ ಕಾರ್ಯಸೂಚಿಗಳನ್ನು ಹೊಂದಿರುವುದು ತಿಳಿದುಬಂದರೂ ಸಹ, ಅದು ಅನ್ಯಥಾ ಅನುಮಾನಾಸ್ಪದವಾಗಿರಲು ಸಾಧ್ಯವಿರುತ್ತದೆ. ಈ ನಿದರ್ಶನದಲ್ಲಿ, ಒಡಂಬಡಿಕೆಯು ವಿನ್ಯಾಸಗೊಳಿಸಲ್ಪಟ್ಟಂತೆ ಕಾರ್ಯನಿರ್ವಹಿಸುತ್ತದೆ.
2004ರಲ್ಲಿ, ಇಂಟರ್‌ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿಯ (IAEA) ಆಗಿನ ಪ್ರಧಾನ ನಿರ್ದೇಶಕನಾದ ಮೊಹಮದ್ ಎಲ್‌ಬರಾಡೇ ಎಂಬಾತ, ಒಂದು ಅಂದಾಜಿನ ಪ್ರಕಾರ ಮೂವತ್ತೈದರಿಂದ ನಲವತ್ತರಷ್ಟು ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ಜ್ಞಾನವನ್ನು ಹೊಂದಿರಲು ಸಾಧ್ಯವಿದೆ ಎಂದು ಹೇಳಿದ.[೧೭]
ಪ್ರಮುಖ ಕಲಮುಗಳು
[ಬದಲಾಯಿಸಿ]Iನೇ ಕಲಮು:[೧೮] ಪರಮಾಣು-ಶಸ್ತ್ರಾಸ್ತ್ರಗಳನ್ನು ಹೊಂದಿರುವ ಪ್ರತಿ ರಾಷ್ಟ್ರವೂ (NWS), ಯಾವುದೇ ಗ್ರಾಹಕನಿಗೆ ಪರಮಾಣು ಶಸ್ತ್ರಾಸ್ತ್ರಗಳನ್ನಾಗಲೀ, ಅಥವಾ ಇತರ ಪರಮಾಣು ಸ್ಫೋಟಕ ಉಪಕರಣಗಳನ್ನಾಗಲೀ ವರ್ಗಾಯಿಸದಿರಲು, ಮತ್ತು ಇಂಥ ಶಸ್ತ್ರಾಸ್ತ್ರಗಳು ಅಥವಾ ಉಪಕರಣಗಳನ್ನು ತಯಾರಿಸುವಲ್ಲಿ ಅಥವಾ ವಶಮಾಡಿಕೊಳ್ಳುವಲ್ಲಿ, ಪರಮಾಣು ಶಸ್ತ್ರಾಸ್ತ್ರ ಹೊಂದಿರದ ಯಾವುದೇ ರಾಷ್ಟ್ರಕ್ಕೆ ಸಹಾಯಹಸ್ತ ಚಾಚದಿರಲು ವಾಗ್ದಾನ ಮಾಡುತ್ತದೆ.
IIನೇ ಕಲಮು: NWS-ಅಲ್ಲದ ಪ್ರತಿಯೊಂದು ಸಹಭಾಗಿಯೂ, ಯಾವುದೇ ಮೂಲದಿಂದ ಪರಮಾಣು ಶಸ್ತ್ರಾಸ್ತ್ರಗಳನ್ನಾಗಲೀ, ಅಥವಾ ಇತರ ಪರಮಾಣು ಸ್ಫೋಟಕ ಉಪಕರಣಗಳನ್ನಾಗಲೀ ಸ್ವೀಕರಿಸದಿರಲು; ಇಂಥ ಶಸ್ತ್ರಾಸ್ತ್ರಗಳನ್ನಾಗಲೀ ಅಥವಾ ಉಪಕರಣಗಳನ್ನಾಗಲೀ ತಯಾರಿಸದಿರಲು ಅಥವಾ ವಶಮಾಡಿಕೊಳ್ಳದಿರಲು; ಮತ್ತು ಅವುಗಳ ತಯಾರಿಕೆಯಲ್ಲಿ ಯಾವುದೇ ಸಹಾಯಹಸ್ತವನ್ನು ಸ್ವೀಕರಿಸದಿರಲು ವಾಗ್ದಾನ ಮಾಡುತ್ತದೆ.
IIIನೇ ಕಲಮು: NWS-ಅಲ್ಲದ ಪ್ರತಿಯೊಂದು ಸಹಭಾಗಿಯೂ, ರಾಷ್ಟ್ರದ ಎಲ್ಲಾ ಶಾಂತಿಯುತ ಪರಮಾಣು ಚಟುವಟಿಕೆಗಳ ಪೈಕಿಯಲ್ಲಿನ ಎಲ್ಲಾ ಪರಮಾಣು ಸಾಮಗ್ರಿಗೆ ತನ್ನ ರಕ್ಷಣೋಪಾಯಗಳನ್ನು ಅನ್ವಯಿಸುವುದಕ್ಕೆ ಸಂಬಂಧಿಸಿದಂತೆ IAEA ಜೊತೆಗಿನ ಒಪ್ಪಂದವೊಂದನ್ನು ನಿರ್ಣಯಕ್ಕೆ ತರಲು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಕಡೆಗೆ ಅಥವಾ ಇತರ ಪರಮಾಣು ಸ್ಫೋಟಕ ಉಪಕರಣಗಳ ಕಡೆಗೆ ಇಂಥ ಸಾಮಗ್ರಿಯ ದಿಕ್ಕು ಬದಲಾವಣೆಯಾಗುವುದನ್ನು ತಡೆಯಲು ವಾಗ್ದಾನ ಮಾಡುತ್ತದೆ.
IVನೇ ಕಲಮು: 1. ಪಕ್ಷಪಾತರಹಿತವಾದ ಮತ್ತು ಈ ಒಡಂಬಡಿಕೆಯ I ಮತ್ತು IIನೇ ಕಲಮುಗಳೊಂದಿಗೆ ಅನುಸರಣೆಯಲ್ಲಿರುವ ಶಾಂತಿಯುತ ಉದ್ದೇಶಗಳಿಗೆ ಮೀಸಲಾದ ಪರಮಾಣು ಶಕ್ತಿಯ ಸಂಶೋಧನೆ, ಉತ್ಪಾದನೆ ಮತ್ತು ಬಳಕೆಯನ್ನು ಅಭಿವೃದ್ಧಿಪಡಿಸುವಲ್ಲಿನ, ಒಡಂಬಡಿಕೆಗೆ ಸಂಬಂಧಿಸಿದ ಎಲ್ಲಾ ಸಹಭಾಗಿಗಳಿಗೆ ಸೇರಿದ ಹಸ್ತಾಂತರಗೊಳಿಸಲಾಗದ ಹಕ್ಕಿನ ಮೇಲೆ ಪರಿಣಾಮಬೀರುವ ರೀತಿಯಲ್ಲಿ ಈ ಒಡಂಬಡಿಕೆಯಲ್ಲಿನ ಯಾವುದೇ ಅಂಶವನ್ನು ವ್ಯಾಖ್ಯಾನಿಸಬಾರದು.
2. ಒಡಂಬಡಿಕೆಗೆ ಸಂಬಂಧಿಸಿದ ಎಲ್ಲಾ ಸಹಭಾಗಿ ರಾಷ್ಟ್ರಗಳೂ, ಪರಮಾಣು ಶಕ್ತಿಯ ಶಾಂತಿಯುತ ಬಳಕೆಗೆ ಸಂಬಂಧಿಸಿದ ಉಪಕರಣ, ಸಾಮಗ್ರಿಗಳು ಮತ್ತು ವೈಜ್ಞಾನಿಕ ಹಾಗೂ ತಾಂತ್ರಿಕ ಮಾಹಿತಿಯ ಸಾಧ್ಯವಾದಷ್ಟೂ ಸಂಪೂರ್ಣ ವಿನಿಮಯವನ್ನು ಸರಾಗಗೊಳಿಸಲು, ಮತ್ತು ಅದರಲ್ಲಿ ಪಾಲ್ಗೊಳ್ಳುವ ಹಕ್ಕನ್ನು ಹೊಂದಲು ವಾಗ್ದಾನ ಮಾಡುತ್ತವೆ. ಹಾಗೆ ಮಾಡುವ ಒಂದು ಸ್ಥಾನದಲ್ಲಿರುವ ಒಡಂಬಡಿಕೆಕೆ ಸಂಬಂಧಿಸಿದ ಸಹಭಾಗಿಗಳು, ಶಾಂತಿಯುತ ಉದ್ದೇಶಗಳಿಗೆ ಮೀಸಲಾಗಿರುವ ಪರಮಾಣು ಶಕ್ತಿಯ ಅನ್ವಯಿಕೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಏಕಾಂಗಿಯಾಗಿ ಅಥವಾ ಇತರ ರಾಷ್ಟ್ರಗಳು ಅಥವಾ ಅಂತರರಾಷ್ಟ್ರೀಯ ಸಂಘಟನೆಗಳೊಂದಿಗೆ ಜೊತೆಯಾಗಿ ಸಹಕಾರವನ್ನೂ ನೀಡಬೇಕು. ಅದರಲ್ಲೂ ವಿಶೇಷವಾಗಿ ಒಡಂಬಡಿಕೆ ಸಂಬಂಧಿಸಿದ, ಪರಮಾಣು-ಶಸ್ತ್ರಾಸ್ತ್ರ ಹೊಂದಿಲ್ಲದ ರಾಷ್ಟ್ರಗಳ ಸಹಭಾಗಿಯ ಭೂಪ್ರದೇಶದಲ್ಲಿ, ವಿಶ್ವದ ಅಭಿವೃದ್ಧಿಶೀಲ ಪ್ರದೇಶಗಳ ಅಗತ್ಯಗಳನ್ನು ಸೂಕ್ತವಾಗಿ ಪರಿಗಣಿಸುವ ಮೂಲಕ ಈ ಸಹಕಾರವನ್ನು ಅವು ನೀಡಬೇಕು.
VIನೇ ಕಲಮು: "ಆದಷ್ಟು ಬೇಗ ಪರಮಾಣು ಶಸ್ತ್ರಾಸ್ತ್ರಗಳ ಗತಿಯ ಪೂರ್ಣ ನಿಲುಗಡೆ ಮಾಡುವುದಕ್ಕೆ ಮತ್ತು ಪರಮಾಣು ನಿರಸ್ತ್ರೀಕರಣಕ್ಕೆ ಸಂಬಂಧಿಸಿದ ಪರಿಣಾಮಕಾರೀ ಕ್ರಮಗಳ ಮೇಲಿನ ಮಾತುಕತೆಗಳನ್ನು ಉತ್ತಮ ನಂಬಿಕೆಯಲ್ಲಿ ಮುಂದುವರಿಸಲು", ಹಾಗೂ "ಕಟ್ಟುನಿಟ್ಟಾದ ಮತ್ತು ಪರಿಣಾಮಕಾರಿಯಾದ ಅಂತರರಾಷ್ಟ್ರೀಯ ನಿಯಂತ್ರಣದ ಅಡಿಯಲ್ಲಿನ ಒಂದು ಸಾರ್ವತ್ರಿಕ ಹಾಗೂ ಸಂಪೂರ್ಣ ನಿರಸ್ತ್ರೀಕರಣದ ಕುರಿತಾದ ಒಂದು ಒಡಂಬಡಿಕೆಯ" ಕಡೆಗೆ ಮುಂದುವರಿಯಲು ರಾಷ್ಟ್ರಗಳು ವಾಗ್ದಾನ ಮಾಡುತ್ತವೆ.
Xನೇ ಕಲಮು: 3 ತಿಂಗಳ ಸೂಚನೆಯನ್ನು ನೀಡುವ ಮೂಲಕ ಒಡಂಬಡಿಕೆಯಿಂದ ಹಿಂದೆಗೆದುಕೊಳ್ಳುವ ಹಕ್ಕನ್ನು ಇದು ನೆಲೆಗೊಳಿಸುತ್ತದೆ ಅಥವಾ ಊರ್ಜಿತಗೊಳಿಸುತ್ತದೆ. ಅಷ್ಟೇ ಅಲ್ಲ, ಒಡಂಬಡಿಕೆಯ ಅವಧಿಯನ್ನೂ ಸಹ ಇದು ಊರ್ಜಿತಗೊಳಿಸುತ್ತದೆ (1995ರ ವಿಸ್ತರಣಾ ಉಪಕ್ರಮಕ್ಕೆ 25 ವರ್ಷಗಳು ಮುಂಚಿತವಾಗಿ).
ಇತಿಹಾಸ
[ಬದಲಾಯಿಸಿ]ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಅನೇಕ ರಾಷ್ಟ್ರಗಳನ್ನು ಒಳಗೊಂಡಿರುವ ವಿಶ್ವವೊಂದರ ಸುರಕ್ಷತೆಗೆ ಸಂಬಂಧಿಸಿದ ಕಾಳಜಿಯು NPTಯ ಹಿಂದಿದ್ದ ಪ್ರಚೋದಕ ಶಕ್ತಿಯಾಗಿತ್ತು. ಕೇವಲ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಹಾಗೂ ಸೋವಿಯೆಟ್ ಒಕ್ಕೂಟದ ನಡುವಿನ ಶೀತಲ ಸಮರ ನಿರೋಧಕ ಸಂಬಂಧವು ದುರ್ಬಲವಾಗಿತ್ತು ಎಂದು ಗುರುತಿಸಲ್ಪಟ್ಟಿತ್ತು. ತಪ್ಪು ಲೆಕ್ಕಾಚಾರ, ಅಪಘಾತ ಅಥವಾ ಅನಧಿಕೃತ ಬಳಕೆಯ ಅಪಾಯಗಳನ್ನು ಹೆಚ್ಚಿಸುವ ಮೂಲಕ, ಅಥವಾ ಒಂದು ಸಣ್ಣ ಪರಮಾಣು ಘರ್ಷಣೆಯನ್ನು ತೀವ್ರಗೊಳಿಸುವ ಮೂಲಕ, ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿದ್ದವರು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರ ಭದ್ರತೆಯನ್ನೂ ತಗ್ಗಿಸಿದರು.
NPT ಪ್ರಕ್ರಿಯೆಯನ್ನು ಐರಿಷ್ ವಿದೇಶಾಂಗ ವ್ಯವಹಾರಗಳ ಸಚಿವನಾದ ಫ್ರಾಂಕ್ ಐಕೆನ್ ಎಂಬಾತ 1958ರಲ್ಲಿ ಜಾರಿಗೆ ತಂದ. 1968ರಲ್ಲಿ ಇದನ್ನು ಸಹಿಗಾಗಿ ತೆರೆದಿಡಲಾಯಿತು ಹಾಗೂ ಫಿನ್ಲೆಂಡ್ ಮೊದಲು ಸಹಿಮಾಡಿದ ರಾಷ್ಟ್ರವೆನಿಸಿಕೊಂಡಿತು. 1992ರ ವೇಳೆಗೆ, ಪರಮಾಣು ಶಕ್ತಿಗಳೆಂದು ಆಗ-ಘೋಷಿಸಲ್ಪಟ್ಟಿದ್ದ ಐದು ರಾಷ್ಟ್ರಗಳೂ ಒಡಂಬಡಿಕೆಗೆ ಸಹಿಹಾಕಿದ್ದವು, ಮತ್ತು 1995ರಲ್ಲಿ ಒಡಂಬಡಿಕೆಯನ್ನು ನವೀಕರಿಸಲಾಯಿತು (ಮತ್ತು 1996ರಲ್ಲಿ ಕಾಂಪ್ರಹೆನ್ಸಿವ್ ಟೆಸ್ಟ್ ಬ್ಯಾನ್ ಟ್ರೀಟಿಯು (ಸಮಗ್ರ ಪರೀಕ್ಷಾ ನಿಷೇಧ ಒಡಂಬಡಿಕೆ) ಇದನ್ನು ಅನುಸರಿಸಿಕೊಂಡು ಬಂದಿತು). ಹಲವಾರು NPT ಸಹಿದಾರರು ಪರಮಾಣು ಶಸ್ತ್ರಾಸ್ತ್ರಗಳನ್ನು ಅಥವಾ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಸೂಚಿಗಳನ್ನು ಬಿಟ್ಟುಬಿಟ್ಟಿದ್ದಾರೆ. 1970ರ ದಶಕದಲ್ಲಿ ದಕ್ಷಿಣ ಆಫ್ರಿಕಾವು ಪರಮಾಣು ಶಸ್ತ್ರಾಸ್ತ್ರಗಳ ಒಂದು ಕಾರ್ಯಸೂಚಿಯನ್ನು ನಡೆಸಿತು ಹಾಗೂ ಇದಕ್ಕೆ ಇಸ್ರೇಲ್‌ನ ಸಹಾಯಹಸ್ತ ಸಿಕ್ಕಿತ್ತು ಎಂದು ಹೇಳಲಾಗಿತ್ತು, ಮತ್ತು 1979ರಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಒಂದು ಪರಮಾಣು ಪರೀಕ್ಷೆಯನ್ನು ನಿರ್ವಹಿಸಿರಬಹುದು, ಆದರೆ ಅಲ್ಲಿಂದೀಚೆಗೆ ತನ್ನ ಪರಮಾಣು ಕಾರ್ಯಸೂಚಿಯನ್ನು ತ್ಯಜಿಸಿತು ಹಾಗೂ ತನ್ನ ಸಣ್ಣ ಪರಮಾಣು ಶಸ್ತ್ರಾಸ್ತ್ರ ಸಂಗ್ರಹವನ್ನು ನಾಶಪಡಿಸಿದ ನಂತರ 1991ರಲ್ಲಿ ಒಡಂಬಡಿಕೆಗೆ ಸಹಿಹಾಕಿತು. ಹಿಂದಿನ ಹಲವಾರು ಸೋವಿಯೆಟ್ ಗಣರಾಜ್ಯಗಳು, ಸೋವಿಯೆಟ್ ಒಕ್ಕೂಟದಿಂದ ತಾವು ಪರಂಪರೆಯಾಗಿ ಪಡೆದುಕೊಂಡಿದ್ದ ಪರಮಾಣು ಶಸ್ತ್ರಾಸ್ತ್ರಗಳನ್ನು ನಾಶಪಡಿಸಿವೆ ಅಥವಾ ರಷ್ಯಾಕ್ಕೆ ವರ್ಗಾಯಿಸಿವೆ.
ಅಮೆರಿಕಾ ಸಂಯುಕ್ತ ಸಂಸ್ಥಾನಗಳು-NATO ಪರಮಾಣು ಶಸ್ತ್ರಾಸ್ತ್ರಗಳ ಹಂಚಿಕೆ
[ಬದಲಾಯಿಸಿ]ಒಡಂಬಡಿಕೆಯ ಕುರಿತಾದ ಮಾತುಕತೆಗಳು ನಡೆಯುತ್ತಿದ್ದ ಸಮಯದಲ್ಲಿ NATO ಯುಕ್ತವಾಗಿ ಪರಮಾಣು ಶಸ್ತ್ರಾಸ್ತ್ರಗಳ ಹಂಚಿಕೆ ಒಪ್ಪಂದಗಳನ್ನು ಹೊಂದಿತ್ತು. ಆ ಮೂಲಕ, ಇತರ NATO ರಾಷ್ಟ್ರಗಳಿಂದ ಸಜ್ಜುಗೊಳಿಸಲ್ಪಡುವಂತೆ, ಮತ್ತು ಅವುಗಳಲ್ಲಿ ಸಂಗ್ರಹಿಸಲ್ಪಡುವಂತೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಒದಗಿಸಿದವು. ಇದು ಒಡಂಬಡಿಕೆಯ I ಮತ್ತು IIನೇ ಕಲಮುಗಳನ್ನು ಉಲ್ಲಂಘಿಸುವ ಒಂದು ಪ್ರಸರಣಕಾರ್ಯ ಎಂದು ಕೆಲವರು ವಾದಿಸುತ್ತಾರೆ. NATO ರಾಷ್ಟ್ರಗಳೊಳಗೆ ಸಂಗ್ರಹಿಸಲ್ಪಟ್ಟಿರುವ ಶಸ್ತ್ರಾಸ್ತ್ರಗಳನ್ನು U.S. ನಿಯಂತ್ರಿಸಿತು, ಮತ್ತು "ಒಡಂಬಡಿಕೆಯು ಮತ್ತೆಂದೂ ನಿಯಂತ್ರಿಸಲಾಗದ ಹಂತವಾದ, ಒಂದು ಯುದ್ಧಕ್ಕೆ ಸಿದ್ಧವಾಗುವ ತೀರ್ಮಾನವೊಂದು ಮಾಡಲ್ಪಡದ ಹೊರತು" ಶಸ್ತ್ರಾಸ್ತ್ರಗಳ ವರ್ಗಾವಣೆ ಅಥವಾ ಅವರ ಮೇಲೆ ನಿಯಂತ್ರಣವನ್ನು ಹೊಂದುವ ಯಾವುದೇ ಉದ್ದೇಶವಿರಲಿಲ್ಲ. ಆದ್ದರಿಂದ ಅಲ್ಲಿ NPTಯ ಉಲ್ಲಂಘನೆಯಾಗಿಲ್ಲ ಎಂಬುದು ಇದಕ್ಕೆ ಪ್ರತಿಯಾಗಿ ಅಸ್ತಿತ್ವದಲ್ಲಿರುವ ಮತ್ತೊಂದು ವಾದವಾಗಿದೆ. ಸೋವಿಯೆಟ್ ಒಕ್ಕೂಟವನ್ನೊಳಗೊಂಡಂತೆ ಒಡಂಬಡಿಕೆಯ ಕುರಿತು ಮಾತುಕತೆಗಳನ್ನು ನಡೆಸುತ್ತಿರುವ ರಾಷ್ಟ್ರಗಳ ಪೈಕಿ ಕೆಲವೇ ರಾಷ್ಟ್ರಗಳಿಗೆ ಈ ಒಪ್ಪಂದಗಳನ್ನು ಬಹಿರಂಗಪಡಿಸಲಾಗಿತ್ತು. ಆದರೆ, 1968ರಲ್ಲಿ NPTಗೆ ಸಹಿಹಾಕಿದ ಬಹುಪಾಲು ರಾಷ್ಟ್ರಗಳಿಗೆ ಆ ಸಮಯದಲ್ಲಿ[೧೯] ಈ ಒಪ್ಪಂದಗಳು ಮತ್ತು ಅರ್ಥಕಲ್ಪನೆಗಳ ಕುರಿತಾಗಿ ಅರಿವಿರಲಿಲ್ಲವೆನಿಸುತ್ತದೆ.
