ಜಂಬೆ
ಜಂಬೆ | |
---|---|
ಜಂಬೆ ಮರ | |
Scientific classification | |
ಸಾಮ್ರಾಜ್ಯ: | Plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | |
ಪ್ರಜಾತಿ: | ಕ್ಸೈಲಿಯ ಕ್ಸೈಲೋಕಾರ್ಪ
|
Binomial name | |
ಕ್ಸೈಲಿಯ ಕ್ಸೈಲೋಕಾರ್ಪ Roxb. Taub.
| |
Synonyms | |
Mimosa xylocarpa Roxb. |
ಜಂಬೆ(Xylia Xylocarpa)ಭಾರತ,ಮ್ಯಾನ್ಮಾರ್,ಕಾಂಬೋಡಿಯಾಮತ್ತು ಥೈಲ್ಯಾಂಡ್ ದೇಶಗಳಲ್ಲಿ ವ್ಯಾಪನೆ ಇರುವ ಮರ.ಕರ್ನಾಟಕದಲ್ಲಿ ಪರ್ಣಪಾತಿಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಸಸ್ಯಶಾಸ್ತ್ರೀಯ ವರ್ಗೀಕರಣ
[ಬದಲಾಯಿಸಿ]ಇದು ಲೆಗುಮಿನೋಸೆ ಕುಟುಂಬದ ಮಿಮೋಸಿಯೆ ಉಪ ಕುಟುಂಬದಲ್ಲಿದೆ.ಸಸ್ಯಶಾಸ್ಟ್ರೀಯ ಹೆಸರು ಕ್ಸೈಲಿಯ ಕ್ಸೈಲೋಕಾರ್ಪ ಎಂದಾಗಿದೆ.ತುಳು ಬಾಷೆಯಲ್ಲಿ 'ತಿರುವೆ' ಎಂದು ಕರೆಯುತ್ತಾರೆ.Iron wood ಕೆಲವು ಕಡೆ ಕರೆಯುತ್ತಾರೆ.
ಸಸ್ಯದ ಗುಣಲಕ್ಷಣಗಳು
[ಬದಲಾಯಿಸಿ]ಇದು ಮದ್ಯಮದಿಂದ ದೊಡ್ಡ ಪ್ರಮಾಣದ ಮರ.ಅಂದಾಜು ೧೨೦ ಅಡಿಗಳ ವರೇಗೂ ಬೆಳೆಯುತ್ತದೆ.ಎಲೆಗಳು ದ್ವಿಲತಾ ಸಂಯುಕ್ತ ಪರ್ಣಿಗಳು(Bi-Pinnate).ತೊಗಟೆ ನಯವಾಗಿದ್ದು,ಅಸಮಾನ ಹೊಪ್ಪಳಿಕೆಗಳಾಗಿ ಕಳಚುವುದು.ದಾರುವು ಅತಿ ಗಡಸು,ಕಂದುಕೆಂಪು ಬಣ್ಣ.ಬಲಯುತವಾಗಿ ಬಹಳ ಕಾಲ ಬಾಳಿಕೆ ಬರುತ್ತದೆ.
ಉಪಯೋಗಗಳು
[ಬದಲಾಯಿಸಿ]ಇದರ ಚೌಬೀನೆಯನ್ನು ಗೃಹ ನಿರ್ಮಾಣದಲ್ಲಿ ಬಳಸುತ್ತಾರೆ.ಇದರ ಸೌದೆ,ಇದ್ದಿಲುಕೂಡಾ ಉತ್ತಮ ದರ್ಜೆಯದಾಗಿದ್ದು,ಕಬ್ಬಿಣದ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ.ಇದರ ಚಕ್ಕೆಯು ಜಂತುನಾಶಕ.
ಅಧಾರ ಗ್ರಂಥಗಳು
[ಬದಲಾಯಿಸಿ]೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