ವಿಷಯಕ್ಕೆ ಹೋಗು

ದೊಡ್ಡಪತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೊಡ್ಡಪತ್ರೆ (Plectranthus amboinicus) ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಸಸ್ಯಕ್ಕೆ ಪಾಷಾಣ ಭೇಧಿ, ಕರ್ಪೂರವಳ್ಳಿ, ಸಾಂಬಾರು ಬಳ್ಳಿ ಎಂಬ ಹೆಸರು ಕೂಡ ಇದೆ. ಇದರ ಮೂಲ ದಕ್ಷಿಣ ಮತ್ತು ಪೂರ್ವ ಆಫ್ರಿಕಾ. ಈ ಸಸ್ಯವು ಲ್ಯಾಮಿನೋಸಿ ಎಂಬ ಕುಟುಂಬಕ್ಕೆ ಸೇರಿದ್ದು, ಕೋಲಿಯಸ್ ಆರೋಮಾಟಿಕಸ್ ಎಂಬ ಸಸ್ಯಶಾಸ್ತ್ರೀಯ ನಾಮ ಹೊಂದಿದೆ. ಭಾರತದಲ್ಲಿ ಮುಖ್ಯವಾಗಿ ದಕ್ಷಿಣಭಾರತದಲ್ಲಿ ಇದರ ಬಳಕೆ ಹೆಚ್ವು. ಅಲಂಕಾರಕ್ಕೂ, ಮನೆಮದ್ದಿಗೂ, ಅಹಾರದಲ್ಲೂ ಇದನ್ನು ಬಳಸಲಾಗುತ್ತದೆ.

ದೊಡ್ಡಪತ್ರೆ
Scientific classification e
Unrecognized taxon (fix): ಕೋಲಿಯಸ್(Coleus)
ಪ್ರಜಾತಿ:
ಕ. ಅಂಬೊನಿಕಸ್(amboinicus)
Binomial name
ಕೋಲಿಯಸ್(Coleus) ಅಂಬೊನಿಕಸ್(amboinicus)

ದೊಡ್ಡಪತ್ರೆಯು ಸುಮಾರು ಮೂವತ್ತರಿಂದ ತೊಂಬತ್ತು ಸೆ.ಮೀ ಎತ್ತರದವರೆಗೆ ಬೆಳೆಯಬಲ್ಲದು, ಇದರ ಎಲೆಗಳು ದೊಡ್ಡ ಮತ್ತು ದಪ್ಪವಾಗಿದ್ದು ಕಡು ಸುವಾಸನೆ ಹೊಂದಿವೆ, ದೊಡ್ಡಪತ್ರೆಯ ರಂಬೆಗಳು ಮತ್ತು ಹೂಗಳು ಚಿಕ್ಕದಾಗಿರುತ್ತದೆ.

ಆಫ್ರಿಕಾ ದೇಶಗಳಲ್ಲಿ ಇದನ್ನು ಪುದೀನಾದ ಬದಲಿಗೆ ಮಾಂಸಾಹಾರಿ ಖಾದ್ಯಗಳಲ್ಲಿ ಬಳಸುತ್ತಾರೆ. ದಕ್ಷಿಣ ಭಾರತದಲ್ಲಿ  ಸಾಮಾನ್ಯವಾಗಿ ಇದನ್ನು ಜ್ವರ,ಶೀತ,ಕೆಮ್ಮುಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ. ಗಾಯ ಅಥವಾ ಚೇಳು ಕಡಿತವಾದಾಗ ಪ್ರಥಮ ಚಿಕಿತ್ಸೆಯಾಗಿ ಇದರ ಎಲೆಗಳನ್ನು ಜಜ್ಜಿ ಬಳಸಲಾಗುತ್ತದೆ. ದಕ್ಷಿಣ ಕರ್ನಾಟಕದಲ್ಲಿ ದೊಡ್ಡಪತ್ರೆಯ ಚಟ್ನಿ, ತಂಬುಳಿ ಬಳಸಲಾಗುತ್ತದೆ.

ಮನೆ ಮದ್ದುಗಳು

[ಬದಲಾಯಿಸಿ]
  • ದೊಡ್ಡ ಪತ್ರೆಯ ತಂಬುಳಿಯನ್ನು ಸೇವಿಸುವುದರಿಂದ ಪಿತ್ತದಿಂದ ಬರುವ ಕಾಯಿಲೆಗಳು ದೂರವಾಗುತ್ತದೆ.[]
  • ದೊಡ್ಡ ಪತ್ರೆಯ ಎಲೆಗಳನ್ನು ತಿಂದರೆ ಅರಿಸಿಣಕಾಮಾಲೆ ಗುಣವಾಗುವುದು ಮತ್ತು ದೊಡ್ಡಪತ್ರೆ ಎಲೆ, ತುಳಸಿ ಎಲೆ ಮತ್ತು ವೀಳ್ಯದೆಲೆ ಜಜ್ಜಿ ರಸ ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಮಗುವಿಗೆ ಕುಡಿಸಿದರೆ ನೆಗಡಿ ಕಮ್ಮಿ ಆಗುವುದು.
  • ದೊಡ್ಡ ಪತ್ರೆ ಎಲೆಯನ್ನು ಹುಳುಕಡ್ಡಿಯ ಭಾಗಕ್ಕೆ ತಿಕ್ಕುತಿದ್ದರೆ ಹುಳುಕಡ್ಡಿ ಕಡಿಮೆ ಆಗುತ್ತದೆ.
  • ದೊಡ್ಡ ಪತ್ರೆ ಎಲೆ, ಕಾಳು ಮೆಣಸು ಹಾಗೂ ಉಪ್ಪು ಅಗಿದು ರಸ ಕುಡಿದರೆ ಬಾಯಿಯ ದುರ್ನಾತ ದೂರವಾಗುವುದು ಮತ್ತು ಪಿತ್ತ ಶಮನವಾಗುತ್ತದೆ.
  • ಪತ್ರೆಯ ಚಟ್ನಿ ಸೇವಿಸಿದರೆ ಪಿತ್ತದ ಗಂಧೆಗಳು ಮಾಯವಾಗುತ್ತದೆ.[]

ಚಿತ್ರಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Chandrashekar, Sushila (2001). ಮನೆ ಔಷಧಿ (20ಥ್ ed.). ಪಾರು ಪ್ರಕಾಶನ, ಗದಗ.


ಹೊರಕೊಂಡಿಗಳು

[ಬದಲಾಯಿಸಿ]