2005ರ ವೇಳೆಗೆ ಇದ್ದಂತೆ, ಈ NATO ಒಪ್ಪಂದಗಳ[೨೦] ಅಡಿಯಲ್ಲಿ, ಬೆಲ್ಜಿಯಂ, ಜರ್ಮನಿ, ಇಟಲಿ, ನೆದರ್ಲೆಂಡ್ಸ್ ಮತ್ತು ಟರ್ಕಿ ದೇಶಗಳಿಂದ ಬಳಸಲ್ಪಡುವುದಕ್ಕೆ ಅನುವಾಗುವಂತೆ ಸುಮಾರು 180 ತಂತ್ರೋಪಾಯದ B61 ಪರಮಾಣು ಬಾಂಬ್‌ಗಳನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಈಗಲೂ ಒದಗಿಸುತ್ತಿವೆ ಎಂದು ಅಂದಾಜಿಸಲಾಗಿದೆ. ಇದು ಒಡಂಬಡಿಕೆಯ I ಮತ್ತು IIನೇ ಕಲಮುಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅನೇಕ ರಾಷ್ಟ್ರಗಳು, ಹಾಗೂ ಅಲಿಪ್ತ ಚಳವಳಿಯು ಈಗ ವಾದಿಸುತ್ತಿವೆ, ಮತ್ತು ಈ ಒಪ್ಪಂದಗಳನ್ನು ಕೊನೆಗಾಣಿಸಲು ಅವು ರಾಜತಾಂತ್ರಿಕ ಒತ್ತಡವನ್ನು ಹಾಕುತ್ತಿವೆ. "ಪರಮಾಣು ಶಸ್ತ್ರಾಸ್ತ್ರ-ಹೊಂದಿರದ" NATO ರಾಷ್ಟ್ರಗಳ ವಿಮಾನ ಚಾಲಕರು ಹಾಗೂ ಇತರ ಸಿಬ್ಬಂದಿಯು U.S. ಪರಮಾಣು ಬಾಂಬ್‌ಗಳ ನಿರ್ವಹಿಸುವಿಕೆ ಹಾಗೂ ವಿತರಣೆಯ ಕುರಿತಾಗಿ ತಾಲೀಮು ನಡೆಸುತ್ತಿವೆ, ಮತ್ತು U.S. ಪರಮಾಣು ಬಾಂಬ್‌ಗಳನ್ನು ವಿತರಿಸುವಲ್ಲಿ U.S.ಗೆ ಸೇರದ ಯುದ್ಧವಿಮಾನಗಳನ್ನು ಬಳಸಿಕೊಳ್ಳಲಾಗಿದ್ದು, ಇದು ಕೆಲವೊಂದು ತಾಂತ್ರಿಕ ಪರಮಾಣು ಶಸ್ತ್ರಾಸ್ತ್ರಗಳ ಮಾಹಿತಿಯನ್ನು ಒಳಗೊಂಡಿರಬಹುದು ಎಂದು ಆ ದೇಶಗಳು ಎತ್ತಿ ತೋರಿಸುತ್ತಿವೆ. ತನ್ನ "ಪರಮಾಣು ಪಡೆಗಳು ಯುದ್ಧದ ತಡೆಗಟ್ಟುವಿಕೆಯಲ್ಲಿ ಒಂದು ಅತ್ಯಾವಶ್ಯಕವಾದ ಪಾತ್ರವನ್ನು ವಹಿಸುವುದನ್ನು ಮುಂದುವರಿಸಿಕೊಂಡು ಬಂದಿವೆಯಾದರೂ, ಅವುಗಳ ಪಾತ್ರವು ಈಗ ಮೂಲಭೂತವಾಗಿ ಹೆಚ್ಚು ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ" ಎಂದು NATO ನಂಬುತ್ತದೆ.[೨೧] U.S.ಗೆ ಸೇರದ ದೇಶದ ನಿಯಂತ್ರಣಕ್ಕೆ ಯಾವುದೇ ಪರಮಾಣು ಶಸ್ತ್ರಾಸ್ತ್ರಗಳನ್ನು ಯಾವತ್ತೂ ನೀಡಿಲ್ಲವಾದ್ದರಿಂದ, Iನೇ ಕಲಮು ("ಇಂಥ ಶಸ್ತ್ರಾಸ್ತ್ರಗಳು ಅಥವಾ ಸ್ಫೋಟಕ ಉಪಕರಣಗಳ ಮೇಲೆ ಪರಮಾಣು ಶಸ್ತ್ರಾಸ್ತ್ರಗಳು ಅಥವಾ ಇತರ ಪರಮಾಣು ಸ್ಫೋಟಕ ಉಪಕರಣಗಳು ಅಥವಾ ನಿಯಂತ್ರಣದ" ವರ್ಗಾಯಿಸುವಿಕೆಯನ್ನು ಇದು ಪ್ರತಿಬಂಧಿಸುತ್ತದೆ) ಅಥವಾ IIನೇ ಕಲಮಿನ ("ಇಂಥ ಶಸ್ತ್ರಾಸ್ತ್ರಗಳು ಅಥವಾ ಸ್ಫೋಟಕ ಉಪಕರಣಗಳ ಮೇಲಿನ ನಿಯಂತ್ರಣದ ಪರಮಾಣು ಶಸ್ತ್ರಾಸ್ತ್ರಗಳು ಅಥವಾ ಇತರ ಪರಮಾಣು ಸ್ಫೋಟಕ ಉಪಕರಣಗಳು ವರ್ಗಾವಣೆಗಾರರಿಂದ ವರ್ಗಾವಣೆಯಾಗಿದ್ದನ್ನು ಸ್ವೀಕರಿಸುವುದನ್ನು" ಇದು ನಿಷೇಧಿಸುತ್ತದೆ) ಉಲ್ಲಂಘನೆಯಾಗಿರಲು ಸಾಧ್ಯವಿಲ್ಲ ಎಂದೂ ಸಹ NATO ಅಧಿಕಾರಿಗಳು ಸಮರ್ಥಿಸುತ್ತಾರೆ.
ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣವನ್ನು ತಡೆಗಟ್ಟುವಲ್ಲಿ ನೆರವಾಗಲೆಂದು U.S. ಪರಮಾಣು ಹಂಚಿಕೆಯ ಕಾರ್ಯನೀತಿಗಳನ್ನು ಮೂಲತಃ ವಿನ್ಯಾಸಗೊಳಿಸಲಾಗಿತ್ತು. ವಾರ್ಸಾ ಒಪ್ಪಂದದ ಅನುಸಾರ ಒಂದು ವೇಳೆ ಯುದ್ಧವೇನಾದರೂ ಆದಲ್ಲಿ, ಸ್ವಯಂರಕ್ಷಣೆಯಲ್ಲಿ (U.S.) ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯಂತ್ರಿಸಲು ಪಶ್ಚಿಮ ಜರ್ಮನಿಯು ಸಮರ್ಥವಾಗಿರುತ್ತದೆ ಎಂದು ಅದಕ್ಕೆ ಖಾತ್ರಿ ನೀಡುವ ಮೂಲಕ, ಒಂದು ಸ್ವತಂತ್ರ ಪರಮಾಣು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸದಂತೆ ಅಂದಿನ ಪಶ್ಚಿಮ ಜರ್ಮನಿಯ ಮನವೊಲಿಸುವ ಮೂಲಕ ಇದನ್ನು ವಿನ್ಯಾಸಗೊಳಿಸಲಾಗಿತ್ತು. (ಆದಾಗ್ಯೂ, ಸರ್ವ ಪ್ರಯತ್ನದ ಯುದ್ಧದ ಆ ಹಂತದವರೆಗೆ, ಶಸ್ತ್ರಾಸ್ತ್ರಗಳು ಸ್ವತಃ U.S. ತೆಕ್ಕೆಯಲ್ಲಿ "ಸುರಕ್ಷಿತವಾಗಿ" ಉಳಿದುಕೊಂಡಿದ್ದವು.) ದೇಶಗಳು ತಮ್ಮದೇ ಸ್ವಂತದ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಸೂಚಿಗಳನ್ನು ಹೊಂದುವುದರ ಹಬ್ಬುವಿಕೆಯನ್ನು ಸೀಮಿತಗೊಳಿಸುವುದು ಇದರ ಹಿಂದಿನ ಅಂಶವಾಗಿದ್ದು, NATO ಮಿತ್ರರಾಷ್ಟ್ರಗಳು ಪ್ರಸರಣ ಮಾರ್ಗಕ್ಕೆ ಇಳಿಯುವುದನ್ನು ಆಯ್ಕೆಮಾಡಿಕೊಳ್ಳುವುದಿಲ್ಲ ಎಂಬುದನ್ನು ಖಾತ್ರಿಪಡಿಸಲು ಇದು ನೆರವಾಯಿತು.[೨೨] (ಒಂದು ವೇಳೆ, ಸೋವಿಯೆಟ್ ಒಕ್ಕೂಟ ಮತ್ತು ಅದರ ಮಿತ್ರರಾಷ್ಟ್ರಗಳ ವಿರುದ್ಧದ ಅವರ ರಕ್ಷಣಾ ವ್ಯವಸ್ಥೆಯು ಸಮರ್ಥವಾಗಿದೆ ಎಂದು ಪಶ್ಚಿಮ ಜರ್ಮನಿಯ ಬಾನ್‌ನಲ್ಲಿನ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡದೇ ಹೋಗಿದ್ದರೆ, ಪಶ್ಚಿಮ ಜರ್ಮನಿಯು ತನ್ನದೇ ಸ್ವಂತದ ಪರಮಾಣು ಶಸ್ತ್ರಾಸ್ತ್ರಗಳ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಶಕ್ತಿಯನ್ನು ಹೊಂದಿರುವ ಒಂದು ದೇಶವಾಗಿ ಹಲವಾರು ವರ್ಷಗಳಿಂದ U.S. ಗುಪ್ತಚರ ವಿಭಾಗದ ಅಂದಾಜುಗಳಲ್ಲಿ ಚರ್ಚಿಸಲ್ಪಡುತ್ತಿತ್ತು.[೨೩])
ಭಾರತ, ಇಸ್ರೇಲ್ ಮತ್ತು ಪಾಕಿಸ್ತಾನ
[ಬದಲಾಯಿಸಿ]ಭಾರತ, ಇಸ್ರೇಲ್, ಮತ್ತು ಪಾಕಿಸ್ತಾನ- ಈ ಮೂರು ರಾಷ್ಟ್ರಗಳು ಒಡಂಬಡಿಕೆಗೆ ಸಹಿಹಾಕಲು ನಿರಾಕರಿಸಿದವು. ಭಾರತ ಮತ್ತು ಪಾಕಿಸ್ತಾನ ದೃಢೀಕರಿಸಲ್ಪಟ್ಟ ಪರಮಾಣು ಶಕ್ತಿಗಳಾಗಿವೆ, ಮತ್ತು ಒಂದು ದೀರ್ಘಕಾಲದ ಉದ್ದೇಶಪೂರ್ವಕ ಸಂದಿಗ್ಧಾರ್ಥತೆಯ ಕಾರ್ಯನೀತಿಯನ್ನು ಇಸ್ರೇಲ್ ಹೊಂದಿದೆ (ನೋಡಿ: ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶಗಳ ಪಟ್ಟಿ). 1967ಕ್ಕೂ ಮುಂಚೆಯೇ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ನಡೆಸಿದ ರಾಷ್ಟ್ರಗಳಿಗೆ ಪರಮಾಣು ಶಸ್ತ್ರಾಸ್ತ್ರಗಳ ಕಾನೂನುಬದ್ಧ ಒಡೆತನವನ್ನು ಸೀಮಿತಗೊಳಿಸುವ ಮೂಲಕ, "ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದವರ" ಮತ್ತು ಒಂದು ಬೃಹತ್ ಗುಂಪಿನಂತಿರುವ "ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿಲ್ಲದವರ" ಒಂದು ಕೂಟವನ್ನು NPTಯು ಸೃಷ್ಟಿಸಿದೆ. ಆದರೆ ಯಾವ ನೈತಿಕ ಆಧಾರದ ಮೇಲೆ ಇಂಥ ಒಂದು ಪ್ರತ್ಯೇಕವಾಗಿರುವಿಕೆಯು ಕ್ರಮಬದ್ಧವಾಗಿ ಎಂಬುದನ್ನು ಒಡಂಬಡಿಕೆಯು ಎಂದಿಗೂ ವಿವರಿಸುವುದಿಲ್ಲ ಎಂಬುದು ಈ ದೇಶಗಳ ವಾದವಾಗಿದೆ.
ಭಾರತ ಮತ್ತು ಪಾಕಿಸ್ತಾನ ದೇಶಗಳು ತಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದರ ಕುರಿತು ಬಹಿರಂಗವಾಗಿ ಘೋಷಿಸಿವೆ ಮತ್ತು ಪರೀಕ್ಷೆಗಳಲ್ಲಿ ಪರಮಾಣು ಉಪಕರಣಗಳನ್ನು ಆಸ್ಫೋಟಿಸಿವೆ. 1974ರಲ್ಲಿ ಭಾರತವು ಈ ರೀತಿಯ ಪರೀಕ್ಷೆಯನ್ನು ಮೊದಲು ಮಾಡಿತು ಹಾಗೂ ಇದನ್ನು ಅನುಸರಿಸುವ ರೀತಿಯಲ್ಲಿ, ಭಾರತದ ಮತ್ತೊಂದು ಪರೀಕ್ಷೆಗೆ ಉತ್ತರವಾಗಿ ಪಾಕಿಸ್ತಾನವು ಇಂಥ ಪರೀಕ್ಷೆಯನ್ನು 1998ರಲ್ಲಿ ನಡೆಸಿತು. 150 ಸಿಡಿತಲೆಗಳಿಗಿಂತಲೂ ಹೆಚ್ಚಿನದಕ್ಕೆ ಸಾಕಾಗುವಷ್ಟು ವಿದಳನೀಯ ಸಾಮಗ್ರಿಯನ್ನು ಭಾರತವು ಹೊಂದಿದೆ ಎಂದು ಅಂದಾಜಿಸಲಾಗಿದೆ.[೨೪] ಪಾಕಿಸ್ತಾನದ ಯುದ್ಧತಂತ್ರದ ಶಸ್ತ್ರಾಸ್ತ್ರಗಳ ವಿಭಾಗದ ಮುಂಚಿನ ಮುಖ್ಯಸ್ಥನ ಪ್ರಕಾರ, ಪಾಕಿಸ್ತಾನವು 80 ಮತ್ತು 120ರ ನಡುವಣ ಸಂಖ್ಯೆಯ ಪ್ರಮಾಣದಲ್ಲಿ ಸಿಡಿತಲೆಗಳನ್ನು ಹೊಂದಿದೆ.[೨೫] ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಓರ್ವ ಎದುರಾಳಿ ದೇಶದಿಂದ ಮೊದಲು ದಾಳಿಗೆ ಒಳಗಾಗುವವರೆಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸದಿರುವ ಒಂದು ವಾಗ್ದಾನವಾದ, ಮೊದಲು ಬಳಸದಿರುವ ಕಾರ್ಯನೀತಿಯಯೊಂದನ್ನು ಹೊಂದಿರುವ ಕೆಲವೇ ದೇಶಗಳ ಪೈಕಿ ಭಾರತವೂ ಒಂದಾಗಿದೆ.[೨೬] ಚೀನಾ ದೇಶವು "ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶಗಳ" ಪೈಕಿ ಒಂದೆನಿಸಿಕೊಂಡಿರುವುದೇ, ತಾನು NPTಗೆ ಸಹಿಹಾಕದಿರುವುದರ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದರ ಹಿಂದಿರುವ ಪ್ರಮುಖ ಕಾರಣ ಎಂದು ಭಾರತವು ಉಲ್ಲೇಖಿಸುತ್ತದೆ.[೨೭] ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾದ ಪ್ರಣಬ್ ಮುಖರ್ಜಿಯವರು 2007ರಲ್ಲಿ ಟೋಕಿಯೋಗೆ ನೀಡಿದ ಭೇಟಿಯ ಸಂದರ್ಭದಲ್ಲಿ ಮಾತನಾಡುತ್ತಾ, "ಒಂದು ವೇಳೆ ಭಾರತವು NPTಗೆ ಸಹಿಹಾಕಿಲ್ಲವೆಂದರೆ, ಪ್ರಸರಣ-ಮಾಡದಿರುವಿಕೆಯ ಕುರಿತಾಗಿ ಅದಕ್ಕಿರುವ ಬದ್ಧತೆಯ ಕೊರತೆಯು ಕಾರಣವಲ್ಲ. ಆದರೆ NPTಯು ಒಂದು ದೋಷಯುಕ್ತ ಒಡಂಬಡಿಕೆಯಾಗಿದ್ದು, ಇದು ಸಾರ್ವತ್ರಿಕವಾದ, ಪಕ್ಷಪಾತ-ರಹಿತವಾದ ಪರಿಶೀಲನೆ ಹಾಗೂ ಪರಿಗಣನೆಯ ಅಗತ್ಯವನ್ನು ಗುರುತಿಸಿಲ್ಲ ಎಂದು ನಾವು ಪರಿಗಣಿಸಿರುವುದರಿಂದ ಭಾರತವು NPTಗೆ ಸಹಿಹಾಕಿಲ್ಲ" ಎಂದು ತಿಳಿಸಿದರು.[೨೮] 1962ರಲ್ಲಿ ನಡೆದ ಒಂದು ಗಡಿಸಂಬಂಧಿ ಯುದ್ಧವೂ ಸೇರಿದಂತೆ, ಚೀನಾ ಮತ್ತು ಭಾರತ ದೇಶಗಳು ಒಂದು ಸುದೀರ್ಘವಾದ ಗಡಿ ವಿವಾದವನ್ನು ಹೊಂದಿವೆ.
ಸೋರಿಕೆಯಾದ ಸೈನ್ಯದ ಗುಪ್ತಚರ ಸುದ್ದಿಸಂಗ್ರಹದ ಅನುಸಾರ, ಇಸ್ರೇಲ್ ದೇಶವು 1958ರಿಂದಲೂ ನೆಗೆವ್‌ನಲ್ಲಿನ ತನ್ನ ಡಿಮೊನಾ ತಾಣದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯನ್ನು ನಡೆಸಿಕೊಂಡು ಬಂದಿದೆ. ಪ್ರಸರಣ ಮಾಡದಿರುವಿಕೆಗೆ ಸಂಬಂಧಿಸಿದ, ಡೇವಿಡ್ ಆಲ್‌ಬ್ರೈಟ್‌ನಂಥ ಅನೇಕ ವಿಶ್ಲೇಷಕರು ಅಂದಾಜಿಸುವ ಪ್ರಕಾರ, ಡಿಮೊನಾ ತಾಣದಿಂದ ಪುನರ್‌ಸಂಸ್ಕರಿಸಲ್ಪಟ್ಟ ಪ್ಲುಟೋನಿಯಂನ್ನು ಬಳಸಿಕೊಂಡು 100ರಿಂದ 200ರವರೆಗಿನಷ್ಟು ಸಂಖ್ಯೆಯ ಸಿಡಿತಲೆಗಳನ್ನು ಇಸ್ರೇಲ್ ಸಂಗ್ರಹಿಸಿಟ್ಟಿರಬಹುದು. ಇಸ್ರೇಲ್ ಸರ್ಕಾರದಿಂದ ನಂತರದಲ್ಲಿ ಅಪಹರಿಸಲ್ಪಟ್ಟು, ಸೆರೆವಾಸಕ್ಕೆ ತಳ್ಳಲ್ಪಟ್ಟ ಮೊರ್ಡೆಚಾಯ್ ವನುನು ಎಂಬ, ಇಸ್ರೇಲಿನ ಓರ್ವ ಕೆಳಹಂತದ ಪರಮಾಣು ತಂತ್ರಜ್ಞನು 1986ರಲ್ಲಿ ಬ್ರಿಟಿಷ್ ಸಂಡೆ ಟೈಮ್ಸ್ ಪತ್ರಿಕೆಗೆ ಇಸ್ರೇಲಿನ ಕಾರ್ಯಸೂಚಿಯ ಕುರಿತಾಗಿ ಬಹಿರಂಗಪಡಿಸಿದ ನಂತರ ಈಗ ಇದೊಂದು ಮುಕ್ತ ರಹಸ್ಯವಾಗಿ ಪರಿಗಣಿಸಲ್ಪಟ್ಟಿದೆಯಾದರೂ, ಪರಮಾಣು ಶಸ್ತ್ರಾಸ್ತ್ರಗಳ ಒಡೆತನವನ್ನು ದೃಢೀಕರಿಸಲು ಅಥವಾ ತಳ್ಳಿಹಾಕಲು ಇಸ್ರೇಲಿ ಸರ್ಕಾರವು ನಿರಾಕರಿಸುತ್ತದೆ.
