ಜಂಬೆ
ಜಂಬೆ | |
---|---|
![]() | |
ಜಂಬೆ ಮರ | |
Egg fossil classification | |
Kingdom: | Plantae
|
Division: | |
Class: | |
Order: | |
Family: | |
Subfamily: | |
Tribe: | |
Genus: | |
Species: | ಕ್ಸೈಲಿಯ ಕ್ಸೈಲೋಕಾರ್ಪ
|
Binomial nomenclature | |
ಕ್ಸೈಲಿಯ ಕ್ಸೈಲೋಕಾರ್ಪ Roxb. Taub.
| |
Synonym (taxonomy) | |
Mimosa xylocarpa Roxb. |
ಜಂಬೆ(Xylia Xylocarpa)ಭಾರತ,ಮ್ಯಾನ್ಮಾರ್,ಕಾಂಬೋಡಿಯಾಮತ್ತು ಥೈಲ್ಯಾಂಡ್ ದೇಶಗಳಲ್ಲಿ ವ್ಯಾಪನೆ ಇರುವ ಮರ.ಕರ್ನಾಟಕದಲ್ಲಿ ಪರ್ಣಪಾತಿಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]
ಇದು ಲೆಗುಮಿನೋಸೆ ಕುಟುಂಬದ ಮಿಮೋಸಿಯೆ ಉಪ ಕುಟುಂಬದಲ್ಲಿದೆ.ಸಸ್ಯಶಾಸ್ಟ್ರೀಯ ಹೆಸರು ಕ್ಸೈಲಿಯ ಕ್ಸೈಲೋಕಾರ್ಪ ಎಂದಾಗಿದೆ.ತುಳು ಬಾಷೆಯಲ್ಲಿ 'ತಿರುವೆ' ಎಂದು ಕರೆಯುತ್ತಾರೆ.Iron wood ಕೆಲವು ಕಡೆ ಕರೆಯುತ್ತಾರೆ.
ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]
ಇದು ಮದ್ಯಮದಿಂದ ದೊಡ್ಡ ಪ್ರಮಾಣದ ಮರ.ಅಂದಾಜು ೧೨೦ ಅಡಿಗಳ ವರೇಗೂ ಬೆಳೆಯುತ್ತದೆ.ಎಲೆಗಳು ದ್ವಿಲತಾ ಸಂಯುಕ್ತ ಪರ್ಣಿಗಳು(Bi-Pinnate).ತೊಗಟೆ ನಯವಾಗಿದ್ದು,ಅಸಮಾನ ಹೊಪ್ಪಳಿಕೆಗಳಾಗಿ ಕಳಚುವುದು.ದಾರುವು ಅತಿ ಗಡಸು,ಕಂದುಕೆಂಪು ಬಣ್ಣ.ಬಲಯುತವಾಗಿ ಬಹಳ ಕಾಲ ಬಾಳಿಕೆ ಬರುತ್ತದೆ.
ಉಪಯೋಗಗಳು[ಬದಲಾಯಿಸಿ]
ಇದರ ಚೌಬೀನೆಯನ್ನು ಗೃಹ ನಿರ್ಮಾಣದಲ್ಲಿ ಬಳಸುತ್ತಾರೆ.ಇದರ ಸೌದೆ,ಇದ್ದಿಲುಕೂಡಾ ಉತ್ತಮ ದರ್ಜೆಯದಾಗಿದ್ದು,ಕಬ್ಬಿಣದ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ.ಇದರ ಚಕ್ಕೆಯು ಜಂತುನಾಶಕ.
ಅಧಾರ ಗ್ರಂಥಗಳು[ಬದಲಾಯಿಸಿ]
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