2006ರ ಮಾರ್ಚ್ ಆರಂಭದಲ್ಲಿ, ಎರಡೂ ರಾಷ್ಟ್ರಗಳಲ್ಲಿನ ಮೌಲ್ಯಮಾಪಕರನ್ನು ಅಥವಾ ನಿರ್ಣಾಯಕರನ್ನು ಹೊಂದಿರುವ, ಭಾರತಕ್ಕೆ US ನಾಗರಿಕ ಪರಮಾಣು ತಂತ್ರಜ್ಞಾನವನ್ನು ಒದಗಿಸುವ ಗುಪ್ತ ಕರಾರೊಂದನ್ನು ಭಾರತ ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಆಖೈರುಗೊಳಿಸಿದವು. ಈ ಗುಪ್ತ ಕರಾರಿನ ಅಡಿಯಲ್ಲಿ, ತನ್ನ 22 ಪರಮಾಣು ಶಕ್ತಿಸ್ಥಾವರಗಳ ಪೈಕಿ 14ನ್ನು ನಾಗರಿಕ ಬಳಕೆಗಾಗಿ ಮೀಸಲಾಗಿರುವ ಘಟಕಗಳೆಂದು ವರ್ಗೀಕರಿಸಲು ಮತ್ತು ಅವುಗಳನ್ನು IAEA ರಕ್ಷಣೋಪಾಯಗಳ ಅಡಿಯಲ್ಲಿ ಇರಿಸಲು ಭಾರತವು ಬದ್ಧನಾಗಿದೆ. IAEAಯ ಪ್ರಧಾನ ನಿರ್ದೇಶಕನಾದ ಮೊಹಮದ್ ಎಲ್‌ಬರಾಡೇ ಎಂಬಾತ ಭಾರತವನ್ನು "ಪ್ರಸರಣ-ಮಾಡದಿರುವ ಪ್ರಚಲಿತ ಪದ್ಧತಿಯಲ್ಲಿನ ಒಂದು ಪ್ರಮುಖ ಪಾಲುದಾರ" ಎಂದು ಕರೆಯುವ ಮೂಲಕ ಈ ಗುಪ್ತ ಕರಾರನ್ನು ಸ್ವಾಗತಿಸಿದ.[೨೯]
2006ರ ಡಿಸೆಂಬರ್‌ನಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನಗಳ-ಭಾರತದ ಶಾಂತಿಯುತ ಅಣು ಶಕ್ತಿ ಸಹಕಾರ ಕಾಯಿದೆಯನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಕಾಂಗ್ರೆಸ್ ಅನುಮೋದಿಸಿತು. ಆ ವರ್ಷದ ಆರಂಭದಲ್ಲಿ ಅಧ್ಯಕ್ಷ ಬುಷ್ ಭಾರತಕ್ಕೆ ಭೇಟಿ ಕೊಟ್ಟಾಗಿನ ಸಂದರ್ಭದಲ್ಲಿ ಈ ಕಾಯಿದೆಯು ಸಂಯೋಜಿಸಲ್ಪಟ್ಟಿತ್ತು. ನಾಗರಿಕ ಪರಮಾಣು ಸಾಮಗ್ರಿಯನ್ನು ಭಾರತಕ್ಕೆ ವರ್ಗಾಯಿಸುವುದಕ್ಕೆ ಶಾಸನವು ಅವಕಾಶ ಮಾಡಿಕೊಡುತ್ತದೆ. ಪರಮಾಣು ಪ್ರಸರಣ-ಮಾಡದಿರುವ ಒಡಂಬಡಿಕೆಯ ಆಚೆಗಿನ ಭಾರತದ ಸ್ಥಾನಮಾನದ ಹೊರತಾಗಿಯೂ, ಭಾರತಕ್ಕೆ ಪ್ರಸರಣ-ಮಾಡದಿರುವಿಕೆಯ ಕುರಿತಾದ ಅದರ ನಿಚ್ಚಳವಾದ ವರದಿಯ ಆಧಾರದ ಮೇಲೆ ಈ ವರ್ಗಾವಣೆ ಅಥವಾ ವ್ಯವಹಾರಗಳನ್ನು ಮಂಜೂರುಮಾಡಲಾಯಿತು. ಅಷ್ಟೇ ಅಲ್ಲ, ಭಾರತದ ಕ್ಷಿಪ್ರ ಕೈಗಾರಿಕೀಕರಣ ಹಾಗೂ ಒಂದು ಶತಕೋಟಿಗೂ ಮೀರಿದ ಜನಸಂಖ್ಯೆಯಿಂದ ಉತ್ತೇಜಿಸಲ್ಪಟ್ಟಿರುವ, ಭಾರತಕ್ಕೆ ಅಗತ್ಯವಿರುವ ಅಸಾಧಾರಣ ಪ್ರಮಾಣದ ಶಕ್ತಿಯೂ ಈ ವರ್ಗಾವಣೆಗೆ ಆಧಾರವಾಗಿದೆ.[೩೦]
2008ರ ಆಗಸ್ಟ್ 1ರಂದು, ಭಾರತದ ರಕ್ಷಣೋಪಾಯಗಳ ಒಪ್ಪಂದಕ್ಕೆ[೩೧] IAEA ಅನುಮೋದನೆಯನ್ನು ನೀಡಿತು ಮತ್ತು 2008ರ ಸೆಪ್ಟೆಂಬರ್ 6ರಂದು, ಆಸ್ಟ್ರಿಯಾದ ವಿಯೆನ್ನಾದಲ್ಲಿ ಆಯೋಜಿಸಲಾದ ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್ (NSG) ಸಭೆಯಲ್ಲಿ ಭಾರತಕ್ಕೆ ಬಿಟ್ಟುಕೊಡುವಿಕೆಯನ್ನು ಮಂಜೂರು ಮಾಡಲಾಯಿತು. ಆಸ್ಟ್ರಿಯಾ, ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ದೇಶಗಳಿಂದ ವ್ಯಕ್ತಪಡಿಸಲ್ಪಟ್ಟ ಕಳವಳಗಳನ್ನು ಜಯಿಸಿದ ನಂತರ ಬಹುಮತಾಭಿಪ್ರಾಯ ಬಂದಿತು ಮತ್ತು NPT ಹಾಗೂ ಕಾಂಪ್ರಹೆನ್ಸಿವ್ ಟೆಸ್ಟ್ ಬ್ಯಾನ್ ಟ್ರೀಟಿಗೆ (CTBT) ಸಹಿಹಾಕದಿರುವ ದೇಶವೊಂದಕ್ಕೆ ವಿನಾಯಿತಿಯನ್ನು ಕೊಡುವಲ್ಲಿ ಅದೊಂದು ಅಭೂತಪೂರ್ವ ಕ್ರಮವಾಗಿದೆ.[೩೨][೩೩] ಇದೇ ಸಂದರ್ಭದಲ್ಲಿ ಒಪ್ಪುಗೆ ನೀಡುವ ಇತರ ದೇಶಗಳೊಂದಿಗೆ ಭಾರತವು ಪರಮಾಣು ವ್ಯಾಪಾರವನ್ನು ನಡೆಸಬಹುದಾಗಿದೆ.[೩೪] ಈ ಒಪ್ಪಂದವನ್ನು U.S. ಕಾಂಗ್ರೆಸ್ ಅನುಮೋದಿಸಿತು ಮತ್ತು 2008ರ ಅಕ್ಟೋಬರ್ 8ರಂದು ಅಧ್ಯಕ್ಷನು ಅದಕ್ಕೆ ಸಹಿಹಾಕಿದ.[೩೫]
ಅಲ್ಪಪ್ರಮಾಣದ ವಿನಾಯತಿಗಳೊಂದಿಗಿನ ಪಾಕಿಸ್ತಾನ ಮತ್ತು ಇಸ್ರೇಲ್ ದೇಶಗಳಿಗೆ ಎಲ್ಲಾ ಪ್ರಮುಖ ಪೂರೈಕೆದಾರರಿಂದ ಪರಮಾಣು ಶಸ್ತ್ರಾಸ್ತ್ರಗಳ ರಫ್ತುಗಳು ನಡೆಯುವುದನ್ನು NSG ಮಾರ್ಗದರ್ಶಿ ಸೂತ್ರಗಳು ಪ್ರಸ್ತುತ ತಳ್ಳಿಹಾಕುತ್ತವೆ. ಏಕೆಂದರೆ ಎರಡೂ ದೇಶಗಳೂ ಸಂಪೂರ್ಣ-ವ್ಯಾಪ್ತಿಯ IAEA ರಕ್ಷಣೋಪಾಯಗಳನ್ನು (ಅಂದರೆ, ತಮ್ಮೆಲ್ಲಾ ಪರಮಾಣು ಕಾರ್ಯಚಟುವಟಿಕೆಗಳ ಮೇಲಿನ ರಕ್ಷಣೋಪಾಯಗಳು) ಹೊಂದಿಲ್ಲ. ಇದೇ ರೀತಿಯ ಒಪ್ಪಂದವೊಂದನ್ನು ಮಾಡಿಕೊಳ್ಳುವಲ್ಲಿನ ಪಾಕಿಸ್ತಾನದ ಪ್ರಯತ್ನಗಳಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಹಾಗೂ ಇತರ NSG ಸದಸ್ಯರಾಷ್ಟ್ರಗಳು ಅಡ್ಡಿಪಡಿಸಿವೆ. ಪಾಕಿಸ್ತಾನಕ್ಕೆ ಇದೇ ಬಗೆಯ ಶಕ್ತಿಯ ಅಗತ್ಯಗಳಿಲ್ಲದಿರುವುದು ಮಾತ್ರವೇ ಅಲ್ಲದೇ, ಓರ್ವ ಪರಮಾಣು ಪ್ರಸರಣಕಾರ ದೇಶವಾಗಿ ಪಾಕಿಸ್ತಾನದ ಸಾಧನೆ ದಾಖಲೆಗಳು ಅಥವಾ ಪೂರ್ವಸಾಧನೆಗಳು ಮುಂಬರುವ ಕಾಲದಲ್ಲಿ ಯಾವುದೇ ಬಗೆಯ ಪರಮಾಣು ಸಂಬಂಧಿತ ಗುಪ್ತ ಒಪ್ಪಂದವನ್ನು ಹೊಂದುವಲ್ಲಿ ಅದಕ್ಕೆ ಅಸಾಧ್ಯ ಎಂಬ ಪರಿಸ್ಥಿತಿಯನ್ನು ಉಂಟುಮಾಡಿದೆ ಎಂಬ ವಾದವನ್ನು ಆ ದೇಶಗಳು ಮಂಡಿಸಿವೆ.[೩೬]
2009ರ ಸೆಪ್ಟೆಂಬರ್ 18ರಂದು ನಡೆದ ಇಂಟರ್‌ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿಯ ಮಹಾ ಅಧಿವೇಶನವು ಇಸ್ರೇಲ್‌ಗೆ ಕರೆನೀಡಿ, IAEA ಪರಿಶೀಲನೆಗಾಗಿ ತನ್ನ ಪರಮಾಣು ಸೌಕರ್ಯಗಳನ್ನು ತೆರೆದಿಡಲು, ಹಾಗೂ 16 ಮಂದಿ ತಟಸ್ಥವಾಗಿ ಉಳಿಯುವುದರೊಂದಿಗೆ 49-45 ಮತಗಳ ಒಂದು ಕಿರಿದಾದ ಅಂಚಿನಲ್ಲಿ ಅನುಮೋದನೆಗೊಂಡ "ಇಸ್ರೇಲಿನ ಪರಮಾಣು ಸಾಮರ್ಥ್ಯಗಳ" ಕುರಿತಾದ ಒಂದು ನಿರ್ಣಯದ ಅಂಗವಾಗಿ ಪ್ರಸರಣ-ಮಾಡದಿರುವ ಒಡಂಬಡಿಕೆಗೆ ಬದ್ಧನಾಗಿರಲು ತಿಳಿಸಿತು. "ಈ ನಿರ್ಣಯದೊಂದಿಗಿನ ಯಾವುದೇ ವಿಷಯದಲ್ಲಿ ಇಸ್ರೇಲ್ ದೇಶವು ಸಹಕಾರ ನೀಡುವುದಿಲ್ಲ" ಎಂದು ಇಸ್ರೇಲಿನ ಮುಖ್ಯ ನಿಯೋಗಿ ಹೇಳಿಕೆ ನೀಡಿದ.[೩೭]
ಉತ್ತರ ಕೊರಿಯಾ
[ಬದಲಾಯಿಸಿ]1985ರ ಡಿಸೆಂಬರ್ 12ರಂದು ಉತ್ತರ ಕೊರಿಯಾವು ಒಡಂಬಡಿಕೆಯನ್ನು ಊರ್ಜಿತಗೊಳಿಸಿತಾದರೂ, 2003ರ ಜನವರಿ 10ರಂದು ಒಡಂಬಡಿಕೆಯಿಂದ ಹಿಂದೆಗೆತ ಮಾಡುವುದರ ಕುರಿತಾದ ಸೂಚನಾ ಪತ್ರವನ್ನು ನೀಡಿತು. ಉತ್ತರ ಕೊರಿಯಾವು ಪುಷ್ಟೀಕರಿಸಿದ ಯುರೇನಿಯಂ ಶಸ್ತ್ರಾಸ್ತ್ರಗಳ ಒಂದು ಅಕ್ರಮವಾದ ಕಾರ್ಯಸೂಚಿಯನ್ನು ಶುರುಮಾಡಿತ್ತು ಎಂದು U.S. ಮಾಡಿದ ಆಪಾದನೆಗಳನ್ನು ಅನುಸರಿಸಿ ಉತ್ತರ ಕೊರಿಯಾ ಈ ಕ್ರಮವನ್ನು ತೆಗೆದುಕೊಂಡಿತು. ಅಷ್ಟೇ ಅಲ್ಲ, 1994ರಲ್ಲಿ[೩೮] ಪ್ಲುಟೋನಿಯಂ ಶಸ್ತ್ರಾಸ್ತ್ರಗಳ ವಿವಾದಾಂಶಗಳನ್ನು ಪರಿಹರಿಸಿದ್ದ ಸಮ್ಮತಿಸಲ್ಪಟ್ಟ ಆಧಾರ ಚೌಕಟ್ಟಿನ[೩೯] ಅಡಿಯಲ್ಲಿ, ಹಡಗಿನಲ್ಲಿ ತುಂಬಿಸಲ್ಪಟ್ಟ ಇಂಧನ ತೈಲದ ಸಾಗಣೆಯನ್ನು ತನ್ನ ಆಪಾದನೆಗಳ ತರುವಾಯ U.S. ನಿಲ್ಲಿಸಿದ್ದೂ ಸಹ ಉತ್ತರ ಕೊರಿಯಾದ ಈ ಹಿಂದೆಗೆತಕ್ಕೆ ಕಾರಣವಾಗಿತ್ತು. 2003ರ ಏಪ್ರಿಲ್ 10ರಂದು ಈ ಹಿಂದೆಗೆತವು ಜಾರಿಗೆ ಬಂತು. ಇದರಿಂದಾಗಿ ಉತ್ತರ ಕೊರಿಯಾ ದೇಶವು ಒಡಂಬಡಿಕೆಯಿಂದ ಹಿಂದೆಸರಿದ ಮೊಟ್ಟಮೊದಲ ದೇಶವೆನಿಸಿಕೊಂಡಿತು.[೪೦] ಹಿಂದೊಮ್ಮೆ, 1993ರ ಮಾರ್ಚ್ 12ರಂದು ಉತ್ತರ ಕೊರಿಯಾವು ಹಿಂದೆಗೆತವನ್ನು ಪ್ರಕಟಿಸಿತ್ತು. ಆದರೆ ಅದು ಜಾರಿಗೆ ಬರುವುದಕ್ಕೆ ಮುಂಚೆಯೇ ಆ ಸೂಚನೆಯನ್ನು ಅದು ರದ್ದುಮಾಡಿತು.[೪೧]
2005ರ ಫೆಬ್ರುವರಿ 10ರಂದು, ತಾನು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದಾಗಿ ಬಹಿರಂಗವಾಗಿ ಘೋಷಿಸಿದ ಉತ್ತರ ಕೊರಿಯಾ, ಸದರಿ ವಿವಾದಾಂಶಕ್ಕೆ ಸಂಬಂಧಿಸಿದಂತೆ ಒಂದು ರಾಜತಾಂತ್ರಿಕ ಪರಿಹಾರವನ್ನು ಕಂಡುಹಿಡಿಯಲು ಚೀನಾದಿಂದ ಏರ್ಪಡಿಸಲ್ಪಟ್ಟಿದ್ದ ಆರು-ಸಹಯೋಗಿಗಳ ಮಾತುಕತೆಗಳಿಂದ ಹೊರನಡೆಯಿತು. ಈ ವಿವಾದಾಂಶಕ್ಕೆ ಸಂಬಂಧಿಸಿದಂತೆ ಉತ್ತರ ಕೊರಿಯಾದ ವಿದೇಶಾಂಗ ವ್ಯವಹಾರದ ಇಲಾಖೆಯು ಹೇಳಿಕೆಯೊಂದನ್ನು ನೀಡಿ, "ಪರಮಾಣು ಪ್ರಸರಣ-ಮಾಡದಿರುವಿಕೆಯ ಒಡಂಬಡಿಕೆಯಿಂದ ಹೊರನಡೆಯುವ ದೃಢನಿಶ್ಚಯದ ಕ್ರಮವನ್ನಾಗಲೇ ನಾವು ತೆಗೆದುಕೊಂಡಿದ್ದೆವು ಮತ್ತು DPRKಯನ್ನು [ಡೆಮಾಕ್ರಟಿಕ್ ಪೀಪಲ್'ಸ್ ರಿಪಬ್ಲಿಕ್ ಆಫ್ ಕೊರಿಯಾ] ಪ್ರತ್ಯೇಕಿಸಲು ಹಾಗೂ ನಿಗ್ರಹಿಸಲು ಬುಷ್ ಆಡಳಿತವು ಎಂದೆಂದಿಗೂ ಹಮ್ಮಿಕೊಂಡಿದ್ದ ಮುಚ್ಚುಮರೆಯಿಲ್ಲದ ಕಾರ್ಯನೀತಿಯೊಂದಿಗೆ ಸಮರ್ಥವಾಗಿ-ಹೆಣಗಾಡಲು, ಸ್ವಯಂ-ರಕ್ಷಣೆಗಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ನಾವು ತಯಾರಿಸಿದ್ದೆವು" ಎಂದು ತಿಳಿಸಿತು. ಆರು-ಸಹಯೋಗಿಗಳ ಮಾತುಕತೆಗಳು 2005ರ ಜುಲೈನಲ್ಲಿ ಪುನರಾರಂಭಗೊಂಡವು.
2005ರ ಸೆಪ್ಟೆಂಬರ್ 19ರಂದು, ಒಂದು ಪೂರ್ವಭಾವಿಯಾದ ಕರಾರಿಗೆ ತಾನು ಒಪ್ಪುವುದಾಗಿ ಉತ್ತರ ಕೊರಿಯಾವು ಘೋಷಿಸಿತು. ಈ ಕರಾರಿನ ಅಡಿಯಲ್ಲಿ, ಉತ್ತರ ಕೊರಿಯಾವು ಅಸ್ತಿತ್ವದಲ್ಲಿರುವ ತನ್ನೆಲ್ಲಾ ಪರಮಾಣು ಶಸ್ತ್ರಾಸ್ತ್ರಗಳು ಹಾಗೂ ಪರಮಾಣು ತಯಾರಿಕಾ ಸೌಲಭ್ಯಗಳನ್ನೂ ಕಸದತೊಟ್ಟಿಗೆ ಎಸೆದು, NPTಗೆ ಮತ್ತೊಮ್ಮೆ ಸೇರಿಕೊಂಡು, IAEA ಪರಿಶೀಲನಾಧಿಕಾರಿಯನ್ನು ಮತ್ತೆ ಸೇರಿಸಿಕೊಳ್ಳಬೇಕಿತ್ತು. 1994ರ ಸಮ್ಮತಿಸಲ್ಪಟ್ಟ ಆಧಾರ ಚೌಕಟ್ಟಿನ ಅನುಸಾರ, ಉತ್ತರ ಕೊರಿಯಾದ ಸ್ಥಳಜನ್ಯ ಪರಮಾಣು ಶಕ್ತಿ ಸ್ಥಾವರದ ಕಾರ್ಯಸೂಚಿಯನ್ನು ಬದಲಾಯಿಸಲು ಲಘು ನೀರಿನ ರಿಯಾಕ್ಟರುಗಳ ಪೂರೈಕೆ ಮಾಡುವ ಕಷ್ಟಕರ ವಿವಾದಾಂಶವನ್ನು, ಭವಿಷ್ಯದ ಚರ್ಚೆಗಳಲ್ಲಿ ಪರಿಹರಿಸಲ್ಪಡಲೆಂದು ಬಿಡಲಾಯಿತು.[೪೨] ಮಾರನೆಯ ದಿನದಂದು ಉತ್ತರ ಕೊರಿಯಾವು ತನ್ನ ಚಿರಪರಿಚಿತ ದೃಷ್ಟಿಕೋನವನ್ನು ಪುನರುಚ್ಚರಿಸುತ್ತಾ, ತನಗೆ ಒಂದು ಲಘು ನೀರಿನ ರಿಯಾಕ್ಟರನ್ನು ಪೂರೈಕೆ ಮಾಡುವವರೆಗೂ ತನ್ನ ಪರಮಾಣು ಶಸ್ತ್ರಾಸ್ತ್ರ ಸಂಗ್ರಹವನ್ನು ತಾನು ನಾಶಮಾಡುವುದಿಲ್ಲವೆಂದೂ ಮತ್ತು NPTಯನ್ನು ಮತ್ತೆ ಸೇರಿಕೊಳ್ಳುವುದಿಲ್ಲವೆಂದೂ ತಿಳಿಸಿತು.[೪೩]
2006ರ ಅಕ್ಟೋಬರ್ 2ರಂದು, ಉತ್ತರ ಕೊರಿಯಾದ ವಿದೇಶಾಂಗ ಸಚಿವನು, ತನ್ನ ದೇಶವು "ಸದ್ಯದಲ್ಲಿಯೇ" ಒಂದು ಪರಮಾಣು ಪರೀಕ್ಷೆಯನ್ನು ನಿರ್ವಹಿಸಲು ಯೋಜಿಸುತ್ತಿದೆ ಎಂದು ತಿಳಿಸಿದನಾದರೂ, ಅದು ಯಾವಾಗ ಎಂಬ ಮಾಹಿತಿ ಹೊರಬರಲಿಲ್ಲ.[೪೪] 2006ರ ಅಕ್ಟೋಬರ್ 9ರ ಸೋಮವಾರದಂದು 01:35:27ನಷ್ಟು (UTC) ವೇಳೆಗೆ, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಭೂವೈಜ್ಞಾನಿಕ ಸಮೀಕ್ಷೆಯು ಉತ್ತರ ಕೊರಿಯಾದ ಕಿಮ್ಚೇಕ್‌ನ ಉತ್ತರಕ್ಕೆ 70 ಕಿಮೀಗಳಷ್ಟು (45 ಮೈಲುಗಳು) ದೂರದಲ್ಲಿರುವ ಪ್ರದೇಶದಲ್ಲಿ 4.2ನಷ್ಟು ಪ್ರಮಾಣದ ಭೂಕಂಪ ಸಂಬಂಧಿ ಘಟನೆಯೊಂದನ್ನು ಪತ್ತೆಮಾಡಿ, ಪರಮಾಣು ಪರೀಕ್ಷೆಯೊಂದರ ಸೂಚನೆಯನ್ನು ನೀಡಿತು. ಇದಾದ ಕೆಲವೇ ಸಮಯದಲ್ಲಿ, ತಾವು ಪರಮಾಣು ವಿದಳನ ಉಪಕರಣವೊಂದರ ಒಂದು ಯಶಸ್ವೀ ಭೂಗತ ಪರೀಕ್ಷೆಯನ್ನು ಸಂಪೂರ್ಣಗೊಳಿಸಿದ್ದಾಗಿ ಉತ್ತರ ಕೊರಿಯಾದ ಸರ್ಕಾರವು ಪ್ರಕಟಿಸಿತು.
ಉತ್ತರ ಕೊರಿಯಾವು NPTಯನ್ನು ಬಿಡಲು ಕಾರಣವಾದ ಒಂದು ಪುಷ್ಟೀಕರಿಸಿದ ಯುರೇನಿಯಂ ಶಸ್ತ್ರಾಸ್ತ್ರಗಳ ಕಾರ್ಯಸೂಚಿಯನ್ನು ಉತ್ತರ ಕೊರಿಯಾವು ಅಭಿವೃದ್ಧಿಪಡಿಸುತ್ತಿದೆ ಎಂಬುದಾಗಿ ತಿಳಿಸಿದ 2002ರ CIA ವರದಿಗಳು, ಗುಪ್ತಚರ ಸುದ್ದಿಸಂಗ್ರಹವನ್ನು ಉತ್ಪ್ರೇಕ್ಷಿಸಿದ್ದವು ಅಥವಾ ತಪ್ಪಾಗಿ ಅರ್ಥೈಸಿದ್ದವು ಎಂದು 2007ರಲ್ಲಿ ವಾಷಿಂಗ್ಟನ್‌ನಿಂದ ಬಂದ ವರದಿಯು ಸೂಚಿಸಿತು.[೪೫][೪೬][೪೭][೪೮] ಮತ್ತೊಂದೆಡೆ ಈ ಪತ್ರಿಕಾ ಆಪಾದನೆಗಳನ್ನೂ ಹೊರತುಪಡಿಸಿ ನೋಡಿದಾಗ, ಯುರೇನಿಯಂ ಪ್ರಯತ್ನವೊಂದರ ಅಸ್ತಿತ್ವವನ್ನು ಸೂಚಿಸುವ ಕೆಲವೊಂದು ಮಾಹಿತಿಯು ಸಾರ್ವಜನಿಕ ದಾಖಲೆಯಲ್ಲಿ ಉಳಿದುಕೊಂಡಿದೆ. ಕೆಲವೊಂದು ವಿಮರ್ಶಕರು ಕಳವಳ ವ್ಯಕ್ತಪಡಿಸುವಂತೆ, ಉತ್ತರ ಕೊರಿಯಾದ ಹಠವಾದಿತನಕ್ಕೆ ಎದುರಾಗಿ ಪಯೋನ್‌ಗ್ಯಾಂಗ್‌ನ ಯುರೇನಿಯಂ ಕಾರ್ಯಸೂಚಿಯ ನಾಶಮಾಡುವಿಕೆಯನ್ನು ಪರಿಶೀಲಿಸುವ ಪ್ರಯತ್ನವನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಬಿಡುತ್ತಿವೆ ಎಂಬುದನ್ನು ಸಮರ್ಥಿಸುವ ದೃಷ್ಟಿಯಿಂದ ಈ ಪತ್ರಿಕಾ ಆಪಾದನೆಗಳು ಮೋಸದ ಯೋಜನೆಯಂತೆ ಹೂಡಲ್ಪಟ್ಟಿದ್ದವು. ಉತ್ತರ ಕೊರಿಯಾದ ಮೊದಲ ಉಪ ಮಂತ್ರಿ ಕಾಂಗ್ ಸೊಕ್ ಜು ಎಂಬಾತ ಯುರೇನಿಯಂ ಪುಷ್ಟೀಕರಣ ಕಾರ್ಯಸೂಚಿಯೊಂದರ ಅಸ್ತಿತ್ವವನ್ನು ಒಂದು ಹಂತದಲ್ಲಿ ಒಪ್ಪಿಕೊಂಡ ಅಂಶವನ್ನು ಸಂಪೂರ್ಣವಾಗಿ ಹೊರತುಪಡಿಸಿ, ಪಾಕಿಸ್ತಾನದ ಆಗಿನ-ಅಧ್ಯಕ್ಷನಾದ ಮುಷರಫ್ ವಿಷಯವೊಂದನ್ನು ಹೊರಗೆಡಹುತ್ತಾ, ಯುರೇನಿಯಂ ಪುಷ್ಟೀಕರಣಕ್ಕಾಗಿ ವಿನ್ಯಾಸಗೊಳಿಸಲಾಗಿದ್ದ ಹಲವಾರು ಅನಿಲದ ಅಪಕೇಂದ್ರಕಗಳನ್ನು (ಗ್ಯಾಸ್ ಸೆಂಟ್ರಿಫ್ಯೂಜ್‌ಗಳನ್ನು) A.Q. ಖಾನ್ ಪ್ರಸರಣ ಜಾಲವು ಉತ್ತರ ಕೊರಿಯಾಕ್ಕೆ ಒದಗಿಸಿತ್ತು ಎಂದು ಹೇಳಿದ. ಇದರ ಜೊತೆಗೆ, ಲಿಬಿಯಾದ WMD ಕಾರ್ಯಸೂಚಿಗಳನ್ನು ನಾಶಪಡಿಸುವ ಕಾರ್ಯದಲ್ಲಿ ದೊರೆತ ಸಾಕ್ಷ್ಯವು ಉತ್ತರ ಕೊರಿಯಾದ ಕಡೆಗೆ ಬೆರಳು ಮಾಡಿ ತೋರಿಸಿ, ಅದು ಲಿಬಿಯಾದ ಯುರೇನಿಯಂ ಹೆಕ್ಸಾಫ್ಲೂರೈಡ್‌ನ (UF6) ಒಂದು ಮೂಲವೆಂಬಂತೆ—ಇದು ಒಂದು ವೇಳೆ ನಿಜವೇ ಆಗಿದ್ದಲ್ಲಿ, ಅಪಕೇಂದ್ರಕ ಪುಷ್ಟೀಕರಣಕ್ಕೆ ಸಂಬಂಧಿಸಿದ ಪೂರಕ ಸಾಮಗ್ರಿಯನ್ನು ಉತ್ಪಾದಿಸುವುದಕ್ಕಾಗಿರುವ ಒಂದು ಯುರೇನಿಯಂ ಪರಿವರ್ತನಾ ಸೌಕರ್ಯವನ್ನು ಉತ್ತರ ಕೊರಿಯಾವು ಹೊಂದಿದೆ ಎಂಬ ಅರ್ಥವನ್ನು ನೀಡುತ್ತದೆ ಎಂಬಂತೆ U.S. ಅಧಿಕಾರಿಗಳು ಸೂಚ್ಯವಾಗಿ ಹೇಳಿದ್ದಾರೆ ಎಂದು ಪತ್ರಿಕಾ ವರದಿಗಳು ಉಲ್ಲೇಖಿಸಿದವು.[೪೯]
ಇರಾನ್
[ಬದಲಾಯಿಸಿ]ಇರಾನ್ ದೇಶವು NPTಗೆ ಒಂದು ಸಹಭಾಗಿಯಾಗಿದೆಯಾದರೂ, ತನ್ನ NPT ರಕ್ಷಣೋಪಾಯಗಳ ಒಪ್ಪಂದದೊಂದಿಗೆ ಅದು ಅನನುವರ್ತನೆಯಲ್ಲಿರುವಂತೆ ಕಂಡುಬಂತು ಹಾಗೂ ಅದರ ಪರಮಾಣು ಕಾರ್ಯಸೂಚಿಯ ಸ್ಥಿತಿಗತಿಯು ವಿವಾದದಲ್ಲಿ ಉಳಿದುಕೊಂಡಿದೆ. 2003ರ ನವೆಂಬರ್‌ನಲ್ಲಿ IAEAಯ ಪ್ರಧಾನ ನಿರ್ದೇಶಕನಾದ ಮೊಹಮದ್ ಎಲ್‌ಬರಾಡೇ ಎಂಬಾತ ಮಾತನಾಡುತ್ತಾ, ಇರಾನ್ ದೇಶವು ತನ್ನ ಯುರೇನಿಯಂ ಪುಷ್ಟೀಕರಣ ಕಾರ್ಯಸೂಚಿಯನ್ನು ಘೋಷಿಸಲು ವಿಫಲಗೊಂಡಿರುವುದೂ ಸೇರಿದಂತೆ, ತನ್ನ ರಕ್ಷಣೋಪಾಯಗಳ ಕಟ್ಟುಪಾಡುಗಳನ್ನು ಈಡೇರಿಸುವಲ್ಲಿ ಪದೇಪದೇ ಮತ್ತು ಒಂದು ವಿಸ್ತರಿಸಲ್ಪಟ್ಟ ಅವಧಿಯ ಮೇಲೆ ವಿಫಲಗೊಂಡಿದೆ ಎಂದು ತಿಳಿಸಿದ.[೧೫] EU3-ನೇತೃತ್ವದ ಸುಮಾರು ಎರಡು ವರ್ಷಗಳಷ್ಟು ಅವಧಿಯ ರಾಜತಾಂತ್ರಿಕ ಪ್ರಯತ್ನಗಳ ನಂತರ ಮತ್ತು ತನ್ನ ಪುಷ್ಟೀಕರಣ ಕಾರ್ಯಸೂಚಿಯನ್ನು[೫೦] ಇರಾನ್ ದೇಶವು ತಾತ್ಕಾಲಿಕವಾಗಿ ರದ್ದುಗೊಳಿಸಿದ ನಂತರ, IAEA ಕಟ್ಟುಪಾಡಿನ XII.C ಕಲಮಿನ ಅಡಿಯಲ್ಲಿ ಕಾರ್ಯನಿರ್ವಹಿಸುವ IAEA ಕಾರ್ಯಾಧ್ಯಕ್ಷರ ಮಂಡಳಿಯು, ಮತ ಚಲಾಯಿಸದೆ ತಟಸ್ಥವಾಗಿರುವ 12 ನಿದರ್ಶನಗಳೊಂದಿಗಿನ ಒಂದು ಅಪರೂಪದ ಬಹುಮತಾಭಿಪ್ರಾಯವಲ್ಲದ ತೀರ್ಮಾನದಲ್ಲಿ, IAEA ರಕ್ಷಣೋಪಾಯಗಳ ಒಪ್ಪಂದದೊಂದಿಗೆ ಈ ವಿಫಲತೆಗಳು ಅನನುವರ್ತನೆಯನ್ನು ರೂಪಿಸಿದವು ಎಂಬುದನ್ನು ಕಂಡುಕೊಂಡಿತು.[೧೬] ಇದನ್ನು UN ಭದ್ರತಾ ಮಂಡಳಿಗೆ 2006ರಲ್ಲಿ[೫೧] ವರದಿ ಮಾಡಲಾಯಿತು. ಇದಾದ ನಂತರ ಇರಾನ್ ದೇಶವು ತನ್ನ ಪುಷ್ಟೀಕರಣ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಭದ್ರತಾ ಮಂಡಳಿಯು ಒಂದು ನಿರ್ಣಯವನ್ನು ಅನುಮೋದಿಸಿತು.[೫೨] ಇದಕ್ಕೆ ಪ್ರತಿಯಾಗಿ, ಇರಾನ್ ದೇಶವು ತನ್ನ ಪುಷ್ಟೀಕರಣ ಕಾರ್ಯಸೂಚಿಯನ್ನು ಪುನರಾರಂಭಿಸಿತು.[೫೩]
ಇರಾನ್‌ನಲ್ಲಿನ ಘೋಷಿಸಲ್ಪಟ್ಟ ಪರಮಾಣು ಸಾಮಗ್ರಿಯ ಮಾರ್ಗ-ಬದಲಾಯಿಸದಿರುವಿಕೆಯನ್ನು ಪರಿಶೀಲಿಸುವಲ್ಲಿ IAEAಯು ಸಮರ್ಥವಾಗಿದ್ದು, ಘೋಷಿಸಲ್ಪಡದ ಕಾರ್ಯಚಟುವಟಿಕೆಗಳ ಗೈರುಹಾಜರಿಯನ್ನು ಪರಿಶೀಲಿಸುವುದರ ಕುರಿತಾದ ತನ್ನ ಕೆಲಸವನ್ನು ಅದು ಮುಂದುವರಿಸುತ್ತಿದೆ.[೫೪] ಇರಾನ್‌ನಿಂದ ಜನ್ಯವಾದ ರಾಷ್ಟ್ರಗಳೆಂದು ತಮ್ಮನ್ನು ಪ್ರತಿಪಾದಿಸಿಕೊಂಡ ಕೆಲವೊಂದು ಸದಸ್ಯ ರಾಷ್ಟ್ರಗಳಿಂದ ಒದಗಿಸಲ್ಪಟ್ಟ ದಸ್ತಾವೇಜುಗಳ ಆಧಾರದ ಮೇಲೆ, ಶಸ್ತ್ರಾಸ್ತ್ರೀಕರಣದ "ಆರೋಪಿಸಲ್ಪಟ್ಟ ಅಧ್ಯಯನಗಳ" ಮೇಲೆ ಗಮನಹರಿಸಲು ತಾನು ಕಾರ್ಯನಿರ್ವಹಿಸುತ್ತಿರುವುದಾಗಿಯೂ ಸಹ 2008ರ ಫೆಬ್ರುವರಿಯಲ್ಲಿ IAEA ವರದಿ ಮಾಡಿತು. ಆಪಾದನೆಗಳನ್ನು "ಆಧಾರ ರಹಿತ" ಎಂಬುದಾಗಿ ಮತ್ತು ದಸ್ತಾವೇಜುಗಳನ್ನು "ಕಟ್ಟುಕತೆಗಳು" ಎಂಬುದಾಗಿ ಹೇಳುವ ಮೂಲಕ ಅವನ್ನು ಇರಾನ್ ತಿರಸ್ಕರಿಸಿತು.[೫೫] "ಉಳಿದ ವಿವಾದಾಂಶಗಳಿಗೆ ಸಂಬಂಧಿಸಿದಂತೆ ತನಿಖಾಸಂಸ್ಥೆಯೊಂದಿಗೆ ಇರಾನ್ ಸಹಕಾರ ನೀಡಿಲ್ಲ ... ಇರಾನ್‌ನ ಪರಮಾಣು ಕಾರ್ಯಸೂಚಿಗೆ ಸೇನಾ ಆಯಾಮಗಳು ಇರುವುದರ ಸಾಧ್ಯತೆಯನ್ನು ಹೊರಗಿಡುವಲ್ಲಿ ಇದನ್ನು ಸ್ಪಷ್ಟೀಕರಿಸುವುದು ಅಗತ್ಯವಾಗಿದೆ" ಎಂದು 2009ರ ಜೂನ್‌ನಲ್ಲಿ IAEAಯು ವರದಿಮಾಡಿತು.[೫೬] NPT ರಕ್ಷಣೋಪಾಯಗಳ ಕಟ್ಟುಪಾಡುಗಳ ತನ್ನ IIIನೇ ಕಲಮನ್ನು ಇರಾನ್ ದೇಶವು ಉಲ್ಲಂಘಿಸಿದೆ ಎಂದು ಅಮೆರಿಕಾ ಸಂಯುಕ್ತ ಸಂಸ್ಥಾನಗಳು ತೀರ್ಮಾನಕ್ಕೆ ಬಂದವು, ಮತ್ತು ಸಾಂದರ್ಭಿಕ ಸಾಕ್ಷ್ಯವನ್ನು ಅವಲಂಬಿಸಿ ತಮ್ಮ ವಾದವನ್ನು ಮುಂದುವರಿಸುತ್ತಾ, ಇರಾನ್‌ನ ಪುಷ್ಟೀಕರಣ ಕಾರ್ಯಸೂಚಿಯು ಶಸ್ತ್ರಾಸ್ತ್ರಗಳ ಉದ್ದೇಶಕ್ಕಾಗಿ ಮೀಸಲಾಗಿತ್ತು ಮತ್ತು ಈ ಕಾರಣದಿಂದ ಇರಾನ್‌ನ ಪ್ರಸರಣ ಮಾಡದಿರುವಿಕೆಯ ಕಟ್ಟುಪಾಡುಗಳ IIನೇ ಕಲಮನ್ನು ಅದು ಉಲ್ಲಂಘಿಸಿದೆ ಎಂದು ತಿಳಿಸಿದವು.[೫೭] 2007ರ ನವೆಂಬರ್‌ನಲ್ಲಿ ನಡೆದ USನ ನ್ಯಾಷನಲ್ ಇಂಟೆಲಿಜೆನ್ಸ್ ಎಸ್ಟಿಮೇಟ್ (NIE) ನಂತರದಲ್ಲಿ ಒಂದು ತೀರ್ಮಾನಕ್ಕೆ ಬಂದು, ಒಂದು ಸಕ್ರಿಯವಾದ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಸೂಚಿಯನ್ನು 2003ರ ಶರತ್ಕಾಲದಲ್ಲಿ ಇರಾನ್ ನಿಲುಗಡೆ ಮಾಡಿತ್ತು ಮತ್ತು ಅದು 2007ರ ಮಧ್ಯದ ಅವಧಿಯವರೆಗೂ ನಿಲುಗಡೆಯ ಸ್ಥಿತಿಯಲ್ಲಿಯೇ ಉಳಿದಿತ್ತು ಎಂದು ತಿಳಿಸಿತು. ಆದಾಗ್ಯೂ, ಇರಾನ್ 2003ರಲ್ಲಿ ವಾಸ್ತವವಾಗಿ ನಿಲ್ಲಿಸಿದ ಚಟುವಟಿಕೆಗಳು ಕೇವಲ "ಪರಮಾಣು ಶಸ್ತ್ರಾಸ್ತ್ರ ವಿನ್ಯಾಸ ಮತ್ತು ಶಸ್ತ್ರಾಸ್ತ್ರೀಕರಣದ ಕೆಲಸವಾಗಿತ್ತು ಹಾಗೂ ಯುರೇನಿಯಂ ಪರಿವರ್ತನೆ-ಸಂಬಂಧಿತ ಮತ್ತು ಯುರೇನಿಯಂ ಪುಷ್ಟೀಕರಣ-ಸಂಬಂಧಿತ ರಹಸ್ಯ ಕೆಲಸವಾಗಿತ್ತು" ಎಂಬುದನ್ನೂ ಸಹ NIEನ "ಪ್ರಮುಖ ತೀರ್ಪುಗಳು" ನಿಚ್ಚಳಗೊಳಿಸಿದವು. ಇವು ಅಷ್ಟು ಹೊತ್ತಿಗಾಗಲೇ ಪತ್ರಿಕಾ ಮಾಧ್ಯಮಕ್ಕೆ ಸೋರಿಕೆಯಾಗದಿದ್ದ ಮತ್ತು IAEA ತನಿಖೆಗಳ ಕೇಂದ್ರಬಿಂದುವಾಗಿ ಮಾರ್ಪಟ್ಟಿದ್ದ ಇರಾನ್‌ನ ಪರಮಾಣು ಶಸ್ತ್ರಾಸ್ತ್ರಗಳ ಪ್ರಯತ್ನದ ಕುರಿತಾದ ಅಂಶಗಳಾಗಿದ್ದವು.[೫೮] ನತಾಂಜ್‌ನಲ್ಲಿ ಇರಾನ್ ಹೊಂದಿದ್ದ ಯುರೇನಿಯಂ ಪುಷ್ಟೀಕರಣ ಕಾರ್ಯಸೂಚಿಯು- ಮತ್ತು ಪ್ಲುಟೋನಿಯಂ ತಯಾರಿಕೆಗಾಗಿ ಸೂಕ್ತವಾಗಿರುವಂತಿದ್ದ ಅರಕ್‌ನಲ್ಲಿನ ಒಂದು ಬೃಹತ್ ನೀರಿನ ರಿಯಾಕ್ಟರಿನ ಕುರಿತಾದ ಅದರ ಮುಂದುವರಿಯುತ್ತಿರುವ ಕೆಲಸವು- ಬಹಳ ವರ್ಷಗಳ ಹಿಂದೆಯೇ ರಹಸ್ಯವಾಗಿ ಪ್ರಾರಂಭವಾಗಿದ್ದರಿಂದ, ಅಂದರೆ, NIE ಚರ್ಚಿಸಿದ ಅದೇ ಶಸ್ತ್ರಾಸ್ತ್ರೀಕರಣದ ಕೆಲಸದೊಂದಿಗೆ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿರುವ ಕೆಲಸದೊಂದಿಗೆ ಕೂಡಿಕೊಂಡು ಪ್ರಾರಂಭವಾಗಿದ್ದರಿಂದ, ವಿದಳನೀಯ ಸಾಮಗ್ರಿ ತಯಾರಿಕಾ ಸಾಮರ್ಥ್ಯಗಳಿಗೆ ಸಂಬಂಧಿಸಿದ ಇರಾನ್‌ನ ಮುಂದುವರಿಸಲ್ಪಟ್ಟ ಅಭಿವೃದ್ಧಿಯನ್ನು ಅನೇಕ ವೀಕ್ಷಕರು ಸ್ಪಷ್ಟವಾಗಿ ಕಳವಳಕಾರಿಯಾಗಿ ಕಂಡರು. ನಿರ್ದಿಷ್ಟವಾಗಿ ಏಕೆಂದರೆ, ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿದಳನೀಯ ಸಾಮಗ್ರಿಯ ಲಭ್ಯತೆಯು ಒಂದು ಪ್ರಮುಖ ತೊಡಕಾಗಿದೆ ಮತ್ತು ಶಸ್ತ್ರಾಸ್ತ್ರಗಳ ಕಾರ್ಯಸೂಚಿಯೊಂದಕ್ಕೆ "ಗತಿ ನಿಯಾಮಕ ಅಂಶ"ವಾಗಿದೆ ಎಂದು ಬಹಳ ಕಾಲದಿಂದಲೂ ಅರ್ಥೈಸಲ್ಪಟ್ಟಿರುವುದರಿಂದ, ಇರಾನ್ ದೇಶವು ತನ್ನ ಶಸ್ತ್ರಾಸ್ತ್ರೀಕರಣ ಕಾರ್ಯವನ್ನು ರದ್ದುಗೊಳಿಸಿದೆ ಎಂಬ ವರದಿಯು ಹೆಚ್ಚಿನ ಅರ್ಥವನ್ನೇನೂ ಕೊಡದಿರಬಹುದು.[೫೯] U.S. ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕನಾದ ಮೈಕ್ ಮೆಕ್‌ಕೊನೆಲ್ ಇದನ್ನು ಮಂಡಿಸಿರುವಂತೆ, ಇರಾನ್ ದೇಶವು ರದ್ದುಗೊಳಿಸಿತೆಂದು ಹೇಳಲಾದ ಅದರ ಕೆಲಸದ ಅಂಶಗಳು ಈ ರೀತಿಯಾಗಿ "ಪ್ರಾಯಶಃ ಕಾರ್ಯಸೂಚಿಯೊಂದರ ಅತ್ಯಂತ ಕಡಿಮೆ ಪ್ರಾಮುಖ್ಯತೆಯ ಭಾಗವಾಗಿದ್ದವು."[೬೦]
NPTಯ ಅಡಿಯಲ್ಲಿ ಶಾಂತಿಯುತ ಉದ್ದೇಶಗಳಿಗಾಗಿ ಯುರೇನಿಯಂನ್ನು ಪುಷ್ಟೀಕರಿಸುವ ಒಂದು ನ್ಯಾಯಸಮ್ಮತ ಹಕ್ಕನ್ನು ತಾನು ಹೊಂದಿರುವುದಾಗಿ ಇರಾನ್ ಹೇಳಿಕೊಳ್ಳುವುದೇ ಅಲ್ಲದೇ, "NPTಯ ಅಡಿಯಲ್ಲಿನ ಮತ್ತು ಇಂಟರ್‌ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿಯ ಅಡಿಯಲ್ಲಿನ ತನ್ನ ಕಟ್ಟುಪಾಡುಗಳಿಗೆ ಅನುಸಾರವಾಗಿ ತಾನು ನಿರಂತರವಾಗಿ ನಡೆದುಕೊಂಡಿರುವುದಾಗಿ" ಹೇಳುತ್ತದೆ.[೬೧]
ತನ್ನ ಪುಷ್ಟೀಕರಣ ಕಾರ್ಯಸೂಚಿಯು ತನ್ನ ನಾಗರಿಕ ಪರಮಾಣು ಶಕ್ತಿ ಕಾರ್ಯಸೂಚಿಯ ಅಂಗವಾಗಿದ್ದು, ಇದಕ್ಕೆ NPTಯ IVನೇ ಕಲಮಿನಡಿಯಲ್ಲಿ ಅವಕಾಶ ನೀಡಲಾಗಿದೆ ಎಂದೂ ಸಹ ಇರಾನ್ ಹೇಳಿಕೊಳ್ಳುತ್ತದೆ. IAEA ಜೊತೆಗಿನ ಇರಾನ್‌ನ ಮುಂದುವರಿಯುತ್ತಿರುವ ಸಹಕಾರವನ್ನು ಅಲಿಪ್ತ ಚಳವಳಿಯು ಸ್ವಾಗತಿಸಿದೆ ಮತ್ತು ಪರಮಾಣು ತಂತ್ರಜ್ಞಾನದ ಶಾಂತಿಯುತ ಬಳಕೆಗಳೆಡೆಗಿನ ಇರಾನ್‌ನ ಹಕ್ಕನ್ನು ಅದು ಮರುದೃಢೀಕರಿಸಿದೆ.[೬೨] ಇರಾನ್ ಮತ್ತು IAEA ನಡುವಿನ ಮುಂದುವರಿದ ಮಾತುಕತೆಯನ್ನು UN ಪ್ರಧಾನ ಕಾರ್ಯದರ್ಶಿಯಾದ ಬಾನ್ ಕಿ-ಮೂನ್ ಸ್ವಾಗತಿಸಿದ್ದು, ಸದರಿ ವಿವಾದಾಂಶಕ್ಕೆ ಸಂಬಂಧಿಸಿದಂತೆ ಒಂದು ಶಾಂತಿಯುತ ನಿರ್ಣಯ ಹೊರಹೊಮ್ಮಲಿ ಎಂದು ಕರೆನೀಡಿದ್ದಾನೆ.[೬೩]
ದಕ್ಷಿಣ ಆಫ್ರಿಕಾ
[ಬದಲಾಯಿಸಿ]ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವತಃ ಅಭಿವೃದ್ಧಿಪಡಿಸಿದ ಮತ್ತು ನಂತರ ಅವುಗಳನ್ನು ನಾಶಪಡಿಸಿದ ಏಕೈಕ ದೇಶವಾಗಿ ದಕ್ಷಿಣ ಆಫ್ರಿಕಾವನ್ನು ಇಲ್ಲಿ ವಿಶೇಷವಾಗಿ ಉಲ್ಲೇಖಿಸುವುದು ಅಗತ್ಯವಾಗಿದೆ. ಇದಕ್ಕೆ ಭಿನ್ನವಾಗಿ ನಡೆದುಕೊಂಡ ಹಿಂದಿನ ಸೋವಿಯೆಟ್ ರಾಷ್ಟ್ರಗಳಾದ ಉಕ್ರೈನ್, ಬೆಲಾರಸ್ ಹಾಗೂ ಕಜಖ್‌ಸ್ತಾನ್, ಹಿಂದಿನ USSRನಿಂದ ಪರಮಾಣು ಶಸ್ತ್ರಾಸ್ತ್ರಗಳನ್ನು ಪರಂಪರೆಯಿಂದ ಪಡೆದವು, ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರದ ರಾಷ್ಟ್ರಗಳಾಗಿ NPTಗೆ ಸಮ್ಮತಿ ಸೂಚಿಸಿದವು.
ಪ್ರತ್ಯೇಕತಾನೀತಿಯ ದಿನಗಳ ಕಾಲದಲ್ಲಿ, ದಕ್ಷಿಣ ಆಫ್ರಿಕಾದ ಶ್ವೇತವರ್ಣೀಯ ಸರ್ಕಾರವು ಕರಿಯರ ಪ್ರವರ್ಧಮಾನ ಹಾಗೂ ಸಾಮುದಾಯಿಕ ಸಿದ್ಧಾಂತದ ಬೆದರಿಕೆ ಈ ಎರಡರ ಕುರಿತಾದ ಒಂದು ಆಳವಾದ ಭಯವನ್ನು ಬೆಳೆಸಿಕೊಂಡಿತು. ಒಂದು ಅಂತಿಮ ನಿರೋಧಕವಾಗಿ ರಹಸ್ಯವಾದ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಸೂಚಿಯೊಂದು ಅಭಿವೃದ್ಧಿಗೊಳ್ಳಲು ಇದು ಕಾರಣವಾಯಿತು. ದಕ್ಷಿಣ ಆಫ್ರಿಕಾವು ಯುರೇನಿಯಂನ ಒಂದು ಬೃಹತ್ ಪೂರೈಕೆಯನ್ನು ಹೊಂದಿದ್ದು, ಅದು ದೇಶದ ಚಿನ್ನದ ಗಣಿಗಳಲ್ಲಿ ಗಣಿಗಾರಿಕೆಯಿಂದ ತೆಗೆಯಲ್ಪಡುತ್ತದೆ. ಪ್ರಿಟೋರಿಯಾ ಸಮೀಪದ ಪೆಲಿಂದಾಬಾದಲ್ಲಿ ಸರ್ಕಾರವು ಒಂದು ಪರಮಾಣು ಸಂಶೋಧನಾ ಸೌಕರ್ಯವನ್ನು ನಿರ್ಮಿಸಿದ್ದು, ಕೋಬರ್ಟ್‌ನಲ್ಲಿನ ಪರಮಾಣು ಶಕ್ತಿ ಸ್ಥಾವರಕ್ಕೆ ಸಂಬಂಧಿಸಿದ ಇಂಧನ ದರ್ಜೆಗಷ್ಟೇ ಅಲ್ಲದೇ, ಬಾಂಬ್ ತಯಾರಿಕೆಗೆ ಸಂಬಂಧಿಸಿದ ಶಸ್ತ್ರಾಸ್ತ್ರದ ದರ್ಜೆಗೆ ಯುರೇನಿಯಂ ಅಲ್ಲಿ ಪುಷ್ಟೀಕರಿಸಲ್ಪಟ್ಟಿತು.
ಅಂತರರಾಷ್ಟ್ರೀಯ ಒತ್ತಡದ ನಂತರ ಮತ್ತು ಸರ್ಕಾರವೊಂದರ ಬದಲಾವಣೆಯು ಸನ್ನಿಹಿತವಾದಾಗ, ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ಸಂಬಂಧಿಸಿದ ದಕ್ಷಿಣ ಆಫ್ರಿಕಾದ ರಾಯಭಾರಿಯಾದ ಹ್ಯಾರಿ ಶ್ವಾರ್ಜ್ 1991ರಲ್ಲಿ ಪರಮಾಣು ಪ್ರಸರಣ-ಮಾಡದಿರುವ ಒಡಂಬಡಿಕೆಗೆ ಸಹಿಹಾಕಿದ. 1993ರಲ್ಲಿ, ಆಗಿನ ಅಧ್ಯಕ್ಷನಾದ ಫ್ರೆಡೆರಿಕ್ ವಿಲ್ಲೆಮ್ ಡೆ ಕ್ಲೆರ್ಕ್ ಎಂಬಾತ, ತನ್ನ ದೇಶವು ಒಂದು ಸೀಮಿತವಾದ ಪರಮಾಣು ಶಸ್ತ್ರಾಸ್ತ್ರದ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿದುದನ್ನು ಒಪ್ಪಿಕೊಂಡ. NPTಯಲ್ಲಿ ಸಮ್ಮತಿಯನ್ನು ಸೂಚಿಸುವುದಕ್ಕೆ ಮುಂಚಿತವಾಗಿ ಈ ಶಸ್ತ್ರಾಸ್ತ್ರಗಳನ್ನು ತರುವಾಯ ನಾಶಪಡಿಸಲಾಯಿತು. ದಕ್ಷಿಣ ಆಫ್ರಿಕಾವು ನಂತರ ಪರಿಶೀಲನೆಗಾಗಿ IAEAಗೆ ತನ್ನನ್ನು ತೆರೆದಿರಿಸಿಕೊಂಡಿತು. 1994ರಲ್ಲಿ IAEAಯು ತನ್ನ ಕೆಲಸವನ್ನು ಸಂಪೂರ್ಣಗೊಳಿಸಿತು ಮತ್ತು ಈ ದೇಶವು ತನ್ನ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಸೂಚಿಯನ್ನು ಸಂಪೂರ್ಣವಾಗಿ ನಾಶಪಡಿಸಿದೆ ಎಂದು ಘೋಷಿಸಿತು.
ಲಿಬಿಯಾ
[ಬದಲಾಯಿಸಿ]ಪರಮಾಣು ಪ್ರಸರಣ-ಮಾಡದಿರುವ ಒಡಂಬಡಿಕೆಯನ್ನು ಲಿಬಿಯಾ ದೇಶವು ಸಹಿಮಾಡಿತ್ತು ಮತ್ತು ಊರ್ಜಿತಗೊಳಿಸಿತ್ತು ಹಾಗೂ IAEA ಪರಮಾಣು ರಕ್ಷಣೋಪಾಯಗಳ ಪರಿಶೀಲನೆಗಳಿಗೆ ಅದು ಒಳಪಟ್ಟಿತ್ತು. ಆದರೆ, ತನ್ನ NPT ಕಟ್ಟುಪಾಡುಗಳ ಉಲ್ಲಂಘನೆ ಮಾಡುವ ಮೂಲಕ ಒಂದು ರಹಸ್ಯವಾದ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯ ಕಾರ್ಯಸೂಚಿಯನ್ನು ಅದು ನಡೆಸಿತು. ಈ ರಹಸ್ಯ ಕಾರ್ಯದಲ್ಲಿ, ಚೀನಾದಲ್ಲಿ ಹುಟ್ಟಿಕೊಂಡವು ಎಂದು ಹೇಳಲ್ಪಟ್ಟ ವಿನ್ಯಾಸಗೊಳಿಸಲಾದ ವಾಸ್ತವಿಕ ಪರಮಾಣು ಶಸ್ತ್ರಾಸ್ತ್ರಗಳೂ ಸೇರಿದಂತೆ A.Q. ಖಾನ್ ಪ್ರಸರಣ ಜಾಲದಿಂದ ಒದಗಿಸಲ್ಪಟ್ಟ ಸಾಮಗ್ರಿ ಹಾಗೂ ತಂತ್ರಜ್ಞಾನಗಳೂ ಬಳಕೆಯಾದವು. ತನ್ನ WMD ಕಾರ್ಯಸೂಚಿಗಳನ್ನು ಸಮರ್ಥವಾಗಿ ವರ್ಜಿಸುವುದನ್ನು ಕುರಿತಂತೆ, 2003ರ ಮಾರ್ಚ್‌ನಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಹಾಗೂ ಯುನೈಟೆಡ್ ಕಿಂಗ್‌ಡಂ ಜೊತೆಯಲ್ಲಿ ರಹಸ್ಯವಾದ ಸಂಧಾನದ ಮಾತುಕತೆಗಳನ್ನು ಲಿಬಿಯಾ ಶುರುಮಾಡಿತು. 2003ರ ಅಕ್ಟೋಬರ್‌ನಲ್ಲಿ, ಮಲೇಷಿಯಾದಿಂದ ಹಡಗಿನ ಮೂಲಕ ಕಳಿಸಲ್ಪಟ್ಟ ಪಾಕಿಸ್ತಾನಿ-ವಿನ್ಯಾಸದ ಅಪಕೇಂದ್ರಕ ಭಾಗಗಳ ಒಂದು ಸರಕು ರವಾನೆಯ ಮೇಲೆ ಹೇರಲಾದ ತಡೆಯಾಜ್ಞೆಯಿಂದ ಲಿಬಿಯಾವು ಕಸಿವಿಸಿಗೊಳಗಾಯಿತು. ಈ ಸಾಗಣೆಯೂ ಸಹ A. Q. ಖಾನ್‌ನ ಪ್ರಸರಣ ವಲಯದ ಒಂದು ಭಾಗವಾಗಿತ್ತು. ತನ್ನೆಲ್ಲಾ WMD ಕಾರ್ಯಸೂಚಿಗಳನ್ನೂ ವರ್ಜಿಸಲು ತಾನು ಒಪ್ಪಿರುವುದಾಗಿ 2003ರ ಡಿಸೆಂಬರ್‌ನಲ್ಲಿ ಘೋಷಿಸಿದ ಲಿಬಿಯಾ, ಈ ಪ್ರಕ್ರಿಯೆಯಲ್ಲಿ ನೆರವಾಗಲೆಂದು ಹಾಗೂ ಅದರ ಸಮಾಪ್ತಿಯನ್ನು ಪರಿಶೀಲನೆ ನಡೆಸಲೆಂದು ತನ್ನ ದೇಶದೊಳಗೆ ಬರಲು U.S. ಹಾಗೂ ಬ್ರಿಟಿಷ್ ತಂಡಗಳಿಗೆ (ಮತ್ತು IAEA ಪರಿಶೀಲನಾಧಿಕಾರಿಗಳಿಗೂ ಸಹ) ಅನುಮತಿ ನೀಡಿತು. ಸುಧಾರಿತ SCUD ಕ್ಷಿಪ್ತ ಕ್ಷಿಪಣಿಗಳಿಗಾಗಿ ಮೀಸಲಾಗಿದ್ದ ಮೂಲಮಾದರಿಗಳನ್ನು ಒಳಗೊಂಡಂತೆ, ಪರಮಾಣು ಶಸ್ತ್ರಾಸ್ತ್ರಗಳ ವಿನ್ಯಾಸಗಳು, ಯುರೇನಿಯಂ ಪುಷ್ಟೀಕರಣಕ್ಕೆ ಸಂಬಂಧಿಸಿದ ಅನಿಲದ ಅಪಕೇಂದ್ರಕಗಳು, ಮತ್ತು ಇತರ ಉಪಕರಣಗಳನ್ನು ಲಿಬಿಯಾದಿಂದ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ತೆಗೆದುಹಾಕಿದವು. (ರಾಸಾಯನಿಕ ಶಸ್ತ್ರಾಸ್ತ್ರಗಳ ಸಮ್ಮೇಳನವನ್ನು ಲಿಬಿಯಾ ದೇಶವು ಸೇರುವುದರೊಂದಿಗೆ, ಲಿಬಿಯಾದ ರಾಸಾಯನಿಕ ಶಸ್ತ್ರಾಸ್ತ್ರಗಳ ದಾಸ್ತಾನುಗಳು ಮತ್ತು ರಾಸಾಯನಿಕ ಬಾಂಬ್‌ಗಳು ಕೂಡಾ ಅಂತರರಾಷ್ಟ್ರೀಯ ಪರಿಶೀಲನೆಯೊಂದಿಗೆ ತಾಣದಲ್ಲಿ ನಾಶಪಡಿಸಲ್ಪಟ್ಟವು.) ತನ್ನ IAEA ರಕ್ಷಣೋಪಾಯಗಳೊಂದಿಗಿನ ಲಿಬಿಯಾದ ಅನನುವರ್ತನೆಯನ್ನು U.N. ಭದ್ರತಾ ಮಂಡಳಿಗೆ ವರದಿ ಮಾಡಲಾಯಿತಾದರೂ, NPTಯ ರಕ್ಷಣೋಪಾಯಗಳಿಗೆ ಹಾಗೂ IIನೇ ಕಲಮಿಗೆ ಅನುಸಾರವಾಗಿ ಲಿಬಿಯಾ ಮರಳಿದ್ದಕ್ಕೆ ಅದು ಸ್ವಾಗತಿಸಲ್ಪಟ್ಟಿದ್ದರಿಂದಾಗಿ ಯಾವುದೇ ಕ್ರಮವನ್ನು ಭದ್ರತಾ ಮಂಡಳಿಯು ಕೈಗೊಳ್ಳಲಿಲ್ಲ.[೬೪]
ಒಡಂಬಡಿಕೆಯನ್ನು ತೊರೆಯುವಿಕೆ
[ಬದಲಾಯಿಸಿ]"ಈ ಒಡಂಬಡಿಕೆಯ ವಸ್ತುವಿಗೆ ಸಂಬಂಧಿಸಿದ ಅಸಾಧಾರಣ ಘಟನೆಗಳು, ಅದರ ದೇಶದ ಪರಮೋಚ್ಚ ಹಿತಾಸಕ್ತಿಗಳನ್ನು ಅಪಾಯಕ್ಕೆ-ಸಿಕ್ಕಿಸುವಂತಿದ್ದರೆ", ಮೂರು ತಿಂಗಳ (ತೊಂಬತ್ತು ದಿನಗಳ) ಸೂಚನಾಪತ್ರವನ್ನು ನೀಡುವ ಮೂಲಕ ಒಡಂಬಡಿಕೆಯನ್ನು ತೊರೆಯಲು ರಾಷ್ಟ್ರವೊಂದಕ್ಕೆ Xನೇ ಕಲಮು ಅವಕಾಶ ನೀಡುತ್ತದೆ. ತಾನು NPTಯನ್ನು ಬಿಡುವುದರ ಹಿಂದಿರುವ ಕಾರಣಗಳನ್ನು ಸದರಿ ರಾಷ್ಟ್ರವು ಆ ಸೂಚನಾಪತ್ರದಲ್ಲಿ ನೀಡುವುದು ಅಗತ್ಯವಾಗಿರುತ್ತದೆ.
"ಸಾರ್ವತ್ರಿಕ ಯುದ್ಧದ" ಒಂದು ಸನ್ನಿವೇಶವಿದ್ದಾಗ ಒಡಂಬಡಿಕೆಯು ಮತ್ತೆಂದೂ ಅನ್ವಯವಾಗುವುದಿಲ್ಲ. ಇದರಿಂದಾಗಿ ರಾಷ್ಟ್ರಗಳು ಯಾವುದೇ ಸೂಚನೆಯನ್ನು ನೀಡದೆಯೇ ಒಡಂಬಡಿಕೆಯನ್ನು ಬಿಡುವಲ್ಲಿ ಇದು ಸಂಪೂರ್ಣವಾಗಿ ಅವಕಾಶ ಕಲ್ಪಿಸುತ್ತದೆ ಎಂದು NATO ರಾಷ್ಟ್ರಗಳು ವಾದಿಸುತ್ತವೆ. NATOವಿನ ಪರಮಾಣು ಶಸ್ತ್ರಾಸ್ತ್ರಗಳ ಹಂಚಿಕೆ ಕಾರ್ಯನೀತಿಯನ್ನು ಬೆಂಬಲಿಸುವಲ್ಲಿ ಇದೊಂದು ಅವಶ್ಯಕ ವಾದವಾಗಿ ಕಂಡುಬರುತ್ತದೆಯಾದರೂ, ಒಡಂಬಡಿಕೆಯ ತರ್ಕಕ್ಕೆ ಒಂದು ಅಡ್ಡಿಪಡಿಸುವ ಅಂಶವಾಗಿ ಇದು ಪರಿಣಮಿಸುತ್ತದೆ. U.S. ರಾಜತಾಂತ್ರಿಕರ ಅಣತಿಯ ಮೇರೆಗೆ ಸೇರಿಸಲಾಗಿರುವ, "ಇಂಥದೊಂದು ಯುದ್ಧದ ಅಪಾಯವನ್ನು ನಿವಾರಿಸುವಲ್ಲಿ ಪ್ರತಿಯೊಂದು ಪ್ರಯತ್ನವನ್ನೂ ಮಾಡುವ ಸುಸಮಂಜಸವಾದ ಅಗತ್ಯವು" ಎಂಬ ಒಡಂಬಡಿಕೆಯ ಪೀಠಿಕಾಭಾಗದಲ್ಲಿರುವ ವಾಕ್ಸರಣಿಯನ್ನು NATOದ ವಾದವು ಆಧರಿಸಿದೆ. ಈ ನಿಟ್ಟಿನಲ್ಲಿ ಒಂದು ಸಾರ್ವತ್ರಿಕ ಯುದ್ಧವನ್ನು ತಡೆಯುವಲ್ಲಿನ ತನ್ನ ಕರ್ತವ್ಯವನ್ನು ನೆರವೇರಿಸುವಲ್ಲಿ ಒಡಂಬಡಿಕೆಯು ವಿಫಲಗೊಂಡಿದೆಯಾದ್ದರಿಂದ, ಇನ್ನೆಂದಿಗೂ ಅದು ನಿರ್ಬಂಧಕ್ಕೊಳಪಡಿಸುವ ಶಕ್ತಿಯನ್ನು ಹೊಂದಿರುವುದಿಲ್ಲ ಎಂಬುದು NATO ರಾಷ್ಟ್ರಗಳ ವಾದ.[೧೯] ಅನೇಕ ರಾಷ್ಟ್ರಗಳು ಈ ವಾದವನ್ನು ಪುರಸ್ಕರಿಸುವುದಿಲ್ಲ. ಮೇಲೆ ನೀಡಲಾಗಿರುವ ಅಮೆರಿಕಾ ಸಂಯುಕ್ತ ಸಂಸ್ಥಾನಗಳು-NATO ಪರಮಾಣು ಶಸ್ತ್ರಾಸ್ತ್ರಗಳ ಹಂಚಿಕೆ ವಿಭಾಗವನ್ನು ನೋಡಿ.
ಒಡಂಬಡಿಕೆಯ ಈ ಷರತ್ತನ್ನು ತಾನು ಬಳಸಿಕೊಳ್ಳುವ ಮೂಲಕ ಉತ್ತರ ಕೊರಿಯಾ ದೇಶವೂ ಸಹ ಒಂದು ಕೋಲಾಹಲವನ್ನು ಸೃಷ್ಟಿಸಿದೆ. X.1ನೇ ಕಲಮಿನ ಅನುಸಾರ ರಾಷ್ಟ್ರವೊಂದು ಒಟ್ಟಾರೆಯಾಗಿ ಮೂರು ತಿಂಗಳ ಸೂಚನಾಪತ್ರವನ್ನು ನೀಡುವುದು ಮಾತ್ರವೇ ಅವಶ್ಯಕವಾಗಿದೆ, ಮತ್ತು "ತನ್ನ ದೇಶದ ಸರ್ವೋಚ್ಚ ಹಿತಾಸಕ್ತಿಗಳ" ಕುರಿತಾದ ರಾಷ್ಟ್ರವೊಂದರ ಅರ್ಥಕಲ್ಪನೆಯನ್ನು ಪ್ರಶ್ನಿಸಲು ಅದು ಇತರ ರಾಷ್ಟ್ರಗಳಿಗೆ ಅವಕಾಶ ನೀಡುವುದಿಲ್ಲ. 1993ರಲ್ಲಿ, NPTಯಿಂದ ಹಿಂದೆಗೆದುಕೊಳ್ಳಲು ಉತ್ತರ ಕೊರಿಯಾ ದೇಶವು ಸೂಚನಾಪತ್ರವನ್ನು ನೀಡಿತು. ಆದಾಗ್ಯೂ 89 ದಿನಗಳ ನಂತರ, ಸಮ್ಮತಿಸಲ್ಪಟ್ಟ ಆಧಾರ ಚೌಕಟ್ಟಿನ ಅಡಿಯಲ್ಲಿ ತನ್ನ ಪರಮಾಣು ಕಾರ್ಯಸೂಚಿಯನ್ನು ಸ್ಥಗಿತಗೊಳಿಸಲು ಅಮೆರಿಕಾ ಸಂಯುಕ್ತ ಸಂಸ್ಥಾನಗಳೊಂದಿಗೆ ಉತ್ತರ ಕೊರಿಯಾವು ಒಪ್ಪಂದವೊಂದನ್ನು ಮಾಡಿಕೊಂಡಿತು ಹಾಗೂ ತನ್ನ ಹಿಂದೆಗೆತದ ಸೂಚನಾಪತ್ರವನ್ನು "ರದ್ದುಗೊಳಿಸಿತು". ಒಂದು ರಹಸ್ಯವಾದ ಯುರೇನಿಯಂ ಪುಷ್ಟೀಕರಣ ಕಾರ್ಯಸೂಚಿಯನ್ನು ಮುಂದುವರಿಸುವ ಮೂಲಕ ಉತ್ತರ ಕೊರಿಯಾವು ಸಮ್ಮತಿಸಲ್ಪಟ್ಟ ಆಧಾರ ಚೌಕಟ್ಟನ್ನು ಉಲ್ಲಂಘಿಸಿದೆ ಎಂದು 2002ರ ಅಕ್ಟೋಬರ್‌ನಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಆಪಾದಿಸಿ, ಆ ಒಪ್ಪಂದದ ಅಡಿಯಲ್ಲಿನ ಬೃಹತ್ ಇಂಧನ ತೈಲದ ಹಡಗು ಮಾಲಕದ ಸಾಗಣೆಯನ್ನು ರದ್ದುಗೊಳಿಸಿದವು. ಇದಕ್ಕೆ ಪ್ರತಿಯಾಗಿ, ಉತ್ತರ ಕೊರಿಯಾ ದೇಶವು IAEA ಪರಿಶೀಲನಾಧಿಕಾರಿಗಳನ್ನು ಉಚ್ಚಾಟಿಸಿ IAEA ಉಪಕರಣವನ್ನು ಅಸಮರ್ಥಗೊಳಿಸಿತು, ಮತ್ತು, ತನ್ನ ಹಿಂದಿನ NPT ಹಿಂದೆಗೆತದ ಸೂಚನಾಪತ್ರದ ರದ್ದತಿಯನ್ನು ತಾನು ಕೊನೆಗಾಣಿಸುತ್ತಿರುವುದಾಗಿ 2003ರ ಜನವರಿ 10ರಂದು ಅದು ಘೋಷಿಸಿತು. ಉತ್ತರ ಕೊರಿಯಾವು 89 ದಿನಗಳಷ್ಟು ಮುಂಚಿತವಾಗಿ ಸೂಚನಾಪತ್ರವನ್ನು ನೀಡಿತ್ತಾದ್ದರಿಂದ, NPTಯಿಂದ ಹಿಂದೆಗೆತ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿ ಕೇವಲ ಒಂದೇ ಒಂದು ಹೆಚ್ಚಿನ ದಿನದ ಸೂಚನೆಯು ಸಾಕು ಎಂದು ಅದು ಹೇಳಿತು.[೬೫] ಈ ಅರ್ಥವಿವರಣೆಯನ್ನು IAEA ಕಾರ್ಯಾಧ್ಯಕ್ಷರ ಮಂಡಳಿಯು ತಿರಸ್ಕರಿಸಿತು.[೬೬]. ಮೂರು-ತಿಂಗಳ ಅವಧಿಯ ಒಂದು ಹೊಸ ಹಿಂದೆಗೆತದ ಸೂಚನಾಪತ್ರವು ಅಗತ್ಯವಾಗಿದೆ ಎಂಬ ವಾದಕ್ಕೆ ಬಹುತೇಕ ರಾಷ್ಟ್ರಗಳು ಅಂಟಿಕೊಂಡವು, ಮತ್ತು ಒಡಂಬಡಿಕೆಯ "ಅಸಾಧಾರಣ ಘಟನೆಗಳು" ಮತ್ತು ಪರಮೋಚ್ಚ ಹಿತಾಸಕ್ತಿಗಳು" ಎಂಬ ಅವಶ್ಯಕತೆಗಳನ್ನು ಉತ್ತರ ಕೊರಿಯಾದ ಸೂಚನಾಪತ್ರವು ಈಡೇರಿಸಿದೆಯೇ ಎಂದು ಅನೇಕ ರಾಷ್ಟ್ರಗಳು ಪ್ರಶ್ನಿಸಿದವು. 2005ರ ಸೆಪ್ಟೆಂಬರ್ 19ರಂದು ಆರು-ಸಹಯೋಗಿಗಳ ಮಾತುಕತೆಗಳ ನಾಲ್ಕನೇ ಸುತ್ತು ಸಂಪೂರ್ಣಗೊಂಡ ನಂತರ, ಉತ್ತರ ಕೊರಿಯಾ ದೇಶವು NPTಗೆ "ಹಿಂದಿರುಗಬೇಕು" ಎಂಬ ಕರೆಯನ್ನು ನೀಡುವ ಮೂಲಕ, ಅದು ಹಿಂದೆಗೆದುಕೊಂಡಿತ್ತು ಎಂಬ ಅಂಶವನ್ನು ಸೂಚ್ಯವಾಗಿ ಪರಿಗಣಿಸಿದಂತಾಯಿತು.
ಭವಿಷ್ಯ
[ಬದಲಾಯಿಸಿ]ಹದಿಮೂರು ಅಂಶಗಳು ಎಂದು ಕರೆಯಲ್ಪಟ್ಟ ಸಂಗ್ರಹದಲ್ಲಿ ಸಾರಸಂಗ್ರಹಿಸಲ್ಪಟ್ಟಿರುವ, ಪರಮಾಣು ಶಸ್ತ್ರಾಸ್ತ್ರಗಳ ರಾಷ್ಟ್ರಗಳ ನಿರಸ್ತ್ರೀಕರಣ ಕಟ್ಟುಪಾಡುಗಳ ಕಾರ್ಯಸಾಧ್ಯ ಪರಿಭಾಷೆಯಲ್ಲಿನ ವ್ಯಾಖ್ಯಾನವು 2000ರ ಅವಲೋಕನದ ಸಮಾವೇಶ ದ ಪ್ರಮುಖ ಫಲಿತಾಂಶವಾಗಿತ್ತು.
2005ರ ಜುಲೈನಲ್ಲಿ ಬಂದ ನಿರ್ಮಲೀಕರಣದ ಬೆಳವಣಿಗೆ ಹಾಗೂ ವಾತಾವರಣಕ್ಕಾಗಿರುವ ಏಷ್ಯಾ-ಪೆಸಿಫಿಕ್ ಭಾಗೀದಾರಿಕೆಯ ಒಳಸೇರಿಸುವಿಕೆಯು ರಾಜಕೀಯವಾಗಿ ಸೂಕ್ಷ್ಮವಾದ ವಿಷಯವಾಗಿತ್ತು. 1974ರಲ್ಲಿ ತನ್ನ ಮೊದಲ ಪರಮಾಣು ಬಾಂಬ್‌ನ್ನು ಪರೀಕ್ಷಿಸಿದ್ದ ಭಾರತವು NPTಗೆ ಸಹಿಹಾಕಲು ನಿರಾಕರಿಸಿದ್ದು ಇದಕ್ಕೆ ಕಾರಣವಾಗಿತ್ತು. 2005ರ ಜುಲೈ 18ರಂದು ಏಷ್ಯಾ-ಪೆಸಿಫಿಕ್ ಭಾಗೀದಾರಿಕೆಯ ಘೋಷಣೆಯಾಗುವುದಕ್ಕೆ ಮುಂಚಿತವಾಗಿ, ಭಾರತದ ಪ್ರಧಾನ ಮಂತ್ರಿ ಮನ್‌ಮೋಹನ್ ಸಿಂಗ್‌ರನ್ನು ಭೇಟಿಯಾದ US ಅಧ್ಯಕ್ಷ ಜಾರ್ಜ್ W. ಬುಷ್, ಭಾರತದೊಂದಿಗಿನ US ನಾಗರಿಕ ಪರಮಾಣು ತಂತ್ರಜ್ಞಾನದಲ್ಲಿನ ವ್ಯಾಪಾರಕ್ಕೆ ಅನುಮತಿ ನೀಡಲು US ಕಾನೂನು ಹಾಗೂ ಅಂತರರಾಷ್ಟ್ರೀಯ ನಿಯಮಗಳನ್ನು ಬದಲಿಸುವಲ್ಲಿ ತಾನು ಕೆಲಸ ಮಾಡುವುದಾಗಿ ಘೋಷಿಸಿದ.[೬೭] U.S.-ಭಾರತ ಪರಮಾಣು ಗುಪ್ತ ಒಪ್ಪಂದವು, ಇರಾನ್‌ನ (ಓರ್ವ NPT ಸಹಿದಾರ) ನಾಗರಿಕ ಪರಮಾಣು ಇಂಧನ-ತಯಾರಿಸುವ ತಂತ್ರಜ್ಞಾನದ ಸಂಯೋಜನೆಯೊಂದಿಗೆ NPTಯ ಪ್ರಚಲಿತ ಪದ್ಧತಿಯನ್ನು[೬೮] ನಾಶಪಡಿಸುತ್ತದೆ ಎಂದು ಬ್ರಿಟಿಷ್ ಅಂಕಣಕಾರ ಜಾರ್ಜ್ ಮಾನ್‌ಬಯೋಟ್‌ನಂಥ ಕೆಲವರು ವಾದಿಸಿದರೆ, ಇಂಥ ಕ್ರಮವು ಓರ್ವ NPT-ಸಹಿದಾರನಲ್ಲದ ಭಾರತವನ್ನು ಅಂತರರಾಷ್ಟ್ರೀಯ ಕೂಲಂಕಷ ಪರೀಕ್ಷೆಯ ಅಡಿಯಲ್ಲಿ ತರುವ ಸಂಭವವಿದೆ ಎಂದು ಇತರರು[who?] ವಾದಿಸುತ್ತಾರೆ.
2005ರ ಮೇ ತಿಂಗಳಲ್ಲಿ ನಡೆದ ಏಳನೇ ಅವಲೋಕನದ ಸಮಾವೇಶ ದಲ್ಲಿ, ಪ್ರಸರಣ-ಮಾಡದಿರುವಿಕೆಯ ಕುರಿತಾಗಿ, ಅದರಲ್ಲೂ ವಿಶೇಷವಾಗಿ ಇರಾನ್ ವಿರುದ್ಧವಾಗಿ ತಾನು ಮಾಡಿದ ಆಪಾದನೆಗಳ ಕುರಿತಾಗಿ ಸಮಾವೇಶವು ಗಮನಹರಿಸಬೇಕು ಎಂದು ಬಯಸಿದ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಹಾಗೂ ಪರಮಾಣು ಶಕ್ತಿರಾಷ್ಟ್ರಗಳಿಂದ ಗಂಭೀರವಾದ ಪರಮಾಣು ನಿರಸ್ತ್ರೀಕರಣವು ಕಂಡುಬರದಿರುವುದರ ಕುರಿತು ಮಹತ್ವ ನೀಡಿದ ಬಹುತೇಕ ಇತರ ದೇಶಗಳ ನಡುವೆ ಕಣ್ಣಿಗೆ ರಾಚುವಂಥ ಭಿನ್ನಾಭಿಪ್ರಾಯಗಳು ಕಂಡುಬಂದವು. NATOದ ಪರಮಾಣು ಹಂಚಿಕೆ ವ್ಯವಸ್ಥೆಯು ಒಡಂಬಡಿಕೆಯನ್ನು ಉಲ್ಲಂಘಿಸುತ್ತದೆ ಎಂಬ ತಮ್ಮ ನಿಲುವನ್ನು[೬೯] ಅಲಿಪ್ತ ದೇಶಗಳು ಪುನರುಚ್ಚರಿಸಿದವು.
2010ರ ಮೇ ತಿಂಗಳಲ್ಲಿ ಆಯೋಜಿಸಲ್ಪಡಲಿರುವ ಮುಂದಿನ ಅವಲೋಕನದ ಸಮಾವೇಶವನ್ನು, ಒಡಂಬಡಿಕೆಯ ಆಧಾರದ ಮೇಲೆ ಪರಮಾಣು ಪ್ರಸರಣ ಮಾಡದಿರುವಿಕೆಯ ಪ್ರಚಲಿತ ಪದ್ಧತಿಯನ್ನು ಕ್ರೋಡೀಕರಿಸುವಲ್ಲಿನ ಒಂದು ನಿರ್ಣಾಯಕ ಸಮಾವೇಶವಾಗಿ ನೋಡಲಾಗುತ್ತಿದೆ. 2009ರ ಮೇ ತಿಂಗಳಲ್ಲಿ ನಡೆದ NPT ಪೂರ್ವಸಿದ್ಧತಾ ಸಮಿತಿಯ ಅಧಿವೇಶನವು, ಮುಂಬರಲಿರುವ ಅವಲೋಕನದ ಸಮಾವೇಶಕ್ಕೆ ಸಂಬಂಧಿಸಿದ ಒಂದು ಸಮ್ಮತವಾದ ಶಿಫಾರಸನ್ನು ನೀಡುವಲ್ಲಿ ವಿಫಲಗೊಂಡಿತು. ಇಷ್ಟಾದರೂ ಸಹ, ಸಭೆಯ[೭೦] ಅವಧಿಯಲ್ಲಿ ಚರ್ಚೆಗೊಳಗಾಗಬೇಕಾದ ಪ್ರಮುಖ ವಿವಾದಾಂಶಗಳನ್ನು ವ್ಯಾಖ್ಯಾನಿಸುವಲ್ಲಿ ಅದು ಯಶಸ್ವಿಯಾಗಿದೆ ಎಂದು ಪರಿಗಣಿಸಲ್ಪಟ್ಟಿದೆ.
ಮುಂಬರುವ "ಪರಮಾಣು ಭದ್ರತೆಯ ಕುರಿತಾದ ಜಾಗತಿಕ ಶೃಂಗಸಭೆ"ಯನ್ನು 2010ರ ಮಾರ್ಚ್‌ನಲ್ಲಿ ಆಯೋಜಿಸಲಾಗುವುದು. ಈ ಶೃಂಗಸಭೆಯು ಪ್ರೇಗ್‌ನಲ್ಲಿ ಅಧ್ಯಕ್ಷ ಒಬಾಮಾನಿಂದ ಪ್ರಸ್ತಾವಿಸಲ್ಪಟ್ಟಿತು. ಪ್ರಸರಣ ಭದ್ರತಾ ಉಪಕ್ರಮ ಹಾಗೂ ಪರಮಾಣ ಭಯೋತ್ಪಾದಕತೆಯನ್ನು ಎದುರಿಸುವಲ್ಲಿನ ಜಾಗತಿಕ ಉಪಕ್ರಮದೊಂದಿಗಿನ ಸಂಯೋಜನೆಯಲ್ಲಿ ಪರಮಾಣು ಪ್ರಸರಣ-ಮಾಡದಿರುವಿಕೆಯ ಒಡಂಬಡಿಕೆಯನ್ನು ಬಲಪಡಿಸುವ ಉದ್ದೇಶವನ್ನು ಈ ಶೃಂಗಸಭೆಯು ಹೊಂದಿದೆ.[೭೧]
ಟೀಕೆ ಮತ್ತು ಪ್ರತಿಕ್ರಿಯೆಗಳು
[ಬದಲಾಯಿಸಿ]ಗರ್ನಾಲ್ ಅಬ್ದೆಲ್ ನಾಸ್ಸರ್ ಒಮ್ಮೆ ಹೀಗೆ ಹೇಳಿದ: "NPTಯನ್ನು ಪರಿಚಯಿಸುವುದಕ್ಕೆ ಮುಂಚಿತವಾಗಿ ಏನನ್ನೆಲ್ಲಾ ಮಾಡಬೇಕೆಂದು ಅವರು ಬಯಸಿದ್ದರೋ ಮೂಲಭೂತವಾಗಿ ಅದನ್ನೆಲ್ಲಾ ಮಾಡಿದರು ಮತ್ತು ಹಿಂದೆಲ್ಲಾ ತಾವು ಏನನ್ನು ಮಾಡುತ್ತಿದ್ದರೋ ಅದನ್ನು ಇತರರು ಮಾಡದಂತೆ ತಡೆಯುವ ರೀತಿಯಲ್ಲಿ ಆಮೇಲೆ ಅದನ್ನು ಪಿತೂರಿಮಾಡಿ ಮಾರ್ಪಡಿಸಿದರು".[ಸೂಕ್ತ ಉಲ್ಲೇಖನ ಬೇಕು] ಇದರ ಜೊತೆಗೆ, ಇನ್ನು ಕೆಲವರು ವಾದಿಸುವ ಪ್ರಕಾರ, ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ರಾಷ್ಟ್ರಗಳು (NWS) NPTಯಲ್ಲಿ ನಮೂದಿಸಲಾಗಿರುವ ತಮ್ಮ ಬದ್ಧತೆಗಳೊಂದಿಗೆ ಕಾರ್ಯತಃ ಸಂಪೂರ್ಣವಾಗಿ ಅನುವರ್ತಿಸಿಲ್ಲ. ಒಡಂಬಡಿಕೆಯ VIನೇ ಕಲಮಿನ ಅನುಸಾರ, ಶಸ್ತ್ರಾಸ್ತ್ರಗಳ ಗತಿಯನ್ನು ಕೊನೆಗಾಣಿಸುವಿಕೆ, "ಪರಮಾಣು ನಿರಸ್ತ್ರೀಕರಣ, ಮತ್ತು ಸಾರ್ವತ್ರಿಕವಾದ ಹಾಗೂ ಸಂಪೂರ್ಣ ನಿರಸ್ತ್ರೀಕರಣದ ಕುರಿತಾದ ಒಡಂಬಡಿಕೆಯೊಂದರ ಕುರಿತು NPT ಸಹಭಾಗಿಗಳು "ಸಂಧಾನದ ಮಾತುಕತೆಗಳನ್ನು ಮುಂದುವರಿಸುವುದು" ಅವಶ್ಯಕವಾಗಿದೆ. ಇಷ್ಟಾಗಿಯೂ ಸಾವಿರಾರು ಪರಮಾಣು ಶಸ್ತ್ರಾಸ್ತ್ರಗಳು ಇನ್ನೂ ಉಳಿದುಕೊಂಡಿವೆ; ಕೆಲವೊಂದು ಶಸ್ತ್ರಾಸ್ತ್ರಗಳು ಶೀತಲ ಸಮರವು ಅಂತ್ಯಗೊಂಡ ಬಹಳ ಕಾಲದ ನಂತರವೂ ಅತೀವ ಚಟುವಟಿಕೆಯುಳ್ಳ ಸ್ಥಿತಿಯಲ್ಲಿ ಉಳಿದುಕೊಂಡಿವೆ. U.S. ಪರಮಾಣು ಪರಿಸ್ಥಿತಿಯ ಅವಲೋಕನ ಪ್ರಕ್ರಿಯೆಯನ್ನು ಅನುಸರಿಸಿ 2002ರ ಜನವರಿಯಲ್ಲಿ ರಕ್ಷಣಾ ಇಲಾಖೆಯಿಂದ ನೀಡಲ್ಪಟ್ಟ ವರದಿಯೊಂದು, ಕಾಯಂ ಆದ ಮತ್ತು ಬೇರು-ಬಿಟ್ಟಿರುವ ಗುರಿಗಳನ್ನು[೭೨] ನಾಶಗೊಳಿಸಲೆಂದು ವಿನ್ಯಾಸಗೊಳಿಸಲಾಗಿದ್ದ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯನ್ನು ಶಿಫಾರಸುಮಾಡಿತು. ಆದರೆ, ಇದರ ಫಲವಾಗಿ ಹೊರಹೊಮ್ಮಿದ ಪರಮಾಣುವಿನ ಗಟ್ಟಿಮುಟ್ಟಾದ ಭೂಮಿ ಮರ್ಮಭೇದಕವು ಸಮ್ಮೇಳನದ ಸಂಪೂರ್ಣ ಬೆಂಬಲವನ್ನು ಎಂದಿಗೂ ಗಳಿಸಲಿಲ್ಲ ಮತ್ತು 2005ರಲ್ಲಿ ಅದು ರದ್ದುಗೊಳಿಸಲ್ಪಟ್ಟಿತು.[೭೩] ಅಲಿಪ್ತ ಚಳವಳಿ ಮತ್ತು ಆಫ್ರಿಕಾದ ಸಮೂಹದ ಪರವಾಗಿರುವ ಘಾನಾದ ಪ್ರತಿನಿಧಿಯು ಈ ಕುರಿತು ಮಾತನಾಡುತ್ತಾ, ನಿರಸ್ತ್ರೀಕರಣ ಮತ್ತ್ತು ಪ್ರಸರಣ-ಮಾಡದಿರುವಿಕೆಗಳು ಪರಸ್ಪರ ಪೂರಕವಾಗಿದ್ದವು ಮತ್ತು ಪರಸ್ಪರ ಬಲವರ್ಧಕವಾಗಿದ್ದವು ಎಂದು ತಿಳಿಸಿ, "ನಿರಸ್ತ್ರೀಕರಣದಲ್ಲಿನ ವಾಸ್ತವಿಕ ಪ್ರಗತಿಯ ಹೊರತಾಗಿ, ಪ್ರಸರಣ-ಮಾಡದಿರುವಿಕೆಯ ಮೇಲಿನ ಪ್ರಸಕ್ತ ಪ್ರಾಮುಖ್ಯತೆಯನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ" ಎಂದು ನುಡಿದ.[೭೪]
ತನ್ನ ನಿರಸ್ತ್ರೀಕರಣ ದಾಖಲೆಯ ಕುರಿತಾದ ಟೀಕೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಪ್ರತಿಕ್ರಿಯಿಸಿತು. ಶೀತಲ ಸಮರವು ಅಂತ್ಯಗೊಂಡಾಗಿನಿಂದ ತಾನು 13,000ಕ್ಕೂ ಹೆಚ್ಚಿನ ಪರಮಾಣು ಶಸ್ತ್ರಾಸ್ತ್ರಗಳನ್ನು ವರ್ಜಿಸಿರುವುದಾಗಿ ಮತ್ತು ಸಜ್ಜುಗೊಳಿಸಲಾದ ತನ್ನ ಯುದ್ಧತಂತ್ರದ ಸಿಡಿತಲೆಗಳ ಪೈಕಿ 80%ನಷ್ಟಕ್ಕೂ ಹೆಚ್ಚಿನ ಭಾಗವನ್ನು ಹಾಗೂ NATOಗಾಗಿ ಸಜ್ಜುಗೊಳಿಸಲಾಗಿದ್ದ ಯುದ್ಧತಂತ್ರದ್ದಲ್ಲದ ಸಿಡಿತಲೆಗಳ ಪೈಕಿ 90%ನಷ್ಟು ಭಾಗವನ್ನು ವರ್ಜಿಸಿರುವುದಾಗಿ ಬೆಟ್ಟುಮಾಡಿ ತೋರಿಸುವ ಮೂಲಕ ಸದರಿ ಟೀಕೆಗಳಿಗೆ ಅದು ಪ್ರತಿಕ್ರಿಯಿಸಿತು. ಈ ಪ್ರಕ್ರಿಯೆಯಲ್ಲಿ ಸಿಡಿತಲೆಗಳು ಹಾಗೂ ವಿತರಣಾ ವ್ಯವಸ್ಥೆಗಳ ಸಂಪೂರ್ಣ ವರ್ಗಗಳನ್ನು ವರ್ಜಿಸುವ ಹಾಗೂ ಪರಮಾಣು ಶಸ್ತ್ರಾಸ್ತ್ರಗಳ ಕುರಿತಾದ ತನ್ನ ನೆಚ್ಚಿಕೆಯನ್ನು ತಗ್ಗಿಸಿಕೊಳ್ಳುವ ಮೂಲಕವೂ ಅದು ಟೀಕೆಗೆ ಪ್ರತಿಕ್ರಿಯಿಸಿತು. ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಚಾಲ್ತಿಯಲ್ಲಿರುವ- ಮತ್ತು 2007ರ ವರ್ಷದಾದ್ಯಂತದ ಕ್ಷಿಪ್ರವಾಗಿ ತ್ವರಿತಗೊಳಿಸುವ- ಕೆಲಸವು ಪರಮಾಣು ಸಿಡಿತಲೆಗಳನ್ನು ನಾಶಪಡಿಸುತ್ತವೆ ಎಂದೂ ಸಹ U.S. ಅಧಿಕಾರಿಗಳು ಬೆರಳುಮಾಡಿ ತೋರಿಸಿದ್ದಾರೆ. ಅಧ್ಯಕ್ಷ ಜಾರ್ಜ್ W. ಬುಷ್‌ನಿಂದ ಆಜ್ಞೆಮಾಡಲ್ಪಟ್ಟಿರುವ ತ್ವರಿತಗೊಳಿಸಲಾದ ನಾಶಮಾಡುವಿಕೆಯ ಪ್ರಸಕ್ತ ಪ್ರಯತ್ನಗಳು ಸಂಪೂರ್ಣಗೊಂಡಾಗ, U.S. ಶಸ್ತ್ರಾಸ್ತ್ರ ಸಂಗ್ರಹವು ಶೀತಲ ಸಮರದ ಅಂತ್ಯದ ವೇಳೆಗೆ ಇದ್ದ ತನ್ನ ಗಾತ್ರದ ಕಾಲುಭಾಗಕ್ಕಿಂತಲೂ ಕಡಿಮೆಯಿರುತ್ತದೆ ಮತ್ತು NPTಯ ಕರಡು ರಚನೆಗೆ ಸಾಕಷ್ಟು ಮುಂಚಿನ, ಐಸೆನ್‌ಹೋವರ್ ಆಡಳಿತದ ಅವಧಿಯ ಯಾವುದೇ ಘಟ್ಟದಲ್ಲಿದ್ದ ಪ್ರಮಾಣಕ್ಕಿಂತ ಚಿಕ್ಕದಾಗಿರುತ್ತದೆ. ಸೋವಿಯೆಟ್ ಪರಮಾಣು ಶಸ್ತ್ರಾಸ್ತ್ರಗಳಲ್ಲಿ ಮುಂಚಿತವಾಗಿ ಇದ್ದ ಅನೇಕ ಸಾವಿರಗಳ ಶಸ್ತ್ರಾಸ್ತ್ರಗಳ ಮೌಲ್ಯದಷ್ಟು ಯುರೇನಿಯಂನ್ನೂ ಸಹ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಖರೀದಿಸಿದ್ದು ಅವು ರಿಯಾಕ್ಟರಿನ ಇಂಧನಕ್ಕೆ ಪರಿವರ್ತಿಸಲ್ಪಡುವ ಉದ್ದೇಶವನ್ನು ಹೊಂದಿವೆ.[೭೫] (ಮೇಲೆ ಹೇಳಿದ್ದರ ಪೈಕಿಯ ಈ ಎರಡನೇ ಪ್ರಯತ್ನದ ಫಲವಾಗಿ ಒಂದು ಅಂದಾಜು ರೂಪಿಸಲ್ಪಟ್ಟಿದ್ದು, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಪ್ರತಿ ಹತ್ತು ದೀಪದ ಬಲ್ಬುಗಳಲ್ಲಿ ಒಂದು ಬಲ್ಬು ಪರಮಾಣು ಇಂಧನದಿಂದ ಶಕ್ತಿಯನ್ನು ಪಡೆದಿರುವುದಕ್ಕೆ ಸಮನಾಗಿದೆ. ಹಿಂದೊಮ್ಮೆ ಶೀತಲ ಸಮರದ ಅವಧಿಯಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನಗಳೆಡೆಗೆ ಮತ್ತು ಅದರ ಮಿತ್ರರಾಷ್ಟ್ರಗಳೆಡೆಗೆ ಗುರಿಯಿರಿಸಲಾಗಿದ್ದ ಸಿಡಿತಲೆಗಳಿಂದ ಈ ಪರಮಾಣು ಇಂಧನವನ್ನು ತೆಗೆಯಲಾಗಿತ್ತು.[೭೬]) ಪ್ರಸರಣ ಮಾಡದಿರುವಿಕೆ ಹಾಗೂ ನಿರಸ್ತ್ರೀಕರಣಗಳು ಪರಸ್ಪರ ಜೋಡಿಸಲ್ಪಟ್ಟಿವೆ ಎಂಬುದಕ್ಕೆ ಪರಮಾಣು ಪ್ರಸರಣ ಮಾಡದಿರುವಿಕೆಗೆ ಸಂಬಂಧಿಸಿದ U.S. ವಿಶೇಷ ಪ್ರತಿನಿಧಿಯು ಸಮ್ಮತಿ ಸೂಚಿಸಿದ್ದು, ಅವು ಪರಸ್ಪರ ಬಲವರ್ಧಕಗಳಾಗಿ ಕೆಲಸ ಮಾಡಬಲ್ಲವು ಎಂದು ಸೂಚಿಸಿದ್ದಾನೆ. ಆದರೆ ಬೆಳೆಯುತ್ತಿರುವ ಪ್ರಸರಣದ ಅಪಾಯಗಳು ನಿರಸ್ತ್ರೀಕರಣವನ್ನು ಹೆಚ್ಚು ಕಷ್ಟಕರವಾಗಿ ಮಾರ್ಪಡಿಸುವ ಒಂದು ವಾತಾವರಣವನ್ನು ಸೃಷ್ಟಿಸುತ್ತವೆ ಎಂದೂ ಸಹ ಆತ ಸೂಚಿಸಿದ್ದಾನೆ.[೭೭] ಇದೇ ರೀತಿಯಲ್ಲಿ ಯುನೈಟೆಡ್ ಕಿಂಗ್‌ಡಂ,[೭೮], ಫ್ರಾನ್ಸ್ [೭೯] ಹಾಗೂ ರಷ್ಯಾ [೮೦] ದೇಶಗಳು ತಮ್ಮ ಪರಮಾಣು ನಿರಸ್ತ್ರೀಕರಣದ ದಾಖಲೆಗಳನ್ನು ಸಮರ್ಥಿಸಿಕೊಂಡಿವೆ, ಮತ್ತು NPTಯ ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಐದು ರಾಷ್ಟ್ರಗಳು 2008ರಲ್ಲಿ ಒಂದು ಜಂಟಿ ಹೇಳಿಕೆಯನ್ನು ನೀಡಿ ತಮ್ಮ VIನೇ ಕಲಮಿನ ನಿರಸ್ತ್ರೀಕರಣದ ಬದ್ಧತೆಗಳನ್ನು ಪುನರುಚ್ಚರಿಸಿವೆ.[೮೧] ಮೇಲೆ ಚರ್ಚಿಸಲಾದಂತೆ, ಒಡಂಬಡಿಕೆಯ VIನೇ ಕಲಮಿನ ಅಡಿಯಲ್ಲಿನ ಪರಮಾಣು ಶಸ್ತ್ರಾಸ್ತ್ರಗಳ ಸ್ಥಿತಿಗತಿಯ ಕಟ್ಟುಪಾಡುಗಳ ಕರಾರುವಾಕ್ಕಾದ ಸ್ವಭಾವವು, ಒಂದು ವೇಳೆ ಇದ್ದಲ್ಲಿ, ತೀಕ್ಷ್ಣವಾಗಿ ಚರ್ಚೆಗೊಳಗಾಗಿದೆ.
ಇವನ್ನೂ ನೋಡಿ
[ಬದಲಾಯಿಸಿ]- 1994ರ ಭದ್ರತಾ ಭರವಸೆಗಳ ಕುರಿತಾದ ಬುಡಾಪೆಸ್ಟ್ ಜ್ಞಾಪಕಪತ್ರ
- ಪರಮಾಣು ಭಯೋತ್ಪಾದಕತೆಯನ್ನು ಎದುರಿಸುವಲ್ಲಿನ ಜಾಗತಿಕ ಉಪಕ್ರಮ
- ಪರಮಾಣು ಪ್ರಸರಣ-ಮಾಡದಿರುವರುವಿಕೆ ಮತ್ತು ನಿರಸ್ತ್ರೀಕರಣದ ಕುರಿತಾದ ಅಂತರರಾಷ್ಟ್ರೀಯ ಆಯೋಗ
- ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣದ ಪ್ರಚಲಿತ ಪದ್ಧತಿ
- ಪರಮಾಣು-ಶಸ್ತ್ರ ಮುಕ್ತ ಪ್ರಪಂಚ
- 13 ಹಂತಗಳು (ಒಡಂಬಡಿಕೆಯ 2000ರ ಅವಲೋಕನದ ಸಮಾವೇಶದ ಅಂತಿಮ ದಸ್ತಾವೇಜಿನಲ್ಲಿನ ಒಂದು ಪ್ರಮುಖ ಖಂಡ)
- ಪರಮಾಣು ಸಂಗ್ರಾಮ
- ಪರಮಾಣು ಶಸ್ತ್ರಾಸ್ತ್ರಗಳೊಂದಿಗಿನ ದೇಶಗಳ ಪಟ್ಟಿ
- ಪರಮಾಣು ವಿದಳನ
- ಪರಮಾಣು ಸಮ್ಮಿಳನ
- ಪರಮಾಣು ಶಾಂತಿ
- ಪರಮಾಣು ಶಕ್ತಿಯ ಕ್ರಮೇಣ ಬಳಕೆ-ತಪ್ಪಿಸುವಿಕೆ
- ಪರಮಾಣು ಪ್ರಸರಣ
- ಪ್ರಸರಣ ಭದ್ರತಾ ಉಪಕ್ರಮ
- ಸ್ಟ್ರಾಟೆಜಿಕ್ ಅಫೆನ್ಸಿವ್ ರಿಡಕ್ಷನ್ಸ್ ಟ್ರೀಟಿ (SORT)
- ಹೊಸ ಕಾರ್ಯಸೂಚಿಯ ಒಕ್ಕೂಟ
ಆಕರಗಳು
[ಬದಲಾಯಿಸಿ]- ↑ ರಾಯಭಾರಿ ಸುಡ್‌ಜಡ್‌ನಾನ್ ಪರ್ನೋಹಾಡಿನಿಂಗ್ರಾಟ್, 26 ಏಪ್ರಿಲ್ 2004, ವಿಶ್ವಸಂಸ್ಥೆ, ನ್ಯೂಯಾರ್ಕ್, ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ-ಮಾಡದಿರುವಿಕೆಯ ಮೇಲಿನ ಒಡಂಬಡಿಕೆಯ ಕುರಿತಾದ ಪಕ್ಷಗಳ 2005ರ ಅವಲೋಕನದ ಸಮಾವೇಶಕ್ಕಾಗಿರುವ ಪೂರ್ವಸಿದ್ಧತಾ ಸಮಿತಿಯ ಮೂರನೇ ಅಧಿವೇಶನ; ಇಂಡೋನೇಷಿಯಾ ಗಣರಾಜ್ಯದ ಕಾಯಂ ನಿಯೋಗದಿಂದ ವಿಶ್ವಸಂಸ್ಥೆಗೆ ಒದಗಿಸಲ್ಪಟ್ಟ ಮಾಹಿತಿ (indonesiamission-ny.org)
- ↑ ಉದಾಹರಣೆಗಾಗಿ ನೋಡಿ: ICNND ರಿಪೋರ್ಟ್, ಇಂಟರ್‌ನ್ಯಾಷನಲ್ ಸೆಮಿನಾರ್: ದಿ ಫ್ಯೂಚರ್ ಆಫ್ ದಿ NPT[ಶಾಶ್ವತವಾಗಿ ಮಡಿದ ಕೊಂಡಿ] ಮತ್ತು ಕಾರ್ನೆಗೀ ಎಂಡೋಮೆಂಟ್ ಕಾನ್ಫರೆನ್ಸ್ Archived 2011-01-17 ವೇಬ್ಯಾಕ್ ಮೆಷಿನ್ ನಲ್ಲಿ. ಇವುಗಳ ವೆಬ್‌ಸೈಟ್‌ಗಳು.
- ↑ ಉದಾಹರಣೆಗಾಗಿ ನೋಡಿ, ಕೆನಡಾದ ಸರ್ಕಾರದ NPT ವೆಬ್‌ಸೈಟ್ ದಿ ನ್ಯೂಕ್ಲಿಯರ್ ನಾನ್-ಪ್ರಾಲಿಫರೇಷನ್ ಟ್ರೀಟಿ Archived 2014-07-27 ವೇಬ್ಯಾಕ್ ಮೆಷಿನ್ ನಲ್ಲಿ..
- ↑ ಬುಷ್ ಆಡಳಿತದ ಕೊನೆಯಲ್ಲಿ U.S. NPT ಪ್ರತಿನಿಧಿಯಾದ ಕ್ರಿಸ್ಟೋಫರ್ ಫೋರ್ಡ್‌ನಿಂದ ಈ ಅಭಿಪ್ರಾಯವು ವ್ಯಕ್ತಪಡಿಸಲ್ಪಟ್ಟಿತು. ನೋಡಿ: "ದಿ 2010 ರಿವ್ಯೂ ಸೈಕಲ್ ಸೋ ಫಾರ್: ಎ ವ್ಯೂ ಫ್ರಂ ದಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ," ವಿಲ್ಟನ್ ಪಾರ್ಕ್, ಯುನೈಟೆಡ್ ಕಿಂಗ್‌ಡಂ ಇಲ್ಲಿ, 2007ರ ಡಿಸೆಂಬರ್ 20ರಂದು ಸಾದರಪಡಿಸಲಾಯಿತು.
- ↑ UK 'ಪ್ರಿಪೇರ್ಡ್ ಟು ಯೂಸ್ ನ್ಯೂಕ್ಲಿಯರ್ ವೆಪನ್ಸ್' 2002ರ ಮಾರ್ಚ್ 20ರ ದಿನಾಂಕದ BBC ಲೇಖನ
- ↑ ಫ್ರಾನ್ಸ್ 'ವುಡ್ ಯೂಸ್ ನ್ಯೂಕ್ಲಿಯರ್ ವೆಪನ್ಸ್', 2006ರ ಜನವರಿ 19ರ ದಿನಾಂಕದ BBC ಲೇಖನ
- ↑ ಚಿರಾಕ್: ನ್ಯೂಕ್ಲಿಯರ್ ರೆಸ್ಪಾನ್ಸ್ ಟು ಟೆರರಿಸಂ ಈಸ್ ಪಾಸಿಬಲ್, 2006ರ ಜನವರಿ 20ರ ದಿನಾಂಕದ ವಾಷಿಂಗ್ಟನ್ ಪೋಸ್ಟ್ ಲೇಖನ
- ↑ NPT ಹಿನ್ನೆಲೆ
- ↑ "U.S. ಕಂಪ್ಲೈಯನ್ಸ್ ವಿತ್ ಆರ್ಟಿಕಲ್ VI ಆಫ್ ದಿ NPT". Archived from the original on 2011-06-15. Retrieved 2010-05-06.
- ↑ ಉದಾಹರಣೆಗೆ ನೋಡಿ: ಡಿಸ್‌ಆರ್ಮಮೆಂಟ್, ದಿ ಯುನೈಟೆಡ್ ಸ್ಟೇಟ್ಸ್, ಅಂಡ್ ದಿ NPT, 2007ರ ಮಾರ್ಚ್ 17ರಂದು ಫ್ರಾನ್ಸ್‌ನ ಅನ್ನೆಸಿಯಲ್ಲಿ "ಪ್ರಿಪೇರಿಂಗ್ ಫಾರ್ 2010: ಗೆಟಿಂಗ್ ದಿ ಪ್ರೋಸೆಸ್ ರೈಟ್" ಎಂಬ ವಿಷಯದ ಕುರಿತಾದ ಸಮಾವೇಶದಲ್ಲಿ, ಪರಮಾಣು ಪ್ರಸರಣ ಮಾಡದಿರುವಿಕೆಗೆ ಸಂಬಂಧಿಸಿದ U.S. ವಿಶೇಷ ಪ್ರತಿನಿಧಿಯಾದ ಕ್ರಿಸ್ಟೋಫರ್ ಫೋರ್ಡ್ ಮಾಡಿದ ಭಾಷಣ; ನ್ಯೂಕ್ಲಿಯರ್ ಡಿಸ್‌ಆರ್ಮಮೆಂಟ್ ಪ್ರೋಗ್ರೆಸ್ ಅಂಡ್ ಚಾಲೆಂಜಸ್ ಇನ್ ದಿ ಪೋಸ್ಟ್-ಕೋಲ್ಡ್ ವಾರ್ ವರ್ಲ್ಡ್ Archived 2008-05-15 ವೇಬ್ಯಾಕ್ ಮೆಷಿನ್ ನಲ್ಲಿ., ಜಿನೆವಾದಲ್ಲಿ (ಏಪ್ರಿಲ್ 30, 2008) ನಡೆದ 2010ರ NPT ಅವಲೋಕನದ ಸಮಾವೇಶಕ್ಕಾಗಿರುವ ಪೂರ್ವಸಿದ್ಧತಾ ಸಮಿತಿಯ ಎರಡನೇ ಅಧಿವೇಶನಕ್ಕೆ U.S. ಸಲ್ಲಿಸಿದ ಹೇಳಿಕೆ.
- ↑ U.S. ಸ್ಪೆಷಲ್ ರೆಪ್ರೆಸೆಂಟೆಟಿವ್ ಫಾರ್ ನ್ಯೂಕ್ಲಿಯರ್ ನಾನ್‌ಪ್ರಾಲಿಫರೇಷನ್ ಕ್ರಿಸ್ಟೋಫರ್ ಫೋರ್ಡ್, "ಡಿಸ್‌ಆರ್ಮ್‌ಮೆಂಟ್ ಅಂಡ್ ನಾನ್-ನ್ಯೂಕ್ಲಿಯರ್ ಸ್ಟೆಬಿಲಿಟಿ ಇನ್ ಟುಮಾರೋಸ್ ವರ್ಲ್ಡ್", ರಿಮಾರ್ಕ್ಸ್ ಟು ದಿ ಕಾನ್ಫರೆನ್ಸ್ ಆನ್ ಡಿಸ್‌ಆರ್ಮ್‌ಮೆಂಟ್ ಅಂಡ್ ನಾನ್‌ಪ್ರಾಲಿಫರೇಷನ್ ಇಷ್ಯೂಸ್, ನಾಗಸಾಕಿ, ಜಪಾನ್ (ಆಗಸ್ಟ್ 31, 2007) Archived 2010-06-12 ವೇಬ್ಯಾಕ್ ಮೆಷಿನ್ ನಲ್ಲಿ..
- ↑ Daniel Dombey (19 February 2007). "Director General's Interview on Iran and DPRK". Financial Times. Retrieved 2006-05-04.
- ↑ ನೋಡಿ: ನ್ಯಾಷನಲ್ ಡಿಫೆನ್ಸ್ ಯೂನಿವರ್ಸಿಟಿಯಲ್ಲಿ (2004ರ ಫೆಬ್ರುವರಿ 11) ಅಧ್ಯಕ್ಷ ಬುಷ್‌ನಿಂದ ಮಾಡಲ್ಪಟ್ಟ ಟೀಕೆಗಳು, ಇಲ್ಲಿ ಲಭ್ಯ: http://georgewbush-whitehouse.archives.gov/news/releases/2004/02/20040211-4.html (ENR ತಂತ್ರಜ್ಞಾನದ ಹರಡುವಿಕೆಯನ್ನು ತಡೆಯುವ ಉಪಕ್ರಮವನ್ನು ಪ್ರಕಟಿಸಿರುವುದು).
- ↑ http://www.iaea.org/NewsCenter/Focus/IaeaDprk/dprk.pdf Archived 2007-06-07 ವೇಬ್ಯಾಕ್ ಮೆಷಿನ್ ನಲ್ಲಿ. and http://www.iaea.org/NewsCenter/MediaAdvisory/2003/med-advise_048.shtml
- ↑ ೧೫.೦ ೧೫.೧ Implementation of the NPT Safeguards Agreement in the Islamic Republic of Iran (PDF), IAEA, 10 November 2003, GOV/2003/75, retrieved 2007-10-25
- ↑ ೧೬.೦ ೧೬.೧ Implementation of the NPT Safeguards Agreement in the Islamic Republic of Iran (PDF), IAEA, 24 September 2005, GOV/2005/77, retrieved 2007-10-25
- ↑ Mohamed ElBaradei (2004), Preserving the Non-Proliferation Treaty (PDF), Disarmament Forum, archived from the original (PDF) on 2007-11-27, retrieved 2007-11-17
- ↑ "ಪರಮಾಣು ಪ್ರಸರಣ-ಮಾಡದಿರುವ ಒಡಂಬಡಿಕೆ (PDF) - IAEA" (PDF). Archived from the original (PDF) on 2007-08-07. Retrieved 2010-05-06.
- ↑ ೧೯.೦ ೧೯.೧ ಓಟ್ಫ್ರೀಡ್ ನಾಸ್ಸೌರ್, ಇನ್ಸ್ಟಿಟ್ಯೂಟ್ ಫಾರ್ ಎನರ್ಜಿ ಅಂಡ್ ಎನ್ವಿರಾನ್ಮೆಂಟಲ್ ರಿಸರ್ಚ್ (ieer.org), ಸೈನ್ಸ್ ಫಾರ್ ಡೆಮಕ್ರಾಟಿಕ್ ಆಕ್ಷನ್ ಸಂಪುಟ 9 ಸಂಖ್ಯೆ 3, ಮೇ 2001, ನ್ಯೂಕ್ಲಿಯರ್ ಷೇರಿಂಗ್ ಇನ್ NATO: ಈಸ್ ಇಟ್ ಲೀಗಲ್?
- ↑ ಹಾನ್ಸ್ M. ಕ್ರಿಸ್ಟೆನ್‌ಸೆನ್, ನ್ಯಾಷನಲ್ ರಿಸೋರ್ಸಸ್ ಡಿಫೆನ್ಸ್ ಕೌನ್ಸಿಲ್ (nrdc.org), ಫೆಬ್ರುವರಿ 2005, U.S. ನ್ಯೂಕ್ಲಿಯರ್ ವೆಪನ್ಸ್ ಇನ್ ಯುರೋಪ್: ಎ ರಿವ್ಯೂ ಆಫ್ ಪೋಸ್ಟ್-ಕೋಲ್ಡ್ ವಾರ್ ಪಾಲಿಸಿ, ಫೋರ್ಸ್ ಲೆವೆಲ್ಸ್, ಅಂಡ್ ವಾರ್ ಪ್ಲಾನಿಂಗ್
- ↑ NATO (nato.int), NATOಸ್ ನ್ಯೂಕ್ಲಿಯರ್ ಫೋರ್ಸಸ್ ಇನ್ ದಿ ನ್ಯೂ ಸೆಕ್ಯುರಿಟಿ ಎನ್ವಿರಾನ್ಮೆಂಟ್
- ↑ ಉದಾಹರಣೆಗೆ ನೋಡಿ: U.S. ಡೈರೆಕ್ಟರ್ ಆಫ್ ಸೆಂಟ್ರಲ್ ಇಂಟೆಲಿಜೆನ್ಸ್, ಲೈಕ್ಲಿಹುಡ್ ಅಂಡ್ ಕಾನ್ಸೀಕ್ವೆನ್ಸಸ್ ಆಫ್ ಎ ಪ್ರಾಲಿಫರೇಷನ್ ಆಫ್ ನ್ಯೂಕ್ಲಿಯರ್ ವೆಪನ್ಸ್ ಸಿಸ್ಟಮ್ಸ್, ಡೀಕ್ಲಾಸಿಫೈಡ್ U.S. ನ್ಯಾಷನಲ್ ಇಂಟೆಲಿಜೆನ್ಸ್ ಎಸ್ಟಿಮೇಟ್, NIE 4-63 (ಜೂನ್ 28, 1963), ಪುಟ 17ರ, ಪ್ಯಾರಾ 40ರಲ್ಲಿ.
- ↑ ಉದಾಹರಣೆಗೆ ನೋಡಿ: U.S. ಡೈರೆಕ್ಟರ್ ಆಫ್ ಸೆಂಟ್ರಲ್ ಇಂಟೆಲಿಜೆನ್ಸ್, ಅನೆಕ್ಸ್ ಟು ನ್ಯಾಷನಲ್ ಇಂಟೆಲಿಜೆನ್ಸ್ ಎಸ್ಟಿಮೇಟ್ ನಂ. 100-2-58: ಡೆವಲಪ್‌ಮೆಂಟ್ ಆಫ್ ನ್ಯೂಕ್ಲಿಯರ್ ಕೇಪಬಿಲಿಟೀಸ್ ಬೈ ಫೋರ್ತ್ ಕಂಟ್ರೀಸ್: ಲೈಕ್ಲಿಹುಡ್ ಅಂಡ್ ಕಾನ್ಸೀಕ್ವೆನ್ಸಸ್, ಡೀಕ್ಲಾಸಿಫೈಡ್ U.S. ನ್ಯಾಷನಲ್ ಇಂಟೆಲಿಜೆನ್ಸ್ ಎಸ್ಟಿಮೇಟ್, NIE 100-2-58 (ಜುಲೈ 1, 1958), ಪುಟ 4ರ, ಪ್ಯಾರಾಗಳು 18-19ರಲ್ಲಿ; U.S. ಡೈರೆಕ್ಟರ್ ಆಫ್ ಸೆಂಟ್ರಲ್ ಇಂಟೆಲಿಜೆನ್ಸ್, ಲೈಕ್ಲಿಹುಡ್ ಅಂಡ್ ಕಾನ್ಸೀಕ್ವೆನ್ಸಸ್ ಆಫ್ ದಿ ಡೆವಲಪ್‌ಮೆಂಟ್ ಆಫ್ ನ್ಯೂಕ್ಲಿಯರ್ ಕೇಪಬಿಲಿಟೀಸ್ ಬೈ ಅಡಿಷನಲ್ ಕಂಟ್ರೀಸ್, ಡೀಕ್ಲಾಸಿಫೈಡ್ U.S. ನ್ಯಾಷನಲ್ ಇಂಟೆಲಿಜೆನ್ಸ್ ಎಸ್ಟಿಮೇಟ್, NIE 100-4-60 (ಸೆಪ್ಟೆಂಬರ್ 20, 1960), ಪುಟ 2ರ, ಪ್ಯಾರಾ 4ರಲ್ಲಿ, & ಪುಟ 8ರ, ಪ್ಯಾರಾಗಳು 27-29ರಲ್ಲಿ.
- ↑ "ಆರ್ಕೈವ್ ನಕಲು" (PDF). Archived from the original (PDF) on 2012-03-02. Retrieved 2010-05-06.
- ↑ ಇಂಪ್ಯಾಕ್ಟ್ ಆಫ್ US ವಾರ್‌ಗೇಮ್ಸ್ ಆನ್ ಪಾಕಿಸ್ತಾನ್ N-ಆರ್ಮ್ಸ್ ‘ನೆಗಟಿವ್’ -DAWN - ಟಾಪ್ ಸ್ಟೋರೀಸ್; ಡಿಸೆಂಬರ್ 03, 2007
- ↑ http://www.indianembassy.org/policy/CTBT/nuclear_doctrine_aug_17_1999.html
- ↑ http://www.undemocracy.com/meeting/A-52-PV.67#pg015-bk01[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಇಂಡಿಯಾ ಸೀಕ್ಸ್ ಜಪಾನ್'ಸ್ ಸಪೋರ್ಟ್, ಕಾಲ್ಸ್ NPT 'ಫ್ಲಾಡ್'". Archived from the original on 2012-01-12. Retrieved 2010-05-06.
- ↑ http://merln.ndu.edu/archivepdf/iran/State/66861.pdf[ಶಾಶ್ವತವಾಗಿ ಮಡಿದ ಕೊಂಡಿ]
- ↑ https://web.archive.org/web/20091228032712/http://afp.google.com/article/ALeqM5geN2RWjoN4oJhPibc7rhkyxMXfzg
- ↑ IAEA ಬೋರ್ಡ್ ಅಪ್ರೂವ್ಸ್ ಇಂಡಿಯಾ-ಸೇಫ್‌ಗಾರ್ಡ್ಸ್ ಅಗ್ರಿಮೆಂಟ್
- ↑ "NSG CLEARS NUCLEAR WAIVER FOR INDIA". CNN-IBN. September 6, 2008. Archived from the original on 2008-09-12. Retrieved 2008-09-06.
- ↑ "INDIA JOINS NUCLEAR CLUB, GETS NSG WAIVER". NDTV.com. September 6, 2008. Archived from the original on 2008-09-08. Retrieved 2008-09-06.
- ↑ http://www.washingtonpost.com/wp-dyn/content/article/2008/09/11/AR2008091103099.html
- ↑ ಅಮೆರಿಕಾ ಸಂಯುಕ್ತ ಸಂಸ್ಥಾನಗಳು-ಭಾರತದ ಪರಮಾಣು ಸಹಕಾರ ಅನುಮೋದನೆ ಮತ್ತು ಪ್ರಸರಣ ಮಾಡದಿರುವಿಕೆಯ ಹೆಚ್ಚಳದ ಕಾಯಿದೆಯಾದ H.R. 7081ಗೆ ಅಧ್ಯಕ್ಷ ಬುಷ್ ಸಹಿಹಾಕುತ್ತಾರೆ
- ↑ BBC (bbc.co.uk), 2 ಮಾರ್ಚ್ 2006, US ಅಂಡ್ ಇಂಡಿಯಾ ಸೀಲ್ ನ್ಯೂಕ್ಲಿಯರ್ ಅಕಾರ್ಡ್
- ↑ http://english.aljazeera.net/news/middleeast/2009/09/2009918173136830771.html
- ↑ ಕೊರಿಯನ್ ನ್ಯೂಸ್ ಸರ್ವೀಸ್, ಟೋಕಿಯೋ (kcna.co.jp), 10 ಜನವರಿ 2003, ಸ್ಟೇಟ್‌ಮೆಂಟ್ ಆಫ್ DPRK ಗೌರ್ನ್‌ಮೆಂಟ್ ಆನ್ ಇಟ್ಸ್ ವಿತ್‌ಡ್ರಾಯಲ್ ಫ್ರಂ NPT Archived 2009-09-20 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "ಸಮ್ಮತಿಸಲ್ಪಟ್ಟ ಆಧಾರ ಚೌಕಟ್ಟಿನ ಮೂಲ ಗ್ರಂಥಪಾಠ" (PDF). Archived from the original (PDF) on 2011-06-04. Retrieved 2010-05-06.
- ↑ ನ್ಯೂಕ್ಲಿಯರ್ ಏಜ್ ಪೀಸ್ ಫೌಂಡೇಷನ್ (wagingpeace.org), 10 ಏಪ್ರಿಲ್ 2003, ನಾರ್ತ್ ಕೊರಿಯಾಸ್ ವಿತ್‌ಡ್ರಾಯಲ್ ಫ್ರಂ ನಾನ್‌ಪ್ರಾಲಿಫರೇಷನ್ ಟ್ರೀಟಿ ಅಫಿಷಿಯಲ್ Archived 2006-04-12 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಇಂಟರ್‌ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ (iaea.org), ಮೇ 2003, ಫ್ಯಾಕ್ಟ್‌ಷೀಟ್ ಆನ್ DPRK ನ್ಯೂಕ್ಲಿಯರ್ ಸೇಫ್‌ಗಾರ್ಡ್ಸ್
- ↑ Khan, Joseph (19 September 2005). "North Korea Says It Will Abandon Nuclear Efforts". New York Times.
{{cite news}}
: Cite has empty unknown parameter:|coauthors=
(help) - ↑ ಏಜೆನ್ಸ್ ಫ್ರಾನ್ಸ್ ಪ್ರೆಸ್ಸೆ, 2006, N.ಕೊರಿಯಾ ರೈಸಸ್ ಸ್ಟೇಕ್ಸ್ ಆನ್ ನ್ಯೂಕ್ಲಿಯರ್ ಡೀಲ್ ವಿತ್ ರಿಯಾಕ್ಟರ್ ಡಿಮ್ಯಾಂಡ್ Archived 2009-01-08 ವೇಬ್ಯಾಕ್ ಮೆಷಿನ್ ನಲ್ಲಿ., ಮೀಡಿಯಾ ಕಾರ್ಪ್ ನ್ಯೂಸ್‌ನಿಂದ ಒದಗಿಸಲ್ಪಟ್ಟಿದ್ದು (channelnewsasia.com), 20 ಸೆಪ್ಟೆಂಬರ್ 2005
- ↑ BBC (news.bbc.co.uk), 3 ಅಕ್ಟೋಬರ್ 2006, N ಕೊರಿಯಾ 'ಟು ಕಂಡಕ್ಟ್ ನ್ಯೂಕ್ಲಿಯರ್ ಟೆಸ್ಟ್'
- ↑ Carol Giacomo (10 February 2007). "N.Korean uranium enrichment program fades as issue". Reuters. Retrieved 2007-02-11.
- ↑ "U.S. Had Doubts on North Korean Uranium Drive". New York Times. March 1, 2007. Retrieved 2007-03-01.
- ↑ "New Doubts On Nuclear Efforts by North Korea". Washington Post. March 1, 2007. Retrieved 2007-03-01.
- ↑ "Another Intelligence Twist". Washington Post. March 2, 2007. Retrieved 2007-03-10.
- ↑ ಸ್ಥೂಲವಾಗಿ ನೋಡಿ: U.S. ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್, "ಅಡ್ಹೆರೆನ್ಸ್ ಟು ಅಂಡ್ ಕಾಂಪ್ಲಯೆನ್ಸ್ ವಿತ್ ಆರ್ಮ್ಸ್ ಕಂಟ್ರೋಲ್, ನಾನ್‌ಪ್ರಾಲಿಫರೇಷನ್, ಅಂಡ್ ಡಿಸ್‌ಆರ್ಮಮೆಂಟ್ ಅಗ್ರೀಮೆಂಟ್ಸ್ ಅಂಡ್ ಕಮಿಟ್‌ಮೆಂಟ್ಸ್", ಆಗಸ್ಟ್ 2005, ಪುಟಗಳು 87-92, www.state.gov/documents/organization/52113.pdf; ಆಂಟನಿ ಫಯೋಲಾ, "N. ಕೊರಿಯಾ ಡಿಕ್ಲೇರ್ಸ್ ಇಟ್‌ಸೆಲ್ಫ್ ಎ ನ್ಯೂಕ್ಲಿಯರ್ ಪವರ್", ದಿ ವಾಷಿಂಗ್ಟನ್ ಪೋಸ್ಟ್, ಫೆಬ್ರುವರಿ 10, 2005, www.washingtonpost.com/wp-dyn/articles/A12836-2005Feb10.html; "ಖಾನ್ 'ಗೇವ್ N. ಕೊರಿಯಾ ಸೆಂಟ್ರಿಫ್ಯೂಜಸ್'", BBC ನ್ಯೂಸ್, ಆಗಸ್ಟ್ 24, 2005, http://news.bbc.co.uk/2/hi/south_asia/4180286.stm; "ಪಾಕಿಸ್ತಾನ್ ಅಂಡ್ ನಾರ್ತ್ ಕೊರಿಯಾ: ಡೇಂಜರಸ್ ಕೌಂಟರ್-ಟ್ರೇಡ್ಸ್", IISS ಸ್ಟ್ರಾಟಜಿಕ್ ಕಾಮೆಂಟ್ಸ್, ಸಂಪುಟ 8, ಸಂಖ್ಯೆ 9 (ನವೆಂಬರ್ 2002).
- ↑ EU ಅಂಡ್ ಇರಾನ್ ಅವರ್ಟ್ ನ್ಯೂಕ್ಲಿಯರ್ ಡೆಡ್‌ಲಾಕ್ Archived 2012-01-31 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಇಂಪ್ಲಿಮೆಂಟೇಷನ್ ಆಫ್ ದಿ NPT ಸೇಫ್‌ಗಾರ್ಡ್ಸ್ ಅಗ್ರೀಮೆಂಟ್ ಇನ್ ದಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್, 2006ರ ಫೆಬ್ರುವರಿ 4ರಂದು ನಿರ್ಣಯವನ್ನು ಅಳವಡಿಸಿಕೊಳ್ಳಲಾಯಿತು,
- ↑ "UN ಭದ್ರತಾ ಮಂಡಳಿಯ ನಿರ್ಣಯ 1737" (PDF). Archived from the original (PDF) on 2009-08-10. Retrieved 2010-05-06.
- ↑ BBC : ಇರಾನ್ 'ರೆಸ್ಯೂಮ್ಸ್' ನ್ಯೂಕ್ಲಿಯರ್ ಎನ್‌ರಿಚ್‌ಮೆಂಟ್
- ↑ ಇಂಪ್ಲಿಮೆಂಟೇಷನ್ ಆಫ್ ದಿ NPT ಸೇಫ್‌ಗಾರ್ಡ್ಸ್ ಅಗ್ರೀಮೆಂಟ್ ಅಂಡ್ ರೆಲವೆಂಟ್ ಪ್ರಾವಿಷನ್ಸ್ ಆಫ್ ಸೆಕ್ಯುರಿಟಿ ಕೌನ್ಸಿಲ್ ರೆಸಲ್ಯೂಷನ್ಸ್ 1737 (2006) ಅಂಡ್ 1747 (2007) ಇನ್ ದಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್
- ↑ ಇಂಪ್ಲಿಮೆಂಟೇಷನ್ ಆಫ್ ದಿ NPT ಸೇಫ್‌ಗಾರ್ಡ್ಸ್ ಅಗ್ರೀಮೆಂಟ್ ಅಂಡ್ ರೆಲವೆಂಟ್ ಪ್ರಾವಿಷನ್ಸ್ ಆಫ್ ಸೆಕ್ಯುರಿಟಿ ಕೌನ್ಸಿಲ್ ರೆಸಲ್ಯೂಷನ್ಸ್ 1737 (2006) ಅಂಡ್ 1747 (2007) ಇನ್ ದಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ 22 ಫೆಬ್ರುವರಿ 2008
- ↑ GOV/2009/35, ಇಂಪ್ಲಿಮೆಂಟೇಷನ್ ಆಫ್ ದಿ NPT ಸೇಫ್‌ಗಾರ್ಡ್ಸ್ ಅಗ್ರೀಮೆಂಟ್ ಅಂಡ್ ರೆಲವೆಂಟ್ ಪ್ರಾವಿಷನ್ಸ್ ಆಫ್ ಸೆಕ್ಯುರಿಟಿ ಕೌನ್ಸಿಲ್ ರೆಸಲ್ಯೂಷನ್ಸ್ 1737 (2006) ಅಂಡ್ 1747 (2007), 1803 (2008) ಅಂಡ್ 1835 (2008) ಇನ್ ದಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ 5 ಜೂನ್ 2009
- ↑ ಅಡ್ಹೆರೆನ್ಸ್ ಟು ಅಂಡ್ ಕಂಪ್ಲೈಯೆನ್ಸ್ ವಿತ್ ಆರ್ಮ್ಸ್ ಕಂಟ್ರೋಲ್, ನಾನ್‌ಪ್ರಾಲಿಫರೇಷನ್, ಅಂಡ್ ಡಿಸ್‌ಆರ್ಮಮೆಂಟ್ ಅಗ್ರೀಮೆಂಟ್ಸ್ ಅಂಡ್ ಕಮಿಟ್‌ಮೆಂಟ್ಸ್, ಬ್ಯೂರೋ ಆಫ್ ವೆರಿಫಿಕೇಷನ್ ಅಂಡ್ ಕಂಪ್ಲೈಯೆನ್ಸ್, U.S. ಸಂಸ್ಥಾನದ ಇಲಾಖೆ, ಆಗಸ್ಟ್ 30, 2005
- ↑ "ಇರಾನ್: ನ್ಯೂಕ್ಲಿಯರ್ ಇಂಟೆನ್ಷನ್ಸ್ ಅಂಡ್ ಕೇಪಬಿಲಿಟೀಸ್ (ನ್ಯಾಷನಲ್ ಇಂಟೆಲಿಜೆನ್ಸ್ ಎಸ್ಟಿಮೇಟ್)" (PDF). Archived from the original (PDF) on 2012-05-05. Retrieved 2010-05-06.
- ↑ ಉದಾಹರಣೆಗೆ ನೋಡಿ: U.S. ಸ್ಪೆಷಲ್ ರೆಪ್ರೆಸೆಂಟೆಟಿವ್ ಫಾರ್ ನ್ಯೂಕ್ಲಿಯರ್ ನಾನ್‌ಪ್ರಾಲಿಫರೇಷನ್ ಕ್ರಿಸ್ಟೋಫರ್ A. ಫೋರ್ಡ್, "ದಿ 2020 NPT ರಿವ್ಯೂ ಸೈಕಲ್ ಸೋ ಫಾರ್: ಎ ವ್ಯೂ ಫ್ರಂ ದಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ", ರಿಮಾರ್ಕ್ಸ್ ಅಟ್ ವಿಲ್ಟನ್ ಪಾರ್ಕ್, UK (ಡಿಸೆಂಬರ್ 20, 2007), https://web.archive.org/web/20080110144743/http://www.state.gov/t/isn/rls/rm/98382.htm ("ಗಿವನ್ ದಟ್ ಪೊಸೆಷನ್ ಆಫ್ ದಿ ನೆಸಸರಿ ಕ್ವಾಂಟಿಟಿ ಆಫ್ ಫಿಸೈಲ್ ಮೆಟೀರಿಯಲ್ ಈಸ್ ದಿ ಮೋಸ್ಟ್ ಡಿಫಿಕಲ್ಟ್ ಚಾಲೆಂಜ್ ಇನ್ ಡೆವಲಪಿಂಗ್ ಎ ನ್ಯೂಕ್ಲಿಯರ್ ವೆಪನ್, ದಿ ರೀಸೆಂಟ್ಲಿ-ರಿಲೀಸ್ಡ್ U.S. ನ್ಯಾಷನಲ್ ಇಂಟೆಲಿಜೆನ್ಸ್ ಎಸ್ಟಿಮೇಟ್ (NIE) ಹಾರ್ಡ್‌ಲಿ ಎಲಿವಿಯೇಟ್ಸ್ ಅವರ್ ಕನ್ಸರ್ನ್ಸ್ ಎಬೌಟ್ ಇರಾನ್’ಸ್ ನ್ಯೂಕ್ಲಿಯರ್ ವರ್ಕ್.").
- ↑ Mark Mazzetti (February 6, 2008). "Intelligence Chief Cites Qaeda Threat to U.S." New York Times.
{{cite news}}
: Cite has empty unknown parameter:|coauthors=
(help) - ↑ "IAEA ಇನ್ಫರ್ಮೇಷನ್ ಸರ್ಕ್ಯುಲರ್ 724 (ಮಾರ್ಚ್ 2008): ಕಮ್ಯುನಿಕೇಷನ್ ಫ್ರಂ ದಿ ಪರ್ಮನೆಂಟ್ ಮಿಷನ್ ಆಫ್ ದಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಟು ದಿ ಏಜೆನ್ಸಿ" (PDF). Archived from the original (PDF) on 2010-09-11. Retrieved 2010-05-06.
- ↑ "XV ಮಿನಿಸ್ಟೀರಿಯಲ್ ಕಾನ್ಫರೆನ್ಸ್ ಆಫ್ ದಿ ನಾಲ್-ಅಲೈನ್ಡ್ ಮೂವ್‌ಮೆಂಟ್ (ಜುಲೈ 2008): ಸ್ಟೇಟ್‌ಮೆಂಟ್ ಆನ್ ದಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್'ಸ್ ನ್ಯೂಕ್ಲಿಯರ್ ಇಷ್ಯೂ" (PDF). Archived from the original (PDF) on 2010-09-11. Retrieved 2010-05-06.
- ↑ "OIC (ಮಾರ್ಚ್ 2008): UN ಸೆಕ್ರೆಟರಿ-ಜನರಲ್'ಸ್ ಅಡ್ರೆಸ್ ಟು ದಿ 11ತ್ ಸಮಿಟ್ ಆಫ್ ದಿ ಆರ್ಗನೈಜೇಷನ್ ಆಫ್ ದಿ ಇಸ್ಲಾಮಿಕ್ ಕಾನ್ಫರೆನ್ಸ್" (PDF). Archived from the original (PDF) on 2008-12-18. Retrieved 2010-05-06.
- ↑ ಸ್ಥೂಲವಾಗಿ ನೋಡಿ: ಅಸಿಸ್ಟೆಂಟ್ ಸೆಕ್ರೆಟರಿ ಆಫ್ ಸ್ಟೇಟ್ ಪೌಲಾ ಡೆಸಟರ್, "ಲಿಬಿಯಾ ರಿನೌನ್ಸಸ್ ವೆಪನ್ಸ್ ಆಫ್ ಮಾಸ್ ಡಿಸ್ಟ್ರಕ್ಷನ್, http://usinfo.state.gov/journals/itps/0305/ijpe/desutter.htm Archived 2008-11-12 ವೇಬ್ಯಾಕ್ ಮೆಷಿನ್ ನಲ್ಲಿ.; ಡೆಸಟರ್, "ಕಂಪ್ಲೀಷನ್ ಆಫ್ ವೆರಿಫಿಕೇಷನ್ ವರ್ಕ್ ಇನ್ ಲಿಬಿಯಾ" ಟೆಸ್ಟಿಮನಿ ಬಿಫೋರ್ ದಿ ಸಬ್‌ಕಮಿಟಿ ಆನ್ ಇಂಟರ್‌ನ್ಯಾಷನಲ್ ಟೆರರಿಸಂ, ನಾನ್‌ಪ್ರಾಲಿಫರೇಷನ್, ಅಂಡ್ ಹ್ಯೂಮನ್ ರೈಟ್ಸ್ (ಸೆಪ್ಟೆಂಬರ್ 22, 2004), http://www.state.gov/t/vci/rls/rm/2004/37220.htm; ಡೆಸಟರ್, "U.S. ಗೌರ್ನ್‌ಮೆಂಟ್'ಸ್ ಅಸಿಸ್ಟೆನ್ಸ್ ಟು ಲಿಬಿಯಾ ಇನ್ ದಿ ಎಲಿಮಿನೇಷನ್ ಆಫ್ ಇಟ್ಸ್ ವೆಪನ್ಸ್ ಆಫ್ ಮಾಸ್ ಡಿಸ್ಟ್ರಕ್ಷನ್ (WMD)," ಟೆಸ್ಟಿಮನಿ ಬಿಫೋರ್ ದಿ ಸೆನೆಟ್ ಫಾರಿನ್ ರಿಲೇಷನ್ಸ್ ಕಮಿಟಿ (ಫೆಬ್ರುವರಿ 26, 2004), http://www.state.gov/t/vci/rls/rm/2004/29945.htm.
- ↑ ನಾರ್ತ್ ಕೊರಿಯಾ ಪ್ರೊಫೈಲ್ - ನ್ಯೂಕ್ಲಿಯರ್ ಓವರ್‌ವ್ಯೂ
- ↑ ಮೀಡಿಯಾ ಅಡ್ವೈಸರಿ 2003/48 - IAEA ಬೋರ್ಡ್ ಆಫ್ ಗೌರ್ನರ್ಸ್ ಅಡಾಪ್ಟ್ಸ್ ರೆಸಲ್ಯೂಷನ್ ಆನ್ ಸೇಫ್ ಗಾರ್ಡ್ಸ್ ಇನ್ ನಾರ್ತ್ ಕೊರಿಯಾ - 12 ಫೆಬ್ರುವರಿ
- ↑ ದಿ ಅಸೋಸಿಯೇಟೆಡ್ ಪ್ರೆಸ್, 2005, ಬುಷ್ ಓಪನ್ಸ್ ಎನರ್ಜಿ ಡೋರ್ ಟು ಇಂಡಿಯಾ Archived 2006-02-19 ವೇಬ್ಯಾಕ್ ಮೆಷಿನ್ ನಲ್ಲಿ., CNNನಿಂದ ಒದಗಿಸಲ್ಪಟ್ಟಿದ್ದು (cnn.com), 18 ಜುಲೈ 2005
- ↑ ಜಾರ್ಜ್ ಮಾನ್‌ಬಯೋಟ್, ದಿ ಗಾರ್ಡಿಯನ್ (guardian.co.uk), 2 ಆಗಸ್ಟ್ 2005, ದಿ ಟ್ರೀಟಿ ರೆಕರ್ಸ್
- ↑ ಸೈಯದ್ ಹಮೀದ್ ಅಲ್ಬರ್, ಮಲೇಷಿಯಾದ ವಿದೇಶಾಂಗ ವ್ಯವಹಾರಗಳ ಸಚಿವ, ವಿಶ್ವಸಂಸ್ಥೆ (un.org), ನ್ಯೂಯಾರ್ಕ್, 2 ಮೇ 2005, ದಿ ಜನರಲ್ ಡಿಬೇಟ್ ಆಫ್ ದಿ 2005 ರಿವ್ಯೂ ಕಾನ್ಫರೆನ್ಸ್ ಆಫ್ ದಿ ಪಾರ್ಟೀಸ್ ಟು ದಿ ಟ್ರೀಟಿ ಆನ್ ದಿ ನಾನ್-ಪ್ರಾಲಿಫರೇಷನ್ ಆಫ್ ನ್ಯೂಕ್ಲಿಯರ್ ವೆಪನ್ಸ್
- ↑ 2009 NPT ಪ್ರೆಪ್‌ಕಾಮ್ – ಪ್ಲಸಸ್, ಮೈನಸಸ್, ಅಂಡ್ ಬಾಟಮ್ ಲೈನ್[ಶಾಶ್ವತವಾಗಿ ಮಡಿದ ಕೊಂಡಿ]
- ↑ ಒಬಾಮಾ ಕಾಲ್ಸ್ ಫಾರ್ ಗ್ಲೋಬಲ್ ನ್ಯೂಕ್ಲಿಯರ್ ಸಮಿಟ್ ಇನ್ ಮಾರ್ಚ್ 2010 America.gov ನಿಂದ 2010ರ ಜನವರಿ 8ರಂದು ಮರುಸಂಪಾದಿಸಲಾಯಿತು.
- ↑ "ನ್ಯೂಕ್ಲಿಯರ್ ಪೋಶ್ಚರ್ ರಿವ್ಯೂ ಎಕ್ಸರ್ಪ್ಟ್ಸ್". Archived from the original on 2009-06-10. Retrieved 2010-05-06.
- ↑ ಹೆರ್ಷ್: U.S. ಮುಲ್ಸ್ ನ್ಯೂಕ್ಲಿಯರ್ ಆಪ್ಷನ್ ಫಾರ್ ಇರಾನ್
- ↑ ಥೌಸಂಡ್ಸ್ ಆಫ್ ನ್ಯೂಕ್ಲಿಯರ್ ವೆಪನ್ಸ್ ಆನ್ ಹೈ ಅಲರ್ಟ್ ಮೇಕ್ಸ್ ಮಾಕರಿ ಆಫ್ ಡಿಸ್‌ಆರ್ಮಮೆಂಟ್ ಪ್ರೋಗ್ರೆಸ್, ವಿತ್ ನಾನ್-ಪ್ರಾಲಿಫರೇಷನ್ ಥ್ರೆಟನ್ಡ್ ಬೈ ಲಾಪ್‌ಸೈಡೆಡ್ ಅಪ್ರೋಚ್, ಫಸ್ಟ್ ಕಮಿಟಿ ಟೋಲ್ಡ್
- ↑ ಉದಾಹರಣೆಗಾಗಿ ನೋಡಿ: "ಡಿಸ್‌ಆರ್ಮಮೆಂಟ್, ದಿ ಯುನೈಟೆಡ್ ಸ್ಟೇಟ್ಸ್, ಅಂಡ್ ದಿ NPT," http://www.state.gov/t/isn/rls/other/81946.htm; U.S. ಸ್ಪೆಷಲ್ ರೆಪ್ರೆಸೆಂಟೆಟಿವ್ ಫಾರ್ ನ್ಯೂಕ್ಲಿಯರ್ ನಾನ್‌ಪ್ರಾಲಿಫರೇಷನ್ ಕ್ರಿಸ್ಟೋಫರ್ ಫೋರ್ಡ್, "ಪ್ರೊಸೀಜರ್ ಅಂಡ್ ಸಬ್ಸ್‌ಟೆನ್ಸ್ ಇನ್ ದಿ NPT ರಿವ್ಯೂ ಸೈಕಲ್: ದಿ ಎಗ್ಸಾಂಪಲ್ ಆಫ್ ನ್ಯೂಕ್ಲಿಯರ್ ಡಿಸ್‌ಆರ್ಮಮೆಂಟ್," ರಿಮಾರ್ಕ್ಸ್ ಟು ದಿ ಕಾನ್ಫರೆನ್ಸ್ ಆನ್ "ಪ್ರಿಪೇರಿಂಗ್ ಫಾರ್ 2010: ಗೆಟಿಂಗ್ ದಿ ಪ್ರೋಸಸ್ ರೈಟ್," ಅನೆಸಿ, ಫ್ರಾನ್ಸ್ (ಮಾರ್ಚ್ 17, 2007), http://www.state.gov/t/isn/rls/rm/81940.htm; "ದಿ ಯುನೈಟೆಡ್ ಸ್ಟೇಟ್ಸ್ ಅಂಡ್ ಆರ್ಟಿಕಲ್ VI: ಎ ರೆಕಾರ್ಡ್ ಆಫ್ ಅಕಂಪ್ಲಿಶ್‌ಮೆಂಟ್," http://geneva.usmission.gov/CD/updates/05-06-08%20Article%20VI%20Briefing.pdf Archived 2008-12-18 ವೇಬ್ಯಾಕ್ ಮೆಷಿನ್ ನಲ್ಲಿ..
- ↑ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಭದ್ರತೆ ಮತ್ತು ಸಹಕಾರಕ್ಕಾಗಿರುವ ಕೇಂದ್ರದಲ್ಲಿ U.S. ರಾಷ್ಟ್ರೀಯ ಭದ್ರತಾ ಸಲಹೆಗಾರನಾದ ಸ್ಟೆಫನ್ ಹೇಡ್ಲಿಯಿಂದ ಮಾಡಲ್ಪಟ್ಟ ಟೀಕೆಗಳು (ಫೆಬ್ರುವರಿ 8, 2008), https://www.whitehouse.gov/news/releases/2008/02/20080211-6.html.
- ↑ ಡಿಸ್‌ಆರ್ಮಮೆಂಟ್, ದಿ ಯುನೈಟೆಡ್ ಸ್ಟೇಟ್ಸ್, ಅಂಡ್ ದಿ NPT
- ↑ "FCO ಫ್ಯಾಕ್ಟ್ ಷೀಟ್ ಆನ್ ನ್ಯೂಕ್ಲಿಯರ್ ವೆಪನ್ಸ್". Archived from the original on 2008-04-06. Retrieved 2008-04-06.
- ↑ "ದಿ 2005 NPT ರಿವ್ಯೂ ಕಾನ್ಫರೆನ್ಸ್: ಎ ಫ್ರೆಂಚ್ ಪರ್‌ಸ್ಪೆಕ್ಟಿವ್". Archived from the original on 2010-04-30. Retrieved 2010-05-06.
- ↑ 2005ರ NPT ಅವಲೋಕನದ ಸಮಾವೇಶದಲ್ಲಿ ರಷ್ಯಾದ ಉಪ ವಿದೇಶಾಂಗ ಖಾತೆ ಸಚಿವ ಕಿಸ್ಲ್ಯಾಕ್‌ನಿಂದ ಬಂದ ಹೇಳಿಕೆ
- ↑ 2008ರ NPT ಪ್ರೆಪ್‌ಕಾಂಗೆ P5ನಿಂದ ನೀಡಲ್ಪಟ್ಟ ಹೇಳಿಕೆ
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಪರಮಾಣು ಪ್ರಸರಣ-ಮಾಡದಿರುವ ಒಡಂಬಡಿಕೆ (PDF) - IAEA Archived 2007-08-07 ವೇಬ್ಯಾಕ್ ಮೆಷಿನ್ ನಲ್ಲಿ.
- UN ನಿರಸ್ತ್ರೀಕರಣ ವಿಚಾರಗಳ ಕಚೇರಿಯ NPT ವಿಭಾಗ
- npt-tv.netನಲ್ಲಿನ ಪ್ರಸರಣ-ಮಾಡದಿರುವ ಒಡಂಬಡಿಕೆ ಸಮಾವೇಶಳಿಂದ ಪಡೆಯಲಾದ ವಿಡಿಯೋ ಸಂದರ್ಶನಗಳು Archived 2009-05-14 ವೇಬ್ಯಾಕ್ ಮೆಷಿನ್ ನಲ್ಲಿ.
- ಅಬಾಲಿಷನ್ 2000 ಯುರೋಪ್
- ಪೀಪಲ್ vs. ದಿ ಬಾಂಬ್: ಷೋಡೌನ್ ಅಟ್ ದಿ UN (ವಿಡಿಯೋ)
- NuclearFiles.org Archived 2015-06-08 ವೇಬ್ಯಾಕ್ ಮೆಷಿನ್ ನಲ್ಲಿ. ಪರಮಾಣು NPTಯಿಂದ ಪಡೆಯಲಾದ ಸಾರಸಂಗ್ರಹ ಮತ್ತು ಮೂಲ ಗ್ರಂಥಪಾಠ
- ಸದಸ್ಯತ್ವ/ಸಹಿದಾರರು Archived 2003-05-28 at the Library of Congress
- ಸೆಂಟರ್ ಫಾರ್ ಎ ವರ್ಲ್ಡ್ ಇನ್ ಬ್ಯಾಲೆನ್ಸ್ನಲ್ಲಿನ ಪರಮಾಣು ಪ್ರಸರಣ-ಮಾಡದಿರುವ ಪ್ರಚಲಿತ ಪದ್ಧತಿಯ ಸ್ಥೂಲ ಸಮೀಕ್ಷೆ[ಶಾಶ್ವತವಾಗಿ ಮಡಿದ ಕೊಂಡಿ]
- ದಿ ನಾನ್‌ಪ್ರಾಲಿಫರೇಷನ್ ಪಾಲಿಸಿ ಎಜುಕೇಷನ್ ಸೆಂಟರ್(NPEC)- ವಾಷಿಂಗ್ಟನ್, D.C. ಮೂಲದ, ಲಾಭಗಳಿಕೆಯ ಉದ್ದೇಶವಿರದ ಈ ಸಂಘಟನೆಯು 1994ರಲ್ಲಿ ಸಂಸ್ಥಾಪಿಸಲ್ಪಟ್ಟಿತು. ಕಾರ್ಯನೀತಿ ರೂಪಿಸುವವರು, ವಿದ್ವಾಂಸರು ಹಾಗೂ ಮಾಧ್ಯಮಗಳ ನಡುವೆ ಶಸ್ತ್ರಾಸ್ತ್ರಗಳ ಪ್ರಸರಣದ ಕಾರ್ಯತಂತ್ರದ ವಿವಾದಾಂಶಗಳ ಬಗ್ಗೆ ಒಂದು ಉತ್ತಮ ಗ್ರಹಿಕೆಯನ್ನು ಪ್ರವರ್ತಿಸಲು ಇದನ್ನು ಸ್ಥಾಪಿಸಲಾಯಿತು.
- ಆಲ್ಸೋಸ್ ಡಿಜಿಟಲ್ ಲೈಬ್ರರಿ ಫಾರ್ ನ್ಯೂಕ್ಲಿಯರ್ ಇಷ್ಯೂಸ್ನಿಂದ ಪಡೆಯಲಾದ NPT ಕುರಿತಾದ ವಿವರಣೆ ಒದಗಿಸಲ್ಪಟ್ಟ ಗ್ರಂಥಸೂಚಿ Archived 2008-04-12 ವೇಬ್ಯಾಕ್ ಮೆಷಿನ್ ನಲ್ಲಿ.
- ನ್ಯೂಕ್ಲಿಯರ್ ನಾನ್‌ಪ್ರಾಲಿಫರೇಷನ್ ಟ್ರೀಟಿ ಟರ್ನ್ಸ್ 40 ಟುಡೆ ಇನ್ 2008.
- ಜಾರ್ಜ್ ಪೆರ್ಕೋವಿಚ್, "ಪ್ರಿನ್ಸಿಪಲ್ಸ್ ಫಾರ್ ರಿಫಾರ್ಮಿಂಗ್ ದಿ ನ್ಯೂಕ್ಲಿಯರ್ ಆರ್ಡರ್" Archived 2009-03-26 ವೇಬ್ಯಾಕ್ ಮೆಷಿನ್ ನಲ್ಲಿ., ಪ್ರಾಲಿಫರೇಷನ್ ಪೇಪರ್ಸ್ , ಪ್ಯಾರಿಸ್, Ifri, 2008ರ ಶರತ್ಕಾಲ.
- https://web.archive.org/web/20060209120207/http://www.state.gov/t/isn/wmd/nnp/ NPT ಅವಲೋಕನ ಚಕ್ರಕ್ಕೆ ಸಂಬಂಧಪಟ್ಟಿರುವ ಭಾಷಣಗಳು ಹಾಗೂ ಪ್ರಬಂಧಗಳನ್ನು ಸಂಕಲಿಸಿರುವ U.S. ಸಂಸ್ಥಾನದ ಇಲಾಖೆಯ ವೆಬ್‌ಸೈಟ್.
- ವಿದೇಶಾಂಗ ವ್ಯವಹಾರಗಳ ಇಲಾಖೆ, ಫಿಲಿಪ್ಪೀನ್ಸ್ನ ಗಣರಾಜ್ಯ, http://dfa.gov.ph/main/index.php/newsroom/npt-information-a-updates Archived 2010-01-19 ವೇಬ್ಯಾಕ್ ಮೆಷಿನ್ ನಲ್ಲಿ.
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಸೆಪ್ಟೆಂಬರ್ 2022
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- CS1 errors: empty unknown parameters
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಅಕ್ಟೋಬರ್ 2023
- Articles with unsourced statements from November 2008
- Articles needing additional references from March 2008
- All articles needing additional references
- Articles with hatnote templates targeting a nonexistent page
- All articles with specifically marked weasel-worded phrases
- Articles with specifically marked weasel-worded phrases from December 2008
- Articles with unsourced statements from March 2010
- Webarchive template other archives
- Articles with unsourced statements from November 2012
- ಶಸ್ತ್ರಾಸ್ತ್ರಗಳ ನಿಯಂತ್ರಣ ಒಡಂಬಡಿಕೆಗಳು
- ಪರಮಾಣು ಪ್ರಸರಣ
- ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯನೀತಿ
- ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಒಡಂಬಡಿಕೆಗಳು
- ಸೋವಿಯೆಟ್ ಒಕ್ಕೂಟದ ಒಡಂಬಡಿಕೆಗಳು
- ಶೀತಲ ಸಮರದ ಒಡಂಬಡಿಕೆಗಳು
- 1968ರಲ್ಲಿ ಸಮಾಪ್ತಗೊಂಡ ಒಡಂಬಡಿಕೆಗಳು
- 1970ರಲ್ಲಿ ಕಾರ್ಯರಂಭ ಮಾಡಿದ ಒಡಂಬಡಿಕೆಗಳು
- ಅಣುಶಕ್ತಿ
- ಅಂತರರಾಷ್ಟ್ರೀಯ ಕಾನೂನು